ನಿಮ್ಮ ಕ್ಲೇಮ್‌ಗಳ ಸ್ಥಿತಿಯನ್ನು ಪರಿಶೀಲಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನೀವು ಕಂಟೆಂಟ್ ಅನ್ನು ಕ್ಲೇಮ್‌ ಮಾಡಿದಾಗ, ನಿಮ್ಮ ನೀತಿಗಳು ಅನ್ವಯಿಸುವ ದೇಶಗಳು/ಪ್ರದೇಶಗಳಲ್ಲಿ ಆ ಕಂಟೆಂಟ್ ಅನ್ನು ಆನ್‌ಲೈನ್‌ನಲ್ಲಿ ವಿತರಿಸಲು ನೀವು ಪ್ರತ್ಯೇಕ ಹಕ್ಕುಗಳನ್ನು ಹೊಂದಿದ್ದೀರಿ ಎಂದು ಸೂಚಿಸುತ್ತಿದ್ದೀರಿ.

Studio ಕಂಟೆಂಟ್ ಮ್ಯಾನೇಜರ್‌ನಲ್ಲಿ, ಕ್ಲೇಮ್‌ ಮಾಡಲಾದ ವೀಡಿಯೊಗಳು ಎಂದು ಕರೆಯಲಾಗುವ ಪ್ರತ್ಯೇಕ ವೀಡಿಯೊದ ಪ್ರಕಾರವಾಗಿ ಕ್ಲೇಮ್‌ಗಳನ್ನು ಗುಂಪುಗೊಳಿಸಲಾಗುತ್ತದೆ, ಇದರಿಂದ ನೀವು ವೀಡಿಯೊದ ಮೇಲಿನ ಎಲ್ಲಾ ಕ್ಲೇಮ್‌ಗಳನ್ನು ಒಂದೇ ಬಾರಿಗೆ ನಿರ್ವಹಿಸುವುದು ಸಾಧ್ಯವಾಗುತ್ತದೆ.

ನಿಮ್ಮ ಕ್ಲೇಮ್‌ಗಳ ಸ್ಥಿತಿಯನ್ನು ಪರಿಶೀಲಿಸಲು:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಕ್ಲೇಮ್ ಮಾಡಲಾದ ವೀಡಿಯೊಗಳು ಆಯ್ಕೆಮಾಡಿ.
  3. ಪಟ್ಟಿಯನ್ನು ರೀಫೈನ್ ಮಾಡಲು, ಫಿಲ್ಟರ್ ಬಾರ್ ನಂತರ ಕ್ಲೇಮ್ ಸ್ಥಿತಿ ಕ್ಲಿಕ್ ಮಾಡಿ.
  4. ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಕ್ಲೇಮ್ ಸ್ಥಿತಿಗಳ ಪಕ್ಕದಲ್ಲಿರುವ ಬಾಕ್ಸ್‌ ಅನ್ನು ಗುರುತು ಮಾಡಿ: ಸಕ್ರಿಯ, ಸಂಭಾವ್ಯ, ವಿವಾದ ಸಲ್ಲಿಸಲಾಗಿರುವುದು, ಮೇಲ್ಮನವಿ ಸಲ್ಲಿಸಲಾಗಿರುವುದು, ನಿಷ್ಕ್ರಿಯ, ಬಾಕಿ ಉಳಿದಿರುವುದು, ತೆಗೆದುಹಾಕುವಿಕೆ, ವಿಳಂಬಿತ ತೆಗೆದುಹಾಕುವಿಕೆ ಮತ್ತು ಪರಿಶೀಲನೆಯಲ್ಲಿರುವ ತೆಗೆದುಹಾಕುವಿಕೆೆ.
  5. ಅನ್ವಯಿಸಿ ಕ್ಲಿಕ್ ಮಾಡಿ.
ಗಮನಿಸಿ:

ಕ್ಲೇಮ್ ಸ್ಥಿತಿಗಳ ಅರ್ಥವೇನು

ಸಕ್ರಿಯ ಕ್ಲೇಮ್

ಸಕ್ರಿಯ ಕ್ಲೇಮ್‌ಗಳೆಂದರೆ ನಿಮ್ಮ ಕಂಟೆಂಟ್ ಮ್ಯಾನೇಜರ್ ಖಾತೆಯೊಂದಿಗೆ ಸಂಯೋಜಿತವಾಗಿರುವ, ಪ್ರಸ್ತುತ ಸಕ್ರಿಯವಾಗಿರುವಂತಹ ಕ್ಲೇಮ್‌ಗಳಾಗಿವೆ.

ಸಕ್ರಿಯ ಕ್ಲೇಮ್ ಫಿಲ್ಟರ್ ಅಡಿಯಲ್ಲಿ, ವಿವಾದವನ್ನು ಮರುಸ್ಥಾಪಿಸಲಾಗಿರುವುದು ಎಂಬ ಹೆಚ್ಚುವರಿ ಫಿಲ್ಟರ್ ಅನ್ನು ನೀವು ಆಯ್ಕೆ ಮಾಡಬಹುದು. ಬಳಕೆದಾರರು ವಿವಾದ ಸಲ್ಲಿಸಿರುವ, ನಂತರ ನೀವು ವಿವಾದವನ್ನು ಮರುಸ್ಥಾಪಿಸಿರುವ ನಿಮ್ಮ ಸಕ್ರಿಯ ಕ್ಲೇಮ್‌ಗಳ ಪಟ್ಟಿಯು ನಿಮಗೆ ಸಿಗುತ್ತದೆ.

ಸಂಭಾವ್ಯ ಕ್ಲೇಮ್

ಸಂಭಾವ್ಯ ಕ್ಲೇಮ್‌ಗಳೆಂದರೆ, ನಿಮ್ಮ ಪರಿಶೀಲನೆಗಾಗಿ ಕಾಯುತ್ತಿರುವ ಕಾರಣ ಇನ್ನೂ ಸಕ್ರಿಯವಾಗಿಲ್ಲದ ಕ್ಲೇಮ್‌ಗಳಾಗಿವೆ. 

ನಿಮ್ಮ ಸಂಭಾವ್ಯ ಕ್ಲೇಮ್‌ಗಳಲ್ಲಿ ಫಿಲ್ಟರ್ ಮಾಡಲು ನೀವು ಬಯಸಿದರೆ, ಈ ಹೆಚ್ಚುವರಿ ಫಿಲ್ಟರ್‌ಗಳಿಂದ ಆಯ್ಕೆ ಮಾಡಬಹುದು:

  • ಪರಿಶೀಲನೆಗೆ ಕಳುಹಿಸಲಾಗಿರುವುದು: ನಿಮ್ಮ Studio ಕಂಟೆಂಟ್ ಮ್ಯಾನೇಜರ್ ಸೆಟ್ಟಿಂಗ್ ಅಥವಾ ಹೊಂದಿಕೆ ನೀತಿಯನ್ನು ಆಧರಿಸಿ ಹಸ್ತಚಾಲಿತ ಪರಿಶೀಲನೆಯ ಅಗತ್ಯವಿರುವ ಕ್ಲೇಮ್‌ಗಳು. ಕ್ಲೇಮ್‌ಗಳನ್ನು ಹಸ್ತಚಾಲಿತ ಪರಿಶೀಲನೆಗೆ ಕಳುಹಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.
  • ಸಣ್ಣ ಹೊಂದಾಣಿಕೆ: ಹೊಂದಾಣಿಕೆಯಾಗುವ ವೀಡಿಯೊದ ಅವಧಿಯು ಕಡಿಮೆ ಇರುವ ಕಾರಣ ಪರಿಶೀಲನೆಗೆ ಕಳುಹಿಸಲಾಗಿರುವ ಕ್ಲೇಮ್‌ಗಳು.
  • ಬೇರೊಬ್ಬ ಕಂಟೆಂಟ್ ಮ್ಯಾನೇಜರ್ ಬಳಕೆದಾರರು ಅಪ್‌ಲೋಡ್ ಮಾಡಿರುವ ವೀಡಿಯೊ: ಬೇರೊಬ್ಬ ಕಂಟೆಂಟ್ ಮ್ಯಾನೇಜರ್ ಬಳಕೆದಾರರು ಹೊಂದಾಣಿಕೆಯಾಗುವ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿರುವ ಕಾರಣದಿಂದಾಗಿ ಪರಿಶೀಲನೆಯ ಅಗತ್ಯವಿರುವ ಕ್ಲೇಮ್‌ಗಳು.
  • ಕಡಿಮೆ ವಿಶ್ವಾಸಾರ್ಹ: Content ID ಯು ಕಂಟೆಂಟ್ ಅನ್ನು ಕಡಿಮೆ ವಿಶ್ವಾಸಾರ್ಹ ಹೊಂದಾಣಿಕೆ ಎಂದು ಪರಿಗಣಿಸಿರುವ ಕಾರಣ ಪರಿಶೀಲನೆಯ ಅಗತ್ಯವಿರುವ ಕ್ಲೇಮ್‌ಗಳು.
  • YouTube ಮಾನಿಟೈಸೇಶನ್ ನೀತಿಯ ಉಲ್ಲಂಘನೆ: YouTube ಮಾನಿಟೈಸೇಶನ್ ನೀತಿಯನ್ನು ಕ್ಲೇಮ್ ಉಲ್ಲಂಘಿಸುವ ಸಾಧ್ಯತೆಯಿರುವ ಕಾರಣದಿಂದಾಗಿ ಪರಿಶೀಲನೆಯ ಅಗತ್ಯವಿರುವ ಕ್ಲೇಮ್‌ಗಳು.
  • ರೆಟ್ರೊಆ್ಯಕ್ಟಿವ್ ನಿರ್ಬಂಧ: ವೀಡಿಯೊಗಳನ್ನು ಈಗಾಗಲೇ YouTube ಗೆ ಅಪ್‌ಲೋಡ್ ಮಾಡಿದ ನಂತರ ಮಾಡಲಾದ ಕಡಿಮೆ ವಿಶ್ವಾಸಾರ್ಹತೆಯ ನಿರ್ಬಂಧ ಕ್ಲೇಮ್‌ಗಳು. ಇದಕ್ಕೆ ವಿಳಂಬವಾದ ಉಲ್ಲೇಖ ಡೆಲಿವರಿ ಅಥವಾ Content ID ಸುಧಾರಣೆಗಳು ಕಾರಣವಾಗಿರಬಹುದು.
ವಿವಾದಿತ ಕ್ಲೇಮ್

ವಿವಾದಿತ ಕ್ಲೇಮ್‌ಗಳು ಎಂದರೆ ಕ್ಲೇಮ್ ಮಾಡಲಾದ ವೀಡಿಯೊವನ್ನು ಅಪ್‌ಲೋಡ್ ಮಾಡಿರುವವರು ವಿವಾದನ್ನು ಸಲ್ಲಿಸಿರುವ ಕ್ಲೇಮ್‌ಗಳಾಗಿವೆ. ನೀವು ವಿವಾದಿತ ಕ್ಲೇಮ್ ಅನ್ನು ಪರಿಶೀಲಿಸುವವರೆಗೂ YouTube ಅದನ್ನು ಜಾರಿಗೊಳಿಸುವುದಿಲ್ಲ.

ಅಪ್‌ಲೋಡ್ ಮಾಡಿರುವವರು ತಮ್ಮ ವಿವಾದ ಸಲ್ಲಿಸುವಾಗ ಅದಕ್ಕೆ ನೀಡಿರುವ ಕಾರಣದ ಪ್ರಕಾರವಾಗಿ ನಿಮ್ಮ ವಿವಾದಿತ ಕ್ಲೇಮ್‌ಗಳನ್ನು ನೀವು ಫಿಲ್ಟರ್ ಮಾಡಬಹುದು:

  • ಕೃತಿಸ್ವಾಮ್ಯಕ್ಕೊಳಪಟ್ಟ ವಿಷಯವನ್ನು ತಪ್ಪಾಗಿ ಗುರುತಿಸಲಾಗಿದೆ: ತಮ್ಮ ವೀಡಿಯೊದಲ್ಲಿ ಕ್ಲೇಮ್ ಮಾಡಲಾಗಿರುವ ಕಂಟೆಂಟ್ ಅನ್ನು ತಪ್ಪಾಗಿ ಗುರುತಿಸಲಾಗಿದೆ ಎಂದು ಅಪ್‌ಲೋಡ್ ಮಾಡಿರುವವರು ಪ್ರತಿಪಾದಿಸುವ ಕಾರಣದಿಂದ ಸಲ್ಲಿಸಲಾಗಿರುವ ವಿವಾದಗಳು.
  • ನ್ಯಾಯಯುತ ಬಳಕೆ: ಅಪ್‌ಲೋಡ್ ಮಾಡಿರುವವರು ತಮ್ಮ ವೀಡಿಯೊದಲ್ಲಿ ಕ್ಲೇಮ್ ಮಾಡಲಾಗಿರುವ ಕಂಟೆಂಟ್ ಅನ್ನು ಗಣನೀಯವಾಗಿ ಮಾರ್ಪಡಿಸಿರುವುದಾಗಿ ಪ್ರತಿಪಾದಿಸುವುದರಿಂದ ಅಥವಾ ತಮ್ಮ ವೀಡಿಯೊವನ್ನು ನ್ಯಾಯಯುತ ಬಳಕೆ, ನ್ಯಾಯೋಚಿತ ವ್ಯವಹಾರ ಅಥವಾ ಆ ರೀತಿಯ ಕೃತಿಸ್ವಾಮ್ಯ ವಿನಾಯಿತಿಗಳಿಂದ ರಕ್ಷಿಸಲಾಗಿದೆ ಎಂದು ಪ್ರತಿಪಾದಿಸುವುದರಿಂದ ಸಲ್ಲಿಸಲಾಗಿರುವ ವಿವಾದಗಳು.
  • ದೃಢೀಕೃತ: ಅಪ್‌ಲೋಡ್ ಮಾಡಿರುವವರು ತಮ್ಮ ವೀಡಿಯೊದಲ್ಲಿ ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ಬಳಸಲು ಅನುಮತಿಯನ್ನು ಅಥವಾ ಪರವಾನಗಿಯನ್ನು ಪಡೆಯಲಾಗಿದೆ ಎಂದು ಪ್ರತಿಪಾದಿಸುವುದರಿಂದ ಸಲ್ಲಿಸಲಾಗಿರುವ ವಿವಾದಗಳು.
  • ಮೂಲ ಕಂಟೆಂಟ್: ಕಂಟೆಂಟ್ ತಮ್ಮ ಮೂಲ ಕಂಟೆಂಟ್ ಆಗಿರುವುದಾಗಿ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ಹಕ್ಕುಗಳನ್ನು ಅವರು ಹೊಂದಿರುವುದಾಗಿ ಅಪ್‌ಲೋಡ್ ಮಾಡಿರುವವರು ಪ್ರತಿಪಾದಿಸುವುದರಿಂದ ಸಲ್ಲಿಸಲಾಗಿರುವ ವಿವಾದಗಳು.
  • ಸಾರ್ವಜನಿಕ ಡೊಮೇನ್ ತಮ್ಮ ವೀಡಿಯೊದಲ್ಲಿ ಕ್ಲೇಮ್ ಮಾಡಲಾದ ಕಂಟೆಂಟ್ ಸಾರ್ವಜನಿಕ ಡೊಮೇನ್‌ನಲ್ಲಿದೆ ಮತ್ತು ಅದಕ್ಕೆ ಈಗ ಕೃತಿಸ್ವಾಮ್ಯದಿಂದ ರಕ್ಷಣೆಯಿಲ್ಲ ಎಂದು ಅಪ್‌ಲೋಡ್ ಮಾಡಿರುವವರು ಪ್ರತಿಪಾದಿಸುವುದರಿಂದ ಸಲ್ಲಿಸಲಾಗಿರುವ ವಿವಾದಗಳು.
ಮೇಲ್ಮನವಿ ಸಲ್ಲಿಸಲಾದ ಕ್ಲೇಮ್

ಮೇಲ್ಮನವಿ ಸಲ್ಲಿಸಲಾದ ಕ್ಲೇಮ್‌ಗಳೆಂದರೆ, ಕ್ಲೇಮ್ ಮಾಡಲಾದ ವೀಡಿಯೊವನ್ನು ಅಪ್‌ಲೋಡ್ ಮಾಡಿರುವವರ ಮೂಲ ವಿವಾದಿತ ಕ್ಲೇಮ್ ಅನ್ನು ನೀವು ಮರುಸ್ಥಾಪಿಸಿದ ಬಳಿಕ, ಅದಕ್ಕೆ ಪ್ರತಿಯಾಗಿ ಅವರು ಮೇಲ್ಮನವಿಯನ್ನು ಸಲ್ಲಿಸಿರುವಂತಹ ಕ್ಲೇಮ್‌ಗಳಾಗಿವೆ.

ಅಪ್‌ಲೋಡ್ ಮಾಡಿರುವವರು ತಮ್ಮ ಮೇಲ್ಮನವಿಯನ್ನು ಸಲ್ಲಿಸುವಾಗ ಅದಕ್ಕೆ ನೀಡಿರುವ ಕಾರಣದ ಪ್ರಕಾರವಾಗಿ ನಿಮ್ಮ ಮೇಲ್ಮನವಿ ಸಲ್ಲಿಸಲಾದ ಕ್ಲೇಮ್‌ಗಳನ್ನು ನೀವು ಫಿಲ್ಟರ್ ಮಾಡಬಹುದು:

  • ಕೃತಿಸ್ವಾಮ್ಯಕ್ಕೊಳಪಟ್ಟ ವಿಷಯವನ್ನು ತಪ್ಪಾಗಿ ಗುರುತಿಸಲಾಗಿದೆ: ತಮ್ಮ ವೀಡಿಯೊದಲ್ಲಿ ಕ್ಲೇಮ್ ಮಾಡಲಾಗಿರುವ ಕಂಟೆಂಟ್ ಅನ್ನು ತಪ್ಪಾಗಿ ಗುರುತಿಸಲಾಗಿದೆ ಎಂದು ಅಪ್‌ಲೋಡ್ ಮಾಡಿರುವವರು ಪ್ರತಿಪಾದಿಸುವ ಕಾರಣದಿಂದ ಸಲ್ಲಿಸಲಾಗಿರುವ ಮೇಲ್ಮನವಿಗಳು.
  • ನ್ಯಾಯಯುತ ಬಳಕೆ: ಅಪ್‌ಲೋಡ್ ಮಾಡಿರುವವರು ತಮ್ಮ ವೀಡಿಯೊದಲ್ಲಿ ಕ್ಲೇಮ್ ಮಾಡಲಾಗಿರುವ ಕಂಟೆಂಟ್ ಅನ್ನು ಗಣನೀಯವಾಗಿ ಮಾರ್ಪಡಿಸಿರುವುದಾಗಿ ಪ್ರತಿಪಾದಿಸುವುದರಿಂದ ಅಥವಾ ತಮ್ಮ ವೀಡಿಯೊವನ್ನು ನ್ಯಾಯಯುತ ಬಳಕೆ, ನ್ಯಾಯೋಚಿತ ವ್ಯವಹಾರ ಅಥವಾ ಆ ರೀತಿಯ ಕೃತಿಸ್ವಾಮ್ಯ ವಿನಾಯಿತಿಗಳಿಂದ ರಕ್ಷಿಸಲಾಗಿದೆ ಎಂದು ಪ್ರತಿಪಾದಿಸುವುದರಿಂದ ಸಲ್ಲಿಸಲಾಗಿರುವ ಮೇಲ್ಮನವಿಗಳು.
  • ದೃಢೀಕೃತ: ಅಪ್‌ಲೋಡ್ ಮಾಡಿರುವವರು ತಮ್ಮ ವೀಡಿಯೊದಲ್ಲಿ ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ಬಳಸಲು ಅನುಮತಿಯನ್ನು ಅಥವಾ ಪರವಾನಗಿಯನ್ನು ಪಡೆಯಲಾಗಿದೆ ಎಂದು ಪ್ರತಿಪಾದಿಸುವುದರಿಂದ ಸಲ್ಲಿಸಲಾಗಿರುವ ಮೇಲ್ಮನವಿಗಳು.
  • ಮೂಲ ಕಂಟೆಂಟ್: ಕಂಟೆಂಟ್ ತಮ್ಮ ಮೂಲ ಕಂಟೆಂಟ್ ಆಗಿರುವುದಾಗಿ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ಹಕ್ಕುಗಳನ್ನು ಅವರು ಹೊಂದಿರುವುದಾಗಿ ಅಪ್‌ಲೋಡ್ ಮಾಡಿರುವವರು ಪ್ರತಿಪಾದಿಸುವುದರಿಂದ ಸಲ್ಲಿಸಲಾಗಿರುವ ಮೇಲ್ಮನವಿಗಳು.
  • ಸಾರ್ವಜನಿಕ ಡೊಮೇನ್ ತಮ್ಮ ವೀಡಿಯೊದಲ್ಲಿ ಕ್ಲೇಮ್ ಮಾಡಲಾದ ಕಂಟೆಂಟ್ ಸಾರ್ವಜನಿಕ ಡೊಮೇನ್‌ನಲ್ಲಿದೆ ಮತ್ತು ಅದಕ್ಕೆ ಈಗ ಕೃತಿಸ್ವಾಮ್ಯದಿಂದ ರಕ್ಷಣೆಯಿಲ್ಲ ಎಂದು ಅಪ್‌ಲೋಡ್ ಮಾಡಿರುವವರು ಪ್ರತಿಪಾದಿಸುವುದರಿಂದ ಸಲ್ಲಿಸಲಾಗಿರುವ ಮೇಲ್ಮನವಿಗಳು.
ನಿಷ್ಕ್ರಿಯ ಕ್ಲೇಮ್

ನಿಷ್ಕ್ರಿಯ ಕ್ಲೇಮ್‌ಗಳು ಈಗ ಸಕ್ರಿಯವಾಗಿಲ್ಲದ ಕ್ಲೇಮ್‌ಗಳಾಗಿರುತ್ತವೆ.

ನಿಮ್ಮ ನಿಷ್ಕ್ರಿಯ ಕ್ಲೇಮ್‌ಗಳಲ್ಲಿ ಫಿಲ್ಟರ್ ಮಾಡಲು ನೀವು ಬಯಸಿದರೆ, ಈ ಹೆಚ್ಚುವರಿ ಫಿಲ್ಟರ್‌ಗಳಿಂದ ನೀವು ಆಯ್ಕೆ ಮಾಡಬಹುದು:

  • ಪರಿಶೀಲನೆ ಅವಧಿ ಮೀರಿದೆ: 30 ದಿನಗಳಲ್ಲಿ ಪರಿಶೀಲಿಸಿರದ ಸಂಭಾವ್ಯ ಕ್ಲೇಮ್‌ಗಳು. ನಿಷ್ಕ್ರಿಯ ಸಂಭಾವ್ಯ ಕ್ಲೇಮ್‌ಗಳನ್ನು ಪುನಃ ಸಕ್ರಿಯವಾಗಿಸಲು ನೀವು ಅವುಗಳನ್ನು ಪುನಃ ಕ್ಲೇಮ್ ಮಾಡಬಹುದು.
  • ಅಪ್‌ಲೋಡ್ ಮಾಡಿರುವವರು ವೀಡಿಯೊ ತೆಗೆದುಹಾಕಿದ್ದಾರೆ: ಬಳಕೆದಾರರು ವೀಡಿಯೊವನ್ನು ಅಳಿಸಿದ ಕಾರಣ ನಿಷ್ಕ್ರಿಯವಾಗಿರುವ ಕ್ಲೇಮ್‌ಗಳು. ಇತ್ತೀಚಿಗೆ ಅಳಿಸಿರುವ ವೀಡಿಯೊಗಳನ್ನು ಮಾತ್ರ ತೋರಿಸಲಾಗುತ್ತದೆಯೇ ಹೊರತು, ಈ ಹಿಂದೆ ಅಳಿಸಿರುವ ಎಲ್ಲಾ ವೀಡಿಯೊಗಳನ್ನಲ್ಲ.
  • ಬಳಕೆದಾರರು ಪ್ರತಿವಾದಿ ನೋಟಿಫಿಕೇಶನ್ ಸಲ್ಲಿಸಿದ್ದಾರೆ: ಬಳಕೆದಾರರು ಪ್ರತಿವಾದಿ ನೋಟಿಫಿಕೇಶನ್ ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ ಬಿಡುಗಡೆ ಮಾಡಿರುವ ಕ್ಲೇಮ್‌ಗಳು. ಪ್ರತಿವಾದಿ ನೋಟಿಫಿಕೇಶನ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
  • ಅಸೆಟ್ ವರ್ಗಾವಣೆ ವಿನಂತಿ: ಅಸೆಟ್ ಮಾಲೀಕತ್ವ ವರ್ಗಾವಣೆಯಿಂದಾಗಿ ಬಿಡುಗಡೆ ಆಗಿರುವ ಕ್ಲೇಮ್‌ಗಳು. ಅಸೆಟ್ ಮಾಲೀಕತ್ವ ವರ್ಗಾವಣೆಗಳ ಕುರಿತು ಇನ್ನಷ್ಟು ತಿಳಿಯಿರಿ.
  • ಚಾನಲ್ ಅನ್ನು ಅನುಮತಿ ಪಟ್ಟಿಗೆ ಸೇರಿಸಲಾಗಿದೆ: ಕ್ಲೇಮ್ ಮಾಡಲಾದ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಚಾನಲ್ ಅನ್ನು ನಿಮ್ಮ ಅನುಮತಿ ಪಟ್ಟಿಗೆ ಸೇರಿಸಿದ ನಂತರ ಬಿಡುಗಡೆ ಆಗಿರುವ ಕ್ಲೇಮ್‌ಗಳು. Content ID ಕ್ಲೇಮ್‌ಗಳಿಂದ ವಿನಾಯಿತಿ ಪಡೆಯುವ ಚಾನಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
  • ವಿವಾದ ಪರಿಹಾರ: ಬಳಕೆದಾರರು ವಿವಾದ ಸಲ್ಲಿಸಿದ ನಂತರ ಹಸ್ತಚಾಲಿತವಾಗಿ ಬಿಡುಗಡೆ ಮಾಡಲಾದ ಅಥವಾ ವಿವಾದಿತ ಕ್ಲೇಮ್‌ನ ಅವಧಿ ಮುಗಿದ ನಂತರ ಸ್ವಯಂಚಾಲಿತವಾಗಿ ಬಿಡುಗಡೆ ಆಗಿರುವ ಕ್ಲೇಮ್‌ಗಳು.
  • ವೀಡಿಯೊ ಮಾರ್ಪಡಿಸಲಾಗಿದೆ: ಬಳಕೆದಾರರು ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ಎಡಿಟ್ ಮಾಡಿದ ಬಳಿಕ ಬಿಡುಗಡೆ ಮಾಡಲಾಗಿರುವ ಕ್ಲೇಮ್‌ಗಳು. ವೀಡಿಯೊಗಳಿಂದ ಕ್ಲೇಮ್ ಮಾಡಲಾದ ಕಂಟೆಂಟ್ ಅನ್ನು ತೆಗೆದುಹಾಕುವ ಕುರಿತು ಇನ್ನಷ್ಟು ತಿಳಿಯಿರಿ.
  • ಪಾಲುದಾರರು ಹಸ್ತಚಾಲಿತವಾಗಿ ಮುಚ್ಚಿದ್ದಾರೆ: ವಿವಾದ ಸಲ್ಲಿಕೆ ಪ್ರಕ್ರಿಯೆಯ ಭಾಗವಾಗಿಲ್ಲದಿರುವ ಮತ್ತು ನಿಮ್ಮ ಕಂಟೆಂಟ್ ಮ್ಯಾನೇಜರ್‌ನ ಬಳಕೆದಾರರು ಹಸ್ತಚಾಲಿತವಾಗಿ ಬಿಡುಗಡೆ ಮಾಡಿರುವ ಕ್ಲೇಮ್‌ಗಳು. ಕ್ಲೇಮ್‌ಗಳನ್ನು ಯಾವಾಗ ಬೇಕಾದರೂ ಬಿಡುಗಡೆ ಮಾಡಬಹುದು. ಕ್ಲೇಮ್‌ಗಳನ್ನು ಬಿಡುಗಡೆ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.
  • ಉಲ್ಲೇಖವನ್ನು ತೆಗೆದುಹಾಕಲಾಗಿದೆ ಅಥವಾ ಹೊರತುಪಡಿಸಲಾಗಿದೆ: ಉಲ್ಲೇಖದಲ್ಲಿ ಹಸ್ತಚಾಲಿತವಾಗಿ ಪಾಲುದಾರರನ್ನು ಹೊರತಾಗಿಸುವುದು, ಉಲ್ಲೇಖವನ್ನು ನಿಷ್ಕ್ರಿಯಗೊಳಿಸುವುದು ಅಥವಾ ಉಲ್ಲೇಖದ ಸೆಗ್ಮೆಂಟ್ ಅನ್ನು ಅನುಮಾನಾಸ್ಪದ ಎಂದು ಗುರುತಿಸಲಾಗಿರುವುದರಿಂದ ಬಿಡುಗಡೆ ಮಾಡಲಾಗಿರುವ ಕ್ಲೇಮ್‌ಗಳು.
  • ಬೇರೊಂದು ಕ್ಲೇಮ್‌ನಿಂದ ಬದಲಿಸಲಾಗಿದೆ: ಉತ್ತಮ ಹೊಂದಾಣಿಕೆಯು ಕಂಡುಬಂದಾಗ ಮತ್ತು ಹೊಸ ಕ್ಲೇಮ್ ಅನ್ನು ರಚಿಸಿ ಅಸ್ತಿತ್ವದಲ್ಲಿರುವ ಕ್ಲೇಮ್ ಅನ್ನು ಬದಲಾಯಿಸಿದಾಗ ಬಿಡುಗಡೆ ಮಾಡಲಾದ ಕ್ಲೇಮ್‌ಗಳು.
  • ಅಸೆಟ್‌ನಿಂದ ಮಾಲೀಕತ್ವವನ್ನು ತೆಗೆದುಹಾಕಲಾಗಿದೆ: ಅಸೆಟ್‌ನಿಂದ ಮಾಲೀಕತ್ವವನ್ನು ತೆಗೆದುಹಾಕಲಾದ ನಂತರ ಬಿಡುಗಡೆ ಮಾಡಿದ ಕ್ಲೇಮ್‌ಗಳು. ಅಸೆಟ್ ಮಾಲೀಕತ್ವವನ್ನು ಅಪ್‌ಡೇಟ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.
  • ಮುಚ್ಚಲಾಗಿದೆ (AdSense ಅಥವಾ YouTube ಗಾಗಿ AdSense ಇಲ್ಲ): ಅನ್ವಯವಾಗುವಂತೆ, AdSense ಅಥವಾ YouTube ಗಾಗಿ AdSense ಖಾತೆಯು ನಿಷ್ಕ್ರಿಯವಾದ ನಂತರ ಬಿಡುಗಡೆ ಮಾಡಲಾದ ಕ್ಲೇಮ್‌ಗಳು.
  • ಮುಚ್ಚಲಾಗಿದೆ (ಮಾನಿಟೈಸೇಶನ್ ಇಲ್ಲ): ಮಾನಿಟೈಸೇಶನ್ ಆಯ್ಕೆಯನ್ನು ಆಫ್ ಮಾಡಿದ ನಂತರ ಬಿಡುಗಡೆ ಮಾಡಿರುವ ಕ್ಲೇಮ್‌.
  • ಮುಚ್ಚಲಾಗಿದೆ (ಸ್ವಂತ ವೀಡಿಯೊ ಹೊಂದಾಣಿಕೆ): ಚಾನಲ್ ಮಾಲೀಕರು ಹೊಂದಾಣಿಕೆ ಕ್ಲೇಮ್‌ನ ಮಾಲೀಕರಾಗಿರುವ ಕಾರಣ ಸ್ವಯಂಚಾಲಿತವಾಗಿ ಬಿಡುಗಡೆ ಮಾಡಲಾಗಿರುವ ಕ್ಲೇಮ್‌ಗಳು.
ಬಾಕಿ ಉಳಿದಿರುವ ಕ್ಲೇಮ್

ಬಾಕಿ ಉಳಿದಿರುವ ಕ್ಲೇಮ್‌ಗಳೆಂದರೆ ತಮ್ಮ ವಿವಾದಿತ ಅಥವಾ ಸಂಭಾವ್ಯ ಕ್ಲೇಮ್ ಅನ್ನು ಪರಿಶೀಲಿಸುತ್ತಿರುವ ಬೇರೊಬ್ಬ ಪಾರ್ಟಿಯ ಮೇಲೆ ಅವಲಂಬಿತವಾಗಿರುವ ಕ್ಲೇಮ್‌ಗಳಾಗಿವೆ. ಇತರ ಪಾರ್ಟಿಯು ತಮ್ಮ ಕ್ಲೇಮ್‌ಗಳನ್ನು ಪರಿಶೀಲಿಸುವವರೆಗೆ ನೀವು ಈ ಕ್ಲೇಮ್‌ಗಳ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಬಾಕಿ ಉಳಿದಿರುವ ಕ್ಲೇಮ್‌ಗಳಿಗೆ ಈ ಕಾರಣಗಳಿರಬಹುದು:

  • ಎಂಬೆಡ್ ಮಾಡಿದ ಅಸೆಟ್‌ಗಳು
    • ಸಂಗೀತದ ಪ್ರಕಾಶಕರು ಸೌಂಡ್ ರೆಕಾರ್ಡಿಂಗ್‌ನಲ್ಲಿ ಸಂಯೋಜನೆ ಅಸೆಟ್ ಅನ್ನು ಎಂಬೆಡ್ ಮಾಡಿರಬಹುದು ಮತ್ತು ಈ ಸೌಂಡ್ ರೆಕಾರ್ಡಿಂಗ್ ಒಂದು ಸಂಭಾವ್ಯ ಕ್ಲೇಮ್ ಅನ್ನು ಮಾಡಿರಬಹುದು.
    • ಪ್ರಕಾಶಕರು “ಬಾಕಿ ಉಳಿದಿದೆ (ಇತರ ಮಾಲೀಕರು)” ಎಂಬ ಟಿಪ್ಪಣಿಯನ್ನು ಹೊಂದಿರುವ ಕ್ಲೇಮ್ ಅನ್ನು ವೀಕ್ಷಿಸಬಹುದು, ಆದರೆ ಅದರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗುವುದಿಲ್ಲ.
  • ಹಲವು ಅಸೆಟ್ ಮಾಲೀಕರು ಮತ್ತು ಪರಿಶೀಲನೆಗೆ ಕಳುಹಿಸಿ ಎಂಬುದಕ್ಕೆ ಸಂಬಂಧಿಸಿದ ನೀತಿಗಳು
    • ಕ್ಲೇಮ್, ಇತರ ಮಾಲೀಕರ ಪರಿಶೀಲನೆಗೆ ಬಾಕಿ ಉಳಿದಿದ್ದು, ಯಾವುದೇ ಒಬ್ಬ ಪಾಲುದಾರರು ಅದನ್ನು ಸ್ವೀಕರಿಸಿದ ಸಂದರ್ಭದಲ್ಲಿ, ಕ್ಲೇಮ್ ಎಲ್ಲಾ ಪಾರ್ಟಿಗಳಿಗೂ ಸಕ್ರಿಯವಾಗುತ್ತದೆ.
    • ಒಂದು ವೇಳೆ ಒಬ್ಬ ಪಾಲುದಾರರು ಬಾಕಿ ಉಳಿದಿರುವ ಕ್ಲೇಮ್ ಅನ್ನು ಬಿಡುಗಡೆ ಮಾಡಿದರೆ, ಅದನ್ನು ಬಿಡುಗಡೆ ಮಾಡಲು ಎಲ್ಲಾ ಪಾಲುದಾರರರು ದೃಢೀಕರಿಸಬೇಕಾಗುತ್ತದೆ.
  • ಪರಿಶೀಲನೆಗೆ ಕಾಯುತ್ತಿರುವ ಅಮಾನ್ಯ ಉಲ್ಲೇಖ
    • ಅಮಾನ್ಯ ಉಲ್ಲೇಖಗಳನ್ನು ಸಮಸ್ಯೆಗಳು  ಪುಟದಲ್ಲಿ ಕಾಣಬಹುದಾಗಿದೆ:
      • ಫಿಲ್ಟರ್ ಬಾರ್‌ನಲ್ಲಿ , ಸ್ಥಿತಿ ನಂತರನಿರೀಕ್ಷಿಸಲಾಗುತ್ತಿದೆ ಕ್ಲಿಕ್ ಮಾಡಿ.
      • ಫಿಲ್ಟರ್  ನಂತರ ಸಮಸ್ಯೆ ಪ್ರಕಾರ ನಂತರ ಅಮಾನ್ಯ ಉಲ್ಲೇಖ ಆಯ್ಕೆಮಾಡಿ.
ತೆಗೆದುಹಾಕುವಿಕೆ ಕ್ಲೇಮ್
ತೆಗೆದುಹಾಕುವಿಕೆ ಕ್ಲೇಮ್‌ಗಳೆಂದರೆ, ತೆಗೆದುಹಾಕುವಿಕೆ ವಿನಂತಿಯ ಮೇರೆಗೆ ತೆಗೆದುಹಾಕಲಾಗಿರುವ ವೀಡಿಯೊಗಳ ಮೇಲಿನ ಕ್ಲೇಮ್‌ಗಳಾಗಿವೆ. ತೆಗೆದುಹಾಕುವಿಕೆ ವಿನಂತಿಗಳ ಕುರಿತು ಇನ್ನಷ್ಟು ತಿಳಿಯಿರಿ.
ವಿಳಂಬಿತ ತೆಗೆದುಹಾಕುವಿಕೆ
ವಿಳಂಬಿತ ತೆಗೆದುಹಾಕುವಿಕೆ ಎಂಬುದು, ತೆಗೆದುಹಾಕುವಿಕೆ ವಿನಂತಿಯ ಆಧಾರದಲ್ಲಿ ತೆಗೆದುಹಾಕಲು ನಿಗದಿಯಾಗಿರುವ ವೀಡಿಯೊಗಳ ಮೇಲಿನ ಕ್ಲೇಮ್‌ಗಳನ್ನು ಸೂಚಿಸುತ್ತದೆ. ಕೃತಿಸ್ವಾಮ್ಯ ಮಾಲೀಕರು ವಿಳಂಬಿತ ತೆಗೆದುಹಾಕುವಿಕೆ ವಿನಂತಿಗಳನ್ನು ಸಲ್ಲಿಸಬಹುದು. ಇವು ವೀಡಿಯೊ ಅಪ್‌ಲೋಡ್ ಮಾಡಿರುವವರಿಗೆ ವೀಡಿಯೊವನ್ನು ತೆಗೆದುಹಾಕಲಾಗುವ ಮೊದಲು 7 ದಿನಗಳ ಕಾಲಾವಕಾಶ ನೀಡುತ್ತವೆ. ವಿಳಂಬಿತ ತೆಗೆದುಹಾಕುವಿಕೆ ವಿನಂತಿಗಳ ಕುರಿತು ಇನ್ನಷ್ಟು ತಿಳಿಯಿರಿ.
ಪರಿಶೀಲನೆಯಲ್ಲಿರುವ ತೆಗೆದುಹಾಕುವಿಕೆೆ
ಪರಿಶೀಲನೆಯಲ್ಲಿರುವ ತೆಗೆದುಹಾಕುವಿಕೆೆ ಎಂಬುದು, YouTube ತಂಡವು ಪ್ರಸ್ತುತವಾಗಿ ಪರಿಶೀಲಿಸುತ್ತಿರುವ ತೆಗೆದುಹಾಕುವಿಕೆ ವಿನಂತಿಯ ಭಾಗವಾಗಿರುವ ವೀಡಿಯೊಗಳ ಮೇಲಿನ ಕ್ಲೇಮ್‌ಗಳನ್ನು ಇದು ಸೂಚಿಸುತ್ತದೆ. ತೆಗೆದುಹಾಕುವಿಕೆ ವಿನಂತಿಗಳ ಕುರಿತು ಇನ್ನಷ್ಟು ತಿಳಿಯಿರಿ.

 

Keep in mind:

When a channel linked to your Content Manager uploads a video that gets a copyright claim:

  • Any 1st party claims (“uploader claims”) stay active unless manually closed by the uploader or closed due to video deletion.
  • Match policies associated with the claim aren't applied until the third-party Content ID claim is resolved (except for any geo-fencing block policies the uploader set before the third-party claim).

When you claim a video uploaded by another channel:

  • Any 1st party claims (“uploader claims”) stay active unless manually closed by the uploader or closed due to video deletion. However, only certain videos will be monetized on the uploader’s side, such as videos eligible for the cover revenue sharing.

Note: To view the monetization status of a video, check the Videos page.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11518633278372827022
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false