ಚುನಾವಣೆಗಳ ಕುರಿತು ತಪ್ಪು ಮಾಹಿತಿಯ ನೀತಿಗಳು

2 ಜೂನ್ 2023 ರಂದು, ಈ ನೀತಿಯು ಹಿಂದಿನ US ಚುನಾವಣಾ ಫಲಿತಾಂಶಗಳಿಗೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ನಾವು ಅಪ್‌ಡೇಟ್ ಮಾಡಿದ್ದೇವೆ. ನಮ್ಮ ಬ್ಲಾಗ್‌ನಲ್ಲಿ ಇನ್ನಷ್ಟು ತಿಳಿಯಿರಿ.

ಅತಿಯಾದ ಹಾನಿಗೆ ಕಾರಣವಾಗುವ ಗಂಭೀರ ಅಪಾಯವನ್ನು ಹೊಂದಿರುವಂತಹ ದಾರಿತಪ್ಪಿಸುವ ಅಥವಾ ಮೋಸಗೊಳಿಸುವ ಕೆಲವು ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ಇದು ನೈಜ-ಪ್ರಪಂಚದ ಹಾನಿಯನ್ನು ಉಂಟುಮಾಡುವ ಕೆಲವು ಪ್ರಕಾರಗಳ ತಪ್ಪು ಮಾಹಿತಿಯನ್ನು ಒಳಗೊಂಡಿದೆ. ಉದಾಹರಣೆಗೆ, ತಾಂತ್ರಿಕವಾಗಿ ಬದಲಾಯಿಸಲಾದ ಕೆಲವು ಪ್ರಕಾರಗಳ ಕಂಟೆಂಟ್ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಕಂಟೆಂಟ್‌.

ಚುನಾವಣೆಗಳ ಕುರಿತು ತಪ್ಪು ಮಾಹಿತಿಯ ನೀತಿ: YouTube ಸಮುದಾಯ ಮಾರ್ಗಸೂಚಿಗಳು

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದನ್ನು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ವರದಿ ಮಾಡುವುದರ ಕುರಿತ ಸೂಚನೆಗಳು ಇಲ್ಲಿ ಲಭ್ಯವಿವೆ. ಒಂದೇ ಚಾನಲ್‌ನಿಂದ, ನೀವು ವರದಿ ಮಾಡಲು ಬಯಸುವಂತಹ ಅನೇಕ ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್‌ ಅನ್ನು ವರದಿ ಮಾಡಬಹುದು.

ಈ ನೀತಿಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತವೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಮುಕ್ತ ಮತ್ತು ನ್ಯಾಯಯುತವಾದ ಪ್ರಜಾತಾಂತ್ರಿಕ ಚುನಾವಣೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ವಿಧಗಳ ಕಂಟೆಂಟ್ ಅನ್ನು ಈ ನೀತಿಗಳು ನಿಷೇಧಿಸುತ್ತವೆ. ಚುನಾವಣೆಗಳಿಗೆ ಸಂಬಂಧಿಸಿದ ಕಂಟೆಂಟ್, ಈ ಕೆಳಗೆ ಸೂಚಿಸಿದ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ಮತದಾರರನ್ನು ನಿಗ್ರಹಿಸುವುದು: ಮತದಾನದ ಸಮಯ, ಸ್ಥಳ, ವಿಧಾನ ಅಥವಾ ಅರ್ಹತೆಯ ಅವಶ್ಯಕತೆಗಳ ಕುರಿತು ಮತದಾರರನ್ನು ದಾರಿತಪ್ಪಿಸುವ ಗುರಿಯನ್ನು ಹೊಂದಿರುವ, ಅಥವಾ ಮತದಾನವನ್ನು ಗಮನಾರ್ಹವಾಗಿ ಕಡಿಮೆಗೊಳಿಸಬಹುದಾದ ತಪ್ಪು ಪ್ರತಿಪಾದನೆಗಳನ್ನು ಹೊಂದಿರುವ ಕಂಟೆಂಟ್.
  • ಅಭ್ಯರ್ಥಿಯ ಅರ್ಹತೆ: ಪ್ರಸ್ತುತ ರಾಜಕೀಯ ಅಭ್ಯರ್ಥಿಗಳು ಮತ್ತು ಪ್ರಸ್ತುತ ಚುನಾಯಿತ ಸರಕಾರಿ ಅಧಿಕಾರಿಗಳು ಕಚೇರಿಯಲ್ಲಿ ಸೇವೆ ಸಲ್ಲಿಸಲು ಹೊಂದಿರಬೇಕಾದ ತಾಂತ್ರಿಕ ಅರ್ಹತೆಯ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ತಪ್ಪು ಪ್ರತಿಪಾದನೆಗಳನ್ನು ಮಂಡಿಸುವ ಕಂಟೆಂಟ್. ಪರಿಗಣಿಸಲಾದ ಅರ್ಹತೆಯ ಅವಶ್ಯಕತೆಗಳು ಅನ್ವಯವಾಗುವ ರಾಷ್ಟ್ರೀಯ ಕಾನೂನನ್ನು ಆಧರಿಸಿರುತ್ತವೆ, ಮತ್ತು ವಯಸ್ಸು, ಪೌರತ್ವ ಅಥವಾ ಜನನ ಮರಣಗಳ ಮಾಹಿತಿಯನ್ನು ಒಳಗೊಂಡಿರುತ್ತವೆ.
  • ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಉಂಟುಮಾಡಲು ಉತ್ತೇಜಿಸುವುದು: ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಉಂಟುಮಾಡಲು ಇತರರನ್ನು ಪ್ರೋತ್ಸಾಹಿಸುವ ಕಂಟೆಂಟ್. ಇದು ಮತದಾನದ ಕಾರ್ಯವಿಧಾನಗಳನ್ನು ತಡೆಯುವುದು ಅಥವಾ ಅಡ್ಡಿಪಡಿಸುವುದನ್ನು ಒಳಗೊಂಡಿದೆ.
  • ಚುನಾವಣಾ ಪ್ರಾಮಾಣಿಕತೆ: ಸರಕಾರದ ಮುಖ್ಯಸ್ಥರನ್ನು ತೀರ್ಮಾನಿಸುವುದಕ್ಕಾಗಿ ಕೆಲವೊಂದು ಹಿಂದಿನ ಚುನಾವಣೆಗಳಲ್ಲಿ ವ್ಯಾಪಕ ವಂಚನೆ, ದೋಷಗಳು ಅಥವಾ ನ್ಯೂನತೆಗಳು ಉಂಟಾಗಿವೆ ಎಂಬಂತಹ ತಪ್ಪು ಪ್ರತಿಪಾದನೆಗಳನ್ನು ಮಂಡಿಸುವ ಕಂಟೆಂಟ್. ಅಥವಾ, ಆ ಚುನಾವಣೆಗಳ ಪ್ರಮಾಣಿತ ಫಲಿತಾಂಶಗಳು ತಪ್ಪಾಗಿದ್ದವು ಎಂದು ಪ್ರತಿಪಾದಿಸುವ ಕಂಟೆಂಟ್. ಈ ನೀತಿಯು ಪ್ರಸ್ತುತ, ಇವುಗಳಿಗೆ ಅನ್ವಯಿಸುತ್ತದೆ:
    • 2021 ಜರ್ಮನ್ ಫೆಡರಲ್ ಚುನಾವಣೆ
    • 2014, 2018, ಹಾಗೂ 2022 ರ ಬ್ರಝೀಲಿಯನ್ ಅಧ್ಯಕ್ಷೀಯ ಚುನಾವಣೆಗಳು

ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ.

ಉದಾಹರಣೆಗಳು

ಈ ಕೆಳಗಿನಂತಹ ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ಇದು ಸಂಪೂರ್ಣ ಪಟ್ಟಿಯಲ್ಲ.

ಮತದಾರರನ್ನು ನಿಗ್ರಹಿಸುವುದು
  • ನಿರ್ದಿಷ್ಟ ಸಂಖ್ಯೆಗೆ ತಮ್ಮ ಮತವನ್ನು ಪಠ್ಯ ಸಂದೇಶದ ಮೂಲಕ ಕಳುಹಿಸುವಂತಹ ನಿಖರವಲ್ಲದ ವಿಧಾನಗಳ ಮೂಲಕ ವೀಕ್ಷಕರು ಮತದಾನ ಮಾಡಬಹುದೆಂದು ಹೇಳುವುದು.
  • ನಿರ್ದಿಷ್ಟ ಚುನಾವಣೆಯು 50 ವರ್ಷಗಳಿಗಿಂತ ಹೆಚ್ಚು ವಯಸ್ಸಿನ ಮತದಾರರಿಗೆ ಮಾತ್ರ ಮುಕ್ತವಾಗಿದೆ ಎಂಬ ಹಾಗೆ ಮತದಾರರಿಗೆ ಇರಬೇಕಾದ ಅರ್ಹತೆಗಳನ್ನು, ಕಪೋಲಕಲ್ಪಿತವಾಗಿ ಒದಗಿಸುವುದು.
  • ವೀಕ್ಷಕರಿಗೆ ತಪ್ಪು ಮತದಾನ ದಿನಾಂಕವನ್ನು ಹೇಳುವುದು.
  • ಮತದಾರರಿಗೆ ಯಾವ ಪಕ್ಷದ ಕುರಿತು ಒಲವು ಇದೆ ಎಂಬುದು, ಅಂಚೆಯ ಮೂಲಕ ಮತದಾನ ಮಾಡುವ ಎನ್ವಲಪ್‌ನಲ್ಲಿ ಗೋಚರಿಸುತ್ತಿದೆ ಎಂದು ಪ್ರತಿಪಾದಿಸುವುದು.
  • ನಾಗರಿಕರಲ್ಲದವರ ಮತದಾನವು ಹಿಂದಿನ ಚುನಾವಣೆಗಳ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂಬ ತಪ್ಪು ಪ್ರತಿಪಾದನೆಗಳು.
  • ಜನರ ಮತವನ್ನು ಬದಲಾಯಿಸುವುದಕ್ಕಾಗಿ ಈ ಹಿಂದೆ ಬ್ರಝೀಲ್‌ನಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ತಪ್ಪು ಪ್ರತಿಪಾದನೆಗಳು.
ಅಭ್ಯರ್ಥಿಗೆ ಇರಬೇಕಾದ ಅರ್ಹತೆ
  • ಒಂದು ದೇಶ/ಪ್ರದೇಶದಲ್ಲಿ ಸೇವೆ ಸಲ್ಲಿಸಲು ಇರಬೇಕಾದ ವಯಸ್ಸಿನ ಅವಶ್ಯಕತೆಯ ಕುರಿತ ತಪ್ಪು ಮಾಹಿತಿಯನ್ನು ಆಧರಿಸಿ, ಒಬ್ಬ ಅಭ್ಯರ್ಥಿ ಅಥವಾ ಹುದ್ದೆಯಲ್ಲಿರುವ ಸರಕಾರಿ ಅಧಿಕಾರಿಯು ಸೇವೆ ಸಲ್ಲಿಸಲು ಅರ್ಹರಲ್ಲ ಎಂಬ ಪ್ರತಿಪಾದನೆಗಳು.
  • ಒಂದು ದೇಶ/ಪ್ರದೇಶದಲ್ಲಿ ಸೇವೆ ಸಲ್ಲಿಸಲು ಇರಬೇಕಾದ ಪೌರತ್ವ ಸ್ಥಿತಿಯ ಕುರಿತ ತಪ್ಪು ಮಾಹಿತಿಯನ್ನು ಆಧರಿಸಿ, ಒಬ್ಬ ಅಭ್ಯರ್ಥಿ ಅಥವಾ ಹುದ್ದೆಯಲ್ಲಿರುವ ಸರಕಾರಿ ಅಧಿಕಾರಿಯು ಸೇವೆ ಸಲ್ಲಿಸಲು ಅರ್ಹರಲ್ಲ ಎಂಬ ಪ್ರತಿಪಾದನೆಗಳು.
  • ಒಬ್ಬ ಅಭ್ಯರ್ಥಿ ಅಥವಾ ಹುದ್ದೆಯಲ್ಲಿರುವ ಸರಕಾರಿ ಅಧಿಕಾರಿಯು ಮರಣ ಹೊಂದಿದ್ದಾರೆ, ಅಥವಾ ಅವರಿಗೆ ಸಾಕಷ್ಟು ವಯಸ್ಸಾಗಿಲ್ಲ ಅಥವಾ ಇರಬೇಕಾದ ಅರ್ಹತೆಗಳನ್ನು ಅವರು ಹೊಂದಿಲ್ಲ ಎಂಬ ತಪ್ಪು ಪ್ರತಿಪಾದನೆಗಳನ್ನು ಆಧರಿಸಿ, ಅವರು ಸೇವೆ ಸಲ್ಲಿಸಲು ಅರ್ಹರಲ್ಲ ಎಂಬ ಪ್ರತಿಪಾದನೆಗಳು.
ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಉಂಟುಮಾಡಲು ಉತ್ತೇಜಿಸುವುದು
  • ಇತರರಿಗೆ ಮತದಾನ ಮಾಡಲು ಕಷ್ಟವಾಗುವ ಹಾಗೆ, ಉದ್ದವಾದ ಮತದಾನ ಸಾಲುಗಳನ್ನು ನಿರ್ಮಿಸಲು ವೀಕ್ಷಕರಿಗೆ ಹೇಳುವುದು.
  • ಚುನಾವಣೆಯ ಫಲಿತಾಂಶಗಳನ್ನು ವಿಳಂಬಗೊಳಿಸುವುದಕ್ಕಾಗಿ ಸರಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ವೀಕ್ಷಕರಿಗೆ ಹೇಳುವುದು.
  • ಮತದಾನವನ್ನು ತಡೆಯಲು ಮತದಾನದ ಸ್ಥಳಗಳಲ್ಲಿ ಚುನಾವಣಾ ಅಧಿಕಾರಿಗಳು, ಮತದಾರರು, ಅಭ್ಯರ್ಥಿಗಳು ಅಥವಾ ಇತರ ವ್ಯಕ್ತಿಗಳೊಂದಿಗೆ ಕೈ ಕೈ ಮಿಲಾಯಿಸಿ ಜಗಳವಾಡುವ ಹಾಗೆ ಪ್ರಚೋದಿಸಲು ವೀಕ್ಷಕರಿಗೆ ತಿಳಿಸುವುದು.
ಚುನಾವಣಾ ಪ್ರಾಮಾಣಿಕತೆ
  • ವ್ಯಾಪಕ ವಂಚನೆ, ದೋಷ ಅಥವಾ ನ್ಯೂನತೆಗಳು ಜರ್ಮನ್ ಪಾರ್ಲಿಮೆಂಟ್‌ನ (ಬುಂಡೆಸ್ಟ್ಯಾಗ್) ಚುನಾವಣೆಗಳ ಫಲಿತಾಂಶಗಳನ್ನು ಬದಲಿಸಿವೆ, ಹೊಸ ಸರಕಾರದ ರಚನೆ ಅಥವಾ ಮುಂದಿನ ಜರ್ಮನ್ ಚಾನ್ಸಲರ್ ಅವರ ಚುನಾವಣೆ ಮತ್ತು ನೇಮಕವನ್ನು ಅನೂರ್ಜಿತಗೊಳಿಸುತ್ತವೆ ಎಂಬ ತಪ್ಪು ಪ್ರತಿಪಾದನೆಗಳನ್ನು ಮಂಡಿಸುವ ಕಂಟೆಂಟ್.
  • 2018 ರ ಬ್ರಝೀಲಿಯನ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬದಲಿಸುವಂತಹ ವ್ಯಾಪಕ ವಂಚನೆ, ದೋಷ ಅಥವಾ ನ್ಯೂನತೆಗಳು ಉಂಟಾದವು ಎಂಬ ತಪ್ಪು ಪ್ರತಿಪಾದನೆಗಳು.  

ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್

ಕೆಲವೊಮ್ಮೆ, ವೀಡಿಯೊ, ಆಡಿಯೋ, ಶೀರ್ಷಿಕೆ ಅಥವಾ ವಿವರಣೆಯಲ್ಲಿ ಶೈಕ್ಷಣಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ, ಅಥವಾ ಕಲಾತ್ಮಕ (EDSA) ಸಂದರ್ಭವನ್ನು ಹೊಂದಿರುವಂತಹ ಕಂಟೆಂಟ್‌ಗಳನ್ನು, ಈ ನೀತಿಯನ್ನು ಉಲ್ಲಂಘಿಸಿದರೂ ಸಹ YouTube ನಲ್ಲಿ ಇರಲು ಅನುಮತಿಸಲಾಗುತ್ತದೆ. ಇದು ತಪ್ಪು ಮಾಹಿತಿಯನ್ನು ಹರಡಲು ರಹದಾರಿಯಲ್ಲ. ಹೆಚ್ಚುವರಿ ಸಾಂದರ್ಭಿಕ ಮಾಹಿತಿಯು ಭಿನ್ನ ದೃಷ್ಟಿಕೋನಗಳನ್ನು ಒಳಗೊಂಡಿರಬಹುದು ಅಥವಾ ನಮ್ಮ ನೀತಿಗಳನ್ನು ಉಲ್ಲಂಘಿಸುವ ತಪ್ಪು ಮಾಹಿತಿಯನ್ನು ಖಂಡಿಸುವುದು, ಅಲ್ಲಗಳೆಯುವುದು ಅಥವಾ ವ್ಯಂಗ್ಯ ಮಾಡುವುದು ಕಂಟೆಂಟ್‌ನ ಉದ್ದೇಶವಾಗಿರಬಹುದು. EDSA ಕಂಟೆಂಟ್ ಅನ್ನು YouTube ಹೇಗೆ ಮೌಲ್ಯಮಾಪನ ಮಾಡುತ್ತದೆ ಎಂಬುದರ ಕುರಿತು ತಿಳಿಯಿರಿ.

ಸಂಬಂಧಿಸಿದ ನೀತಿಗಳು

ಚುನಾವಣೆಗೆ ಸಂಬಂಧಿಸಿದ ಕಂಟೆಂಟ್ ಇತರ ಸಮುದಾಯ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಇವನ್ನು ಒಳಗೊಂಡಿರಬಹುದು, ಉದಾಹರಣೆಗೆ:

  • ಚುನಾವಣಾ ಕಾರ್ಯಕರ್ತರು, ಅಭ್ಯರ್ಥಿಗಳು ಅಥವಾ ಮತದಾರರಂತಹ ವ್ಯಕ್ತಿಗಳಿಗೆ ಬೆದರಿಕೆ ಹಾಕುವ ಕಂಟೆಂಟ್ ಅನ್ನು ನಮ್ಮ ಕಿರುಕುಳ ಮತ್ತು ಸೈಬರ್‌ ನಿಂದಿಸುವಿಕೆ ನೀತಿಗಳ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ.
  • ತಪ್ಪುದಾರಿಗೆಳೆಯುವ ರೀತಿಯಲ್ಲಿ ತಾಂತ್ರಿಕವಾಗಿ ಮಾರ್ಪಾಡು ಮಾಡಲಾದ ಅಥವಾ ತಿರುಚಿದ ಕಂಟೆಂಟ್ - ಸಾಮಾನ್ಯವಾಗಿ ಸಂದರ್ಭೇತರವಾಗಿ ತೆಗೆಯಲಾದ ಕ್ಲಿಪ್‌ಗಳು - ಬಳಕೆದಾರರಿಗೆ ಗಂಭೀರವಾದ ಹಾನಿಯನ್ನು ಹಾಗೂ ಅಪಾಯವನ್ನು ಉಂಟುಮಾಡಬಹುದು. ಅಂತಹ ಕಂಟೆಂಟ್ ಅನ್ನು ನಮ್ಮ ತಪ್ಪು ಮಾಹಿತಿ ನೀತಿಗಳ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ. ಉದಾಹರಣೆಗೆ, ಚುನಾವಣೆಗೆ ನಿಂತಿರುವ ಅಭ್ಯರ್ಥಿಯು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತಿದ್ದಾರೆ ಎಂದು ಸುಳ್ಳು ಸುಳ್ಳಾಗಿ ಬಿಂಬಿಸುವ ತಾಂತ್ರಿಕವಾಗಿ ತಿರುಚಲಾದ ಫೂಟೇಜ್.
  • ಹಳೆಯ ಈವೆಂಟ್‌ಗೆ ಸಂಬಂಧಿಸಿದ ಫೂಟೇಜ್ ಅನ್ನು ಪ್ರಸ್ತುತ ಈವೆಂಟ್‌ಗೆ ಸಂಬಂಧಿಸಿರುವ ಹಾಗೆ ಸುಳ್ಳು ಮಾಹಿತಿಯನ್ನು ಒದಗಿಸುವ ಮೂಲಕ ಅತಿಯಾದ ಹಾನಿಗೆ ಕಾರಣವಾಗುವ ಗಂಭೀರ ಅಪಾಯವನ್ನು ಉಂಟುಮಾಡಬಹುದಾದ ಕಂಟೆಂಟ್ ಅನ್ನು, ನಮ್ಮ ತಪ್ಪು ಮಾಹಿತಿಗೆ ಸಂಬಂಧಿಸಿದ ನೀತಿಗಳು ಅನುಮತಿಸಲಾಗುವುದಿಲ್ಲ. ಉದಾಹರಣೆಗೆ, ಒಬ್ಬ ರಾಷ್ಟ್ರದ ಮುಖ್ಯಸ್ಥರು, ಒಂದು ಹಿಂಸಾತ್ಮಕ ಸಂಘರ್ಷವನ್ನು ಕ್ಷಮಿಸದೆ ಇದ್ದರೂ ಸಹ, ಅದನ್ನು ಅವರು ಕ್ಷಮಿಸಿದ್ದಾರೆ ಎಂದು ತೋರಿಸುವ ವೀಡಿಯೊ.
  • ಚುನಾವಣಾ ಕಾರ್ಯಕರ್ತರು, ಅಭ್ಯರ್ಥಿಗಳು ಅಥವಾ ಮತದಾರರನ್ನು ಗುರಿಯಾಗಿಸಿ ನಡೆಯುವ ಕೃತ್ಯಗಳು ಸೇರಿದಂತೆ, ಇತರರನ್ನು ಹಿಂಸಾತ್ಮಕ ಕೃತ್ಯಗಳನ್ನು ಮಾಡಲು ಪ್ರೋತ್ಸಾಹಿಸುವ ಕಂಟೆಂಟ್ ಅನ್ನು ನಮ್ಮ ಹಿಂಸಾತ್ಮಕ ಅಥವಾ ಗ್ರಾಫಿಕ್ ಕಂಟೆಂಟ್ ನೀತಿಗಳ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ.
  • ಕೆಲವು ಗುಣಲಕ್ಷಣಗಳ ಆಧಾರದ ಮೇಲೆ, ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ಹಿಂಸೆ ಅಥವಾ ದ್ವೇಷವನ್ನು ಉತ್ತೇಜಿಸುವ ಕಂಟೆಂಟ್ ಅನ್ನು ನಮ್ಮ ದ್ವೇಷಪೂರಿತ ಮಾತಿನ ಕುರಿತಾದ ನೀತಿಗಳ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ. ಉದಾಹರಣೆಗೆ, ರಾಜಕೀಯ ರ‍್ಯಾಲಿಯಲ್ಲಿ ಪಾಲ್ಗೊಳ್ಳುವವರು, ಒಂದು ಗುಂಪನ್ನು ಜನಾಂಗ, ಧರ್ಮ ಅಥವಾ ಅವರ ಲೈಂಗಿಕ ಓರಿಯಂಟೇಶನ್‌ನಂತಹ ಸಂರಕ್ಷಿತ ಗುಣಲಕ್ಷಣದ ಆಧಾರದ ಮೇಲೆ ತೇಜೋವಧೆ ಮಾಡುವುದನ್ನು ತೋರಿಸುವ ಕಂಟೆಂಟ್ ಅನ್ನು ಇದು ಒಳಗೊಂಡಿದೆ.
  • ರಾಜಕೀಯ ಅಭ್ಯರ್ಥಿಯ ಹಾಗೆ ಅಥವಾ ಅವರ ರಾಜಕೀಯ ಪಕ್ಷದ ಹಾಗೆ ಸೋಗು ಹಾಕಲು ಉದ್ದೇಶಿಸಿರುವ ಚಾನಲ್ ಅಥವಾ ವ್ಯಕ್ತಿಯನ್ನು ಹಾಗೂ ಅವರ ಕಂಟೆಂಟ್ ಅನ್ನು, ನಮ್ಮ ಸೋಗು ಹಾಕುವಿಕೆಯ ನೀತಿಯ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ.
  • ನಮ್ಮ ನೀತಿಗಳನ್ನು ಉಲ್ಲಂಘಿಸುವ ಹಾಗೂ ಗಂಭೀರವಾದ ಅತಿಯಾದ ಹಾನಿಯನ್ನು ಉಂಟು ಮಾಡಬಹುದಾದ ವಿಷಯಕ್ಕೆ ಸಂಬಂಧಿಸಿದ ಬಾಹ್ಯ ಲಿಂಕ್‌ಗಳನ್ನು ಹೊಂದಿರುವ ಕಂಟೆಂಟ್. ಅಂದರೆ, ಸಂರಕ್ಷಿತ ಗುಂಪುಗಳನ್ನು ಗುರಿಯಾಗಿಸಿ ಆಡಿದ ದ್ವೇಷದ ಮಾತುಗಳು ಅಥವಾ ಚುನಾವಣಾ ಕಾರ್ಯಕರ್ತರು, ಅಭ್ಯರ್ಥಿಗಳು ಅಥವಾ ಮತದಾರರಿಗೆ ನೀಡುವ ಕಿರುಕುಳ. ಹೀಗೆ ಚುನಾವಣೆಗೆ ಸಂಬಂಧಿಸಿದ ಹಾಗೆ ತಪ್ಪುದಾರಿಗೆಳೆಯುವ ಅಥವಾ ಮೋಸಗೊಳಿಸುವ ಕಂಟೆಂಟ್. ಇದು ಕ್ಲಿಕ್ ಮಾಡಬಹುದಾದ URL ಗಳನ್ನು, ವೀಡಿಯೊದಲ್ಲಿ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದನ್ನು ಮತ್ತು ಇತರ ರೀತಿಯ ಲಿಂಕ್-ಹಂಚಿಕೊಳ್ಳುವಿಕೆಗಳನ್ನು ಒಳಗೊಂಡಿರಬಹುದು.

ನೆನಪಿಡಿ, ಇವುಗಳು ಕೇವಲ ಉದಾಹರಣೆಗಳಾಗಿವೆ. ಈ ನೀತಿಗಳನ್ನು ಉಲ್ಲಂಘಿಸಬಹುದು ಎಂದು ನಿಮಗೆ ಅನಿಸುವಂತಹ ಕಂಟೆಂಟ್ ಅನ್ನು ಪೋಸ್ಟ್ ಮಾಡಬೇಡಿ. ಜಾಹೀರಾತುದಾರ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು ಸಹ ಅನ್ವಯವಾಗುತ್ತವೆ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿನ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ವಿಧಾನಗಳು ಇದರಲ್ಲಿ ಒಳಗೊಂಡಿವೆ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13609742838337505649
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false