ನಿಮ್ಮ ಸೌಂಡ್ ರೆಕಾರ್ಡಿಂಗ್ ಮೆಟಾಡೇಟಾವನ್ನು ನಿರ್ವಹಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನೀವು ಸೌಂಡ್ ರೆಕಾರ್ಡಿಂಗ್ ಅಸೆಟ್‌ಗಳು ಅನ್ನು ಪೂರೈಸುವ ಓರ್ವ ಸಂಗೀತ ಪಾಲುದಾರರಾಗಿದ್ದರೆ, ನಿಮ್ಮ ಸೌಂಡ್ ರೆಕಾರ್ಡಿಂಗ್ ಮೆಟಾಡೇಟಾವನ್ನು ಯಶಸ್ವಿಯಾಗಿ ನಿರ್ವಹಿಸಲು ನೀವು ಈ ಕೆಳಗಿನ ಮಾಹಿತಿಯನ್ನು ಬಳಸಬಹುದು.

ಸೌಂಡ್ ರೆಕಾರ್ಡಿಂಗ್ ಮೆಟಾಡೇಟಾವನ್ನು ವೀಕ್ಷಿಸಿ

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಬದಿಯ ಮೆನುವಿನಿಂದ, ಅಸೆಟ್‌ಗಳು ಎಂಬುದನ್ನು ಆಯ್ಕೆಮಾಡಿ.
  3. ನೀವು ಮೆಟಾಡೇಟಾವನ್ನು ವೀಕ್ಷಿಸಲು ಬಯಸುವ ಸೌಂಡ್ ರೆಕಾರ್ಡಿಂಗ್ ಅಸೆಟ್‌ನ ಶೀರ್ಷಿಕೆಯನ್ನು ಕ್ಲಿಕ್ ಮಾಡಿ. ಅಸೆಟ್‌ನ ವಿವರಗಳ ಪುಟವು ತೆರೆದುಕೊಳ್ಳುತ್ತದೆ.
  4. ಅಸೆಟ್‌ನ ವಿವರಗಳ ಪುಟದಲ್ಲಿ, ಎಡಭಾಗದ ಮೆನುವಿನಿಂದ ಮೆಟಾಡೇಟಾ  ಆಯ್ಕೆಮಾಡಿ.

ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾವನ್ನು ಗುರುತಿಸಿ

ಗ್ಲೋಬಲ್ ಮೆಟಾಡೇಟಾ ಅಥವಾ ಡಿಸ್‌ಪ್ಲೇ ಮೆಟಾಡೇಟಾ, ಇದು YouTube ತನ್ನ YouTube ಬಳಕೆದಾರರಿಗೆ ತೋರಿಸುವ ಮೆಟಾಡೇಟಾ ಸೆಟ್ ಆಗಿದೆ. ಅಪ್‌ಲೋಡರ್‌ಗಳು Content ID ಕ್ಲೇಮ್ ಪಡೆದಾಗ ಮತ್ತು ಈ ವೀಡಿಯೊದಲ್ಲಿ ಸಂಗೀತ ರೀತಿಯ ಫೀಚರ್‌ಗಳಲ್ಲಿ ಕಾಣಿಸುವ ಮೆಟಾಡೇಟಾ ಆವೃತ್ತಿ ಇದಾಗಿದೆ. 

ಅಸೆಟ್‌ನ ವಿವರಗಳು ಪುಟದಲ್ಲಿ, ಮೆಟಾಡೇಟಾ  ವಿಭಾಗದಲ್ಲಿ ಕಾಣಿಸುವ ಗ್ಲೋಬಲ್ ಅಡಿಯಲ್ಲಿ, ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾವು ಮೇಲ್ಭಾಗದಲ್ಲಿ ಕಾಣಿಸುತ್ತದೆ.

ನೀವು ಮೆಟಾಡೇಟಾ ಹೋಲಿಕೆ ಮಾಡಿ ಕ್ಲಿಕ್ ಮಾಡಿದಾಗ, ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾವನ್ನು ಹಸಿರು ಬಣ್ಣದ ಡಿಸ್‌ಪ್ಲೇ ಐಕಾನ್ ಮೂಲಕ ಲೇಬಲ್ ಮಾಡಲಾಗಿರುತ್ತದೆ. ಮೆಟಾಡೇಟಾ ಹೋಲಿಕೆ ಮಾಡಿ ಫೀಚರ್ ಕುರಿತು ಇನ್ನಷ್ಟು ತಿಳಿಯಿರಿ.

ಸೌಂಡ್ ರೆಕಾರ್ಡಿಂಗ್ ಮೆಟಾಡೇಟಾವನ್ನು ಡೆಲಿವರ್ ಮಾಡಿ

ನಿಮ್ಮ ಸೌಂಡ್ ರೆಕಾರ್ಡಿಂಗ್ ಅಸೆಟ್‌ಗಳಿಗಾಗಿ ಮೆಟಾಡೇಟಾವನ್ನು ಯಶಸ್ವಿಯಾಗಿ ಪೂರೈಸಲು ಅನುಸರಿಸಬಹುದಾದ ಕೆಲವು ಅತ್ಯುತ್ತಮ ಅಭ್ಯಾಸಗಳು ಈ ಕೆಳಗಿನಂತಿವೆ:

ನಿಮ್ಮ ಪ್ರಾರಂಭಿಕ ಡೆಲಿವರಿಯಲ್ಲಿ ಸಂಪೂರ್ಣ ಮತ್ತು ನಿಖರ ಮೆಟಾಡೇಟಾವನ್ನು ಸೇರಿಸಿ

ಸೌಂಡ್ ರೆಕಾರ್ಡಿಂಗ್ ಅಸೆಟ್ ಅನ್ನು ಮೊದಲ ಬಾರಿಗೆ ಡೆಲಿವರಿ ಮಾಡುತ್ತಿರುವಾಗ, ನೀವು ಸಾಧ್ಯವಾದಷ್ಟು ಹೆಚ್ಚು ಮೆಟಾಡೇಟಾ ಕ್ಷೇತ್ರಗಳನ್ನು ಪೂರ್ಣಗೊಳಿಸಿ ಎಂದು ಶಿಫಾರಸು ಮಾಡುತ್ತೇವೆ.

ಭವಿಷ್ಯದ ಬಿಡುಗಡೆಗಳಿಗೆ ಸಂಬಂಧಿಸಿದ ಅಸೆಟ್‌ಗಳಾಗಿದ್ದರೂ ಸಹ, ಪಾಲುದಾರರು ಅಂತಿಮ ಮೆಟಾಡೇಟಾವನ್ನು ಡೆಲಿವರಿ ಮಾಡಬೇಕೆಂದು ಮತ್ತು ಪ್ಲೇಸ್‌ಹೋಲ್ಡರ್ ಮೆಟಾಡೇಟಾ ಕಳುಹಿಸುವುದನ್ನು ತಪ್ಪಿಸಬೇಕೆಂದು ಪ್ರೋತ್ಸಾಹಿಸುತ್ತೇವೆ. ಮೆಟಾಡೇಟಾ ಡೆಲಿವರಿ ಕುರಿತು ಇನ್ನಷ್ಟು ತಿಳಿಯಿರಿ.

ಅಪ್‌ಡೇಟ್‌ಗಳನ್ನು ಡೆಲಿವರಿ ಮಾಡುವಾಗ ಅಸೆಟ್-ನಿರ್ದಿಷ್ಟ ಐಡೆಂಟಿಫೈಯರ್‌ಗಳನ್ನು ಸೇರಿಸಿ

ಅಸ್ತಿತ್ವದಲ್ಲಿರುವ ಅಸೆಟ್ ಅನ್ನು ಅಪ್‌ಡೇಟ್ ಮಾಡುವಾಗ, ಅನ್ವಯವಾದರೆ, ನೀವು ISRC (ಇಂಟರ್‌ನ್ಯಾಷನಲ್ ಸ್ಟ್ಯಾಂಡರ್ಡ್ ರೆಕಾರ್ಡಿಂಗ್ ಕೋಡ್) ಮತ್ತು ಕಸ್ಟಮ್ ಐಡಿ ಜೊತೆಗೆ ಅಸ್ತಿತ್ವದಲ್ಲಿರುವ ಅಸೆಟ್ ಐಡಿ ಅನ್ನು ಸಹ ಸೇರಿಸಿ ಎಂದು ಶಿಫಾರಸು ಮಾಡುತ್ತೇವೆ. ಈ ಮಾಹಿತಿಯನ್ನು ನಮೂದಿಸುವುದರಿಂದ ಅಪ್‌ಡೇಟ್ ಅನ್ನು ಸರಿಯಾದ ಅಸೆಟ್ ಮತ್ತು ಸೌಂಡ್ ರೆಕಾರ್ಡಿಂಗ್ ಹಂಚಿಕೆಗೆ ಕಳುಹಿಸಲು ನೆರವಾಗುತ್ತದೆ. ಇದು ಹೊಸ ಅಸೆಟ್ ಅಥವಾ ಹಂಚಿಕೆಯನ್ನು ರಚಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ನೀವು ISRC ಅಥವಾ ಕಸ್ಟಮ್ ಐಡಿ ಅನ್ನು ಅಪ್‌ಡೇಟ್ ಮಾಡುತ್ತಿದ್ದರೆ, ನಿಮ್ಮ ಡೆಲಿವರಿಯಲ್ಲಿ ನೀವು ಈಗಲೂ ಅಸೆಟ್ ಐಡಿ ಅನ್ನು ನಮೂದಿಸಬೇಕಾಗುತ್ತದೆ. ಹೊಸ ISRC ಅಥವಾ ಹೊಸ ಕಸ್ಟಮ್ ID ನಮೂದಿಸುವುದರಿಂದ ಹೊಸ ಸೌಂಡ್ ರೆಕಾರ್ಡಿಂಗ್ ಹಂಚಿಕೆಯನ್ನು ರಚಿಸುವುದಕ್ಕೆ ಕಾರಣವಾಗಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. ಸೌಂಡ್ ರೆಕಾರ್ಡಿಂಗ್ ಹಂಚಿಕೆಗಳು ಕುರಿತು ಇನ್ನಷ್ಟು ತಿಳಿಯಿರಿ.

ಆರ್ಟ್ ಟ್ರ್ಯಾಕ್‌ಗಳನ್ನು ಡೆಲಿವರಿ ಮಾಡುವುದಕ್ಕೂ ಮೊದಲು ಸೌಂಡ್ ರೆಕಾರ್ಡಿಂಗ್ ಅಸೆಟ್‌ಗಳನ್ನು ಕಳುಹಿಸಿ

ಆರ್ಟ್ ಟ್ರ್ಯಾಕ್ ಅನ್ನು ಡೆಲಿವರಿ ಮಾಡುವುದಕ್ಕೂ ಮೊದಲು ಸೌಂಡ್ ರೆಕಾರ್ಡಿಂಗ್ ಅಸೆಟ್ ಅನ್ನು ಡೆಲಿವರಿ ಮಾಡಿ ಎಂದು ನಾವು ನಿಮಗೆ ಶಿಫಾರಸು ಮಾಡುತ್ತೇವೆ.

ಹಾಗೆಯೇ, ಆರ್ಟ್ ಟ್ರ್ಯಾಕ್‌ನ ISRC, ಸೌಂಡ್ ರೆಕಾರ್ಡಿಂಗ್ ಅಸೆಟ್‌ನ ISRC ಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗೆ ಮಾಡುವುದರಿಂದ, ಆರ್ಟ್ ಟ್ರ್ಯಾಕ್ ಮತ್ತು ಅದರ ಸಂಬಂಧಪಟ್ಟ ಸೌಂಡ್ ರೆಕಾರ್ಡಿಂಗ್ ಅಸೆಟ್‌ನ ನಡುವೆ ಎಂಬೆಡ್ ಮಾಡಿರುವ ಸಂಬಂಧವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಎಂಬೆಡ್ ಮಾಡಿರುವ ಅಸೆಟ್‌ಗಳು ಕುರಿತು ಇನ್ನಷ್ಟು ತಿಳಿಯಿರಿ.

FAQ ಗಳು

ಬಳಕೆದಾರರಿಗೆ ಯಾವ ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾ ಸೆಟ್ ಕಾಣಿಸಬೇಕು ಎಂಬುದನ್ನು YouTube ಹೇಗೆ ನಿರ್ಧರಿಸುತ್ತದೆ?

ಸೌಂಡ್ ರೆಕಾರ್ಡಿಂಗ್ ಅಸೆಟ್‌ನ ಮಾಲೀಕರು ಒಬ್ಬರೇ ಆಗಿದ್ದಾಗ, ಮಾಲೀಕರ ಹೊಸ ಮತ್ತು ಅತ್ಯಂತ ಸಂಪೂರ್ಣವಾದ ಸೌಂಡ್ ರೆಕಾರ್ಡಿಂಗ್ ಹಂಚಿಕೆಯಿಂದ ಪಡೆಯುವ ಮೆಟಾಡೇಟಾವನ್ನು ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾ ಎಂದು ತೋರಿಸಲಾಗುತ್ತದೆ. 
ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದ ಸಂದರ್ಭದಲ್ಲಿ, ಸಕ್ರಿಯ ಅಸೆಟ್ ಮಾಲೀಕತ್ವವನ್ನು ಹೊಂದಿರುವ ಯಾವುದೇ ಪಾಲುದಾರರಿಂದ ಪಡೆದ ಹೊಸ ಮತ್ತು ಸಂಪೂರ್ಣ ಹಂಚಿಕೆಯನ್ನು ತೋರಿಸಲಾಗುತ್ತದೆ.

ನನ್ನ ಮೆಟಾಡೇಟಾವನ್ನು ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾ ಎಂದು ಡಿಸ್‌ಪ್ಲೇ ಮಾಡಲು, ನಾನು ಸೌಂಡ್ ರೆಕಾರ್ಡಿಂಗ್ ಅಸೆಟ್ ಅನ್ನು ಹೇಗೆ ಅಪ್‌ಡೇಟ್ ಮಾಡಬಹುದು?

ಸಾಧ್ಯವಾದಷ್ಟು ಸಂಪೂರ್ಣ ಮೆಟಾಡೇಟಾ ಸೆಟ್ ಅನ್ನು ಡೆಲಿವರಿ ಮಾಡುವ ಮೂಲಕ ನಿಮ್ಮ ಮೆಟಾಡೇಟಾವನ್ನು ಆಯ್ಕೆ ಮಾಡುವ ಸಾಧ್ಯತೆಯನ್ನು ನೀವು ಹೆಚ್ಚಿಸಬಹುದು.
ಜೊತೆಗೆ, ನಿಖರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀವು ನಿಮ್ಮ ಮೆಟಾಡೇಟಾವನ್ನು ಅಪ್ ಟು ಡೇಟ್ ಆಗಿ ಇರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಈ ಕಾರ್ಯಗಳು ನಿಮ್ಮ ಮೆಟಾಡೇಟಾವನ್ನು ಅಸೆಟ್ ಗ್ಲೋಬಲ್ ಮೆಟಾಡೇಟಾ ಎಂಬಂತೆ ಆಯ್ಕೆ ಮಾಡುವ ಅವಕಾಶಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನನ್ನ ಮೆಟಾಡೇಟಾವು ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾ ಎಂಬುದಾಗಿ ಏಕೆ ತೋರಿಸುತ್ತಿಲ್ಲ?

ಬೇರೊಬ್ಬ ಬಳಕೆದಾರರು ತೀರಾ ಇತ್ತೀಚೆಗೆ ಮೆಟಾಡೇಟಾವನ್ನು ಡೆಲಿವರ್ ಮಾಡಿರಬಹುದು ಅಥವಾ ಅತ್ಯಂತ ಸಂಪೂರ್ಣವಾದ ಮೆಟಾಡೇಟಾ ಸೆಟ್ ಅನ್ನು ನಮೂದಿಸಿರಬಹುದು. ಇತರ ಪಾಲುದಾರರು ಸೇರಿಸಿರುವ ಮೆಟಾಡೇಟಾವನ್ನು ವೀಕ್ಷಿಸಲು, ಮೆಟಾಡೇಟಾ ಹೋಲಿಸಿ ನೋಡಿ ಫೀಚರ್ ಅನ್ನು ಬಳಸಿ.
ನೀವು ಸಂಪೂರ್ಣವಾದ ಮೆಟಾಡೇಟಾ ಸೆಟ್ ಅನ್ನು ಡೆಲಿವರ್ ಮಾಡಿದ್ದೀರಾ ಎಂದು ಖಚಿತಪಡಿಸಿ ಎಂದು ಮತ್ತು ಅಗತ್ಯಕ್ಕೆ ತಕ್ಕಂತೆ ಅಸೆಟ್ ಮೆಟಾಡೇಟಾವನ್ನು ಅಪ್‌ಡೇಟ್ ಮಾಡಿ ಎಂದು ಶಿಫಾರಸು ಮಾಡುತ್ತೇವೆ.

ನಾನು ಈಗಷ್ಟೇ ಬಹು ಮಾಲೀಕರನ್ನು ಹೊಂದಿರುವ ಅಸೆಟ್ ಅಪ್‌ಡೇಟ್ ಮಾಡಿದ್ದೇನೆ. ನನ್ನ ಮೆಟಾಡೇಟಾವು ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾ ಎಂಬುದಾಗಿ ಇದೀಗ ಏಕೆ ತೋರಿಸುತ್ತಿಲ್ಲ?

ನೀವು ತೀರಾ ಇತ್ತೀಚೆಗೆ ಮೆಟಾಡೇಟಾವನ್ನು ಡೆಲಿವರ್ ಮಾಡಿದ್ದರೂ ಸಹ, ಬೇರೊಬ್ಬ ಪಾಲುದಾರರು ಅತ್ಯಂತ ಸಂಪೂರ್ಣವಾದ ಮೆಟಾಡೇಟಾ ಸೆಟ್ ಅನ್ನು ಡೆಲಿವರ್ ಮಾಡಿರುವ ಸಾಧ್ಯತೆ ಇರುತ್ತದೆ. ಇತರ ಪಾಲುದಾರರು ಸೇರಿಸಿರುವ ಮೆಟಾಡೇಟಾವನ್ನು ವೀಕ್ಷಿಸಲು, ಮೆಟಾಡೇಟಾ ಹೋಲಿಸಿ ನೋಡಿ ಫೀಚರ್ ಅನ್ನು ಬಳಸಿ.
ನೀವು ಸಂಪೂರ್ಣವಾದ ಮೆಟಾಡೇಟಾ ಸೆಟ್ ಅನ್ನು ಡೆಲಿವರ್ ಮಾಡಿದ್ದೀರಾ ಎಂದು ಖಚಿತಪಡಿಸಿ ಎಂದು ಮತ್ತು ಅಗತ್ಯಕ್ಕೆ ತಕ್ಕಂತೆ ಅಸೆಟ್‌ನ ಮೆಟಾಡೇಟಾವನ್ನು ಅಪ್‌ಡೇಟ್ ಮಾಡಿ ಎಂದು ಶಿಫಾರಸು ಮಾಡುತ್ತೇವೆ

ಒಂದು ಅಸ್ತಿತ್ವದಲ್ಲಿರುವ ಸ್ವತ್ತಿನ ಜೊತೆಗೆ ವಿಲೀನಗೊಂಡಿರುವ ಸ್ವತ್ತನ್ನು ನಾನು ಡೆಲಿವರ್ ಮಾಡಿದ್ದೇನೆ. ನನ್ನ ಮೆಟಾಡೇಟಾವು ಗ್ಲೋಬಲ್/ಡಿಸ್‌ಪ್ಲೇ ಮೆಟಾಡೇಟಾ ಎಂಬುದಾಗಿ ಇದೀಗ ಏಕೆ ತೋರಿಸುತ್ತಿಲ್ಲ?

ನಿಮ್ಮ ಡೆಲಿವರಿಯಲ್ಲಿ ಅಸಮಂಜಸವಾದ ಮೆಟಾಡೇಟಾದ ಸಮಸ್ಯೆಗಳ ಕಾರಣ ಅಸ್ತಿತ್ವದಲ್ಲಿರುವ ಸ್ವತ್ತಿನ ಮೆಟಾಡೇಟಾ ಸೆಟ್ ಅನ್ನು ಆಯ್ಕೆ ಮಾಡಿರಬಹುದು. ಅಸಮಂಜಸವಾದ ಮೆಟಾಡೇಟಾ ಸಮಸ್ಯೆಗಳನ್ನು ಪರಿಶೀಲಿಸಲು:
  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸ್ವತ್ತುಗಳು ಆಯ್ಕೆಮಾಡಿ.
  3. ವಿಲೀನಗೊಂಡ ಸ್ವತ್ತಿನ ಶೀರ್ಷಿಕೆಯನ್ನು ಕ್ಲಿಕ್ ಮಾಡಿ. ಸ್ವತ್ತಿನ ವಿವರಗಳು ಪುಟವು ತೆರೆದುಕೊಳ್ಳುತ್ತದೆ.
  4. ಸ್ವತ್ತಿನ ವಿವರಗಳು ಪುಟದಲ್ಲಿ, ಎಡಭಾಗದ ಮೆನುವಿನಿಂದ ಮೆಟಾಡೇಟಾ  ಆಯ್ಕೆಮಾಡಿ.
  5. ಸೌಂಡ್ ರೆಕಾರ್ಡಿಂಗ್ ಹಂಚಿಕೆಗಳು ಟ್ಯಾಬ್ ಕ್ಲಿಕ್ ಮಾಡಿ.
  6. ನಿಮ್ಮ ಡೆಲಿವರಿಯಿಂದ ರಚಿಸಲಾದ ಹಂಚಿಕೆಗೆ ಸಂಬಂಧಪಟ್ಟ ಸ್ವತ್ತು ID ಅನ್ನು ಹುಡುಕಿ ಮತ್ತು ನಕಲಿಸಿ. ಸ್ವತ್ತು ID, “AA” ಮೂಲಕ ಪ್ರಾರಂಭವಾಗಬೇಕು.
  7. ಹಿಂದಕ್ಕೆ ಬಾಣದ ಗುರುತು  ಕ್ಲಿಕ್ ಮಾಡಿ ಸ್ವತ್ತುಗಳು ಪುಟಕ್ಕೆ ಹಿಂತಿರುಗಿ.  
  8. ಎಡಭಾಗದ ಮೆನುವಿನಲ್ಲಿ, ವರದಿಗಳು ಆಯ್ಕೆಮಾಡಿ.
  9. ಸ್ವತ್ತುಗಳು ಟ್ಯಾಬ್ ಕ್ಲಿಕ್ ಮಾಡಿ.
  10. ಸ್ವತ್ತುಗಳು (ಹಂಚಿಕೆಗಳು) ಅಡಿಯಲ್ಲಿ, ಆವೃತ್ತಿ 1.1 ಕ್ಲಿಕ್ ಮಾಡಿ ಮತ್ತು ಸ್ವತ್ತು ಹಂಚಿಕೆ ವರದಿ ಆಯ್ಕೆಮಾಡಿ. ವರದಿಯು CSV ಫೈಲ್ ರೂಪದಲ್ಲಿ ಡೌನ್‌ಲೋಡ್ ಆಗಲು ಪ್ರಾರಂಭಿಸುತ್ತದೆ.
  11. ವರದಿಯನ್ನು ತೆರೆಯಿರಿ. sound_recording_share_asset_id ಕಾಲಮ್‌ನಲ್ಲಿ, “AA” ಮೂಲಕ ಪ್ರಾರಂಭವಾಗುವ ಸ್ವತ್ತು ID ಗಾಗಿ ಹುಡುಕಿ. 
  12. ಸ್ವತ್ತುಗಳು ಸಾಲಿನಲ್ಲಿ, “from_inconsistent_metadata_merge” ಹೆಸರಿನ ಕಾಲಮ್ ಅನ್ನು ಹುಡುಕಿ. ಈ ಕಾಲಮ್ ಅನ್ನು True ಎಂದು ಲೇಬಲ್ ಮಾಡಿದ್ದರೆ, ನಿಮ್ಮ ಮೆಟಾಡೇಟಾವು ಅಸ್ತಿತ್ವದಲ್ಲಿರುವ ಸ್ವತ್ತಿನಲ್ಲಿರುವ ಮೆಟಾಡೇಟಾದ ಜೊತೆಗೆ ವ್ಯತ್ಯಾಸಗಳನ್ನು ಹೊಂದಿರುವ ಕಾರಣದಿಂದಾಗಿ ನಮ್ಮ ಸಿಸ್ಟಂ ಅಸ್ತಿತ್ವದಲ್ಲಿರುವ ಮೆಟಾಡೇಟಾವನ್ನು ಬಳಸಿದೆ ಎಂದರ್ಥ.
ಸಲಹೆ: ನೀವು Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಅಥವಾ ಕಂಟೆಂಟ್ ಡೆಲಿವರಿ ಮೂಲಕ ಅಸಮಂಜಸವಾದ ಮೆಟಾಡೇಟಾವನ್ನು ಎಡಿಟ್ ಮಾಡಬಹುದು:
  • Studio ಕಂಟೆಂಟ್ ಮ್ಯಾನೇಜರ್: ಈ ಸ್ವತ್ತಿನ ಮೆಟಾಡೇಟಾವನ್ನು ಎಡಿಟ್ ಮಾಡಿ ಸೂಚನೆಗಳನ್ನು ಅನುಸರಿಸಿ.
  • ಕಂಟೆಂಟ್ ಡೆಲಿವರಿ: ನಿಮ್ಮ ಆದ್ಯತೆಯ ಡೆಲಿವರಿ ವಿಧಾನ, ಅಂದರೆ CSV, DDEX ಅಥವಾ API ವಿಧಾನಗಳನ್ನು ಬಳಸಿಕೊಂಡು, ನೀವು ತೋರಿಸಲು ಬಯಸುವ ಸಂಪೂರ್ಣವಾದ ಮೆಟಾಡೇಟಾ ಸೆಟ್ ಅನ್ನು ನಮೂದಿಸಿ. ಅನ್ವಯವಾದರೆ, ನೀವು ಈ ಹಿಂದೆ ಒದಗಿಸಿರುವ ಅಸೆಟ್ ಐಡಿ ಮತ್ತು ISRC/ಕಸ್ಟಮ್ ಐಡಿ ಅನ್ನು ನಿರ್ದಿಷ್ಟಪಡಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13377730162274347845
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false