YouTube Kids ಕಂಟೆಂಟ್ ನೀತಿಗಳು

ಆನ್‌ಲೈನ್ ವೀಡಿಯೊದ ಮೂಲಕ ಮಕ್ಕಳು ತಮ್ಮ ಆಸಕ್ತಿಯ ವಿಷಯಗಳನ್ನು ಅನ್ವೇಷಿಸಲು ಹೆಚ್ಚು ಸುರಕ್ಷಿತ ಮತ್ತು ಸರಳವಾದ ತಾಣವಾಗಿರುವ ಹಾಗೆ YouTube Kids ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಪ್ರತ್ಯೇಕ ಆ್ಯಪ್, YouTube ನ ಫಿಲ್ಟರ್ ಮಾಡಲಾದ ಆವೃತ್ತಿಯಾಗಿದೆ ಮತ್ತು YouTube ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದಕ್ಕಿಂತ ಹೆಚ್ಚು ಸಣ್ಣ ಪ್ರಮಾಣದ ಚಾನಲ್‌ಗಳು ಹಾಗೂ ವೀಡಿಯೊಗಳನ್ನು ಹೊಂದಿದೆ. ವಯಸ್ಸಿಗೆ ಸೂಕ್ತವಾದ ಕಂಟೆಂಟ್, ನಮ್ಮಗುಣಮಟ್ಟದ ತತ್ವಗಳನ್ನು ಅನುಸರಿಸುವ ಕಂಟೆಂಟ್, ಮತ್ತು ಜಾಗತಿಕವಾಗಿ ಮಕ್ಕಳ ವಿವಿಧ ಆಸಕ್ತಿಗಳನ್ನು ಪೂರೈಸಲು ಸಾಕಾಗುವಷ್ಟು ವೈವಿಧ್ಯತೆಯನ್ನು ಹೊಂದಿರುವ ಕಂಟೆಂಟ್ ಅನ್ನು ಗುರುತಿಸಲು ನಾವು ಶ್ರಮವಹಿಸಿ ಕೆಲಸ ಮಾಡುತ್ತೇವೆ.

ಕೆಳಗೆ, ನಮ್ಮ YouTube Kids ನೀತಿಗಳನ್ನು ಕೊಡಲಾಗಿದೆ, ಮತ್ತು ಯಾವ ರೀತಿಯ ಕಂಟೆಂಟ್, YouTube Kids ನ ಭಾಗವಾಗಿರಲು ಅರ್ಹವಾಗಿದೆ ಎಂಬುದರ ಸ್ಥೂಲನೋಟವನ್ನು ಕೊಡಲಾಗಿದೆ. YouTube Kids ನಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ಕಂಟೆಂಟ್, ಈ ನೀತಿಗಳನ್ನು ಅನುಸರಿಸಬೇಕು. ಈ ರೀತಿಯ ಕಂಟೆಂಟ್ ಅನ್ನು ಹೊರಗಿರಿಸುವುದಕ್ಕಾಗಿ ಈ ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ:

ಪೋಷಕರು, ಮತ್ತು ಮಕ್ಕಳ ಬೆಳವಣಿಗೆ, ಮಕ್ಕಳ ಮಾಧ್ಯಮ, ಡಿಜಿಟಲ್ ಕಲಿಕೆ ಮತ್ತು ಪೌರತ್ವದ ಕ್ಷೇತ್ರದ ವಿಶೇಷ ತಜ್ಞರಿಂದ ಪಡೆದ ಪ್ರತಿಕ್ರಿಯೆಯ ಆಧಾರದಲ್ಲಿ ಈ ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ನೀತಿಗಳನ್ನು ಆಧರಿಸಿ, ನಮ್ಮ ಅತ್ಯಂತ ಎಳೆಯ ಪ್ರೇಕ್ಷಕರಿಗೆ ಒಂದು ಉತ್ತಮ ಅನುಭವವನ್ನು ಒದಗಿಸಲು ಸಹಾಯ ಮಾದುವುದಕ್ಕಾಗಿ YouTube Kids ನಿಂದ ವೀಡಿಯೊಗಳು ಅಥವಾ ಚಾನಲ್‌ಗಳನ್ನು ಹೊರಗಿರಿಸಬಹುದಾಗಿದೆ.

ಕಂಟೆಂಟ್ ಸೆಟ್ಟಿಂಗ್‌ಗಳು

ಆ್ಯಪ್‌ನಲ್ಲಿ 3 ಕಂಟೆಂಟ್ ಸೆಟ್ಟಿಂಗ್‌ಗಳು ಲಭ್ಯವಿವೆ: ಪ್ರೀ-ಸ್ಕೂಲ್, ಎಳೆಯರು ಮತ್ತು ಬೆಳೆದ ಮಕ್ಕಳು. ನಿಮ್ಮ ಮಗುವು ನೋಡುವ ಕಂಟೆಂಟ್, ನಿಮ್ಮ ಮಗುವಿಗಾಗಿ ನೀವು YouTube Kids ಅನ್ನು ಸೆಟ್-ಅಪ್ ಮಾಡುವಾಗ ನೀವು ಆಯ್ಕೆ ಮಾಡುವ ಸೆಟ್ಟಿಂಗ್ ಅನ್ನು ಆಧರಿಸಿರುತ್ತದೆ.

ಪ್ರೀ-ಸ್ಕೂಲ್

4 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ

ಎಳೆಯರು

5–8 ವರ್ಷ ವಯಸ್ಸಿನ ಮಕ್ಕಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ

ಬೆಳೆದ ಮಕ್ಕಳು

9–12 ವಯಸ್ಸಿನ ಮಕ್ಕಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ

ಕಂಟೆಂಟ್ ನೀತಿಗಳು

ಪ್ರತಿ ಕಂಟೆಂಟ್ ಸೆಟ್ಟಿಂಗ್‌ಗಾಗಿ ಯಾವ ರೀತಿಯ ಕಂಟೆಂಟ್ ಅರ್ಹವಾಗಿದೆ ಎಂಬುದನ್ನು ನಮ್ಮ ನೀತಿಗಳು ತೀರ್ಮಾನಿಸುತ್ತವೆ. ನಿಮ್ಮ ಮಗುವಿಗಾಗಿ ನೀವು ಕಂಟೆಂಟ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡುವಾಗ, ಆ ಸೆಟ್ಟಿಂಗ್‌ಗಾಗಿ ಅರ್ಹವಾಗಿರುವ ಕಂಟೆಂಟ್ ಅನ್ನು ಅವರು ನೋಡುತ್ತಾರೆ. ನೀವು ಆಯ್ಕೆ ಮಾಡುವ ಸೆಟ್ಟಿಂಗ್, ಹುಡುಕಾಟಗಳು ಅಥವಾ ಶಿಫಾರಸು ಮಾಡಲಾದ ವೀಡಿಯೊಗಳಲ್ಲಿ ಅವರು ಏನು ನೋಡುತ್ತಾರೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ. ನೀವು ಆಯ್ಕೆ ಮಾಡಿದ ಸೆಟ್ಟಿಂಗ್ ಅನ್ನು ಆಧರಿಸಿ ಸೂಕ್ತ ಕಂಟೆಂಟ್ ಅನ್ನು ಗುರುತಿಸಲು ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಹಾಗೂ ಮಾನವ ಪರಿಶೀಲನಕಾರರು ಕೆಲಸ ಮಾಡುತ್ತಾರೆ. ಎಳೆಯ ಮಕ್ಕಳಿಗೆ ಸೂಕ್ತವಾಗಿರದ ಕಂಟೆಂಟ್ ಅನ್ನು ಹೊರಗಿರಿಸಲು ನಮ್ಮ ಸಿಸ್ಟಂಗಳು ಶ್ರಮವಹಿಸಿ ಕೆಲಸ ಮಾಡುತ್ತವೆ, ಆದರೆ ಎಲ್ಲಾ ವೀಡಿಯೊಗಳನ್ನು ಹಸ್ತಚಾಲಿತವಾಗಿ ಪರಿಶೀಲಿಸಿಲ್ಲ. ನಮ್ಮ ಕಣ್ಣಿನಿಂದ ತಪ್ಪಿಸಿಕೊಂಡ ಅನುಚಿತ ವಿಷಯವೇನಾದರೂ ನಿಮಗೆ ಕಂಡುಬಂದರೆ, ನೀವು ಅದನ್ನು ನಿರ್ಬಂಧಿಸಬಹುದು ಅಥವಾ ತ್ವರಿತ ಪರಿಶೀಲನೆಗಾಗಿ ವರದಿ ಮಾಡಬಹುದು.

ಪ್ರೀ-ಸ್ಕೂಲ್ ಕಂಟೆಂಟ್ ಸೆಟ್ಟಿಂಗ್

4 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮನಸ್ಸಿನಲ್ಲಿ ಇರಿಸಿಕೊಂಡು, ಪ್ರೀ-ಸ್ಕೂಲ್ ಸೆಟ್ಟಿಂಗ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸೃಜನಶೀಲತೆ, ವಿನೋದ, ಕಲಿಕೆ ಮತ್ತು ಅನ್ವೇಷಣೆಯನ್ನು ಉತ್ತೇಜಿಸುವ ವೀಡಿಯೊಗಳನ್ನು ಈ ಕಂಟೆಂಟ್ ಸೆಟ್ಟಿಂಗ್ ಒಳಗೊಂಡಿರುತ್ತದೆ. ಜನಪ್ರಿಯ ವೀಡಿಯೊ ವರ್ಗಗಳಲ್ಲಿ ಕಲೆ ಮತ್ತು ಕರಕುಶಲತೆ, ನರ್ಸರಿ ರೈಮ್‌ಗಳು, ಕಾರ್ಟೂನ್‌ಗಳು, ರೀಡ್-ಅಲಾಂಗ್‌ಗಳು, ಸರ್ಕಲ್ ಟೈಮ್, ಆಟಿಕೆಗಳು ಮತ್ತು ಆಟ ಹಾಗೂ ಯೋಗ ಒಳಗೊಂಡಿವೆ.
ಕೆಲವು ವೀಡಿಯೊಗಳಲ್ಲಿ ಈ ಕೆಳಗಿನವುಗಳು ಒಳಗೊಂಡಿರಬಹುದು:

ಲೈಂಗಿಕ ಕಂಟೆಂಟ್: ಕೈ-ಕೈ ಹಿಡಿದುಕೊಳ್ಳುವುದು ಅಥವಾ ಕೆನ್ನೆಗೆ ಮುತ್ತಿಡುವಂತಹ, ಪ್ರಣಯರಹಿತವಾದ ಪ್ರೀತಿಯ ಅಭಿವ್ಯಕ್ತಿಗಳು. ಲೈಂಗಿಕ ಮತ್ತು ಲಿಂಗ ಗುರುತಿಸುವಿಕೆಯ ಕುರಿತು, ವಯಸ್ಸಿಗೆ ಸೂಕ್ತವಾದ ಶೈಕ್ಷಣಿಕ ವೀಡಿಯೊಗಳು.

ಹಿಂಸೆ: ಹಿಂಸಾತ್ಮಕವಲ್ಲದ ಮತ್ತು ಭಯಗೊಳಿಸದ, ಸ್ಕ್ರಿಪ್ಟ್-ಮಾಡಿದ ಮತ್ತು ಆ್ಯನಿಮೇಟ್ ಮಾಡಿದ ವೀಡಿಯೊಗಳು.

ಶಸ್ತ್ರಾಸ್ತ್ರಗಳು: ಟಾಯ್-ಪ್ಲೇ, ಗೇಮಿಂಗ್, ಆ್ಯನಿಮೇಶನ್ ಸಂದರ್ಭದಲ್ಲಿ ಅವಾಸ್ತವಿಕ ಶಸ್ತ್ರಾಸ್ತ್ರಗಳನ್ನು ತೋರಿಸುವ (ವಾಟರ್ ಗನ್‌ಗಳ ಹಾಗೆ), ವಯಸ್ಸಿಗೆ ಸೂಕ್ತವಾದ ವೀಡಿಯೊಗಳು.

ಅಪಾಯಕಾರಿ ಕಂಟೆಂಟ್: ಕೌಶಲ್ಯವಿರುವ ವ್ಯಕ್ತಿಗಳು, ಸೂಚನೆಯ ಅಂಶವಿಲ್ಲದೆ ಸ್ಟಂಟ್‌ಗಳನ್ನು ಮಾಡುವುದನ್ನು (ಉದಾಹರಣೆಗೆ, ಬಾಸ್ಕೆಟ್‌ಬಾಲ್ ಆಟಗಾರರು ಕೆಲವು ತಂತ್ರಗಾರಿಕೆಗಳನ್ನು ಮಾಡುವುದು) ತೋರಿಸುವ ವೀಡಿಯೊಗಳು. ಪೈಂಟ್, ಗ್ಲೂ ಅಥವಾ ಕತ್ತರಿಗಳಂತಹ, ವಯಸ್ಸಿಗೆ-ಸೂಕ್ತವಾದ ಉತ್ಪನ್ನಗಳು ಅಥವಾ ಪರಿಕರಗಳನ್ನು ಬಳಸುವ ಕಲೆಗಳು ಮತ್ತು ಕರಕುಶಲತೆಗಳ ವೀಡಿಯೊಗಳು.

ಭಾಷೆ: ಆಕ್ಷೇಪಾರ್ಹ ಭಾಷೆ ಅಥವಾ ಅಸಭ್ಯ ಭಾಷೆಯನ್ನು ಬಳಸದ ವೀಡಿಯೊಗಳು.

ಸಂಗೀತ ವೀಡಿಯೊಗಳು: ಲೈಂಗಿಕ ಥೀಮ್‌ಗಳಿಲ್ಲದ, ವಯಸ್ಸಿಗೆ ಸೂಕ್ತವಾದ ಸಂಗೀತ ವೀಡಿಯೊಗಳು.

ಚಿಕ್ಕ ಮಕ್ಕಳ ಕಂಟೆಂಟ್ ಸೆಟ್ಟಿಂಗ್

5—8 ವರ್ಷ ವಯಸ್ಸಿನ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಎಳೆಯರ ಕಂಟೆಂಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕಂಟೆಂಟ್ ಸೆಟ್ಟಿಂಗ್‌ನಲ್ಲಿ, ಎಳೆಯ ಮಕ್ಕಳ ವ್ಯಾಪಕ ಆಸಕ್ತಿಗಳನ್ನು ಪೂರೈಸುವ ವೈವಿಧ್ಯಮಯ ವಿಷಯಗಳಿವೆ. ಜನಪ್ರಿಯ ವರ್ಗಗಳಲ್ಲಿ ಗೇಮಿಂಗ್, ಟಾಪ್ 40 ಹಾಡುಗಳ ಕವರ್‌ಗಳು, ಕುಟುಂಬ ವ್ಲಾಗರ್‌ಗಾಳು, ಕಾರ್ಟೂನ್‌ಗಳು, DIY, ಕಲಿಕೆ, ಮಾಡುವುದು ಹೇಗೆ ಮತ್ತು ಸಾಮಾನ್ಯವಾಗಿ, ಪ್ರಾಥಮಿಕ ಶಾಲೆಯ ಆರಂಭಿಕ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಆಸಕ್ತಿದಾಯಕವಾದ ಇತರ ವಿಷಯಗಳು ಒಳಗೊಂಡಿವೆ. ಇದು ಪ್ರೀ-ಸ್ಕೂಲ್ ಕಂಟೆಂಟ್ ಸೆಟ್ಟಿಂಗ್‌ನಿಂದಲೂ ಎಲ್ಲಾ ಕಂಟೆಂತ್ ಅನ್ನು ಒಳಗೊಂಡಿದೆ.

ಕೆಲವು ವೀಡಿಯೊಗಳಲ್ಲಿ ಈ ಕೆಳಗಿನವುಗಳು ಒಳಗೊಂಡಿರಬಹುದು:

ಲೈಂಗಿಕ ಕಂಟೆಂಟ್: ತುಟಿಗಳ ಮೇಲೆ ಪುಟ್ಟ ಮುತ್ತಿನ ಹಾಗೆ ವಾತ್ಸಲ್ಯ ಹಾಗೂ ಆಕರ್ಷಣೆಯ ಕ್ಷಣಿಕ ಪ್ರದರ್ಶನಗಳೂ ಒಳಗೊಂಡಂತೆ ರೊಮ್ಯಾಂಟಿಕ್ ಥೀಮ್‌ಗಳಿರುವ ವೀಡಿಯೊಗಳು.

ಹಿಂಸೆ: ಶೈಕ್ಷಣಿಕವಾಗಿದ್ದರೂ, ಘಟನೆಯ ಸಂದರ್ಭದಲ್ಲಿ ಲಘುವಾದ ಹಿಂಸೆಯನ್ನು ಒಳಗೊಂಡಿರಬಹುದಾದ, ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದ, ವಯಸ್ಸಿಗೆ-ಸೂಕ್ತವಾದ ವೀಡಿಯೊಗಳು. ಗ್ರಾಫಿಕ್=ಅಲ್ಲದ, ಸ್ಲ್ಯಾಪ್‌ಸ್ಟಿಕ್ ಕಾರ್ಟೂನ್ ಹಿಂಸೆ.

ಆಯುಧಗಳು: ವಾಸ್ತವಿಕ ಆಯುಧಗಳ ಪ್ರದರ್ಶನಗಳೊಂದಿಗೆ (ಉದಾಹರಣೆಗೆ, ಸಮುರಾಯ್ ಕತ್ತಿಯ ಪೈಂಟಿಂಗ್) ಐತಿಹಾಸಿಕ ಮತ್ತು ಶಾಸ್ತ್ರೀಯ ಕಲೆಯನ್ನು ತೋರಿಸುವ ವೀಡಿಯೊ.

ಅಪಾಯಕಾರಿ ಕಂಟೆಂಟ್: ಹಾನಿಯನ್ನು ಉಂಟುಮಾಡುವ ಸಾಧ್ಯತೆಯಿಲ್ಲದ, ಮುಗ್ಧ ಸ್ವರೂಪದ ಸವಾಲುಗಳು ಅಥವಾ ಕೀಟಲೆಗಳನ್ನು ಒಳಗೊಂಡಿರುವ ವೀಡಿಯೊಗಳು. ಮದ್ಯಪಾನ ಅಥವಾ ತಂಬಾಕನ್ನು ಕೇಂದ್ರಬಿಂದುವಾಗಿ ತೋರಿಸದ ವೀಡಿಯೊಗಳು. ಸುರಕ್ಷತಾ ಡಿಸ್‌ಕ್ಲೇಮರ್‌ಗಳಿರುವ, ಸುಲಭವಾಗಿ ದೊರಕುವ ಉತ್ಪನ್ನಗಳು ಹಾಗೂ ಪರಿಕರಗಳನ್ನು ಒಳಗೊಂಡ DIY ವೀಡಿಯೊಗಳು.

ಭಾಷೆ: "ಅಯ್ಯೋ ದೇವರೇ” ಅಥವಾ “ಪೆದ್ದು” ಎಂಬ ಹಾಗೆ, ಈ ಲಕ್ಷ್ಯ-ಕೇಂದ್ರೀಕೃತ ವಯೋಮಾನಕ್ಕೆ ಲಘುವಾಗಿ ಆಕ್ಷೇಪಾರ್ಹವಾಗಿರುವ ಮಾತುಗಳನ್ನು ವಿರಳವಾಗಿ ಹೊಂದಿರುವ ವೀಡಿಯೊಗಳು.

ಪಥ್ಯ, ಫಿಟ್ನೆಸ್ ಮತ್ತು ಸೌಂದರ್ಯ: ಸೃಜನಶೀಲ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಮೇಲೆ ಗಮನ ಕೇಂದ್ರೀಕರಿಸಿದ ಮೇಕಪ್ ಟುಟೋರಿಯಲ್‌ಗಳು. ಆರೋಗ್ಯಪೂರ್ಣ ಆಹಾರ ಸೇವನೆ ಮತ್ತು ವ್ಯಾಯಾಮದ ಕುರಿತಾದ, ವಯಸ್ಸಿಗೆ ಸೂಕ್ತವಾದ ಶೈಕ್ಷಣಿಕ ಕಂಟೆಂಟ್.

ಸೂಕ್ಷ್ಮ ವಿಷಯಗಳು: ಆತಂಕ ಮತ್ತು ADHD ಯಂತಹ, ಬಾಲ್ಯಾವಸ್ಥೆಯ ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಚರ್ಚಿಸುವ, ವಯಸ್ಸಿಗೆ ಸೂಕ್ತವಾದ ವೀಡಿಯೊಗಳು. ಸಕಾರಾತ್ಮಕ ನಿಭಾಯಿಸುವಿಕೆ ಮತ್ತು ಚೇತರಿಸುವಿಕೆ ಕಾರ್ಯತಂತ್ರಗಳು ಮತ್ತು ಸಹಾಯ ಕೋರುವುದರ ಮಹತ್ವದ ಮೇಲೆ ಈ ಸೆಟ್ಟಿಂಗ್‌ನಲ್ಲಿರುವ ವೀಡಿಯೊಗಳು ಗಮನ ಕೇಂದ್ರೀಕರಿಸುತ್ತವೆ.

ಸಂಗೀತ ವೀಡಿಯೊಗಳು: ಹಿನ್ನೆಲೆಯಲ್ಲಿ ಮದ್ಯ ಅಥವಾ ತಂಬಾಕನ್ನು ಪ್ರದರ್ಶಿಸುವ ಸಂಗೀತ ವೀಡಿಯೊಗಳು. ಲೈಂಗಿಕವಲ್ಲದ ರೊಮ್ಯಾಂಟಿಕ್ ಥೀಮ್‌ಗಳು ಅಥವಾ “ಹುಚ್ಚ” ಅಥವಾ “ಸ್ಟುಪಿಡ್” ಎಂಬಂತಹ ಲಘುವಾಗಿ ಆಕ್ಷೇಪಾರ್ಹವಾದ ಭಾಷೆಯನ್ನು ಹೊಂದಿರುವ ಸಂಗೀತ ವೀಡಿಯೊಗಳು.

ಬೆಳೆದ ಮಕ್ಕಳ ಕಂಟೆಂಟ್ ಸೆಟ್ಟಿಂಗ್

9–12 ವರ್ಷ ವಯಸ್ಸಿನ ಮಕ್ಕಳನ್ನು ಮನಸ್ಸಿನಲ್ಲಿ ಇರಿಸಿಕೊಂಡು, ಬೆಳೆದ ಮಕ್ಕಳ ಕಂಟೆಂಟ್ ಸೆಟ್ಟಿಂಗ್ ಅನ್ನು ವಿನ್ಯಾಸಗೊಳಿಸಲಾಗಿದೆ. YouTube ನಿಂದ ಫಿಲ್ಟರ್ ಮಾಡಲಾದ, ಹೆಚ್ಚು ಪ್ರಬುದ್ಧ ಕಂಟೆಂಟ್‌ಗೆ ಸಿದ್ಧರಾಗಿರಬಹುದಾದ ಬೆಳೆದ ಮಕ್ಕಳಿಗೆ ಈ ಸೆಟ್ಟಿಂಗ್ ಸೂಕ್ತವಾಗಿದೆ. ಉದಾಹರಣೆಗೆ, YouTube Kids ನ ಎಳೆಯರು ಮತ್ತು ಪ್ರೀ-ಸ್ಕೂಲ್ ಕಂಟೆಂಟ್ ಸೆಟ್ಟಿಂಗ್‌ಗಳಿಂದ ಹೊರಗಿರಿಸಲಾದ ಸಂಗೀತ, ಗೇಮಿಂಗ್, ವ್ಲಾಗ್‌ಗಳು, ಹಾಸ್ಯ ಮತ್ತು ಕ್ರೀಡೆಗಳನ್ನು ಈ ಆ್ಯಪ್ ತೋರಿಸುತ್ತದೆ. ಇದು ಎಳೆಯರು ಮತ್ತು ಪ್ರೀ-ಸ್ಕೂಲ್ ಕಂಟೆಂಟ್ ಸೆಟ್ಟಿಂಗ್‌ನಿಂದ ಎಲ್ಲಾ ಕಂಟೆಂಟ್ ಅನ್ನು ಸಹ ಒಳಗೊಂಡಿದೆ. ಈ ಸೆಟ್ಟಿಂಗ್, ಪ್ರಬುದ್ಧ ಕಂಟೆಂಟ್ ಅನ್ನು ಹೊರಗಿರಿಸಲು ಪ್ರಯತ್ನಿಸುತ್ತದೆ, ಆದರೆ ನಾವು ಎಲ್ಲಾ ಕಂಟೆಂಟ್ ಅನ್ನು ವ್ಯಕ್ತಿಗತವಾಗಿ ಪರಿಶೀಲಿಸಲು ಸಾಧ್ಯವಿಲ್ಲದ ಕಾರಣ ಮತ್ತು ಸ್ವಯಂಚಾಲಿತ ಸಿಸ್ಟಂಗಳು ಪರಿಪೂರ್ಣವಾಗಿರದ ಕಾರಣ, ಕೆಲವು ವೀಡಿಯೊಗಳು ನಮ್ಮ ಕಣ್ಣಿನಿಂದ ತಪ್ಪಿಸಿಕೊಂಡಿರಬಹುದು.

ಕೆಲವು ವೀಡಿಯೊಗಳಲ್ಲಿ ಈ ಕೆಳಗಿನವುಗಳು ಒಳಗೊಂಡಿರಬಹುದು:

ವಯಸ್ಕರ ಕಂಟೆಂಟ್: ಡೇಟಿಂಗ್ ಅಥವಾ ಮೊದಲ ಚುಂಬನದ ಹಾಗೆ, ರೊಮ್ಯಾನ್ಸ್ ಮತ್ತು ಆಕರ್ಷಣೆಗೆ ಸಂಬಂಧಿಸಿದ ಲೈಂಗಿಕವಲ್ಲದ ಅನುಭ್ವಗಳನ್ನು ಪ್ರದರ್ಶಿಸುವ ಅಥವಾ ಚರ್ಚಿಸುವ ವೀಡಿಯೊಗಳು. ವಯಸ್ಸಿಗೆ ಬರುವುದು ಮತ್ತು ಪುನರುತ್ಪಾದನೆಯಂತಹ ವಿಷಯಗಳ ಕುರಿತಾದ ಲೈಂಗಿಕ ಶಿಕ್ಷಣದ ಕುರಿತು ವಯಸ್ಸಿಗೆ ಸೂಕ್ತವಾದ ವೀಡಿಯೊಗಳು.

ಹಿಂಸೆ: ಪ್ರಸ್ತುತ ಘಟನೆಗಳಿಗೆ ಸಂಬಂಧಪಟ್ಟಂತೆ ಶೈಕ್ಷಣಿಕವಾಗಿರುವ, ಆದರೆ ಘಟನೆಯ ಸಂದರ್ಭದೊಳಗೆ ಲಘುವಾದ ಹಿಂಸೆಯನ್ನು ಒಳಗೊಂಡಿರಬಹುದಾದ, ವಯಸ್ಸಿಗೆ ಸೂಕ್ತವಾದ ವೀಡಿಯೊಗಳು. ಗೇಮಿಂಗ್, ಟೆಲಿವಿಷನ್ ಶೋಗಳು ಹಾಗೂ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿರುವ, ಸ್ಕ್ರಿಪ್ಟ್ ಮಾಡಿರುವ ಮತ್ತು ಆ್ಯನಿಮೇಟ್ ಮಾಡಿರುವ, ಗ್ರಾಫಿಕ್ ಅಲ್ಲದ ಹಿಂಸೆ.

ಆಯುಧಗಳು: ಟಾಯ್-ಪ್ಲೇ ಸಂದರ್ಭದಲ್ಲಿ ಅವಾಸ್ತವಿಕವಾದ ಆಟಿಕೆಯ ಗನ್‌ಗಳನ್ನು ಒಳಗೊಂಡಿರುವ ವೀಡಿಯೊಗಳು. ಗೇಮಿಂಗ್ ಮತ್ತು ಆ್ಯನಿಮೇಟ್ ಮಾಡಿದ ಕಂಟೆಂಟ್‌ನಲ್ಲಿ ವಾಸ್ತವಿಕವಾಗಿ ಕಾಣುವ ಆಯುಧಗಳು.

ಅಪಾಯಕಾರಿ ಕಂಟೆಂಟ್: ವೃತ್ತಿಪರ ಸೆಟ್ಟಿಂಗ್‌ನಲ್ಲಿ (ಉದಾಹರಣೆಗೆ ಟಿವಿ ಅಥವಾ ಚಲನಚಿತ್ರ ಸ್ಟುಡಿಯೋ) ಮಾಡಲಾದ, ಹಾನಿ ಉಂಟುಮಾಡಬಹುದಾದ ಅಪಾಯಕಾರಿ ಕ್ರಿಯೆಗಳು. ಮದ್ಯ ಅಥವಾ ತಂಬಾಕನ್ನು ಆಗಾಗ ಉಲ್ಲೇಖಿಸುವ ಅಥವಾ ಬಳಸುವುದನ್ನು ತೋರಿಸುವ ವೀಡಿಯೊಗಳು. ಸುಲಭವಾಗಿ ದೊರಕುವ ಉತ್ಪನ್ನಗಳು ಮತ್ತು ಪರಿಕರಗಳು ಅಥವಾ X-ಆಕ್ಟೋ ಚಾಕು ಅಥವಾ ಗರಗಸದಂತಹ ಚೂಪಾದ ವಸ್ತುಗಳ ಸಂಕ್ಷಿಪ್ತ ಬಳಕೆಯನ್ನು ಒಳಗೊಂಡಿರುವ DIY ವೀಡಿಯೊಗಳು.

ಸೂಕ್ತವಲ್ಲದ ಭಾಷೆ: ಕಿರುಕುಳರಹಿತ ಸಂದರ್ಭದಲ್ಲಿ, "ಡ್ಯಾಮ್ನಿಟ್" ಅಥವಾ "ಹೆಲ್" ಎಂಬಂತಹ ಲಘುವಾದ ಅಸಭ್ಯ ಭಾಷೆಯನ್ನು ವಿರಳವಾಗಿ ಬಳಸುವ ವೀಡಿಯೊಗಳು.

ಪಥ್ಯ, ಫಿಟ್ನೆಸ್ ಮತ್ತು ಸೌಂದರ್ಯ: ಸೌಂಡರ್ಯ ಸಾಧನಗಳ ವಿಮರ್ಶೆಗಳು, ವಯಸ್ಸಿಗೆ ಸೂಕ್ತವಾದ ಮೇಕಪ್ ಟುಟೋರಿಯಲ್‌ಗಳು ಹಾಗೂ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತಾದ ಶೈಕ್ಷಣಿಕ ಕಂಟೆಂಟ್ ಅನ್ನು ಹೊಂದಿರುವ ವೀಡಿಯೊಗಳು.

ಸೂಕ್ಷ್ಮ ವಿಷಯಗಳು: ಮಾನಸಿಕ ಆರೋಗ್ಯ, ವ್ಯಸನ, ತಿನ್ನುವುದಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು, ನಷ್ಟ ಮತ್ತು ಯಾತನೆಯಂತಹ ಸೂಕ್ಷ್ಮ ವಿಷಯಗಳ ಕುರಿತು ಚರ್ಚಿಸುವ, ವಯಸ್ಸಿಗೆ ಸೂಕ್ತವಾದ ವಿಷಯಗಳು. ಈ ಸೆಟ್ಟಿಂಗ್‌ನಲ್ಲಿರುವ ವೀಡಿಯೊಗಳು ಗ್ರಾಫಿಕ್ ಚಿತ್ರಣವನ್ನು ತೋರಿಸುವುದಿಲ್ಲ ಮತ್ತು ಸಕಾರಾತ್ಮಕ ನಿಭಾಯಿಸುವಿಕೆ ಹಾಗೂ ಚೇತರಿಸಿಕೊಳ್ಳುವಿಕೆ ಕಾರ್ಯತಂತ್ರಗಳು ಹಾಗೂ ಸಹಾಯ ಕೋರುವುದರ ಮಹತ್ವದ ಮೇಲೆ ಗಮನ ಕೇಂದ್ರೀಕರಿಸುತ್ತವೆ.

ಸಂಗೀತ ವೀಡಿಯೊಗಳು: ಅತಿಯಾಗಿರದ ಲೈಂಗಿಕ ನೃತ್ಯ ಮತ್ತು ಮದ್ಯ ಅಥವಾ ತಂಬಾಕಿನ ವಿರಳ ಬಳಕೆಯನ್ನು ಒಳಗೊಂಡಿರುವ ಸಂಗೀತ ವೀಡಿಯೊಗಳು. ಲಘುವಾದ ಅಸಭ್ಯ ಭಾಶೆ ಅಥವಾ ಮದ್ಯ ಅಥವಾ ತಂಬಾಕಿನ ವಿರಳ ಉಲ್ಲೇಖಗಳನ್ನು ಒಳಗೊಂಡಿರುವ ಸಂಗೀತ ಸಾಹಿತ್ಯ.

ವಾಣಿಜ್ಯ ಅಂಶಗಳನ್ನು ಒಳಗೊಂಡಿರುವ ಕಂಟೆಂಟ್

ಪಾವತಿಸಿದ ಉತ್ಪನ್ನ ಇರಿಸುವಿಕೆಗಳು ಅಥವಾ ಅನುಮೋದನೆಗಳನ್ನು ಒಳಗೊಂಡಿರುವ ಕಂಟೆಂಟ್. ಪಾವತಿಸಿದ ಉತ್ಪನ್ನ ಇರಿಸುವಿಕೆಗಳು ಅಥವಾ ಅನುಮೋದನೆಗಳನ್ನು ಒಳಗೊಂಡಿರುವ ವೀಡಿಯೊಗಳನ್ನು YouTube Kids ನಲ್ಲಿ ನಾವು ಅನುಮತಿಸುವುದಿಲ್ಲ. ರಚನೆಕಾರರು YouTube Studio ಮೂಲಕ ತಮ್ಮ ವೀಡಿಯೊದಲ್ಲಿ ಪಾವತಿಸಿದ ಉತ್ಪನ್ನ ಇರಿಸುವಿಕೆ ಅಥವಾ ಅನುಮೋದನೆಯನ್ನು ಪ್ರಕಟಿಸಿದಾಗ, ನಾವು YouTube Kids ಆ್ಯಪ್‌ನಿಂದ ವೀಡಿಯೊಗಳನ್ನು ತೆಗೆದುಹಾಕುತ್ತೇವೆ.

ಓವರ್‌ಲೇ ವಾಣಿಜ್ಯ ಕಂಟೆಂಟ್. ಈ ಕೆಳಗಿನವುಗಳನ್ನು ಒಳಗೊಂಡ ಹಾಗೆ, ಅತಿಯಾಗಿ ವಾಣಿಜ್ಯಿಕ ಅಥವಾ ಪ್ರಚಾರಾತ್ಮಕವಾಗಿರುವ ಕಂಟೆಂಟ್ ಅನ್ನು YouTube Kids ನಲ್ಲಿ ಅನುಮತಿಸಲಾಗುವುದಿಲ್ಲ:

  • ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ರಚನೆಕಾರರು ಅಥವಾ ಬ್ರ್ಯಾಂಡ್‌ಗಳು ಅಪ್‌ಲೋಡ್ ಮಾಡಿರುವ ಸಾಂಪ್ರದಾಯಿಕ ಜಾಹೀರಾತುಗಳು.
  • ಉತ್ಪನ್ನವನ್ನು ಖರೀದಿಸುವಂತೆ ವೀಕ್ಷಕರನ್ನು ನೇರವಾಗಿ ಪ್ರೋತ್ಸಾಹಿಸುವ ಕಂಟೆಂಟ್.
  • ಉತ್ಪನ್ನದ ಪ್ಯಾಕೇಜಿಂಗ್‌ನ ಮೇಲೆ ಗಮನ ಕೇಂದ್ರೀಕರಿಸುವ ವೀಡಿಯೊಗಳು.
  • ಉತ್ಪನ್ನಗಳ ಅತಿಯಾದ ಸಂಗ್ರಹ ಅಥವಾ ಸೇವನೆಯ ಮೇಲೆ ಗಮನ ಕೇಂದ್ರೀಕರಿಸುವ ವೀಡಿಯೊಗಳು.

ಮೋಸಗೊಳಿಸುವ, ಸಂವೇದನಾಶೀಲ ಅಥವಾ ಕ್ಲಿಕ್ ಮಾಡಲು ಉತ್ತೇಜಿಸುವ ಕಂಟೆಂಟ್

ಮೋಸಗೊಳಿಸುವ, ಸಂವೇದನಾಶೀಲವಾಗಿರುವ ಅಥವಾ ಕ್ಲಿಕ್ ಮಾಡಲು ಉತ್ತೇಜಿಸುವ ವೀಡಿಯೊಗಳನ್ನು ನಾವು YouTube Kids ನಲ್ಲಿ ಅನುಮತಿಸುವುದಿಲ್ಲ. ಇದರಲ್ಲಿ, ನಿರ್ದಿಷ್ಟವಾಗಿ ಈ ಕೆಳಗಿನವುಗಳ ಮೂಲಕ ಮಕ್ಕಳ ಗಮನವನ್ನು ಸೆಳೆಯಲು ವಂಚನೆ, ಸಂವೇದನಾಶೀಲತೆ ಮತ್ತು/ಅಥವಾ ಕುಶಲತೆಯಿಂದ ಮೋಸಗೊಳಿಸುವ ಮತ್ತು ಕ್ಲಿಕ್‌ಗಳು/ವೀಕ್ಷಣೆಗಳನ್ನು ಆಕರ್ಷಿಸಲು ಕಡಿಮೆ ಗುಣಮಟ್ಟದ ಮಕ್ಕಳ ಕಂಟೆಂಟ್ ಮತ್ತು ಕುಟುಂಬ ಕಂಟೆಂಟ್ ಒಳಗೊಂಡಿದೆ:

  • ದಾರಿ ತಪ್ಪಿಸುವ ಶೀರ್ಷಿಕೆಗಳು ಹಾಗೂ ಥಂಬ್‌ನೇಲ್‌ಗಳು
  • ಸಂವೇದನಾಶೀಲ ಶೀರ್ಷಿಕೆಗಳು ಹಾಗೂ ಥಂಬ್‌ನೇಲ್‌ಗಳು
  • ಶೀರ್ಷಿಕೆಗಳಲ್ಲಿ ಕೀವರ್ಡ್‌ಗಳನ್ನು ತುರುಕುವುದು (ಅಂದರೆ, ಕೀವರ್ಡ್‌ಗಳ ಅತಿಯಾದ ಬಳಕೆ)
  • ಒಂದಕ್ಕೊಂದ ಪರಸ್ಪರ ಸಂಬಂಧವಿಲ್ಲದಂತೆ ಮಕ್ಕಳ ಥೀಮ್‌ಗಳನ್ನು ಕಲೆ ಹಾಕುವುದು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15377582146232426870
true
ಸಹಾಯ ಕೇಂದ್ರವನ್ನು ಹುಡುಕಿ
true
true
true
false
false