YouTube ನಲ್ಲಿ ನಿಮ್ಮ ಚಾನಲ್ ಸದಸ್ಯತ್ವದ ಪ್ರಯೋಜನಗಳನ್ನು ಬಳಸಿ ಮತ್ತು ನಿರ್ವಹಿಸಿ

ನೀವು ಚಾನಲ್ ಸದಸ್ಯರಾದಾಗ, ಚಾನಲ್‌ನ ಸದಸ್ಯರಿಗೆ-ಮಾತ್ರವಿರುವ ವಿಶೇಷ ಪರ್ಕ್‌ಗಳಿಗೆ ನೀವು ಆ್ಯಕ್ಸೆಸ್ ಹೊಂದುವಿರಿ. ರಚನೆಕಾರರು ತಮ್ಮ ಸದಸ್ಯತ್ವಗಳ ಪ್ರೋಗ್ರಾಂನಲ್ಲಿ ಒಂದಕ್ಕಿಂತ ಹೆಚ್ಚು ಹಂತಗಳನ್ನು ಹೊಂದಿದ್ದರೆ, ನೀವು ಯಾವ ಹಂತದಲ್ಲಿ ಸೇರಿಕೊಳ್ಳುತ್ತೀರೋ, ಅದನ್ನು ಆಧರಿಸಿ, ಸದಸ್ಯರಿಗೆ-ಮಾತ್ರವಿರುವ ವಿಭಿನ್ನ ಪರ್ಕ್‌ಗಳನ್ನು ನೀವು ಪಡೆದುಕೊಳ್ಳುವಿರಿ. ಪ್ರತಿ ಹಂತದ ದರವೂ ಸಹ ವಿಭಿನ್ನವಾಗಿರುತ್ತದೆ ಮತ್ತು ನೀವು ಹಂತಗಳಲ್ಲಿ ಮೇಲಕ್ಕೆ ಹೋದ ಹಾಗೆ, ಪರ್ಕ್‌ಗಳು ಒಂದರ ಮೇಲೊಂದು ಒಟ್ಟಾಗುತ್ತಾ ಹೋಗುತ್ತವೆ. ಇದರರ್ಥ, ನೀವು ಅತ್ಯಂತ ದುಬಾರಿ ಹಂತದಲ್ಲಿ ಸೇರಿಕೊಂಡರೆ, ಕೆಳಗಿನ ಹಂತಗಳಲ್ಲಿರುವ ಎಲ್ಲಾ ಪರ್ಕ್‌ಗಳಿಗೆ ನೀವು ಆ್ಯಕ್ಸೆಸ್ ಹೊಂದುವಿರಿ.

ಪ್ರತಿ ಹಂತಕ್ಕಾಗಿ ನೀವು ಪಡೆಯುವ ಪರ್ಕ್‌ಗಳು ಚಾನಲ್‌ನಿಂದ ಚಾನಲ್‌ಗೆ ವ್ಯತ್ಯಾಸವಾಗುತ್ತಾ ಹೋಗುತ್ತವೆ. ಸೇರಿಕೊಳ್ಳಿ ಎಂಬುದನ್ನು ನೀವು ಆಯ್ಕೆ ಮಾಡಿದಾಗ ಚಾನಲ್‌ನಲ್ಲಿ ಲಭ್ಯವಿರುವ ವಿವಿಧ ಪರ್ಕ್‌ಗಳನ್ನು ನೀವು ವೀಕ್ಷಿಸಬಹುದು. ನೀವು ಈಗಾಗಲೇ ಸದಸ್ಯರಾಗಿದ್ದರೆ, ಚಾನಲ್ ಹೋಮ್ ಪೇಜ್‌ಗೆ ಹೋಗಿ ಮತ್ತು ನಂತರ ಪರ್ಕ್‌ಗಳನ್ನು ನೋಡಿ ಎಂಬುದನ್ನು ಆಯ್ಕೆ ಮಾಡಿ.

ಸದಸ್ಯರಿಗಾಗಿ ಚಾನಲ್ ಸದಸ್ಯತ್ವದ ಪ್ರಯೋಜನಗಳು

ರಚನೆಕಾರರು ತಮ್ಮ ಸದಸ್ಯತ್ವಗಳ ಪ್ರೋಗ್ರಾಂನ ಭಾಗವಾಗಿ ಒದಗಿಸಬಹುದಾದ, ಸದಸ್ಯರಿಗೆ-ಮಾತ್ರವಿರುವ ಅನೇಕ ಪರ್ಕ್‌ಗಳಿವೆ.

ಸದಸ್ಯರಿಗಾಗಿ ಚಾನಲ್ ಸದಸ್ಯತ್ವದ ಪರ್ಕ್‌ಗಳು

ರಚನೆಕಾರರು ಈಗಾಗಲೇ ಪ್ರತ್ಯೇಕ ಫೀಚರ್ ಅನ್ನು ಆನ್ ಮಾಡಿದ್ದರೆ, ನೀವು ಚಾನಲ್‌ನ ಸದಸ್ಯತ್ವಗಳ ಪ್ರೋಗ್ರಾಂಗೆ ಸೇರಿಕೊಂಡಾಗ ನಿಮಗೆ ದೊರೆಯಬಹುದಾದ ಪ್ರಯೋಜನಗಳು ಹೀಗಿವೆ:

  • ಚಾನಲ್ ಬ್ಯಾಡ್ಜ್‌ಗಳು: ನಿಮ್ಮ ಚಾನಲ್‌ನಲ್ಲಿ ನೀವು ಮಾಡುವ ಎಲ್ಲಾ ಕಾಮೆಂಟ್‌ಗಳು ಮತ್ತು ಲೈವ್ ಚಾಟ್‌ಗಳಲ್ಲಿ ನಿಮ್ಮ ಚಾನಲ್ ಹೆಸರಿನ ಪಕ್ಕದಲ್ಲಿ ಕಾಣಿಸಿಕೊಳ್ಳುವ ವಿಶೇಷವಾದ, ಸಾರ್ವಜನಿಕವಾಗಿ ನೋಡಬಹುದಾದ ಸದಸ್ಯತ್ವ ಬ್ಯಾಡ್ಜ್ ಇದಾಗಿದೆ.
    • ಕೆಲವು ಚಾನಲ್‌ಗಳಲ್ಲಿ, ವಿಭಿನ್ನ ಬಣ್ಣದ ಡೀಫಾಲ್ಟ್ ಬ್ಯಾಡ್ಜ್‌ಗಳು ಅಥವಾ ಕಸ್ಟಮ್ ಬ್ಯಾಡ್ಜ್‌ಗಳ ಮೂಲಕ ನೀವು ಎಷ್ಟು ಸಮಯದಿಂದ ಸದಸ್ಯರಾಗಿರುವಿರಿ ಎಂಬುದನ್ನು ಬ್ಯಾಡ್ಜ್ ಪ್ರತಿಬಿಂಬಿಸುತ್ತದೆ.
  • ಸದಸ್ಯರಿಗೆ-ಮಾತ್ರವಿರುವ ಸಮುದಾಯ ಪೋಸ್ಟ್‌ಗಳು: ನೀವು ಚಾನಲ್‌ನ ಸಮುದಾಯ ಟ್ಯಾಬ್‌ನಲ್ಲಿ ಸದಸ್ಯರಿಗೆ-ಮಾತ್ರವಿರುವ ಪೋಸ್ಟ್‌ಗಳನ್ನು ವೀಕ್ಷಿಸಬಹುದು. ವಿಶೇಷ ಕಂಟೆಂಟ್ ಅನ್ನು “ಸದಸ್ಯರಿಗೆ-ಮಾತ್ರ” ಎಂದು ಟ್ಯಾಗ್ ಮಾಡಲಾಗಿರುತ್ತದೆ ಮತ್ತು ಪಠ್ಯದ ಪೋಸ್ಟ್‌ಗಳು, GIF ಗಳು, ಸಮೀಕ್ಷೆಗಳು, ವೀಡಿಯೊಗಳು, ಮುಂತಾದವುಗಳನ್ನು ಒಳಗೊಂಡಿರುತ್ತದೆ.
  • ಕಸ್ಟಮ್ ಎಮೋಜಿ: ರಚನೆಕಾರರು ಅಪ್‌ಲೋಡ್ ಮಾಡಿದ್ದರೆ, ಚಾನಲ್ ಸದಸ್ಯರು ಚಾನಲ್‌ನ ವೀಡಿಯೊಗಳು ಮತ್ತು ಲೈವ್ ಚಾಟ್‌ಗಳಲ್ಲಿ ಮಾಡುವ ತಮ್ಮ ಕಾಮೆಂಟ್‌ಗಳಲ್ಲಿ ವಿಶೇಷ ಎಮೋಜಿಯನ್ನು ಬಳಸಬಹುದು. ನೀವು ಲೈವ್ ಚಾಟ್‌ನಲ್ಲಿ ಎಮೋಜಿಯನ್ನು ಆಟೋಕಂಪ್ಲೀಟ್ ಮಾಡಲು ರಚನೆಕಾರರು ನಿಯೋಜಿಸಿರುವ ಫ್ಯಾಮಿಲಿ ಹೆಸರನ್ನು ಬಳಸಬಹುದು.
  • ಹೊಸ ವೀಡಿಯೊಗಳಿಗೆ ಮುಂಚಿತ ಆ್ಯಕ್ಸೆಸ್: ಎಲ್ಲರಿಗೂ ಆ್ಯಕ್ಸೆಸ್ ದೊರೆಯುವ ಮೊದಲು, ನಿರ್ದಿಷ್ಟ ಅವಧಿಯವರೆಗೆ ಸದಸ್ಯರಿಗೆ-ಮಾತ್ರ ಲಭ್ಯವಿರುವ ಕಂಟೆಂಟ್ ಅನ್ನು ರಚನೆಕಾರರು ಅಪ್‌ಲೋಡ್ ಮಾಡಬಹುದು. ಕಂಟೆಂಟ್ ಅನ್ನು ವೀಕ್ಷಿಸುವ ಮತ್ತು ಅದರೊಂದಿಗೆ ತೊಡಗಿಸಿಕೊಳ್ಳುವ ಮೊದಲಿಗರಲ್ಲಿ ನೀವು ಒಬ್ಬರಾಗಿರುತ್ತೀರಿ.
  • ಸದಸ್ಯರಿಗೆ-ಮಾತ್ರವಿರುವ ಲೈವ್ ಚಾಟ್: ಸಾರ್ವಜನಿಕ ಲೈವ್ ಸ್ಟ್ರೀಮ್‌ಗಳ ಸಂದರ್ಭದಲ್ಲಿ, ರಚನೆಕಾರರು ಚಾಟ್ ಅನ್ನು ಸದಸ್ಯರಿಗೆ-ಮಾತ್ರ ಎಂಬುದಾಗಿ ಸೆಟ್ ಮಾಡಬಹುದು. ಪ್ರತಿಯೊಬ್ಬರೂ ಆಗಲೂ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದಾದರೂ, ಸದಸ್ಯರು ಮಾತ್ರ ಚಾಟ್‌ಗಳನ್ನು ಪೋಸ್ಟ್ ಮಾಡಬಹುದು.
  • ಸದಸ್ಯರಿಗೆ-ಮಾತ್ರವಿರುವ ಲೈವ್ ಸ್ಟ್ರೀಮ್‌ಗಳು: ಸೂಕ್ತ ಹಂತಗಳಲ್ಲಿನ ಚಾನಲ್ ಸದಸ್ಯರಿಗೆ ಮಾತ್ರ ಲಭ್ಯವಿರುವ ವಿಶೇಷ ಲೈವ್ ಸ್ಟ್ರೀಮ್‌ಗಳು.
  • ಸದಸ್ಯರ ಮೈಲಿಗಲ್ಲು ಚಾಟ್‍ಗಳು: ನೀವು ಸದಸ್ಯರಾಗಿರುವ ಪ್ರತಿ ತಿಂಗಳಿಗಾಗಿ, ನೀವು ಒಂದು ಸದಸ್ಯರ ಮೈಲಿಗಲ್ಲು ಚಾಟ್ ಅನ್ನು ಪಡೆಯುವಿರಿ. ಈ ಪ್ರಯೋಜನವು ನಿಮ್ಮ ಎರಡನೇ ಸತತ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಸದಸ್ಯರ ಮೈಲಿಗಲ್ಲು ಚಾಟ್‌ಗಳೆಂದರೆ, ಲೈವ್ ಸ್ಟ್ರೀಮ್‌ಗಳು ಮತ್ತು ಪ್ರೀಮಿಯರ್‌ಗಳಲ್ಲಿ ನಡೆಸುವ ಲೈವ್ ಚಾಟ್‌ನಲ್ಲಿ ಬಳಸಬಹುದಾದ, ವಿಶೇಷವಾಗಿ ಹೈಲೈಟ್ ಮಾಡಿದ ಸಂದೇಶಗಳಾಗಿರುತ್ತವೆ. ಈ ವಿಶೇಷ ಸಂದೇಶಗಳು ನೀವು ಎಷ್ಟು ಸಮಯದಿಂದ ಈ ಚಾನಲ್‌ನ ಸದಸ್ಯರಾಗಿರುವಿರಿ ಎಂಬುದನ್ನು ಹೈಲೈಟ್ ಮಾಡುತ್ತದೆ ಮತ್ತು ಇವು ಎಲ್ಲಾ ವೀಕ್ಷಕರಿಗೆ ಕಾಣಿಸುತ್ತವೆ.
  • ಸದಸ್ಯರ ಗುರುತಿಸುವಿಕೆ ಶೆಲ್ಫ್: ರಚನೆಕಾರರು ಈ ಶೆಲ್ಫ್ ಅನ್ನು ಆನ್ ಮಾಡಿದ್ದರೆ, ನಿಮ್ಮ ಅವತಾರ್ ಅನ್ನು ಚಾನಲ್ ಪುಟದಲ್ಲಿ ಇತರ ಸಕ್ರಿಯ ಸದಸ್ಯರೊಂದಿಗೆ ತೋರಿಸಲಾಗುತ್ತದೆ. ಈ ಶೆಲ್ಫ್, ತಮ್ಮ ಚಾನಲ್‌ನ ಸದಸ್ಯರಾಗಿದ್ದಕ್ಕಾಗಿ ಸಾರ್ವಜನಿಕವಾಗಿ ನಿಮಗೆ ಧನ್ಯವಾದವನ್ನು ತಿಳಿಸುವ ರಚನೆಕಾರರ ಒಂದು ವಿಧಾನವಾಗಿದೆ. ನಿಮ್ಮ ಸದಸ್ಯತ್ವವನ್ನು ನೀವು ರದ್ದುಗೊಳಿಸಿದರೆ, ನೀವು ಇನ್ನು ಮುಂದೆ ಶೆಲ್ಫ್‌ನಲ್ಲಿ ಕಾಣಿಸುವುದಿಲ್ಲ.
  • ಸದಸ್ಯರಿಗೆ-ಮಾತ್ರವಿರುವ Shorts: ವೀಕ್ಷಿಸುವುದಕ್ಕಾಗಿ ಚಾನಲ್ ಸದಸ್ಯರಿಗೆ ಮಾತ್ರ ಲಭ್ಯವಿರುವ ವಿಶೇಷ Shorts. ನಿಮ್ಮ Shorts ಮತ್ತು ಹೋಮ್ ಫೀಡ್, ಹಾಗೆಯೇ ಮುಂದಿನದನ್ನು ನೋಡಿ ಎಂಬಲ್ಲಿ ಸದಸ್ಯರಿಗೆ-ಮಾತ್ರವಿರುವ Shorts ಅನ್ನು ನೀವು ನೋಡಬಹುದು.
  • ಸದಸ್ಯರಿಗೆ-ಮಾತ್ರವಿರುವ ವೀಡಿಯೊಗಳು: ಸೂಕ್ತ ಹಂತದಲ್ಲಿರುವ ಚಾನಲ್ ಸದಸ್ಯರಿಗೆ ಮಾತ್ರ ಲಭ್ಯವಿರುವ ವಿಶೇಷ ವೀಡಿಯೊಗಳು. ಯಾರಾದರೂ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ಕಂಡುಕೊಳ್ಳಬಹುದು, ಆದರೆ ಸೂಕ್ತ ಹಂತಗಳಲ್ಲಿರುವ ಸದಸ್ಯರು ಮಾತ್ರ ಅದನ್ನು ವೀಕ್ಷಿಸಬಹುದು. ಈ ವೀಡಿಯೊಗಳನ್ನು ಚಾನಲ್‌ನ ಸದಸ್ಯತ್ವಗಳು, ಕಂಟೆಂಟ್ ಮತ್ತು ಸಮುದಾಯ ಟ್ಯಾಬ್‌ಗಳಲ್ಲಿ ಕಾಣಬಹುದಾಗಿದೆ. ಈ ವೀಡಿಯೊಗಳು ನಿಮ್ಮ ಹೋಮ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿಯೂ ಕಾಣಿಸಬಹುದು.
  • ಹೊಸ ಸದಸ್ಯರಿಗೆ ಸಂದೇಶ: ಒಂದು ಚಾನಲ್‌ನ ಲೈವ್ ಸ್ಟ್ರೀಮ್ ಸಮಯದಲ್ಲಿ ನೀವು ಚಾನಲ್ ಸದಸ್ಯರಾದರೆ, ಲೈವ್ ಚಾಟ್‌ನಲ್ಲಿ ಎದ್ದುಗಾಣಿಸುವ ಹಸಿರು ಬಣ್ಣದಲ್ಲಿ "ಹೊಸ ಸದಸ್ಯರು" ಸಂದೇಶವನ್ನು ಕಳುಹಿಸಲಾಗುತ್ತದೆ. ನಿಮ್ಮ ಪ್ರೊಫೈಲ್ ಚಿತ್ರವನ್ನು ಸಹ ಚಾಟ್‌ನ ಮೇಲ್ಬಾಗದಲ್ಲಿ 5 ನಿಮಿಷಗಳವರೆಗೆ ಪಿನ್ ಮಾಡಲಾಗುತ್ತದೆ.
  • ರಚನೆಕಾರರಿಗಾಗಿ ಇತರ ಪರ್ಕ್‌ಗಳು: ಲಭ್ಯವಿದ್ದರೆ, ರಚನೆಕಾರರ ಇತರ ವಿಶೇಷ ಪರ್ಕ್‌ಗಳಿಗೆ ಸಹ ನೀವು ಆ್ಯಕ್ಸೆಸ್ ಪಡೆಯಹುದು.

ಗಮನಿಸಿ: "ನಿಧಾನಗತಿ ಮೋಡ್" - ನೀವು ಲೈವ್ ಚಾಟ್‌ನಲ್ಲಿ ಎಷ್ಟು ಸಮಯಕ್ಕೊಮ್ಮೆ ಕಾಮೆಂಟ್ ಮಾಡಬಹುದು ಎಂಬುದನ್ನು ಸೀಮಿತಗೊಳಿಸುತ್ತದೆ - ಇದು ಸಕ್ರಿಯವಾಗಿರುವ ಪಾವತಿಸಬೇಕಾದ ಚಾನಲ್ ಸದಸ್ಯರಿಗೆ ಅನ್ವಯಿಸುವುದಿಲ್ಲ.

ಅನುಚಿತವಾದ ಅಥವಾ ದೋಷಪೂರ್ಣವಾದ ಪರ್ಕ್‌ಗಳನ್ನು ವರದಿ ಮಾಡಿ

YouTube ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಹ ಪರ್ಕ್ ನಿಮಗೆ ಕಂಡುಬಂದರೆ, ನೀವು ಅದನ್ನು ವರದಿ ಮಾಡಬಹುದು. ಅನುಚಿತ ಪರ್ಕ್‌ಗಳ ಉದಾಹರಣೆಗಳಲ್ಲಿ ಲೈಂಗಿಕ, ಹಿಂಸಾತ್ಮಕ ಅಥವಾ ದ್ವೇಷಪೂರಿತ ಕಂಟೆಂಟ್, ದಾರಿ ತಪ್ಪಿಸುವ ಆಫರ್‌ಗಳು ಅಥವಾ ಸ್ಪ್ಯಾಮ್ ಒಳಗೊಂಡಿವೆ.

ನೀವು ಚಾನಲ್‌ನ ಸದಸ್ಯರಲ್ಲದಿದ್ದರೆ:

  1. ಚಾನಲ್‌ ಹೋಮ್ ಪೇಜ್‌ಗೆ ಹೋಗಿ ಮತ್ತು ಸೇರಿಕೊಳ್ಳಿ ಎಂಬುದನ್ನು ಆಯ್ಕೆ ಮಾಡಿ.
  2. ಸದಸ್ಯತ್ವಗಳ ಸ್ಕ್ರೀನ್‌ನಲ್ಲಿ ಪರ್ಕ್‌ಗಳನ್ನು ವರದಿ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನೀವು ಈಗಾಗಲೇ ಚಾನಲ್‌ನ ಸದಸ್ಯರಾಗಿದ್ದರೆ:

  1. ಚಾನಲ್‌ ಹೋಮ್ ಪೇಜ್‌ಗೆ ಹೋಗಿ.
  2. ಪರ್ಕ್‌ಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.

ಅನುಚಿತವಾದ ಅಥವಾ ದೋಷಪೂರ್ಣವಾದ ಪರ್ಕ್‌ಗಳಿಗಾಗಿ ಮರುಪಾವತಿಯನ್ನು ವಿನಂತಿಸಿ

ಪಾವತಿಸಬೇಕಾದ ಚಾನಲ್ ಸದಸ್ಯತ್ವದ ಪರ್ಕ್‌ಗಳು ಅಥವಾ ಇತರ ಫೀಚರ್‌ಗಳು ದೋಷಪೂರ್ಣವಾಗಿದ್ದರೆ, ಅಲಭ್ಯವಾಗಿದ್ದರೆ ಅಥವಾ ಹೇಳಿದಂತೆ ಕಾರ್ಯನಿರ್ವಹಿಸದಿದ್ದರೆ, ಮರುಪಾವತಿಯನ್ನು ವಿನಂತಿಸಲು ನಮ್ಮ ಬೆಂಬಲ ತಂಡವನ್ನು ಸಂಪರ್ಕಿಸಿ. ಭಾಗಶಃ ಮುಗಿದ ಬಿಲ್ಲಿಂಗ್ ಅವಧಿಗಳಿಗೆ ನಾವು ಮರುಪಾವತಿಗಳನ್ನು ಅಥವಾ ಕ್ರೆಡಿಟ್‌ಗಳನ್ನು ನೀಡುವುದಿಲ್ಲ.
ನೀವು Apple ಮೂಲಕ ಸೈನ್ ಅಪ್ ಮಾಡಿದ ಸದಸ್ಯರಾಗಿದ್ದರೆ, ನಿಮ್ಮ ಪಾವತಿಸಬೇಕಾದ ಚಾನಲ್ ಸದಸ್ಯತ್ವಕ್ಕಾಗಿ ಮರುಪಾವತಿಯನ್ನು ವಿನಂತಿಸಲು ನೀವು Apple ಬೆಂಬಲವನ್ನು ಸಂಪರ್ಕಿಸಬೇಕು. Apple ನ ಮರುಪಾವತಿ ನೀತಿಯು ಅನ್ವಯಿಸುತ್ತದೆ.

ನಿಮ್ಮ ಚಾನಲ್ ಸದಸ್ಯತ್ವದ ಪ್ರಯೋಜನಗಳಿಗಾಗಿ ನೋಟಿಫಿಕೇಶನ್‌ಗಳನ್ನು ನಿರ್ವಹಿಸಿ

ಓರ್ವ ಚಾನಲ್ ಸದಸ್ಯರಾಗಿ, ನೀವು ಸಮುದಾಯ ಟ್ಯಾಬ್, ಸದಸ್ಯತ್ವದ ಟ್ಯಾಬ್ ಅಥವಾ ಚಾನಲ್‌ನ ಕಂಟೆಂಟ್ ಟ್ಯಾಬ್‌ಗಳಲ್ಲಿ ಸದಸ್ಯರಿಗೆ-ಮಾತ್ರವಿರುವ ಕಂಟೆಂಟ್ ಅನ್ನು ನೋಡಬಹುದು. ಸದಸ್ಯರಿಗೆ ಮಾತ್ರವಿರುವ ಕಂಟೆಂಟ್, ನಿಮ್ಮ ಹೋಮ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿಯೂ ಕಾಣಿಸಿಕೊಳ್ಳಬಹುದು.

ಒಂದು ಚಾನಲ್ ಈ ಕೆಳಗಿನವುಗಳನ್ನು ಮಾಡಿದಾಗ, ನಿಮಗೆ ತಿಳಿಸಲು ನಾವು ನೋಟಿಫಿಕೇಶನ್‌ಗಳು ಅಥವಾ ಇಮೇಲ್ ಅನ್ನು ಬಳಸುತ್ತೇವೆ:

  • ಸದಸ್ಯರಿಗೆ-ಮಾತ್ರವಿರುವ ಹೊಸ ಪೋಸ್ಟ್ ಅನ್ನು ರಚಿಸಿದಾಗ
  • ಸದಸ್ಯರಿಗೆ-ಮಾತ್ರವಿರುವ ಹೊಸ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ
  • ಸದಸ್ಯರಿಗೆ-ಮಾತ್ರವಿರುವ ಲೈವ್ ಸ್ಟ್ರೀಮ್ ಅನ್ನು ಪ್ರಾರಂಭಿಸಿದಾಗ
  • ಇನ್ನು 30 ನಿಮಿಷಗಳಲ್ಲಿ ಆರಂಭವಾಗುವ, ಸದಸ್ಯರಿಗೆ-ಮಾತ್ರವಿರುವ ಲೈವ್ ಸ್ಟ್ರೀಮ್ ಅನ್ನು ನಿಗದಿಪಡಿಸಿದಾಗ

ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ

ಸದಸ್ಯರಿಗೆ-ಮಾತ್ರವಿರುವ ಹೊಸ ಕಂಟೆಂಟ್‌ನ ಕುರಿತು ತಿಳಿದುಕೊಳ್ಳಲು ನೀವು ಬಯಸದಿದ್ದರೆ, ನಿರ್ದಿಷ್ಟ ಚಾನಲ್‌ಗಾಗಿ ನೋಟಿಫಿಕೇಶನ್‌ಗಳು ಮತ್ತು ಇಮೇಲ್‌ಗಳಿಂದ ಹೊರಗುಳಿಯಿರಿ ಅಥವಾ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.

ಪ್ರತ್ಯೇಕ ಚಾನಲ್‌ಗಳಿಗಾಗಿ ನೋಟಿಫಿಕೇಶನ್‌ಗಳು ಮತ್ತು ಇಮೇಲ್‌ಗಳಿಂದ ಹೊರಗುಳಿಯಿರಿ

ನೀವು ಸದಸ್ಯರಾಗಿರುವ ನಿರ್ದಿಷ್ಟ ಚಾನಲ್‌ಗಳಿಗಾಗಿ ನೋಟಿಫಿಕೇಶನ್‌ಗಳು ಹಾಗೂ ಇಮೇಲ್‌ಗಳಿಂದ ನೀವು ಹೊರಗುಳಿಯಬಹುದು.
  • ಸದಸ್ಯರಿಗೆ-ಮಾತ್ರವಿರುವ ಕಂಟೆಂಟ್‌ನ ಕುರಿತಾದ ನೋಟಿಫಿಕೇಶನ್‌ಗಳಿಂದ ಹೊರಗುಳಿಯಲು: ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳು ಎಂಬಲ್ಲಿಗೆ ಹೋಗಿ ನಂತರ ಸದಸ್ಯರಿಗೆ-ಮಾತ್ರ ಎಂಬುದರ ಪಕ್ಕದಲ್ಲಿರುವ ಸ್ವಿಚ್ ಅನ್ನು ಆಫ್ ಮಾಡಿ.
  • ಸದಸ್ಯರಿಗೆ-ಮಾತ್ರವಿರುವ ಕಂಟೆಂಟ್‌ಗೆ ಸಂಬಂಧಿಸಿದ ಇಮೇಲ್‌ಗಳನ್ನು ಸ್ವೀಕರಿಸುವ ಆಯ್ಕೆಯಿಂದ ಹೊರಗುಳಿಯಲು: ನೀವು ಸ್ವೀಕರಿಸುವಂತಹ ಸದಸ್ಯರಿಗೆ-ಮಾತ್ರವಿರುವ ಯಾವುದೇ ಇಮೇಲ್‌ನಲ್ಲಿ ಕಾಣಿಸುವ ಅನ್‌ಸಬ್‌ಸ್ಕ್ರೈಬ್ ಲಿಂಕ್ ಅನ್ನು ಬಳಸಿ. ನೀವು ಇಮೇಲ್ ನೋಟಿಫಿಕೇಶನ್‌ಗಳಿಗೆ ಪುನಃ ಸಬ್‌ಸ್ಕ್ರೈಬ್ ಮಾಡಲು ಬಯಸಿದರೆ, ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳುನಂತರ ಎಂಬಲ್ಲಿಗೆ ಹೋಗಿ “ಇಮೇಲ್ ನೋಟಿಫಿಕೇಶನ್‌ಗಳು” ಎಂಬುದರ ಅಡಿಯಲ್ಲಿ, “ಅನ್‌ಸಬ್‌ಸ್ಕ್ರೈಬ್ ಮಾಡಿದ ಇಮೇಲ್‌ಗಳು” ಎಂಬುದನ್ನು ಆಯ್ಕೆ ಮಾಡಿ ಮತ್ತು ನೀವು ಯಾವ ಇಮೇಲ್‌ಗಳನ್ನು ಸ್ವೀಕರಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
  • ಪ್ರತ್ಯೇಕ ಚಾನಲ್‌ಗಾಗಿ ಎಲ್ಲಾ ನೋಟಿಫಿಕೇಶನ್‌ಗಳಿಂದ ಹೊರಗುಳಿಯಲು: ನೀವು ಸಬ್‌ಸ್ಕ್ರೈಬ್ ಮಾಡಿರುವ ಚಾನಲ್‌ಗೆ ಹೋಗಿ ನಂತರ ನೋಟಿಫಿಕೇಶನ್‌ಗಳು  ನಂತರ ಯಾವುದೂ ಇಲ್ಲ ಆಯ್ಕೆ ಮಾಡಿ. ಹೀಗೆ ಮಾಡುವುದರಿಂದ, ಕೇವಲ ಸದಸ್ಯರಿಗೆ-ಮಾತ್ರವಿರುವ ಕಂಟೆಂಟ್‌ಗೆ ಸಂಬಂಧಿಸಿದ ನೋಟಿಫಿಕೇಶನ್‌ಗಳಷ್ಟೇ ಅಲ್ಲ, ಈ ಚಾನಲ್‌ಗೆ ಸಂಬಂಧಿಸಿದ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ ಮಾಡಲಾಗುತ್ತದೆ.

ನಿಮ್ಮ ಖಾತೆಗಾಗಿ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.

ನೀವು ಯಾವುದೇ ನೋಟಿಫಿಕೇಶನ್‌ಗಳನ್ನು ಪಡೆಯಲು ಬಯಸದಿದ್ದರೆ, ನಿಮ್ಮ ಖಾತೆಗಾಗಿ ನೀವು ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ ಮಾಡಬಹುದು.

ಪಾವತಿ ಮತ್ತು ಬಿಲ್ಲಿಂಗ್ ಮಾಹಿತಿ

 ಚಾನಲ್ ಸದಸ್ಯತ್ವಗಳಿಗಾಗಿ ಪಾವತಿಗಳು ಮತ್ತು ಬಿಲ್ಲಿಂಗ್ ಹೇಗೆ ಕೆಲಸ ಮಾಡುತ್ತವೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಗೌಪ್ಯತೆಯ ಮಾಹಿತಿ

ನೀವು ಒಂದು ಚಾನಲ್‌ಗೆ ಸೇರಿದಾಗ, ಈ ಕೆಳಗಿನ ಮಾಹಿತಿಯು YouTube ನಲ್ಲಿ ಸಾರ್ವಜನಿಕವಾಗಿ ಗೋಚರಿಸುತ್ತದೆ ಮತ್ತು ಪರ್ಕ್‌ಗಳನ್ನು ನೀಡುವುದಕ್ಕಾಗಿ ಚಾನಲ್, ಥರ್ಡ್-ಪಾರ್ಟಿ ಕಂಪನಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು:

  • ನಿಮ್ಮ ಚಾನಲ್‌ನ URL
  • ನಿಮ್ಮ YouTube ಚಾನಲ್‌ನ ಹೆಸರು
  • ನಿಮ್ಮ ಪ್ರೊಫೈಲ್ ಚಿತ್ರ
  • ನೀವು ಚಾನಲ್‌ನ ಸದಸ್ಯರಾಗಿ ಸೇರಿದ್ದು ಯಾವಾಗ
  • ನೀವು ಸದಸ್ಯತ್ವ ಪಡೆದಿರುವ ಹಂತ

ನಿಮ್ಮ ಮಾಹಿತಿಯನ್ನು ಹೇಗೆ ಬಳಸಬಹುದು

ನೀವು ಚಾನಲ್‌ನ ಸದಸ್ಯತ್ವಗಳ ಪ್ರೋಗ್ರಾಂ ಅನ್ನು ಸೇರಿಕೊಂಡಾಗ, ಮೇಲೆ ಪಟ್ಟಿ ಮಾಡಲಾದ, ಸಾರ್ವಜನಿಕವಾಗಿ ಗೋಚರಿಸುವ ಮಾಹಿತಿಯನ್ನು ಇತರ ಬಳಕೆದಾರರು ವೀಕ್ಷಿಸಬಹುದು. ಇತರರೊಂದಿಗೆ ಹಂಚಿಕೊಳ್ಳುವ ಮಾಹಿತಿಯು ನೀವು ಸೇರಿದ ಚಾನಲ್ ಅನ್ನು ಅವಲಂಬಿಸಿರಬಹುದು.
ಬಳಕೆದಾರರು ನಿಮ್ಮ ಮಾಹಿತಿಯನ್ನು ವೀಕ್ಷಿಸಬಹುದಾದ ಮತ್ತು ಬಳಸಬಹುದಾದ ಕೆಲವು ಇತರ ವಿಧಾನಗಳು ಹೀಗಿವೆ, ಆದರೆ ಈ ಪಟ್ಟಿ ಸಂಪೂರ್ಣವಾಗಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ:
  • ಎಲ್ಲಾ ಸದಸ್ಯರು, ಗೋಚರಿಸುವ ಬ್ಯಾಡ್ಜ್ ಅನ್ನು ಹೊಂದಿದ್ದು, ಅದು ಕಾಮೆಂಟ್‌ಗಳು ಮತ್ತು ಚಾಟ್‌ನಲ್ಲಿ ನಿಮ್ಮ ಚಾನಲ್ ಹೆಸರಿನ ಪಕ್ಕದಲ್ಲಿ ಕಾಣಿಸುತ್ತದೆ.
  • ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುವಾಗ ನೀವು ಆ ಚಾನಲ್‌ನ ಸದಸ್ಯರಾದರೆ, ಲೈವ್ ಚಾಟ್‌ನಲ್ಲಿ ಎದ್ದು ಕಾಣಿಸುವ ಹಸಿರು ಬಣ್ಣದಲ್ಲಿ “ಹೊಸ ಸದಸ್ಯರು” ಸಂದೇಶವನ್ನು ಕಳುಹಿಸಲಾಗುತ್ತದೆ. ನಿಮ್ಮ ಪ್ರೊಫೈಲ್ ಚಿತ್ರವನ್ನು ಸಹ ಲೈವ್ ಚಾಟ್‌ನ ಮೇಲ್ಭಾಗದಲ್ಲಿ 5 ನಿಮಿಷಗಳ ಕಾಲ ಪಿನ್ ಮಾಡಲಾಗುತ್ತದೆ ಮತ್ತು ನಿಮ್ಮ ಚಾನಲ್‌ನ ಹೆಸರನ್ನು ತೋರಿಸಬಹುದು.
  • ಕೆಲವು ಚಾನಲ್‌ಗಳು ನಿಮ್ಮ ಮಾಹಿತಿಯನ್ನು ತಮ್ಮ ವೀಡಿಯೊಗಳಲ್ಲಿನ “ಧನ್ಯವಾದಗಳು” ಪಟ್ಟಿಗೆ ಸೇರಿಸಬಹುದು ಅಥವಾ ನಿಮ್ಮ ಮಾಹಿತಿಯನ್ನು ಚಾನಲ್‌ನ ಗುರುತಿಸುವಿಕೆ ಶೆಲ್ಫ್‌ಗೆ ಸೇರಿಸಬಹುದು.
  • ಕೆಲವು ಚಾನಲ್‌ಗಳು ಸೇವೆಯನ್ನು ನೀಡುವ ನಿಟ್ಟಿನಲ್ಲಿ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು (ಉದಾಹರಣೆಗೆ, ಥರ್ಡ್ ಪಾರ್ಟಿ ಕಂಪನಿಯು ಹೋಸ್ಟ್ ಮಾಡಿದ ಚಾಟ್‌ರೂಮ್‌ಗೆ ಸದಸ್ಯರಿಗೆ-ಮಾತ್ರ ಆ್ಯಕ್ಸೆಸ್).

ಥರ್ಡ್-ಪಾರ್ಟಿ ಸೈಟ್ ಅಥವಾ ಆ್ಯಪ್ ಆ್ಯಕ್ಸೆಸ್ ಅನ್ನು ಪರಿಶೀಲಿಸಿ ಮತ್ತು ತೆಗೆದುಹಾಕಿ

ನೀವು ಖಾತೆಯ ಆ್ಯಕ್ಸೆಸ್ ಅನ್ನು ನೀಡಿರುವ ಸೈಟ್ ಅಥವಾ ಆ್ಯಪ್ ಕುರಿತು ನೀವು ನಂಬಿಕೆ ಕಳೆದುಕೊಂಡರೆ, ನಿಮ್ಮ Google ಖಾತೆಗೆ ಅದರ ಆ್ಯಕ್ಸೆಸ್ ಅನ್ನು ನೀವು ತೆಗೆದುಹಾಕಬಹುದು. ತೆಗೆದುಹಾಕಿದ ನಂತರ, ಸೈಟ್ ಅಥವಾ ಆ್ಯಪ್ ನಿಮ್ಮ Google ಖಾತೆಯಿಂದ ಮತ್ತಷ್ಟು ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ. ಅವರ ಬಳಿ ಈಗಾಗಲೇ ಇರುವ ಡೇಟಾವನ್ನು ಅವರು ಅಳಿಸಬೇಕೆಂದು ಸಹ ನೀವು ವಿನಂತಿಸಬಹುದು.\
  1. ನಿಮ್ಮ Google ಖಾತೆಗೆ ಹೋಗಿ.
  2. ಎಡಭಾಗದ ನ್ಯಾವಿಗೇಷನ್ ಪ್ಯಾನೆಲ್‌ನಲ್ಲಿ, ಭದ್ರತೆ ಆಯ್ಕೆಮಾಡಿ.
  3. ಖಾತೆ ಆ್ಯಕ್ಸೆಸ್ ಪ್ಯಾನೆಲ್ ಇರುವ ಥರ್ಡ್ ಪಾರ್ಟಿ ಆ್ಯಪ್‌ಗಳಲ್ಲಿ ಥರ್ಡ್ ಪಾರ್ಟಿ ಆ್ಯಕ್ಸೆಸ್ ಅನ್ನು ನಿರ್ವಹಿಸಿ ಎಂಬುದನ್ನು ಆಯ್ಕೆ ಮಾಡಿ.
  4. ನೀವು ತೆಗೆದುಹಾಕಲು ಬಯಸುವ ಸೈಟ್ ಅಥವಾ ಆ್ಯಪ್ ಅನ್ನು ಆಯ್ಕೆ ಮಾಡಿ.
  5. ಆ್ಯಕ್ಸೆಸ್ ತೆಗೆದುಹಾಕಿ ಎಂಬುದನ್ನು ಆಯ್ಕೆ ಮಾಡಿ.
ಥರ್ಡ್ ಪಾರ್ಟಿ ಸೈಟ್‌ಗಳು ಹಾಗೂ ಆ್ಯಪ್‌ಗಳಿಗಾಗಿ ಖಾತೆಯ ಆ್ಯಕ್ಸೆಸ್ ಅನ್ನು ನಿರ್ವಹಿಸುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಥರ್ಡ್-ಪಾರ್ಟಿ ಸೈಟ್ ಅಥವಾ ಆ್ಯಪ್ ಕುರಿತು ವರದಿ ಮಾಡಿ 

ಒಂದು ಸೈಟ್ ಅಥವಾ ಆ್ಯಪ್ ನಿಮ್ಮ ಡೇಟಾವನ್ನು ದುರುಪಯೋಗ ಮಾಡುತ್ತಿದೆ ಎಂದಾದರೆ, ನೀವು ಅದನ್ನು ವರದಿ ಮಾಡಬಹುದು. ನಿಮ್ಮ ಡೇಟಾದ ದುರುಪಯೋಗದ ಕೆಲವು ಉದಾಹರಣೆಗಳಲ್ಲಿ ಸ್ಪ್ಯಾಮ್ ರಚಿಸುವುದು, ನಿಮ್ಮ ಹಾಗೆ ಸೋಗು ಹಾಕುವುದು ಅಥವಾ ನಿಮ್ಮ ಡೇಟಾವನ್ನು ಹಾನಿಕಾರಕ ವಿಧಾನಗಳಲ್ಲಿ ಬಳಸುವುದು ಒಳಗೊಂಡಿದೆ. ಥರ್ಡ್-ಪಾರ್ಟಿ ಆ್ಯಪ್ ಅನ್ನು ವರದಿ ಮಾಡಲು:
  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. ನಿಮ್ಮ Google ಖಾತೆಯ ನಿಮ್ಮ ಖಾತೆಗೆ ಆ್ಯಕ್ಸೆಸ್ ಹೊಂದಿರುವ ಆ್ಯಪ್‌ಗಳು ವಿಭಾಗಕ್ಕೆ ಹೋಗಿ.
  3. ನೀವು ವರದಿ ಮಾಡಬೇಕಿರುವ ಆ್ಯಪ್ ಅನ್ನು ಆಯ್ಕೆ ಮಾಡಿ ನಂತರ ಈ ಆ್ಯಪ್ ಕುರಿತು ವರದಿ ಮಾಡಿ.
ಥರ್ಡ್ ಪಾರ್ಟಿ ಸೈಟ್‌ಗಳು ಹಾಗೂ ಆ್ಯಪ್‌ಗಳಿಗಾಗಿ ಖಾತೆಯ ಆ್ಯಕ್ಸೆಸ್ ಅನ್ನು ನಿರ್ವಹಿಸುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8695782287941322719
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false