ಮಕ್ಕಳ ಸುರಕ್ಷತೆಯ ಕುರಿತಾದ ನೀತಿ

ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.
ಅಪ್‌ಡೇಟ್: ಎಳೆಯ ಅಪ್ರಾಪ್ತರು ಹಾಗೂ ಕುಟುಂಬಗಳನ್ನು ಟಾರ್ಗೆಟ್ ಮಾಡುವ ಕಂಟೆಂಟ್, ಲೈಂಗಿಕ ಥೀಮ್‍ಗಳು, ಹಿಂಸೆ, ಅಶ್ಲೀಲತೆ ಅಥವಾ ಎಳೆಯ ಪ್ರೇಕ್ಷಕರಿಗೆ ಸೂಕ್ತವಲ್ಲದ ಇತರ ಯಾವುದೇ ಪ್ರಬುದ್ಧ ಥೀಮ್‌ಗಳನ್ನು ಹೊಂದಿದ್ದರೆ, ಅದನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ನಿಮ್ಮ ಶೀರ್ಷಿಕೆಗಳು, ವಿವರಣೆಗಳು ಹಾಗೂ ಟ್ಯಾಗ್‌ಗಳಲ್ಲದೆ, ನಿಮ್ಮ ಪ್ರೇಕ್ಷಕರ ಆಯ್ಕೆಯು ನಿಮ್ಮ ಕಂಟೆಂಟ್ ಸೂಕ್ತವಾಗಿರುವ ಪ್ರೇಕ್ಷಕರಿಗೆ ಹೊಂದಿಕೆಯಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಅಪ್ರಾಪ್ತರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮವನ್ನು ಅಪಾಯಕ್ಕೆ ಒಳಗಾಗಿಸುವ ಕಂಟೆಂಟ್ ಅನ್ನು YouTube ಅನುಮತಿಸುವುದಿಲ್ಲ. ಅಪ್ರಾಪ್ತ ವಯಸ್ಕರು ಎಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದನ್ನು ವರದಿ ಮಾಡಿ. ಒಂದು ಮಗು ಅಪಾಯದಲ್ಲಿದೆ ಎಂದು ನೀವು ಭಾವಿಸಿದರೆ, ಸನ್ನಿವೇಶವನ್ನು ತಕ್ಷಣ ವರದಿ ಮಾಡಲು ನಿಮ್ಮ ಸ್ಥಳೀಯ ಕಾನೂನು ಜಾರಿಗೊಳಿಸುವಿಕೆ ಏಜೆನ್ಸಿಯನ್ನು ನೀವು ಸಂಪರ್ಕಿಸಬೇಕು.

ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ವರದಿ ಮಾಡುವುದರ ಕುರಿತ ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಅನೇಕ ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗಿನ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ಅಪ್ರಾಪ್ತರನ್ನು ಲೈಂಗಿಕವಾಗಿ ಬಿಂಬಿಸುವಿಕೆ: ಅಪ್ರಾಪ್ತರನ್ನು ತೋರಿಸುವ ಲೈಂಗಿಕವಾಗಿ ಅಶ್ಲೀಲವಾದ ಕಂಟೆಂಟ್ ಮತ್ತು ಹಾಸ್ಯದ ಉದ್ಧೇಶದೊಂದಿಗೆ ಪೋಸ್ಟ್ ಮಾಡಲಾದ ಅಪ್ರಾಪ್ತರ ನಗ್ನತೆಯನ್ನು ಒಳಗೊಂಡಂತೆ ಅಪ್ರಾಪ್ತರನ್ನು ಲೈಂಗಿಕವಾಗಿ ಶೋಷಿಸುವ ಕಂಟೆಂಟ್. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಣವನ್ನು ಹೊಂದಿರುವ ಕಂಟೆಂಟ್ ಅನ್ನು ನಾವು ಕಾಣೆಯಾಗಿರುವ ಮತ್ತು ಶೋಷಿತ ಮಕ್ಕಳಿಗಾಗಿ ರಾಷ್ಟ್ರೀಯ ಕೇಂದ್ರಕ್ಕೆ ವರದಿ ಮಾಡುತ್ತೇವೆ, ಇವರು ಜಾಗತಿಕ ಕಾನೂನು ಜಾರಿಗೊಳಿಸುವ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಾರೆ.
  • ಅಪ್ರಾಪ್ತ ವಯಸ್ಕರನ್ನು ಒಳಗೊಂಡ ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳು: ಅಪ್ರಾಪ್ತ ವಯಸ್ಕರು ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತೋರಿಸುವ ಅಥವಾ ಅಪಾಯಕಾರಿ ಚಟುವಟಿಕೆಗಳನ್ನು ಮಾಡಲು ಅಪ್ರಾಪ್ತ ವಯಸ್ಕರನ್ನು ಪ್ರೋತ್ಸಾಹಿಸುವ ಕಂಟೆಂಟ್, ನಿರ್ದಿಷ್ಟವಾಗಿ, ಅದನ್ನು ವೀಕ್ಷಿಸಿದ ವ್ಯಕ್ತಿಯೊಬ್ಬರು ಆ ಅಪಾಯಕಾರಿ ಕೃತ್ಯವನ್ನು ಅನುಕರಿಸುವ ಸಾಧ್ಯತೆಯಿದ್ದರೆ ಅಥವಾ ಕಂಟೆಂಟ್, ಆ ಅಪಾಯಕಾರಿ ಕೃತ್ಯವನ್ನು ಪ್ರೋತ್ಸಾಹಿಸಿದರೆ ಅಥವಾ ಹೊಗಳಿದರೆ. ಅಪಾಯಕಾರಿ ಸ್ಟಂಟ್‌ಗಳು, ಸವಾಲುಗಳು, ಡೇರ್‌ಗಳು ಅಥವಾ ಪ್ರಾಂಕ್‌ಗಳನ್ನು ಒಳಗೊಂಡ ಹಾಗೆ ಗಾಯವಾಗುವ ಸಾಧ್ಯತೆ ಇರುವ ಹಾನಿಕಾರಕ ಸನ್ನಿವೇಶಗಳಿಗೆ ಅಪ್ರಾಪ್ತ ವಯಸ್ಕರನ್ನು ಎಂದೂ ಒಳಪಡಿಸಬೇಡಿ. ಅಪಾಯಕಾರಿ ಕೃತ್ಯಗಳು, ಅತ್ಯಂತ ಅಪಾಯಕಾರಿ ಸವಾಲುಗಳು ಎಂಬುದರ ಅಡಿಯಲ್ಲಿ ಪಟ್ಟಿ ಮಾಡಿದ ವರ್ಗಗಳಲ್ಲಿರುವ ಯಾವುದೇ ಕೃತ್ಯವನ್ನು ಒಳಗೊಂಡಿರುತ್ತವೆ, ಆದರೆ ಅವುಗಳಿಗೆ ಸೀಮಿತವಾಗಿರುವುದಿಲ್ಲ, ಉದಾಹರಣೆಗೆ ಉಸಿರುಗಟ್ಟುವಿಕೆ ಅಥವಾ ವಿದ್ಯುತ್ ಆಘಾತ.
    • ಉದಾಹರಣೆಗಳಲ್ಲಿ, ಅಪ್ರಾಪ್ತ ವಯಸ್ಕರು ಇವುಗಳನ್ನು ಮಾಡುವುದನ್ನು ತೋರಿಸುವ ಕಂಟೆಂಟ್ ಒಳಗೊಂಡಿದೆ:
      • ಮದ್ಯಪಾನ ಸೇವಿಸುವುದು
      • ವೇಪರೈಸರ್‌ಗಳು, ಇ-ಸಿಗರೇಟ್‌ಗಳು, ತಂಬಾಕು ಅಥವಾ ಗಾಂಜಾವನ್ನು ಬಳಸುವುದು
      • ಸುಡುಮದ್ದುಗಳ ದುರುಪಯೋಗ
      • ಮೇಲ್ವಿಚಾರಣೆಯಿಲ್ಲದೆ ಬಂದೂಕುಗಳನ್ನು ಬಳಸುವುದು
  • ಅಪ್ರಾಪ್ತರ ಮೇಲೆ ಭಾವನಾತ್ಮಕ ಯಾತನೆ ಉಂಟುಮಾಡುವುದು ಸೇರಿದಂತೆ ಮಗುವನ್ನು ದೈಹಿಕ, ಲೈಂಗಿಕ ಅಥವಾ ಭಾವನಾತ್ಮಕವಾಗಿ ಪೀಡಿಸುವುದು ಅಥವಾ ನಿರ್ಲಕ್ಷ್ಯ ಧೋರಣೆ ತಾಳುವುದು ಅಥವಾ ಅದನ್ನು ಪ್ರತಿಪಾದಿಸುವುದು.
    • ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಸಂದರ್ಭವನ್ನು ಹೊಂದಿರುವ ಮತ್ತು ಮಸುಕುಗೊಳಿಸುವಿಕೆಯೊಂದಿಗೆ ಮಗುವಿನ ಮೇಲಿನ ದೈಹಿಕ, ಲೈಂಗಿಕ ಅಥವಾ ಭಾವನಾತ್ಮಕ ದೌರ್ಜನ್ಯವನ್ನು ಒಳಗೊಂಡಿರುವ ಕಂಟೆಂಟ್ ವಿನಾಯಿತಿಯನ್ನು ಪಡೆಯಬಹುದು.
    • ಈ ಕೆಳಗಿನವುಗಳನ್ನು ಒಳಗೊಂಡಂತೆ, ಅಪ್ರಾಪ್ತ ಭಾಗಿಗಳು ಅಥವಾ ವೀಕ್ಷಕರಿಗೆ ಭಾವನಾತ್ಮಕ ಯಾತನೆಯನ್ನು ಉಂಟುಮಾಡಬಹುದಾದ ಕಂಟೆಂಟ್:
      • ಅಪ್ರಾಪ್ತರಿಗೆ ಪ್ರಬುದ್ಧ ಥೀಮ್‌ಗಳನ್ನು ಬಹಿರಂಗಪಡಿಸುವುದು
      • ಪೋಷಕರ ದುರ್ವರ್ತನೆಯನ್ನು ಅನುಕರಿಸುವುದು
      • ಅಪ್ರಾಪ್ತರ ಮೇಲೆ ಬಲ ಪ್ರಯೋಗ ಮಾಡುವುದು
      • ಹಿಂಸೆ
  • ದಾರಿತಪ್ಪಿಸುವಂತಹ, ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್: ಎಳೆಯ ಅಪ್ರಾಪ್ತರು ಮತ್ತು ಕುಟುಂಬಗಳನ್ನು ಟಾರ್ಗೆಟ್ ಮಾಡುವ, ಆದರೆ ಇವುಗಳನ್ನು ಒಳಗೊಂಡಿರುವ ಕಂಟೆಂಟ್:
    • ಲೈಂಗಿಕ ಥೀಮ್‌ಗಳು
    • ಹಿಂಸೆ
    • ಎಳೆಯ ಪ್ರೇಕ್ಷಕರಿಗೆ ಸೂಕ್ತವಲ್ಲದ ಅಶ್ಲೀಲತೆ ಅಥವಾ ಇತರ ಪ್ರಬುದ್ಧ ಥೀಮ್‌ಗಳು
    • ವೈದ್ಯಕೀಯ ಕಾರ್ಯವಿಧಾನಗಳು
    • ಸ್ವಯಂ ಹಾನಿ
    • ವಯಸ್ಕ ಭಯಾನಕ ಪಾತ್ರಗಳನ್ನು ಬಳಸುವುದು
    • ಎಳೆಯ ವಯಸ್ಸಿನ ಪ್ರೇಕ್ಷಕರನ್ನು ಆಘಾತಗೊಳಿಸುವ ಉದ್ದೇಶವನ್ನು ಹೊಂದಿರುವ ಇತರ ಸೂಕ್ತವಲ್ಲದ ಥೀಮ್‌ಗಳು
    • ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಸಂದರ್ಭದಲ್ಲಿ, ಅಪ್ರಾಪ್ತ ವಯಸ್ಕರಿಗಲ್ಲದ ಥೀಮ್‌ಗಳನ್ನು ಹೊಂದಿರುವ ಎಳೆಯ ಅಪ್ರಾಪ್ತ ವಯಸ್ಕರು ಮತ್ತು ಕುಟುಂಬಗಳನ್ನು ಟಾರ್ಗೆಟ್ ಮಾಡುವ ಕಂಟೆಂಟ್ ವಿನಾಯಿತಿಯನ್ನು ಪಡೆಯಬಹುದು. ಎಳೆಯ ವಯಸ್ಸಿನ ಪ್ರೇಕ್ಷಕರನ್ನು ಆಘಾತಗೊಳಿಸುವ ಉದ್ದೇಶವಿರುವ ವಯಸ್ಕ ಥೀಮ್‍ಗಳೊಂದಿಗೆ ಎಳೆಯ ವಯಸ್ಸಿನ ಅಪ್ರಾಪ್ತರು ಅಥವಾ ಕುಟುಂಬಗಳನ್ನು ಟಾರ್ಗೆಟ್ ಮಾಡಲು ಇದು ರಹದಾರಿಯಲ್ಲ.
    • ಎಳೆಯ ಅಪ್ರಾಪ್ತರನ್ನು ಟಾರ್ಗೆಟ್ ಮಾಡುವ ಮತ್ತು ಹಿಂಸೆ, ಲೈಂಗಿಕತೆ, ಸಾವು, ಮಾದಕ ದ್ರವ್ಯಗಳು ಮತ್ತು ಇನ್ನೂ ಹೆಚ್ಚಿನ ವಯಸ್ಕ ಅಥವಾ ಅಪ್ರಾಪ್ತ ವಯಸ್ಕರಿಗಲ್ಲದ ಥೀಮ್‌ಗಳನ್ನು ಒಳಗೊಂಡಿರುವ ಕುಟುಂಬ-ಸ್ನೇಹಿ ಕಾರ್ಟೂನ್‌ಗಳು. ವೀಡಿಯೊದ ಶೀರ್ಷಿಕೆ, ವಿವರಣೆ, ಟ್ಯಾಗ್‌ಗಳು ಅಥವಾ ಪ್ರೇಕ್ಷಕರ ಆಯ್ಕೆಯಲ್ಲಿ, ಮಕ್ಕಳಿಗೆ ಸೂಕ್ತವಾಗಿದೆ ಎಂದು ಲೇಬಲ್ ಮಾಡಲಾಗಿರುವ ಕಂಟೆಂಟ್, ಅಪ್ರಾಪ್ತ ವಯಸ್ಕರಿಗೆ ಸೂಕ್ತವಲ್ಲದ ಥೀಮ್‌ಗಳನ್ನು ಹೊಂದಿದ್ದರೆ ನಾವು ಅದನ್ನು ಅನುಮತಿಸುವುದಿಲ್ಲ.
    • ನಿಮ್ಮ ಶೀರ್ಷಿಕೆಗಳು, ವಿವರಣೆಗಳು ಹಾಗೂ ಟ್ಯಾಗ್‌ಗಳು, ನೀವು ಟಾರ್ಗೆಟ್ ಮಾಡುವ ಪ್ರೇಕ್ಷಕರಿಗೆ ಹೊಂದಿಕೆಯಾಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಲ್ಲದೆ, ನಿಮ್ಮ ಪ್ರೇಕ್ಷಕರ ಆಯ್ಕೆಯು ನಿಮ್ಮ ಕಂಟೆಂಟ್ ಸೂಕ್ತವಾಗಿರುವ ಪ್ರೇಕ್ಷಕರನ್ನು ನಿಖರವಾಗಿ ಪ್ರತಿನಿಧಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಕಂಟೆಂಟ್, ಪ್ರಬುದ್ಧ ಪ್ರೇಕ್ಷಕರಿಗೆ ಸೂಕ್ತವಾಗಿದ್ದರೆ, ಅದನ್ನು ಅಪ್‌ಲೋಡ್ ಮಾಡಿದ ಬಳಿಕವೂ ಅದರ ಮೇಲೆ ನೀವು ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು.
  • ಅಪ್ರಾಪ್ತರನ್ನು ಒಳಗೊಂಡ ಸೈಬರ್ ನಿಂದಿಸುವಿಕೆ ಮತ್ತು ಕಿರುಕುಳ: ಈ ರೀತಿಯ ಕಂಟೆಂಟ್:
    • ಅಪ್ರಾಪ್ತ ವಯಸ್ಕರೊಬ್ಬರನ್ನು ಹೀಯಾಳಿಸುವ, ವಂಚಿಸುವ ಅಥವಾ ಅವಮಾನಿಸುವ ಉದ್ದೇಶ ಹೊಂದಿರುವುದು
    • ಇಮೇಲ್ ವಿಳಾಸಗಳು ಅಥವಾ ಬ್ಯಾಂಕ್ ಖಾತೆಯ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು
    • ಲೈಂಗಿಕವಾಗಿ ಬಿಂಬಿಸುವಿಕೆಯನ್ನು ಒಳಗೊಂಡಿರುವುದು
    • ನಿಂದಿಸಲು ಅಥವಾ ಕಿರುಕುಳ ನೀಡಲು ಇತರರನ್ನು ಪ್ರೋತ್ಸಾಹಿಸುವುದು

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಸ್ಟೋರಿಗಳು, ಸಮುದಾಯ ಪೋಸ್ಟ್‌ಗಳು, ಲೈವ್ ಸ್ಟ್ರೀಮ್‌ಗಳು, ಪ್ಲೇಪಟ್ಟಿಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ.

ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಇದು ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿರುವ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ಸ್ವರೂಪಗಳನ್ನು ಒಳಗೊಂಡಿರಬಹುದು. 

ವಯೋಮಾನ ನಿರ್ಬಂಧಿತ ಕಂಟೆಂಟ್

ಈ ಕೆಳಗಿನ ಯಾವುದನ್ನಾದರೂ ಒಳಗೊಂಡಿರುವ ಕಂಟೆಂಟ್‌ಗೆ ನಾವು ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು.

  • ವಯಸ್ಕರು ಅಥವಾ ಅಪ್ರಾಪ್ತ ವಯಸ್ಕರು ಅನುಕರಿಸಬಹುದಾದ ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳು: ವಯಸ್ಕರು ಅಥವಾ ಅಪ್ರಾಪ್ತ ವಯಸ್ಕರು ಸುಲಭವಾಗಿ ಅನುಕರಿಸಬಹುದಾದ ಅಪಾಯಕಾರಿ ಚಟುವಟಿಕೆಗಳಲ್ಲಿ ವಯಸ್ಕರು ಭಾಗವಹಿಸುವುದನ್ನು ತೋರಿಸುವಂತಹ ಕಂಟೆಂಟ್.
  • ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್‌ನಲ್ಲಿ ವಯಸ್ಕರ ಥೀಮ್‌ಗಳು: ವಯಸ್ಕ ಪ್ರೇಕ್ಷಕರಿಗೆ ಉದ್ದೇಶಿಸಲಾದ, ಆದರೆ ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್ ಎಂದು ಸುಲಭವಾಗಿ ತಪ್ಪು ತಿಳಿಯಬಹುದಾದ ಕಂಟೆಂಟ್. ಇದರಲ್ಲಿ ಹಿಂಸೆ, ಲೈಂಗಿಕತೆ, ಸಾವಿನಂತಹ ವಯಸ್ಕರ ಥೀಮ್‌ಗಳನ್ನು ಒಳಗೊಂಡ ಕಾರ್ಟೂನ್‌ಗಳು ಸೇರಿವೆ. ನಿಮ್ಮ ಕಂಟೆಂಟ್, ಪ್ರಬುದ್ಧ ಪ್ರೇಕ್ಷಕರಿಗೆ ಉದ್ದೇಶಿತವಾಗಿದ್ದರೆ, ಅದನ್ನು ಅಪ್‌ಲೋಡ್ ಮಾಡಿದ ಬಳಿಕವೂ ಅದರ ಮೇಲೆ ನೀವು ವಯಸ್ಸಿನ ನಿರ್ಬಂಧವನ್ನು ವಿಧಿಸಬಹುದು ಎಂಬುದನ್ನು ನೆನಪಿಡಿ.
  • ಅಸಭ್ಯ ಭಾಷೆ: ಕೆಲವು ಮಾತುಗಳು ಎಳೆಯ ಪ್ರೇಕ್ಷಕರಿಗೆ ಸೂಕ್ತವಾಗಿರುವುದಿಲ್ಲ. ಲೈಂಗಿಕವಾಗಿ ಅಶ್ಲೀಲವಾದ ಭಾಷೆ ಅಥವಾ ಅತಿಯಾದ ಬೈಗುಳಗಳನ್ನು ಒಳಗೊಂಡಿರುವ ಕಂಟೆಂಟ್‌, ವಯಸ್ಸಿನ ನಿರ್ಬಂಧ ವಿಧಿಸಲು ಕಾರಣವಾಗಬಹುದು.
ಅಪ್ರಾಪ್ತರನ್ನು ಒಳಗೊಂಡಿರುವ ಕಂಟೆಂಟ್
YouTube ನಲ್ಲಿ ಅಪ್ರಾಪ್ತರನ್ನು ರಕ್ಷಿಸುವುದಕ್ಕಾಗಿ, ನಮ್ಮ ನೀತಿಗಳನ್ನು ಉಲ್ಲಂಘಿಸದ, ಆದರೆ ಮಕ್ಕಳನ್ನು ಒಳಗೊಂಡಿರುವ ಕಂಟೆಂಟ್‌ಗಾಗಿ, ಚಾನಲ್ ಮತ್ತು ಕಂಟೆಂಟ್ ಮಟ್ಟದಲ್ಲಿ ಕೆಲವು ಫೀಚರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಬಹುದು. ಇದರಲ್ಲಿ ಈ ಫೀಚರ್‌ಗಳು ಸೇರಿರಬಹುದು:
  • ಕಾಮೆಂಟ್‌ಗಳು
  • ಲೈವ್ ಚಾಟ್
  • ಲೈವ್ ಸ್ಟ್ರೀಮಿಂಗ್
  • ವೀಡಿಯೊ ಶಿಫಾರಸುಗಳು (ನಿಮ್ಮ ವೀಡಿಯೊವನ್ನು ಹೇಗೆ ಮತ್ತು ಯಾವಾಗ ಶಿಫಾರಸು ಮಾಡಲಾಗುತ್ತದೆ)
  • ಸಮುದಾಯ ಪೋಸ್ಟ್‌ಗಳು
  • Shorts ವೀಡಿಯೊ ರೀಮಿಕ್ಸಿಂಗ್

ನಿಮ್ಮ ಕಂಟೆಂಟ್‌ನಲ್ಲಿ ಅಪ್ರಾಪ್ತರನ್ನು ರಕ್ಷಿಸುವುದು ಹೇಗೆ

ನಿಮ್ಮ, ನಿಮ್ಮ ಕುಟುಂಬ ಅಥವಾ ಸ್ನೇಹಿತರ ಕಂಟೆಂಟ್ ಅನ್ನು ಪೋಸ್ಟ್ ಮಾಡುವ ಮೊದಲು, ಅವು ಯಾರನ್ನಾದರೂ ನಕಾರಾತ್ಮಕ ಗಮನದ ಅಪಾಯಕ್ಕೆ ಈಡುಮಾಡಬಹುದೇ ಎಂಬ ಕುರಿತು ಎಚ್ಚರಿಕೆಯಿಂದ ಯೋಚಿಸಿ. ಅಪ್ರಾಪ್ತರು ಸೂಕ್ಷ್ಮ ಜನಸಮೂಹವಾಗಿದ್ದಾರೆ ಮತ್ತು ಅವರನ್ನು ಅನಗತ್ಯ ಗಮನದಿಂದ ರಕ್ಷಿಸಲು YouTube ನೀತಿಗಳನ್ನು ಹೊಂದಿದೆ.

  • ಅಪ್ರಾಪ್ತರನ್ನು ವಯಸ್ಕರೊಬ್ಬರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಅವರು ಹವ್ಯಾಸಗಳ ಪ್ರಾತ್ಯಕ್ಷಿಕೆ, ಶೈಕ್ಷಣಿಕ ಕಂಟೆಂಟ್ ಅಥವಾ ಸಾರ್ವಜನಿಕ ಪ್ರದರ್ಶನಗಳಂತಹ, ವಯಸ್ಸಿಗೆ ಸೂಕ್ತವಾದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
  • ಧರಿಸಿದ ಉಡುಪು ವಯಸ್ಸಿಗೆ ಸೂಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಪ್ರಾಪ್ತರು ಹೆಚ್ಚು ಮೈ ತೋರಿಸುವ ಉಡುಪು ಅಥವಾ ಫಾರ್ಮ್-ಫಿಟ್ಟಿಂಗ್ ಉಡುಪು ಧರಿಸುವುದನ್ನು ತಪ್ಪಿಸಿ.
  • ನೀವು ಪೋಸ್ಟ್ ಮಾಡುವ ವೀಡಿಯೊಗಳನ್ನು ಯಾರು ನೋಡಬಹುದು ಎನ್ನುವುದನ್ನು ಸೀಮಿತಗೊಳಿಸಲು YouTube ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬಳಸಿ.

ಅಪ್ರಾಪ್ತರನ್ನು ಒಳಗೊಂಡಿರುವ ಮತ್ತು ಈ ಕೆಳಗಿನವುಗಳಲ್ಲಿ ಒಂದು ಅಥವಾ ಹೆಚ್ಚಿನದನ್ನು ಪೂರೈಸುವ ಕಂಟೆಂಟ್ ಅನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ:

  • ಮನೆಯಲ್ಲಿ ಬೆಡ್‌ರೂಮ್‌ಗಳು ಅಥವಾ ಬಾತ್‌ರೂಮ್‌ಗಳಂತಹ ಖಾಸಗಿ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿರುವುದು.
  • ಅಪ್ರಾಪ್ತರು ಅಪರಿಚಿತರಿಂದ ಸಂಪರ್ಕ ಕೋರುವುದು, ಆನ್‌ಲೈನ್ ಡೇರ್‌ಗಳು ಅಥವಾ ಸವಾಲುಗಳು, ಅಥವಾ ವಯಸ್ಕ ವಿಷಯಗಳನ್ನು ಚರ್ಚಿಸುವುದನ್ನು ತೋರಿಸುವುದು.
  • ದೇಹ ತಿರುಚುವಿಕೆ ಅಥವಾ ASMR ನ ಹಾಗೆ, ಅಪ್ರಾಪ್ತರ ಮೇಲೆ ಅನಪೇಕ್ಷಿತ ಗಮನವನ್ನು ಸೆಳೆಯಬಹುದಾದಂತಹ ಚಟುವಟಿಕೆಗಳನ್ನು ತೋರಿಸುವುದು.
  • ಅಪ್ರಾಪ್ತರ ಕುರಿತು ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸುವುದು.

ಇವು ಕೆಲವೇ ಉದಾಹರಣೆಗಳಾಗಿವೆ, ಮಕ್ಕಳ ಸುರಕ್ಷತೆಗಾಗಿ ಇಲ್ಲಿ ನೀವು ಇನ್ನಷ್ಟು ಉತ್ತಮ ಕಾರ್ಯವಿಧಾನಗಳನ್ನು ಪಡೆದುಕೊಳ್ಳಬಹುದು. ನೀವು 18 ವರ್ಷಕ್ಕಿಂತ ಅಥವಾ ನಿಮ್ಮ ದೇಶದಲ್ಲಿನ ಪ್ರಾಪ್ತ ವಯಸ್ಸಿಗಿಂತ ಕಡಿಮೆ ವಯಸ್ಸಿನವರಾಗಿದ್ದರೆ, Be internet awesome ಆನ್‍ಲೈನ್‌ನಲ್ಲಿ ಸುರಕ್ಷಿತವಾಗಿರಲು ನಿಮಗೆ ಸಹಾಯ ಮಾಡಬಲ್ಲದು.

ಉದಾಹರಣೆಗಳು

YouTube ನಲ್ಲಿ ಅನುಮತಿಸದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ಅಪ್ರಾಪ್ತರು ಪ್ರಚೋದನಕಾರಿ, ಲೈಂಗಿಕ ಅಥವಾ ಲೈಂಗಿಕವಾಗಿ ಪ್ರಚೋದಕ ಚಟುವಟಿಕೆಗಳು, ಸವಾಲುಗಳು ಮತ್ತು ಡೇರ್‌ಗಳು, ಉದಾಹರಣೆಗೆ ಚುಂಬಿಸುವುದು ಅಥವಾ ಗ್ರೋಪಿಂಗ್‌ನಲ್ಲಿ ತೊಡಗಿಸಿಕೊಂಡಿರುವುದನ್ನು ತೋರಿಸುವ ವೀಡಿಯೊಗಳು ಅಥವಾ ಪೋಸ್ಟ್‌ಗಳು.
  • ಅಪ್ರಾಪ್ತರು ಅಪಾಯಕಾರಿ ಚಟುವಟಿಕೆಗಳಲ್ಲಿ ಒಳಗೊಂಡಿರುವುದನ್ನು ತೋರಿಸುವುದು. ಉದಾಹರಣೆಗೆ, ದೈಹಿಕ ಸ್ಟಂಟ್‌ಗಳು, ಆಯುಧಗಳು ಅಥವಾ ಸ್ಫೋಟಕಗಳನ್ನು ಬಳಸುವುದು ಅಥವಾ ವೇಪ್‌ಗಳು ಅಥವಾ ಇ-ಸಿಗರೇಟ್‌ಗಳ ಬಳಕೆ ಸೇರಿದಂತೆ ಆಲ್ಕೋಹಾಲ್ ಅಥವಾ ನಿಕೋಟಿನ್‌ನಂತಹ ನಿಯಂತ್ರಿತ ರಾಸಾಯನಿಕ ಪದಾರ್ಥವನ್ನು ಬಳಸುವುದು.
  • "ಮಕ್ಕಳಿಗಾಗಿ" ಎಂಬಂತಹ ಟ್ಯಾಗ್‌ಗಳನ್ನು ಹೊಂದಿರುವ ಅಥವಾ “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ” ಎಂಬ ಪ್ರೇಕ್ಷಕ ಸೆಟ್ಟಿಂಗ್ ಅನ್ನು ಹೊಂದಿರುವ ವೀಡಿಯೊದಲ್ಲಿ, ಕುಟುಂಬ-ಸ್ನೇಹಿ ಕಾರ್ಟೂನ್‌ಗಳು ಸೂಜಿ ಚುಚ್ಚಿಕೊಳ್ಳುವಂತಹ ಅನುಚಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತೋರಿಸುವುದು.

ನೆನಪಿಡಿ, ಇವುಗಳು ಕೇವಲ ಕೆಲವು ಉದಾಹರಣೆಗಳಾಗಿವೆ, ಮತ್ತು ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಇನ್ನಷ್ಟು ಉದಾಹರಣೆಗಳು

  • ಬೇರೆ ಯಾರೊಂದಿಗಾದರೂ ದೈಹಿಕ ಸಂಪರ್ಕದಲ್ಲಿ ಭಾಗವಹಿಸುವುದಕ್ಕಾಗಿ ಅಪ್ರಾಪ್ತರಿಗೆ ಹಣ, ಹೊಗಳುವಿಕೆ, ಲೈಕ್‌ಗಳು ಅಥವಾ ಇತರ ಯಾವುದೇ ಇನ್ಸೆಂಟಿವ್ ಅನ್ನು ಒದಗಿಸುವುದು.
  • ಅಪ್ರಾಪ್ತರನ್ನು ಒಳಗೊಂಡಿರುವ ಲೈಂಗಿಕ ಕಂಟೆಂಟ್ ಅಥವಾ ಅಪ್ರಾಪ್ತರನ್ನು ಒಳಗೊಂಡಿರುವ ನಿಂದನೀಯ ಕಂಟೆಂಟ್‌ನ ಕುರಿತು ಜಾಹೀರಾತು ಮಾಡುವ ವೀಡಿಯೊ ಅಥವಾ ಪೋಸ್ಟ್.
  • ಅಪ್ರಾಪ್ತರೊಂದಿಗೆ ಅಥವಾ ಅಪ್ರಾಪ್ತರ ಕುರಿತಾದ ಸಂವಹನಗಳನ್ನು ಒಳಗೊಂಡ ಆಕ್ರಮಣಕಾರಿ ವರ್ತನೆ.
  • ಲೈಂಗಿಕ ಸಂತೋಷದ ಉದ್ದೇಶಕ್ಕಾಗಿ ಅಪ್ರಾಪ್ತರ ಮುಗ್ಧ ಕಂಟೆಂಟ್ ಅನ್ನು ಸಂಗ್ರಹಿಸುವುದು.
  • ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಸಂದರ್ಭ ಮತ್ತು ಮಸುಕುಗೊಳಿಸುವಿಕೆಯಿಲ್ಲದೆ ಮಕ್ಕಳನ್ನು ಒಳಗೊಂಡ ಹೊಡೆದಾಟ ಅಥವಾ ನಿಂದನೆಯ ಕಂಟೆಂಟ್.
  • ದೈಹಿಕ ಗಾಯ ಅಥವಾ ಗಂಭೀರ ಭಾವನಾತ್ಮಕ ಯಾತನೆಯ ಅಪಾಯವನ್ನು ಒಡ್ಡುವ ಸವಾಲುಗಳು, ಪ್ರಾಂಕ್‌ಗಳು ಅಥವಾ ಸ್ಟಂಟ್‌ಗಳು. ಸವಾಲುಗಳು ಮತ್ತು ಪ್ರಾಂಕ್‌ಗಳಿಗೆ ಸಂಬಂಧಿಸಿದ ಹಾಗೆ ನಮ್ಮ ನೀತಿಗಳಲ್ಲಿ ಯಾವುದಕ್ಕೆ ಅನುಮತಿಯಿಲ್ಲ ಎಂಬ ಕುರಿತು ನೀವು ಇನ್ನಷ್ಟು ತಿಳಿಯಬಹುದು.
  • ಕಂಟೆಂಟ್‌ನಲ್ಲಿ ಅಪ್ರಾಪ್ತರಿಲ್ಲದಿದ್ದರೂ ಸಹ, ಅಪಾಯಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅಪ್ರಾಪ್ತರನ್ನು ಪ್ರೋತ್ಸಾಹಿಸುವುದು.
  • ಪೋಷಕರ ದುರ್ವರ್ತನೆ ಅಥವಾ ತ್ಯಜಿಸುವಿಕೆಯನ್ನು ಸಿಮ್ಯುಲೇಟ್ ಮಾಡುವುದು, ಸಾವು ಅಥವಾ ಹಿಂಸೆಗೆ ಒಡ್ಡಿಕೊಳ್ಳುವುದನ್ನು ಸಿಮ್ಯುಲೇಟ್ ಮಾಡುವುದು ಅಥವಾ ಅಪ್ರಾಪ್ತರಿಗೆ ತೀವ್ರ ನಾಚಿಕೆ ಅಥವಾ ಅವಮಾನವನ್ನು ಉಂಟುಮಾಡುವ ಕಂಟೆಂಟ್.
  • ಕಂಟೆಂಟ್‌ನಲ್ಲಿ ಹಿಂಸೆ ಮತ್ತು ಲೈಂಗಿಕ ಕ್ರಿಯೆಯಂತಹ ವಯಸ್ಕರ ಥೀಮ್ ಒಳಗೊಂಡಿರುವಾಗ, ಮಕ್ಕಳನ್ನು ಆಕರ್ಷಿಸಲು ಕಾರ್ಟೂನ್‌ಗಳು, ಗೊಂಬೆಗಳು ಅಥವಾ ಕೌಟುಂಬಿಕ ಮನರಂಜನೆಯ ಪಾತ್ರಗಳನ್ನು ಬಳಸಿಕೊಳ್ಳುವುದು.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

YouTube ನಲ್ಲಿ ಆಕ್ರಮಣಕಾರಿ ವರ್ತನೆಯನ್ನು ನಾವು ಸ್ವಲ್ಪವೂ ಸಹಿಸಿಕೊಳ್ಳುವುದಿಲ್ಲ. ವರದಿ ಮಾಡಲಾದ ಕಂಟೆಂಟ್ ಅನ್ನು ಆಧರಿಸಿ, ಒಂದು ಮಗು ಅಪಾಯದಲ್ಲಿದೆ ಎಂದು ನಾವು ಭಾವಿಸಿದರೆ, ಕಂಟೆಂಟ್‌ನ ಕುರಿತು ತನಿಖೆ ನಡೆಸುವುದಕ್ಕಾಗಿ ನಾವು ಕಾನೂನು ಜಾರಿಗೊಳಿಸುವಿಕೆ ಸಂಸ್ಥೆಗೆ ಸಹಾಯ ಮಾಡುತ್ತೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
792014621264444774
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false