YouTube ಗಳಿಕೆಗಳಿಗಾಗಿ ಯು.ಎಸ್ ತೆರಿಗೆ ಅವಶ್ಯಕತೆಗಳು

ಯು.ಎಸ್‌ನಲ್ಲಿರುವ ವೀಕ್ಷಕರಿಂದ ನೀವು ಜನರೇಟ್ ಮಾಡುವ ಗಳಿಕೆಗಳ ಮೇಲೆ Google ಯು.ಎಸ್ ತೆರಿಗೆಗಳನ್ನು ವಿತ್‌ಹೋಲ್ಡ್ ಮಾಡುತ್ತದೆ. ನೀವು ಈಗಾಗಲೇ ಸಲ್ಲಿಸಿರದಿದ್ದರೆ, ನಿಮ್ಮ ಯು.ಎಸ್ ತೆರಿಗೆ ಮಾಹಿತಿಯನ್ನು AdSense ನಲ್ಲಿ ಸಲ್ಲಿಸಿ, ಇದರಿಂದ ನಿಮ್ಮ ಸರಿಯಾದ ತಡೆಹಿಡಿಯುವಿಕೆ ದರವನ್ನು ತೀರ್ಮಾನಿಸಲು Google ಗೆ ಸಾಧ್ಯವಾಗುತ್ತದೆ. ತೆರಿಗೆ ಮಾಹಿತಿಯನ್ನು ಒದಗಿಸದಿದ್ದರೆ, Google ಗರಿಷ್ಠ ದರದಲ್ಲಿ ತಡೆಹಿಡಿಯುವ ಅಗತ್ಯವಿರಬಹುದು.

YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ರಚನೆಕಾರರಿಂದ Google ತೆರಿಗೆ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿರುತ್ತದೆ. ಯಾವುದೇ ತೆರಿಗೆ ಕಡಿತಗಳು ಅನ್ವಯಿಸಿದರೆ, ಆ್ಯಡ್ ವೀಕ್ಷಣೆಗಳು, YouTube Premium, ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್ಸ್ ಮತ್ತು ಚಾನಲ್ ಸದಸ್ಯತ್ವಗಳಲ್ಲಿ ಯು.ಎಸ್‌ನಲ್ಲಿನ ವೀಕ್ಷಕರಿಂದ YouTube ಗಳಿಕೆಗಳ ಮೇಲೆ Google, ತೆರಿಗೆಗಳನ್ನು ತಡೆಹಿಡಿಯುತ್ತದೆ.

Google ಏಕೆ ತೆರಿಗೆಗಳನ್ನು ತಡೆಹಿಡಿಯುತ್ತದೆ

ಯು.ಎಸ್ ಆಂತರಿಕ ಆದಾಯದ ಕೋಡ್‌ನ ಅಧ್ಯಾಯ 3 ರ ಪ್ರಕಾರ YouTube ನಲ್ಲಿ YPP ರಚನೆಕಾರರು ಯು.ಎಸ್‌ನಲ್ಲಿನ ವೀಕ್ಷಕರಿಂದ ರಾಯಲ್ಟಿ ಆದಾಯವನ್ನು ಗಳಿಸಿದಾಗ, ತೆರಿಗೆ ಮಾಹಿತಿಯನ್ನು ಸಂಗ್ರಹಿಸಲು, ತೆರಿಗೆಗಳನ್ನು ತಡೆಹಿಡಿಯಲು ಮತ್ತು Internal Revenue Service (IRS ಎಂದೂ ಸಹ ಕರೆಯಲಾಗುವ ಯು.ಎಸ್ ತೆರಿಗೆ ಪ್ರಾಧಿಕಾರ) ಗೆ ವರದಿ ಮಾಡುವ ಜವಾಬ್ದಾರಿಯನ್ನು Google ಹೊಂದಿದೆ.

ಗಮನಿಸಿ: YouTube ಮತ್ತು Google, ತೆರಿಗೆ ಸಮಸ್ಯೆಗಳ ಕುರಿತು ಸಲಹೆ ಒದಗಿಸಲು ಸಾಧ್ಯವಿಲ್ಲ. ನಿಮ್ಮ ತೆರಿಗೆಯ ಸನ್ನಿವೇಶವನ್ನು ಇನ್ನೂ ಉತ್ತಮವಾಗಿ ಅರ್ಥಮಾಡಿಕೊಳ್ಳಲು ತೆರಿಗೆಯ ವೃತ್ತಿಪರರ ಜೊತೆ ಸಮಾಲೋಚಿಸಿ.

Google ಗೆ ತೆರಿಗೆ ಮಾಹಿತಿಯನ್ನು ಸಲ್ಲಿಸುವುದು 

YouTube ನಲ್ಲಿ ಮಾನಿಟೈಸ್ ಮಾಡುವ ಎಲ್ಲಾ ರಚನೆಕಾರರು, ಪ್ರಪಂಚದಲ್ಲಿ ತಮ್ಮ ಸ್ಥಳವನ್ನು ಲೆಕ್ಕಿಸದೆಯೇ, ತೆರಿಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ನಿಮ್ಮ ತೆರಿಗೆ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗನೆ ಸಲ್ಲಿಸಿ. ತೆರಿಗೆ ಮಾಹಿತಿಯನ್ನು ಒದಗಿಸದಿದ್ದರೆ, ಪ್ರಪಂಚದಾದ್ಯಂತ ನಿಮ್ಮ ಒಟ್ಟು ಗಳಿಕೆಗಳಲ್ಲಿ 24% ರಷ್ಟನ್ನು Google ಕಡಿತಗೊಳಿಸಬೇಕಾಗಬಹುದು.

Google ಗೆ ನಿಮ್ಮ ಯು.ಎಸ್ ತೆರಿಗೆ ಮಾಹಿತಿಯನ್ನು ಸಲ್ಲಿಸಲು ನೀವು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ. ಗಮನಿಸಿ, ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆ ಮಾಹಿತಿಯನ್ನು ಮತ್ತೊಮ್ಮೆ ಸಲ್ಲಿಸಲು ನಿಮ್ಮನ್ನು ಕೇಳಿಕೊಳ್ಳಬಹುದು ಮತ್ತು ತೆರಿಗೆ ಫಾರ್ಮ್‌ಗಳನ್ನು ಸಲ್ಲಿಸುವಾಗ ಕೇವಲ ಲ್ಯಾಟಿನ್ ಕ್ಯಾರೆಕ್ಟರ್‌ಗಳನ್ನು ಬಳಸಬಹುದು (IRS ಅವಶ್ಯಕತೆಗಳ ಪ್ರಕಾರ); ಇಲ್ಲಿ ಇನ್ನಷ್ಟು ತಿಳಿಯಿರಿ

  1. ನಿಮ್ಮ AdSense ಖಾತೆಗೆ ಸೈನ್ ಇನ್ ಮಾಡಿ.
  2. ಪೇಮೆಂಟ್‌ಗಳು ನಂತರ ಪೇಮೆಂಟ್‌ಗಳ ಮಾಹಿತಿ ಅನ್ನು ಕ್ಲಿಕ್ ಮಾಡಿ.
  3. ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. "ಪೇಮೆಂಟ್‌ಗಳ ಪ್ರೊಫೈಲ್‌"ಗೆ ಸ್ಕ್ರಾಲ್ ಮಾಡಿ ಮತ್ತು "ಯುನೈಟೆಡ್ ಸ್ಟೇಟ್ಸ್ ತೆರಿಗೆ ಮಾಹಿತಿ" ಮುಂದಿರುವ ಎಡಿಟ್ Edit ಎಂಬುದನ್ನು ಕ್ಲಿಕ್ ಮಾಡಿ.
  5. ತೆರಿಗೆ ಮಾಹಿತಿಯನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  6. ನಿಮ್ಮ ತೆರಿಗೆ ಪರಿಸ್ಥಿತಿಗೆ ಸೂಕ್ತವಾದ ಫಾರ್ಮ್ ಅನ್ನು ಆಯ್ಕೆಮಾಡಲು ನಿಮಗೆ ಸಹಾಯ ಮಾಡುವ ಗೈಡ್ ಅನ್ನು ನೀವು ಈ ಪುಟದಲ್ಲಿ ಕಾಣುತ್ತೀರಿ.
    ಸಲಹೆ: ನಿಮ್ಮ ತೆರಿಗೆ ಮಾಹಿತಿಯನ್ನು ನೀವು ಸಲ್ಲಿಸಿದ ನಂತರ, ನಿಮ್ಮ ಪಾವತಿಗಳಿಗೆ ಅನ್ವಯವಾಗುವ ತೆರಿಗೆ ತಡೆಹಿಡಿಯುವಿಕೆ ದರಗಳನ್ನು ಕಂಡುಕೊಳ್ಳುವುದಕ್ಕೆ ನಿಮ್ಮ ಪಾವತಿಗಳ ಪ್ರೊಫೈಲ್‌ನ “ಯುನೈಟೆಡ್ ಸ್ಟೇಟ್ಸ್ ತೆರಿಗೆ ಮಾಹಿತಿ” ವಿಭಾಗವನ್ನು ಪರಿಶೀಲಿಸಲು ಮೇಲಿನ ಸೂಚನೆಗಳನ್ನು ಅನುಸರಿಸಿ.

    ನಿಮ್ಮ ವೈಯಕ್ತಿಕ ಅಥವಾ ವ್ಯಾಪಾರದ ಸಂದರ್ಭಗಳು ಬದಲಾದರೆ ಯಾವುದೇ ಎಡಿಟ್‌ಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ವಿಳಾಸವನ್ನು ನೀವು ಬದಲಾಯಿಸಿದ್ದರೆ, ಅಪ್‌ಡೇಟ್ ಮಾಡಿರುವ ನಿಮ್ಮ ಶಾಶ್ವತ ವಿಳಾಸ ಈ ಮುಂದಿನ ಎರಡೂ ವಿಭಾಗಗಳಲ್ಲಿ ಒಂದೇ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಿ: "ಶಾಶ್ವತ ನಿವಾಸ ವಿಳಾಸ" ಮತ್ತು "ಕಾನೂನು ವಿಳಾಸ". ನಿಮ್ಮ ವರ್ಷಾಂತ್ಯದ ತೆರಿಗೆ ಫಾರ್ಮ್‌ಗಳನ್ನು (ಉದಾಹರಣೆಗೆ, 1099-MISC, 1099-K, 1042-S) ಸರಿಯಾದ ಸ್ಥಳಕ್ಕೆ ತಲುಪಿಸಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ. ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿದ್ದರೆ, ಅಪ್‌ಡೇಟ್ ಮಾಡಿರುವ ನಿಮ್ಮ ಕಾನೂನು ವಿಳಾಸದ ಜೊತೆಗೆ ನಿಮ್ಮ W-9 ಫಾರ್ಮ್ ಅನ್ನು ನೀವು ಮರುಸಲ್ಲಿಸಬೇಕು

YouTube ಗಾಗಿ AdSense ನಲ್ಲಿ ನಿಮ್ಮ ತೆರಿಗೆ ಮಾಹಿತಿಯನ್ನು ಸಲ್ಲಿಸಲು ಸಿದ್ಧತೆ ನಡೆಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಿಮ್ಮ ಯು.ಎಸ್ ತೆರಿಗೆ ಮಾಹಿತಿಯನ್ನು Google ಗೆ ಸಲ್ಲಿಸುವುದು ಎಂಬಲ್ಲಿಗೆ ಹೋಗಿ. MCN-ನಿರ್ದಿಷ್ಟ ಮಾರ್ಗದರ್ಶನಕ್ಕಾಗಿ, MCN ಗಳು ಹಾಗೂ ಅಫಿಲಿಯೇಟ್ ಚಾನಲ್‌ಗಳಿಗಾಗಿ ತೆರಿಗೆಯ ಅವಶ್ಯಕತೆಗಳು ಎಂಬಲ್ಲಿಗೆ ಹೋಗಿ.

ಯು.ಎಸ್ ತೆರಿಗೆ ಅವಶ್ಯಕತೆಗಳು ಎಲ್ಲಿ ಅನ್ವಯಿಸುತ್ತವೆ

ಪ್ರತಿಯೊಬ್ಬ YPP ರಚನೆಕಾರರು, ಪ್ರಪಂಚದಲ್ಲಿ ಎಲ್ಲಿದ್ದರೂ, Google ಗೆ ಯು.ಎಸ್ ತೆರಿಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಯು.ಎಸ್ ತೆರಿಗೆ ಕಾನೂನಿನ ಅಡಿಯಲ್ಲಿ, ಅನ್ವಯಿಸುವುದಾದರೆ, ಯು.ಎಸ್ ವೀಕ್ಷಕರಿಂದ ಪಡೆದ YouTube ಗಳಿಕೆಗಳಿಂದ Google, ತೆರಿಗೆಗಳನ್ನು ಕಡಿತಗೊಳಿಸಬೇಕಾಗುತ್ತದೆ. ತೆರಿಗೆ ತಡೆಹಿಡಿಯುವಿಕೆಯ ಅವಶ್ಯಕತೆಗಳು ನೀವು ವಾಸಿಸುವ ದೇಶ, ನೀವು ತೆರಿಗೆ ಒಪ್ಪಂದದ ಲಾಭಗಳನ್ನು ಕ್ಲೈಮ್ ಮಾಡಲು ಅರ್ಹರಾಗಿದ್ದೀರಾ ಮತ್ತು ನೀವು ವ್ಯಕ್ತಿ ಅಥವಾ ವ್ಯಾಪಾರ ಎಂಬುದಾಗಿ ಗುರುತಿಸಿಕೊಳ್ಳುತ್ತೀರಾ ಎಂಬುದನ್ನು ಆಧರಿಸಿ ಬದಲಾಗಬಹುದು.

  • ಯು.ಎಸ್‌ನ ಹೊರಗೆ ಇರುವ ರಚನೆಕಾರರು:  ನೀವು ಯು.ಎಸ್ ತೆರಿಗೆ ಮಾಹಿತಿಯನ್ನು ಸಲ್ಲಿಸಿದರೆ, ತಡೆಹಿಡಿಯುವಿಕೆ ದರ, ನೀವು ಯು.ಎಸ್‌ನಲ್ಲಿನ ವೀಕ್ಷಕರಿಂದ ಗಳಿಸುವ ಆದಾಯದ 0-30% ಆಗಿರುತ್ತದೆ ಮತ್ತು ನಿಮ್ಮ ದೇಶವು ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ತೆರಿಗೆ ಒಪ್ಪಂದದ ಸಂಬಂಧವನ್ನು ಹೊಂದಿದೆಯೇ ಎಂಬುದನ್ನು ಆಧರಿಸಿರುತ್ತದೆ. 
  • ಯು.ಎಸ್ ರಚನೆಕಾರರು: ನೀವು ಮಾನ್ಯವಾದ ತೆರಿಗೆ ಮಾಹಿತಿಯನ್ನು ಒದಗಿಸಿದ್ದರೆ, Google ಆದಾಯದ ಮೇಲೆ ತೆರಿಗೆಗಳನ್ನು ತಡೆಹಿಡಿಯುವುದಿಲ್ಲ. ಹೆಚ್ಚಿನ ಯು.ಎಸ್ ರಚನೆಕಾರರು ಈಗಾಗಲೇ ತಮ್ಮ ಯು.ಎಸ್ ತೆರಿಗೆ ಮಾಹಿತಿಯನ್ನು ಸಲ್ಲಿಸಿದ್ದಾರೆ.

ಪ್ರಮುಖ ಸೂಚನೆ: ಯು.ಎಸ್ ತೆರಿಗೆ ಮಾಹಿತಿಯನ್ನು ಒದಗಿಸದಿದ್ದರೆ, ಗರಿಷ್ಠ ತೆರಿಗೆ ದರವನ್ನು ಬಳಸಿಕೊಂಡು Google ತಡೆಹಿಡಿಯಬೇಕಾಗುತ್ತದೆ. ನಿಮ್ಮ ತೆರಿಗೆ ದರವು YouTube ಗಾಗಿ AdSense ಖಾತೆಯ ಪ್ರಕಾರ ಮತ್ತು ದೇಶವನ್ನು ಅವಲಂಬಿಸಿರುತ್ತದೆ:

  • ವ್ಯಾಪಾರ ಖಾತೆಯ ಪ್ರಕಾರ: ಹಣ ಪಡೆಯುವವರು ಯು.ಎಸ್‌ನ ಹೊರಗೆ ಇದ್ದರೆ, ಡೀಫಾಲ್ಟ್ ತಡೆಹಿಡಿಯುವಿಕೆ ದರ, ಯು.ಎಸ್ ಗಳಿಕೆಗಳ 30% ಆಗಿರುತ್ತದೆ. ಯು.ಎಸ್‌ನಲ್ಲಿರುವ ವ್ಯಾಪಾರಗಳು, ಪ್ರಪಂಚದಾದ್ಯಂತದ ಒಟ್ಟು ಗಳಿಕೆಗಳ ಮೇಲೆ 24% ತಡೆಹಿಡಿಯುವಿಕೆಗೆ ಒಳಪಟ್ಟಿರುತ್ತವೆ.
  • ಪ್ರತ್ಯೇಕ ಖಾತೆಯ ಪ್ರಕಾರ: ಬ್ಯಾಕಪ್ ತೆರಿಗೆ ತಡೆಹಿಡಿಯುವಿಕೆ ಅನ್ವಯಿಸುತ್ತದೆ ಮತ್ತು ಪ್ರಪಂಚದಾದ್ಯಂತ ಒಟ್ಟು ಗಳಿಕೆಗಳ 24% ಅನ್ನು ತಡೆಹಿಡಿಯಲಾಗುತ್ತದೆ.

YouTube ಗಾಗಿ AdSense ನಲ್ಲಿ ಮಾನ್ಯವಾದ ಯು.ಎಸ್ ತೆರಿಗೆ ಮಾಹಿತಿಯನ್ನು ಒದಗಿಸಿದ ಬಳಿಕ ಈ ತಡೆಹಿಡಿಯುವಿಕೆ ದರಗಳನ್ನು ಮುಂದಿನ ಪಾವತಿ ಸುತ್ತಿನಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ನಿಮ್ಮ AdSense ಅಥವಾ YouTube ಗಾಗಿ AdSense ಖಾತೆಯು ಯಾವ ಪ್ರಕಾರದ್ದಾಗಿದೆ ಎಂಬುದನ್ನು ನಿರ್ಧರಿಸಲು, ನೀವು ಈ ಸೂಚನೆಗಳನ್ನು ಅನುಸರಿಸಬಹುದು.

ಪ್ರಮುಖ ಸೂಚನೆ: ನಿಮ್ಮ ಪಾಸ್‌ವರ್ಡ್ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಕೇಳುವ ಅನಪೇಕ್ಷಿತ ಸಂದೇಶಗಳನ್ನು Google ಎಂದೂ ಕಳುಹಿಸುವುದಿಲ್ಲ. ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು, ಇಮೇಲ್ ಅನ್ನು @youtube.com ಅಥವಾ @google.com ಇಮೇಲ್ ವಿಳಾಸದಿಂದ ಕಳುಹಿಸಲಾಗಿದೆಯೇ ಎಂಬುದನ್ನು ಯಾವಾಗಲೂ ಪರಿಶೀಲಿಸಿ.

FAQ

ತೆರಿಗೆ ತಡೆಹಿಡಿಯುವಿಕೆ ಎಂದರೇನು?

ಸರಳವಾಗಿ ಹೇಳುವುದಾದರೆ, ತೆರಿಗೆ ತಡೆಹಿಡಿಯುವಿಕೆಯೆಂದರೆ, ಹಣ ಪಡೆಯುವವರ ತೆರಿಗೆ ಬಾಧ್ಯಸ್ಥಿಕೆಯನ್ನು ಪೂರೈಸುವುದಕ್ಕಾಗಿ ಸರಕಾರಕ್ಕೆ ಪಾವತಿಸಲು ನಿಮ್ಮ ಪಾವತಿಗಳಿಂದ ತೆರಿಗೆಗಳನ್ನು ಕಡಿತಗೊಳಿಸುವುದು.

ಯು.ಎಸ್ ತೆರಿಗೆ ಕಾನೂನಿನ ಅಡಿಯಲ್ಲಿ, Google ಒಂದು ತಡೆಹಿಡಿಯುವ ಏಜೆಂಟ್ ಆಗಿದೆ ಮತ್ತು ಯು.ಎಸ್ ತೆರಿಗೆ ಕಾನೂನನ್ನು ಅನುಸರಿಸುವ ಅಗತ್ಯವಿರುತ್ತದೆ ಮತ್ತು ಅಗತ್ಯವಿದ್ದಲ್ಲಿ, ಸೂಕ್ತ YouTube ಗಳಿಕೆಗಳ ಮೇಲೆ ತೆರಿಗೆಗಳನ್ನು ತಡೆಹಿಡಿಯಬೇಕಾಗುತ್ತದೆ.

YouTube ನಲ್ಲಿ ನನ್ನ ಆದಾಯದ ಮೇಲೆ ಇದು ಹೇಗೆ ಪ್ರಭಾವ ಬೀರುತ್ತದೆ?

ನೀವು ಮಾನ್ಯವಾದ ತೆರಿಗೆ ಮಾಹಿತಿಯನ್ನು ಒದಗಿಸಿದರೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿನ ನಿಮ್ಮ ವೀಕ್ಷಕರಿಂದ ಗಳಿಸಿದ ಆದಾಯದ ಭಾಗ ಮಾತ್ರ ತೆರಿಗೆ ತಡೆಹಿಡಿಯುವಿಕೆ ಮತ್ತು ವರದಿ ಮಾಡುವಿಕೆಗೆ ಒಳಪಟ್ಟಿರುತ್ತದೆ.

ನೀವು Google ಗೆ ಒದಗಿಸುವ ತೆರಿಗೆ ಮಾಹಿತಿಯನ್ನು ಬಳಸಿಕೊಂಡು ತೆರಿಗೆ ತಡೆಹಿಡಿಯುವಿಕೆಯ ನಿಖರವಾದ ದರವನ್ನು ತೀರ್ಮಾನಿಸಲಾಗುತ್ತದೆ. ನಿಮ್ಮ ಫಾರ್ಮ್ ಅನ್ನು ನೀವು ಸಲ್ಲಿಸಿದ ಬಳಿಕ, ನಿಮ್ಮ YouTube ಗಾಗಿ AdSense ಪಾವತಿ ಸೆಟ್ಟಿಂಗ್‌ಗಳಲ್ಲಿ ತೆರಿಗೆ ಮಾಹಿತಿಯನ್ನು ನಿರ್ವಹಿಸಿ ವಿಭಾಗದಲ್ಲಿ ನಿಮ್ಮ ತೆರಿಗೆ ತಡೆಹಿಡಿಯುವಿಕೆ ದರವನ್ನು ನೀವು ವೀಕ್ಷಿಸಬಹುದು. YouTube Analytics ನಲ್ಲಿ ತೆರಿಗೆ ತಡೆಹಿಡಿಯುವಿಕೆ ಮೊತ್ತಗಳು ಗೋಚರಿಸುವುದಿಲ್ಲ.

ಕಾಲ್ಪನಿಕ ಉದಾಹರಣೆ

ಇಲ್ಲೊಂದು ಕಾಲ್ಪನಿಕ ಉದಾಹರಣೆಯಿದೆ: YouTube ಪಾಲುದಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ, ಭಾರತದಲ್ಲಿ ಇರುವ YouTube ರಚನೆಕಾರರು YouTube ನಿಂದ ಕಳೆದ ತಿಂಗಳಿನಲ್ಲಿ $1,000 USD ಗಳಿಸುತ್ತಾರೆ. $1,000 USD ಯಲ್ಲಿ ಅವರ ಚಾನಲ್, ಯು.ಎಸ್ ವೀಕ್ಷಕರಿಂದ $100 USD ಗಳಿಸಿತು.

ಕೆಲವು ಸಂಭಾವ್ಯ ತಡೆಹಿಡಿಯುವಿಕೆ ಸನ್ನಿವೇಶಗಳು ಹೀಗಿವೆ:

  • ರಚನೆಕಾರರು ತೆರಿಗೆ ಮಾಹಿತಿಯನ್ನು ಸಲ್ಲಿಸಲಿಲ್ಲ: ಅಂತಿಮ ತೆರಿಗೆ ತಡೆಹಿಡಿಯುವಿಕೆಯು $240 USD ಆಗಿರುತ್ತದೆ ಏಕೆಂದರೆ ಅವರು ತೆರಿಗೆ ಮಾಹಿತಿಯನ್ನು ಸಲ್ಲಿಸದಿದ್ದರೆ, ತೆರಿಗೆ ತಡೆಹಿಡಿಯುವಿಕೆ ದರವು ಪ್ರಪಂಚದಾದ್ಯಂತ ಗಳಿಸಿದ ಆದಾಯದ 24% ಆಗಿರುತ್ತದೆ. ಇದರ ಅರ್ಥ, ರಚನೆಕಾರರು ಸಂಪೂರ್ಣ ತೆರಿಗೆ ಮಾಹಿತಿಯನ್ನು ಸಲ್ಲಿಸುವವರೆಗೆ, ಪ್ರಪಂಚದಾದ್ಯಂತ ಅವರ ಒಟ್ಟು ಆದಾಯದಿಂದ ನಾವು 24% ಅನ್ನು ಕಡಿತಗೊಳಿಸಬೇಕಾಗುತ್ತದೆಯೇ ಹೊರತು ಕೇವಲ ಅವರ ಯು.ಎಸ್ ಗಳಿಕೆಗಳಿಂದ ಅಲ್ಲ.
  • ರಚನೆಕಾರರು ತೆರಿಗೆ ಮಾಹಿತಿಯನ್ನು ಸಲ್ಲಿಸುತ್ತಾರೆ ಮತ್ತು ಒಪ್ಪಂದದ ಲಾಭವನ್ನು ಕ್ಲೈಮ್ ಮಾಡುತ್ತಾರೆ: ಅಂತಿಮ ತೆರಿಗೆ ಕಡಿತ $15 USD ಆಗಿರುತ್ತದೆ. ಏಕೆಂದರೆ, ಭಾರತ ಮತ್ತು ಯು.ಎಸ್, ತೆರಿಗೆ ಒಪ್ಪಂದ ಸಂಬಂಧವನ್ನು ಹೊಂದಿವೆ ಮತ್ತು ಇದರಿಂದಾಗಿ ತೆರಿಗೆ ದರವು ಯು.ಎಸ್‌ನಲ್ಲಿನ ವೀಕ್ಷಕರಿಂದ ಗಳಿಸಿದ ಆದಾಯದ 15% ಗೆ ಇಳಿಕೆಯಾಗುತ್ತದೆ.
  • ರಚನೆಕಾರರು ತೆರಿಗೆ ಮಾಹಿತಿಯನ್ನು ಸಲ್ಲಿಸುತ್ತಾರೆ, ಆದರೆ ತೆರಿಗೆ ಒಪ್ಪಂದದ ಲಾಭಕ್ಕೆ ಅರ್ಹರಾಗಿಲ್ಲ: ಅಂತಿಮ ತೆರಿಗೆ ಕಡಿತವು $30 USD ಆಗಿರುತ್ತದೆ. ಏಕೆಂದರೆ, ತೆರಿಗೆ ಒಪ್ಪಂದವಿಲ್ಲದಿದ್ದರೆ, ತೆರಿಗೆಯ ದರವು, ಯು.ಎಸ್‌ನಲ್ಲಿನ ವೀಕ್ಷಕರಿಂದ ಗಳಿಸಿದ ಆದಾಯದ 30% ಆಗಿರುತ್ತದೆ.

ನಿಮ್ಮ ಅಂದಾಜು ತೆರಿಗೆ ತಡೆಹಿಡಿಯುವಿಕೆಯನ್ನು ಕ್ಯಾಲ್ಕ್ಯುಲೇಟ್ ಮಾಡಿ

ಈ ಕೆಳಗಿನ ಉದಾಹರಣೆ ಲೆಕ್ಕಾಚಾರವನ್ನು ಬಳಸಿಕೊಂಡು, ನಿಮ್ಮ YouTube ಆದಾಯವು ಯಾವ ರೀತಿ ಪ್ರಭಾವಿತವಾಗಬಹುದು ಎಂಬುದನ್ನು ನೋಡಿ:

  1. YouTube Analytics ನಲ್ಲಿ ಆದಾಯ ವರದಿಯನ್ನು ಆ್ಯಕ್ಸೆಸ್ ಮಾಡಿ ಮತ್ತು ದಿನಾಂಕದ ಫಿಲ್ಟರ್ ಅನ್ನು ಸೂಕ್ತ ಪಾವತಿ ಅವಧಿಗೆ (ಉದಾ., ಅಕ್ಟೋಬರ್ 1 - 31) ಸೆಟ್ ಮಾಡಿ. ನಿಮ್ಮ YouTube Analytics ಅನ್ನು ನಿಮಗೆ ಪಾವತಿಸಲಾಗುವ ಕರೆನ್ಸಿಗೆ (ಉದಾ., USD) ಸೆಟ್ ಮಾಡುವುದರಿಂದ ಸಹಾಯವಾಗಬಹುದು.
  2. ಯುನೈಟೆಡ್ ಸ್ಟೇಟ್ಸ್‌ನಿಂದ ಅಂದಾಜು ಆದಾಯವನ್ನು ನೋಡಲು ಭೌಗೋಳಿಕ ಫಿಲ್ಟರ್ ಅನ್ನು ಅನ್ವಯಿಸಿ. YouTube Analytics ನಲ್ಲಿ ನಿಮ್ಮ ಪ್ರೇಕ್ಷಕರ ಕುರಿತು ಇನ್ನಷ್ಟು ತಿಳಿಯಿರಿ.
  3. ನಿಮ್ಮ ತೆರಿಗೆ ತಡೆಹಿಡಿಯುವಿಕೆ ದರವನ್ನು ತಿಳಿದುಕೊಳ್ಳಲು ನಿಮ್ಮ YouTube ಗಾಗಿ AdSense ಖಾತೆಗೆ ಹೋಗಿ. ನಿಮ್ಮ ಯು.ಎಸ್ ತೆರಿಗೆ ಮಾಹಿತಿಯನ್ನು ಸಲ್ಲಿಸಿದ ಬಳಿಕ ನಿಮ್ಮ ತಡೆಹಿಡಿಯುವಿಕೆ ದರ ಗೋಚರಿಸುತ್ತದೆ.
  4. ಮೇಲೆ ಹಂತ 2 ಮತ್ತು 3 ರ ಫಲಿತಾಂಶಗಳನ್ನು ಗುಣಿಸಿ.

ಗಮನಿಸಿ, ಈ ಮೇಲಿನ ಹಂತಗಳನ್ನು ಅನುಸರಿಸಿದರೆ, ತೆರಿಗೆ ತಡೆಹಿಡಿಯುವಿಕೆಯ ಅಂದಾಜು ಮಾತ್ರ ಸಿಗುತ್ತದೆ. Google, ತೆರಿಗೆಗಳನ್ನು ತಡೆಹಿಡಿಯಲು ಪ್ರಾರಂಭಿಸಿದ ನಂತರ, YouTube ಗಾಗಿ AdSense ಪಾವತಿ ವಹಿವಾಟುಗಳ ಕುರಿತಾದ ನಿಮ್ಮ ನಿಯಮಿತ ವರದಿಯಲ್ಲಿ, ತಡೆಹಿಡಿಯಲಾದ ಅಂತಿಮ ಮೊತ್ತವನ್ನು (ಯಾವುದಾದರೂ ಅನ್ವಯವಾಗುವುದಾದರೆ) ನೀವು ನೋಡುತ್ತೀರಿ.

ನನ್ನ ಚಾನಲ್‌ನಲ್ಲಿ ಯು.ಎಸ್‌ನಲ್ಲಿನ ವೀಕ್ಷಕರಿಂದ ನಾನು ಆದಾಯ ಗಳಿಸದಿದ್ದರೆ ಏನಾಗುತ್ತದೆ?

ತಾವು ಯು.ಎಸ್‌ನಲ್ಲಿನ ವೀಕ್ಷಕರಿಂದ ಆದಾಯ ಗಳಿಸುತ್ತೇವೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಎಲ್ಲಾ YPP ರಚನೆಕಾರರು Google ಗೆ ತೆರಿಗೆ ಮಾಹಿತಿಯನ್ನು ಸಲ್ಲಿಸಬೇಕು. ನೀವು ಭವಿಷ್ಯದಲ್ಲಿ, ಯು.ಎಸ್‌ನಲ್ಲಿ ಇರುವ ವೀಕ್ಷಕರಿಂದ ಆದಾಯ ಗಳಿಸಿದರೆ, ನಿಮ್ಮ ಯು.ಎಸ್ ತೆರಿಗೆ ಮಾಹಿತಿಯನ್ನು ಸಲ್ಲಿಸುವುದರಿಂದ ನಿಮಗಾಗಿ ಸರಿಯಾದ ತಡೆಹಿಡಿಯುವಿಕೆ ದರವನ್ನು ತೀರ್ಮಾನಿಸಲು ಸಹಾಯವಾಗುತ್ತದೆ.

ನಾನು ಯು.ಎಸ್ ಮೂಲದ ರಚನೆಕಾರನೇ ಅಲ್ಲವೇ ಎಂಬುದನ್ನು ತೀರ್ಮಾನಿಸಲು ನೀವು ಯಾವ ಮಾನದಂಡವನ್ನು ಬಳಸುತ್ತಿದ್ದೀರಿ?

ನಿಮ್ಮ ತೆರಿಗೆ ಮಾಹಿತಿಯಲ್ಲಿ ನೀವು ಸಲ್ಲಿಸುವ ವಾಸದ ದೇಶವನ್ನು ಆಧರಿಸಿ ನಿಮ್ಮ ಸ್ಥಳವನ್ನು ತೀರ್ಮಾನಿಸಲಾಗುತ್ತದೆ.

ಹಾಗಾದರೆ ನಾನು ವಾಸಿಸುವ ದೇಶದಲ್ಲಿ ಮತ್ತು ಯು.ಎಸ್‌ನಲ್ಲಿಯೂ ನನಗೆ ತೆರಿಗೆ ವಿಧಿಸಲಾಗುತ್ತದೆ ಎಂದು ಅರ್ಥವೇ?

ಯು.ಎಸ್‌ನಲ್ಲಿನ ವೀಕ್ಷಕರಿಂದ ನಿಮ್ಮ YouTube ಗಳಿಕೆಗಳ ಮೇಲೆ ಮಾತ್ರ ಯು.ಎಸ್ ತೆರಿಗೆಗಳನ್ನು ತಡೆಹಿಡಿಯುವುದು Google ಗೆ ಅಗತ್ಯವಾಗಿದೆ. ನಿಮ್ಮ ಸ್ಥಳೀಯ ಆದಾಯ ತೆರಿಗೆ ಕಾನೂನುಗಳು ಈಗಲೂ ನಿಮ್ಮ YouTube ಆದಾಯಗಳಿಗೆ ಅನ್ವಯಿಸುತ್ತವೆ.

ದುಪ್ಪಟ್ಟು ತೆರಿಗೆ ವಿಧಿಸುವುದನ್ನು ಕಡಿಮೆ ಮಾಡಲು ಅನೇಕ ದೇಶಗಳು ತೆರಿಗೆ ಒಪ್ಪಂದಗಳನ್ನು ಹೊಂದಿವೆ. ಅದಲ್ಲದೆ, ಅಂತಾರಾಷ್ಟ್ರೀಯ ತೆರಿಗೆ ಹೊರೆಗಳನ್ನು ಕಡಿಮೆ ಮಾಡುವುದಕ್ಕಾಗಿ ಕೆಲವು ದೇಶಗಳು ವಿದೇಶ ಟ್ಯಾಕ್ಸ್ ಕ್ರೆಡಿಟ್‌ಗಳಿಗೆ ಅನುಮತಿ ನೀಡಬಹುದು. ನಿಮ್ಮ YouTube ಗಾಗಿ AdSense ಖಾತೆಯಲ್ಲಿ ತೆರಿಗೆ ಟೂಲ್‌ನಲ್ಲಿ ತೆರಿಗೆ ಒಪ್ಪಂದವನ್ನು ಕ್ಲೇಮ್‌ ಮಾಡುವ ಮೂಲಕ, ನಿಮ್ಮ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ನಿಮಗೆ ಸಾಧ್ಯವಾಗಬಹುದು. ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಿ. ಇಲ್ಲಿ ಇನ್ನಷ್ಟು ತಿಳಿಯಿರಿ

Google ಯಾವ ರೀತಿಯ ತೆರಿಗೆ ವರದಿ ಮಾಡುವಿಕೆ ಡಾಕ್ಯುಮೆಂಟ್‌ಗಳನ್ನು ಒದಗಿಸುತ್ತದೆ?

ನಿಮ್ಮ ಪಾವತಿ ಸುತ್ತಿಗೆ ಅನುಗುಣವಾಗಿ ನಿಮ್ಮ ಪಾವತಿಗಳ ವರದಿಯಲ್ಲಿ ಅಂತಿಮ ತೆರಿಗೆ ತಡೆಹಿಡಿಯುವಿಕೆ ಮೊತ್ತವನ್ನು ನೀವು ನೋಡುವಿರಿ. ಸಾಮಾನ್ಯವಾಗಿ, ತಡೆಹಿಡಿಯಲಾದ ಮೊತ್ತವು, ಪಾವತಿ ಮಾಡಿದ ನಂತರ ಮುಂದಿನ ತಿಂಗಳಿನಲ್ಲಿ ಗೋಚರಿಸುತ್ತದೆ – ಉದಾಹರಣೆಗೆ, ಮೇ ತಿಂಗಳಿನ ಪಾವತಿಗಳ ವರದಿಯಲ್ಲಿ ಏಪ್ರಿಲ್ ತಿಂಗಳಿನ ತಡೆಹಿಡಿಯುವಿಕೆ ಮೊತ್ತಗಳನ್ನು ಪಟ್ಟಿ ಮಾಡಲಾಗುತ್ತದೆ. ನಿಮ್ಮ ಖಾತೆಯ ಮೇಲೆ ಪಾವತಿ ತಡೆಹಿಡಿಯುವಿಕೆಗಳು ಅಥವಾ ಇತರ ಸಮಸ್ಯೆಗಳಿದ್ದರೆ, ನಂತರದ ದಿನಾಂಕದಲ್ಲಿ ಅನೇಕ ಸಂಯೋಜಿತ ತಿಂಗಳುಗಳಿಗಾಗಿ ಅಂತಿಮ ತೆರಿಗೆ ತಡೆಹಿಡಿಯುವಿಕೆ ಮೊತ್ತಗಳನ್ನು ಪಾವತಿಗಳ ವರದಿಯಲ್ಲಿ ಪಟ್ಟಿ ಮಾಡಬಹುದು.

ತೆರಿಗೆ ಮಾಹಿತಿಯನ್ನು ಸಲ್ಲಿಸುವ ಮತ್ತು ಅರ್ಹ ಪಾವತಿಗಳನ್ನು ಸ್ವೀಕರಿಸುವ ಎಲ್ಲಾ ರಚನೆಕಾರರು, ಹಿಂದಿನ ವರ್ಷದ ತೆರಿಗೆ ತಡೆಹಿಡಿಯುವಿಕೆಗಳಿಗಾಗಿ ಪ್ರತಿ ವರ್ಷ ಏಪ್ರಿಲ್ 14 ರಂದು ಅಥವಾ ಅದರೊಳಗೆ ತೆರಿಗೆ ಫಾರ್ಮ್ (ಉದಾ. 1042-S) ಅನ್ನು ಸ್ವೀಕರಿಸುತ್ತಾರೆ (ಯು.ಎಸ್ ರಚನೆಕಾರರಿಗೆ ಒದಗಿಸುವ ಫಾರ್ಮ್ 1099-MISC ಅನ್ನು ಸಾಮಾನ್ಯವಾಗಿ ಮಾರ್ಚ್ ತಿಂಗಳ ಆರಂಭದಲ್ಲಿ ಒದಗಿಸಲಾಗುತ್ತದೆ). ವರ್ಷಾಂತ್ಯದ ಯು.ಎಸ್ ತೆರಿಗೆ ಫಾರ್ಮ್‌ನ ನಕಲು, ಪರಿಷ್ಕರಣೆ ಅಥವಾ ರದ್ದತಿಯನ್ನು ವಿನಂತಿಸಲು ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.

Tax document delivery preferences 

Your document delivery options and document statuses for year-end tax forms you receive are under Settings ನಂತರ  Manage tax info in the tax tool in your AdSense for YouTube account. You can choose online delivery of digital tax documents or select paper mail.

  • If you select online delivery, you'll receive documents online only.
  • If you select paper mail, we'll send documents to the mailing address provided on your tax form and your documents will still be available online.

If your mailing address has changed, update your tax info in your payments profiles. Google will use the info you submitted on the U.S. tax form in your payments profile.

ಹಿಂದಿನ ತಡೆಹಿಡಿಯುವಿಕೆಗಳಿಂದ ನಾನು ತೆರಿಗೆ ಮರುಪಾವತಿ ಪಡೆಯಬಹುದೇ?

ಡಿಸೆಂಬರ್ 10 ರ ಒಳಗೆ, ಅಪ್‌ಡೇಟ್ ಮಾಡಲಾದ ತೆರಿಗೆ ಮಾಹಿತಿಯನ್ನು ಒದಗಿಸಿದರೆ, Google ಕೆಲವು ಸನ್ನಿವೇಶಗಳಲ್ಲಿ ಯು.ಎಸ್ ವಿತ್‌ಹೋಲ್ಡಿಂಗ್ ತೆರಿಗೆಯನ್ನು ಮರುಪಾವತಿಸಬಹುದು. ಉದಾಹರಣೆಗೆ, ಕಡಿಮೆ ತೆರಿಗೆ ದರಕ್ಕಾಗಿ ಕ್ಲೇಮ್ ಮತ್ತು ಇತರ ಅಗತ್ಯ ಡಾಕ್ಯುಮೆಂಟೇಶನ್‌ನೊಂದಿಗೆ ಅಪ್‌ಡೇಟ್ ಮಾಡಲಾದ W-8 ತೆರಿಗೆ ಫಾರ್ಮ್ ಅನ್ನು ಸೂಕ್ತ ಸಮಯದಲ್ಲಿ ಒದಗಿಸಿದರೆ, Google ತಡೆಹಿಡಿಯುವ ಮೊತ್ತಗಳನ್ನು ಮತ್ತೊಮ್ಮೆ ಲೆಕ್ಕಾಚಾರ ಮಾಡುತ್ತದೆ ಮತ್ತು ವ್ಯತ್ಯಾಸವನ್ನು ಮರುಪಾವತಿಸುತ್ತದೆ.

ಬದಲಾಗದ ಸಂದರ್ಭಗಳ ಕುರಿತಾಗಿ ನೀವು ನಮಗೆ ಒಂದು ಅಫಿಡವಿಟ್ ಅನ್ನು ನೀಡಬೇಕಾಗಬಹುದು ಮತ್ತು ನಿಮ್ಮ ಫಾರ್ಮ್‌ನಲ್ಲಿ ಮಾಡಲಾದ ಬದಲಾವಣೆಗಳು, ಅರ್ಹವಾಗಿದ್ದರೆ, ಹಿಂದಿನ ದಿನಾಂಕಕ್ಕೆ ಅನ್ವಯವಾಗುತ್ತವೆ ಎಂಬುದನ್ನು ಘೋಷಿಸಬೇಕಾಗಬಹುದು ಎಂಬುದನ್ನು ಗಮನಿಸಿ. ನಿಮ್ಮ YouTube ಗಾಗಿ AdSense ನಲ್ಲಿ ತೆರಿಗೆಯ ಟೂಲ್‌ನ “ಸ್ಥಿತಿ ಬದಲಾವಣೆ ಅಫಿಡವಿಟ್” ವಿಭಾಗದ ಹಂತ 6 ರಲ್ಲಿ ನೀವು ಇದನ್ನು ಮಾಡಬಹುದು.

ಈ ಮರುಪಾವತಿಗಳು, ನಿಮ್ಮ ಫಾರ್ಮ್ ಅನ್ನು ನೀವು ಅಪ್‌ಡೇಟ್ ಮಾಡಿದ ಬಳಿಕ ಪಾವತಿ ಸುತ್ತಿನಲ್ಲಿ ಗೋಚರಿಸುತ್ತವೆ.

ಈ ಸನ್ನಿವೇಶಗಳು ಸೀಮಿತವಾಗಿವೆ ಮತ್ತು ತೆರಿಗೆಯನ್ನು ತಡೆಹಿಡಿದ ಕ್ಯಾಲೆಂಡರ್ ವರ್ಷದ ಮುಕ್ತಾಯದ ಒಳಗೆ ಮಾನ್ಯ ತೆರಿಗೆ ಮಾಹಿತಿಯನ್ನು ಸ್ವೀಕರಿಸಬೇಕಾಗುತ್ತದೆ. ಕ್ಯಾಲೆಂಡರ್ ವರ್ಷದ ಮುಕ್ತಾಯದ ಒಳಗೆ ನೀವು ನಮಗೆ ಮಾನ್ಯವಾದ ತೆರಿಗೆ ಮಾಹಿತಿಯನ್ನು ಒದಗಿಸದಿದ್ದರೆ, ಮರುಪಾವತಿಗಾಗಿ ನೀವು IRS ಗೆ ನೇರವಾಗಿ ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೀವು ವೃತ್ತಿಪರ ತೆರಿಗೆ ಸಲಹೆಯನ್ನು ಕೋರಬೇಕೆಂದು ಶಿಫಾರಸು ಮಾಡಲಾಗುತ್ತದೆ.

YouTube ಗಾಗಿ AdSense ನಲ್ಲಿ ನಿಮ್ಮ ತೆರಿಗೆ ಮಾಹಿತಿಯನ್ನು ಅಪ್‌ಡೇಟ್ ಮಾಡಿದ ಬಳಿಕ, ಪಾವತಿ ಸುತ್ತಿನ ಕೊನೆಗೆ ನಿಮ್ಮ ಪಾವತಿಗಳ ವರದಿಯಲ್ಲಿ, ಅನ್ವಯಿಸುವ ಯಾವುದೇ ಮರುಪಾವತಿಗಳು ಗೋಚರಿಸುತ್ತವೆ.

ಬಹು-ಚಾನಲ್ ನೆಟ್‌ವರ್ಕ್‌ಗಳಲ್ಲಿ ಅಫಿಲಿಯೇಟ್‌ಗಳು (MCN)

2023 ರಿಂದ MCN ಗಳಲ್ಲಿ ಅಫಿಲಿಯೇಟ್ ಚಾನಲ್‌ಗಳು ಮರುಪಾವತಿಗಳಿಗೆ ಅರ್ಹವಾಗಿರಬಹುದು. ಈ ಹಿಂದಿನ ಪಾವತಿಯು ಕಡಿಮೆ ದರಕ್ಕೆ ಒಳಪಟ್ಟಿತ್ತು ಎಂಬುದನ್ನು ರುಜುವಾತುಪಡಿಸುವ ಮಾನ್ಯವಾದ ಡಾಕ್ಯುಮೆಂಟೇಶನ್ ಅನ್ನು ಅಫಿಲಿಯೇಟ್‌ಗಳು ನಮಗೆ ಒದಗಿಸಬೇಕು. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ತಡೆಹಿಡಿಯಲಾದ ತೆರಿಗೆಗಳು ಮಾತ್ರ ಮರುಪಾವತಿಗಳಿಗೆ ಅರ್ಹವಾಗಿರುತ್ತವೆ. ಈ ಬದಲಾವಣೆಯು 2022 ಅಥವಾ ಹಿಂದಿನ ಯಾವುದೇ ವರ್ಷಗಳಿಗೆ ಅನ್ವಯಿಸುವುದಿಲ್ಲ. ಅರ್ಹವಾದ ನಂತರ, ಯಾರಿಂದ ತೆರಿಗೆಯನ್ನು ತಡೆಹಿಡಿಯಲಾಗಿತ್ತೋ, ಆ ಮೂಲ ಕಂಟೆಂಟ್ ಮಾಲೀಕರಿಗೆ ಮರುಪಾವತಿಯನ್ನು ಒದಗಿಸಲಾಗುವುದು.

YouTube ಅಲ್ಲದೆ, ನನ್ನ AdSense ಗಳಿಕೆಗಳಿಗೆ ಇದು ಅನ್ವಯಿಸುತ್ತದೆಯೇ?

ನೀವು ಮಾನ್ಯವಾದ ತೆರಿಗೆ ಮಾಹಿತಿಯನ್ನು ಒದಗಿಸಿದರೆ, ಚಾಪ್ಟರ್ 3 ರ ಅಡಿಯಲ್ಲಿನ ಯು.ಎಸ್ ವಿತ್‌ಹೋಲ್ಡಿಂಗ್ ತೆರಿಗೆಗಳು ಕೇವಲ ನಿಮ್ಮ YouTube ಗಳಿಕೆಗಳಿಗೆ ಅನ್ವಯಿಸುತ್ತವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5025744087163028601
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false