ನನ್ನ ಚಾನಲ್‌ನಲ್ಲಿ ಮಾನಿಟೈಸೇಶನ್ ಸ್ಥಿತಿಯನ್ನು ವಿರಾಮಗೊಳಿಸಲಾಗಿದೆ

ನಿಮ್ಮ ಚಾನಲ್‌ಗೆ ಒಂದು ಸಕ್ರಿಯವಾದ ಮತ್ತು ಅನುಮೋದಿತ YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡಿಲ್ಲ ಎಂದಾದರೆ, ನಿಮ್ಮ ಚಾನಲ್‌ನ ಮಾನಿಟೈಸೇಶನ್ ಅನ್ನು ವಿರಾಮಗೊಳಿಸಲಾಗುವುದು. YouTube ಪಾಲುದಾರ ಕಾರ್ಯಕ್ರಮಕ್ಕಾಗಿ ಎಲ್ಲಾ ಪಾಲುದಾರರು ಸಕ್ರಿಯ, ಅನುಮೋದಿತ ಮತ್ತು ಲಿಂಕ್ ಆಗಿರುವ YouTube ಗಾಗಿ AdSense ಖಾತೆಯನ್ನು ಹೊಂದಿರುವುದು ಅಗತ್ಯವಾಗಿದೆ. 

ಗಮನಿಸಿ, ನಿಮ್ಮ ಚಾನಲ್‌ಗಾಗಿ ಒಂದು ಸಕ್ರಿಯ, ಅನುಮೋದಿತ ಮತ್ತು ಲಿಂಕ್ ಮಾಡಿದ YouTube ಗಾಗಿ AdSense ಖಾತೆಯನ್ನು ನೀವು ಹೊಂದಿಲ್ಲದಿದ್ದರೆ, ನೀವು YouTube ನಿಂದ ಹಣ ಗಳಿಸಲು ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ವೀಡಿಯೊಗಳಲ್ಲಿ ಆ್ಯಡ್‌ಗಳು ಪ್ರಸಾರವಾಗುವುದಿಲ್ಲ. ಇದು ಜಾಹೀರಾತು ಪ್ರಸಾರ, YouTube Premium ಸಬ್‌ಸ್ಕ್ರಿಪ್ಶನ್‌ಗಳಿಂದ ಗಳಿಸುವ ಆದಾಯ ಮತ್ತು ಚಾನಲ್ ಸದಸ್ಯತ್ವಗಳಂತಹ ಇತರ ಮೂಲಗಳಿಂದ ಗಳಿಸುವ ಆದಾಯವನ್ನು ಒಳಗೊಂಡಿದೆ.

ನಿಮ್ಮ ಮಾನಿಟೈಸೇಶನ್ ಸ್ಥಿತಿಯನ್ನು ವಿರಾಮಗೊಳಿಸಿದ್ದರೂ ಸಹ, ನೀವು ಈಗಲೂ ಮೂಲ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದು ಮತ್ತು YouTube ನಲ್ಲಿ ನಿಮ್ಮ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ನೀವು YouTube ಪಾಲುದಾರ ಕಾರ್ಯಕ್ರಮದ ಭಾಗವಾಗಿದ್ದು, ನಿಮ್ಮ ಮಾನಿಟೈಸೇಶನ್ ಅನ್ನು ವಿರಾಮಗೊಳಿಸಿದ್ದರೆ, ಚಿಂತಿಸಬೇಡಿ – ನೀವು ಈಗಲೂ ಕಾರ್ಯಕ್ರಮದ ಭಾಗವಾಗಿದ್ದೀರಿ. ಒಂದು ಸಕ್ರಿಯ ಮತ್ತು ಅನುಮೋದಿತ YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡಿದ ಬಳಿಕ ಮಾನಿಟೈಸೇಶನ್ ಪುನರಾರಂಭವಾಗುತ್ತದೆ.

ಒಂದು ವೇಳೆ ನೀವು ಈಗಾಗಲೇ ಅಸ್ತಿತ್ವದಲ್ಲಿರುವ YouTube ಗಾಗಿ AdSense ಖಾತೆಯನ್ನು ಹೊಂದಿದ್ದರೆ, ದಾಖಲೆಗಳಲ್ಲಿರುವ ವಿಳಾಸವನ್ನು ದೃಢೀಕರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು, ನಿಮಗೆ ಯಾವುದೇ ಪಾವತಿಗಳನ್ನು ಕಳುಹಿಸುವ ಮೊದಲು, ನಿಮ್ಮ ವಿಳಾಸವನ್ನು ನಾವು ದೃಢೀಕರಿಸಿಕೊಳ್ಳುವ ಅಗತ್ಯವಿದೆ. ಏನು ಅಗತ್ಯವಿದೆ ಎಂಬುದರ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡಿ

ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದೀರಿ ಮತ್ತು ನಿಮ್ಮ ಚಾನಲ್‌ಗೆ ಸಂಬಂಧಿಸಿದ YouTube ಗಾಗಿ AdSense ಖಾತೆಯನ್ನು ಬದಲಾಯಿಸಲು ಬಯಸುತ್ತೀರಿ ಎಂದಾದರೆ, ಈ ಹಂತ್ಗಳನ್ನು ಅನುಸರಿಸಿ: ಲಿಂಕ್ ಮಾಡಲಾದ ನಿಮ್ಮ YouTube ಗಾಗಿ AdSense ಖಾತೆಯನ್ನು ಬದಲಾಯಿಸಿ.

ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿ ಕೆಲವು ಚಾನಲ್‌ಗಳನ್ನು ಹೊಂದಿದ್ದರೆ, ಪ್ರತಿಯೊಂದು ಚಾನಲ್‌ಗೂ YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡಬೇಕಾಗುತ್ತದೆ.

ಮಾನಿಟೈಸೇಶನ್ ಪುನರಾರಂಭಗೊಂಡ ನಂತರ, ನನ್ನ ಚಾನಲ್ ಅನ್ನು ಎಷ್ಟು ಸಮಯದವರೆಗೆ ವಿರಾಮಗೊಳಿಸಲಾಗಿತ್ತೋ ಅಷ್ಟು ಸಮಯಕ್ಕೆ ಸಂಬಂಧಪಟ್ಟಂತೆ ನನಗೆ ಹಣ ಪಾವತಿಸಲಾಗುತ್ತದೆಯೇ?

ಇಲ್ಲ. ಮಾನಿಟೈಸೇಶನ್ ವಿರಾಮಗೊಳಿಸುವುದು ಎಂದರೆ ನಿಮ್ಮ ಚಾನಲ್ ಅನ್ನು ಎಷ್ಟು ಸಮಯದವರೆಗೆ ವಿರಾಮಗೊಳಿಸಲಾಗುತ್ತದೆಯೋ ಅಷ್ಟೂ ಸಮಯ ಅದು ಹಣಗಳಿಸುವುದಿಲ್ಲ ಮತ್ತು ಆ ಅವಧಿಯಲ್ಲಿ, ನಿಮ್ಮ ವೀಡಿಯೊಗಳಲ್ಲಿ ಆ್ಯಡ್‌ಗಳು ಸಹ ಪ್ರಸಾರವಾಗುವುದಿಲ್ಲ.

ಚಾನಲ್ ಅನ್ನು ವಿರಾಮಗೊಳಿಸಿದರೆ, ಅದನ್ನು ಬಹು-ಚಾನಲ್ ನೆಟ್‌ವರ್ಕ್ (MCN) ವಿರುದ್ಧದ “ಸ್ಟ್ರೈಕ್” ಎಂದು ಪರಿಗಣಿಸಲಾಗುತ್ತದೆಯೇ?

ಇಲ್ಲ. ವಿರಾಮಗೊಳಿಸಲಾದ ಮಾನಿಟೈಸೇಶನ್, ನಮ್ಮ ಚಾನಲ್ ಹೊಣೆಗಾರಿಕೆ ನೀತಿಯನ್ನು ಉಲ್ಲಂಘಿಸುವುದಿಲ್ಲ, ಏಕೆಂದರೆ ಇದನ್ನು ಈ ನೀತಿಯ ಅಡಿಯಲ್ಲಿ ಆಕ್ಷೇಪಾರ್ಹ ಈವೆಂಟ್ ಎಂದು ಪರಿಗಣಿಸುವುದಿಲ್ಲ. “ಡಿಮಾನಿಟೈಸೇಶನ್” ಅನ್ನು ಆಕ್ಷೇಪಾರ್ಹ ಈವೆಂಟ್ ಎಂದು ಪರಿಗಣಿಸಲಾಗುವುದು ಮತ್ತು ಇದು ವಿರಾಮಗೊಳಿಸಲಾದ ಮಾನಿಟೈಸೇಶನ್ ಸ್ಥಿತಿಗೆ ಸಂಬಂಧಿಸಿರುವುದಿಲ್ಲ. ನಿಷ್ಕ್ರಿಯಗೊಳಿಸಲಾದ ಮಾನಿಟೈಸೇಶನ್ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಚಾನಲ್‌ನ ಮಾನಿಟೈಸೇಶನ್ ಸ್ಥಿತಿಯನ್ನು ವಿರಾಮಗೊಳಿಸಿದ ಸಂದರ್ಭದಲ್ಲಿ ಕ್ಲೈಮ್‌ಗಳನ್ನು ಮುಚ್ಚಲಾಗುತ್ತದೆಯೇ?

ಇಲ್ಲ. ನಿಮ್ಮ ಚಾನಲ್‌ನ ಮಾನಿಟೈಸೇಶನ್ ಅನ್ನು ವಿರಾಮಗೊಳಿಸಿದರೆ, ಕ್ಲೇಮ್‌ಗಳನ್ನು ಮುಚ್ಚಲಾಗುವುದಿಲ್ಲ.

YouTube ಗಾಗಿ AdSense ಖಾತೆಯನ್ನು ಸೆಟ್ ಮಾಡಲು ಎಷ್ಟು ಸಮಯ ಬೇಕಾಗುತ್ತದೆ?

ಹೊಸ AdSense ಅಥವಾ YouTube ಗಾಗಿ AdSense ಖಾತೆಯನ್ನು ಸೆಟಪ್ ಮಾಡಲು ಹೆಚ್ಚು ಸಮಯ ಬೇಕಾಗುವುದಿಲ್ಲವಾದರೂ ಹೊಸ ಖಾತೆಯನ್ನು ಸಕ್ರಿಯಗೊಳಿಸಲು ಸ್ವಲ್ಪ ಸಮಯ ಬೇಕಾಗಬಹುದು. ಸಾಮಾನ್ಯವಾಗಿ, ಒಂದು ದಿನದೊಳಗೆ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ, ಆದರೆ ಕೆಲವೊಮ್ಮೆ ಹಲವಾರು ದಿನಗಳು ಬೇಕಾಗಬಹುದು. ನೀವು ಹೊಸ YouTube ಗಾಗಿ AdSense ಖಾತೆಯನ್ನು ಲಿಂಕ್ ಮಾಡುತ್ತಿದ್ದು, ಅದಕ್ಕೆ ಸಂಬಂಧಪಟ್ಟಂತೆ ಪಿನ್ ವಿಳಾಸವನ್ನು ದೃಢೀಕರಿಸಬೇಕಾದ ಅಗತ್ಯವಿದ್ದರೆ, ಇದಕ್ಕೆ 2–4 ವಾರಗಳು ಬೇಕಾಗಬಹುದು. ಮಾನಿಟೈಸೇಶನ್ ಅನ್ನು ಪುನರಾರಂಭಿಸುವ ಮೊದಲು, ಲಿಂಕ್ ಮಾಡಲಾದ ನಿಮ್ಮ YouTube ಗಾಗಿ AdSense ಖಾತೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ ಮತ್ತು ಅನುಮೋದಿಸಬೇಕಾಗುತ್ತದೆ.

ನನ್ನ ಚಾನಲ್ ಸದಸ್ಯತ್ವಗಳಿಗೆ ಏನಾಗುತ್ತದೆ?

ಚಾನಲ್‌ನ ಮಾನಿಟೈಸೇಶನ್ ಸ್ಥಿತಿಯನ್ನು ವಿರಾಮಗೊಳಿಸಿದರೆ, ಅಂತಹ ಚಾನಲ್‌ಗಳಿಗೆ ಸಂಬಂಧಿಸಿದ ಸದಸ್ಯತ್ವ ಫೀಚರ್‌ಗಳು ಸಹ ವಿರಾಮಕ್ಕೊಳಪಡುತ್ತವೆ ಮತ್ತು ಆ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಗುತ್ತದೆ. ಈ ಅವಧಿಯಲ್ಲಿ, ತನ್ನ ಮಾನಿಟೈಸೇಶನ್ ಸ್ಥಿತಿಯನ್ನು ಪುನರಾರಂಭಿಸಲು ಚಾನಲ್‌ಗೆ 120 ದಿನಗಳ ಕಾಲಾವಕಾಶವಿರುತ್ತದೆ. ಮಾನಿಟೈಸೇಶನ್ ಸ್ಥಿತಿಯನ್ನು ವಿರಾಮಗೊಳಿಸಿದ 120 ದಿನಗಳ ನಂತರ, ಚಾನಲ್ ತನ್ನ ಸದಸ್ಯತ್ವಗಳಿಗಿರುವ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತದೆ ಮತ್ತು ತನ್ನ ಸದಸ್ಯರನ್ನು ಸಹ ಕಳೆದುಕೊಳ್ಳುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8236795295194588037
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false