ಬಿಕ್ಕಟ್ಟಿನ ಸಂಪನ್ಮೂಲಗಳ ಪ್ಯಾನೆಲ್‌ಗಳು

YouTube ನ ಬಿಕ್ಕಟ್ಟಿನ ಸಂಪನ್ಮೂಲಗಳ ಪ್ಯಾನೆಲ್‌ಗಳು ಮಾನ್ಯತೆ ಪಡೆದ ಬಿಕ್ಕಟ್ಟು ಸೇವಾ ಪಾಲುದಾರರ ಲೈವ್ ಬೆಂಬಲವನ್ನು ಸಂಪರ್ಕಿಸಲು ನಿಮಗೆ ಅನುಮತಿಸುತ್ತದೆ. ಪ್ಯಾನೆಲ್‌ಗಳನ್ನು ಎಲ್ಲಿ ಕಾಣಬಹುದು:
  • ಆತ್ಮಹತ್ಯೆ, ಸ್ವಯಂ-ಹಾನಿ ಅಥವಾ ಈಟಿಂಗ್ ಡಿಸಾರ್ಡರ್‌ಗಳಂತಹ ಕೆಲವು ವಿಷಯಗಳ ಕುರಿತು ನೀವು ವೀಡಿಯೊಗಳನ್ನು ವೀಕ್ಷಿಸಿದಾಗ.
  • ನಿಮ್ಮ ಹುಡುಕಾಟ ಫಲಿತಾಂಶಗಳಲ್ಲಿ, ನೀವು ಕೆಲವು ಆರೋಗ್ಯ ಬಿಕ್ಕಟ್ಟುಗಳು ಅಥವಾ ಭಾವನಾತ್ಮಕ ತೊಂದರೆಗಳಿಗೆ ಸಂಬಂಧಿಸಿದ ಕಂಟೆಂಟ್‌ಗಳನ್ನು ಹುಡುಕಿದಾಗ.

ನೀವು ಇನ್ನಷ್ಟು ತಿಳಿಯಲು ಬಯಸಿದರೆ, ಬಿಕ್ಕಟ್ಟಿನ ಸಂಪನ್ಮೂಲಗಳ ಪ್ಯಾನೆಲ್ ನಿಮ್ಮನ್ನು ಪಾಲುದಾರರ ವೆಬ್‌ಸೈಟ್‌ಗೆ ಸಂಪರ್ಕಪಡಿಸುತ್ತದೆ. ನಾವು ನಿಮಗೆ ಉಪಯುಕ್ತ ಮತ್ತು ಸಮಯೋಚಿತ ಮಾಹಿತಿಯನ್ನು ನೀಡಲು ಬಯಸುತ್ತೇವೆ, ಹೀಗಾಗಿ ನೀವು ಸದ್ಯಕ್ಕೆ ಬಿಕ್ಕಟ್ಟಿನ ಸಂಪನ್ಮೂಲಗಳ ಪ್ಯಾನೆಲ್ ಅನ್ನು ವಜಾಗೊಳಿಸಲು ಸಾಧ್ಯವಾಗುವುದಿಲ್ಲ.

ಬಿಕ್ಕಟ್ಟಿನ ಸಂಪನ್ಮೂಲಗಳ ಪ್ಯಾನೆಲ್‌ಗಳು ಎಲ್ಲಾ ದೇಶಗಳು/ಪ್ರದೇಶಗಳು ಮತ್ತು ಭಾಷೆಗಳಲ್ಲಿ ಲಭ್ಯವಿಲ್ಲದಿರಬಹುದು. ನಾವು ಇನ್ನಷ್ಟು ದೇಶಗಳು/ಪ್ರದೇಶಗಳಲ್ಲಿ ಬಿಕ್ಕಟ್ಟಿನ ಸಂಪನ್ಮೂಲಗಳ ಪ್ಯಾನೆಲ್‌ಗಳನ್ನು ಪರಿಚಯಿಸುವುದಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದೇವೆ.

ಆತ್ಮಹತ್ಯೆ, ಸ್ವಯಂ-ಹಾನಿ ಅಥವಾ ಈಟಿಂಗ್ ಡಿಸಾರ್ಡರ್‌ಗಳಂತಹ ಕೆಲವು ವಿಷಯಗಳನ್ನು ನೀವು ಹುಡುಕಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳನ್ನು ಪಡೆಯುವ ಮುನ್ನ ನಿಮಗೆ ವಿರಾಮ ಪುಟವು ಸಹ ಕಾಣಿಸುತ್ತದೆ. ವಿರಾಮ ಪುಟವು, ನಮ್ಮ ಬಿಕ್ಕಟ್ಟಿನ ಸಂಪನ್ಮೂಲ ಪಾಲುದಾರರೊಬ್ಬರ ಜೊತೆ ನಿಮ್ಮನ್ನು ಸಂಪರ್ಕಿಸುವುದು ಸೇರಿದಂತೆ, ಹೇಗೆ ಮುಂದುವರಿಯಬೇಕು ಎಂಬುದಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ನೀಡುತ್ತದೆ.

ನಿಮಗಾಗಿ ಅಥವಾ ಬೇರೆ ಯಾರಿಗಾದರೂ ಸಹಾಯ ಪಡೆಯಿರಿ

ನೀವು ಆತ್ಮಹತ್ಯೆಯ ಬಿಕ್ಕಟ್ಟು ಅಥವಾ ಭಾವನಾತ್ಮಕ ತೊಂದರೆಗೊಳಗಾಗಿದ್ದರೆ, ಸಹಾಯವನ್ನು ಪಡೆಯಲು ನೀವು ಕೆಳಗಿನ ಮಾಹಿತಿಯನ್ನು ಬಳಸಬಹುದು:

  • ಯುನೈಟೆಡ್ ಸ್ಟೇಟ್ಸ್:
    • 988 ಸುಸೈಡ್ ಮತ್ತು ಕ್ರೈಸಿಸ್ ಲೈಫ್‌ಲೈನ್ ಜೊತೆಗೆ ಸಂಪರ್ಕದಲ್ಲಿರಲು, 988 ಸಂಖ್ಯೆಗೆ ಕರೆಮಾಡಿ ಅಥವಾ ಅವರ ವೆಬ್ ಚಾಟ್ ಸೇವೆಯನ್ನು ಬಳಸಿ. ಬಿಕ್ಕಟ್ಟು ಪರಿಹಾರ ಪ್ರತಿನಿಧಿಗಳು ದಿನದ 24 ಗಂಟೆಗಳು, ವಾರದ 7 ದಿನಗಳೂ ಲಭ್ಯವಿರುತ್ತಾರೆ. ಕರೆಗಳು ಮತ್ತು ಚಾಟ್‌ಗಳಿಗೆ ಯಾವುದೇ ಶುಲ್ಕವಿಲ್ಲ ಮತ್ತು ಗೌಪ್ಯವಾಗಿರುತ್ತದೆ.
  • ಇತರ ದೇಶಗಳು/ಪ್ರದೇಶಗಳು: ನಿಮ್ಮ ಪ್ರದೇಶದಲ್ಲಿರುವ ಬಿಕ್ಕಟ್ಟು ಪರಿಹಾರ ಕೇಂದ್ರವನ್ನು ಕಂಡುಕೊಳ್ಳಲು, ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಸೈಡ್ ಪ್ರಿವೆನ್ಷನ್ ವೆಬ್‌ಸೈಟ್ ಗೆ ಹೋಗಿ.

ಬೇರೆ ಯಾರಾದರೂ ಆತ್ಮಹತ್ಯೆ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ನೀವು ಭಾವಿಸುವುದಾದರೆ, ನೀವು:

  • ತ್ವರಿತ ಸಹಾಯವನ್ನು ಪಡೆಯಲು, ನಿಮ್ಮ ಸ್ಥಳೀಯ ಕಾನೂನು ಜಾರಿ ನಿರ್ದೇಶನಾಲಯದ ಜೊತೆಗೆ ಸಂಪರ್ಕದಲ್ಲಿರಿ. ನಿಮ್ಮ ಬಳಿ ಅವರ ಸಂಪರ್ಕ ವಿವರಗಳಿವೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಅದನ್ನು ಸ್ಥಳೀಯ ಕಾನೂನು ಜಾರಿ ನಿರ್ದೇಶನಾಲಯದ ಜೊತೆಗೆ ಹಂಚಿಕೊಳ್ಳಿ.
  • ಏನು ನಡೆಯುತ್ತಿದೆ ಎಂಬುದನ್ನು ಅವರ ಜೊತೆಗೆ ಮಾತನಾಡಲು ಮತ್ತು ಅವರಿಗೆ ನೀವು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ತಿಳಿದುಕೊಳ್ಳಲು, ಮೇಲಿನ ಮಾಹಿತಿಯನ್ನು ಬಳಸಿ.
  • ಮೇಲಿನ ಮಾಹಿತಿಯನ್ನು ಬಳಸಿಕೊಂಡು ಆತ್ಮಹತ್ಯೆ ತಡೆಗಟ್ಟುವಿಕೆ ಹಾಟ್‌ಲೈನ್ ಜೊತೆಗೆ ಸಂಪರ್ಕದಲ್ಲಿರುವಂತೆ ಅವರನ್ನು ಪ್ರೋತ್ಸಾಹಿಸಿ.

ಮಾಹಿತಿ ಎಲ್ಲಿಂದ ಬರುತ್ತದೆ

ಬಿಕ್ಕಟ್ಟಿನ ಸಂಪನ್ಮೂಲ ಪ್ಯಾನೆಲ್‌ಗಳಲ್ಲಿರುವ ಮಾಹಿತಿಯನ್ನು ಮಾನ್ಯತೆ ಪಡೆದ ಬಿಕ್ಕಟ್ಟು ಪರಿಹಾರ ಸೇವಾ ಪಾಲುದಾರರಿಂದ ಪಡೆಯಲಾಗುತ್ತದೆ. ದೇಶ/ಪ್ರದೇಶಕ್ಕೆ ಅನುಗುಣವಾಗಿ ಪಾಲುದಾರಿಕೆಗಳು ಬದಲಾಗಬಹುದು.

ವೃತ್ತಿಪರ ಆರೋಗ್ಯ ಸೇವೆ ಒದಗಿಸುವವರನ್ನು ಯಾವಾಗ ಸಂಪರ್ಕಿಸಬೇಕು

YouTube ನಲ್ಲಿರುವ ಆರೋಗ್ಯ ಸಂಬಂಧಿತ ಮಾಹಿತಿಯು ಎಲ್ಲರಿಗೂ ಅನ್ವಯಿಸುವುದಿಲ್ಲ ಮತ್ತು ಇದು ವೈದ್ಯಕೀಯ ಸಲಹೆಯಾಗಿರುವುದಿಲ್ಲ. ನಿಮಗೆ ವೈದ್ಯಕೀಯ ಕಾಳಜಿ ಇದ್ದರೆ, ಆರೋಗ್ಯ ಸೇವೆ ಒದಗಿಸುವವರನ್ನು ಸಂಪರ್ಕಿಸುವುದನ್ನು ಖಚಿತಪಡಿಕೊಳ್ಳಿ. ನೀವು ವೈದ್ಯಕೀಯ ತುರ್ತುಸ್ಥಿತಿಯನ್ನು ಹೊಂದಿರಬಹುದು ಎಂದು ಭಾವಿಸಿದರೆ, ನಿಮ್ಮ ಸ್ಥಳೀಯ ತುರ್ತು ಸಂಖ್ಯೆಯನ್ನು ಸಂಪರ್ಕಿಸಿ.

ನಿಮ್ಮ ಹುಡುಕಾಟ ಮತ್ತು ವೀಕ್ಷಣೆ ಇತಿಹಾಸದ ಕುರಿತು YouTube ಸಂಗ್ರಹಿಸುವ ಮಾಹಿತಿ

ಈ ಸಂದರ್ಭಗಳಲ್ಲಿ ಮಾತ್ರ ಬಿಕ್ಕಟ್ಟಿನ ಸಂಪನ್ಮೂಲಗಳ ಪ್ಯಾನೆಲ್‌ಗಳು ಕಾಣಿಸಿಕೊಳ್ಳುತ್ತವೆ:

  • ಪ್ರಸ್ತುತ ವೀಡಿಯೊ ಆತ್ಮಹತ್ಯೆ ಅಥವಾ ಸ್ವಯ-ಹಾನಿಗೆ ಸಂಬಂಧಿಸಿದ್ದರೆ ಅಥವಾ
  • ನಿಮ್ಮ ಹುಡುಕಾಟ ಪದವು ನಿರ್ದಿಷ್ಟ ಆರೋಗ್ಯ ಬಿಕ್ಕಟ್ಟು ಅಥವಾ ಭಾವನಾತ್ಮಕ ತೊಂದರೆಗಳಿಗೆ ಸಂಬಂಧಿಸಿದ್ದರೆ.

ಈ ಪ್ಯಾನೆಲ್‌ಗಳನ್ನು ನಿಮ್ಮ ವೀಕ್ಷಣೆ ಮತ್ತು ಹುಡುಕಾಟ ಇತಿಹಾಸವನ್ನು ಆಧರಿಸಿ ಪ್ರಚೋದಿಸಲಾಗಿಲ್ಲ. ಆದರೂ, YouTube ನಲ್ಲಿ ನಿಮ್ಮ ಡೇಟಾವನ್ನು ಪರಿಶೀಲಿಸುವ ಮೂಲಕ ನಿಮ್ಮ ಇತಿಹಾಸವನ್ನು ಹುಡುಕಬಹುದು ಮತ್ತು ಅಳಿಸಬಹುದು. ನಿಮ್ಮ ಹುಡುಕಾಟದ ಇತಿಹಾಸವನ್ನು ವೀಕ್ಷಿಸುವುದು ಮತ್ತು ಅಳಿಸುವುದು ಅಥವಾ ನಿಮ್ಮ ವೀಕ್ಷಣೆ ಇತಿಹಾಸವನ್ನು ವೀಕ್ಷಿಸುವುದು, ವಿರಾಮಗೊಳಿಸುವುದು ಮತ್ತು ತೆರವುಗೊಳಿಸುವುದು ಹೇಗೆ ಎಂಬುದನ್ನು ತಿಳಿಯಿರಿ. ನೀವು ಅಜ್ಞಾತ ಮೋಡ್‌ನಲ್ಲಿರುವಾಗ YouTube ಅನ್ನು ಸಹ ಬ್ರೌಸ್ ಮಾಡಬಹುದು.

ತಪ್ಪಾದ ಮಾಹಿತಿಯ ಕುರಿತು ವರದಿ ಮಾಡಿ

YouTube ನಲ್ಲಿರುವ ಬಿಕ್ಕಟ್ಟು ಪರಿಹಾರ ಸಂಪನ್ಮೂಲ ಮಾಹಿತಿಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಅಥವಾ ನೀವು ಯಾವುದೇ ಸಲಹೆಯನ್ನು ಹೊಂದಿದ್ದರೆ, ನೀವು:

  • ಬಿಕ್ಕಟ್ಟಿನ ಸಂಪನ್ಮೂಲಗಳು ಪ್ಯಾನೆಲ್‌ನಲ್ಲಿರುವ ಇನ್ನಷ್ಟು ಇನ್ನಷ್ಟು ಪ್ರತಿಕ್ರಿಯೆಯನ್ನು ಸಲ್ಲಿಸಿ ಅಥವಾ
  • ನಿಮ್ಮ ಪ್ರೊಫೈಲ್ ಚಿತ್ರದಲ್ಲಿನ ಮೆನು ಬಳಸಿಕೊಂಡು ನಮಗೆ ಪ್ರತಿಕ್ರಿಯೆ ಕಳುಹಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9099395156268023226
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false