ದ್ವೇಷಪೂರಿತ ಮಾತಿನ ಕುರಿತಾದ ನೀತಿ


 
ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.
ಸೂಚನೆ: 5 ಜೂನ್ 2019 ರಂದು, ದ್ವೇಷಪೂರಿತ ಮಾತಿನ ಕುರಿತಾದ ನಮ್ಮ ನೀತಿಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ನಾವು ಘೋಷಿಸಿದೆವು. ನೀವು ಆ ಬದಲಾವಣೆಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು. ಕೆಳಗಿನ ನೀತಿಯನ್ನು ಆ ಬದಲಾವಣೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.

ದ್ವೇಷಪೂರಿತ ಮಾತನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. YouTube ನ ನೀತಿಯ ಅಡಿಯಲ್ಲಿ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಸೂಚಿಸುವ ಕೆಳಗಿನ ಯಾವುದೇ ಆ್ಯಟ್ರಿಬ್ಯೂಷನ್‌ಗಳ ಆಧಾರದ ಮೇಲೆ ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ಹಿಂಸೆ ಅಥವಾ ದ್ವೇಷವನ್ನು ಉತ್ತೇಜಿಸುವ ಕಂಟೆಂಟ್ ಅನ್ನು ನಾವು ಅನುಮತಿಸುವುದಿಲ್ಲ:

  • ವಯಸ್ಸು
  • ಜಾತಿ
  • ಅಸಾಮರ್ಥ್ಯ
  • ಜನಾಂಗೀಯತೆ
  • ಲಿಂಗ ಗುರುತಿಸುವಿಕೆ ಮತ್ತು ಅಭಿವ್ಯಕ್ತಿ
  • ರಾಷ್ಟ್ರೀಯತೆ
  • ಜನಾಂಗ
  • ವಲಸೆ ಸ್ಥಿತಿ
  • ಧರ್ಮ
  • ಲಿಂಗ
  • ಲೈಂಗಿಕ ಮನೋಧರ್ಮ
  • ಪ್ರಮುಖ ಹಿಂಸಾತ್ಮಕ ಘಟನೆಯ ಬಲಿಪಶುಗಳು ಮತ್ತು ಅವರ ಸಂಬಂಧಿಗಳು
  • ವೆಟರನ್ ಸ್ಥಿತಿ

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಕೆಲವು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್‌ನ ಉದ್ದೇಶ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡುವುದಾಗಿದ್ದರೆ, ಕಂಟೆಂಟ್ ಅನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ:

  • ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ ಅದಕ್ಕೆ ಸೇರಿದ ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ಹಿಂಸೆಯನ್ನು ಪ್ರೋತ್ಸಾಹಿಸಬೇಡಿ. ನಾವು YouTube ನಲ್ಲಿ ಬೆದರಿಕೆಗಳನ್ನು ಅನುಮತಿಸುವುದಿಲ್ಲ, ಮತ್ತು ಹಿಂಸೆಯ ಪರೋಕ್ಷ ಕರೆಗಳನ್ನು ನಾವು ನಿಜವಾದ ಬೆದರಿಕೆಗಳ ಹಾಗೆ ಪರಿಗಣಿಸುತ್ತೇವೆ. ಬೆದರಿಕೆಗಳು ಮತ್ತು ಕಿರುಕುಳದ ಕುರಿತಾದ ನಮ್ಮ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.
  • ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ, ಅದಕ್ಕೆ ಸೇರಿದ ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ದ್ವೇಷವನ್ನು ಪ್ರಚೋದಿಸಬೇಡಿ.

ಈ ನೀತಿಯನ್ನು ಉಲ್ಲಂಘಿಸುವ ಇತರ ರೀತಿಯ ಕಂಟೆಂಟ್

  • ವ್ಯಕ್ತಿಗಳು ಅಥವಾ ಗುಂಪುಗಳನ್ನು ಮನುಷ್ಯರೇ ಅಲ್ಲ ಎಂದು ಕರೆಯುವ ಮೂಲಕ ಅವರ ತೇಜೋವಧೆ ಮಾಡುವುದು, ಪ್ರಾಣಿಗಳು, ಕೀಟಗಳು, ಕೀಟಗಳು, ರೋಗಗಳು ಅಥವಾ ಅವರ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ ಅವರನ್ನು ಯಾವುದೇ ಇತರ ಮಾನವರಲ್ಲದ ಘಟಕಗಳಿಗೆ ಹೋಲಿಸುವುದು.
  • ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ, ಅದರ ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ಹಿಂಸಾಚಾರವನ್ನು ಹೊಗಳುವುದು ಅಥವಾ ವೈಭವೀಕರಿಸುವುದು.
  • ಸಂರಕ್ಷಿತ ಗುಂಪಿನ ಸ್ಥಿತಿಯ ಆಧಾರದ ಮೇಲೆ ದ್ವೇಷವನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಜನಾಂಗೀಯ, ಧಾರ್ಮಿಕ ಅಥವಾ ಇತರ ನಿಂದನೆಗಳು ಮತ್ತು ಸ್ಟೀರಿಯೊಟೈಪ್‌ಗಳ ಬಳಕೆ. ಇದು ಈ ಸ್ಟೀರಿಯೋಟೈಪ್‌ಗಳನ್ನು ಪ್ರಚಾರ ಮಾಡುವ ಅಥವಾ ಅವುಗಳನ್ನು ವಾಸ್ತವದ ಹಾಗೆ ಪರಿಗಣಿಸುವ ಮಾತು, ಪಠ್ಯ ಅಥವಾ ಚಿತ್ರಣದ ಸ್ವರೂಪದಲ್ಲಿರಬಹುದು.
  • ವ್ಯಕ್ತಿಗಳು ಅಥವಾ ಗುಂಪುಗಳು ತಮ್ಮ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ ದೈಹಿಕವಾಗಿ ಅಥವಾ ಮಾನಸಿಕವಾಗಿ ಕೀಳರಿಮೆ ಇರುವವರು, ಹಿಂದುಳಿದಿದ್ದಾರೆ ಅಥವಾ ರೋಗಗ್ರಸ್ತ ಮನಃಸ್ಥಿತಿಯವರು ಎಂದು ಪ್ರತಿಪಾದಿಸುವುದು. ಒಂದು ಗುಂಪು ಮತ್ತೊಂದಕ್ಕಿಂತ ಕಡಿಮೆ ದರ್ಜೆಯದ್ದಾಗಿದೆ ಎಂಬ ಹೇಳಿಕೆಗಳು, ಅವರನ್ನು ಕಡಿಮೆ ಬುದ್ಧಿವಂತರು, ಕಡಿಮೆ ಸಮರ್ಥರು ಅಥವಾ ಹಾನಿಗೊಳಗಾದವರೆಂದು ಕರೆಯುವುದನ್ನು ಒಳಗೊಂಡಿದೆ. ಇದು ಅವರ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ ವ್ಯಕ್ತಿಗಳು ಅಥವಾ ಗುಂಪುಗಳ ಮೇಲೆ ಆಧಿಪತ್ಯ ಅಥವಾ ಪ್ರಾಬಲ್ಯಕ್ಕಾಗಿ ಕರೆಗಳನ್ನು ನೀಡುವುದನ್ನು ಒಳಗೊಂಡಿದೆ.
  • ಹಿಂಸೆ, ತಾರತಮ್ಯ, ಪ್ರತ್ಯೇಕತೆ ಅಥವಾ ಹೊರಗಿಡುವಿಕೆಯನ್ನು ಸಮರ್ಥಿಸಲು ಸಂರಕ್ಷಿತ ಗುಂಪಿನ ಸ್ಥಾನಮಾನ ಹೊಂದಿರುವವರ ಮೇಲೆ ಗುಂಪಿನ ಶ್ರೇಷ್ಠತೆಯನ್ನು ಆರೋಪಿಸುವುದರ ಮೂಲಕ ದ್ವೇಷಪೂರಿತ ಪ್ರಾಬಲ್ಯದ ಭಾವನೆಯ ಪ್ರಚಾರ. ಹೊಸ ಸದಸ್ಯರನ್ನು ಸೇರಿಸಿಕೊಳ್ಳುವುದು ಅಥವಾ ಅವರ ಸಿದ್ಧಾಂತದ ಪ್ರಚಾರಕ್ಕಾಗಿ ಹಣಕಾಸಿನ ಬೆಂಬಲದ ವಿನಂತಿಗಳು ಮತ್ತು ಸಾಹಿತ್ಯ, ಮೆಟಾಡೇಟಾ ಅಥವಾ ಚಿತ್ರದ ಮೂಲಕ ದ್ವೇಷಪೂರಿತ ಪ್ರಾಬಲ್ಯವನ್ನು ಉತ್ತೇಜಿಸುವ ಸಂಗೀತ ವೀಡಿಯೊಗಳಂತಹ ದ್ವೇಷಪೂರಿತ ಪ್ರಾಬಲ್ಯದ ಭಾವನೆಯ ಪ್ರಚಾರವನ್ನು ಒಳಗೊಂಡಿರುವ ಕಂಟೆಂಟ್ ಅನ್ನು ಇದು ಒಳಗೊಂಡಿದೆ.
  • ವ್ಯಕ್ತಿಗಳು ಅಥವಾ ಗುಂಪುಗಳು ತಮ್ಮ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ ಅವರನ್ನು ದುಷ್ಟ, ಭ್ರಷ್ಟ ಅಥವಾ ದುರುದ್ದೇಶಪೂರಿತ ಎಂದು ಪಿತೂರಿಯನ್ನು ಮಾಡುವುದು.
  • ಐತಿಹಾಸಿಕವಾಗಿ ಸ್ಪಷ್ಟವಾದ ದಾಖಲೆಗಳಿರುವ ಪ್ರಮುಖ ಹಿಂಸಾತ್ಮಕ ಘಟನೆ ಅಥವಾ ಅಂತಹ ಘಟನೆಯ ಸಂತ್ರಸ್ತರ ಸ್ಥಿತಿಯನ್ನು ನಿರಾಕರಿಸುವುದು ಅಥವಾ ತುಚ್ಛವಾಗಿ ಕಾಣುವುದು.
  • ಇನ್ನೊಬ್ಬರ ಮೇಲೆ ಹೊಂದಿರುವ ಭಾವನಾತ್ಮಕ, ಪ್ರಣಯ ಮತ್ತು/ಅಥವಾ ಲೈಂಗಿಕ ಆಕರ್ಷಣೆಯ ಆಧಾರದ ಮೇಲೆ ಜನರು ಅಥವಾ ಗುಂಪುಗಳ ಮೇಲೆ ದಾಳಿ ಮಾಡುವುದು.

ಶೈಕ್ಷಣಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ ಮತ್ತು ಕಲಾತ್ಮಕ ಕಂಟೆಂಟ್

ಆ ಕಂಟೆಂಟ್ ಹೆಚ್ಚುವರಿ ಶೈಕ್ಷಣಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ ಅಥವಾ ಕಲಾತ್ಮಕ ಸನ್ನಿವೇಶವನ್ನು ಒಳಗೊಂಡಿದ್ದರೆ ನಾವು ದ್ವೇಷದ ಭಾಷಣವನ್ನು ಒಳಗೊಂಡಿರುವ ಕಂಟೆಂಟ್ ಅನ್ನು ಅನುಮತಿಸಬಹುದು. ಹೆಚ್ಚುವರಿ ಸಂದರ್ಭವು ಖಂಡಿಸುವುದು, ನಿರಾಕರಿಸುವುದು, ವಿರುದ್ಧ ಅಭಿಪ್ರಾಯಗಳನ್ನು ಒಳಗೊಂಡಿರಬಹುದು ಅಥವಾ ದ್ವೇಷದ ಭಾಷಣವನ್ನು ವ್ಯಂಗ್ಯಗೊಳಿಸುವುದನ್ನು ಒಳಗೊಂಡಿರಬಹುದು. ಇದು ದ್ವೇಷಪೂರಿತ ಮಾತನ್ನು ಪ್ರಚಾರ ಮಾಡಲು ರಹದಾರಿಯಲ್ಲ. ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:

  • ದ್ವೇಷ ಹರಡುವ ಗುಂಪಿನ ಕುರಿತಾದ ಸಾಕ್ಷ್ಯಚಿತ್ರ: ಗುಂಪನ್ನು ಬೆಂಬಲಿಸದಿರುವ ಅಥವಾ ಐಡಿಯಾಗಳನ್ನು ಪ್ರಚಾರ ಮಾಡದಿರುವ ಶೈಕ್ಷಣಿಕ ಕಂಟೆಂಟ್ ಅನ್ನು ಅನುಮತಿಸಲಾಗುವುದು. ಹಿಂಸೆ ಅಥವಾ ದ್ವೇಷವನ್ನು ಪ್ರಚಾರ ಮಾಡುವ ಸಾಕ್ಷ್ಯಚಿತ್ರಕ್ಕೆ ಅನುಮತಿಯಿಲ್ಲ.
  • ಮಾನವರ ವೈಜ್ಞಾನಿಕ ಅಧ್ಯಯನದ ಕುರಿತಾದ ಒಂದು ಸಾಕ್ಷ್ಯಚಿತ್ರ: ಸಮಯ ಕಳೆದಂತೆ ಸಿದ್ಧಾಂತಗಳು ಹೇಗೆ ಬದಲಾಗಿವೆ ಎಂಬ ಕುರಿತಾದ ಸಾಕ್ಷ್ಯಚಿತ್ರದಲ್ಲಿ, ನಿರ್ದಿಷ್ಟ ಗುಂಪುಗಳ ಶ್ರೇಷ್ಠತೆ ಅಥವಾ ಕೆಳದರ್ಜೆಯ ಕುರಿತಾದ ತತ್ವಗಳು ಇದ್ದರೂ, ಅದು ಶೈಕ್ಷಣಿಕವೆಂಬ ಕಾರಣಕ್ಕೆ ಅದನ್ನು ಅನುಮತಿಸಲಾಗುವುದು. ಒಬ್ಬ ವ್ಯಕ್ತಿ ಅಥವಾ ಗುಂಪು, ಮಾನವರಿಗಿಂತ ಕೆಳದರ್ಜೆಯವರು ಎಂಬುದಕ್ಕೆ ಇಂದು ವೈಜ್ಞಾನಿಕ ಪುರಾವೆಯಿದೆ ಎಂದು ಪ್ರತಿಪಾದಿಸುವ ಸಾಕ್ಷ್ಯಚಿತ್ರವನ್ನು ನಾವು ಅನುಮತಿಸುವುದಿಲ್ಲ.
  • ಎರಡನೇ ಮಹಾಯುದ್ಧದ ಹಾಗೆ, ಹಿಂಸೆ ಅಥವಾ ದ್ವೇಷವನ್ನು ಪ್ರಚಾರ ಮಾಡದಿರುವ ಈವೆಂಟ್‌ನ ಐತಿಹಾಸಿಕ ದೃಶ್ಯಾವಳಿ. 

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಇದು ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿರುವ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ಸ್ವರೂಪಗಳನ್ನು ಒಳಗೊಂಡಿರಬಹುದು. 

ದ್ವೇಷದ ಭಾಷಣವನ್ನು ಒಳಗೊಂಡಿರುವ ಶೈಕ್ಷಣಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್‌ಗಾಗಿ, ಈ ಸಂದರ್ಭವು ವೀಡಿಯೊದ ಚಿತ್ರಗಳು ಅಥವಾ ಆಡಿಯೊದಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ಶೀರ್ಷಿಕೆ ಅಥವಾ ವಿವರಣೆಯಲ್ಲಿ ಅದನ್ನು ಒದಗಿಸಿದರೆ ಸಾಕಾಗುವುದಿಲ್ಲ.

ಹಣ ಗಳಿಸುವಿಕೆ ಮತ್ತು ಇತರ ದಂಡಗಳು 

ಕೆಲವು ಪ್ರಕರಣಗಳಲ್ಲಿ, ಒಬ್ಬ ರಚನೆಕಾರರು ಹೀಗೆ ಮಾಡಿದಾಗ ನಾವು ಕಂಟೆಂಟ್ ಅನ್ನು ತೆಗೆದುಹಾಕಬಹುದು ಅಥವಾ ಇತರ ದಂಡಗಳನ್ನು ವಿಧಿಸಬಹುದು:

  • ಪ್ರೇಕ್ಷಕರ ದುರ್ವರ್ತನೆಯನ್ನು ಪುನರಾವರ್ತಿತವಾಗಿ ಪ್ರೋತ್ಸಾಹಿಸುವುದು.
  • ಹಲವಾರು ಅಪ್‌ಲೋಡ್‌ಗಳಾದ್ಯಂತ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ ಗುಂಪನ್ನು ಪದೇ ಪದೇ ಟಾರ್ಗೆಟ್ ಮಾಡುವುದು, ಅವಮಾನಿಸುವುದು ಮತ್ತು ನಿಂದನೆ ಮಾಡುವುದು.
  • ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಗುಂಪನ್ನು ಸ್ಥಳೀಯ ಸಾಮಾಜಿಕ ಅಥವಾ ರಾಜಕೀಯ ಸಂದರ್ಭದ ಆಧಾರದ ಮೇಲೆ ದೈಹಿಕ ಹಾನಿಯ ಅಪಾಯಗಳಿಗೆ ಒಡ್ಡುವುದು.
  • ವೈಯಕ್ತಿಕ ಆರ್ಥಿಕ ಲಾಭಕ್ಕಾಗಿ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಗುಂಪಿನ ವಿರುದ್ಧ ಹಗೆತನವನ್ನು ನಿರಂತರವಾಗಿ ಪ್ರಚೋದಿಸುವ ಮೂಲಕ YouTube ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಕಂಟೆಂಟ್ ಅನ್ನು ರಚಿಸುವುದು.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ದ್ವೇಷಪೂರಿತ ಮಾತಿನ ಉದಾಹರಣೆಗಳು ಹೀಗಿವೆ.

  • “ಇದು [ಹಿಂಸಾತ್ಮಕ ಘಟನೆ] ಸಂಭವಿಸಿದ್ದು ಒಳ್ಳೆಯದಾಯಿತು. ಅವರಿಗೆ ತಕ್ಕ ಶಾಸ್ತಿಯಾಯಿತು [ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಜನರನ್ನು ಉಲ್ಲೇಖಿಸಿ].”
  • "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಜನರು] ನಾಯಿಗಳು" ಅಥವಾ "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಜನರು] ಪ್ರಾಣಿಗಳಂತವರು."

ಇನ್ನಷ್ಟು ಉದಾಹರಣೆಗಳು

  • "ಅಲ್ಲಿಗೆ ಹೋಗಿ ಮತ್ತು [ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಯನ್ನು] ಪಂಚ್ ಮಾಡಿ."
  • "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಗುಂಪುಗಳಲ್ಲಿ] ಎಲ್ಲರೂ ಅಪರಾಧಿಗಳು ಮತ್ತು ಕೊಲೆಗಡುಕರು."
  • "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ವ್ಯಕ್ತಿ] ಒಂದು ಕೊಳಕು ಮಂಡಲ."
  • "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ವ್ಯಕ್ತಿ] ಒಂದು ದೊಡ್ಡ ರೋಗ.”
  • "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಜನರು] ನಮಗಿಂತ ಕಡಿಮೆ ಬುದ್ಧಿವಂತರಾಗಿರುತ್ತಾರೆ, ಏಕೆಂದರೆ ಅವರ ಮಿದುಳುಗಳು ಚಿಕ್ಕದಾಗಿರುತ್ತವೆ."
  • "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಗುಂಪು] ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಹಾಕುತ್ತದೆ, ಆದ್ದರಿಂದ ನಮಗೆ ಸಿಗುವ ಪ್ರತಿಯೊಂದು ಅವಕಾಶದಲ್ಲೂ ನಾವು ಅವರನ್ನು ತೊಲಗಿಸಬೇಕು."
  • "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಗುಂಪು] ಜಗತ್ತನ್ನು ಆಳಲು ಮತ್ತು ನಮ್ಮನ್ನು ಹೊಸಕಿ ಹಾಕಲು ಒಂದು ಕಾರ್ಯಸೂಚಿಯನ್ನು ಹೊಂದಿದೆ."
  • "[ಸಂರಕ್ಷಿತ ಗುಂಪಿನ ಸ್ಥಿತಿ] ಕೇವಲ ಮಾನಸಿಕ ಅಸ್ವಸ್ಥತೆಯ ಒಂದು ರೂಪವಾಗಿದ್ದು ಅದನ್ನು ಗುಣಪಡಿಸಬೇಕಾಗಿದೆ."
  • "[ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ವ್ಯಕ್ತಿ] ಶಾಲೆಗಳಲ್ಲಿ ಶಿಕ್ಷಣ ಮಾಡಬಾರದು ಏಕೆಂದರೆ ಅವರು ಶಿಕ್ಷಣವನ್ನು ಹೊಂದಿರಬಾರದು."
  • “ಈ ಹಿಂಸಾತ್ಮಕ ಘಟನೆಯ ತಥಾಕಥಿತ ಎಲ್ಲಾ ಸಂತ್ರಸ್ತರು ನಟನೆ ಮಾಡುತ್ತಿದ್ದಾರೆ. ಯಾರಿಗೂ ಗಾಯವಾಗಿಲ್ಲ, ಇದು ಕೇವಲ ತಪ್ಪು ತಿಳುವಳಿಕೆಯಷ್ಟೇ.”
  • “ಈ ಘಟನೆಯಲ್ಲಿ ಜನರು ಸಾವನ್ನಪ್ಪಿದ್ದಾರೆ, ಆದರೆ ಅದು ನಿಜಕ್ಕೂ ಗಣನೆಗೆ ತೆಗೆದುಕೊಳ್ಳುವಂತಹ ಸಂಖ್ಯೆಯಲ್ಲ.”
  • "ವ್ಯಕ್ತಿಯು ಆಪಾದಿತ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಯಾರಿಗಾದರೂ [ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಹೊಂದಿರುವ ಜನರು] ಕೀಟಗಳು!" ಎಂದು ಕೂಗುವುದು.
  • ಮೇಲೆ ಸೂಚಿಸಲಾದ ಯಾವುದೇ ಗುಣಲಕ್ಷಣಗಳನ್ನು ಹೊಂದಿರುವ ಗುಂಪಿನ ವಿರುದ್ಧ ಹಿಂಸೆ ಅಥವಾ ದ್ವೇಷವನ್ನು ಪ್ರಚಾರ ಮಾಡಲು ಅಭಿವೃದ್ಧಿಪಡಿಸಲಾದ ಅಥವಾ ಮಾರ್ಪಡಿಸಲಾದ (“ಮಾರ್ಪಾಟು ಮಾಡಲಾದ”) ವೀಡಿಯೊ ಗೇಮ್ ಕಂಟೆಂಟ್.

ನೆನಪಿಡಿ, ಇವು ಕೇವಲ ಉದಾಹರಣೆಗಳು ಮಾತ್ರ. ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನಿಮಗೆ ಅನಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಕಂಟೆಂಟ್, ದ್ವೇಷಪೂರಿತವಾದ ಮಾತಿಗೆ ನಿಕಟವಾಗಿದೆ ಎಂದು ನಾವು ಭಾವಿಸಿದರೆ, ಆ ಕಂಟೆಂಟ್‌ಗಾಗಿ ಲಭ್ಯವಿರುವ YouTube ಫೀಚರ್‌ಗಳನ್ನು ನಾವು ಸೀಮಿತಗೊಳಿಸಬಹುದು. ಸೀಮಿತ ಫೀಚರ್‌ಗಳ ಕುರಿತು ಇಲ್ಲಿ ನೀವು ಇನ್ನಷ್ಟು ತಿಳಿಯಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7711364487117498052
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false