ತಪ್ಪು ಮಾಹಿತಿಯ ಕುರಿತಾದ ನೀತಿಗಳು

ಅತಿಯಾದ ಹಾನಿಗೆ ಕಾರಣವಾಗುವ ಗಂಭೀರ ಅಪಾಯವನ್ನು ಹೊಂದಿರುವಂತಹ ದಾರಿತಪ್ಪಿಸುವ ಅಥವಾ ಮೋಸಗೊಳಿಸುವ ಕೆಲವು ಪ್ರಕಾರಗಳ ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ಇದು ನೈಜ-ಪ್ರಪಂಚದ ಹಾನಿಯನ್ನು ಉಂಟುಮಾಡುವ ಕೆಲವು ಪ್ರಕಾರಗಳ ತಪ್ಪು ಮಾಹಿತಿ, ತಾಂತ್ರಿಕವಾಗಿ ತಿರುಚಲಾದ ಕೆಲವು ಪ್ರಕಾರಗಳ ಕಂಟೆಂಟ್ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದನ್ನು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಅನೇಕ ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

ಈ ನೀತಿಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರುತ್ತವೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗಿನ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ಜನಗಣತಿಯಲ್ಲಿ ಭಾಗವಹಿಸುವುದನ್ನು ನಿಗ್ರಹಿಸುವುದು: ಜನಗಣತಿಯ ಸಮಯ, ಸ್ಥಳ, ವಿಧಾನ ಅಥವಾ ಅರ್ಹತೆಯ ಅವಶ್ಯಕತೆಗಳಿಗೆ ಸಂಬಂಧಪಟ್ಟಂತೆ ಜನಗಣತಿಯಲ್ಲಿ ಭಾಗವಹಿಸುವವರನ್ನು ದಾರಿ ತಪ್ಪಿಸುವ ಗುರಿ ಹೊಂದಿರುವ ಅಥವಾ ಜನಗಣತಿಯಲ್ಲಿ ಭಾಗವಹಿಸುವುದನ್ನು ಗಮನಾರ್ಹವಾಗಿ ನಿರುತ್ಸಾಹಗೊಳಿಸಬಹುದಾದ ಸುಳ್ಳು ಪ್ರತಿಪಾದನೆಗಳನ್ನು ಒಳಗೊಂಡಿರುವ ಕಂಟೆಂಟ್.
  • ತಿರುಚಿದ ಕಂಟೆಂಟ್: ಬಳಕೆದಾರರನ್ನು ದಾರಿ ತಪ್ಪಿಸುವ (ಸಾಮಾನ್ಯವಾಗಿ ಸೆರೆಹಿಡಿಯಲಾದ ವಿಷಯಕ್ಕೆ ಸಂಬಂಧಿಸಿರದ ಕ್ಲಿಪ್‌ಗಳ ಹೊರತಾಗಿಯೂ) ಮತ್ತು ಅತಿಯಾದ ಹಾನಿಗೆ ಕಾರಣವಾಗುವ ಗಂಭೀರ ಅಪಾಯವನ್ನು ಉಂಟುಮಾಡಬಹುದಾದ ರೀತಿಯಲ್ಲಿ ತಾಂತ್ರಿಕವಾಗಿ ದುರುಪಯೋಗಪಡಿಸಿಕೊಳ್ಳಲಾದ ಅಥವಾ ಬದಲಾವಣೆ ಮಾಡಲಾದ ಕಂಟೆಂಟ್.
  • ತಪ್ಪು ಮನ್ನಣೆ ನೀಡುವ ಕಂಟೆಂಟ್: ಹಳೆಯ ಈವೆಂಟ್‌ಗೆ ಸಂಬಂಧಿಸಿದ ಹಳೆಯ ಫೂಟೇಜ್ ಅನ್ನು ಪ್ರಸ್ತುತ ಈವೆಂಟ್‌ಗೆ ಸಂಬಂಧಿಸಿರುವ ಹಾಗೆ ಸುಳ್ಳು ಮಾಹಿತಿಯನ್ನು ಒದಗಿಸುವ ಮೂಲಕ ಅತಿಯಾದ ಹಾನಿಗೆ ಕಾರಣವಾಗುವ ಗಂಭೀರ ಅಪಾಯವನ್ನು ಉಂಟುಮಾಡಬಹುದಾದ ಕಂಟೆಂಟ್.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

ಜನಗಣತಿಯಲ್ಲಿ ಭಾಗವಹಿಸುವುದನ್ನು ನಿಗ್ರಹಿಸುವುದು
  • ಜನಗಣತಿಯಲ್ಲಿ ಭಾಗವಹಿಸುವುದು ಹೇಗೆ ಎಂಬ ಕುರಿತು ತಪ್ಪು ಸೂಚನೆಗಳನ್ನು ನೀಡುವುದು.
  • ಪ್ರತಿಕ್ರಿಯೆದಾರರ ವಲಸೆ ಸ್ಥಿತಿಯನ್ನು ಕಾನೂನು ಜಾರಿಗೊಳಿಸುವಿಕೆ ಅಧಿಕಾರಿಗಳಿಗೆ ವರದಿ ಮಾಡಲಾಗುತ್ತದೆ ಎಂದು ತಪ್ಪಾಗಿ ಪ್ರತಿಪಾದಿಸುವ ಮೂಲಕ ಜನಗಣತಿಯಲ್ಲಿ ಭಾಗವಹಿಸುವುದನ್ನು ನಿರುತ್ಸಾಹಗೊಳಿಸುವುದು.
ತಿರುಚಲಾದ ಕಂಟೆಂಟ್
  • ಅತಿರೇಕದ ಹಾನಿಯ ಗಂಭೀರ ಅಪಾಯವನ್ನು ಸೃಷ್ಟಿಸುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳನ್ನು ಕೆರಳಿಸುವ, ನಿಖರವಾಗಿ ಅನುವಾದಿಸಿರದ ವೀಡಿಯೊ ಉಪಶೀರ್ಷಿಕೆಗಳು.
  • ಒಬ್ಬ ಸರ್ಕಾರಿ ಅಧಿಕಾರಿ ಮೃತರಾಗಿದ್ದಾರೆಂದು ತೋರುವ ಹಾಗೆ ತಾಂತ್ರಿಕವಾಗಿ ತಿರುಚಲಾದ (ಸಾಮಾನ್ಯವಾಗಿ ಸೆರೆಹಿಡಿಯಲಾದ ವಿಷಯಕ್ಕೆ ಸಂಬಂಧಿಸಿರದ ಕ್ಲಿಪ್‌ಗಳ ಹೊರತಾಗಿಯೂ) ವೀಡಿಯೊಗಳು.
  • ಅತಿರೇಕದ ಹಾನಿ ಉಂಟಾಗುವ ಗಂಭೀರ ಅಪಾಯವನ್ನು ಹೊಂದಿರುವ ಘಟನೆಗಳನ್ನು ತಯಾರು ಮಾಡಲು ತಾಂತ್ರಿಕವಾಗಿ ತಿರುಚಲಾದ (ಸಾಮಾನ್ಯವಾಗಿ ಸೆರೆಹಿಡಿಯಲಾದ ವಿಷಯಕ್ಕೆ ಸಂಬಂಧಿಸಿರದ ಕ್ಲಿಪ್‌ಗಳ ಹೊರತಾಗಿಯೂ) ವೀಡಿಯೊ ಕಂಟೆಂಟ್.
ತಪ್ಪು ಮನ್ನಣೆ ನೀಡಲಾದ ಕಂಟೆಂಟ್
  • ನಿಜವಾಗಿಯೂ ಬೇರೊಂದು ಸ್ಥಳ ಅಥವಾ ಘಟನೆಯಿಂದ ತೆಗೆದುಕೊಳ್ಳಲಾದ ಕಂಟೆಂಟ್ ಅನ್ನು ನಿರ್ದಿಷ್ಟ ಸ್ಥಳದಲ್ಲಿ ನಡೆದ ಮಾನವ ಹಕ್ಕುಗಳ ದುರುಪಯೋಗ ಎಂಬುದಾಗಿ ನಿಖರವಲ್ಲದ ರೀತಿಯಲ್ಲಿ ಪ್ರಸ್ತುತಪಡಿಸಲಾದ ಕಂಟೆಂಟ್.  
  • ವಾಸ್ತವವಾಗಿ ಹಲವಾರು ವರ್ಷಗಳಷ್ಟು ಹಳೆಯ ಫೂಟೇಜ್ ಆಗಿದ್ದರೂ, ಕಂಟೆಂಟ್ ಅನ್ನು ಪ್ರಸ್ತುತ ಘಟನೆಯಿಂದ ತೆಗೆದುಕೊಳ್ಳಲಾಗಿದೆ ಎಂಬ ತಪ್ಪು ಪ್ರತಿಪಾದನೆಗಳೊಂದಿಗೆ, ಪ್ರತಿಭಟನಕಾರರ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆದಿದೆ ಎಂದು ತೋರಿಸುವ ಕಂಟೆಂಟ್.

ನೆನಪಿಡಿ, ಇವುಗಳು ಕೇವಲ ಉದಾಹರಣೆಗಳಾಗಿವೆ. ಈ ನೀತಿಗಳನ್ನು ಉಲ್ಲಂಘಿಸಬಹುದು ಎಂದು ನಿಮಗೆ ಅನಿಸುವಂತಹ ಕಂಟೆಂಟ್ ಅನ್ನು ಪೋಸ್ಟ್ ಮಾಡಬೇಡಿ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿನ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ವಿಧಾನಗಳು ಇದರಲ್ಲಿ ಒಳಗೊಂಡಿವೆ.

ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ ಕಂಟೆಂಟ್

ವೀಡಿಯೊ, ಆಡಿಯೋ, ಶೀರ್ಷಿಕೆ ಅಥವಾ ವಿವರಣೆಯಲ್ಲಿ ಆ ಕಂಟೆಂಟ್ ಹೆಚ್ಚುವರಿ ಸಾಂದರ್ಭಿಕ ಮಾಹಿತಿಯನ್ನು ಒಳಗೊಂಡಿದ್ದರೆ, ಈ ಪುಟದಲ್ಲಿ ಸೂಚಿಸಲಾದ ತಪ್ಪು ಮಾಹಿತಿ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ನಾವು ಅನುಮತಿಸಬಹುದು. ಇದು ತಪ್ಪು ಮಾಹಿತಿಯನ್ನು ಹರಡಲು ರಹದಾರಿಯಲ್ಲ. ನಮ್ಮ ನೀತಿಗಳನ್ನು ಉಲ್ಲಂಘಿಸುವ ತಪ್ಪು ಮಾಹಿತಿಯನ್ನು ಖಂಡಿಸುವುದು, ವಿವಾದ ಮಾಡುವುದು ಅಥವಾ ವ್ಯಂಗ್ಯ ಮಾಡುವುದು ಕಂಟೆಂಟ್‌ನ ಉದ್ದೇಶವಾಗಿದ್ದರೂ ನಾವು ವಿನಾಯಿತಿಗಳನ್ನು ನೀಡಬಹುದು.

ಮೇಲೆ ವಿವರಿಸಿದ ಯಾವುದೇ ನೀತಿಗಳನ್ನು ಉಲ್ಲಂಘಿಸದೇ ಇರುವವರೆಗೂ ಮೇಲಿನ ವಿಷಯಗಳನ್ನು ಕುರಿತು ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾವು ಅನುಮತಿಸುತ್ತೇವೆ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡವನ್ನು ವಿಧಿಸದೇ, ನೀವು ನಮ್ಮಿಂದ ಎಚ್ಚರಿಕೆಯೊಂದನ್ನು ಮಾತ್ರ ಸ್ವೀಕರಿಸುವ ಸಾಧ್ಯತೆ ಇರುತ್ತದೆ. ಇದು ಮೊದಲ ಬಾರಿ ಅಲ್ಲದಿದ್ದರೆ, ನಿಮ್ಮ ಚಾನಲ್‌ನ ವಿರುದ್ಧ ಸ್ಟ್ರೈಕ್ ಅನ್ನು ಜಾರಿಗೊಳಿಸಬಹುದು. 90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುತ್ತದೆ. ನಮ್ಮ ಸ್ಟ್ರೈಕ್‌ಗಳ ಸಿಸ್ಟಂ ಕುರಿತು ಇಲ್ಲಿ ನೀವು ಇನ್ನಷ್ಟು ತಿಳಿಯಬಹುದು.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನೀತಿಯನ್ನು ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಚಾನಲ್ ಅಥವಾ ಖಾತೆಯ ಕೊನೆಗೊಳಿಸುವಿಕೆಗಳ ಕುರಿತು ಇಲ್ಲಿ ನೀವು ಇನ್ನಷ್ಟು ತಿಳಿಯಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13865900804001035752
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false