ನಿಮ್ಮ YouTube ಚಾನಲ್‌ನ ಸಾಮಾನ್ಯ ಮಾಹಿತಿಯನ್ನು ನಿರ್ವಹಿಸಿ

ಚಾನಲ್ ಹೆಸರು ಮತ್ತು ವಿವರಣೆ, ಅನುವಾದಗಳು ಮತ್ತು ಲಿಂಕ್‌ಗಳಂತಹ ನಿಮ್ಮ YouTube ಚಾನಲ್ ಕುರಿತಾದ ಬೇಸಿಕ್ ಮಾಹಿತಿಯನ್ನು ನೀವು ನಿರ್ವಹಿಸಬಹುದು.

ಹೆಸರು

ನಿಮ್ಮ YouTube ಚಾನಲ್‌ನ ಹೆಸರನ್ನು ನೀವು ಬದಲಾಯಿಸಬಹುದು, ಅದು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಹೆಸರನ್ನು ಬದಲಾಯಿಸಿದ ಬಳಿಕ, ಹೊಸ ಹೆಸರು ಅಪ್‌ಡೇಟ್ ಆಗಲು ಮತ್ತು YouTube ನಾದ್ಯಂತ ಕಾಣಿಸಿಕೊಳ್ಳಲು ಕೆಲವು ದಿನಗಳು ಬೇಕಾಗಬಹುದು. ನಿಮ್ಮ YouTube ಚಾನಲ್ ಹೆಸರು ಮತ್ತು ಚಿತ್ರವನ್ನು ನೀವು ಬದಲಾಯಿಸಿದರೆ, ಅದು YouTube ನಲ್ಲಿ ಮಾತ್ರ ಗೋಚರಿಸುತ್ತದೆ. ನಿಮ್ಮ Google ಖಾತೆಯ ಹೆಸರು ಮತ್ತು ಚಿತ್ರವನ್ನು ನೀವು ಇಲ್ಲಿ ಬದಲಾಯಿಸಬಹುದು (ನಿಮ್ಮ YouTube ಚಾನಲ್ ಹೆಸರಿನಲ್ಲಿ ಯಾವುದೇ ಬದಲಾವಣೆಗಳಿಲ್ಲ).

ಗಮನಿಸಿ: ನೀವು 14 ದಿನಗಳ ಅವಧಿಯಲ್ಲಿ ಎರಡುಬಾರಿ ನಿಮ್ಮ ಚಾನಲ್‌ನ ಹೆಸರನ್ನು ಬದಲಾಯಿಸಬಹುದು. ನಿಮ್ಮ ಹೆಸರನ್ನು ಬದಲಾಯಿಸಿದರೆ, ನಿಮ್ಮ ದೃಢೀಕರಣ ಬ್ಯಾಡ್ಜ್ ಅನ್ನು ತೆಗೆದುಹಾಕಲಾಗುತ್ತದೆ. ಇನ್ನಷ್ಟು ತಿಳಿಯಿರಿ.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಶನ್ ನಂತರ ಸಾಮಾನ್ಯ ಮಾಹಿತಿ ಎಂಬುದನ್ನು ಆಯ್ಕೆಮಾಡಿ.
  3. ನಿಮ್ಮ ಹೊಸ ಚಾನಲ್ ಹೆಸರನ್ನು ನಮೂದಿಸಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

Choosing Your YouTube Channel Name

 

 

ಹ್ಯಾಂಡಲ್

ಹ್ಯಾಂಡಲ್ ಎಂಬುದು YouTube ನಲ್ಲಿ ನಿಮ್ಮ ವಿಭಿನ್ನ ಉಪಸ್ಥಿತಿಯನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ನಿಮಗೆ ಸುಲಭವಾಗಿಸುವ ಅನನ್ಯ ಗುರುತಿಸುವಿಕೆಯಾಗಿದೆ.

ಗಮನಿಸಿ: ನೀವು 14-ದಿನದ ಅವಧಿಯಲ್ಲಿ ನಿಮ್ಮ ಹ್ಯಾಂಡಲ್ ಅನ್ನು ಎರಡು ಬಾರಿ ಬದಲಾಯಿಸಬಹುದು.

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಶನ್ ಮತ್ತು ನಂತರ ಸಾಮಾನ್ಯ ಮಾಹಿತಿ ಎಂಬುದನ್ನು ಆಯ್ಕೆಮಾಡಿ.
  3. ಹ್ಯಾಂಡಲ್ ಅಡಿಯಲ್ಲಿ, ನಿಮ್ಮ ಹ್ಯಾಂಡಲ್ ಅನ್ನು ನೀವು ವೀಕ್ಷಿಸಬಹುದು ಅಥವಾ ಬದಲಾಯಿಸಬಹುದು.
  4. ನಿಮ್ಮ ಹ್ಯಾಂಡಲ್ ಅನ್ನು ನೀವು ಬದಲಾಯಿಸಿದರೆ, ಅದನ್ನು ದೃಢೀಕರಿಸಲು ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ವಿವರಣೆ

ನಿಮ್ಮ YouTube ವಿವರಣೆಯನ್ನು ನೀವು ಬದಲಾಯಿಸಬಹುದು, ಅದು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ವಿವರಣೆಯನ್ನು ಚಾನಲ್ ಹೆಡರ್‌ನಲ್ಲಿ ಆ್ಯಕ್ಸೆಸ್ ಮಾಡಬಹುದಾಗಿದೆ.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಶನ್ ನಂತರ ಸಾಮಾನ್ಯ ಮಾಹಿತಿ ಎಂಬುದನ್ನು ಆಯ್ಕೆಮಾಡಿ.
  3. ನಿಮ್ಮ ಹೊಸ ಚಾನಲ್ ವಿವರಣೆಯನ್ನು ನಮೂದಿಸಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.
ರಚನೆಕಾರರಿಗಾಗಿ ವೀಡಿಯೊ ವಿವರಣೆ ಸಲಹೆಗಳನ್ನು ಪಡೆಯಿರಿ.

ನಿಮ್ಮ ಸರ್ವನಾಮಗಳನ್ನು ಸೇರಿಸಿ ಅಥವಾ ಬದಲಾಯಿಸಿ

ನಿಮ್ಮ ಚಾನಲ್‌ಗೆ ನಿಮ್ಮ ಸರ್ವನಾಮಗಳನ್ನು ನೀವು ಸೇರಿಸಬಹುದು, ಇದರಿಂದ ಅವುಗಳು ನಿಮ್ಮ ಚಾನಲ್‌ನ ಪುಟದಲ್ಲಿ ಗೋಚರಿಸುತ್ತವೆ. ನಿಮ್ಮ ಸರ್ವನಾಮಗಳನ್ನು ಎಲ್ಲರಿಗೂ ಪ್ರದರ್ಶಿಸಬೇಕೆ ಅಥವಾ ಅವುಗಳನ್ನು ನಿಮ್ಮ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ತೋರಿಸಬೇಕೆ ಎಂಬುದನ್ನು ನೀವು ಆಯ್ಕೆಮಾಡಬಹುದು.
ಸರ್ವನಾಮಗಳು, ವೈಯಕ್ತಿಕ ಗುರುತು ಮತ್ತು ಅಭಿವ್ಯಕ್ತಿಯ ನಿರ್ಣಾಯಕ ಭಾಗವಾಗಿವೆ. ಕೆಲವು ಅಧಿಕಾರ ಕ್ಷೇತ್ರಗಳು ಲಿಂಗ ಅಭಿವ್ಯಕ್ತಿಗೆ ಸಂಬಂಧಿಸಿದ ಕಾನೂನುಗಳನ್ನು ಹೊಂದಿವೆ. YouTube ನಲ್ಲಿ ಈ ಆಯ್ಕೆಯ ಸಾರ್ವಜನಿಕ ಫೀಚರ್ ಅನ್ನು ಬಳಸುವಾಗ ನಿಮ್ಮ ಸ್ಥಳೀಯ ಕಾನೂನುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಸರ್ವನಾಮಗಳು ನಿಮ್ಮ ಚಾನಲ್ ಪುಟದಲ್ಲಿ ಲಭ್ಯವಿಲ್ಲದಿದ್ದರೆ, ಈ ಫೀಚರ್ ಅನ್ನು ಇನ್ನಷ್ಟು ದೇಶಗಳು/ಪ್ರದೇಶಗಳು ಮತ್ತು ಭಾಷೆಗಳಲ್ಲಿ ವಿಸ್ತರಿಸಲು ನಾವು ಕೆಲಸ ಮಾಡುತ್ತಿದ್ದೇವೆ.
ಗಮನಿಸಿ: ಸರ್ವನಾಮಗಳ ಫೀಚರ್, ಕಾರ್ಯಸ್ಥಳ ಅಥವಾ ಮೇಲ್ವಿಚಾರಣೆಯ ಖಾತೆಗಳಿಗಾಗಿ ಲಭ್ಯವಿಲ್ಲ.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಶನ್  ನಂತರ ಸಾಮಾನ್ಯ ಮಾಹಿತಿ ನಂತರ ಸರ್ವನಾಮಗಳನ್ನು ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ನಿಮ್ಮ ಸರ್ವನಾಮಗಳನ್ನು ನಮೂದಿಸಲು ಪ್ರಾರಂಭಿಸಿ ಮತ್ತು ನಿಮಗೆ ಸೂಕ್ತವಾದವುಗಳನ್ನು ಆಯ್ಕೆಮಾಡಿ. ನೀವು ಗರಿಷ್ಠ ನಾಲ್ಕು ಸರ್ವನಾಮಗಳನ್ನು ಸೇರಿಸಬಹುದು.
    1. ನಿಮ್ಮ ಸರ್ವನಾಮಗಳಲ್ಲಿ ಒಂದರ ಪಕ್ಕದಲ್ಲಿರುವ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಆಯ್ಕೆಗಳನ್ನು ನೀವು ಎಡಿಟ್ ಮಾಡಬಹುದು, ಅದನ್ನು ತೆಗೆದುಹಾಕಬಹುದು.
  4. ನಿಮ್ಮ ಸರ್ವನಾಮಗಳನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಆಯ್ಕೆಮಾಡಿ:
    1. ಎಲ್ಲರಿಗೂ ಗೋಚರಿಸಲಿ, ಅಥವಾ
    2. ನನ್ನ ಸಬ್‌ಸ್ಕ್ರೈಬರ್‌ಗಳಿಗೆ ಮಾತ್ರ ಗೋಚರಿಸಲಿ
  5. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ಚಾನಲ್‌ನ ಹೆಸರು ಮತ್ತು ವಿವರಣೆಯ ಅನುವಾದ

ನಿಮ್ಮ ವೀಡಿಯೊಗಳು ಜಾಗತಿಕ ಪ್ರೇಕ್ಷಕರನ್ನು ತಲುಪುವುದಕ್ಕೆ ಸಹಾಯ ಮಾಡಲು ನಿಮ್ಮ ಚಾನಲ್ ಹೆಸರು ಮತ್ತು ವಿವರಣೆಗಳಿಗೆ ನೀವು ಅನುವಾದಗಳನ್ನು ಸೇರಿಸಬಹುದು.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕಸ್ಟಮೈಸೇಶನ್ ನಂತರ ಸಾಮಾನ್ಯ ಮಾಹಿತಿ ನಂತರ ಭಾಷೆಯನ್ನು ಸೇರಿಸಿ ಆಯ್ಕೆಮಾಡಿ.
  3. ಮೂಲ ಭಾಷೆ ಆಯ್ಕೆಮಾಡಿ, ತದನಂತರ ಅನುವಾದದ ಭಾಷೆ ಆಯ್ಕೆಮಾಡಿ.
  4. ನಿಮ್ಮ ಚಾನಲ್ ಹೆಸರು ಮತ್ತು ವಿವರಣೆಯ ಅನುವಾದಗಳನ್ನು ನಮೂದಿಸಿ.
  5. ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.

ಚಾನಲ್ URL

ನಿಮ್ಮ ಚಾನಲ್ URL, YouTube ಚಾನಲ್‌ಗಳು ಬಳಸುವ ಪ್ರಮಾಣಿತ URL ಆಗಿದೆ. ಇದು ನಿಮ್ಮ ಅನನ್ಯ ಚಾನಲ್ ID ಯನ್ನು ಬಳಸುತ್ತದೆ, ಅದು URL ನ ಅಂತ್ಯದಲ್ಲಿರುವ ಸಂಖ್ಯೆಗಳು ಮತ್ತು ಅಕ್ಷರಗಳು.
ಚಾನಲ್ ಪ್ರೊಫೈಲ್ ಲಿಂಕ್‌ಗಳು
ನಿಮ್ಮ ಚಾನಲ್‌ನ ಹೋಮ್ ಟ್ಯಾಬ್‌ನಲ್ಲಿ ನೀವು 14 ಲಿಂಕ್‌ಗಳನ್ನು ಪ್ರದರ್ಶಿಸಬಹುದು, ಅವುಗಳು ನಮ್ಮ ಬಾಹ್ಯ ಲಿಂಕ್‌ಗಳ ನೀತಿಯನ್ನು ಅನುಸರಿಸುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಮೊದಲ ಲಿಂಕ್ ಅನ್ನು ಸಬ್‌ಸ್ಕ್ರಿಪ್ಶನ್ ಬಟನ್ ಬಳಿ ಇರುವ ಪ್ರೊಫೈಲ್ ವಿಭಾಗದಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ ಮತ್ತು ನಿಮ್ಮ ಉಳಿದ ಲಿಂಕ್‌ಗಳನ್ನು ನಿಮ್ಮ ಪ್ರೇಕ್ಷಕರು ಹೆಚ್ಚಿನ ಲಿಂಕ್‌ಗಳನ್ನು ನೋಡಲು ಕ್ಲಿಕ್ ಮಾಡಿದಾಗ ತೋರಿಸಲಾಗುತ್ತದೆ. ನಿಮ್ಮ ಪ್ರೇಕ್ಷಕರೊಂದಿಗೆ ಲಿಂಕ್‌ಗಳನ್ನು ಹಂಚಿಕೊಳ್ಳುವ ಕುರಿತು ಇನ್ನಷ್ಟು ತಿಳಿಯಿರಿ.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಶನ್ ನಂತರ ಸಾಮಾನ್ಯ ಮಾಹಿತಿ ಎಂಬುದನ್ನು ಆಯ್ಕೆಮಾಡಿ.
  3. ಲಿಂಕ್‌ಗಳ ಅಡಿಯಲ್ಲಿ, ಲಿಂಕ್ ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸೈಟ್‌ನ ಶೀರ್ಷಿಕೆ ಮತ್ತು URL ಅನ್ನು ನಮೂದಿಸಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.
ಸಂಪರ್ಕ ಮಾಹಿತಿ
ವ್ಯಾಪಾರದ ಸಂಬಂಧಿ ಪ್ರಶ್ನೆಗಳಿಗಾಗಿ ನಿಮ್ಮೊಂದಿಗೆ ಹೇಗೆ ಸಂಪರ್ಕದಲ್ಲಿರಬೇಕೆಂದು ಇತರರಿಗೆ ತಿಳಿಸಲು ನಿಮ್ಮ ಚಾನಲ್‌ಗೆ ನೀವು ಸಂಪರ್ಕ ಮಾಹಿತಿಯನ್ನು ಸೇರಿಸಬಹುದು.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಸ್ಟಮೈಸೇಶನ್ ನಂತರ ಸಾಮಾನ್ಯ ಮಾಹಿತಿ ಎಂಬುದನ್ನು ಆಯ್ಕೆಮಾಡಿ.
  3. ಕೆಳಭಾಗದಲ್ಲಿ, ನಿಮ್ಮ ಇಮೇಲ್ ಅನ್ನು ನಮೂದಿಸಿ.
  4. ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ಚಾನಲ್‌ನ ಸಾಮಾನ್ಯ ಮಾಹಿತಿಯನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ವೀಕ್ಷಿಸಿ

ನಿಮ್ಮ ಚಾನಲ್ ಹೆಸರು ಮತ್ತು ವಿವರಣೆ, ಅನುವಾದಗಳು ಹಾಗೂ ಲಿಂಕ್‌ಗಳನ್ನು ಬದಲಾಯಿಸುವುದು ಹೇಗೆ ಎಂಬ ಕುರಿತು, YouTube Creators ಚಾನಲ್‌ನಿಂದ ಈ ಕೆಳಗಿನ ವೀಡಿಯೊವನ್ನು ನೋಡಿ.

 

Customize Your Channel Branding & Layout: Add a Profile Picture, Banner, Trailer, Sections, & more!

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4043578118052995629
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false