​ಆತ್ಮಹತ್ಯೆ, ಸ್ವಯಂ-ಹಾನಿ ಮತ್ತು ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತ ನೀತಿ

ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.
ಗಮನಿಸಿ: 18 ಏಪ್ರಿಲ್ 2023 ರಂದು, ಕೆಲವು ಪ್ರೇಕ್ಷಕರಿಗೆ ಅಪಾಯವನ್ನುಂಟುಮಾಡಬಹುದಾದ ಸೂಕ್ಷ್ಮ ಕಂಟೆಂಟ್‌ನಿಂದ ಸಮುದಾಯವನ್ನು ಇನ್ನಷ್ಟು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತ ನೀತಿಯನ್ನು ಅಪ್‌ಡೇಟ್ ಮಾಡಿದ್ದೇವೆ. ನಾವು ಅನುಕರಣೀಯ ಕಂಟೆಂಟ್‌ ಅನ್ನು ತೆಗೆದುಹಾಕಬಹುದು, ಕಂಟೆಂಟ್‌ನ ಮೇಲೆ ವಯಸ್ಸಿನ ನಿರ್ಬಂಧ ವಿಧಿಸಬಹುದು ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳು ಅಥವಾ ಸ್ವಯಂ-ಹಾನಿ ವಿಷಯಗಳ ಕುರಿತಾದ ವೀಡಿಯೊಗಳಲ್ಲಿ ಬಿಕ್ಕಟ್ಟಿನ ಸಂಪನ್ಮೂಲಗಳ ಪ್ಯಾನೆಲ್ ಅನ್ನು ತೋರಿಸಬಹುದು. ಕೆಳಗಿನ ನೀತಿಯನ್ನು ಈ ಬದಲಾವಣೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ. ಈ ಬ್ಲಾಗ್ ಪೋಸ್ಟ್‌ನಲ್ಲಿ ನಮ್ಮ ವಿಧಾನದ ಕುರಿತು ನೀವು ಇನ್ನಷ್ಟು ತಿಳಿಯಬಹುದು.

YouTube ನಲ್ಲಿ, ನಮ್ಮ ಎಲ್ಲಾ ರಚನೆಕಾರರು ಮತ್ತು ವೀಕ್ಷಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಮಾನಸಿಕ ಆರೋಗ್ಯದ ಕುರಿತಾದ ಅರಿವು ಮತ್ತು ತಿಳುವಳಿಕೆ ಮುಖ್ಯವಾಗಿದೆ ಮತ್ತು ರಚನೆಕಾರರು ತಮ್ಮ ಕಥೆಗಳನ್ನು ಹಂಚಿಕೊಳ್ಳುವುದನ್ನು, ಉದಾಹರಣೆಗೆ ಖಿನ್ನತೆ, ಸ್ವಯಂ-ಹಾನಿ, ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳು ಅಥವಾ ಇತರ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳ ಕುರಿತು ಅವರ ಅನುಭವಗಳನ್ನು ಚರ್ಚಿಸುವ ಕಂಟೆಂಟ್ ಅನ್ನು ಪೋಸ್ಟ್ ಮಾಡುವುದನ್ನು ನಾವು ಬೆಂಬಲಿಸುತ್ತೇವೆ.

ಆದಾಗ್ಯೂ, ಆತ್ಮಹತ್ಯೆ, ಸ್ವಯಂ-ಹಾನಿ, ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳನ್ನು ಉತ್ತೇಜಿಸುವ, ಆಘಾತ ಅಥವಾ ಅಸಹ್ಯವನ್ನು ಉಂಟುಮಾಡುವ ಅಥವಾ ವೀಕ್ಷಕರಿಗೆ ಗಣನೀಯ ಪ್ರಮಾಣದಲ್ಲಿ ಅಪಾಯವನ್ನುಂಟುಮಾಡುವ ಕಂಟೆಂಟ್ ಅನ್ನು ನಾವು YouTube ನಲ್ಲಿ ಅನುಮತಿಸುವುದಿಲ್ಲ.

ನಿಮಗೆ ಈ ಕಂಟೆಂಟ್ ಕಂಡುಬಂದರೆ, ಏನು ಮಾಡಬೇಕು

ಯಾರಾದರೂ ಅಪಾಯದಲ್ಲಿದ್ದಾರೆ ಎಂದು ನೀವು ಭಾವಿಸಿದರೆ:

ನೀವು ಎದುರಿಸುವ ಯಾವುದೇ ಮಾನಸಿಕ ಆರೋಗ್ಯ, ಆತ್ಮಹತ್ಯೆ, ಸ್ವಯಂ-ಹಾನಿ ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ಕಂಟೆಂಟ್‌ನಿಂದ ನೀವು ನಕಾರಾತ್ಮಕವಾಗಿ ಪ್ರಭಾವಿತರಾಗಿದ್ದೀರಿ ಎಂಬುದನ್ನು ನೀವು ಕಂಡುಕೊಂಡರೆ, ನಿಮಗೆ ಸದಾಕಾಲ ಬೆಂಬಲವಿರುತ್ತದೆ ಮತ್ತು ನೀವು ಒಬ್ಬಂಟಿಯಲ್ಲ ಎಂಬುದು ತಿಳಿದಿರಲಿ. ಮುಂದಿನ ವಿಭಾಗದಲ್ಲಿ, ಸಂಪನ್ಮೂಲಗಳ ಪಟ್ಟಿಯನ್ನು ಮತ್ತು ಸಲಹೆಯನ್ನು ನೀಡಬಹುದಾದ ಸಂಸ್ಥೆಗಳಿಗೆ ಸಂಬಂಧಿಸಿದ ಸಂಪರ್ಕ ಮಾಹಿತಿಯನ್ನು ನೀವು ಕಾಣಬಹುದು.

ನೀವು ಕಾಳಜಿವಹಿಸುವ ಯಾರ ಜೊತೆಗಾದರೂ ಹೇಗೆ ಮಾತನಾಡಬೇಕು ಎಂಬುದರ ಕುರಿತು ಸಾಮಾನ್ಯ ಮಾರ್ಗದರ್ಶನಕ್ಕಾಗಿ, ಸ್ಥಳೀಯ ಸಹಾಯವಾಣಿಗಳನ್ನು ಸಂಪರ್ಕಿಸಿ.

ನಿಮಗೆ ಬೆಂಬಲ ಬೇಕಾದರೆ, ಏನು ಮಾಡಬೇಕು

ನೀವು ಖಿನ್ನತೆಗೆ ಒಳಗಾಗಿದ್ದರೆ, ಆತ್ಮಹತ್ಯೆ, ಸ್ವಯಂ-ಹಾನಿಯ ಆಲೋಚನೆಗಳು ನಿಮ್ಮ ತಲೆಯಲ್ಲಿದ್ದರೆ, ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ ಅನ್ನು ಅನುಭವಿಸುತ್ತಿದ್ದರೆ, ನಿಮಗೆ ಸದಾಕಾಲ ಬೆಂಬಲವಿರುತ್ತದೆ ಮತ್ತು ನೀವು ಒಬ್ಬಂಟಿಯಲ್ಲ ಎಂಬುದು ನಿಮಗೆ ತಿಳಿದಿರಲಿ. ನೋವಿನ ಭಾವನೆಗಳನ್ನು ನಿಭಾಯಿಸುವಾಗ, ಅನೇಕ ಜನರು ಈ ಸಮಸ್ಯೆಗಳಿಗೆ ಒಳಗಾಗಬಹುದು. ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸುವವರ ಜೊತೆಗೆ ಮಾತನಾಡುವುದರಿಂದ, ನೀವು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದೀರಾ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಆರೈಕೆಯನ್ನು ನೀಡಬೇಕೇ ಎಂಬುದನ್ನು ನಿರ್ಧರಿಸಲು ಸಹಾಯವಾಗುತ್ತದೆ. ಆರೋಗ್ಯಕರ, ಪರಿಣಾಮಕಾರಿ ನಿಭಾಯಿಸುವ ತಂತ್ರಗಳನ್ನು ಗುರುತಿಸಲು ಮತ್ತು ಕಷ್ಟಕರವಾದ ಭಾವನೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

ಆತ್ಮಹತ್ಯೆ ಮತ್ತು ಸ್ವಯಂ-ಹಾನಿಗೆ ಸಂಬಂಧಿಸಿದ ಬೆಂಬಲ ಸಂಪನ್ಮೂಲಗಳು

ವಿವಿಧ ದೇಶಗಳು ಮತ್ತು ಪ್ರದೇಶಗಳಲ್ಲಿ ಅಗತ್ಯವಿರುವ ವ್ಯಕ್ತಿಗಳಿಗೆ ನೆರವು ನೀಡಲು ಮೀಸಲಾಗಿರುವ ಸಂಸ್ಥೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಇವುಗಳು ಗುರುತಿಸಲ್ಪಟ್ಟ ಬಿಕ್ಕಟ್ಟು ಸೇವಾ ಪಾಲುದಾರರಾಗಿವೆ. ದೇಶ/ಪ್ರದೇಶಕ್ಕೆ ಅನುಗುಣವಾಗಿ ಪಾಲುದಾರಿಕೆಗಳು ಬದಲಾಗಬಹುದು.

findahelpline.com ಮತ್ತು www.wikipedia.org/wiki/List_of_suicide_crisis_lines ವೆಬ್‌ಸೈಟ್‌ಗಳು, ಇಲ್ಲಿ ಪಟ್ಟಿ ಮಾಡದಿರುವ ಪ್ರದೇಶಗಳಲ್ಲಿನ ಸಂಸ್ಥೆಗಳನ್ನು ಹುಡುಕಲು ನಿಮಗೆ ಸಹಾಯ ಮಾಡಬಹುದು.

ಆಸ್ಟ್ರೇಲಿಯಾ

Lifeline Australia

Kids Helpline

13 11 14

1800 55 1800

ಅರ್ಜೆಂಟಿನಾ Centro de Asistencia al Suicida - Buenos Aires

135 (desde Capital y Gran Buenos Aires) 

(011) 5275-1135 (desde todo el país)

ಬ್ರೆಜಿಲ್ Centro de Valorização da Vida 188
ಬೆಲ್ಜಿಯಂ

Centre de Prévention du Suicide /

Zelfmoordlijn 1813

0800 32 123

1813

ಬಲ್ಗೇರಿಯಾ Български Червен Кръст 02 492 30 30
ಚೆಕ್ ಗಣರಾಜ್ಯ Psychiatrická léčebna Bohnice - Centrum krizové intervence
+420 284 016 666
ಡೆನ್ಮಾರ್ಕ್ Livslinien 70201201
ಫ್ರಾನ್ಸ್ S.O.S Amitié 09 72 39 40 50
ಫಿನ್‌ಲ್ಯಾಂಡ್ Suomen Mielenterveysseura / Kansallinen kriisipuhelin 09-2525-0111
ಜರ್ಮನಿ Telefonseelsorge 0800-1110111
ಗ್ರೀಸ್ ΚΛΙΜΑΚΑ 1018
801 801 99 99
ಹಾಂಗ್‌ಕಾಂಗ್ 香港撒瑪利亞防止自殺會 2389 2222
ಹಂಗೇರಿ S.O.S. Telefonos Lelki Elsősegély Szolgálat 06 1 116-123 
ಭಾರತ आसरा
AASRA
91-9820466726
ಐರ್ಲೆಂಡ್ Samaritans 116 123
ಇಸ್ರೇಲ್ ער"ן - עזרה ראשונה נפשית 1201
ಇಟಲಿ Samaritans Onlus 800 86 00 22
ಜಪಾನ್ こころの健康相談統一ダイヤル 0570-064-556
ನ್ಯೂಜಿಲ್ಯಾಂಡ್ Lifeline New Zealand 0800 543 354
ನೆದರ್‌ಲ್ಯಾಂಡ್ಸ್ Stichting 113Online 0900-0113
ಸಿಂಗಾಪೂರ್ Samaritans of Singapore 1800-221-4444
ಸ್ಪೇನ್

Telèfon de l'Esperança de Barcelona

Teléfono de la Esperanza

93 414 48 48

717 003 717

ದಕ್ಷಿಣ ಕೊರಿಯಾ 보건복지부 자살예방상담전화 1393
ತೈವಾನ್ 生命線協談專線 1995
ಥಾಯ್ಲೆಂಡ್ กรมสุขภาพจิต กระทรวงสาธารณสุข 1323
ಯುನೈಟೆಡ್ ಕಿಂಗ್‌ಡಮ್ Samaritans 116 123
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ

Suicide & Crisis Lifeline

988 /ಚಾಟ್

YouTube ನಲ್ಲಿ ನಿಮಗೆ ಸುರಕ್ಷಿತ ಭಾವ ಮೂಡಿಸಲು ಸಹಾಯ ಮಾಡಬಹುದಾದ ಸಲಹೆಗಳನ್ನು ಓದಲು ಮತ್ತು ವೀಡಿಯೊಗಳನ್ನು ವೀಕ್ಷಿಸಲು, ರಚನೆಕಾರರ ಸುರಕ್ಷತಾ ಕೇಂದ್ರಕ್ಕೆ ಭೇಟಿ ನೀಡಿ.

ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತ ಬೆಂಬಲ ಸಂಪನ್ಮೂಲಗಳು

ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳಿರುವ ವ್ಯಕ್ತಿಗಳಿಗೆ ನೆರವು ನೀಡುವ ಸಂಸ್ಥೆಗಳ ಪಟ್ಟಿಯು ಕೆಳಗಿನಂತಿದೆ. ಈ ಸಂಸ್ಥೆಗಳು ಮಾನಸಿಕ ಆರೋಗ್ಯ ಬೆಂಬಲದ ಪಾಲುದಾರರಾಗಿವೆ. ದೇಶ/ಪ್ರದೇಶಕ್ಕೆ ಅನುಗುಣವಾಗಿ ಪಾಲುದಾರಿಕೆಗಳು ಬದಲಾಗಬಹುದು.

ಯುನೈಟೆಡ್ ಸ್ಟೇಟ್ಸ್ NEDA +1 800 931-2237
ಯುನೈಟೆಡ್ ಕಿಂಗ್‌ಡಮ್ BEAT Eating Disorders +44 0808 801 0677 ಇಂಗ್ಲೆಂಡ್
    +44 0808 801 0432 ಸ್ಕಾಟ್ಲೆಂಡ್
    +44 0808 801 0433 ವೇಲ್ಸ್‌
    +44 0808 801 0434 N. ಐರ್ಲೆಂಡ್
ಭಾರತ Vandrevala Foundation +91 9999 666 555

ಆತ್ಮಹತ್ಯೆ, ಸ್ವಯಂ-ಹಾನಿ, ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ಕಂಟೆಂಟ್ ಅನ್ನು ಪೋಸ್ಟ್ ಮಾಡುವುದಕ್ಕೆ ಸಂಬಂಧಿಸಿದ ಸಮುದಾಯ ಮಾರ್ಗಸೂಚಿಗಳು

YouTube ಬಳಕೆದಾರರು ಮಾನಸಿಕ ಆರೋಗ್ಯ, ಆತ್ಮಹತ್ಯೆ, ಸ್ವಯಂ-ಹಾನಿ ಮತ್ತು ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ವಿಷಯಗಳ ಬಗ್ಗೆ ಬೆಂಬಲ ನೀಡುವ ಮತ್ತು ಹಾನಿಕಾರಕವಲ್ಲದ ರೀತಿಯಲ್ಲಿ ಮುಕ್ತವಾಗಿ ಮಾತನಾಡಲು ಹಿಂಜರಿಯಬಾರದು.

ಆದಾಗ್ಯೂ, ಸೂಕ್ಷ್ಮವಾದ ಮತ್ತು ಕೆಲವು ಬಳಕೆದಾರರಿಗೆ ಅಪಾಯವನ್ನು ಉಂಟುಮಾಡಬಹುದಾದ ಕಂಟೆಂಟ್ ಅನ್ನು ಕೆಲವೊಮ್ಮೆ ರಚಿಸಲಾಗಬಹುದು. ಆತ್ಮಹತ್ಯೆ, ಸ್ವಯಂ-ಹಾನಿ ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ವಿಷಯಗಳನ್ನು ಒಳಗೊಂಡಿರುವ ಕಂಟೆಂಟ್‌ ಅನ್ನು ನೀವು ರಚಿಸುವಾಗ, ಇತರ ಬಳಕೆದಾರರ ಮೇಲೆ, ವಿಶೇಷವಾಗಿ ಅಪ್ರಾಪ್ತ ವಯಸ್ಕರು ಮತ್ತು ಈ ಕಂಟೆಂಟ್‌ಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡುವ ಬಳಕೆದಾರರ ಮೇಲೆ ನಿಮ್ಮ ಕಂಟೆಂಟ್ ಬೀರಬಹುದಾದ ಸಂಭವನೀಯ ನಕಾರಾತ್ಮಕ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳಿ.

ನಿಮ್ಮ ವೀಕ್ಷಕರು ಮತ್ತು ಇತರ ಬಳಕೆದಾರರನ್ನು ರಕ್ಷಿಸಲು ಮತ್ತು ಬೆಂಬಲಿಸಲು, ಆತ್ಮಹತ್ಯೆ, ಸ್ವಯಂ-ಹಾನಿ ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ಕಂಟೆಂಟ್ ಅನ್ನು ರಚಿಸುವಾಗ ಕೆಳಗಿನ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಿ. ಈ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ, ಸ್ಟ್ರೈಕ್ ವಿಧಿಸಲಾಗಬಹುದು, ನಿಮ್ಮ ಕಂಟೆಂಟ್ ಅನ್ನು ತೆಗೆದುಹಾಕಲಾಗಬಹುದು ಅಥವಾ ಬಳಕೆದಾರರನ್ನು ರಕ್ಷಿಸಲು ಇತರ ನಿರ್ಬಂಧಗಳನ್ನು ವಿಧಿಸಲಾಗಬಹುದು. ಇನ್ನಷ್ಟು ತಿಳಿಯಿರಿ.

ಈ ಸಮುದಾಯ ಮಾರ್ಗಸೂಚಿಗಳ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನಿಮ್ಮ ನೆನಪಿನಲ್ಲಿರಲಿ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿನ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ವಿಧಾನಗಳು ಇದರಲ್ಲಿ ಒಳಗೊಂಡಿವೆ.

ಈ ಕೆಳಕಂಡ ಕಂಟೆಂಟ್‌ ಅನ್ನು ಪೋಸ್ಟ್ ಮಾಡಬೇಡಿ:

  • ಆತ್ಮಹತ್ಯೆ, ಸ್ವಯಂ-ಹಾನಿ, ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳನ್ನು ಉತ್ತೇಜಿಸುವ ಅಥವಾ ವೈಭವೀಕರಿಸುವ ಕಂಟೆಂಟ್
  • ಆತ್ಮಹತ್ಯೆ ಮಾಡಿಕೊಳ್ಳುವುದು, ಸ್ವಯಂ-ಹಾನಿಯಲ್ಲಿ ತೊಡಗಿಸಿಕೊಳ್ಳುವುದು ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳಲ್ಲಿ ತೊಡಗಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಸೂಚನೆಗಳು (ಅವುಗಳನ್ನು ಹೇಗೆ ಮರೆಮಾಚುವುದು ಎಂಬುದು ಸೇರಿದಂತೆ)
  • ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿದ ಆತ್ಮಹತ್ಯೆ, ಸ್ವಯಂ-ಹಾನಿ ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ಕಂಟೆಂಟ್
  • ಸ್ವಯಂ-ಹಾನಿಯ ಗ್ರಾಫಿಕ್ ಚಿತ್ರಣಗಳು
  • ಸಂಪೂರ್ಣವಾಗಿ ಅಸ್ಪಷ್ಟವಾಗಿರುವಂತೆ ಮಸುಕುಗೊಳಿಸಿದ ಅಥವಾ ಮುಚ್ಚಿದ ಸಂದರ್ಭವನ್ನು ಹೊರತುಪಡಿಸಿ ಇತರ ಸಂದರ್ಭದಲ್ಲಿನ, ಆತ್ಮಹತ್ಯೆಗೆ ಬಲಿಯಾದ ವ್ಯಕ್ತಿಗಳ ಮೃತದೇಹಗಳ ವಿಷುವಲ್‌ಗಳು
  • ಸಾಕಷ್ಟು ಸಾಂದರ್ಭಿಕ ಮಾಹಿತಿ ಇಲ್ಲದೆಯೇ, ಆತ್ಮಹತ್ಯೆಗಿಂತ ಮುಂಚಿನ ಘಟನೆಗಳು ಅಥವಾ ಆತ್ಮಹತ್ಯಾ ಪ್ರಯತ್ನಗಳು ಮತ್ತು ಆತ್ಮಹತ್ಯೆಯಿಂದ ರಕ್ಷಿಸುವುದರ ಫೂಟೇಜ್‌ಗಳನ್ನು ತೋರಿಸುವ ವೀಡಿಯೊಗಳು
  • ಆತ್ಮಹತ್ಯೆ ಮತ್ತು ಸ್ವಯಂ-ಹಾನಿ ಸವಾಲುಗಳಲ್ಲಿ (ಉದಾ. ಬ್ಲೂ ವೇಲ್ ಅಥವಾ ಮೊಮೊ ಚಾಲೆಂಜ್‌ಗಳು) ಭಾಗವಹಿಸುವುದನ್ನು ಅಥವಾ ಅವುಗಳಿಗೆ ಸಂಬಂಧಿಸಿದ ಸೂಚನೆಗಳನ್ನು ತೋರಿಸುವ ಕಂಟೆಂಟ್
  • ಸಾಕಷ್ಟು ಸಾಂದರ್ಭಿಕ ಮಾಹಿತಿ ಇಲ್ಲದಿರುವ ಆತ್ಮಹತ್ಯೆ ಟಿಪ್ಪಣಿಗಳು ಅಥವಾ ಪತ್ರಗಳು
  • ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳಿರುವ ಸಂದರ್ಭದಲ್ಲಿ ತೂಕ-ಆಧಾರಿತ ನಿಂದನೆಯನ್ನು ಒಳಗೊಂಡಿರುವ ಕಂಟೆಂಟ್

ಕೆಲವು ಸಂದರ್ಭಗಳಲ್ಲಿ, ಈ ಕೆಳಗಿನ ಒಂದು ಅಥವಾ ಹೆಚ್ಚಿನ ಮಾನದಂಡಗಳನ್ನು ಪೂರೈಸಿದರೆ ನಾವು ಆತ್ಮಹತ್ಯೆ, ಸ್ವಯಂ-ಹಾನಿ ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ಕಂಟೆಂಟ್ ಅನ್ನು ತೆಗೆದುಹಾಕುವ ಬದಲು ನಿರ್ಬಂಧಿಸಬಹುದು (ಉದಾಹರಣೆಗೆ, ವೀಡಿಯೊದ ಮೇಲೆ ವಯಸ್ಸಿನ ನಿರ್ಬಂಧ ವಿಧಿಸುವುದು, ವೀಡಿಯೊದಲ್ಲಿ ಎಚ್ಚರಿಕೆಯನ್ನು ನೀಡುವುದು ಅಥವಾ ಬಿಕ್ಕಟ್ಟು ಸಂಪನ್ಮೂಲಗಳ ಪ್ಯಾನೆಲ್ ತೋರಿಸುವುದು). ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ಗಮನದಲ್ಲಿರಲಿ:

  • ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕವಾಗಿರುವ ಉದ್ದೇಶವನ್ನು ಹೊಂದಿರುವ ಕಂಟೆಂಟ್
  • ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರುವ ಕಂಟೆಂಟ್
  • ಸಾಕಷ್ಟು ಪ್ರಮಾಣದಲ್ಲಿ ಬ್ಲರ್ ಮಾಡಿರುವ ಗ್ರಾಫಿಕ್ ಕಂಟೆಂಟ್
  • ನಾಟಕೀಯ ಅಥವಾ ಸ್ಕ್ರಿಪ್ಟ್ ಮಾಡಲಾದ ಕಂಟೆಂಟ್, ಇದು ಆ್ಯನಿಮೇಶನ್‌ಗಳು, ವೀಡಿಯೊ ಗೇಮ್‌ಗಳು, ಸಂಗೀತದ ವೀಡಿಯೊಗಳು ಮತ್ತು ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳ ತುಣುಕುಗಳನ್ನು ಒಳಗೊಂಡಿದ್ದು ಇವುಗಳಿಗಷ್ಟೇ ಸೀಮಿತವಾಗಿರುವುದಿಲ್ಲ
  • ಆತ್ಮಹತ್ಯೆ ಅಥವಾ ಸ್ವಯಂ-ಹಾನಿ ವಿಧಾನಗಳು, ಸ್ಥಳಗಳು ಮತ್ತು ಹಾಟ್‌ಸ್ಪಾಟ್‌ಗಳ ಕುರಿತು ವಿವರವಾದ ಚರ್ಚೆ
  • ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯ ಕುರಿತು ಗ್ರಾಫಿಕ್ ವಿವರಣೆಗಳು
  • ಅಪಾಯದಲ್ಲಿರುವ ವೀಕ್ಷಕರನ್ನು ಪ್ರಚೋದಿಸಬಹುದಾದ ವಿವರಗಳನ್ನು ಒಳಗೊಂಡಿರುವ, ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳಿಂದ ಚೇತರಿಸಿಕೊಳ್ಳುವ ಕುರಿತಾದ ಕಂಟೆಂಟ್

ಆತ್ಮಹತ್ಯೆ, ಸ್ವಯಂ-ಹಾನಿ ಅಥವಾ ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ಕಂಟೆಂಟ್ ಅನ್ನು ಪೋಸ್ಟ್ ಮಾಡುವ ರಚನೆಕಾರರಿಗಾಗಿ ಉತ್ತಮ ಅಭ್ಯಾಸಗಳು

ನಿಮ್ಮ ವೀಕ್ಷಕರನ್ನು ಅಪಾಯ ಮತ್ತು ಸಂಕಟಗಳಿಂದ ಪಾರು ಮಾಡಲು, ಆತ್ಮಹತ್ಯೆ ಅಥವಾ ಸ್ವಯಂ-ಹಾನಿಗೆ ಸಂಬಂಧಿಸಿದ ಕಂಟೆಂಟ್‌ನಲ್ಲಿ ಈ ಉತ್ತಮ ಅಭ್ಯಾಸಗಳನ್ನು ಬಳಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ:

  • ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ವ್ಯಕ್ತಿಯನ್ನು ತೋರಿಸಬೇಡಿ. ಅವರ ಮತ್ತು ಅವರ ಕುಟುಂಬದ ಗೌಪ್ಯತೆಯನ್ನು ಗೌರವಿಸಿ. ಇನ್ನಷ್ಟು ತಿಳಿಯಿರಿ.
  • ಸಕಾರಾತ್ಮಕವಾಗಿರುವ ಮತ್ತು ಬೆಂಬಲ ನೀಡುವ ರೀತಿಯಲ್ಲಿರುವ, ಮತ್ತು ಚೇತರಿಕೆ, ತಡೆಗಟ್ಟುವಿಕೆ ಮತ್ತು ಭರವಸೆ ಮೂಡಿಸುವ ಕಥೆಗಳ ಮೇಲೆ ಗಮನಹರಿಸುವ ಮಾತುಗಳನ್ನು ಬಳಸಿ.
  • ಆತ್ಮಹತ್ಯೆ ಮತ್ತು ಸ್ವಯಂ-ಹಾನಿ ತಡೆಗಟ್ಟುವಿಕೆ ಮತ್ತು ನಿಭಾಯಿಸುವ ತಂತ್ರಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಸೇರಿಸಿ. ವೀಡಿಯೊ ಮತ್ತು ವೀಡಿಯೊ ವಿವರಣೆ, ಈ ಎರಡರಲ್ಲೂ ಅದನ್ನು ಸೇರಿಸಲು ಪ್ರಯತ್ನಿಸಿ.
  • ಸಂವೇದನಾಶೀಲ ಭಾಷೆ ಅಥವಾ ನಾಟಕೀಯ ದೃಶ್ಯಗಳನ್ನು ಬಳಸಬೇಡಿ.
  • ಸಂದರ್ಭಾನುಸಾರವಾದ ಮಾಹಿತಿಯನ್ನು ಒದಗಿಸಿ, ಆದರೆ ಆತ್ಮಹತ್ಯೆಯಿಂದ ಹೇಗೆ ಸತ್ತರು ಎಂದು ಮೃತ ವ್ಯಕ್ತಿಯ ಕುರಿತು ಚರ್ಚಿಸಬೇಡಿ. ಆತ್ಮಹತ್ಯೆಯ ವಿಧಾನಗಳು ಅಥವಾ ಸ್ಥಳಗಳ ಕುರಿತು ಪ್ರಸ್ತಾಪಿಸಬೇಡಿ.
  • ಆತ್ಮಹತ್ಯೆಗೀಡಾದ ವ್ಯಕ್ತಿಯ ಚಿತ್ರಗಳನ್ನು ಒಳಗೊಂಡಿರುವ ಕಂಟೆಂಟ್ ಅನ್ನು ಬ್ಲರ್ ಮಾಡಿ. YouTube Studio ದಲ್ಲಿರುವ ಎಡಿಟರ್ ಫೀಚರ್ ಬಳಸಿಕೊಂಡು ನಿಮ್ಮ ವೀಡಿಯೊವನ್ನು ಬ್ಲರ್ ಮಾಡಬಹುದು. ಇನ್ನಷ್ಟು ತಿಳಿಯಿರಿ.

ನಿಮ್ಮ ವೀಕ್ಷಕರನ್ನು ಅಪಾಯ ಮತ್ತು ಸಂಕಟಗಳಿಂದ ಪಾರು ಮಾಡಲು, ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ಕುರಿತಾದ ಕಂಟೆಂಟ್‌ನಲ್ಲಿ ಈ ಉತ್ತಮ ಅಭ್ಯಾಸಗಳನ್ನು ಬಳಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ:

  • ಅಸ್ತವ್ಯಸ್ಥವಾದ ಆಹಾರ ಸೇವನೆ ನಡವಳಿಕೆಯ ಕುರಿತಾದ ವಿವರಗಳ ಬದಲಿಗೆ ಅದರಿಂದಾಗುವ ಪರಿಣಾಮಗಳ ಕುರಿತು ಗಮನ ಕೇಂದ್ರೀಕರಿಸಿ.
  • ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳು ಸಾಮಾನ್ಯವಾಗಿ ತೀವ್ರವಾದ ತೊಡಕುಗಳನ್ನು ಉಂಟುಮಾಡುತ್ತವೆ ಎಂದು ನಿಮ್ಮ ಪ್ರೇಕ್ಷಕರಿಗೆ ತಿಳಿಸಿ.
  • ತಿನ್ನುವುದಕ್ಕೆ ಸಂಬಂಧಿಸಿದ ಡಿಸಾರ್ಡರ್‌ಗಳ ತಡೆಗಟ್ಟುವಿಕೆ ಮತ್ತು ನಿಭಾಯಿಸುವ ತಂತ್ರಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಸೇರಿಸಿ. ವೀಡಿಯೊ ಮತ್ತು ವೀಡಿಯೊ ವಿವರಣೆ, ಈ ಎರಡರಲ್ಲೂ ಅದನ್ನು ಸೇರಿಸಲು ಪ್ರಯತ್ನಿಸಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಅಂತಿಮವಾಗಿ, ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಹ ಕಂಟೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡುತ್ತೀರಿ ಎಂದು ನೀವು ಸೂಚಿಸಿದರೆ, ನೀವು ಲೈವ್ ಸ್ಟ್ರೀಮಿಂಗ್‌ಗೆ ಹೊಂದಿರುವ ಆ್ಯಕ್ಸೆಸ್ ಅನ್ನು ನಾವು ಮಿತಿಗೊಳಿಸಬಹುದು. ಲೈವ್ ಸ್ಟ್ರೀಮಿಂಗ್ ಮೇಲಿನ ನಿರ್ಬಂಧಗಳ ಕುರಿತು ಇನ್ನಷ್ಟು ತಿಳಿಯಿರಿ.

ಎಚ್ಚರಿಕೆಗಳು ಮತ್ತು ಬೆಂಬಲದ ಸಂಪನ್ಮೂಲಗಳು

ಕಂಟೆಂಟ್‌ ಆತ್ಮಹತ್ಯೆ ಅಥವಾ ಸ್ವಯಂ-ಹಾನಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುವಾಗ YouTube ಫೀಚರ್‌ಗಳು ಅಥವಾ ಸಂಪನ್ಮೂಲಗಳನ್ನು ಬಳಕೆದಾರರಿಗೆ ತೋರಿಸಬಹುದು. ಉದಾಹರಣೆಗೆ:

  • ನಿಮ್ಮ ವೀಡಿಯೊ ಪ್ಲೇ ಆಗುವ ಮೊದಲು, ಇದು ಆತ್ಮಹತ್ಯೆ ಮತ್ತು ಸ್ವಯಂ-ಹಾನಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ಒಳಗೊಂಡಿದೆ ಎಂದು ಸೂಚಿಸುವ ಒಂದು ಎಚ್ಚರಿಕೆ
  • ವೀಡಿಯೊದ ಕೆಳಭಾಗದಲ್ಲಿ ಕಾಣಿಸುವ, ಆತ್ಮಹತ್ಯೆಯನ್ನು ತಡೆಗಟ್ಟುವ ಸಂಸ್ಥೆಗಳ ಫೋನ್ ಸಂಖ್ಯೆಗಳಂತಹ ಬೆಂಬಲದ ಸಂಪನ್ಮೂಲಗಳನ್ನು ಒಳಗೊಂಡಿರುವ ಒಂದು ಪ್ಯಾನೆಲ್

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3335271199349542228
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false