ಸ್ಪ್ಯಾಮ್, ಮೋಸಗೊಳಿಸುವ ಅಭ್ಯಾಸಗಳು ಹಾಗೂ ಸ್ಕ್ಯಾಮ್‌ಗಳ ಕುರಿತಾದ ನೀತಿಗಳು

ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.
ಗಮನಿಸಿ: YouTube ನಲ್ಲಿ ತಪ್ಪು ಮಾಹಿತಿಗೆ ಸಂಬಂಧಿಸಿದಂತೆ ನಮ್ಮ ನೀತಿಗಳ ಕುರಿತು ಇನ್ನಷ್ಟು ಸ್ಪಷ್ಟತೆ ಒದಗಿಸಲು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ನಾವು ಇತ್ತೀಚೆಗೆ ಮರುವ್ಯವಸ್ಥಿತಗೊಳಿಸಿದ್ದೇವೆ. ಈ ನೀತಿಗಳನ್ನು ಪರಿಶೀಲಿಸಲು, ತಪ್ಪು ಮಾಹಿತಿ ಮತ್ತು ಚುನಾವಣೆಗಳ ತಪ್ಪು ಮಾಹಿತಿಯ ಕುರಿತ ನಮ್ಮ ಲೇಖನಗಳನ್ನು ನೋಡಿ.

YouTube ಸಮುದಾಯವನ್ನು ದುರುಪಯೋಗಪಡಿಸಿಕೊಳ್ಳುವ ಸ್ಪ್ಯಾಮ್, ಸ್ಕ್ಯಾಮ್‌ಗಳು ಅಥವಾ ಇತರ ಮೋಸಗೊಳಿಸುವ ಅಭ್ಯಾಸಗಳನ್ನು YouTube ಅನುಮತಿಸುವುದಿಲ್ಲ. ಜನರು YouTube ಅನ್ನು ತೊರೆದು ಬೇರೊಂದು ಸೈಟ್‌ಗೆ ಹೋಗುವಂತೆ ಮೋಸಗೊಳಿಸುವುದೇ ಮುಖ್ಯ ಉದ್ದೇಶವಾಗಿರುವ ಕಂಟೆಂಟ್ ಅನ್ನು ಸಹ ನಾವು YouTube ನಲ್ಲಿ ಅನುಮತಿಸುವುದಿಲ್ಲ.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಕೆಲವು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಈ ನೀತಿಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತವೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗೆ ಸೂಚಿಸಿದ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ವೀಡಿಯೊ ಸ್ಪ್ಯಾಮ್: ಅತಿಯಾಗಿ ಪೋಸ್ಟ್ ಮಾಡಲಾದ, ಪುನರಾವರ್ತಿತವಾದ ಅಥವಾ ಟಾರ್ಗೆಟ್ ಮಾಡಿರದ ಮತ್ತು ಈ ಕೆಳಗಿನವುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮಾಡುವ ಕಂಟೆಂಟ್:
    • ವೀಕ್ಷಕರು ಏನನ್ನೋ ನೋಡಲಿದ್ದಾರೆ ಎಂಬ ಭರವಸೆ ನೀಡುತ್ತದೆ, ಆದರೆ ಅವರನ್ನು ಸೈಟ್‌ನಿಂದ ಹೊರಗೆ ನಿರ್ದೇಶಿಸುತ್ತದೆ.
    • ವೀಕ್ಷಕರು ಕ್ಷಿಪ್ರವಾಗಿ ಹಣ ಮಾಡಬಹುದು ಎಂದು ಅವರಿಗೆ ಭರವಸೆ ನೀಡುವ ಮೂಲಕ YouTube ನಿಂದ ಹೊರಗೆ ಕ್ಲಿಕ್‌ಗಳು, ವೀಕ್ಷಣೆಗಳು ಅಥವಾ ಟ್ರಾಫಿಕ್ ಅನ್ನು ಪಡೆದುಕೊಳ್ಳುತ್ತದೆ.
    • ಹಾನಿಕಾರಕ ಸಾಫ್ಟ್‌ವೇರ್ ಅನ್ನು ಹರಡುವ, ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುವ ಸೈಟ್‌ಗಳಿಗೆ ಅಥವಾ ನಕಾರಾತ್ಮಕ ಪ್ರಭಾವ ಬೀರುವ ಇತರ ಸೈಟ್‌ಗಳಿಗೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ.
  • ದಾರಿ ತಪ್ಪಿಸುವ ಮೆಟಾಡೇಟಾ ಅಥವಾ ಥಂಬ್‌ನೇಲ್‌ಗಳು: ಕಂಟೆಂಟ್‌ನಲ್ಲಿ ಇಲ್ಲದ ವಿಷಯ, ಅದರಲ್ಲಿ ಇದೆ ಎಂದು ನಂಬುವ ಹಾಗೆ ಮಾಡುವ ಶೀರ್ಷಿಕೆ, ಥಂಬ್‌ನೇಲ್‌ಗಳು, ವಿವರಣೆಗಳನ್ನು ಬಳಸಿ ಬಳಕೆದಾರರನ್ನು ಮೋಸಗೊಳಿಸುವುದು.
  • ಸ್ಕ್ಯಾಮ್‌ಗಳು: ನಗದು ಉಡುಗೊರೆಗಳು, “ಕ್ಷಿಪ್ರವಾಗಿ ಶ್ರೀಮಂತರಾಗಿರಿ” ಸ್ಕೀಮ್‌ಗಳು ಅಥವಾ ಪಿರಮಿಡ್ ಸ್ಕೀಮ್‌ಗಳನ್ನು (ಯಾವುದೇ ವಾಸ್ತವಿಕ ಉತ್ಪನ್ನವಿಲ್ಲದೆ ಪಿರಮಿಡ್ ರಚನೆಯಂತೆ ಹಣ ಕಳುಹಿಸುವುದು) ಒದಗಿಸುವ ಕಂಟೆಂಟ್.
  • ಇನ್‌ಸೆಂಟಿವೈಜೇಶನ್ ಸ್ಪ್ಯಾಮ್: YouTube ನಲ್ಲಿ ವೀಕ್ಷಣೆಗಳು, ಲೈಕ್‌ಗಳು, ಕಾಮೆಂಟ್‌ಗಳು ಅಥವಾ ಇತರ ಯಾವುದೇ ಮೆಟ್ರಿಕ್‌ಗಳಂತಹ ಎಂಗೇಜ್‌ಮೆಂಟ್ ಮೆಟ್ರಿಕ್‌ಗಳನ್ನು ಮಾರಾಟ ಮಾಡುವ ಕಂಟೆಂಟ್. ಈ ರೀತಿಯ ಸ್ಪ್ಯಾಮ್‌ನಲ್ಲಿ ಸಬ್‌ಸ್ಕ್ರೈಬರ್‌ಗಳು, ವೀಕ್ಷಣೆಗಳು ಅಥವಾ ಇತರ ಮೆಟ್ರಿಕ್‌ಗಳನ್ನು ವರ್ಧಿಸುವುದೇ ಏಕೈಕ ಉದ್ದೇಶವಾಗಿರುವ ಕಂಟೆಂಟ್ ಸಹ ಒಳಗೊಂಡಿರಬಹುದು. ಉದಾಹರಣೆಗೆ, ಬೇರೊಬ್ಬ ರಚನೆಕಾರರು ನಿಮ್ಮ ಚಾನಲ್‌ಗೆ ಕೇವಲ ಸಬ್‌ಸ್ಕ್ರೈಬ್ ಮಾಡಿದರೆ ನೀವು ಅವರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡುವ ಭರವಸೆ ನೀಡುವುದು; ಇದನ್ನು "Sub4Sub" ಕಂಟೆಂಟ್ ಎಂದು ಕರೆಯಲಾಗುತ್ತದೆ.
  • ಕಾಮೆಂಟ್‌ಗಳ ಸ್ಪ್ಯಾಮ್: ವೀಕ್ಷಕರಿಂದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದು, ವೀಕ್ಷಕರನ್ನು ಕುತಂತ್ರದಿಂದ YouTube ನಿಂದ ಹೊರಗೆ ಕರೆದೊಯ್ಯುವುದು ಅಥವಾ ಮೇಲೆ ಸೂಚಿಸಲಾದ ಯಾವುದೇ ನಿಷೇಧಿತ ವರ್ತನೆಗಳನ್ನು ತೋರುವುದೇ ಏಕೈಕ ಉದ್ದೇಶವಾಗಿರುವಂತಹ ಕಾಮೆಂಟ್‌ಗಳು.
  • ಪುನರಾವರ್ತಿತ ಕಾಮೆಂಟ್‌ಗಳು: ದೊಡ್ಡ ಪ್ರಮಾಣದಲ್ಲಿ ಒಂದೇ ಬಗೆಯ, ಟಾರ್ಗೆಟ್ ಮಾಡದ ಅಥವಾ ಪುನರಾವರ್ತಿತ ಕಾಮೆಂಟ್‌ಗಳನ್ನು ನೀಡುವುದು.
  • 3 ನೇ ಪಾರ್ಟಿ ಕಂಟೆಂಟ್: ಬೇರೆ ಯಾರಿಗೋ ಸೇರಿದ ಕಂಟೆಂಟ್ ಅನ್ನು ಸ್ಟ್ರೀಮ್ ಮಾಡುವ ಉದ್ದೇಶವನ್ನು ಹೊಂದಿರುವ ಮತ್ತು ಸಂಭಾವ್ಯ ದುರುಪಯೋಗದ ಕುರಿತಾಗಿ ಪುನರಾವರ್ತಿತ ಎಚ್ಚರಿಕೆಗಳನ್ನು ನೀಡಿದ ಬಳಿಕವೂ ತಿದ್ದಿಕೊಳ್ಳದಂತಹ ಲೈವ್ ಸ್ಟ್ರೀಮ್‌ಗಳು. ಚಾನಲ್ ಮಾಲೀಕರು ತಮ್ಮ ಲೈವ್ ಸ್ಟ್ರೀಮ್‌ಗಳನ್ನು ಸಕ್ರಿಯವಾಗಿ ಗಮನಿಸಬೇಕು ಮತ್ತು ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ ಸರಿಪಡಿಸಬೇಕು.

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿನ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಇದು ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿರುವ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ಸ್ವರೂಪಗಳನ್ನು ಒಳಗೊಂಡಿರಬಹುದು.

ಗಮನಿಸಿ: ವೀಕ್ಷಕರು ಸಬ್‌ಸ್ಕ್ರೈಬ್ ಮಾಡಲು, ಲೈಕ್ ಬಟನ್ ಅನ್ನು ಒತ್ತಲು, ಹಂಚಿಕೊಳ್ಳಲು ಅಥವಾ ಕಾಮೆಂಟ್ ಮಾಡಲು ಪ್ರೋತ್ಸಾಹಿಸಲು ನಿಮಗೆ ಅನುಮತಿಯಿದೆ.

ವೀಡಿಯೊ ಸ್ಪ್ಯಾಮ್‌‌

YouTube ನಲ್ಲಿ ಈ ಕೆಳಗಿನ ವಿಧಗಳ ಕಂಟೆಂಟ್ ಅನ್ನು ಅನುಮತಿಸಲಾಗುವುದಿಲ್ಲ. ಈ ಪಟ್ಟಿಯು ಸಮಗ್ರವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.

  • ವೀಕ್ಷಕರು ಏನನ್ನೋ ನೋಡಲಿದ್ದಾರೆ ಎಂಬ ಭರವಸೆ ನೀಡುವ, ಆದರೆ ಅದನ್ನು ವೀಕ್ಷಿಸುವುದಕ್ಕಾಗಿ ಅವರನ್ನು ಸೈಟ್‌ನಿಂದ ಹೊರಗೆ ಕರೆದೊಯ್ಯುವ ಕಂಟೆಂಟ್.
  • ಒಂದು ಅಥವಾ ಹೆಚ್ಚಿನ ಚಾನಲ್‌ಗಳಾದ್ಯಂತ ಒಂದೇ ಕಂಟೆಂಟ್ ಅನ್ನು ಪುನರಾವರ್ತಿತವಾಗಿ ಪೋಸ್ಟ್ ಮಾಡುವುದು.
  • ನೀವು ಇತರ ರಚನೆಕಾರರಿಂದ ಸ್ಕ್ರ್ಯಾಪ್ ಮಾಡಿರುವ ಕಂಟೆಂಟ್ ಅನ್ನು ದೊಡ್ಡ ಪ್ರಮಾಣದಲ್ಲಿ ಅಪ್‌ಲೋಡ್ ಮಾಡುವುದು.
  • ವೀಕ್ಷಕರು ಹಾನಿಕಾರಕ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುವಂತೆ ಮಾಡಲು ಪ್ರಯತ್ನಿಸುವುದು ಅಥವಾ ಅವರ ಗೌಪ್ಯತೆಯನ್ನು ಅಪಾಯಕ್ಕೆ ಈಡುಮಾಡಬಹುದಾದ ಸೈಟ್‌ಗಳಿಗೆ ಅವರನ್ನು ನಿರ್ದೇಶಿಸುವುದು.
  • ಗುಣಮಟ್ಟ ಅಥವಾ ವೀಕ್ಷಕರ ಅನುಭವದ ಕುರಿತು ಲಕ್ಷ್ಯವಿಲ್ಲದೆ, ಕಂಪ್ಯೂಟರ್‌ಗಳು ಪೋಸ್ಟ್ ಮಾಡುವಂತಹ, ಆಟೋ ಜನರೇಟ್ ಮಾಡಲಾದ ಕಂಟೆಂಟ್.
  • ವೀಕ್ಷಕರು ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿದರೆ, ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದರೆ ಅಥವಾ ಇತರ ಕಾರ್ಯಗಳನ್ನು ಮಾಡಿದರೆ, ಹಣ, ಉತ್ಪನ್ನಗಳು, ಸಾಫ್ಟ್‌ವೇರ್ ಅಥವಾ ಗೇಮಿಂಗ್ ಪರ್ಕ್‌ಗಳನ್ನು ಯಾವುದೇ ಶುಲ್ಕವಿಲ್ಲದೆ ಒದಗಿಸುವ ಭರವಸೆ ನೀಡುವುದು.
  • ಸಮರ್ಪಿತ ಖಾತೆಗಳಲ್ಲಿ ಅಫಿಲಿಯೇಟ್ ಕಂಟೆಂಟ್ ಅನ್ನು ದೊಡ್ಡ ಪ್ರಮಾಣದಲ್ಲಿ ಪೋಸ್ಟ್ ಮಾಡುವುದು.
  • ನಿಮ್ಮ ಮಾಲೀಕತ್ವಕ್ಕೆ ಒಳಪಟ್ಟಿರದ ಮತ್ತು EDSA ಆಗಿರದ ಕಂಟೆಂಟ್ ಅನ್ನು ಪುನರಾವರ್ತಿತವಾಗಿ ಅಪ್‌ಲೋಡ್ ಮಾಡುವುದು.

ದಾರಿ ತಪ್ಪಿಸುವ ಮೆಟಾಡೇಟಾ ಅಥವಾ ಥಂಬ್‌ನೇಲ್‌ಗಳು

YouTube ನಲ್ಲಿ ಈ ಕೆಳಗಿನ ವಿಧಗಳ ಕಂಟೆಂಟ್ ಅನ್ನು ಅನುಮತಿಸಲಾಗುವುದಿಲ್ಲ. ಈ ಪಟ್ಟಿಯು ಸಮಗ್ರವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.
  • ಕಂಟೆಂಟ್‍ಗೆ ಯಾವುದೇ ಸಂಬಂಧವಿಲ್ಲದ ಜನಪ್ರಿಯ ಸೆಲೆಬ್ರಿಟಿಯ ಚಿತ್ರವನ್ನು ಹೊಂದಿರುವ ಥಂಬ್‌ನೇಲ್.
  • ಕಂಟೆಂಟ್‌ನಲ್ಲಿ ಇಲ್ಲದ ವಿಷಯ, ಅದರಲ್ಲಿ ಇದೆ ಎಂದು ಬಳಕೆದಾರರು ನಂಬುವಂತೆ ಮೋಸಗೊಳಿಸುವ ಶೀರ್ಷಿಕೆ, ಥಂಬ್‌ನೇಲ್‌ಗಳು ಅಥವಾ ವಿವರಣೆಯನ್ನು ಬಳಸುವುದು. ಉದಾಹರಣೆಗೆ, ನಿಜ ಜಗತ್ತಿನಲ್ಲಿ ಅತಿಯಾದ ಹಾನಿಯುಂಟಾಗುವ ಗಂಭೀರ ಅಪಾಯವಿರುವ ಸಂದರ್ಭ.

ಸ್ಕ್ಯಾಮ್‌ಗಳು

YouTube ನಲ್ಲಿ ಈ ಕೆಳಗಿನ ವಿಧಗಳ ಕಂಟೆಂಟ್ ಅನ್ನು ಅನುಮತಿಸಲಾಗುವುದಿಲ್ಲ. ಈ ಪಟ್ಟಿಯು ಸಮಗ್ರವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.
  • ವೀಕ್ಷಕರು ತ್ವರಿತವಾಗಿ ಶ್ರೀಮಂತರಾಗಬಹುದು ಅಥವಾ ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಯನ್ನು ಒಂದು ಪವಾಡಸದೃಶ ಚಿಕಿತ್ಸೆಯು ಗುಣಪಡಿಸಬಲ್ಲದು ಎಂಬ ಪ್ರತಿಪಾದನೆಗಳಂತಹ, ಉತ್ಪ್ರೇಕ್ಷೆಯ ಭರವಸೆಗಳನ್ನು ನೀಡುವುದು.
  • ನಗದು ಉಡುಗೊರೆ ಅಥವಾ ಇತರ ಪಿರಮಿಡ್ ಸ್ಕೀಮ್‌ಗಳನ್ನು ಪ್ರಚಾರ ಮಾಡುವುದು.
  • ನಗದು ಉಡುಗೊರೆ ಸ್ಕೀಮ್‌ಗಳಿಗೆ ಸಮರ್ಪಿತವಾದ ಖಾತೆಗಳು.
  • "ಈ ಪ್ಲಾನ್‌ನ ಮೂಲಕ ನೀವು ನಾಳೆಯೇ $50,000 ಗಳಿಸುವಿರಿ!" ಎಂದು ಭರವಸೆ ನೀಡುವ ವೀಡಿಯೊಗಳು

ಇನ್‌ಸೆಂಟಿವೈಜೇಶನ್ ಸ್ಪ್ಯಾಮ್

YouTube ನಲ್ಲಿ ಈ ಕೆಳಗಿನ ವಿಧಗಳ ಕಂಟೆಂಟ್ ಅನ್ನು ಅನುಮತಿಸಲಾಗುವುದಿಲ್ಲ. ಈ ಪಟ್ಟಿಯು ಸಮಗ್ರವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.
  • ವೀಕ್ಷಕರು ಸಬ್‌ಸ್ಕ್ರೈಬ್ ಮಾಡಲು ಪ್ರೋತ್ಸಾಹಿಸುವುದೇ ಉದ್ದೇಶವಾಗಿರುವ ವೀಡಿಯೊಗಳು.
  • "Subs 4 Subs" ವೀಡಿಯೊಗಳು.
  • "ಲೈಕ್‌ಗಳನ್ನು" ಮಾರಾಟ ಮಾಡಲು ಆಫರ್ ನೀಡುವ ವೀಡಿಯೊಗಳು.
  • ಇತರ ಯಾವುದೇ ಕಂಟೆಂಟ್ ಇಲ್ಲದೆ, ಒಂದು ಚಾನಲ್‌ ಅನ್ನು 100,000ನೆಯ ಸಬ್‌ಸ್ಕ್ರೈಬರ್‌ಗೆ ಕೊಟ್ಟುಬಿಡುತ್ತೇವೆ ಎಂದು ಭರವಸೆ ನೀಡುವ ವೀಡಿಯೊ.

ಕಾಮೆಂಟ್‌ಗಳ ಸ್ಪ್ಯಾಮ್

YouTube ನಲ್ಲಿ ಈ ಕೆಳಗಿನ ವಿಧಗಳ ಕಂಟೆಂಟ್ ಅನ್ನು ಅನುಮತಿಸಲಾಗುವುದಿಲ್ಲ. ಈ ಪಟ್ಟಿಯು ಸಮಗ್ರವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.
  • ಪಿರಮಿಡ್ ಸ್ಕೀಮ್‌ಗಳ ಕುರಿತು ಪ್ರಚಾರ ಮಾಡುವ ಸಮೀಕ್ಷೆಗಳು ಅಥವಾ ಕೊಡುಗೆಗಳ ಕುರಿತಾದ ಕಾಮೆಂಟ್‌ಗಳು.
  • ಕಾಮೆಂಟ್‌ಗಳಲ್ಲಿ "ಪ್ರತಿ-ಕ್ಲಿಕ್‌ಗೆ-ಪಾವತಿ" ರೆಫರಲ್ ಲಿಂಕ್‌ಗಳು.
  • ಸಂಪೂರ್ಣ ವೀಡಿಯೊ ಕಂಟೆಂಟ್ ಅನ್ನು ಒದಗಿಸುವ ಸುಳ್ಳು ಭರವಸೆ ನೀಡುವ ಕಾಮೆಂಟ್‌ಗಳು. ಈ ರೀತಿಯ ಕಂಟೆಂಟ್‌ನಲ್ಲಿ ಇವು ಸೇರಿವೆ:
    • ಚಲನಚಿತ್ರಗಳು
    • ಟಿವಿ ಕಾರ್ಯಕ್ರಮಗಳು
    • ಸಂಗೀತ ಕಛೇರಿಗಳು
  • ಕಾಮೆಂಟ್‌ಗಳಲ್ಲಿ ಹಾನಿಕಾರಕ ಸಾಫ್ಟ್‌ವೇರ್ ಅಥವಾ ಫಿಶಿಂಗ್ ಸೈಟ್‌ಗಳ ಲಿಂಕ್‌ಗಳನ್ನು ಪೋಸ್ಟ್ ಮಾಡುವುದು: "ಓಹ್, ಈಗಷ್ಟೇ ಇಲ್ಲಿಂದ ಲಕ್ಷಗಟ್ಟಲೆ ಹಣ ಸಿಕ್ಕಿತು! - [xyz ಫಿಶಿಂಗ್ ಸೈಟ್].com"
  • ನಕಲಿ ಮಳಿಗೆಗಳ ಲಿಂಕ್‌ಗಳಿರುವ ಕಾಮೆಂಟ್‌ಗಳು.
  • ಚಾನಲ್/ವೀಡಿಯೊವನ್ನು ಪೋಸ್ಟ್ ಮಾಡಲಾದ ವೀಡಿಯೊದ ಜೊತೆಗೆ ಅದಕ್ಕೆ ಸಂಬಂಧವೇ ಇಲ್ಲದಿರುವಾಗ "ಹೇಯ್, ನನ್ನ ಚಾನಲ್/ವೀಡಿಯೊವನ್ನು ಇಲ್ಲಿ ನೋಡಿ!” ಎಂದಿರುವುದು.
  • ನಿಮ್ಮ ಚಾನಲ್‌ನ ಲಿಂಕ್‌ನೊಂದಿಗೆ ಒಂದೇ ಕಾಮೆಂಟ್ ಅನ್ನು ಪುನರಾವರ್ತಿತವಾಗಿ ಪೋಸ್ಟ್ ಮಾಡುವುದು.

3ನೇ ಪಾರ್ಟಿ ಕಂಟೆಂಟ್

YouTube ನಲ್ಲಿ ಈ ಕೆಳಗಿನ ವಿಧಗಳ ಕಂಟೆಂಟ್ ಅನ್ನು ಅನುಮತಿಸಲಾಗುವುದಿಲ್ಲ. ಈ ಪಟ್ಟಿಯು ಸಮಗ್ರವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಿ.
  • ಟೆಲಿವಿಷನ್ ಶೋ ಅನ್ನು ಸ್ಟ್ರೀಮ್ ಮಾಡಲು ನಿಮ್ಮ ಫೋನ್ ಅನ್ನು ಬಳಸುವುದು.
  • ಒಂದು ಆಲ್ಬಮ್‌ನ ಹಾಡುಗಳನ್ನು ಲೈವ್ ಸ್ಟ್ರೀಮ್ ಮಾಡಲು ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಅನ್ನು ಬಳಸುವುದು.

ನೆನಪಿಡಿ, ಇವುಗಳು ಕೇವಲ ಕೆಲವು ಉದಾಹರಣೆಗಳಾಗಿವೆ, ಮತ್ತು ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಿಮ್ಮ ಮಾನಿಟೈಸೇಶನ್ ಅನ್ನು ನಾವು ಅಮಾನತುಗೊಳಿಸಬಹುದು ಅಥವಾ ನಿಮ್ಮ ಚಾನಲ್ ಅಥವಾ ಖಾತೆಯನ್ನು ಕೊನೆಗೊಳಿಸಬಹುದು. ಮಾನಿಟೈಸೇಶನ್ ನೀತಿಗಳ ಬಗ್ಗೆ ಇನ್ನಷ್ಟು ತಿಳಿಯಿರಿ ಮತ್ತು ಚಾನೆಲ್ ಅಥವಾ ಖಾತೆಯ ಕೊನೆಗೊಳಿಸುವಿಕೆಗಳು

ಕೆಲವು ಉಲ್ಲಂಘನೆಗಳಿಗಾಗಿ, ನಾವು ಕಂಟೆಂಟ್ ಅನ್ನು ತೆಗೆದುಹಾಕಬಹುದು ಮತ್ತು ನಿಮ್ಮ ಚಾನಲ್‌ನ ವಿರುದ್ಧ ಎಚ್ಚರಿಕೆ ಅಥವಾ ಸ್ಟ್ರೈಕ್ ವಿಧಿಸಬಹುದು. ಹೀಗಾದರೆ, ನಿಮಗೆ ತಿಳಿಸುವುದಕ್ಕಾಗಿ ಇಮೇಲ್ ಕಳುಹಿಸುತ್ತೇವೆ.

You can take a policy training to allow the warning to expire after 90 days. However, if your content violates the same policy within that 90 day window, the warning will not expire and your channel will be given a strike. If you violate a different policy after completing the training, you will get another warning. We may prevent repeat offenders from taking policy trainings in the future.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12833995301959229624
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false