ರಚನೆಕಾರರ ಜವಾಬ್ದಾರಿ

ರಚನೆಕಾರರು YouTube ನ ಹೃದಯಭಾಗವಾಗಿದ್ದಾರೆ. ರಚನೆಕಾರರಾದಾಗ ನೀವು ಒಂದು ದೊಡ್ಡ ಮತ್ತು ಪ್ರಭಾವಶಾಲಿ ಜಾಗತಿಕ ಸಮುದಾಯದ ಸದಸ್ಯರಾಗಿರುತ್ತೀರಿ. ಈ ಅನನ್ಯ ಮತ್ತು ಉತ್ಸಾಹಿ ಗುಂಪನ್ನು ಕಾಪಾಡಲು ಮತ್ತು ಸಂರಕ್ಷಿಸಲು ನೀವು ನಮಗೆ ಸಹಾಯ ಮಾಡಬಲ್ಲಿರಿ.

YouTube ನ ರಚನೆಕಾರರ ಜವಾಬ್ದಾರಿ ಉಪಕ್ರಮ

YouTube ನಲ್ಲಿ ಒಬ್ಬ ರಚನೆಕಾರರಾಗಿ, ನೀವು ಇವುಗಳನ್ನು ಅನುಸರಿಸಲು ಒಪ್ಪುತ್ತೀರಿ:

ನೀವು ಈ ಮಾರ್ಗಸೂಚಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು YouTube ಅನ್ನು ಆರೋಗ್ಯಪೂರ್ಣವಾಗಿರಿಸಲು ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳ ಪಾತ್ರವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ನಿಮ್ಮ ವೀಡಿಯೊಗಳನ್ನು ಅಳಿಸಲಾಗಬಹುದು, ನಿಮ್ಮ ಚಾನಲ್ ಸ್ಟ್ರೈಕ್‌ಗಳನ್ನು ಸ್ವೀಕರಿಸಬಹುದು, ಅಥವಾ ಗಂಭೀರ ಅಥವಾ ಪುನರಾವರ್ತಿತ ಉಲ್ಲಂಘನೆಗಳಿಗಾಗಿ, ನಿಮ್ಮ ಚಾನಲ್ ಅನ್ನು ನಿರ್ಬಂಧಿಸಲಾಗಬಹುದು ಅಥವಾ ಕೊನೆಗೊಳಿಸಲಾಗಬಹುದು.

ನಿಮ್ಮ ಕಂಟೆಂಟ್‌ನಿಂದ ಹಣ ಗಳಿಸಿ

ಕಂಟೆಂಟ್ ಅನ್ನು ಮಾನಿಟೈಸ್ ಮಾಡಲು ಬಯಸುವ ರಚನೆಕಾರರು ಇನ್ನಷ್ಟು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ:

ಈ ಮಾರ್ಗಸೂಚಿಗಳನ್ನು ಗೌರವಿಸುವ ಮೂಲಕ, ಸಂಭಾವ್ಯವಾಗಿ ಅನುಚಿತವಾದ ವೀಡಿಯೊಗಳು ಎಲ್ಲರ ಆದಾಯಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಅವುಗಳು ಮಾನಿಟೈಸ್ ಮಾಡದಂತೆ ತಡೆಯಲು ನೀವು ನಮಗೆ ಸಹಾಯ ಮಾಡುವಿರಿ.

ನೀವು ಈ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ, ನಿಮ್ಮ ಕಂಟೆಂಟ್‌ನಲ್ಲಿ ಆ್ಯಡ್‌ಗಳನ್ನು ನಿಷ್ಕ್ರಿಯಗೊಳಿಸುವುದು, ಅಥವಾ ನಿಮ್ಮ ಚಾನಲ್ ಅನ್ನು YouTube ಪಾಲುದಾರ ಕಾರ್ಯಕ್ರಮದಿಂದ ಅಮಾನತುಗೊಳಿಸುವಂತಹ ದಂಡನೆಗಳನ್ನು ನಿಮಗೆ ವಿಧಿಸಲಾಗಬಹುದು.

ನಮ್ಮ ಮಾನಿಟೈಸೇಶನ್ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.

YouTube ಸಮುದಾಯವನ್ನು ಸಂರಕ್ಷಿಸಿ

YouTube ರಚನೆಕಾರರಾಗಿ, ನೀವು ಪ್ಲ್ಯಾಟ್‌ಫಾರ್ಮ್‌ನಲ್ಲಿ ಮತ್ತು ಅದರಾಚೆಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ರಚನೆಕಾರರ ಪ್ಲ್ಯಾಟ್‌ಫಾರ್ಮ್‌ನಲ್ಲಿನ ಮತ್ತು/ಅಥವಾ ಪ್ಲ್ಯಾಟ್‌ಫಾರ್ಮ್‌ನ ಹೊರಗಿನ ನಡವಳಿಕೆಯು ನಮ್ಮ ಬಳಕೆದಾರರಿಗೆ, ಸಮುದಾಯಕ್ಕೆ, ಉದ್ಯೋಗಿಗಳಿಗೆ ಅಥವಾ ಪರಿಸರ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತಿರುವುದು ಕಂಡುಬಂದರೆ, ಸಮುದಾಯವನ್ನು ಸುರಕ್ಷಿತವಾಗಿರಿಸುವುದಕ್ಕಾಗಿ ನಾವು ಕ್ರಮ ಕೈಗೊಳ್ಳಬಹುದು.

ನೀವು YouTube ಗೆ ಅಪ್‌ಲೋಡ್ ಮಾಡುವ ಕಂಟೆಂಟ್‌ನಾಚೆಗೆ, ನಾವು ಅನುಚಿತವೆಂದು ಪರಿಗಣಿಸಬಹುದಾದ ಮತ್ತು ದಂಡನೆಗಳಿಗೆ ಕಾರಣವಾಗಬಹುದಾದ, ಪ್ಲ್ಯಾಟ್‌ಫಾರ್ಮ್‌ನಲ್ಲಿನ ಮತ್ತು ಪ್ಲ್ಯಾಟ್‌ಫಾರ್ಮ್‌ನ ಹೊರಗಿನ ನಡವಳಿಕೆಯ ಕೆಲವು ಉದಾಹರಣೆಗಳು ಹೀಗಿವೆ:

  • ಇತರರಿಗೆ ದುರುದ್ದೇಶಪೂರಿತ ಹಾನಿಯನ್ನು ಉಂಟುಮಾಡುವ ಉದ್ದೇಶವಿರುವುದು.
  • ದೌರ್ಜನ್ಯ ಅಥವಾ ಹಿಂಸೆಯಲ್ಲಿ ಭಾಗವಹಿಸುವುದು, ಕ್ರೌರ್ಯವನ್ನು ಪ್ರದರ್ಶಿಸುವುದು, ಅಥವಾ ವಾಸ್ತವ ಜಗತ್ತಿನಲ್ಲಿ ಹಾನಿಯುಂಟುಮಾಡಬಹುದಾದ ವಂಚನೆಯ ಅಥವಾ ಮೋಸಗೊಳಿಸುವ ವರ್ತನೆಯಲ್ಲಿ ತೊಡಗಿಕೊಳ್ಳುವುದು.

ಇಂತಹ ವರ್ತನೆಗಳು ಅಪರೂಪವಾಗಿದ್ದರೂ, ಅವು YouTube ಸಮುದಾಯಕ್ಕೆ ವ್ಯಾಪಕ ಹಾನಿ ಉಂಟುಮಾಡಬಹುದು ಮತ್ತು ರಚನೆಕಾರರು, ಬಳಕೆದಾರರು ಹಾಗೂ ಜಾಹೀರಾತುದಾರರ ನಡುವಿನ ನಂಬಿಕೆಗೆ ಸಂಭಾವ್ಯವಾಗಿ ಧಕ್ಕೆ ಉಂಟುಮಾಡಬಹುದು.

ಸಮುದಾಯಕ್ಕೆ ವ್ಯಾಪಕ ಹಾನಿಯನ್ನು ಉಂಟುಮಾಡುವ ತೀವ್ರ ಉಲ್ಲಂಘನೆಗಳು, ಪ್ರಮಾಣಿತ ಜಾರಿಗೊಳಿಸುವಿಕೆ ಕ್ರಮಗಳಾಚೆಗೆ ಪರಿಣಾಮಗಳನ್ನು ಉಂಟುಮಾಡಬಹುದು. ಈ ನಿರ್ಬಂಧಗಳಲ್ಲಿ ಇವು ಸೇರಿರಬಹುದು:

  • YouTube Originals ಹಾಗೂ YouTube ಸ್ಪೇಸ್‌ಗಳ ಅನುಭವಗಳು: YouTube Originals ಅನ್ನು ಅಮಾನತುಗೊಳಿಸಬಹುದು, ರದ್ದುಗೊಳಿಸಬಹುದು ಅಥವಾ ತೆಗೆದುಹಾಕಬಹುದು, ಮತ್ತು ನೀವು YouTube ಪಾಪ್-ಅಪ್ ಸ್ಪೇಸ್‌ಗಳು ಹಾಗೂ ವರ್ಚುವಲ್ ಕೂಟಗಳಿಗೆ ಆ್ಯಕ್ಸೆಸ್ ಕಳೆದುಕೊಳ್ಳಬಹುದು.
  • ಮಾನಿಟೈಸೇಶನ್, ಪಾಲುದಾರರ ನಿರ್ವಹಣೆ ಮತ್ತು ಪ್ರಚಾರದ ಅವಕಾಶಗಳು: ನಿಮ್ಮ ಚಾನಲ್, ಆ್ಯಡ್‌ಗಳ ಸರ್ವ್ ಮಾಡುವಿಕೆ, ಆದಾಯ ಗಳಿಸುವಿಕೆ ಸಾಮರ್ಥ್ಯಗಳನ್ನು ಕಳೆದುಕೊಳ್ಳಬಹುದು ಮತ್ತು ಪಾಲುದಾರ ವ್ಯವಸ್ಥಾಪಕರು ಮತ್ತು ರಚನೆಕಾರರ ಬೆಂಬಲಕ್ಕೆ ಆ್ಯಕ್ಸೆಸ್ ಕಳೆದುಕೊಳ್ಳುವುದೂ ಒಳಗೊಂಡಂತೆ ಅದನ್ನು ಸಂಭಾವ್ಯವಾಗಿ YouTube ಪಾಲುದಾರರ ಕಾರ್ಯಕ್ರಮದಿಂದ ತೆಗೆದುಹಾಕಬಹುದಾಗಿದೆ. ಜೊತೆಗೆ, Studio ಕಂಟೆಂಟ್ ಮ್ಯಾನೇಜರ್ ಗೆ ಆ್ಯಕ್ಸೆಸ್ ಕಳೆದುಕೊಳ್ಳಬಹುದು. ನಿಮ್ಮನ್ನು YouTube Select ಲೈನ್ ಅಪ್‌ಗಳಿಂದಲೂ ತೆಗೆದುಹಾಕಬಹುದಾಗಿದೆ.

ಹೆಚ್ಚುವರಿ ಸಂಪನ್ಮೂಲಗಳು

YouTube ನೀತಿಗಳ ಕುರಿತು ಇನ್ನಷ್ಟು ತಿಳಿಯಲು ಈ ಮಾಹಿತಿಯ ಮೂಲಗಳನ್ನು ಬಳಸಿ:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4045231419066853602
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
102809
false
false