ಸಾಮಾನ್ಯ FAQ ಗಳು
Creator Music ಎಂದರೇನು?- ಕೆಲವು ಹಾಡುಗಳಿಗೆ ಪರವಾನಗಿ ಇರಬಹುದು, ಅಂದರೆ, ರಚನೆಕಾರರು ತಮ್ಮ ವೀಡಿಯೊದಲ್ಲಿ ಆ ಸಂಗೀತವನ್ನು ಬಳಸಲು ಮತ್ತು ವೀಡಿಯೊದ ಆದಾಯವನ್ನು ಇರಿಸಿಕೊಳ್ಳಲು ಆರಂಭದಲ್ಲೇ ಶುಲ್ಕ (ಅಥವಾ ಕೆಲವು ಟ್ರ್ಯಾಕ್ಗಳಿಗಾಗಿ ಶುಲ್ಕ ಇಲ್ಲ) ಪಾವತಿಸುತ್ತಾರೆ. ಇನ್ನಷ್ಟು ತಿಳಿಯಿರಿ.
- ಕೆಲವು ಹಾಡುಗಳಿಗಾಗಿ ಆದಾಯವನ್ನು ಹಂಚಿಕೊಳ್ಳಬಹುದು, ಅಂದರೆ ರಚನೆಕಾರರು ಆರಂಭದಲ್ಲೇ ಏನನ್ನೂ ಪಾವತಿಸಬೇಕಾಗಿಲ್ಲ ಮತ್ತು ಅವರು ತಮ್ಮ ವೀಡಿಯೊದ ಆದಾಯವನ್ನು ಸಂಗೀತ ಹಕ್ಕುದಾರರೊಂದಿಗೆ ಹಂಚಿಕೊಳ್ಳುತ್ತಾರೆ. ಇನ್ನಷ್ಟು ತಿಳಿಯಿರಿ.
Creator Music, YouTube Studio ದ ಒಳಗೆ ಇದೆ ಮತ್ತು ನಿಮ್ಮ YouTube ವೀಡಿಯೊಗಳಲ್ಲಿ ಬಳಸುವುದಕ್ಕಾಗಿ ಹಾಡುಗಳನ್ನು ಬ್ರೌಸ್ ಮಾಡಲು, ಪ್ರಿವ್ಯೂ ನೋಡಲು ಹಾಗೂ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಪ್ರತಿಯೊಂದು ಟ್ರ್ಯಾಕ್ಗಾಗಿ ನೀವು ಈ ಕೆಳಗಿನ ಬಳಕೆಯ ಆಯ್ಕೆಗಳನ್ನು ನೋಡಬಹುದು:
- ಪರವಾನಗಿಯನ್ನು ಖರೀದಿಸಿ: ಸಂಗೀತವನ್ನು ಬಳಸುವುದಕ್ಕಾಗಿ ಆರಂಭದಲ್ಲೇ ಶುಲ್ಕವನ್ನು ಪಾವತಿಸಿ ಮತ್ತು ಸಂಗೀತವಿಲ್ಲದೆ ನಿಮ್ಮ ಕಂಟೆಂಟ್ಗೆ ಯಾವ ಆದಾಯ ಹಂಚಿಕೆ ಅನ್ವಯವಾಗುತ್ತದೆಯೋ, ಅದೇ ಆದಾಯವನ್ನು ಪಡೆಯಿರಿ.
- ಆದಾಯ ಹಂಚಿಕೆ: ಟ್ರ್ಯಾಕ್ನ ಹಕ್ಕುದಾರರೊಂದಿಗೆ ವೀಡಿಯೊದ ಆದಾಯವನ್ನು ಹಂಚಿಕೊಳ್ಳಿ.
ಪ್ರಸ್ತುತ, ಪರವಾನಗಿ ನೀಡಬಹುದಾದ ಟ್ರ್ಯಾಕ್ಗಳನ್ನು ಮಾತ್ರ Creator Music ನಿಂದ ಡೌನ್ಲೋಡ್ ಮಾಡಲು ನಾವು ಅನುಮತಿಸುತ್ತೇವೆ.
ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್ಗಳಿಗಾಗಿ, ನೀವು Creator Music ನ ಹೊರಗೆ ಟ್ರ್ಯಾಕ್ ಅನ್ನು ಡೌನ್ಲೋಡ್ ಮಾಡುವ ಮೂಲವನ್ನು ಹೊಂದಿರಬೇಕಾಗುತ್ತದೆ.
ರಷ್ಯಾ ಅಥವಾ ಬೆಲಾರೂಸ್ನಲ್ಲಿ ನನ್ನ ವೀಡಿಯೊವನ್ನು ಏಕೆ ನಿರ್ಬಂಧಿಸಲಾಗಿದೆ?
ಪರವಾನಗಿ FAQ ಗಳು
ಪರವಾನಗಿ ಎಂದರೇನು?ಟ್ರ್ಯಾಕ್ಗಳ ಹಕ್ಕುಗಳನ್ನು ಹೊಂದಿರುವ ಸಂಗೀತ ಪಾಲುದಾರರು, ಪರವಾನಗಿಯ ನಿಯಮಗಳು ಹಾಗೂ ದರಗಳನ್ನು ಸೆಟ್ ಮಾಡುತ್ತಾರೆ. ಕೆಲವು ಟ್ರ್ಯಾಕ್ಗಳು ಎಲ್ಲಾ ರಚನೆಕಾರರಿಗಾಗಿ ನಿಗದಿತ ದರವನ್ನು ಹೊಂದಿರುತ್ತವೆ, ಆದರೆ ಇತರವುಗಳು, ನಿಮ್ಮ ಚಾನಲ್ನ ಗಾತ್ರವನ್ನು ಅವಲಂಬಿಸಿ ಕಸ್ಟಮೈಸ್ ಮಾಡಿದ ದರವನ್ನು ಹೊಂದಿರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ.
ನೀವು ಪರವಾನಗಿಯನ್ನು ಖರೀದಿಸಿದಾಗ, ಪರವಾನಗಿಯ ಅವಧಿಯವರೆಗೆ, ದರದ ಬದಲಾವಣೆಗಳು ಅದರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.
YouTube Studio ದಲ್ಲಿ Creator Music ಲೈಬ್ರರಿ ಪುಟದಿಂದ ನೇರವಾಗಿ Creator Music ಪರವಾನಗಿಗಾಗಿ ಮರುಪಾವತಿಯನ್ನು ನೀವು ವಿನಂತಿಸಬಹುದು. ಮರುಪಾವತಿಯನ್ನು ವಿನಂತಿಸಲು:
- YouTube Studio ಗೆ ಸೈನ್ ಇನ್ ಮಾಡಿ.
- ಎಡಭಾಗದ ಮೆನುವಿನಿಂದ Creator Music ಅನ್ನು ಆಯ್ಕೆ ಮಾಡಿ.
- ನಿಮ್ಮ ಲೈಬ್ರರಿ ಟ್ಯಾಬ್ ಅನ್ನು ಆಯ್ಕೆ ಮಾಡಿ.
- ನೀವು ಯಾವ ಟ್ರ್ಯಾಕ್ನ ಪರವಾನಗಿಗಾಗಿ ಮರುಪಾವತಿ ಪಡೆಯಲು ಬಯಸುತ್ತೀರೋ, ಆ ಟ್ರ್ಯಾಕ್ ಅನ್ನು ಹುಡುಕಿ.
- (ಐಚ್ಛಿಕ) ನೀವು ಪರವಾನಗಿ ಪಡೆದಿರುವ ಟ್ರ್ಯಾಕ್ಗಳನ್ನು ಮಾತ್ರ ವೀಕ್ಷಿಸಲು, ಪುಟದ ಮೇಲ್ಭಾಗದಲ್ಲಿ ಪರವಾನಗಿ ಪಡೆದಿರುವುದು ಎಂಬುದನ್ನು ಕ್ಲಿಕ್ ಮಾಡಿ.
- ಟ್ರ್ಯಾಕ್ನ ಸಾಲಿನಲ್ಲಿ, "ಇನ್ನಷ್ಟು ಕ್ರಿಯೆಗಳು" ಮರುಪಾವತಿಯನ್ನು ವಿನಂತಿಸಿ ಎಂಬುದನ್ನು ಕ್ಲಿಕ್ ಮಾಡಿ.
- ಮರುಪಾವತಿ ವಿನಂತಿ ಫಾರ್ಮ್ ಅನ್ನು ಪೂರ್ಣಗೊಳಿಸಿ.
ನೀವು ಮರುಪಾವತಿ ವಿನಂತಿ ಫಾರ್ಮ್ ಅನ್ನು ಸಲ್ಲಿಸಿದ ನಂತರ, ವಿನಂತಿಯು Creator Music ಮರುಪಾವತಿ ನೀತಿಯ ಅಡಿಯಲ್ಲಿ ಮರುಪಾವತಿಗೆ ಅರ್ಹವಾಗಿದ್ದರೆ, ನಮ್ಮ ಬೆಂಬಲ ತಂಡವು ನಿಮಗಾಗಿ ಮರುಪಾವತಿಯನ್ನು ಪ್ರಕ್ರಿಯೆಗೊಳಿಸುತ್ತದೆ. ಮರುಪಾವತಿ ನೀತಿಯನ್ನು ಪರಿಶೀಲಿಸಲು, Creator Music ಸೇವಾ ನಿಯಮಗಳಲ್ಲಿ "ರದ್ದುಗೊಳಿಸುವಿಕೆ ಹಾಗೂ ಮರುಪಾವತಿಗಳು" ವಿಭಾಗಕ್ಕೆ ಹೋಗಿ.
ಆದಾಯ ಹಂಚಿಕೆ FAQ ಗಳು
ನಾನು ಆದಾಯ ಹಂಚಿಕೊಳ್ಳುವಿಕೆಗೆ ಯಾವಾಗ ಅರ್ಹತೆ ಪಡೆಯುತ್ತೇನೆ- ಟ್ರ್ಯಾಕ್ನ ಪಕ್ಕದಲ್ಲಿ ಆದಾಯ ಹಂಚಿಕೊಳ್ಳಿ ಐಕಾನ್ ಕಂಡುಬಂದಾಗ
- ಯಾವುದೇ ಅವಧಿಯ ವೀಡಿಯೊದಲ್ಲಿ ನೀವು ಟ್ರ್ಯಾಕ್ನ ಎಷ್ಟು ಭಾಗವನ್ನು ಬೇಕಾದರೂ ಬಳಸಿಕೊಳ್ಳಬಹುದು.
- ಟ್ರ್ಯಾಕ್ಗಾಗಿ ಪರವಾನಗಿ ಪಡೆಯಬಹುದು, ಆದರೆ ನೀವು ಪರವಾನಗಿಯನ್ನು ಖರೀದಿಸಲು ಬಯಸುವುದಿಲ್ಲ ಎಂದಾದರೆ
- ಟ್ರ್ಯಾಕ್ನ ನಿಮ್ಮ ಬಳಕೆಯು 3 ನಿಮಿಷಕ್ಕಿಂತ ಉದ್ದದ ವೀಡಿಯೊದಲ್ಲಿ 30 ಸೆಕೆಂಡ್ಗಳಿಗಿಂತ ಕಡಿಮೆ ಇರಬೇಕು.
Creator Music ಮೂಲಕ, ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್ಗಳನ್ನು ದಿರ್ಘಾವಧಿಯ ವೀಡಿಯೊದಲ್ಲಿ ಬಳಸಿದರೆ, ಈ ಕೆಳಗಿನ ಉದಾಹರಣೆಗಳಲ್ಲಿ ತೋರಿಸಿರುವಂತೆ ಸಂಗೀತ ಹಕ್ಕುಗಳನ್ನು ಕ್ಲಿಯರ್ ಮಾಡುವ ವೆಚ್ಚಗಳನ್ನು ಭರಿಸುವುದಕ್ಕಾಗಿ ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯನ್ನು ಸರಿಹೊಂದಿಸಲಾಗುತ್ತದೆ. ಇದು ಇವುಗಳನ್ನು ಅವಲಂಬಿಸಿರುತ್ತದೆ:
- ಬಳಸಲಾಗಿರುವ ಟ್ರ್ಯಾಕ್ಗಳು: ರಚನೆಕಾರರು ತಮ್ಮ ವೀಡಿಯೊದಲ್ಲಿ ಎಷ್ಟು ಅರ್ಹ ಆದಾಯ ಹಂಚಿಕೆ ಟ್ರ್ಯಾಕ್ಗಳನ್ನು ಬಳಸುತ್ತಾರೆ (ಕೆಳಗಿನ ಉದಾಹರಣೆಗಳನ್ನು ನೋಡಿ).
- ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು: ಕಾರ್ಯನಿರ್ವಹಣೆಯ ಹಕ್ಕುಗಳು ಸೇರಿದಂತೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳನ್ನು ಭರಿಸುವುದಕ್ಕಾಗಿ ಕಡಿತ. ಈ ಕಡಿತವು ಗರಿಷ್ಠ 5% ವರೆಗೆ ಇರಬಹುದು ಮತ್ತು ಆದಾಯ ಹಂಚಿಕೆಗೆ ಅರ್ಹವಾಗಿರುವ Creator Music ಟ್ರ್ಯಾಕ್ಗಳಾದ್ಯಂತ ಈ ಹೆಚ್ಚುವರಿ ಸಂಗೀತ ಹಕ್ಕುಗಳ ಸಂಯೋಜಿತ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.
ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್ನ ಬಳಕೆ |
|||||||||||
ಉದಾಹರಣೆ: ರಚನೆಕಾರರು ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 1 ಆದಾಯ ಹಂಚಿಕೆ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯಲ್ಲಿ ಅರ್ಧ ಭಾಗವನ್ನು (27.5%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2.5% ಆಗಬಹುದು. ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 25% (27.5% - 2.5%) ಗಳಿಸುತ್ತಾರೆ. |
|
||||||||||
ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್ನ ಬಳಕೆ |
|||||||||||
ಉದಾಹರಣೆ: ಕ್ರಿಯೇಟರ್ ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 2 ಆದಾಯ ಹಂಚಿಕೆ ಟ್ರ್ಯಾಕ್ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯ 1/3 ಭಾಗವನ್ನು (18.33%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2% ಆಗಬಹುದು. ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 16.33% ಭಾಗವನ್ನು (18.33% - 2%) ಗಳಿಸುತ್ತಾರೆ. |
|
- Content ID ಗೆ ನಿಮ್ಮ ವೀಡಿಯೊದಲ್ಲಿ ಆದಾಯ ಹಂಚಿಕೆಗೆ ಅರ್ಹವಾದ ಟ್ರ್ಯಾಕ್ ಕಂಡುಬರಲಿಲ್ಲ. ಒಂದು ವೇಳೆ ಟ್ರ್ಯಾಕ್ ಆದಾಯ ಹಂಚಿಕೆಗೆ ಅರ್ಹವಾಗಿದೆ ಎಂಬುದನ್ನು Content ID ಆನಂತರ ಕಂಡುಕೊಂಡರೆ, ಆ ಸಮಯದಲ್ಲಿ ನಿಮ್ಮ ವೀಡಿಯೊವನ್ನು ಆದಾಯ ಹಂಚಿಕೆಗೆ ಸಕ್ರಿಯಗೊಳಿಸಲಾಗುತ್ತದೆ.
- ನಿಮ್ಮ ವೀಡಿಯೊವನ್ನು ಅಪ್ಲೋಡ್ ಮಾಡಿದ ಸಮಯದಲ್ಲೇ ಹಕ್ಕುದಾರ(ರು) ಆ ಟ್ರ್ಯಾಕ್ಗಾಗಿ ಆದಾಯ ಹಂಚಿಕೆಯನ್ನು ನಿಷ್ಕ್ರಿಯಗೊಳಿಸಿರಬಹುದು.
- ಪರವಾನಗಿಯು ನಿಮ್ಮ ಖರೀದಿಗೆ ಲಭ್ಯವಿದೆ, ಆದರೆ 3 ನಿಮಿಷಗಳ ವೀಡಿಯೊದಲ್ಲಿ ಟ್ರ್ಯಾಕ್ನ ಬಳಕೆಯು 30 ಸೆಕೆಂಡ್ಗಳಿಗಿಂತ ಕಡಿಮೆಯಾಗಿಲ್ಲ.
- ಆದಾಯ ಹಂಚಿಕೆಗೆ ಅರ್ಹವಲ್ಲದ ಇತರ ಥರ್ಡ್-ಪಾರ್ಟಿ ಕಂಟೆಂಟ್ಗಾಗಿ ನಿಮ್ಮ ವೀಡಿಯೊ Content ID ಕ್ಲೈಮ್ ಅನ್ನು ಹೊಂದಿದೆ. Content ID ಕ್ಲೈಮ್ ಅನ್ನು ಬಗೆಹರಿಸಲು ನಿಮಗಿರುವ ಆಯ್ಕೆಗಳ ಕುರಿತು ತಿಳಿದುಕೊಳ್ಳಿ.