YouTube Shorts ಮಾನಿಟೈಸೇಶನ್ ನೀತಿಗಳು

YouTube Shorts ನಲ್ಲಿ ಆದಾಯದ ಹಂಚಿಕೆಯನ್ನು 1 ಫೆಬ್ರವರಿ 2023 ರಂದು ಪ್ರಾರಂಭಿಸಲಾಗಿದೆ. YouTube ಪಾಲುದಾರ ಕಾರ್ಯಕ್ರಮದ ನಿಯಮಗಳಲ್ಲಿನ ಹೊಸ ಬದಲಾವಣೆಗಳ ಕುರಿತು ಇನ್ನಷ್ಟು ತಿಳಿಯಿರಿ.

ಮಾನಿಟೈಸ್ ಮಾಡುವ ಪಾಲುದಾರರು, Shorts ಫೀಡ್‌ನಲ್ಲಿ ವೀಡಿಯೊಗಳ ನಡುವೆ ವೀಕ್ಷಿಸಲಾದ ಆ್ಯಡ್‌‌ಗಳಿಂದ ಹಣ ಗಳಿಸಬಹುದು. ಈ ಹೊಸ ಆದಾಯ ಹಂಚಿಕೆ ಮಾದರಿಯು YouTube Shorts ಫಂಡ್ ಅನ್ನು ಬದಲಾಯಿಸಿದೆ.

YouTube Shorts ಮಾನಿಟೈಸೇಶನ್‌ಗೆ ಅನ್ವಯಿಸುವ ನೀತಿಗಳು

ನೀವು YouTube ನಲ್ಲಿ ಮಾನಿಟೈಸ್ ಮಾಡುತ್ತಿದ್ದರೆ, ನಿಮ್ಮ ಚಾನಲ್ ಪುನರಾವರ್ತಿತ ಮತ್ತು ಮರುಬಳಕೆಯ ಕಂಟೆಂಟ್ ಕುರಿತಾದ ನಮ್ಮ ನೀತಿಗಳನ್ನು ಒಳಗೊಂಡಂತೆ YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇದು YouTube ನ ಸಮುದಾಯ ಮಾರ್ಗಸೂಚಿಗಳು, ಸೇವಾ ನಿಯಮಗಳು, ಕೃತಿಸ್ವಾಮ್ಯ ಮತ್ತು Google AdSense ಪ್ರೋಗ್ರಾಂ ನೀತಿಗಳನ್ನು ಒಳಗೊಂಡಿದೆ.

Shorts ಜಾಹೀರಾತು ಆದಾಯ ಹಂಚಿಕೆಯನ್ನು ಆನ್ ಮಾಡುವುದು

Shorts ಜಾಹೀರಾತು ಆದಾಯದಲ್ಲಿ ಹಂಚಿಕೆಯನ್ನು ಪ್ರಾರಂಭಿಸಲು, ಮಾನಿಟೈಸ್ ಮಾಡುವ ಪಾಲುದಾರರು Shorts ಮಾನಿಟೈಸೇಶನ್ ಮಾಡ್ಯೂಲ್‌ಗೆ ಸಮ್ಮತಿಸಬೇಕಾಗುತ್ತದೆ – ಈ ನಿಯಮಗಳು Shorts ಫೀಡ್‌ನಲ್ಲಿ ಆ್ಯಡ್‌‌ಗಳು ಮತ್ತು YouTube Premium ನಿಂದ ಹಣ ಗಳಿಸಲು ನಿಮಗೆ ಅವಕಾಶ ನೀಡುತ್ತವೆ. ನೀವು ಸಮ್ಮತಿಸಿದ ದಿನಾಂಕದಿಂದ ಪ್ರಾರಂಭಿಸಿ, ನಿಮ್ಮ ಚಾನಲ್‌ನ ಅರ್ಹ Shorts ವೀಕ್ಷಣೆಗಳಿಗೆ Shorts ಜಾಹೀರಾತು ಆದಾಯ ಹಂಚಿಕೆ ಅನ್ವಯಿಸುತ್ತದೆ. Shorts ಮಾನಿಟೈಸೇಶನ್ ಮಾಡ್ಯುಲ್‌ಗೆ ಸಮ್ಮತಿಸುವ ಮೊದಲು ಸಂಗ್ರಹವಾದ Shorts ವೀಕ್ಷಣೆಗಳು Shorts ಜಾಹೀರಾತು ಆದಾಯದ ಹಂಚಿಕೆಗೆ ಅರ್ಹವಾಗಿರುವುದಿಲ್ಲ.

ಆ್ಯಡ್‌ಗಳಿಗೆ ಸೂಕ್ತವಾದ ಕಂಟೆಂಟ್

ಆ್ಯಡ್‌‌ಗಳ ಮೂಲಕ ಮಾನಿಟೈಸ್ ಮಾಡುವ ಎಲ್ಲಾ ಕಂಟೆಂಟ್ ನಮ್ಮ ಜಾಹೀರಾತುದಾರ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. Shorts ನಲ್ಲಿ, ನಮ್ಮ ಜಾಹೀರಾತುದಾರ-ಸ್ನೇಹಿ ಮಾರ್ಗಸೂಚಿಗಳನ್ನು ಅನುಸರಿಸುವ ಕಂಟೆಂಟ್‌ನ ವೀಕ್ಷಣೆಗಳು ಮಾತ್ರ ಆದಾಯ ಹಂಚಿಕೆಗೆ ಅರ್ಹವಾಗಿರುತ್ತವೆ.

ಅನರ್ಹ Shorts ವೀಕ್ಷಣೆಗಳು

ಪಾವತಿಗಳನ್ನು ಲೆಕ್ಕಾಚಾರ ಮಾಡುವ ಉದ್ದೇಶಗಳಿಗಾಗಿ, ವೀಕ್ಷಣೆಗಳು ಅನರ್ಹವಾಗಿರುವ Shorts ನ ವೀಕ್ಷಣೆಗಳನ್ನು YouTube ಎಣಿಕೆ ಮಾಡುವುದಿಲ್ಲ. ಅನರ್ಹ Shorts ವೀಕ್ಷಣೆಗಳು ಸಂಭವಿಸಬಹುದಾದ ಉದಾಹರಣೆಗಳು: 

  • ಮೂಲವಲ್ಲದ Shorts, ಉದಾಹರಣೆಗೆ ಇತರರ ಚಲನಚಿತ್ರಗಳು ಅಥವಾ ಟಿವಿ ಶೋಗಳಿಂದ ಎಡಿಟ್ ಮಾಡದಿರುವ ಕ್ಲಿಪ್‌ಗಳು, YouTube ಅಥವಾ ಇತರ ಪ್ಲ್ಯಾಟ್‌ಫಾರ್ಮ್‌ನಿಂದ ಇತರ ರಚನೆಕಾರರ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದು ಅಥವಾ ಯಾವುದೇ ಮೂಲ ಕಂಟೆಂಟ್ ಅನ್ನು ಸೇರಿಸದ ಕಂಪೈಲೇಶನ್‌ಗಳು
  • ಸ್ವಯಂಚಾಲಿತ ಕ್ಲಿಕ್ ಅಥವಾ ಸ್ಕ್ರಾಲ್ ಬಾಟ್‌ಗಳ ಹಾಗೆ Shorts ನ ಕೃತಕ ಅಥವಾ ನಕಲಿ ವೀಕ್ಷಣೆಗಳು
  • ನಮ್ಮ ಜಾಹೀರಾತುದಾರ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳೊಂದಿಗೆ ಅಸಮಂಜಸವಾಗಿರುವ Shorts ನ ವೀಕ್ಷಣೆಗಳು.

Shorts ಆದಾಯ ಹಂಚಿಕೆಗೆ ಅರ್ಹವಾಗಿರುವ ಆ್ಯಡ್ ಫಾರ್ಮ್ಯಾಟ್‌ಗಳು

ಹೊಸತು: Shorts ಜಾಹೀರಾತು ಆದಾಯ, YPP ಗೆ ಸೇರಲು ಹೊಸ ಮಾರ್ಗಗಳು ಮತ್ತು Shorts ಸೂಪರ್ ಥ್ಯಾಂಕ್ಸ್!

Shorts ಫೀಡ್‌ನಲ್ಲಿನ ವೀಡಿಯೊಗಳ ನಡುವೆ ವೀಕ್ಷಿಸಲಾದ ಆ್ಯಡ್‌ಗಳ ಮೇಲೆ ಆದಾಯವನ್ನು ಹಂಚಿಕೊಳ್ಳಲಾಗುತ್ತದೆ. Shorts ವೀಕ್ಷಣೆಗಳು, Shorts ಫೀಡ್‌ನಿಂದ ಆ್ಯಡ್ ಆದಾಯ ಹಂಚಿಕೆಯನ್ನು ಪ್ರತ್ಯೇಕವಾಗಿ ಸ್ವೀಕರಿಸುತ್ತವೆ, ಇದು ವೀಕ್ಷಣೆ ಪುಟದಲ್ಲಿರುವ ದೀರ್ಘಾವಧಿಯ ವೀಡಿಯೊ ಮಾನಿಟೈಸೇಶನ್‌ನಿಂದ ಪ್ರತ್ಯೇಕವಾಗಿದೆ.

Shorts ಗಾಗಿ ಜಾಹೀರಾತು ಆದಾಯ ಹಂಚಿಕೆ ಹೇಗೆ ಕೆಲಸ ಮಾಡುತ್ತದೆ

ಹೊಸತು: Shorts ಜಾಹೀರಾತು ಆದಾಯದ ಹಂಚಿಕೆ

Shorts ಮಾನಿಟೈಸೇಶನ್ ಮಾಡ್ಯುಲ್‌ಗೆ ಸಮ್ಮತಿಸಿರುವ, ಮಾನಿಟೈಸ್ ಮಾಡುತ್ತಿರುವ ಪಾಲುದಾರರು ಮಾತ್ರ Shorts ನಿಂದ ಆದಾಯ ಹಂಚಿಕೆಯನ್ನು ಗಳಿಸಬಹುದು.

Shorts ಜಾಹೀರಾತು ಆದಾಯ ಹಂಚಿಕೆ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ನಾಲ್ಕು ಹಂತಗಳಿವೆ:

  1. Shorts ಫೀಡ್ ಜಾಹೀರಾತು ಆದಾಯವನ್ನು ಪೂಲ್ ಮಾಡುವುದು. ಪ್ರತಿ ತಿಂಗಳು, Shorts ಫೀಡ್‌ನಲ್ಲಿನ ವೀಡಿಯೊಗಳ ನಡುವೆ ರನ್ ಆಗುವ ಆ್ಯಡ್‌ಗಳಿಂದ ಬರುವ ಆದಾಯವನ್ನು ಒಟ್ಟಿಗೆ ಸೇರಿಸಲಾಗುತ್ತದೆ ಮತ್ತು ರಚನೆಕಾರರಿಗೆ ಪ್ರತಿಫಲ ಒದಗಿಸಲು ಹಾಗೂ ಸಂಗೀತ ಪರವಾನಗಿಯ ವೆಚ್ಚವನ್ನು ಭರಿಸಲು ಸಹಾಯ ಮಾಡುವುದಕ್ಕಾಗಿ ಇದನ್ನು ಬಳಸಲಾಗುತ್ತದೆ. 
     
  2. ಕ್ರಿಯೇಟರ್ ಪೂಲ್ ಅನ್ನು ಲೆಕ್ಕಾಚಾರ ಮಾಡಿ. ಮಾನಿಟೈಸ್ ಮಾಡುವ ರಚನೆಕಾರರು ಅಪ್‌ಲೋಡ್ ಮಾಡಿದ Shorts ನಾದ್ಯಂತ ವೀಕ್ಷಣೆಗಳು ಮತ್ತು ಸಂಗೀತದ ಬಳಕೆಯ ಆಧಾರದ ಮೇಲೆ Shorts ಫೀಡ್ ಜಾಹೀರಾತು ಆದಾಯವನ್ನು ಕ್ರಿಯೇಟರ್ ಪೂಲ್‌ಗೆ ನಿಯೋಜಿಸಲಾಗುತ್ತದೆ. 
    • ಮಾನಿಟೈಸ್ ಮಾಡುವ ರಚನೆಕಾರರು ಯಾವುದೇ ಸಂಗೀತವಿಲ್ಲದೆ Short ಅನ್ನು ಅಪ್‌ಲೋಡ್ ಮಾಡಿದರೆ, ಅದರ ವೀಕ್ಷಣೆಗಳೊಂದಿಗೆ ಸಂಯೋಜಿತವಾಗಿರುವ ಎಲ್ಲಾ ಆದಾಯವು ಕ್ರಿಯೇಟರ್ ಪೂಲ್‌ಗೆ ಹೋಗುತ್ತದೆ.
    • ಮಾನಿಟೈಸ್ ಮಾಡುವ ರಚನೆಕಾರರು ಸಂಗೀತವಿರುವ Short ಅನ್ನು ಅಪ್‌ಲೋಡ್ ಮಾಡಿದರೆ, ಬಳಸಲಾದ ಟ್ರ್ಯಾಕ್‌ಗಳ ಸಂಖ್ಯೆಯನ್ನು ಆಧರಿಸಿ, ಅದರ ವೀಕ್ಷಣೆಗಳೊಂದಿಗೆ ಸಂಯೋಜಿತವಾಗಿರುವ ಆದಾಯವನ್ನು YouTube, ಕ್ರಿಯೇಟರ್ ಪೂಲ್ ಮತ್ತು ಸಂಗೀತ ಪಾಲುದಾರರ ನಡುವೆ ವಿಭಜಿಸುತ್ತದೆ.
ಉದಾಹರಣೆಗೆ, ಮಾನಿಟೈಸ್ ಮಾಡುವ ರಚನೆಕಾರರು 1 ಟ್ರ್ಯಾಕ್ ಇರುವ Short ಅನ್ನು ಅಪ್‌ಲೋಡ್ ಮಾಡಿದರೆ, ಅದರ ವೀಕ್ಷಣೆಗಳೊಂದಿಗೆ ಸಂಯೋಜಿತವಾಗಿರುವ ಆದಾಯದ ಅರ್ಧದಷ್ಟು ಭಾಗವನ್ನು ಕ್ರಿಯೇಟರ್ ಪೂಲ್‌ಗೆ ನಿಯೋಜಿಸಲಾಗುತ್ತದೆ ಮತ್ತು ಉಳಿದ ಅರ್ಧ ಭಾಗವನ್ನು ಸಂಗೀತ ಪರವಾನಗಿಯ ವೆಚ್ಚವನ್ನು ಭರಿಸಲು ಬಳಸಲಾಗುತ್ತದೆ. Short ನಲ್ಲಿ 2 ಸಂಗೀತ ಟ್ರ್ಯಾಕ್‌ಗಳಿದ್ದರೆ, ಅದರ ವೀಕ್ಷಣೆಗಳೊಂದಿಗೆ ಸಂಯೋಜಿತವಾಗಿರುವ ಆದಾಯದ ಮೂರನೇ ಒಂದು ಭಾಗವನ್ನು ಕ್ರಿಯೇಟರ್ ಪೂಲ್‌ಗೆ ನಿಯೋಜಿಸಲಾಗುತ್ತದೆ ಮತ್ತು ಉಳಿದ ಮೂರನೇ ಎರಡರಷ್ಟು ಭಾಗವನ್ನು ಸಂಗೀತ ಪರವಾನಗಿಯ ವೆಚ್ಚವನ್ನು ಭರಿಸಲು ಬಳಸಲಾಗುತ್ತದೆ. 
  1. ಕ್ರಿಯೇಟರ್ ಪೂಲ್ ಅನ್ನು ನಿಯೋಜಿಸಿ. ಕ್ರಿಯೇಟರ್ ಪೂಲ್‌ನಲ್ಲಿನ ಒಟ್ಟಾರೆ ಮೊತ್ತದಿಂದ, ಪ್ರತಿ ದೇಶದಲ್ಲಿನ, ಮಾನಿಟೈಸ್ ಮಾಡುವ ರಚನೆಕಾರರ Shorts ನ ಒಟ್ಟು ವೀಕ್ಷಣೆಗಳ ಪಾಲನ್ನು ಆಧರಿಸಿ ಮಾನಿಟೈಸ್ ಮಾಡುವ ರಚನೆಕಾರರಿಗೆ ಆದಾಯವನ್ನು ವಿತರಿಸಲಾಗುತ್ತದೆ. ಉದಾಹರಣೆಗೆ, ಮಾನಿಟೈಸ್ ಮಾಡುವ ರಚನೆಕಾರರು ಅಪ್‌ಲೋಡ್ ಮಾಡಿದ ಎಲ್ಲಾ ಅರ್ಹ Shorts ವೀಕ್ಷಣೆಗಳಲ್ಲಿ 5% ರಷ್ಟನ್ನು ರಚನೆಕಾರರು ಪಡೆದರೆ, ಅವರಿಗೆ ಕ್ರಿಯೇಟರ್ ಪೂಲ್‌ನಲ್ಲಿ ಆದಾಯದ 5% ಅನ್ನು ನಿಯೋಜಿಸಲಾಗುತ್ತದೆ.
     
  2. ಆದಾಯ ಹಂಚಿಕೆಯನ್ನು ಅನ್ವಯಿಸಿ. ಮಾನಿಟೈಸ್ ಮಾಡುವ ರಚನೆಕಾರರು, ಸಂಗೀತವನ್ನು ಬಳಸಿದ್ದರೂ ಅಥವಾ ಬಳಸದೆ ಇದ್ದರೂ ತಮ್ಮ ನಿಯೋಜಿತ ಆದಾಯದ 45% ಅನ್ನು ಉಳಿಸಿಕೊಳ್ಳುತ್ತಾರೆ.

ಕ್ರಿಯೇಟರ್ ಪೂಲ್‌ನಲ್ಲಿ ಏನು ಒಳಗೊಂಡಿರುವುದಿಲ್ಲ:

  • Shorts ಮಾನಿಟೈಸೇಶನ್ ಮಾಡ್ಯುಲ್ ಅನ್ನು ಇನ್ನೂ ಸಮ್ಮತಿಸದ ಅಥವಾ ತಮ್ಮ Shorts ಅನ್ನು ಮಾನಿಟೈಸ್ ಮಾಡಲು ಇನ್ನೂ ಅರ್ಹತೆ ಇಲ್ಲದ ರಚನೆಕಾರರು ಅಪ್‌ಲೋಡ್ ಮಾಡಿದ Shorts ವೀಕ್ಷಣೆಗಳಿಗೆ ಸಂಬಂಧಿಸಿದ ಆದಾಯ. ಈ ಆದಾಯವನ್ನು ಸಂಗೀತದ ಪರವಾನಗಿಯ ವೆಚ್ಚಗಳನ್ನು ಸರಿದೂಗಿಸಲು ಬಳಸಲಾಗುತ್ತದೆ ಮತ್ತು/ಅಥವಾ YouTube ಉಳಿಸಿಕೊಳ್ಳುತ್ತದೆ. 
  • ಸಂಗೀತ ಪಾಲುದಾರರು ಅಪ್‌ಲೋಡ್ ಮಾಡಿರುವ Shorts ವೀಕ್ಷಣೆಗಳೊಂದಿಗೆ ಸಂಯೋಜಿತವಾಗಿರುವ ಆದಾಯ.
  • ಅನರ್ಹವೆಂದು ನಿರ್ಧರಿಸಲಾದ Shorts ವೀಕ್ಷಣೆಗಳೊಂದಿಗೆ ಸಂಯೋಜಿತವಾಗಿರುವ ಆದಾಯ.
  • Short ಅನ್ನು ವೀಕ್ಷಿಸುವ ಮೊದಲು Shorts ಫೀಡ್ ಅನ್ನು ತೆರೆಯುವಾಗ ತೋರಿಸಲಾದ (ಉದಾ. YouTube Shorts ಮಾಸ್ಟ್‌ಹೆಡ್) ಯಾವುದೇ ಆ್ಯಡ್‌ಗಳೊಂದಿಗೆ ಸಂಯೋಜಿತವಾಗಿರುವ ಆದಾಯ.
  • Shorts ಪ್ಲೇಯರ್‌ನಲ್ಲಿ ನ್ಯಾವಿಗೇಷನಲ್ ಪುಟಗಳಲ್ಲಿ ತೋರಿಸಿರುವ ಯಾವುದೇ ಆ್ಯಡ್‌ಗಳೊಂದಿಗೆ ಸಂಯೋಜಿತವಾಗಿರುವ ಆದಾಯ.

ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳಿ

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಕಾಲ್ಪನಿಕ ಉದಾಹರಣೆಯನ್ನು ನೋಡೋಣ.

ಕಾಲ್ಪನಿಕ ಉದಾಹರಣೆ

ಮಾನಿಟೈಸ್ ಮಾಡುವ ರಚನೆಕಾರರಾಗಿ, ನೀವು 1 ಸಂಗೀತ ಟ್ರ್ಯಾಕ್ ಅನ್ನು ಬಳಸುವ Short ಅನ್ನು ಅಪ್‌ಲೋಡ್ ಮಾಡುತ್ತೀರಿ ಎಂದು ಭಾವಿಸೋಣ. ಈ ತಿಂಗಳು A ಎಂಬ ದೇಶದಲ್ಲಿ ನಿಮ್ಮ Short ಎಷ್ಟು ಗಳಿಸುತ್ತದೆ ಎಂಬುದನ್ನು ನಾವು ಹೇಗೆ ಲೆಕ್ಕ ಹಾಕುತ್ತೇವೆ ಎಂಬುದು ಇಲ್ಲಿದೆ.

  • A ದೇಶದಲ್ಲಿ ಒಟ್ಟು 100 ಮಿಲಿಯನ್ Shorts ವೀಕ್ಷಣೆಗಳಿವೆ ಮತ್ತು ಎಲ್ಲಾ ವೀಕ್ಷಣೆಗಳು ಮಾನಿಟೈಸ್ ಮಾಡುವ ರಚನೆಕಾರರು ಅಪ್‌ಲೋಡ್ ಮಾಡಿದ Shorts ನಲ್ಲಿವೆ.
  • Shorts ಫೀಡ್‌ನಲ್ಲಿ Shorts ನಡುವೆ ಪ್ಲೇ ಆಗುವ ಆ್ಯಡ್‌ಗಳಿಂದ $100,000 ಗಳಿಸಲಾಗಿದೆ.
  • ಈ Shorts ನಲ್ಲಿ 20% 1 ಸಂಗೀತ ಟ್ರ್ಯಾಕ್ ಅನ್ನು ಬಳಸುತ್ತವೆ, ಆದ್ದರಿಂದ ಕ್ರಿಯೇಟರ್ ಪೂಲ್ $90,000 ಆಗಿದೆ ಮತ್ತು $10,000 ಅನ್ನು ಸಂಗೀತ ಪರವಾನಗಿ ವೆಚ್ಚವನ್ನು ಭರಿಸಲು ಬಳಸಲಾಗುತ್ತದೆ.
  • ನಿಮ್ಮ Short ಅನ್ನು 1 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ, ಆದ್ದರಿಂದ ನಿಮಗೆ ಕ್ರಿಯೇಟರ್ ಪೂಲ್‌ನ 1% ಅಥವಾ $900 ಅನ್ನು ನಿಯೋಜಿಸಲಾಗಿದೆ. ನಿಮ್ಮ ಸಂಗೀತ ಟ್ರ್ಯಾಕ್ ಬಳಕೆಯಿಂದ ಕ್ರಿಯೇಟರ್ ಪೂಲ್‌ನ ನಿಮ್ಮ ನಿಯೋಜನೆಯ ಮೇಲೆ ಪರಿಣಾಮ ಬೀರುವುದಿಲ್ಲ.
  • ನಂತರ 45% ಆದಾಯದ ಪಾಲನ್ನು ನಿಮ್ಮ ನಿಯೋಜನೆಯಲ್ಲಿ ಅನ್ವಯಿಸಲಾಗುತ್ತದೆ ಮತ್ತು ನೀವು A ದೇಶದಲ್ಲಿರುವ ನಿಮ್ಮ Shorts ವೀಕ್ಷಣೆಗಳಿಗಾಗಿ $405 ಗಳಿಸುತ್ತೀರಿ.

Shorts ನಲ್ಲಿ ಥರ್ಡ್ ಪಾರ್ಟಿ ಕಂಟೆಂಟ್‌ನ ಬಳಕೆ

ಕೆಲವು ಸಂದರ್ಭಗಳಲ್ಲಿ, ಥರ್ಡ್ ಪಾರ್ಟಿ ಕಂಟೆಂಟ್ ಅಥವಾ ರೀಮಿಕ್ಸ್ ಮಾಡಲಾದ ಕಂಟೆಂಟ್ ಅನ್ನು Short ಒಳಗೊಂಡಿರುವಾಗ, ಕ್ರಿಯೇಟರ್ ಪೂಲ್ ಮತ್ತು ಮಾನಿಟೈಸ್ ಮಾಡುವ ರಚನೆಕಾರರ ಆದಾಯ ಹಂಚಿಕೊಳ್ಳುವಿಕೆಯನ್ನು ಲೆಕ್ಕಾಚಾರ ಮಾಡುವ ಉದ್ದೇಶಗಳಿಗಾಗಿ Short ಗೆ ನಿಯೋಜಿಸಲಾದ ವೀಕ್ಷಣೆಗಳನ್ನು, ಅಪ್‌ಲೋಡ್ ಮಾಡಿದವರು ಮತ್ತು ಯಾವುದೇ ಥರ್ಡ್ ಪಾರ್ಟಿ ಹಕ್ಕುಗಳನ್ನು ಹೊಂದಿರುವವರ (Short ನಲ್ಲಿ ಬಳಸಲಾದ ಇತರ ಕಂಟೆಂಟ್‌ನ ಮಾಲೀಕರು) ನಡುವೆ ವಿಭಜಿಸಲಾಗುತ್ತದೆ. ಇದು ಹೇಗೆ ಸಂಭವಿಸುತ್ತದೆ ಎಂಬುದನ್ನು ಕೆಳಗಿನ ನೀತಿಗಳು ವಿವರಿಸುತ್ತವೆ. ನಾವು ಈ ನೀತಿಗಳನ್ನು ಅಪ್‌ಡೇಟ್ ಮಾಡಬಹುದು ಮತ್ತು ಯಾವುದೇ ಬದಲಾವಣೆಗಳಿದ್ದರೆ ನಿಮಗೆ ತಿಳಿಸುತ್ತೇವೆ.

  • ಥರ್ಡ್ ಪಾರ್ಟಿ ಕಂಟೆಂಟ್‌ನ ಬಳಕೆಯು ಕ್ರಿಯೇಟರ್ ಪೂಲ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಕ್ರಿಯೇಟರ್ ಪೂಲ್‌ನ ಮೊತ್ತವನ್ನು ಲೆಕ್ಕಾಚಾರ ಮಾಡಿದಾಗ, YouTube ನ ಸಂಗೀತ ಉದ್ಯಮ ಪಾಲುದಾರರು ಲಭ್ಯಗೊಳಿಸಿದ ಅಥವಾ ಡ್ರೀಮ್ ಟ್ರ್ಯಾಕ್ ಜನರೇಟ್ ಮಾಡಿದಸಂಗೀತ ಕಂಟೆಂಟ್ ಅನ್ನು ಮಾತ್ರ Short ಗೆ ಕೊಡುಗೆ ನೀಡುವುದು ಎಂಬುದಾಗಿ ಕ್ರೆಡಿಟ್ ನೀಡಲಾಗುತ್ತದೆ. ಇದರರ್ಥ ಸಂಗೀತದ ಕಂಟೆಂಟ್ ಅನ್ನು Short ನಲ್ಲಿ ಬಳಸಿದಾಗ ಮಾತ್ರ ಅದು ವೀಕ್ಷಣೆಗಳ ಪ್ರಮಾಣವನ್ನು ಮತ್ತು ಕ್ರಿಯೇಟರ್ ಪೂಲ್‌ಗೆ ನಿಯೋಜಿಸಲಾದ ಸಂಬಂಧಿತ ಆದಾಯವನ್ನು ಕಡಿಮೆ ಮಾಡುತ್ತದೆ. ಕಂಟೆಂಟ್ ಮೇಲೆ Content ID ಮಾನಿಟೈಸ್ ನೀತಿಯನ್ನು ಸೆಟ್ ಮಾಡಿದಾಗಲೂ ಸಹ ಈ ಸಮಯದಲ್ಲಿ Short ಗೆ ಕೊಡುಗೆಯನ್ನು ನೀಡುತ್ತಿರುವಂತೆ ಥರ್ಡ್ ಪಾರ್ಟಿ ಕಂಟೆಂಟ್‌ನ ಯಾವುದೇ ವರ್ಗಕ್ಕೆ ಮನ್ನಣೆ ನೀಡಲಾಗುವುದಿಲ್ಲ. ಆದರೆ, ನಾವು ಕಂಟೆಂಟ್‌ನ ಇತರ ವರ್ಗಗಳಿಗೆ ಸಂಬಂಧಿಸಿದಂತೆ ನಮ್ಮ ಮಾನಿಟೈಸೇಶನ್ ಮಾಡೆಲ್ ಅನ್ನು ಅಭಿವೃದ್ಧಿಪಡಿಸುವ ಆರಂಭಿಕ ಹಂತದಲ್ಲಿದ್ದೇವೆ. 
    • ಸಂಗೀತದ ಕಂಟೆಂಟ್ ಅನ್ನು Short ನಲ್ಲಿ ಬಳಸಿದಾಗ ಕ್ರಿಯೇಟರ್ ಪೂಲ್ ಅನ್ನು ಲೆಕ್ಕಾಚಾರ ಮಾಡಲು ವೀಕ್ಷಣೆಗಳು ಮತ್ತು ಸಂಯೋಜಿತ ಆದಾಯವನ್ನು ಹೇಗೆ ವಿಭಜಿಸಲಾಗುತ್ತದೆ ಎಂಬುದನ್ನು ಮೇಲಿನ ಉದಾಹರಣೆಗಳು ತೋರಿಸುತ್ತವೆ.
  • ಥರ್ಡ್ ಪಾರ್ಟಿ ಕಂಟೆಂಟ್‌ನ ಬಳಕೆಯು ಕ್ರಿಯೇಟರ್ ಪೂಲ್‌ನ ನಿಯೋಜನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಮಾನಿಟೈಸ್ ಮಾಡುವ ರಚನೆಕಾರರಿಗೆ ಕ್ರಿಯೇಟರ್ ಪೂಲ್‌ನಿಂದ ಅವರ ಪಾಲನ್ನು ಪಾವತಿಸುವಾಗ, Short ನಲ್ಲಿ ಯಾವುದೇ ಸಂಗೀತವನ್ನು (ಡ್ರೀಮ್ ಟ್ರ್ಯಾಕ್ ಜನರೇಟ್ ಮಾಡಿದ ಸಂಗೀತವನ್ನು ಒಳಗೊಂಡು) ಬಳಸಲಾಗಿದೆಯೇ ಎಂಬುದನ್ನು ಲೆಕ್ಕಿಸದೆ ಮಾನಿಟೈಸ್ ಮಾಡುವ ಪ್ರತಿ ರಚನೆಕಾರರಿಗೆ ತಮ್ಮ Shorts ನ ಒಟ್ಟು ವೀಕ್ಷಣೆಗಳ ಸಂಖ್ಯೆಯ 100% ಅನ್ನು ನಿಯೋಜಿಸಲಾಗುತ್ತದೆ. ಇದರ ಪರಿಣಾಮವಾಗಿ, Short ನಲ್ಲಿ ಸಂಗೀತವನ್ನು ಬಳಸುವುದು ಕ್ರಿಯೇಟರ್ ಪೂಲ್‌ನಿಂದ ರಚನೆಕಾರರ ನಿಯೋಜನೆ ಅಥವಾ ಅವರ ಆದಾಯ ಹಂಚಿಕೊಳ್ಳುವಿಕೆಯ ದರದ ಮೇಲೆ ಪರಿಣಾಮ ಬೀರುವುದಿಲ್ಲ.

Shorts ಗಾಗಿ YouTube Premium ಸಬ್‌ಸ್ಕ್ರಿಪ್ಶನ್ ಆದಾಯ ಹಂಚಿಕೆ

YouTube Premium ಎಂಬುದು ಪಾವತಿಸಿದ ಸಬ್‌ಸ್ಕ್ರಿಪ್ಶನ್ ಆಯ್ಕೆಯಾಗಿದ್ದು, ಇದು ಬಳಕೆದಾರರಿಗೆ ಆ್ಯಡ್-ಫ್ರೀ ಕಂಟೆಂಟ್, ಹಿನ್ನೆಲೆ ಪ್ಲೇಬ್ಯಾಕ್, ಡೌನ್‌ಲೋಡ್‌ಗಳು ಮತ್ತು YouTube Music ಆ್ಯಪ್‌ನ ಪ್ರೀಮಿಯಂ ಆ್ಯಕ್ಸೆಸ್ ಅನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಈ ಕೊಡುಗೆಯು Shorts ನಲ್ಲಿನ ವೀಕ್ಷಣೆಗಳಿಗೂ ಅನ್ವಯಿಸುತ್ತದೆ. 

YouTube Premium ನ 45% ನಿವ್ವಳ ಆದಾಯವನ್ನು YouTube ಪಾವತಿಸುತ್ತದೆ, ಇದನ್ನು Shorts ಗಾಗಿ ಮಾನಿಟೈಸ್ ಮಾಡುವ ರಚನೆಕಾರರಿಗೆ ನಿಯೋಜಿಸಲಾಗಿದೆ. YouTube Premium ಆದಾಯಗಳ ಒಂದು ಭಾಗವನ್ನು ಸಂಗೀತ ಪರವಾನಗಿ ವೆಚ್ಚವನ್ನು ಭರಿಸುವುದಕ್ಕೆ ಸಹಾಯ ಮಾಡಲು ನಿಯೋಜಿಸಲಾಗಿದೆ. ಪ್ರತಿ ರಚನೆಕಾರರ ಪಾವತಿಗಳು ಪ್ರತಿ ದೇಶದೊಳಗಿನ ಅವರ ಸಬ್‌ಸ್ಕ್ರಿಪ್ಶನ್ Shorts ವೀಕ್ಷಣೆಗಳ ಪಾಲನ್ನು ಆಧರಿಸಿವೆ.

ನಿಮ್ಮ Shorts ಫೀಡ್ ಜಾಹೀರಾತು ಆದಾಯವನ್ನು ಎಲ್ಲಿ ನೋಡಬೇಕು

ಲಭ್ಯವಿರುವಾಗ, ಅಥವಾ ನೀವು Shorts ಆ್ಯಡ್‌ಗಳೊಂದಿಗೆ ಮಾನಿಟೈಸ್ ಮಾಡಲು ಪ್ರಾರಂಭಿಸುವ ದಿನದಿಂದ YouTube Analytics, ಇತರ ಪರ್ಫಾರ್ಮೆನ್ಸ್ ಮೆಟ್ರಿಕ್‌ಗಳೊಂದಿಗೆ ದೈನಂದಿನ ಅಂದಾಜು Shorts ಫೀಡ್ ಜಾಹೀರಾತು ಆದಾಯವನ್ನು ಪ್ರದರ್ಶಿಸಲು ಪ್ರಾರಂಭಿಸುತ್ತದೆ. ನಿಮ್ಮ YouTube ಆದಾಯವನ್ನು ಪರಿಶೀಲಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಪಾವತಿಯ ಮಿತಿಗಳು ಮತ್ತು ಇತರ YouTube ಗಾಗಿ AdSense ವಿವರಗಳು ಅನ್ವಯಿಸುತ್ತವೆ – YouTube ಗಾಗಿ AdSense ಕುರಿತು ಇನ್ನಷ್ಟು ತಿಳಿಯಿರಿ.

Studio ಕಂಟೆಂಟ್ ಮ್ಯಾನೇಜರ್

Studio ಕಂಟೆಂಟ್ ಮ್ಯಾನೇಜರ್ ಬಳಕೆದಾರರಿಗಾಗಿ, ಡೌನ್‌ಲೋಡ್ ಮಾಡಬಹುದಾದ ವರದಿಗಳು 2023 ರ ಮಾರ್ಚ್ ತಿಂಗಳ ಮಧ್ಯದೊಳಗೆ ಸಂಗೀತೇತರ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ. ಈ ವರದಿಗಳು, ಸಂಬಂಧಿತ ಪಾಲುದಾರರು ಅಪ್‌ಲೋಡ್ ಮಾಡಿದ ಯಾವುದೇ ಮಾನಿಟೈಸ್ ಮಾಡುವ Shorts ಗಾಗಿ ದಿನಾಂಕ ಮತ್ತು ದೇಶ/ಪ್ರದೇಶದ ಪ್ರಕಾರ ವಿಭಾಗೀಕರಿಸಲಾದ ಆದಾಯದ ವಿವರಗಳನ್ನು ಒಳಗೊಂಡಿರುತ್ತವೆ.

ನಿಮ್ಮ Shorts ಪರ್ಫಾರ್ಮೆನ್ಸ್ ಕುರಿತು ಇನ್ನಷ್ಟು ತಿಳಿಯಲು ಬಯಸುವಿರಾ? YouTube Analytics ಗೆ ಸಂಬಂಧಿಸಿದ ನಮ್ಮ ರಚನೆಕಾರರ ಸಲಹೆಗಳನ್ನು ನೋಡಿ!

YouTube Shorts ಮಾನಿಟೈಸೇಶನ್ ಕುರಿತು ಇನ್ನಷ್ಟು ತಿಳಿಯಿರಿ

Shorts ಜಾಹೀರಾತು ಆದಾಯವನ್ನು ಏಕೆ ಪೂಲ್ ಮಾಡಲಾಗುತ್ತಿದೆ?

Shorts, ದೀರ್ಘಾವಧಿಯ ವೀಡಿಯೊಗಿಂತ ವಿಭಿನ್ನವಾದ ಆ್ಯಡ್ ಫಾರ್ಮ್ಯಾಟ್ ಅನ್ನು ಬಳಸುತ್ತದೆ, ನಾವು ಆದಾಯ ಹಂಚಿಕೆಗೆ ಅನನ್ಯ ವಿಧಾನವನ್ನು ಬಳಸುವ ಅಗತ್ಯವಿದೆ. ಆದಾಯವನ್ನು ಪೂಲ್ ಮಾಡುವ ಮೂಲಕ ಮತ್ತು ಅದನ್ನು ವೀಕ್ಷಣೆಗಳ ಪಾಲಿನ ಆಧಾರದ ಮೇಲೆ ವಿತರಿಸುವ ಮೂಲಕ, ತಮ್ಮ ವೀಡಿಯೊದ ಪಕ್ಕದಲ್ಲಿ ಆ್ಯಡ್ ಹೊಂದಿರುವವರಿಗೆ ಮಾತ್ರವಲ್ಲದೇ, ನಾವು Shorts ಅನುಭವವನ್ನು ರೂಪಿಸುವ ಎಲ್ಲಾ ಮಾನಿಟೈಸ್ ಮಾಡುವ ರಚನೆಕಾರರಿಗೆ ರಿವಾರ್ಡ್ ನೀಡುವ ಗುರಿಯನ್ನು ಹೊಂದಿದ್ದೇವೆ. ಹೆಚ್ಚುವರಿ ಪ್ರಯೋಜನವಾಗಿ, ಈ ಮಾಡೆಲ್ ಸಂಗೀತ ಪರವಾನಗಿ ನೀಡುವಿಕೆಯ ಸಂಕೀರ್ಣತೆಗಳನ್ನು ಸರಳಗೊಳಿಸುತ್ತದೆ, ರಚನೆಕಾರರು ಸಂಗೀತದ ಬಳಕೆಯಿಂದಾಗಿ ಕಡಿಮೆ ಗಳಿಕೆಯ ಬಗ್ಗೆ ಚಿಂತಿಸದೆ ತಮ್ಮ ಸೃಜನಶೀಲ ದೃಷ್ಟಿಯನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ.

ರಚನೆಕಾರರು ನಿಜವಾಗಿಯೂ Shorts ಆದಾಯದ 45% ರಷ್ಟನ್ನು ಉಳಿಸಿಕೊಳ್ಳುತ್ತಾರೆಯೇ?

ಪ್ರತಿ ತಿಂಗಳು, Shorts ಫೀಡ್‌ನಲ್ಲಿನ ವೀಡಿಯೊಗಳ ನಡುವೆ ಗೋಚರಿಸುವ ಆ್ಯಡ್‌ಗಳಿಂದ ಬರುವ ಆದಾಯವನ್ನು ಪೂಲ್ ಮಾಡಲಾಗುತ್ತದೆ ಮತ್ತು Shorts ರಚನೆಕಾರರಿಗೆ ರಿವಾರ್ಡ್ ನೀಡಲು ಹಾಗೂ ಸಂಗೀತ ಪರವಾನಗಿ ವೆಚ್ಚವನ್ನು ಭರಿಸುವುದಕ್ಕೆ ಬಳಸಲಾಗುತ್ತದೆ. ರಚನೆಕಾರರಿಗೆ ನಿಯೋಜಿಸಲಾದ ಒಟ್ಟಾರೆ ಮೊತ್ತದಿಂದ (ಕ್ರಿಯೇಟರ್ ಪೂಲ್ ಎಂದೂ ಕರೆಯುತ್ತಾರೆ), ಅವರು ತಮ್ಮ Shorts ನಲ್ಲಿ ಸಂಗೀತವನ್ನು ಬಳಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ 45% ರಷ್ಟು ಆದಾಯವನ್ನು ಇಟ್ಟುಕೊಳ್ಳುತ್ತಾರೆ.

ನಿಮ್ಮ ಪ್ರಕಾರ, ನಿರ್ದಿಷ್ಟವಾಗಿ "ಸಂಗೀತ" ಎಂಬುದರ ಅರ್ಥವೇನು?

Shorts ಗೆ ಸಂಬಂಧಿಸಿದಂತೆ “ಸಂಗೀತ” ಎನ್ನುವುದು YouTube ನ ಸಂಗೀತ ಉದ್ಯಮದ ಪಾಲುದಾರರು ಲಭ್ಯಗೊಳಿಸಿದ ಅಥವಾ ಕ್ಲೇಮ್ ಮಾಡಿದ ಕಂಟೆಂಟ್ ಅನ್ನು ಉಲ್ಲೇಖಿಸುತ್ತದೆ. ಇದು ನಿಜವಾದ ಸಂಗೀತ ಆಡಿಯೊ ಅಥವಾ ಟ್ರ್ಯಾಕ್‌ಗಳು, ಸಂಗೀತ ವೀಡಿಯೊಗಳು ಅಥವಾ ಕಲಾವಿದರ ಸಂದರ್ಶನಗಳಂತಹ ಇತರ ಸಂಗೀತ ಕಂಟೆಂಟ್ ಅನ್ನು ಒಳಗೊಂಡಿರಬಹುದು. ಡ್ರೀಮ್ ಟ್ರ್ಯಾಕ್ ಜನರೇಟ್ ಮಾಡಿದ ಸಂಗೀತ ಕಂಟೆಂಟ್ ಅನ್ನು ಸಹ ಇದು ಒಳಗೊಂಡಿದೆ.

ನಾನು ಈಗಲೂ Shorts ಫಂಡ್‌ನ ಮೂಲಕ ಹಣವನ್ನು ಗಳಿಸಬಹುದೇ?
ಇಲ್ಲ, 1 ಫೆಬ್ರವರಿ 2023 ರಂದು Shorts ಜಾಹೀರಾತು ಆದಾಯ ಹಂಚಿಕೆಯನ್ನು ಪ್ರಾರಂಭಿಸಿದಾಗಿನಿಂದ, ರಚನೆಕಾರರು Shorts ಫಂಡ್‌ನ ಮೂಲಕ ಹಣವನ್ನು ಗಳಿಸುವುದಿಲ್ಲ. ನಮ್ಮ Shorts ಫಂಡ್‌ನ ಬಹುತೇಕ ಸ್ವೀಕೃತಿದಾರರು ಈ ಹೊಸ ಆದಾಯ ಹಂಚಿಕೆ ಮಾಡೆಲ್‌ನಿಂದ ಹೆಚ್ಚು ಆದಾಯ ಗಳಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಮತ್ತು ಇದು Shorts ಫಂಡ್ ಅನ್ನು ಬದಲಾಯಿಸುತ್ತದೆ. ಜನವರಿಯ ಚಟುವಟಿಕೆಗೆ ಸಂಬಂಧಿಸಿದಂತೆ ಅಂತಿಮ Shorts ಫಂಡ್ ಆಹ್ವಾನಗಳು ಫೆಬ್ರವರಿ 2023 ರ ಮಧ್ಯದಲ್ಲಿ ಹೊರಬರುತ್ತವೆ, ಮಾರ್ಚ್‌ನಲ್ಲಿ (ಪಾವತಿಯ ಮಿತಿಗಳು ಮತ್ತು ಅವಶ್ಯಕತೆಗಳಿಗೆ ಒಳಪಟ್ಟ ಹಾಗೆ) ಪಾವತಿಗಳನ್ನು ಮಾಡಲಾಗುತ್ತದೆ.

ನನ್ನ Shorts, Shorts ಫೀಡ್‌ನಲ್ಲಿವೆ, ಆದರೆ ನಾನು ಆದಾಯವನ್ನು ಗಳಿಸುತ್ತಿಲ್ಲ. YPP ಯಲ್ಲಿರದೇ ನಾನು ಆ ಆ್ಯಡ್‌ಗಳಿಂದ ಹಣವನ್ನು ಗಳಿಸಬಹುದೇ?

ಇಲ್ಲ. Shorts ಮಾನಿಟೈಸೇಶನ್ ಮಾಡ್ಯುಲ್ ಅನ್ನು ಸಮ್ಮತಿಸಿರುವ ಮಾನಿಟೈಸ್ ಮಾಡುವ ಪಾಲುದಾರರು ಮಾತ್ರ Shorts ನಿಂದ ಆ್ಯಡ್ ಮತ್ತು YouTube Premium ಆದಾಯವನ್ನು ಗಳಿಸಬಹುದು. ಉಳಿದ ಆದಾಯವನ್ನು ಸಂಗೀತ ಪರವಾನಗಿ ವೆಚ್ಚವನ್ನು ಸರಿದೂಗಿಸಲು ಅಥವಾ YouTube ನಿಂದ ಉಳಿಸಿಕೊಳ್ಳಲು ಬಳಸಲಾಗುತ್ತದೆ.
ನನ್ನ Shorts ಆ್ಯಡ್ ಆದಾಯವನ್ನು ಗಳಿಸುತ್ತಿವೆಯೇ ಎಂದು ನನಗೆ ಹೇಗೆ ಗೊತ್ತಾಗುತ್ತದೆ? ನಾನು Shorts ಜಾಹೀರಾತು ಆದಾಯ ಗಳಿಸುವುದನ್ನು ನಿಲ್ಲಿಸಲು ಬಯಸಿದರೆ ಏನು ಮಾಡಬೇಕು?

ನೀವು Shorts ಮಾನಿಟೈಸೇಶನ್ ಮಾಡ್ಯುಲ್‌ಗೆ ಸಮ್ಮತಿಸಿದ ದಿನಾಂಕದಿಂದ, ನಿಮ್ಮ ಚಾನಲ್‌ನಲ್ಲಿ ಯಾವುದೇ Short ನ ವೀಕ್ಷಣೆಗಳನ್ನು ಜಾಹೀರಾತುಗಳ ಆದಾಯದ ಹಂಚಿಕೆಗಾಗಿ ಪರಿಗಣಿಸಲಾಗುತ್ತದೆ. 1 ಫೆಬ್ರವರಿ 2023 ರ ನಂತರ ಅಪ್‌ಲೋಡ್ ಮಾಡಿದ Shorts ನ ವೀಕ್ಷಣೆಗಳನ್ನು ಸಹ Shorts ಜಾಹೀರಾತು ಆದಾಯ ಹಂಚಿಕೆಗಾಗಿ ಸ್ವಯಂಚಾಲಿತವಾಗಿ ಪರಿಗಣಿಸಲಾಗುತ್ತದೆ – ಅಪ್‌ಲೋಡ್ ಮಾಡುವಾಗ, ನೀವು ಲಾಂಗ್-ಫಾರ್ಮ್ ವೀಡಿಯೊಗಳಿಗಾಗಿ ಮಾಡುವಂತೆ ನಿಮ್ಮ Shorts ಗಾಗಿ ಮಾನಿಟೈಸೇಶನ್ ಅನ್ನು ಇನ್ನು ಮುಂದೆ ಆನ್ ಮಾಡುವ ಅಗತ್ಯವಿಲ್ಲ. Shorts ಮಾನಿಟೈಸೇಶನ್ ಮಾಡ್ಯುಲ್‌ಗೆ ಸಮ್ಮತಿಸುವ ಮೊದಲು ಸಂಗ್ರಹವಾದ Shorts ವೀಕ್ಷಣೆಗಳು Shorts ಜಾಹೀರಾತು ಆದಾಯದ ಹಂಚಿಕೆಗೆ ಅರ್ಹವಾಗಿರುವುದಿಲ್ಲ.

ನಿಮ್ಮ Short ಅನ್ನು ಅಪ್‌ಲೋಡ್ ಮಾಡಿದ ನಂತರ, YouTube Studio ದ ಕಂಟೆಂಟ್ ವಿಭಾಗದಲ್ಲಿ ಅದರ ಮಾನಿಟೈಸೇಶನ್ ಸ್ಥಿತಿಯನ್ನು ನೀವು ನೋಡಬಹುದು. Shorts ಆ್ಯಡ್ ಆದಾಯ ಹಂಚಿಕೆಗಾಗಿ ಪರಿಗಣಿಸಲಾದ ವೀಕ್ಷಣೆಗಳಿರುವ Shorts ಹಸಿರು ಅಥವಾ ಹಳದಿ ಮಾನಿಟೈಸೇಶನ್ ಐಕಾನ್ ಅನ್ನು ತೋರಿಸುತ್ತವೆ. ನಮ್ಮ ಮಾನಿಟೈಸೇಶನ್ ಐಕಾನ್ ಗೈಡ್‌ನಲ್ಲಿ ವಿವಿಧ ಐಕಾನ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ನೀವು Shorts ಆ್ಯಡ್‌ಗಳೊಂದಿಗೆ ಮಾನಿಟೈಸ್ ಮಾಡಲು ಪ್ರಾರಂಭಿಸಿದ ದಿನಾಂಕದಂದು ಅಂದಾಜು ದೈನಂದಿನ Shorts ಫೀಡ್ ಜಾಹೀರಾತು ಆದಾಯವನ್ನು ಇತರ ಪರ್ಫಾರ್ಮೆನ್ಸ್ ಮೆಟ್ರಿಕ್‍ಗಳೊಂದಿಗೆ YouTube Analytics ಸಹ ಪ್ರದರ್ಶಿಸಲು ಪ್ರಾರಂಭಿಸುತ್ತದೆ. ನಿಮ್ಮ YouTube ಆದಾಯವನ್ನು ಪರಿಶೀಲಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಇನ್ನು ಮುಂದೆ ಆ್ಯಡ್‌ಗಳೊಂದಿಗೆ ನಿಮ್ಮ ಚಾನಲ್‌ನ Shorts ವೀಕ್ಷಣೆಗಳನ್ನು ಮಾನಿಟೈಸ್ ಮಾಡಲು ಬಯಸದಿದ್ದರೆ, ರಚನೆಕಾರರ ಬೆಂಬಲವನ್ನು ಸಂಪರ್ಕಿಸುವ ಮೂಲಕ ನೀವು Shorts ಮಾನಿಟೈಸೇಶನ್ ಮಾಡ್ಯುಲ್‌ನಿಂದ ಹೊರಗುಳಿಯಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7832532716574770287
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false