ನಗ್ನತೆ ಮತ್ತು ಲೈಂಗಿಕ ಕಂಟೆಂಟ್ ನೀತಿ

ಗಮನಿಸಿ: ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಹೆಚ್ಚು ಸಮಂಜಸವಾಗಿ ಜಾರಿಗೊಳಿಸುವುದಕ್ಕಾಗಿ, 7 ಸೆಪ್ಟೆಂಬರ್ 2022 ರಂದು ನಗ್ನತೆ ಮತ್ತು ಲೈಂಗಿಕ ಕಂಟೆಂಟ್ ಕುರಿತಾದ ನಮ್ಮ ನೀತಿಯನ್ನು ಅಪ್‌ಡೇಟ್ ಮಾಡಿದೆವು. ಈ ಬದಲಾವಣೆಗಳ ಕುರಿತು ನಮ್ಮ ಫೋರಮ್‌ನಲ್ಲಿ ನೀವು ಇನ್ನಷ್ಟು ತಿಳಿಯಬಹುದು. ಈ ಬದಲಾವಣೆಗಳೊಂದಿಗೆ ನೀತಿಯನ್ನು ಅಪ್‌ಡೇಟ್ ಮಾಡಲಾಗಿದೆ.
ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.

ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶ ಹೊಂದಿರುವ ಅಶ್ಲೀಲ ಕಂಟೆಂಟ್ ಅನ್ನು YouTube ನಲ್ಲಿ ಸೇರಿಸಲು ಅನುಮತಿಯಿಲ್ಲ. ಪೋರ್ನೋಗ್ರಫಿಯನ್ನು ಪೋಸ್ಟ್ ಮಾಡಿದರೆ, ಕಂಟೆಂಟ್ ತೆಗೆದುಹಾಕುವಿಕೆ ಅಥವಾ ಚಾನಲ್ ಕೊನೆಗೊಳಿಸುವಿಕೆಗೆ ಕಾರಣವಾಗಬಹುದು. ಲೈಂಗಿಕ ಪ್ರಚೋದಕ ಕಂಟೆಂಟ್ ಅನ್ನು ಹೊಂದಿರುವ ವೀಡಿಯೊಗಳನ್ನು ತೆಗೆದುಹಾಕಲಾಗುವುದು ಅಥವಾ ವಯಸ್ಸಿನ ನಿರ್ಬಂಧ ವಿಧಿಸಲಾಗುವುದು. ಹಿಂಸಾತ್ಮಕ, ಗ್ರಾಫಿಕ್ ಅಥವಾ ಅವಮಾನಕರ ಬಯಕೆಗಳ ಕಂಟೆಂಟ್ ಅನ್ನು YouTube ನಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಅನುಮತಿಸಲಾಗುವುದಿಲ್ಲ.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಕೆಲವು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಅಪ್ರಾಪ್ತರನ್ನು ಒಳಗೊಂಡಿರುವ. ಲೈಂಗಿಕವಾಗಿ ಅಶ್ಲೀಲವಾದ ಕಂಟೆಂಟ್, ಮತ್ತು ಅಪ್ರಾಪ್ತರನ್ನು ಲೈಂಗಿಕವಾಗಿ ಶೋಷಿಸುವ ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಹೊಂದಿರುವ ಕಂಟೆಂಟ್ ಅನ್ನು ನಾವು ಕಾಣೆಯಾಗಿರುವ ಮತ್ತು ಶೋಷಿತ ಮಕ್ಕಳಿಗಾಗಿ ರಾಷ್ಟ್ರೀಯ ಕೇಂದ್ರಕ್ಕೆ ವರದಿ ಮಾಡುತ್ತೇವೆ, ಇವರು ಜಾಗತಿಕ ಕಾನೂನು ಜಾರಿಗೊಳಿಸುವ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಾರೆ.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಈ ನೀತಿಯನ್ನು ಉಲ್ಲಂಘಿಸುವ ಅಶ್ಲೀಲ ಕಂಟೆಂಟ್‌ನಿಂದಾಗಿ ಚಾನಲ್ ಅನ್ನು ಕೊನೆಗೊಳಿಸಬಹುದು. ಈ ನೀತಿಯು, ಲೈಂಗಿಕ ಕ್ರಿಯೆಯ ದೃಶ್ಯಗಳು, ವೀಡಿಯೊ ಗೇಮ್‌ಗಳು ಮತ್ತು ಸಂಗೀತವನ್ನು ಒಳಗೊಂಡಂತೆ ನೈಜ-ಜಗತ್ತಿನ, ನಾಟಕೀಯಗೊಳಿಸಿದ, ಚಿತ್ರಣ ಒದಗಿಸಲಾದ ಮತ್ತು ಆ್ಯನಿಮೇಟ್ ಮಾಡಿದ ಕಂಟೆಂಟ್‌ಗೆ ಅನ್ವಯಿಸುತ್ತದೆ.

ಒಂದು ವೇಳೆ ಕಂಟೆಂಟ್, ಈ ಕೆಳಗಿನವುಗಳನ್ನು ತೋರಿಸುತ್ತದೆ ಎಂದಾದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ:

  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶದಿಂದ ಉಡುಪಿನಿಂದ ಮರೆಮಾಡಿದ ಅಥವಾ ಮರೆಮಾಡಿರದ ಜನನಾಂಗಗಳು, ಸ್ತನಗಳು ಅಥವಾ ಪೃಷ್ಠವನ್ನು ಪ್ರದರ್ಶಿಸುವುದು.
  • ಪೋರ್ನೋಗ್ರಫಿ, ಲೈಂಗಿಕ ಕ್ರಿಯೆಗಳ ಪ್ರದರ್ಶನ ಅಥವಾ ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶವಿರುವ ಅಸ್ವಾಭಾವಿಕ ಬಯಕೆಗಳ ಪ್ರದರ್ಶನ.

ಈ ನೀತಿಯನ್ನು ಉಲ್ಲಂಘಿಸುವ ಇತರ ರೀತಿಯ ಕಂಟೆಂಟ್

  • ಹಸ್ತಮೈಥುನ
  • ಜನನಾಂಗಗಳು, ಸ್ತನಗಳು ಅಥವಾ ಪೃಷ್ಠವನ್ನು ಮುದ್ದಾಡುವುದು ಅಥವಾ ಸ್ಪರ್ಶಿಸುವುದು.
  • ವೀಕ್ಷಕರಿಗೆ ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶದಿಂದ ಲೈಂಗಿಕ ಆಟಿಕೆಗಳನ್ನು ಬಳಸುವುದು
  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶವಿರುವ ನಗ್ನತೆ ಅಥವಾ ಆಂಶಿಕ ನಗ್ನತೆ
  • ಸಮ್ಮತಿಯಿಲ್ಲದ ಲೈಂಗಿಕ ಕ್ರಿಯೆಗಳು ಅಥವಾ ಲೈಂಗಿಕ ಬಲತ್ಕಾರ, ಕುಟುಂಬದ ರಕ್ತಸಂಬಂಧಿಗಳೊಡನೆ ಸಂಭೋಗ, ಪ್ರಾಣಿಗಳ ಜೊತೆಗೆ ಸಂಭೋಗ ಅಥವಾ ಝೂಫಿಲಿಯಾ ಮುಂತಾದ ಒಪ್ಪಿಗೆಯಿಲ್ಲದ ಲೈಂಗಿಕ ಕ್ರಿಯೆಗಳ ಪ್ರಚಾರ ಅಥವಾ ವೈಭವೀಕರಣ
  • ಸಮ್ಮತಿಯಿಲ್ಲದ ಹಂಚಿಕೊಂಡ ಇಮೇಜರಿ ಅಥವಾ ವೋಯರಿಸಂನಂತಹ ಅನಗತ್ಯ ಲೈಂಗಿಕತೆ
  • ವಾರ್ಡ್‌ರೋಬ್ ಜಾರಿ ಹೋಗುವುದು ಅಥವಾ ನಗ್ನ ಫೋಟೋಗಳು ಲೀಕ್ ಆಗುವುದು
  • ಲೈಂಗಿಕ ಸಂತೋಷದ ಉದ್ದೇಶಕ್ಕಾಗಿ ಸ್ತನಗಳು, ಪೃಷ್ಠದ ಅಥವಾ ಜನನಾಂಗದ ಪ್ರದೇಶದ ಮೇಲೆ ಸಮ್ಮತಿಯಿಲ್ಲದೆ ಝೂಮ್ ಇನ್ ಮಾಡುವುದು ಅಥವಾ ದೀರ್ಘಕಾಲ ಫೋಕಸ್ ಮಾಡುವುದು ಅಥವಾ ಒತ್ತು ನೀಡುವುದು
  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶವಿರುವ ಹಿಂಸಾತ್ಮಕ, ಅಶ್ಲೀಲ ಅಥವಾ ಅವಮಾನಕರವಾದ ಅಸ್ವಾಭಾವಿಕ ಲೈಂಗಿಕ ಕ್ರಿಯೆ
  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶ ಹೊಂದಿರುವ ಕಂಟೆಂಟ್ ಅನ್ನು ಒಟ್ಟುಗೂಡಿಸುವುದು
  • ಅಪ್ರಾಪ್ತರನ್ನು ಒಳಗೊಂಡಿರುವ ಯಾವುದೇ ಲೈಂಗಿಕ ಕಂಟೆಂಟ್ — ಹೆಚ್ಚಿನ ಮಾಹಿತಿಗಾಗಿ YouTube ನಲ್ಲಿ ಮಕ್ಕಳ ಸುರಕ್ಷತೆ ಪುಟವನ್ನು ನೋಡಿ

ಸೂಚನೆ: ಈ ಮೇಲೆ ಇರುವುದು ಸಂಪೂರ್ಣ ಪಟ್ಟಿಯಲ್ಲ.

ವಯೋಮಾನ ನಿರ್ಬಂಧಿತ ಕಂಟೆಂಟ್

ಕಂಟೆಂಟ್, ನಗ್ನತೆ ಅಥವಾ ಇತರ ಲೈಂಗಿಕ ಕಂಟೆಂಟ್ ಅನ್ನು ಒಳಗೊಂಡಿದೆ, ಆದರೆ ಮೇಲೆ ವಿವರಿಸಿದ ಯಾವುದನ್ನೂ ಒಳಗೊಂಡಿಲ್ಲ ಎಂದಾದರೆ, ನಾವು ಅದರ ಮೇಲೆ ವಯೋಮಾನ ನಿರ್ಬಂಧ ವಿಧಿಸಬಹುದು. ಕಂಟೆಂಟ್‍ನ ಮೇಲೆ ವಯಸ್ಸಿನ-ನಿರ್ಬಂಧ ವಿಧಿಸಬೇಕೇ ಅಥವಾ ಕಂಟೆಂಟ್ ಅನ್ನು ತೆಗೆದುಹಾಕಬೇಕೇ ಎಂಬುದನ್ನು ತೀರ್ಮಾನಿಸುವಾಗ ನಾವು ಈ ಕೆಳಗಿನವುಗಳನ್ನು ಪರಿಗಣಿಸುತ್ತೇವೆ.

  • ವೀಡಿಯೊದಲ್ಲಿ, ಉಡುಪಿನಿಂದ ಮರೆಮಾಡಿದ ಅಥವಾ ಮರೆಮಾಡಿರದ ಸ್ತನಗಳು, ಪೃಷ್ಠಗಳು ಅಥವಾ ಜನನಾಂಗಗಳು ವೀಡಿಯೊವಿನ ಕೇಂದ್ರಬಿಂದುವಾಗಿವೆಯೇ
  • ವೀಕ್ಷಕರನ್ನು ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶವಿರುವ ಭಂಗಿ ಅಥವಾ ಉಡುಗೆಯಲ್ಲಿ ವ್ಯಕ್ತಿಯನ್ನು ಪ್ರದರ್ಶಿಸಲಾಗಿದೆಯೇ
  • ವೀಡಿಯೊದಲ್ಲಿ ಬಳಸಲಾದ ಭಾಷೆಯು ಅಸಭ್ಯವಾಗಿದೆಯೇ ಅಥವಾ ಅಶ್ಲೀಲವಾಗಿದೆಯೇ
  • ವೀಡಿಯೊದಲ್ಲಿನ ವಿಷಯದ ಕ್ರಿಯೆಗಳು ಲೈಂಗಿಕ ಪ್ರಚೋದನೆಯನ್ನು ಉತ್ತೇಜಿಸುತ್ತದೆ, ಉದಾಹರಣೆಗೆ ಸ್ತನಗಳು ಅಥವಾ ಜನನಾಂಗಗಳನ್ನು ಸ್ಪರ್ಶಿಸುವುದು ಅಥವಾ ಒಳ ಉಡುಪುಗಳನ್ನು ಪ್ರದರ್ಶಿಸುವುದು
  • ಸಾರ್ವಜನಿಕ ಸಂದರ್ಭಗಳಲ್ಲಿ ಉಡುಗೆಯು ಸಾಮಾನ್ಯವಾಗಿ ಅಸ್ವೀಕಾರಾರ್ಹವಾಗಿರುತ್ತದೆಯೇ, ಉದಾಹರಣೆಗೆ ಒಳ-ಉಡುಪು
  • ಲೈಂಗಿಕ ಚಿತ್ರಣ ಅಥವಾ ಆಡಿಯೋವನ್ನು ಬ್ಲರ್ ಮಾಡಲಾಗಿದೆಯೇ, ಮರೆಮಾಚಲಾಗಿದೆಯೇ ಅಥವಾ ಅಸ್ಪಷ್ಟಗೊಳಿಸಲಾಗಿದೆಯೇ
  • ಕಂಟೆಂಟ್‌ನಲ್ಲಿ ಲೈಂಗಿಕ ಚಿತ್ರಣ ಅಥವಾ ಆಡಿಯೋ ಕ್ಷಣಿಕವಾಗಿದೆಯೇ ಅಥವಾ ಸುದೀರ್ಘವಾಗಿದೆಯೇ
  • ಲೈಂಗಿಕ ಕ್ರಿಯೆಗಳನ್ನು ಒಳಗೊಂಡಿರುವ ಸವಾಲಿನಲ್ಲಿ ಭಾಗವಹಿಸಲು ಕಂಟೆಂಟ್, ಇತರರನ್ನು ಆಹ್ವಾನಿಸುತ್ತದೆಯೇ

ಸೂಚನೆ: ಈ ಮೇಲಿನ ಪಟ್ಟಿಯು ಸಂಪೂರ್ಣವಲ್ಲ.

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು, ಆಡಿಯೋ ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ನೆನಪಿಡಿ, ಇವುಗಳು ಕೇವಲ ಕೆಲವು ಉದಾಹರಣೆಗಳಾಗಿವೆ, ಮತ್ತು ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಶೈಕ್ಷಣಿಕ ಕಂಟೆಂಟ್

ಪ್ರಾಥಮಿಕ ಉದ್ದೇಶವು ಶೈಕ್ಷಣಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ ಅಥವಾ ಕಲಾತ್ಮಕವಾದಾಗ ಮತ್ತು ಅದು ಅನಪೇಕ್ಷಿತವಲ್ಲದಿದ್ದಾಗ ನಾವು ಆ ಲೈಂಗಿಕ ಕಂಟೆಂಟ್ ಅನ್ನು ಅನುಮತಿಸಬಹುದು. ಉದಾಹರಣೆಗೆ, ನಗ್ನವಾದ ಸ್ತನಗಳನ್ನು ತೋರಿಸುವ ಸ್ತನ ಕ್ಯಾನ್ಸರ್‌ನ ಸಾಕ್ಷ್ಯಚಿತ್ರವು ಸೂಕ್ತವಾಗಿರುತ್ತದೆ, ಆದರೆ ಅದೇ ಸಾಕ್ಷ್ಯಚಿತ್ರದಿಂದ ಲೈಂಗಿಕವಾಗಿ ಸಂತೋಷವನ್ನು ನೀಡುವಂತಹ ಸನ್ನಿವೇಶದ ಕ್ಲಿಪ್‌ಗಳನ್ನು ಪೋಸ್ಟ್ ಮಾಡುವುದು ಸೂಕ್ತವಲ್ಲ. ಮೂಲನಿವಾಸಿ ಸಮುದಾಯಗಳಲ್ಲಿ ವೈದ್ಯಕೀಯ ಕಾರ್ಯವಿಧಾನಗಳ ಸಮಯದಲ್ಲಿ, ಹೆರಿಗೆಯ ಸಮಯದಲ್ಲಿ, ಕಲಾತ್ಮಕ ಪ್ರದರ್ಶನಗಳ ಸಮಯದಲ್ಲಿ ಅಥವಾ ಸ್ತನ್ಯಪಾನದ ಸಮಯದಲ್ಲಿ ಸಂದರ್ಭಕ್ಕೆ ತಕ್ಕುದಲ್ಲದ ನಗ್ನತೆಯು ನಮ್ಮ ಸಾಕ್ಷ್ಯಚಿತ್ರದ ವಿನಾಯಿತಿಯ ಮಾನದಂಡವನ್ನು ಪೂರೈಸದಿರಬಹುದು. 

ಚಲನಚಿತ್ರಗಳು, ಆಡಿಯೋ ಕಥೆಗಳು, ಸಂಗೀತ ಅಥವಾ ವೀಡಿಯೊ ಗೇಮ್‌ಗಳಂತಹ ಕಲಾತ್ಮಕ ಕಂಟೆಂಟ್‌ನಲ್ಲಿ ಲೈಂಗಿಕ ದೃಶ್ಯಗಳ ಪ್ರದರ್ಶನಕ್ಕೂ ಇದೇ ನಿಯಮ ಅನ್ವಯಿಸುತ್ತದೆ. ಉದಾಹರಣೆಗೆ, ವೀಡಿಯೊ ಕಂಟೆಂಟ್ ಮತ್ತು ವೀಡಿಯೊ ವಿವರಣೆಯಲ್ಲಿ ಚಿತ್ರದ ಹೆಸರು, ನಿರ್ದೇಶಕ, ನಟರಂತಹ ವಿವರಗಳನ್ನು ಒಳಗೊಂಡಿದ್ದರೆ ಲೈಂಗಿಕ ದೃಶ್ಯವನ್ನು ಹೊಂದಿರುವ ಚಲನಚಿತ್ರವನ್ನು ಅನುಮತಿಸಬಹುದು. ಕಂಟೆಂಟ್, ಶೀರ್ಷಿಕೆ ಮತ್ತು ವಿವರಣೆಯಲ್ಲಿ ಸಾಂದರ್ಭಿಕ ಮಾಹಿತಿ ಒದಗಿಸಿದರೆ, ವೀಡಿಯೊದ ಉದ್ದೇಶವನ್ನು ನಿರ್ಧರಿಸಲು ನಮಗೆ ಮತ್ತು ನಿಮ್ಮ ವೀಕ್ಷಕರಿಗೆ ಸಹಾಯವಾಗುತ್ತದೆ ಎಂಬುದನ್ನು ಮರೆಯಬೇಡಿ.

ವಯಸ್ಕರಿಗೆ ಸೂಕ್ತವಾದ ಸಾಮಗ್ರಿ ಅಥವಾ ಸ್ಪಷ್ಟ ಹಿಂಸೆಯನ್ನು ಹೊಂದಿರುವ ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್‌ಗೆ ಸಂಬಂಧಿಸಿದಂತೆ, ಕಂಟೆಂಟ್ YouTube ನಲ್ಲಿ ಇರಬಹುದೇ ಎಂಬುದನ್ನು ತೀರ್ಮಾನಿಸುವಾಗ ನಾವು ಅಧಿಕೃತ ಥರ್ಡ್-ಪಾರ್ಟಿ ರೇಟಿಂಗ್‌ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ನಮ್ಮ ನೀತಿಗಳನ್ನು ಅನುಸರಿಸುವ, ಆದರೆ ಎಲ್ಲಾ ಪ್ರೇಕ್ಷಕರಿಗೆ ಸೂಕ್ತವಲ್ಲದ ಕಂಟೆಂಟ್‌ನ ಮೇಲೆ ವಯಸ್ಸಿನ ನಿರ್ಬಂಧವನ್ನು ಅನ್ವಯಿಸಲಾಗುತ್ತದೆ. ವಯೋಮಾನ ನಿರ್ಬಂಧಿತ ಕಂಟೆಂಟ್ ಅನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ ಸೈನ್-ಔಟ್ ಮಾಡಿರುವವರು ವೀಕ್ಷಿಸುವಂತಿಲ್ಲ.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ಲೈಂಗಿಕ ಕಂಟೆಂಟ್ (ನೈಜ ಜಗತ್ತು ಅಥವಾ ಕಲಾತ್ಮಕ) ಅನ್ನು ಪ್ರತ್ಯೇಕಿಸುವುದಕ್ಕಾಗಿ ಪೋರ್ನೋಗ್ರಾಫಿಕ್ ಅಲ್ಲದ ಚಲನಚಿತ್ರಗಳು, ಶೋಗಳು ಅಥವಾ ಇತರ ಕಂಟೆಂಟ್‌ನಿಂದ ತೆಗೆದುಕೊಳ್ಳಲಾದ ಕ್ಲಿಪ್‌ಗಳು
  • ಯಾವುದೇ ವ್ಯಕ್ತಿಯ ಸಮ್ಮತಿಯಿಲ್ಲದೆ ವ್ಯಕ್ತಿಗಳನ್ನು ಸವರುವುದು, ಚುಂಬಿಸುವುದು, ಸಾರ್ವಜನಿಕವಾಗಿ ಹಸ್ತಮೈಥುನ ಮಾಡುವುದು, “ಅಪ್‌ಸ್ಕರ್ಟಿಂಗ್”, ವಾಯರಿಸಮ್, ಪ್ರಿಡೇಟರಿ ಎಕ್ಸಿಬಿಷನಿಸಮ್ ಅಥವಾ ಇತ್ಯಾದಿಗಳು
  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶವಿರುವ ಲೈಂಗಿಕ ಕ್ರಿಯೆಗಳು, ವರ್ತನೆಗಳು ಅಥವಾ ಲೈಂಗಿಕ ಆಟಿಕೆಗಳನ್ನು ಪ್ರದರ್ಶಿಸುವ ಕಂಟೆಂಟ್

ಗಮನಿಸಿ: ಮೇಲೆ ಕೊಟ್ಟಿರುವುದು ಕೆಲವು ಉದಾಹರಣೆಗಳಷ್ಟೇ. ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನೀವು ಭಾವಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಇನ್ನಷ್ಟು ಉದಾಹರಣೆಗಳು

  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶಕ್ಕಾಗಿ ನಗ್ನತೆ ಅಥವಾ ಲೈಂಗಿಕ ಥೀಮ್‌ಗಳನ್ನು ಹೊಂದಿರುವ ಕಂಟೆಂಟ್ ಅನ್ನು ಒಟ್ಟುಗೂಡಿಸುವ ಪ್ಲೇಪಟ್ಟಿಗಳು
  • ಮುದ್ದಾಡುವಿಕೆ ಅಥವಾ ಸ್ಪರ್ಶಿಸುವುದು ಸೇರಿದಂತೆ, ಡ್ಯಾನ್ಸ್ ಮಾಡುವವರ ಜನನಾಂಗಗಳು, ಪೃಷ್ಠ ಅಥವಾ ಸ್ತನಗಳ ಮೇಲೆ ಗಮನ ಕೇಂದ್ರೀಕರಿಸಿರುವ ಪ್ರಚೋದನಕಾರಿ ನೃತ್ಯ
  • ಯಾವುದೇ ರೂಪದಲ್ಲಿ ಅತ್ಯಾಚಾರವನ್ನು ಲೈಂಗಿಕಗೊಳಿಸುವ ಕಂಟೆಂಟ್, ಅಥವಾ ನಾಟಕೀಯ ಅತ್ಯಾಚಾರದ ದೃಶ್ಯಗಳ ಕ್ಲಿಪ್‌ಗಳನ್ನು ಒಟ್ಟುಗೂಡಿಸುವ ಕಂಟೆಂಟ್
  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶದೊಂದಿಗೆ ಲೈಂಗಿಕ ಕ್ರಿಯೆಗಳ ಆಡಿಯೋ ಅಥವಾ ಪಠ್ಯ ಪ್ರದರ್ಶನ
  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶದಿಂದ ದೇಹದ್ರವಗಳು ಅಥವಾ ಮೂತ್ರದಂತಹ ವಿಸರ್ಜನೆಗಳನ್ನು ತೋರಿಸುವ ಕಂಟೆಂಟ್
  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶದಿಂದ ಚುಚ್ಚುಮದ್ದುಗಳು ಅಥವಾ ತಿನ್ನುವುದರ ಹಾಗೆ, ಅನ್ಯಥಾ ದೈನಂದಿನ ವಸ್ತುಗಳನ್ನು ಅಥವಾ ಸನ್ನಿವೇಶಗಳನ್ನು ಬಳಸುವ ಕಂಟೆಂಟ್
  • ಲೈಂಗಿಕ ಸಂತೋಷ ಒದಗಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ಅಥವಾ ಮಾರ್ಪಡಿಸಲಾದ (“ಮಾರ್ಪಾಟು ಮಾಡಲಾದ”) ಅಥವಾ ಅನಪೇಕ್ಷಿತ ಲೈಂಗಿಕಗೊಳಿಸುವಿಕೆಯ ಮೇಲೆ ಗಮನ ಕೇಂದ್ರೀಕರಿಸುವ ವೀಡಿಯೊ ಗೇಮ್ ಕಂಟೆಂಟ್ 

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಕಂಟೆಂಟ್, ಪೋರ್ನೊಗ್ರಫಿಯನ್ನು ಒಳಗೊಂಡಿದ್ದರೆ, ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3129014987729323839
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false