ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್ ಕುರಿತಾದ ನೀತಿಗಳು

ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.

ವೀಕ್ಷಕರನ್ನು ಆಘಾತಗೊಳಿಸುವ ಅಥವಾ ಅಸಹ್ಯಪಡಿಸುವ ಉದ್ದೇಶವನ್ನು ಹೊಂದಿರುವ ಹಿಂಸಾತ್ಮಕ ಅಥವಾ ಘೋರ ಕಂಟೆಂಟ್ ಅನ್ನು ಅಥವಾ ಹಿಂಸಾತ್ಮಕ ಕೃತ್ಯಗಳನ್ನು ಮಾಡಲು ಇತರರನ್ನು ಪ್ರೋತ್ಸಾಹಿಸುವ ಕಂಟೆಂಟ್ ಅನ್ನು YouTube ನಲ್ಲಿ ಸೇರಿಸಲು ಅನುಮತಿಯಿಲ್ಲ.

ಯಾರಾದರೂ ಸನ್ನಿಹಿತ ಅಪಾಯದ ಅಂಚಿನಲ್ಲಿದ್ದಾರೆ ಎಂದು ನೀವು ಭಾವಿಸಿದರೆ, ಆ ಸನ್ನಿವೇಶವನ್ನು ವರದಿ ಮಾಡಲು ನಿಮ್ಮ ಸ್ಥಳೀಯ ಕಾನೂನು ಜಾರಿಗೊಳಿಸುವಿಕೆ ಏಜೆನ್ಸಿಯನ್ನು ನೀವು ಕೂಡಲೇ ಸಂಪರ್ಕಿಸಬೇಕು.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಕೆಲವು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗೆ ಸೂಚಿಸಿದ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್:

  • ವ್ಯಕ್ತಿಗಳು ಅಥವಾ ನಿರ್ದಿಷ್ಟ ಗುಂಪಿನ ಜನರ ವಿರುದ್ಧ ಹಿಂಸಾತ್ಮಕ ಕೃತ್ಯಗಳನ್ನು ಮಾಡಲು ಇತರರನ್ನು ಪ್ರಚೋದಿಸುವುದು.
  • ಅಪ್ರಾಪ್ತರನ್ನು ಒಳಗೊಂಡಿರುವ ಹೊಡೆದಾಟಗಳು.
  • ವೀಕ್ಷಕರಿಗೆ ಆಘಾತ ಉಂಟುಮಾಡುವ ಅಥವಾ ಅಸಹ್ಯ ಬರಿಸುವ ಉದ್ದೇಶವನ್ನು ಹೊಂದಿರುವ, ರಸ್ತೆ ಅಪಘಾತಗಳು, ಪ್ರಾಕೃತಿಕ ವಿಪತ್ತುಗಳು, ಯುದ್ಧದ ಪರಿಣಾಮಗಳು, ಭಯೋತ್ಪಾದಕ ದಾಳಿಯ ಪರಿಣಾಮಗಳು, ಬೀದಿ ಕಾಳಗಗಳು, ದೈಹಿಕ ಹಲ್ಲೆಗಳು, ಅಗ್ನಿಗೆ ಆಹುತಿಯಾಗುವುದು, ಹಿಂಸೆ ನೀಡುವುದು, ಶವಗಳು, ಪ್ರತಿಭಟನೆಗಳು ಅಥವಾ ದಂಗೆಗಳು, ದರೋಡೆಗಳು, ವೈದ್ಯಕೀಯ ಶಸ್ತ್ರಚಿಕಿತ್ಸೆ ಅಥವಾ ಇಂತಹ ಇತರ ಸನ್ನಿವೇಶಗಳನ್ನು ಒಳಗೊಂಡಿರುವ ಫೂಟೇಜ್, ಆಡಿಯೋ ಅಥವಾ ಚಿತ್ರಣ.
  • ವೀಕ್ಷಕರಿಗೆ ಆಘಾತ ಉಂಟುಮಾಡುವ ಅಥವಾ ಅಸಹ್ಯ ಬರಿಸುವ ಉದ್ದೇಶವಿರುವ, ರಕ್ತ ಅಥವಾ ವಾಂತಿಯಂತಹ ದೇಹದ-ಸ್ರವಿಸುವಿಕೆಗಳನ್ನು ತೋರಿಸುವ ಫೂಟೇಜ್ ಅಥವಾ ಚಿತ್ರಣ.
  • ತುಂಡರಿಸಲಾದ ಕೈ-ಕಾಲುಗಳ ಹಾಗೆ, ದೊಡ್ಡ ಮಟ್ಟದ ಗಾಯಗಳನ್ನು ಹೊಂದಿರುವ ಶವಗಳ ಫೂಟೇಜ್.

ಪ್ರಾಣಿ ಹಿಂಸೆಯ ಕಂಟೆಂಟ್:

  • ಪ್ರಾಣಿಗಳು ಹೊಡೆದಾಡುವಂತೆ ಮಾನವರು ಒತ್ತಾಯಿಸುವ ಕಂಟೆಂಟ್.
  • ಸಾಂಪ್ರದಾಯಿಕ ಅಥವಾ ಪ್ರಮಾಣಿತ ಅಭ್ಯಾಸಗಳಿಗೆ ಹೊರತಾಗಿ ಮಾನವರು ದುರುದ್ದೇಶಪೂರಿತವಾಗಿ ಪ್ರಾಣಿಗಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವ ಮತ್ತು ಅವುಗಳಿಗೆ ಯಾತನೆಯ ಅನುಭವ ಉಂಟಾಗುವಂತೆ ಮಾಡುವ ಕಂಟೆಂಟ್. ಸಾಂಪ್ರದಾಯಿಕ ಅಥವಾ ಪ್ರಮಾಣಿತ ಅಭ್ಯಾಸಗಳ ಉದಾಹರಣೆಗಳಲ್ಲಿ ಬೇಟೆಗಾರಿಕೆ ಅಥವಾ ಆಹಾರ ತಯಾರಿ ಸೇರಿವೆ.
  • ಸಾಂಪ್ರದಾಯಿಕ ಅಥವಾ ಪ್ರಮಾಣಿತ ಅಭ್ಯಾಸಗಳನ್ನು ಹೊರತುಪಡಿಸಿ, ಮಾನವರು ಒಂದು ಪ್ರಾಣಿಯನ್ನು ಅನಗತ್ಯವಾಗಿ ಕಳಪೆ ಪರಿಸ್ಥಿತಿಗಳಿಗೆ ಒಡ್ಡುವ ಕಂಟೆಂಟ್. ಸಾಂಪ್ರದಾಯಿಕ ಅಥವಾ ಪ್ರಮಾಣಿತ ಅಭ್ಯಾಸಗಳ ಉದಾಹರಣೆಗಳಲ್ಲಿ ಬೇಟೆಗಾರಿಕೆ ಅಥವಾ ಆಹಾರ ತಯಾರಿ ಸೇರಿವೆ.
  • ಪ್ರಾಣಿಗಳ ಕುರಿತು ಗಂಭೀರ ನಿರ್ಲಕ್ಷ್ಯ, ದುರ್ನಡತೆ ಅಥವಾ ಹಾನಿಯನ್ನು ವೈಭವೀಕರಿಸುವ ಅಥವಾ ಪ್ರಚಾರ ಮಾಡುವ ಕಂಟೆಂಟ್.
  • ಪ್ರಾಣಿಯನ್ನು ಹಾನಿಕಾರಕ ಸನ್ನಿವೇಶಗಳಿಗೆ ಒಡ್ಡುವ ಯೋಜಿತ ಪ್ರಾಣಿ ರಕ್ಷಣೆಯನ್ನು ತೋರಿಸುವ ಕಂಟೆಂಟ್.
  • ಪ್ರಾಣಿಗಳನ್ನು ಒಳಗೊಂಡಿರುವ, ಆಘಾತ ಉಂಟುಮಾಡುವ ಅಥವಾ ಅಸಹ್ಯ ಬರಿಸುವ ಉದ್ದೇಶವಿರುವ ಗ್ರಾಫಿಕ್‌ ಕಂಟೆಂಟ್.

ನಾಟಕೀಯ ಅಥವಾ ಕಾಲ್ಪನಿಕ ಕಂಟೆಂಟ್:

  • ಫೂಟೇಜ್ ನಾಟಕೀಯವಾಗಿದೆ ಅಥವಾ ಕಾಲ್ಪನಿಕವಾಗಿದೆ ಎಂಬುದನ್ನು ವೀಕ್ಷಕರು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಸಾಕಷ್ಟು ಸಾಂದರ್ಭಿಕ ಮಾಹಿತಿಯನ್ನು ನೀಡದ, ಈ ಮಾರ್ಗಸೂಚಿಗಳು ನಿಷೇಧಿಸಿರುವಂತಹ ಕಂಟೆಂಟ್‌ನ ನಾಟಕೀಯ ಅಥವಾ ಕಾಲ್ಪನಿಕ ಫೂಟೇಜ್.

ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಸಾಂದರ್ಭಿಕತೆಯನ್ನು ಒದಗಿಸಿದ್ದರೂ ಸಹ, ಈ ಕೆಳಗಿನ ಪ್ರಕಾರಗಳ ಕಂಟೆಂಟ್ ಅನ್ನು ನಾವು ಅನುಮತಿಸುವುದಿಲ್ಲ ಎಂಬುದನ್ನು ಗಮನಿಸಿ:

  • ಹಿಂಸಾತ್ಮಕ ದೈಹಿಕ ಲೈಂಗಿಕ ಹಲ್ಲೆಗಳು (ವೀಡಿಯೊ, ಸ್ಟಿಲ್ ಚಿತ್ರಣ ಅಥವಾ ಆಡಿಯೋ).
  • ಘೋರವಾದ ಅಥವಾ ಅತ್ಯಂತ ಹಿಂಸಾತ್ಮಕ ಘಟನೆಯ ಸಂದರ್ಭದಲ್ಲಿ ಆರೋಪಿಯು ಚಿತ್ರೀಕರಿಸಿದಂತಹ, ಶಸ್ತ್ರಾಸ್ತ್ರಗಳು, ಹಿಂಸೆ ಅಥವಾ ಗಾಯಾಳುಗಳು ಗೋಚರಿಸುವ ಅಥವಾ ಅವರ ಮಾತುಕತೆಗಳು ಕೇಳಿಸುವ ಫೂಟೇಜ್.

ಗಮನಿಸಿ, ಇದು ಸಂಪೂರ್ಣ ಪಟ್ಟಿಯಲ್ಲ.

ನೆನಪಿರಲಿ, ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಥಂಬ್‌ನೇಲ್‌ಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗೆ ಅನ್ವಯಿಸುತ್ತದೆ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿನ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಇದು ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿರುವ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ಸ್ವರೂಪಗಳನ್ನು ಒಳಗೊಂಡಿರಬಹುದು.

ಶೈಕ್ಷಣಿಕ ಕಂಟೆಂಟ್

ಮೇಲೆ ಸೂಚಿಸಲಾದ ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್ ಅನ್ನು ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್‌ನಲ್ಲಿ ನಾವು ಕೆಲವೊಂದು ಸಂದರ್ಭಗಳಲ್ಲಿ ಅನುಮತಿಸಬಹುದು. ಹಾಗೆಂದು ಆಘಾತ ಉಂಟುಮಾಡುವ ಅಥವಾ ಅಸಹ್ಯ ಬರಿಸುವ ಅಥವಾ ಹಿಂಸಾತ್ಮಕ ಕೃತ್ಯಗಳನ್ನು ಮಾಡಲು ಇತರರನ್ನು ಪ್ರೋತ್ಸಾಹಿಸುವ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಲು ಇದು ಅನುಮತಿ ಪತ್ರವೆಂದು ಭಾವಿಸಬೇಡಿ. ಹಿಂಸಾತ್ಮಕ ದೈಹಿಕ ಲೈಂಗಿಕ ಹಲ್ಲೆಯ ಫೂಟೇಜ್‌ನಂತಹ ನಿರ್ದಿಷ್ಟ ಪ್ರಕಾರಗಳ ಕಂಟೆಂಟ್‌ಗಳಿಗಾಗಿ ನಾವು ಈ ವಿನಾಯಿತಿಗಳನ್ನು ನೀಡುವುದಿಲ್ಲ. ಮೇಲೆ ಸೂಚಿಸಲಾದ ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್ ಅನ್ನು ಹೊಂದಿರುವ ಶೈಕ್ಷಣಿಕ ಕಂಟೆಂಟ್‌ಗಾಗಿ, ಈ ಸಾಂದರ್ಭಿಕ ಮಾಹಿತಿಯು ವೀಡಿಯೊದ ಚಿತ್ರಗಳು ಅಥವಾ ಆಡಿಯೋದಲ್ಲೇ ಕಾಣಿಸಿಕೊಳ್ಳಬೇಕು. ಶೀರ್ಷಿಕೆ ಅಥವಾ ವಿವರಣೆಯಲ್ಲಿ ಅದನ್ನು ಒದಗಿಸಿದರೆ ಸಾಕಾಗುವುದಿಲ್ಲ.

ವಯಸ್ಕರಿಗೆ ಸೂಕ್ತವಾದ ಸಾಮಗ್ರಿ ಅಥವಾ ಗ್ರಾಫಿಕ್‌ ಹಿಂಸೆಯನ್ನು ಹೊಂದಿರುವ ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್‌ಗೆ ಸಂಬಂಧಿಸಿದಂತಹ ಕಂಟೆಂಟ್ YouTube ನಲ್ಲಿ ಇರಬಹುದೇ ಎಂಬುದನ್ನು ತೀರ್ಮಾನಿಸುವಾಗ, ನಾವು ಅಧಿಕೃತ ಥರ್ಡ್-ಪಾರ್ಟಿ ಉದ್ಯಮ ರೇಟಿಂಗ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ನಮ್ಮ ನೀತಿಗಳನ್ನು ಅನುಸರಿಸುವ, ಆದರೆ ಎಲ್ಲಾ ಪ್ರೇಕ್ಷಕರಿಗೆ ಸೂಕ್ತವಲ್ಲದ ಕಂಟೆಂಟ್‌ನ ಮೇಲೆ ವಯಸ್ಸಿನ ನಿರ್ಬಂಧವನ್ನು ಅನ್ವಯಿಸಲಾಗುತ್ತದೆ. ವಯೋಮಾನ ನಿರ್ಬಂಧಿತ ಕಂಟೆಂಟ್ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ ಸೈನ್-ಔಟ್ ಮಾಡಿರುವವರಿಗೆ ವೀಕ್ಷಿಸಲು ಲಭ್ಯವಿರುವುದಿಲ್ಲ.

ವಯೋಮಾನ ನಿರ್ಬಂಧಿತ ಕಂಟೆಂಟ್

ಕಂಟೆಂಟ್ ಅನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಾಂದರ್ಭಿಕ ಮಾಹಿತಿಯನ್ನು ಒದಗಿಸಲಾಗಿದ್ದರೆ, ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್ ಅನ್ನು ತೆಗೆದುಹಾಕುವ ಬದಲಿಗೆ, ಅದನ್ನು ವೀಕ್ಷಿಸಲು ನಾವು ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು. ಉದಾಹರಣೆಗೆ, ರಸ್ತೆ ಅಪಘಾತದ ಗಾಯಾಳುವಿನ ಗಾಯಗಳನ್ನು ತೋರಿಸುವ ಕಂಟೆಂಟ್ ಅನ್ನು ನಾವು ತೆಗೆದುಹಾಕಬಹುದು, ಆದರೆ ಸನ್ನಿವೇಶ ಮತ್ತು ಸಂದರ್ಭವನ್ನು ವಿವರಿಸುವ ಸುದ್ದಿಯ ಕವರೇಜ್‌ನೊಂದಿಗೆ ಅದೇ ಕಂಟೆಂಟ್ ಅನ್ನು ಪ್ರಸ್ತುತಪಡಿಸಿದರೆ, ಅದಕ್ಕೆ ನಾವು ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು. ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್‌ನ ಶೈಕ್ಷಣಿಕ ಬಳಕೆಗಾಗಿ, ಈ ಸಾಂದರ್ಭಿಕ ಮಾಹಿತಿಯು ವೀಡಿಯೊದ ಚಿತ್ರಗಳು ಅಥವಾ ಆಡಿಯೋದಲ್ಲೇ ಕಾಣಿಸಿಕೊಳ್ಳಬೇಕು. ಸಾಂದರ್ಭಿಕ ಮಾಹಿತಿಯ ಪ್ರಾಮುಖ್ಯತೆಯ ಕುರಿತು ನೀವು ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.

ಕಂಟೆಂಟ್ ಅನ್ನು ತೆಗೆದುಹಾಕಬೇಕೇ ಅಥವಾ ವಯಸ್ಸಿನ ನಿರ್ಬಂಧ ವಿಧಿಸಬೇಕೇ ಎಂಬುದನ್ನು ನಿರ್ಧರಿಸುವಾಗ, ನಾವು ಸಾರ್ವಜನಿಕ ಹಿತಾಸಕ್ತಿಯನ್ನು ಸಹ ಪರಿಗಣಿಸುತ್ತೇವೆ. ಉದಾಹರಣೆಗೆ, ಯುದ್ಧವಲಯಗಳ ಸಾಕ್ಷ್ಯಚಿತ್ರಗಳನ್ನು ಒದಗಿಸುವ ಗ್ರಾಫಿಕ್ ಅಥವಾ ಹಿಂಸಾತ್ಮಕ ಕಂಟೆಂಟ್‌ನ ಮೇಲೆ ನಾವು ವಯಸ್ಸಿನ ನಿರ್ಬಂಧ ವಿಧಿಸಬಹುದು.

ಜನರನ್ನು ಶಿರಚ್ಛೇದನ ಮಾಡುವುದು ಅಥವಾ ಅಂಗಹೀನಗೊಳಿಸುವುದು ಅಥವಾ ಇಂತಹ ತೀವ್ರ ಗಾಯಗಳನ್ನು ಹೊಂದಿರುವ ಶವಗಳನ್ನು ತೋರಿಸುವಂತಹ ಗ್ರಾಫಿಕ್ ಫೂಟೇಜ್‌ಗಳನ್ನು ಹೊಂದಿದ್ದಾಗ, ಕಾಲ್ಪನಿಕ ಹಿಂಸೆಯ ಮೇಲೂ ಸಹ ನಾವು ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು. ಕಂಟೆಂಟ್ ಕಾಲ್ಪನಿಕವಾಗಿದೆ ಎಂಬುದನ್ನು ಕಂಟೆಂಟ್ ಅಥವಾ ಮೆಟಾಡೇಟಾ ನಮಗೆ ತಿಳಿಸಿದರೆ, ಅಥವಾ ಆ್ಯನಿಮೇಟ್ ಮಾಡಲಾದ ಕಂಟೆಂಟ್ ಅಥವಾ ವೀಡಿಯೊ ಗೇಮ್‌ಗಳ ಹಾಗೆ ಕಂಟೆಂಟ್‌ನಿಂದಲೇ ನಮಗೆ ಇದು ಗೋಚರವಾದಾಗ, ಸಾಮಾನ್ಯವಾಗಿ ನಾವು ನಾಟಕೀಯಗೊಳಿಸಿದ ಹಿಂಸೆಯನ್ನು ಅನುಮತಿಸುತ್ತೇವೆ.

ಕಂಟೆಂಟ್‍ನ ಮೇಲೆ ವಯಸ್ಸಿನ-ನಿರ್ಬಂಧ ವಿಧಿಸಬೇಕೇ ಅಥವಾ ಕಂಟೆಂಟ್ ಅನ್ನು ತೆಗೆದುಹಾಕಬೇಕೇ ಎಂಬುದನ್ನು ತೀರ್ಮಾನಿಸುವಾಗ ನಾವು ಈ ಕೆಳಗಿನವುಗಳನ್ನು ಪರಿಗಣಿಸುತ್ತೇವೆ. ಗಮನಿಸಿ, ಇದು ಸಂಪೂರ್ಣ ಪಟ್ಟಿಯಲ್ಲ.

  • ಹಿಂಸಾತ್ಮಕ ಅಥವಾ ಘೋರ ಚಿತ್ರಣವು ವೀಡಿಯೊದ ಕೇಂದ್ರಬಿಂದುವಾಗಿದೆಯೇ. ಉದಾಹರಣೆಗೆ, ವೀಡಿಯೊವು ಚಲನಚಿತ್ರ ಅಥವಾ ವೀಡಿಯೊ ಗೇಮ್‌ನ ಅತ್ಯಂತ ಹಿಂಸಾತ್ಮಕ ಭಾಗದ ಮೇಲೆ ಮಾತ್ರ ಗಮನ ಕೇಂದ್ರೀಕರಿಸುತ್ತದೆ.
  • ಶೀರ್ಷಿಕೆ, ವಿವರಣೆ, ಟ್ಯಾಗ್‌ಗಳು ಅಥವಾ ಇತರ ಡೇಟಾ, ವೀಕ್ಷಕರಿಗೆ ಆಘಾತ ಉಂಟುಮಾಡುವ ಅಥವಾ ಅಸಹ್ಯ ಬರಿಸುವ ಉದ್ದೇಶವನ್ನು ತೋರಿಸುತ್ತವೆಯೇ.
  • ಹಿಂಸಾತ್ಮಕ ಚಿತ್ರಣ ಅಥವಾ ಆಡಿಯೋವನ್ನು ಬ್ಲರ್ ಮಾಡಲಾಗಿದೆಯೇ, ಮರೆಮಾಚಲಾಗಿದೆಯೇ ಅಥವಾ ಅಸ್ಪಷ್ಟಗೊಳಿಸಲಾಗಿದೆಯೇ.
  • ಕಂಟೆಂಟ್‌ನಲ್ಲಿ ಹಿಂಸಾತ್ಮಕ ಚಿತ್ರಗಳು ಅಥವಾ ಆಡಿಯೋ ಇರುವ ಅವಧಿ.
  • ಚಿತ್ರಣವು ನಾಟಕೀಯವಾಗಿದೆಯೇ ಅಥವಾ ಕಾಲ್ಪನಿಕವಾಗಿದೆಯೇ ಎಂದು ವೀಕ್ಷಕರಿಗೆ ತಿಳಿಸುವಂತಹ ಸಾಂದರ್ಭಿಕ ಮಾಹಿತಿ ಇದೆಯೇ. ಉದಾಹರಣೆಗೆ, ವೀಡಿಯೊದಲ್ಲಿನ ಮಾಹಿತಿ, ಶೀರ್ಷಿಕೆ ಅಥವಾ ವಿವರಣೆಯ ಮೂಲಕ.
  • ಹಿಂಸೆಯು ಧಾರ್ಮಿಕ ಅಥವಾ ಸಾಂಸ್ಕೃತಿಕ ಅಭ್ಯಾಸದ ಭಾಗವಾಗಿದೆಯೇ ಮತ್ತು ಅಪ್‌ಲೋಡ್ ಮಾಡಿದವರು ವೀಕ್ಷಕರಿಗೆ ಆ ಸಾಂದರ್ಭಿಕ ಮಾಹಿತಿಯನ್ನು ನೀಡುತ್ತಾರೆಯೇ.
  • ಬೇಟೆ, ಧಾರ್ಮಿಕ ಪದ್ಧತಿ ಅಥವಾ ಆಹಾರ ತಯಾರಿಕೆಗಾಗಿ ಸಾಂಪ್ರದಾಯಿಕ ಅಥವಾ ಪ್ರಮಾಣಿತ ಅಭ್ಯಾಸಗಳ ಮೂಲಕ ಪ್ರಾಣಿಯನ್ನು ಕೊಲ್ಲುವುದನ್ನು ಕಂಟೆಂಟ್ ತೋರಿಸುತ್ತದೆಯೇ.

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ಹಿಂಸೆಯನ್ನು ನಡೆಸುವುದಕ್ಕಾಗಿ ನಿರ್ದಿಷ್ಟ ಸ್ಥಳಕ್ಕೆ ಹೋಗಲು, ನಿರ್ದಿಷ್ಟ ಸಮಯದಲ್ಲಿ ಹಿಂಸೆಯನ್ನು ನಡೆಸಲು ಅಥವಾ ಹಿಂಸೆಯ ಮೂಲಕ ವ್ಯಕ್ತಿಗಳನ್ನು ಅಥವಾ ಗುಂಪುಗಳನ್ನು ಗುರಿಪಡಿಸಲು ಇತರರನ್ನು ಪ್ರೋತ್ಸಾಹಿಸುವುದು.
  • ಅಪ್ರಾಪ್ತರ ನಡುವೆ ಶಾಲೆಯ ಆವರಣದಲ್ಲಿ ನಡೆಯುವ ನಿಜವಾದ ಹೊಡೆದಾಟಗಳು. ಅಪ್ರಾಪ್ತರು ಕೇವಲ ವಿನೋದಕ್ಕಾಗಿ ಹೊಡೆದಾಡುತ್ತಿದ್ದರೆ ಮತ್ತು ಅದು ವೀಕ್ಷಕರಿಗೆ ಸ್ಪಷ್ಟವಾಗಿ ತಿಳಿಯುವಂತಿದ್ದರೆ ಆ ಕಂಟೆಂಟ್ ಅನ್ನು ನಾವು ಅನುಮತಿಸಬಹುದು.
  • ವೃತ್ತಿಪರ ಅಥವಾ ವೃತ್ತಿಪರವಾಗಿ ಮೇಲ್ವಿಚಾರಣೆ ಮಾಡಲಾದ ಕ್ರೀಡಾ ಈವೆಂಟ್‌ಗಳನ್ನು ಹೊರತುಪಡಿಸಿದ ಸಂದರ್ಭಗಳಲ್ಲಿನ ಹೊಡೆದಾಟಗಳು ಅಥವಾ ಜಗಳಗಳು.

ಇನ್ನಷ್ಟು ಉದಾಹರಣೆಗಳು

ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್
YouTube ನಲ್ಲಿ ಈ ಕೆಳಗಿನ ವಿಧಗಳ ಕಂಟೆಂಟ್ ಅನ್ನು ಅನುಮತಿಸಲಾಗುವುದಿಲ್ಲ. ಇದು ಸಂಪೂರ್ಣ ಪಟ್ಟಿಯಲ್ಲ.
  • ವೀಕ್ಷಕರಿಗೆ ಯಾವುದೇ ಶಿಕ್ಷಣ ಅಥವಾ ವಿವರಣೆಯನ್ನು ಒದಗಿಸದೇ ತೆರೆದ ಗಾಯಗಳ ಮೇಲೆ ಗಮನ ಕೇಂದ್ರೀಕರಿಸುವ ಕಂಟೆಂಟ್‌ ಅನ್ನು ಹೊಂದಿರುವ ವೈದ್ಯಕೀಯ ಶಸ್ತ್ರಚಿಕಿತ್ಸೆ ಫೂಟೇಜ್.
  • ವೀಕ್ಷಕರಿಗೆ ಯಾವುದೇ ಶಿಕ್ಷಣ ಅಥವಾ ವಿವರಣೆಯನ್ನು ಒದಗಿಸದ, ಹಿಂಸಾತ್ಮಕ ದರೋಡೆಗಳಂತಹ ಅಪರಾಧಗಳ ಫೂಟೇಜ್.
  • “ಘೋರ ದುರ್ಘಟನೆ” ಅಥವಾ “ಎಚ್ಚರಿಕೆ: ವಿಪರೀತ ರಕ್ತ” ಎಂಬಿತ್ಯಾದಿ ಶೀರ್ಷಿಕೆಗಳನ್ನು ಹೊಂದಿರುವ, ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವವರನ್ನು ಅಥವಾ ಮೃತಪಟ್ಟವರನ್ನು ತೋರಿಸುವ ಸೆಲ್ ಫೋನ್‌, ಡ್ಯಾಶ್ ಕ್ಯಾಮ್ ಅಥವಾ ಕ್ಲೋಸ್ಡ್ ಸರ್ಕೀಟ್ ಟಿವಿ ಫೂಟೇಜ್.
  • ಶಿರಚ್ಛೇದನಗಳ ವೀಡಿಯೊಗಳು.
  • "ಈ ವ್ಯಕ್ತಿಯು ಹೊಡೆತ ತಿನ್ನುವುದನ್ನು ನೋಡಿ!" ಎಂಬಂತಹ ಶೀರ್ಷಿಕೆಗಳನ್ನು ಹೊಂದಿರುವ ಏಕಪಕ್ಷೀಯ ದಾಳಿಗಳು.
ಪ್ರಾಣಿ ಹಿಂಸೆಯ ಕಂಟೆಂಟ್
ಪ್ರಾಣಿ ಹಿಂಸೆ ಎಂದರೆ ಒಂದು ಪ್ರಾಣಿಗೆ ನೋವು ನೀಡುವ ಗಂಭೀರ ದೈಹಿಕ ಅಥವಾ ಮಾನಸಿಕ ಹಾನಿಯನ್ನು ದುರುದ್ದೇಶಪೂರಿತವಾಗಿ ಉಂಟುಮಾಡುವುದನ್ನು ತೋರಿಸುವ ಕಂಟೆಂಟ್. ಬೇಟೆ, ಬಲೆಗೆ ಬೀಳಿಸುವುದು, ಕೀಟ ನಿವಾರಣೆ, ಆಹಾರ ತಯಾರಿಕೆ, ವೈದ್ಯಕೀಯ ಚಿಕಿತ್ಸೆ, ಅಥವಾ ಪ್ರಾಣಿ ವಧೆಯ ಹಾಗೆ, ಪ್ರಾಣಿಗೆ ಅಥವಾ ಪ್ರಾಣಿಗಳ ಗುಂಪಿಗೆ ಹಾನಿ ಮಾಡುವಂತಹ ವ್ಯಾಪಕವಾಗಿ ಸ್ವೀಕೃತವಾದ ಅಭ್ಯಾಸಗಳನ್ನು ತೋರಿಸುವ ಕಂಟೆಂಟ್‌ಗಾಗಿ ನಾವು ವಿನಾಯಿತಿಗಳನ್ನು ನೀಡಬಹುದು.

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಇನ್ನಷ್ಟು ಉದಾಹರಣೆಗಳು ಇಲ್ಲಿವೆ:

  • ನಾಯಿಗಳ ಕಚ್ಚಾಟ, ಕೋಳಿ ಜಗಳ ಅಥವಾ ಪ್ರಾಣಿಗಳು ಪರಸ್ಪರ ದಾಳಿ ಮಾಡುವಂತೆ ಮಾನವರು ಅವುಗಳನ್ನು ಒತ್ತಾಯಿಸುವಂತಹ ಇತರ ಒತ್ತಾಯದ ಪ್ರಾಣಿ-ಹೊಡೆದಾಟ. ಪ್ರಾಣಿಗಳು ಕಾಡಿನಲ್ಲಿ ಹೊಡೆದಾಡುವುದನ್ನು ತೋರಿಸುವ ಪರಿಸರದ ಕುರಿತಾದ ಸಾಕ್ಷ್ಯಚಿತ್ರದಂತಹ ಕಂಟೆಂಟ್ ಅನ್ನು ನಾವು ಅನುಮತಿಸುತ್ತೇವೆ.
  • ವೀಕ್ಷಕರಿಗೆ ಆಘಾತ ಉಂಟುಮಾಡುವುದಕ್ಕಾಗಿ ಅಥವಾ ದೌರ್ಜನ್ಯವನ್ನು ವೈಭವೀಕರಿಸುವುದಕ್ಕಾಗಿ ಪ್ರಾಣಿಗಳ ನೋವು, ಅವುಗಳ ಕುರಿತಾದ ನಿರ್ಲಕ್ಷ್ಯ ಅಥವಾ ಅವುಗಳೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವುದನ್ನು ತೋರಿಸುವ ಮತ್ತು ಅಗತ್ಯವಿದ್ದಷ್ಟು ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಸಾಂದರ್ಭಿಕ ಮಾಹಿತಿಯನ್ನು ನೀಡದ ಕಂಟೆಂಟ್.
  • ಕೋಣಗಳಿಗೆ ಕತ್ತಿಯಿಂದ ತಿವಿಯುವುದು ರೀತಿಯ, ಕೋಣಗಳಿಗೆ ಗಾಯವಾಗುವುದನ್ನು ತೋರಿಸುವ ಬುಲ್ ಫೈಟಿಂಗ್.
  • ಬಾಂಬ್‌ಗಳು ಅಥವಾ ವಿಷದ ಪ್ರಯೋಗದ ರೀತಿಯಲ್ಲಿ, ಪ್ರಮಾಣಿತವಲ್ಲದ ಅಭ್ಯಾಸಗಳ ಮೂಲಕ ಬೇಟೆಯಾಡುವುದು.
  • ನಾಟಕೀಯ ಪರಿಣಾಮಕ್ಕಾಗಿ ಪ್ರಾಣಿಗಳಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡುವಂತಹ ಅಥವಾ ಅವುಗಳನ್ನು ಅಪಾಯಕಾರಿ ಸನ್ನಿವೇಶಗಳಲ್ಲಿ ಇರಿಸುವಂತಹ ಅವುಗಳ ಯೋಜಿತ ರಕ್ಷಣೆ.

ಮೇಲೆ ಕೊಟ್ಟಿರುವುದು ಸಂಪೂರ್ಣ ಪಟ್ಟಿಯಲ್ಲ.

ನೆನಪಿರಲಿ, ಈ ಉದಾಹರಣೆಗಳು ಕೆಲವೇ ಉದಾಹರಣೆಗಳಷ್ಟೇ, ಮತ್ತು ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನಿಮಗನಿಸಿದರೆ ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5731164711205679248
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false