ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಚಾನಲ್‌ಗಳನ್ನು ಲಿಂಕ್ ಮಾಡಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನಿಮ್ಮ ಕಂಟೆಂಟ್ ಮ್ಯಾನೇಜರ್ ಅನ್ನು ಸೆಟಪ್ ಮಾಡಿದ ಬಳಿಕ, ನೀವು ಚಾನಲ್‌ಗಳನ್ನು ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಬಹುದು. ಚಾನಲ್ ಅನ್ನು ಲಿಂಕ್ ಮಾಡಿದ ಬಳಿಕ, ನೀವು:

  • ಆ ಚಾನಲ್‌ನಲ್ಲಿರುವ ವೀಡಿಯೊಗಳ ಮಾನಿಟೈಸೇಶನ್ ಸ್ಥಿತಿಯನ್ನು ನಿಯಂತ್ರಿಸಬಹುದು.
  • ಆ ಚಾನಲ್‌ನಲ್ಲಿರುವ ವೀಡಿಯೊಗಳಿಗಾಗಿ Content ID ಹೊಂದಾಣಿಕೆಯನ್ನು ಆನ್ ಮಾಡಬಹುದು.
  • ವೈಯಕ್ತಿಕ ಚಾನಲ್ ಮಾಲೀಕರಿಗೆ ಅನುಮತಿಗಳನ್ನು ಸೆಟ್ ಮಾಡಬಹುದು.

ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಸೇರಲು ಚಾನಲ್ ಅನ್ನು ಆಹ್ವಾನಿಸಿ

ಚಾನಲ್‌ಗಳನ್ನು ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಸೇರುವಂತೆ ಆಹ್ವಾನಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಚಾನಲ್‌ಗಳು   ಆಯ್ಕೆಮಾಡಿ.
  3. ಆಹ್ವಾನಿಸಿ ಕ್ಲಿಕ್ ಮಾಡಿ.
  4. ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ನೀವು ಲಿಂಕ್ ಮಾಡಲು ಬಯಸುವ ಚಾನಲ್‌ನ URL ಅಥವಾ ID ಅನ್ನು ನಮೂದಿಸಿ. ಚಾನಲ್ ID ಹುಡುಕುವುದು ಹೇಗೆ ಎಂಬುದನ್ನು ತಿಳಿಯಿರಿ.
  5. ಚಾನಲ್‌ಗಾಗಿ ಅನುಮತಿಗಳನ್ನು ಆಯ್ಕೆಮಾಡಿ:
    • ಆದಾಯವನ್ನು ವೀಕ್ಷಿಸಿ: ಲಿಂಕ್ ಮಾಡಲಾದ ಚಾನಲ್‌ಗಳಿಗೆ ತಮ್ಮ ಒಟ್ಟು ಆದಾಯವನ್ನು ವೀಕ್ಷಿಸಲು ಅನುಮತಿಸಿ. 
    • ಹೊಂದಿಕೆ ನೀತಿಯನ್ನು ಸೆಟ್ ಮಾಡಿ: (ಕೆಲವು ಖಾತೆಗಳು) ವೈಯಕ್ತಿಕ ವೀಡಿಯೊಗಳಿಗಾಗಿ Content ID ಹೊಂದಾಣಿಕೆಯನ್ನು ಆನ್ ಮಾಡಲು ಚಾನಲ್ ಮಾಲೀಕರಿಗೆ ಅನುಮತಿಸಿ.
    • ಅಪ್‌ಲೋಡ್‌ಗಳನ್ನು ಮಾನಿಟೈಸ್ ಮಾಡಿ: ತಮ್ಮ ವೀಡಿಯೊಗಳಿಗಾಗಿ ಮಾನಿಟೈಸೇಶನ್ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಲಿಂಕ್ ಮಾಡಲಾದ ಚಾನಲ್ ಅನ್ನು ಅನುಮತಿಸಿ.
  6. ಆಹ್ವಾನಿಸಿ ಕ್ಲಿಕ್ ಮಾಡಿ.

ಚಾನಲ್ ಮಾಲೀಕರು ಆಹ್ವಾನವನ್ನು ಸ್ವೀಕರಿಸಿದಾಗ, ಚಾನಲ್ ನಿಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಆಗುತ್ತದೆ.

ನೀವು ಚಾನಲ್‌ಗಳು  ಪುಟದಲ್ಲಿರುವ ಆಹ್ವಾನಿಸಲಾಗಿದೆ ಟ್ಯಾಬ್‌ನಲ್ಲಿ, ಬಾಕಿ ಉಳಿದಿರುವ ಆಹ್ವಾನಗಳನ್ನು ವೀಕ್ಷಿಸಬಹುದು. ಬಾಕಿ ಉಳಿದಿರುವ ಆಹ್ಪಾನವನ್ನು ರದ್ದುಗೊಳಿಸಲು, ಚಾನಲ್ ಪಕ್ಕದಲ್ಲಿರುವ ಬಾಕ್ಸ್ ಗುರುತು ಹಾಕಿ ಮತ್ತು ಆಹ್ವಾನವನ್ನು ಹಿಂಪಡೆಯಿರಿ ಕ್ಲಿಕ್ ಮಾಡಿ.

ಇರಬೇಕಾದ ಅರ್ಹತೆಗಳು

ಎಲ್ಲಾ ಚಾನಲ್‌ಗಳು ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಲು ಅರ್ಹವಾಗಿರುವುದಿಲ್ಲ. ಉದಾಹರಣೆಗೆ, ಅಮಾನತುಗೊಳಿಸಿರುವ ಅಥವಾ ಕೊನೆಗೊಳಿಸಿದ YouTube ಗಾಗಿ AdSense ಖಾತೆಗೆ ಲಿಂಕ್ ಆಗಿರುವ ಚಾನಲ್ ಅನ್ನು ಲಿಂಕ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಚಾನಲ್ ಈ ಮುಂದಿನ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಾನದಂಡಗಳನ್ನು ಪೂರೈಸದಿದ್ದರೆ, ನೀವು ದೋಷ ಸಂದೇಶವನ್ನು ನೋಡುತ್ತೀರಿ ಮತ್ತು ಆಹ್ವಾನವನ್ನು ಕಳುಹಿಸಲಾಗುವುದಿಲ್ಲ.

ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಮಾಡಲು ಅರ್ಹತೆ ಪಡೆಯಬೇಕಾದರೆ, ಚಾನಲ್‌ನ ಸ್ಥಿತಿ ಹೀಗಿರಬಾರದು:

  • ಬೇರೊಂದು ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಆಗಿರಬಾರದು.
  • ಕಂಟೆಂಟ್ ಮ್ಯಾನೇಜರ್‌ನ ಅನುಮತಿ ಪಟ್ಟಿಯಲ್ಲಿ ಇರಬಾರದು. ಲಿಂಕ್ ಮಾಡುವ ಮೊದಲು ಚಾನಲ್ ಅನ್ನು ಅನುಮತಿ ಪಟ್ಟಿಯಿಂದ ತೆಗೆದುಹಾಕಿ.
  • YouTube ಪಾಲುದಾರ ಕಾರ್ಯಕ್ರಮದಲ್ಲಿ (YPP) ಭಾಗವಹಿಸಿರಬಾರದು. 
    • YPP ನ ಭಾಗವಾಗಿರುವ ಚಾನಲ್ ಅನ್ನು ಲಿಂಕ್ ಮಾಡಲು ನೀವು ಬಯಸಿದರೆ, ಸಹಾಯಕ್ಕಾಗಿ YouTube ಅನ್ನು ಸಂಪರ್ಕಿಸಿ.

YouTube ಪಾಲುದಾರ ಕಾರ್ಯಕ್ರಮವನ್ನು ಇನ್ನೂ ಲಾಂಚ್ ಮಾಡಿರದ ದೇಶಗಳು/ಪ್ರದೇಶಗಳಲ್ಲಿನ ಚಾನಲ್‌ಗಳನ್ನು ಲಿಂಕ್ ಮಾಡಬಹುದು, ಆದರೆ ಅವುಗಳು ಮಾನಿಟೈಸ್‌ಗೆ ಅರ್ಹವಾಗಿರುವುದಿಲ್ಲ.

ಪಾಲುದಾರರು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಸುಮಾರು 20 ಚಾನಲ್‌ಗಳನ್ನು ತಮ್ಮ ಕಂಟೆಂಟ್ ಮ್ಯಾನೇಜರ್‌ಗೆ ಆಹ್ವಾನಿಸಬಹುದು.

ಅಫಿಲಿಯೇಟ್ ಮಲ್ಟಿ-ಚಾನಲ್ ನೆಟ್‌ವರ್ಕ್‌ಗಳಿಗಾಗಿ (MCN ಗಳು) ಇರಬೇಕಾದ ಅರ್ಹತೆಗಳು

ಅಫಿಲಿಯೇಟ್ MCN ಗೆ ಲಿಂಕ್ ಮಾಡಲು ಅರ್ಹತೆ ಪಡೆಯಬೇಕಾದರೆ, ಚಾನಲ್‌ನ ಸ್ಥಿತಿ ಹೀಗಿರಬಾರದು:
  • ಬೇರೊಂದು ಕಂಟೆಂಟ್ ಮ್ಯಾನೇಜರ್‌ಗೆ ಲಿಂಕ್ ಆಗಿರಬಾರದು.
  • ಕಂಟೆಂಟ್ ಮ್ಯಾನೇಜರ್‌ನ ಅನುಮತಿ ಪಟ್ಟಿಯಲ್ಲಿ ಇರಬಾರದು. ಲಿಂಕ್ ಮಾಡುವ ಮೊದಲು ಚಾನಲ್ ಅನ್ನು ಅನುಮತಿ ಪಟ್ಟಿಯಿಂದ ತೆಗೆದುಹಾಕಿ.
  • ಬಾಕಿ ಉಳಿದಿರುವ YouTube ಪಾಲುದಾರ ಕಾರ್ಯಕ್ರಮದ ಅರ್ಜಿಯನ್ನು ಹೊಂದಿರಬಾರದು. ಚಾನಲ್‌ಗಳನ್ನು MCN ಗೆ ಲಿಂಕ್ ಮಾಡುವ ಮೊದಲು ಅವುಗಳನ್ನು YouTube ಪಾಲುದಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮ್ಮತಿಸಿರಬೇಕು. YouTube ಪಾಲುದಾರ ಕಾರ್ಯಕ್ರಮವನ್ನು ಇನ್ನೂ ಲಾಂಚ್ ಮಾಡಿರದ ದೇಶಗಳು/ಪ್ರದೇಶಗಳಲ್ಲಿನ ಚಾನಲ್‌ಗಳನ್ನು ಲಿಂಕ್ ಮಾಡಬಹುದು.
ಅಫಿಲಿಯೇಟ್ MCN ಗಳು ಪ್ರತಿ 30 ದಿನಗಳಿಗೆ ಸುಮಾರು 10 ಚಾನಲ್‌ಗಳನ್ನು ಡೀಫಾಲ್ಟ್ ಆಗಿ ಆಹ್ವಾನಿಸಬಹುದು. ನೀವು ಹೆಚ್ಚು ಸಾಮಾನ್ಯವಾಗಿ ಚಾನಲ್‌ಗಳನ್ನು ಆಹ್ವಾನಿಸಬೇಕಾದರೆ, ನಿಮ್ಮ YouTube ಪಾಲುದಾರ ವ್ಯವಸ್ಥಾಪಕರನ್ನು ಸಂಪರ್ಕಿಸಿ.

ಪ್ರಕಾಶಕರಿಗಾಗಿ ಪ್ಲೇಯರ್ (PfP) ಮತ್ತು YouTube ಪ್ಲೇಯರ್ ಪ್ರೋಗ್ರಾಂ (YTPP) ಗಾಗಿ ಇರಬೇಕಾದ ಅರ್ಹತೆಗಳು

PfP/YTPP ಪಾಲುದಾರರು ಅಸ್ತಿತ್ವದಲ್ಲಿರುವ YouTube ಚಾನಲ್‌ಗೆ ಲಿಂಕ್ ಮಾಡಲು ಅಥವಾ ತಮ್ಮ YouTube ಕಂಟೆಂಟ್ ಮಾಲೀಕರ (CO) ವ್ಯಾಪ್ತಿಯಲ್ಲಿ ಹೊಸ YouTube ಚಾನಲ್ ಅನ್ನು ರಚಿಸಲು ಬಯಸುವುದಾದರೆ, Google ನ ಪೂರ್ವಾನುಮತಿಯನ್ನು ಪಡೆಯಬೇಕಾಗುತ್ತದೆ. ಪಾಲುದಾರರ PfP/YTPP-ಸಕ್ರಿಯಗೊಳಿಸಿದ CO ಗೆ ಚಾನಲ್ ಅನ್ನು ಸೇರಿಸುವುದಕ್ಕೆ ವಿನಂತಿಸಲು, ಪಾಲುದಾರರು ತಮ್ಮ ಪಾಲುದಾರ ವ್ಯವಸ್ಥಾಪಕರ ಜೊತೆಗೆ ಸಂಪರ್ಕದಲ್ಲಿರಬೇಕು.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು PfP/YTPP ಪ್ರೋಗ್ರಾಂ ನೀತಿಗಳು ಪುಟಕ್ಕೆ ಭೇಟಿ ನೀಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9791609925435602123
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false