Creator Music FAQ

Creator Music, ಇದೀಗ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಯು.ಎಸ್. ರಚನೆಕಾರರಿಗೆ ಲಭ್ಯವಿದೆ. ಯು.ಎಸ್. ಹೊರಗಡೆ ಇರುವ YPP ರಚನೆಕಾರರಿಗೆ ವಿಸ್ತರಿಸುವುದು ಇನ್ನೂ ಬಾಕಿಯಿದೆ.
Creator Music ಅನ್ನು ಬಳಸುವ ಕುರಿತು ರಚನೆಕಾರರು ಪದೇ ಪದೇ ಕೇಳುವ ಕೆಲವು ಪ್ರಶ್ನೆಗಳು (FAQ ಗಳು) ಇಲ್ಲಿವೆ. FAQ ಗಳನ್ನು 3 ವರ್ಗಗಳಲ್ಲಿ ಗುಂಪುಗೂಡಿಸಲಾಗಿದೆ:
 
 

ಸಾಮಾನ್ಯ FAQ ಗಳು

Creator Music ಎಂದರೇನು?
Creator Music ಎಂಬುದು, ಕೃತಿಸ್ವಾಮ್ಯ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಮಾನಿಟೈಸ್ ಮಾಡಲಾದ ವೀಡಿಯೊಗಳಲ್ಲಿ ಬಳಸಬಹುದಾದ ಮುಖ್ಯವಾಹಿನಿ ಸಂಗೀತವನ್ನು ಒಳಗೊಂಡಿರುವ, ಬೆಳೆಯುತ್ತಿರುವ ಕ್ಯಾಟಲಾಗ್ ಆಗಿದೆ. ಸಂಗೀತ ಹಕ್ಕುದಾರರು ಸೆಟ್ ಮಾಡಿರುವ ಬಳಕೆಯ ನಿಯಮಗಳನ್ನು ಆಧರಿಸಿ, ಸಂಗೀತವನ್ನು ಬಳಸಲು Creator Music ರಚನೆಕಾರರಿಗೆ ಅನೇಕ ಮಾರ್ಗೋಪಾಯಗಳನ್ನು ಒದಗಿಸುತ್ತದೆ. ಉದಾಹರಣೆಗೆ:
  • ಕೆಲವು ಹಾಡುಗಳಿಗೆ ಪರವಾನಗಿ ಇರಬಹುದು, ಅಂದರೆ, ರಚನೆಕಾರರು ತಮ್ಮ ವೀಡಿಯೊದಲ್ಲಿ ಆ ಸಂಗೀತವನ್ನು ಬಳಸಲು ಮತ್ತು ವೀಡಿಯೊದ ಆದಾಯವನ್ನು ಇರಿಸಿಕೊಳ್ಳಲು ಆರಂಭದಲ್ಲೇ ಶುಲ್ಕ (ಅಥವಾ ಕೆಲವು ಟ್ರ್ಯಾಕ್‌ಗಳಿಗಾಗಿ ಶುಲ್ಕ ಇಲ್ಲ) ಪಾವತಿಸುತ್ತಾರೆ. ಇನ್ನಷ್ಟು ತಿಳಿಯಿರಿ.
  • ಕೆಲವು ಹಾಡುಗಳಿಗಾಗಿ ಆದಾಯವನ್ನು ಹಂಚಿಕೊಳ್ಳಬಹುದು, ಅಂದರೆ ರಚನೆಕಾರರು ಆರಂಭದಲ್ಲೇ ಏನನ್ನೂ ಪಾವತಿಸಬೇಕಾಗಿಲ್ಲ ಮತ್ತು ಅವರು ತಮ್ಮ ವೀಡಿಯೊದ ಆದಾಯವನ್ನು ಸಂಗೀತ ಹಕ್ಕುದಾರರೊಂದಿಗೆ ಹಂಚಿಕೊಳ್ಳುತ್ತಾರೆ. ಇನ್ನಷ್ಟು ತಿಳಿಯಿರಿ.
ನಾನು Creator Music ಅನ್ನು ಹೇಗೆ ಬಳಸಬಹುದು?

Creator Music, YouTube Studio ದ ಒಳಗೆ ಇದೆ ಮತ್ತು ನಿಮ್ಮ YouTube ವೀಡಿಯೊಗಳಲ್ಲಿ ಬಳಸುವುದಕ್ಕಾಗಿ ಹಾಡುಗಳನ್ನು ಬ್ರೌಸ್ ಮಾಡಲು, ಪ್ರಿವ್ಯೂ ನೋಡಲು ಹಾಗೂ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಪ್ರತಿಯೊಂದು ಟ್ರ್ಯಾಕ್‌ಗಾಗಿ ನೀವು ಈ ಕೆಳಗಿನ ಬಳಕೆಯ ಆಯ್ಕೆಗಳನ್ನು ನೋಡಬಹುದು:

  1. ಪರವಾನಗಿಯನ್ನು ಖರೀದಿಸಿ: ಸಂಗೀತವನ್ನು ಬಳಸುವುದಕ್ಕಾಗಿ ಆರಂಭದಲ್ಲೇ ಶುಲ್ಕವನ್ನು ಪಾವತಿಸಿ ಮತ್ತು ಸಂಗೀತವಿಲ್ಲದೆ ನಿಮ್ಮ ಕಂಟೆಂಟ್‌ಗೆ ಯಾವ ಆದಾಯ ಹಂಚಿಕೆ ಅನ್ವಯವಾಗುತ್ತದೆಯೋ, ಅದೇ ಆದಾಯವನ್ನು ಪಡೆಯಿರಿ.
  2. ಆದಾಯ ಹಂಚಿಕೆ: ಟ್ರ್ಯಾಕ್‌ನ ಹಕ್ಕುದಾರರೊಂದಿಗೆ ವೀಡಿಯೊದ ಆದಾಯವನ್ನು ಹಂಚಿಕೊಳ್ಳಿ.
ಬಳಕೆಯ ಆಯ್ಕೆಗಳು ಟ್ರ್ಯಾಕ್ ಅನ್ನು ಆಧರಿಸಿ ಬದಲಾಗಬಹುದು. ಪರವಾನಗಿ ಖರೀದಿಸಲು ಅಥವಾ ಆದಾಯ ಹಂಚಿಕೊಳ್ಳಲು ಕೆಲವು ಟ್ರ್ಯಾಕ್‌ಗಳು ಲಭ್ಯವಿಲ್ಲದಿರುವುದನ್ನು ನೀವು ಇನ್ನೂ ನೋಡಬಹುದು. ಅಂತಹ ಯಾವುದೇ ಟ್ರ್ಯಾಕ್ ಅನ್ನು ನೀವು ಬಳಸಿದರೆ, ನಿಮ್ಮ ವೀಡಿಯೊ Content ID ಕ್ಲೈಮ್ ಅಥವಾ ಕೃತಿಸ್ವಾಮ್ಯ ಹೊಂದಿರುವ ವೀಡಿಯೋ ತೆಗೆದುಹಾಕುವ ವಿನಂತಿಯನ್ನು ಪಡೆಯಬಹುದು.
ಕೆಲವು ಟ್ರ್ಯಾಕ್‌ಗಳಿಗೆ ಡೌನ್‌ಲೋಡ್ ಪ್ರಿವ್ಯೂ ಆಯ್ಕೆ ಏಕಿಲ್ಲ?

ಪ್ರಸ್ತುತ, ಪರವಾನಗಿ ನೀಡಬಹುದಾದ ಟ್ರ್ಯಾಕ್‌ಗಳನ್ನು ಮಾತ್ರ Creator Music ನಿಂದ ಡೌನ್‌ಲೋಡ್ ಮಾಡಲು ನಾವು ಅನುಮತಿಸುತ್ತೇವೆ.

ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್‌ಗಳಿಗಾಗಿ, ನೀವು Creator Music ನ ಹೊರಗೆ ಟ್ರ್ಯಾಕ್ ಅನ್ನು ಡೌನ್‌ಲೋಡ್ ಮಾಡುವ ಮೂಲವನ್ನು ಹೊಂದಿರಬೇಕಾಗುತ್ತದೆ.

ನನ್ನ ಲೈವ್ ಸ್ಟ್ರೀಮ್‌ಗಳಲ್ಲಿ ನಾನು Creator Music ಅನ್ನು ಬಳಸಬಹುದೇ?
ಪ್ರಸ್ತುತ, Creator Music, ಲೈವ್ ಕಂಟೆಂಟ್‌ಗಾಗಿ ಪರವಾನಗಿ ನೀಡುವುದನ್ನು ಬೆಂಬಲಿಸುವುದಿಲ್ಲ.
ನಾನು ಇನ್ನೂ Creator Music ಗೆ ಏಕೆ ಆ್ಯಕ್ಸೆಸ್ ಹೊಂದಿಲ್ಲ?
ಯು.ಎಸ್‍ನಲ್ಲಿ ವಾಸಿಸುವ YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ರಚನೆಕಾರರಿಗೆ ನಾವು ಈ ಫೀಚರ್ ಅನ್ನು ಹಂತ-ಹಂತವಾಗಿ ಬಿಡುಗಡೆ ಮಾಡುತ್ತಿದ್ದೇವೆ ಮತ್ತು ಸ್ವಲ್ಪ ಸಮಯ ಕಳೆದ ಬಳಿಕ ಯು.ಎಸ್‌ನ ಹೊರಗಿರುವ YPP ರಚನೆಕಾರರಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದೇವೆ.
ನಾನು YPP ಯಲ್ಲಿ ಇಲ್ಲ, ನಾನು Creator Music ಗೆ ಆ್ಯಕ್ಸೆಸ್ ಪಡೆಯಬಹುದೇ?
ನಾವು ಕಾಲಾನಂತರದಲ್ಲಿ Creator Music ಅನ್ನು ಹೆಚ್ಚು ಬಳಕೆದಾರರಿಗೆ ಹಂತ-ಹಂತವಾಗಿ ವಿಸ್ತರಿಸಲಿದ್ದೇವೆ ಮತ್ತು ಎಲ್ಲಾ ರಚನೆಕಾರರಿಗೆ ಹೊಸ ಸಂಗೀತ-ಸಂಬಂಧಿತ ಫೀಚರ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ. ಸದ್ಯಕ್ಕೆ, YPP ಯಲ್ಲಿ ಇರುವ ರಚನೆಕಾರರು ಮಾತ್ರ ಪರವಾನಗಿಗಳನ್ನು ಖರೀದಿಸಬಹುದು.
ಆಡಿಯೋ ಲೈಬ್ರರಿ ಎಲ್ಲಿ ಹೋಯಿತು?
ನೀವು Creator Music ಗೆ ಆ್ಯಕ್ಸೆಸ್ ಹೊಂದಿದ್ದರೆ, ನಾವು YouTube ಆಡಿಯೋ ಲೈಬ್ರರಿಯ ಎಲ್ಲಾ ಹಾಡುಗಳನ್ನು ಅದರಲ್ಲಿ ಸೇರಿಸಿದ್ದೇವೆ, ಆದ್ದರಿಂದ ನಿಮ್ಮ ಎಲಾ ಸೌಂಡ್‌ಟ್ರ್ಯಾಕ್ ಅವಶ್ಯಕತೆಗಳನ್ನು ಒಂದೇ ಸ್ಥಳದಲ್ಲಿ ಪೂರೈಸಿಕೊಳ್ಳಬಹುದು. ಸದ್ಯಕ್ಕೆ, ಈ ಮೊದಲಿನ ಸೌಂಡ್‌ಗಳ ಎಫೆಕ್ಟ್‌ಗಳ ಟ್ಯಾಬ್ ಅನ್ನು ಶೈಲಿಗಳ ವಿಭಾಗದ ಅಡಿಯಲ್ಲಿ ಕಾಣಬಹುದು. Creator Music ಹೋಮ್ ಪೇಜ್‌ನ ಕೆಳಗೆ ಇರುವ ಆಡಿಯೋ ಲೈಬ್ರರಿಗೆ ಮರಳಿ ಹೋಗಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಈ ಹಿಂದೆ YouTube ಆಡಿಯೋ ಲೈಬ್ರರಿಯಲ್ಲಿ ಉಳಿಸಲಾದ ಹಾಡುಗಳನ್ನು ಆ್ಯಕ್ಸೆಸ್ ಮಾಡಬಹುದು.
Creator Music ನಲ್ಲಿ ಒಂದು ಹಾಡನ್ನು ಹುಡುಕಲು ನನಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಏನು ಕಾರಣ?
ನೀವು ಹುಡುಕುತ್ತಿರುವ ಟ್ರ್ಯಾಕ್ ಅನ್ನು Creator Music ನಲ್ಲಿ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ಅದನ್ನು ನಿಮ್ಮ ವೀಡಿಯೊದಲ್ಲಿ ಬಳಸಲು ಬಯಸುತ್ತೀರಿ ಎಂದಾದರೆ, ಆ ಟ್ರ್ಯಾಕ್, ಪರವಾನಗಿ ಖರೀದಿಸಲು ಅಥವಾ ಆದಾಯ ಹಂಚಿಕೊಳ್ಳಲು ಲಭ್ಯವಿಲ್ಲ ಎಂದು ಅರ್ಥ. ಇದರ ಫಲಿತಾಂಶವಾಗಿ, ನೀವು ಬಳಸಲು ಹಕ್ಕನ್ನು ಹೊಂದಿರದ ಟ್ರ್ಯಾಕ್ ಅನ್ನು ನೀವು ಬಳಸಲು ಆಯ್ಕೆ ಮಾಡಿಕೊಂಡರೆ, ನಿಮ್ಮ ವೀಡಿಯೊದ ಮೇಲೆ Content ID ಕ್ಲೈಮ್ ಅಥವಾ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಪಡೆಯುವ ಅಪಾಯವನ್ನು ಹೊಂದಿರುತ್ತೀರಿ.
ನಾನು ಬಳಸಿದ್ದಕ್ಕಿಂತ ಭಿನ್ನವಾದ ಹಾಡಿಗಾಗಿ ನಾನು Content ID ಕ್ಲೈಮ್ ಅನ್ನು ಪಡೆದಿದ್ದೇನೆ. ನಾನೇನು ಮಾಡಬಹುದು?
ನೀವು Content ID ಕ್ಲೇಮ್ ಅನ್ನು ಸ್ವೀಕರಿಸಿದ್ದೀರಿ ಮತ್ತು ಇದು ತಪ್ಪು ಎಂದು ನೀವು ಭಾವಿಸುವುದಾದರೆ, ನೀವು ಆ ಕ್ಲೇಮ್‌ನ ಕುರಿತು ವಿವಾದ ಸಲ್ಲಿಸಬಹುದು.

ರಷ್ಯಾ ಅಥವಾ ಬೆಲಾರೂಸ್‌ನಲ್ಲಿ ನನ್ನ ವೀಡಿಯೊವನ್ನು ಏಕೆ ನಿರ್ಬಂಧಿಸಲಾಗಿದೆ?

ರಷ್ಯಾ ಮತ್ತು ಬೆಲಾರೂಸ್ ಸೇರಿದಂತೆ ನಿರ್ದಿಷ್ಟ ಪ್ರಾಂತ್ಯಗಳಲ್ಲಿ ತಮ್ಮ ಟ್ರ್ಯಾಕ್‌ಗಳನ್ನು ನಿರ್ಬಂಧಿಸಲು ಕೆಲವು ಸಂಗೀತ ಹಕ್ಕುದಾರರು ಆಯ್ಕೆ ಮಾಡಬಹುದು.

ಪರವಾನಗಿ FAQ ಗಳು

ಪರವಾನಗಿ ಎಂದರೇನು?
ಒಂದು ಪರವಾನಗಿಯು, ಇತರರ ಹಕ್ಕುಗಳಿಗೆ ಒಳಪಟ್ಟ ಕಂಟೆಂಟ್ ಅನ್ನು ಬಳಸಲು ಯಾರಿಗಾದರೂ ಕಾನೂನುಬದ್ಧ ಅನುಮತಿಯನ್ನು ನೀಡುತ್ತದೆ. Creator Music ಮೂಲಕ, YouTube ನಲ್ಲಿಯೇ ಈ ಹಕ್ಕುದಾರರೊಂದಿಗೆ ಸಂವಹಿಸುವ ಪ್ರಕ್ರಿಯೆಯನ್ನು ನಾವು ಸುಗಮಗೊಳಿಸಿದ್ದೇವೆ. ನಮ್ಮ ಸಹಾಯ ಕೇಂದ್ರದಲ್ಲಿ, ಪರವಾನಗಿ ನೀಡುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.
ನಾನು ಯಾವಾಗ ಪರವಾನಗಿಗಾಗಿ ಪಾವತಿ ಮಾಡಬೇಕು?
ನೀವು ಪರವಾನಗಿಗಾಗಿ ನೇರವಾಗಿ Creator Music ನಲ್ಲಿ ಮುಂಗಡ ಹಣ ಪಾವತಿಸಬಹುದು ಅಥವಾ ಸ್ಟೋರ್ ಫ್ರಂಟ್ ಅಥವಾ Creator Music ಟ್ರ್ಯಾಕ್ ಅನ್ನು ಬಳಸುವ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ ಪಾವತಿಸಬಹುದು. ಟ್ರ್ಯಾಕ್‌ಗಳ ಪರವಾನಗಿ ಖರೀದಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.
ನಾನು ಪರವಾನಗಿಯನ್ನು ಖರೀದಿಸಿದರೆ, ನಾನು ಇದೀಗ ಆ ಸಂಗೀತದ ಮಾಲೀಕತ್ವ ಹೊಂದಿದ್ದೇನೆ ಎಂದು ಅರ್ಥವೇ?
ಇಲ್ಲ, ನೀವು ಪರವಾನಗಿ ಖರೀದಿಸಿದರೆ, ಸಂಗೀತದ ಮಾಲೀಕತ್ವ ಹೊಂದಿದ್ದೀರಿ ಎಂದು ಅರ್ಥವಲ್ಲ. ಸಂಗೀತವನ್ನು ಬಳಸಲು ನೀವು ಅನುಮತಿಯನ್ನು ಖರೀದಿಸುತ್ತಿದ್ದೀರಿ ಎಂಬುದು ಅದರ ಅರ್ಥವಾಗಿದೆ. ನಿರ್ದಿಷ್ಟವಾಗಿ, ಪರವಾನಗಿಯ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಂತೆ, ನೀವು ಪರವಾನಗಿ ಖರೀದಿಸುತ್ತಿರುವ ಸಂಗೀತದೊಂದಿಗೆ ವೀಡಿಯೊವನ್ನು ಸಿಂಕ್ ಮಾಡಲು ಅನುಮತಿ ನೀಡುವ, ಏಕ-ಬಳಕೆಯ ಸಿಂಕ್ರೊನೈಸೇಶನ್ (ಅಥವಾ “ಸಿಂಕ್”) ಪರವಾನಗಿಯನ್ನು ಖರೀದಿಸುತ್ತಿದ್ದೀರಿ.
ಪರವಾನಗಿ ದರಗಳನ್ನು ಹೇಗೆ ತೀರ್ಮಾನಿಸಲಾಗುತ್ತದೆ? ದರಗಳು ಬದಲಾಗಬಹುದೇ?

ಟ್ರ್ಯಾಕ್‌ಗಳ ಹಕ್ಕುಗಳನ್ನು ಹೊಂದಿರುವ ಸಂಗೀತ ಪಾಲುದಾರರು, ಪರವಾನಗಿಯ ನಿಯಮಗಳು ಹಾಗೂ ದರಗಳನ್ನು ಸೆಟ್ ಮಾಡುತ್ತಾರೆ. ಕೆಲವು ಟ್ರ್ಯಾಕ್‌ಗಳು ಎಲ್ಲಾ ರಚನೆಕಾರರಿಗಾಗಿ ನಿಗದಿತ ದರವನ್ನು ಹೊಂದಿರುತ್ತವೆ, ಆದರೆ ಇತರವುಗಳು, ನಿಮ್ಮ ಚಾನಲ್‌ನ ಗಾತ್ರವನ್ನು ಅವಲಂಬಿಸಿ ಕಸ್ಟಮೈಸ್ ಮಾಡಿದ ದರವನ್ನು ಹೊಂದಿರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ.

ನೀವು ಪರವಾನಗಿಯನ್ನು ಖರೀದಿಸಿದಾಗ, ಪರವಾನಗಿಯ ಅವಧಿಯವರೆಗೆ, ದರದ ಬದಲಾವಣೆಗಳು ಅದರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.

ಪರವಾನಗಿಯ ದರ ಬದಲಾದರೆ, ನನ್ನ ಈ ಹಿಂದಿನ ಖರೀದಿಯ ಮೇಲೆ ಅದು ಪ್ರಭಾವ ಬೀರುತ್ತದೆಯೇ?
ಪರವಾನಗಿಯ ದರದಲ್ಲಿನ ಯಾವುದೇ ಬದಲಾವಣೆಯು, ಈ ಹಿಂದೆ ನೀವು ಖರೀದಿಸಿದ ಮತ್ತು ಬಳಸಿದ ಪರವಾನಗಿಯ ಮೇಲೆ ಪರಿಣಾಮ ಬೀರುವುದಿಲ್ಲ.
ನಾನು ಪರವಾನಗಿಯನ್ನು ಖರೀದಿಸದೆ ನನ್ನ ವೀಡಿಯೊದಲ್ಲಿ ಟ್ರ್ಯಾಕ್ ಅನ್ನು ಬಳಸಿದರೆ ಏನಾಗುತ್ತದೆ?
Creator Music ನಲ್ಲಿ ಪರವಾನಗಿ ನೀಡುವಿಕೆಗೆ ಅರ್ಹವಾಗಿರುವ ಕೆಲವು ಟ್ರ್ಯಾಕ್‌ಗಳು ಆದಾಯ ಹಂಚಿಕೆಗೆ ಅರ್ಹವಾಗಿರುತ್ತವೆ. ಇದರ ಅರ್ಥ, ವೀಡಿಯೊದ ಆದಾಯವನ್ನು ನಿಮ್ಮ ಮತ್ತು ಹಾಡಿನ ಹಕ್ಕುದಾರರ ನಡುವೆ ವಿಭಜಿಸಲಾಗುತ್ತದೆ.
ಪರವಾನಗಿ ನೀಡಲು ಅಥವಾ ಆದಾಯ ಹಂಚಿಕೊಳ್ಳಲು ಲಭ್ಯವಿಲ್ಲದ ಇತರ ಹಾಡುಗಳು ನಿಮ್ಮ ವೀಡಿಯೊದ ಮೇಲೆ Content ID ಕ್ಲೈಮ್ ಅಥವಾ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಪಡೆಯಲು ಕಾರಣವಾಗಬಹುದು ಮತ್ತು ಇದರಿಂದಾಗಿ ನೀವು ವೀಡಿಯೊವನ್ನು ಮಾನಿಟೈಸ್ ಮಾಡಲು ಸಾಧ್ಯವಾಗದಿರಬಹುದು.
ಒಂದು ಟ್ರ್ಯಾಕ್‌ನ ಮೇಲೆ ಯಾವ ನಿಯಮಗಳು ಅನ್ವಯಿಸುತ್ತವೆ ಎಂಬುದನ್ನು ನೋಡಲು ನೀವು Creator Music ನಲ್ಲಿ ಬಳಕೆಯ ವಿವರಗಳನ್ನು ಪರಿಶೀಲಿಸಬಹುದು.
ನಾನು ಪರವಾನಗಿಯನ್ನು ಖರೀದಿಸಿದರೆ, ಪರವಾನಗಿ ಪಡೆದ ಟ್ರ್ಯಾಕ್ ಅನ್ನು ನಾನು ಅನೇಕ ವೀಡಿಯೊಗಳಲ್ಲಿ ಬಳಸಬಹುದೇ?
ಪ್ರಸ್ತುತ, ನಾವು ಏಕ-ಬಳಕೆಯ ಪರವಾನಗಿಗಳನ್ನು ಮಾತ್ರ ಬೆಂಬಲಿಸುತ್ತೇವೆ. ಇದರ ಅರ್ಥ, ನೀವು ಒಂದು ಟ್ರ್ಯಾಕ್‌ನ ಪರವಾನಗಿಯನ್ನು ಖರೀದಿಸಿದ್ದರೆ, ಆ ಟ್ರ್ಯಾಕ್ ಅನ್ನು ನೀವು ಒಂದು ವೀಡಿಯೊದಲ್ಲಿ ಮಾತ್ರ ಬಳಸಬಹುದು. ನೀವು ಒಂದೇ ಟ್ರ್ಯಾಕ್ ಅನ್ನು ಅನೇಕ ವೀಡಿಯೊಗಳಲ್ಲಿ ಬಳಸಲು ಬಯಸುತ್ತೀರಿ ಎಂದಾದರೆ, ನೀವು ಪ್ರತಿ ವೀಡಿಯೊಗಾಗಿ ಪರವಾನಗಿಯನ್ನು ಖರೀದಿಸಬೇಕಾಗುತ್ತದೆ.
ನಾನು ಒಂದೇ ವೀಡಿಯೊದಲ್ಲಿ, ಪರವಾನಗಿ ಪಡೆದ ಅನೇಕ ಟ್ರ್ಯಾಕ್‌ಗಳನ್ನು ಬಳಸಬಹುದೇ?
ಹೌದು! ವೀಡಿಯೊದಲ್ಲಿ ಸೇರಿಸಬಹುದಾದ ಪರವಾನಗಿಗಳ ಸಂಖ್ಯೆಯ ಮೇಲೆ ಯಾವುದೇ ಮಿತಿಯಿಲ್ಲ. ಮಾನಿಟೈಸ್ ಮಾಡಲು ಸಾಧ್ಯವಾಗಬೇಕಾದರೆ, ವೀಡಿಯೊದಲ್ಲಿನ ಎಲ್ಲಾ ಕಂಟೆಂಟ್‌ನ ಹಕ್ಕುಗಳನ್ನು ನೀವು ಪಡೆದುಕೊಂಡಿರಬೇಕು ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ.
Creator Music ನ ಮೂಲಕ ಪರವಾನಗಿ ಪಡೆದ ಟ್ರ್ಯಾಕ್‌ಗಳನ್ನು ನಾನು YouTube ಹೊರತುಪಡಿಸಿ ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಬಳಸಬಹುದೇ?
ಇಲ್ಲ, ನೀವು Creator Music ನಿಂದ ಒಂದು ಟ್ರ್ಯಾಕ್‌ನ ಪರವಾನಗಿ ಪಡೆದಿದ್ದರೆ, YouTube ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊಗಳಲ್ಲಿ ಮಾತ್ರ ಆ ಟ್ರ್ಯಾಕ್ ಅನ್ನು ನೀವು ಬಳಸಬಹುದು. Creator Music ಬಳಕೆಯ ವಿವರಗಳ ಕುರಿತು ಇನ್ನಷ್ಟು ತಿಳಿಯಿರಿ.
ಪರವಾನಗಿಯ ಅವಧಿ ಮುಗಿದಾಗ ವೀಡಿಯೊಗೆ ಏನಾಗುತ್ತದೆ?
ನಿಮ್ಮ ಪರವಾನಗಿಯನ್ನು ನವೀಕರಿಸಲು ನಿಮಗೆ ಸಾಧ್ಯವಾಗಬಹುದು. ನೀವು ಪರವಾನಗಿಯನ್ನು ನವೀಕರಿಸದಿದ್ದರೆ, ಸಂಗೀತದ ಬಳಕೆಯ ನಿಯಮಗಳು ಆದಾಯ ಹಂಚಿಕೆಯ ನಿಯಮಗಳಿಗೆ ಡೀಫಾಲ್ಟ್ ಆಗಬಹುದು (ಒಂದು ವೇಳೆ ಆ ಟ್ರ್ಯಾಕ್ ಆದಾಯ ಹಂಚಿಕೆಗೆ ಅರ್ಹವಾಗಿದ್ದರೆ).
ಇಲ್ಲದಿದ್ದರೆ, ವೀಡಿಯೊದಲ್ಲಿರುವ ಟ್ರ್ಯಾಕ್ ಪರವಾನಗಿಯನ್ನು ಹೊಂದಿಲ್ಲ ಅಥವಾ ಆದಾಯ ಹಂಚಿಕೊಳ್ಳುವುದಿಲ್ಲ ಎಂದಾದರೆ, ಅದು Content ID ಕ್ಲೈಮ್ ಅಥವಾ ಕೃತಿಸ್ವಾಮ್ಯ ಹೊಂದಿರುವ ವೀಡಿಯೋ ತೆಗೆದುಹಾಕುವ ವಿನಂತಿಯನ್ನು ಪಡೆಯುವ ಅಪಾಯಕ್ಕೀಡಾಗುವ ಕಾರಣ, ಆ ವೀಡಿಯೊ ಮಾನಿಟೈಸೇಶನ್ ಅಥವಾ ಗೋಚರತೆಯ ನಿರ್ಬಂಧಗಳನ್ನು ಹೊಂದಿರಬಹುದು.
ನಾನು ಖರೀದಿಸಿದ ಪರವಾನಗಿಗಾಗಿ ಮರುಪಾವತಿಯನ್ನು ವಿನಂತಿಸುವುದು ಹೇಗೆ?

YouTube Studio ದಲ್ಲಿ Creator Music ಲೈಬ್ರರಿ ಪುಟದಿಂದ ನೇರವಾಗಿ Creator Music ಪರವಾನಗಿಗಾಗಿ ಮರುಪಾವತಿಯನ್ನು ನೀವು ವಿನಂತಿಸಬಹುದು. ಮರುಪಾವತಿಯನ್ನು ವಿನಂತಿಸಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ Creator Music ಅನ್ನು ಆಯ್ಕೆ ಮಾಡಿ.
  3. ನಿಮ್ಮ ಲೈಬ್ರರಿ ಟ್ಯಾಬ್ ಅನ್ನು ಆಯ್ಕೆ ಮಾಡಿ.
  4. ನೀವು ಯಾವ ಟ್ರ್ಯಾಕ್‌ನ ಪರವಾನಗಿಗಾಗಿ ಮರುಪಾವತಿ ಪಡೆಯಲು ಬಯಸುತ್ತೀರೋ, ಆ ಟ್ರ್ಯಾಕ್ ಅನ್ನು ಹುಡುಕಿ.
    • (ಐಚ್ಛಿಕ) ನೀವು ಪರವಾನಗಿ ಪಡೆದಿರುವ ಟ್ರ್ಯಾಕ್‌ಗಳನ್ನು ಮಾತ್ರ ವೀಕ್ಷಿಸಲು, ಪುಟದ ಮೇಲ್ಭಾಗದಲ್ಲಿ ಪರವಾನಗಿ ಪಡೆದಿರುವುದು ಎಂಬುದನ್ನು ಕ್ಲಿಕ್ ಮಾಡಿ.
  5. ಟ್ರ್ಯಾಕ್‌ನ ಸಾಲಿನಲ್ಲಿ, "ಇನ್ನಷ್ಟು ಕ್ರಿಯೆಗಳು" '' ನಂತರ ಮರುಪಾವತಿಯನ್ನು ವಿನಂತಿಸಿ ಎಂಬುದನ್ನು ಕ್ಲಿಕ್ ಮಾಡಿ.
  6. ಮರುಪಾವತಿ ವಿನಂತಿ ಫಾರ್ಮ್ ಅನ್ನು ಪೂರ್ಣಗೊಳಿಸಿ.

ನೀವು ಮರುಪಾವತಿ ವಿನಂತಿ ಫಾರ್ಮ್ ಅನ್ನು ಸಲ್ಲಿಸಿದ ನಂತರ, ವಿನಂತಿಯು Creator Music ಮರುಪಾವತಿ ನೀತಿಯ ಅಡಿಯಲ್ಲಿ ಮರುಪಾವತಿಗೆ ಅರ್ಹವಾಗಿದ್ದರೆ, ನಮ್ಮ ಬೆಂಬಲ ತಂಡವು ನಿಮಗಾಗಿ ಮರುಪಾವತಿಯನ್ನು ಪ್ರಕ್ರಿಯೆಗೊಳಿಸುತ್ತದೆ. ಮರುಪಾವತಿ ನೀತಿಯನ್ನು ಪರಿಶೀಲಿಸಲು, Creator Music ಸೇವಾ ನಿಯಮಗಳಲ್ಲಿ "ರದ್ದುಗೊಳಿಸುವಿಕೆ ಹಾಗೂ ಮರುಪಾವತಿಗಳು" ವಿಭಾಗಕ್ಕೆ ಹೋಗಿ.

ಆದಾಯ ಹಂಚಿಕೆ FAQ ಗಳು

ನಾನು ಆದಾಯ ಹಂಚಿಕೊಳ್ಳುವಿಕೆಗೆ ಯಾವಾಗ ಅರ್ಹತೆ ಪಡೆಯುತ್ತೇನೆ
  • ಟ್ರ್ಯಾಕ್‌ನ ಪಕ್ಕದಲ್ಲಿ ಆದಾಯ ಹಂಚಿಕೊಳ್ಳಿ ಐಕಾನ್ ಕಂಡುಬಂದಾಗ
    • ಯಾವುದೇ ಅವಧಿಯ ವೀಡಿಯೊದಲ್ಲಿ ನೀವು ಟ್ರ್ಯಾಕ್‌ನ ಎಷ್ಟು ಭಾಗವನ್ನು ಬೇಕಾದರೂ ಬಳಸಿಕೊಳ್ಳಬಹುದು.
  • ಟ್ರ್ಯಾಕ್‌ಗಾಗಿ ಪರವಾನಗಿ ಪಡೆಯಬಹುದು, ಆದರೆ ನೀವು ಪರವಾನಗಿಯನ್ನು ಖರೀದಿಸಲು ಬಯಸುವುದಿಲ್ಲ ಎಂದಾದರೆ
    • ಟ್ರ್ಯಾಕ್‌ನ ನಿಮ್ಮ ಬಳಕೆಯು 3 ನಿಮಿಷಕ್ಕಿಂತ ಉದ್ದದ ವೀಡಿಯೊದಲ್ಲಿ 30 ಸೆಕೆಂಡ್‌ಗಳಿಗಿಂತ ಕಡಿಮೆ ಇರಬೇಕು.
ಆದಾಯ ಹಂಚಿಕೆಯ ವಿಭಜನೆ ಹೇಗಿರುತ್ತದೆ?

Creator Music ಮೂಲಕ, ಆದಾಯ ಹಂಚಿಕೆಗೆ ಅರ್ಹವಾಗಿರುವ ಟ್ರ್ಯಾಕ್‌ಗಳನ್ನು ದಿರ್ಘಾವಧಿಯ ವೀಡಿಯೊದಲ್ಲಿ ಬಳಸಿದರೆ, ಈ ಕೆಳಗಿನ ಉದಾಹರಣೆಗಳಲ್ಲಿ ತೋರಿಸಿರುವಂತೆ ಸಂಗೀತ ಹಕ್ಕುಗಳನ್ನು ಕ್ಲಿಯರ್ ಮಾಡುವ ವೆಚ್ಚಗಳನ್ನು ಭರಿಸುವುದಕ್ಕಾಗಿ ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯನ್ನು ಸರಿಹೊಂದಿಸಲಾಗುತ್ತದೆ. ಇದು ಇವುಗಳನ್ನು ಅವಲಂಬಿಸಿರುತ್ತದೆ:

  • ಬಳಸಲಾಗಿರುವ ಟ್ರ್ಯಾಕ್‌ಗಳು: ರಚನೆಕಾರರು ತಮ್ಮ ವೀಡಿಯೊದಲ್ಲಿ ಎಷ್ಟು ಅರ್ಹ ಆದಾಯ ಹಂಚಿಕೆ ಟ್ರ್ಯಾಕ್‌ಗಳನ್ನು ಬಳಸುತ್ತಾರೆ (ಕೆಳಗಿನ ಉದಾಹರಣೆಗಳನ್ನು ನೋಡಿ).
  • ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು: ಕಾರ್ಯನಿರ್ವಹಣೆಯ ಹಕ್ಕುಗಳು ಸೇರಿದಂತೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳನ್ನು ಭರಿಸುವುದಕ್ಕಾಗಿ ಕಡಿತ. ಈ ಕಡಿತವು ಗರಿಷ್ಠ 5% ವರೆಗೆ ಇರಬಹುದು ಮತ್ತು ಆದಾಯ ಹಂಚಿಕೆಗೆ ಅರ್ಹವಾಗಿರುವ Creator Music ಟ್ರ್ಯಾಕ್‌ಗಳಾದ್ಯಂತ ಈ ಹೆಚ್ಚುವರಿ ಸಂಗೀತ ಹಕ್ಕುಗಳ ಸಂಯೋಜಿತ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.
ಆದಾಯ ಹಂಚಿಕೆ ಲೆಕ್ಕಾಚಾರಗಳ ಉದಾಹರಣೆಗಳು

ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್‌ನ ಬಳಕೆ

ಉದಾಹರಣೆ: ರಚನೆಕಾರರು ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 1 ಆದಾಯ ಹಂಚಿಕೆ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯಲ್ಲಿ ಅರ್ಧ ಭಾಗವನ್ನು (27.5%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2.5% ಆಗಬಹುದು.

ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 25% (27.5% - 2.5%) ಗಳಿಸುತ್ತಾರೆ.

 
ಉದಾಹರಣೆ: 1 ಆದಾಯ ಹಂಚಿಕೆ ಟ್ರ್ಯಾಕ್‌ನ ಬಳಕೆ
ಉದಾಹರಣೆ ಆದಾಯ ಹಂಚಿಕೆ: 55% ÷ 2 27.5%
ಉದಾಹರಣೆ ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು - 2.5%
ಉದಾಹರಣೆ ಒಟ್ಟು ಆದಾಯ 25%

ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್‌ನ ಬಳಕೆ

ಉದಾಹರಣೆ: ಕ್ರಿಯೇಟರ್ ತಮ್ಮ ದೀರ್ಘಾವಧಿಯ ವೀಡಿಯೊದಲ್ಲಿ 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್ ಅನ್ನು ಬಳಸುತ್ತಾರೆ ಮತ್ತು ಸ್ಟ್ಯಾಂಡರ್ಡ್ 55% ಆದಾಯ ಹಂಚಿಕೆಯ 1/3 ಭಾಗವನ್ನು (18.33%) ಗಳಿಸುತ್ತಾರೆ. ಉದಾಹರಣೆಗೆ, ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳಿಗಾಗಿ ಕಡಿತವು 2% ಆಗಬಹುದು.

ಈ ವೀಡಿಯೊಗಾಗಿ, ಕ್ರಿಯೇಟರ್ ಒಟ್ಟು ಆದಾಯದ 16.33% ಭಾಗವನ್ನು (18.33% - 2%) ಗಳಿಸುತ್ತಾರೆ.

 
ಉದಾಹರಣೆ: 2 ಆದಾಯ ಹಂಚಿಕೆ ಟ್ರ್ಯಾಕ್‌ಗಳು ಮತ್ತು 1 ಪರವಾನಗಿ ಪಡೆದ ಟ್ರ್ಯಾಕ್‌ನ ಬಳಕೆ
ಉದಾಹರಣೆ ಆದಾಯ ಹಂಚಿಕೆ: 55% ÷ 3 18.33%
ಉದಾಹರಣೆ ಹೆಚ್ಚುವರಿ ಸಂಗೀತ ಹಕ್ಕುಗಳ ವೆಚ್ಚಗಳು - 2.5%
ಉದಾಹರಣೆ ಒಟ್ಟು ಆದಾಯ 15.83%
ನನ್ನ ವೀಡಿಯೊ ಏಕೆ ಆದಾಯ ಹಂಚಿಕೊಳ್ಳುತ್ತಿಲ್ಲ?
ನಿಮ್ಮ ವೀಡಿಯೊ ಆದಾಯ ಹಂಚಿಕೊಳ್ಳದಿರಲು ಕೆಲವು ಕಾರಣಗಳಿರಬಹುದು:
  • Content ID ಗೆ ನಿಮ್ಮ ವೀಡಿಯೊದಲ್ಲಿ ಆದಾಯ ಹಂಚಿಕೆಗೆ ಅರ್ಹವಾದ ಟ್ರ್ಯಾಕ್ ಕಂಡುಬರಲಿಲ್ಲ. ಒಂದು ವೇಳೆ ಟ್ರ್ಯಾಕ್ ಆದಾಯ ಹಂಚಿಕೆಗೆ ಅರ್ಹವಾಗಿದೆ ಎಂಬುದನ್ನು Content ID ಆನಂತರ ಕಂಡುಕೊಂಡರೆ, ಆ ಸಮಯದಲ್ಲಿ ನಿಮ್ಮ ವೀಡಿಯೊವನ್ನು ಆದಾಯ ಹಂಚಿಕೆಗೆ ಸಕ್ರಿಯಗೊಳಿಸಲಾಗುತ್ತದೆ.
  • ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಸಮಯದಲ್ಲೇ ಹಕ್ಕುದಾರ(ರು) ಆ ಟ್ರ್ಯಾಕ್‌ಗಾಗಿ ಆದಾಯ ಹಂಚಿಕೆಯನ್ನು ನಿಷ್ಕ್ರಿಯಗೊಳಿಸಿರಬಹುದು.
  • ಪರವಾನಗಿಯು ನಿಮ್ಮ ಖರೀದಿಗೆ ಲಭ್ಯವಿದೆ, ಆದರೆ 3 ನಿಮಿಷಗಳ ವೀಡಿಯೊದಲ್ಲಿ ಟ್ರ್ಯಾಕ್‌ನ ಬಳಕೆಯು 30 ಸೆಕೆಂಡ್‌ಗಳಿಗಿಂತ ಕಡಿಮೆಯಾಗಿಲ್ಲ.
  • ಆದಾಯ ಹಂಚಿಕೆಗೆ ಅರ್ಹವಲ್ಲದ ಇತರ ಥರ್ಡ್-ಪಾರ್ಟಿ ಕಂಟೆಂಟ್‌ಗಾಗಿ ನಿಮ್ಮ ವೀಡಿಯೊ Content ID ಕ್ಲೈಮ್ ಅನ್ನು ಹೊಂದಿದೆ. Content ID ಕ್ಲೈಮ್ ಅನ್ನು ಬಗೆಹರಿಸಲು ನಿಮಗಿರುವ ಆಯ್ಕೆಗಳ ಕುರಿತು ತಿಳಿದುಕೊಳ್ಳಿ.
ನಾನು ಈಗಾಗಲೇ ಅಪ್‌ಲೋಡ್ ಮಾಡಿರುವ ವೀಡಿಯೊಗಳು ಆದಾಯ ಹಂಚಿಕೆಗೆ ಅರ್ಹವಾಗಿವೆಯೇ?
ಇಲ್ಲ, ನೀವು Creator Music ಗೆ ಆ್ಯಕ್ಸೆಸ್ ಪಡೆದ ಬಳಿಕ ಪ್ರಕಟಿಸಿದ ವೀಡಿಯೊಗಳಿಗೆ ಮಾತ್ರ ಪರವಾನಗಿ/ಆದಾಯ ಹಂಚಿಕೆ ಅನ್ವಯಿಸುತ್ತದೆ. ಅದು ರೆಟ್ರೊಆ್ಯಕ್ಟಿವ್ ಆಗಿ ಅನ್ವಯಿಸುವುದಿಲ್ಲ.
Creator Music ಆದಾಯ ಹಂಚಿಕೆಯು Shorts ಆದಾಯ ಹಂಚಿಕೆಗಿಂತ ಭಿನ್ನವಾಗಿದೆಯೇ?
ಹೌದು, ಅವು ಭಿನ್ನವಾಗಿವೆ. Shorts ಆದಾಯ ಹಂಚಿಕೆಯು ತಮ್ಮ Shorts ಅನ್ನು ಅಪ್‌ಲೋಡ್ ಮಾಡಿದ ಬಳಿಕ ರಚನೆಕಾರರು ಅದರ % ಪಾಲನ್ನು ಪಡೆಯಲು ರಚನೆಕಾರರಿಗೆ ಅವಕಾಶ ನೀಡುತ್ತದೆ. Creator Music ಆದಾಯ ಹಂಚಿಕೆಯ ಮೂಲಕ ರಚನೆಕಾರರು ತಮ್ಮ ಲಾಂಗ್-ಫಾರ್ಮ್ ವೀಡಿಯೊಗಳಲ್ಲಿ ಅರ್ಹ ಸಂಗೀತವನ್ನು ಬಳಸಿದಾಗ, ಸಂಗೀತ ಹಕ್ಕುದಾರರೊಂದಿಗೆ ಆದಾಯವನ್ನು ಹಂಚಿಕೊಳ್ಳಲು ಅವಕಾಶವಿರುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
671524489372659015
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false