ಹೊಸ ಖರೀದಿಗಾಗಿ ವಿಫಲವಾದ ಅಥವಾ ನಿರಾಕರಿಸಲಾದ ಪಾವತಿಯನ್ನು ಸರಿಪಡಿಸಿ

ಒಂದು ವೇಳೆ ನೀವು YouTube ನಲ್ಲಿ ಖರೀದಿಯನ್ನು ಮಾಡಲು ಪ್ರಯತ್ನಿಸುತ್ತಿದ್ದಾಗ, ನಿಮ್ಮ ಪಾವತಿಯನ್ನು ನಿರಾಕರಿಸಿದರೆ ಅಥವಾ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಹೋದಾಗ, ಕೆಳಗಿನ ಯಾವ ಪರಿಸ್ಥಿತಿಯು ನಿಮ್ಮ ಸಮಸ್ಯೆಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಗುರುತಿಸಿ ಮತ್ತು ಶಿಫಾರಸು ಮಾಡಿದ ಹಂತಗಳನ್ನು ಪ್ರಯತ್ನಿಸಿ. ಒಂದು ವೇಳೆ ನಿಮ್ಮ ಮಾಸಿಕ ಸದಸ್ಯತ್ವ ಪಾವತಿಗೆ ನಿರಾಕರಿಸಿದ ಶುಲ್ಕವೇನಾದರೂ ವಿಧಿಸಲಾಗಿದ್ದರೆ, ಅದರ ಕುರಿತು ಸಹಾಯಕ್ಕಾಗಿ ನೀವು ಹುಡುಕುತ್ತಿದ್ದರೆ, ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸಮಸ್ಯೆಗಳನ್ನು ಸರಿಪಡಿಸಿ

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ನೀವು ನೋಡುವಂತಹ ಕೆಲವು ಸಾಮಾನ್ಯ ದೋಷ ಸಂದೇಶಗಳಿವೆ, ಅವುಗಳು ಯಾವುವೆಂದರೆ:

  • "ಕಾರ್ಡ್ ಅನ್ನು ನಿರಾಕರಿಸಲಾಗಿದೆ"
  • "ಈ ಕಾರ್ಡ್ ಮಾಹಿತಿಯನ್ನು ಸರಿಪಡಿಸಿ ಅಥವಾ ಬೇರೆ ಕಾರ್ಡ್ ಪ್ರಯತ್ನಿಸಿ"
  • "ಕಾರ್ಡ್ ಅವಧಿ ಮೀರಿದೆ"
  • "ದಯವಿಟ್ಟು ನಿಮ್ಮ ಕಾರ್ಡ್ ಮಾಹಿತಿಯನ್ನು ಪರಿಶೀಲಿಸಿ ಮತ್ತು ಪುನಃ ಪ್ರಯತ್ನಿಸಿ"

ನೀವು ಈ ದೋಷ ಸಂದೇಶಗಳಲ್ಲಿ ಒಂದನ್ನು ನೋಡುತ್ತಿದ್ದರೆ ಅಥವಾ ಅದೇ ರೀತಿಯ ಇನ್ನಿತರ ಸಂದೇಶಗಳನ್ನು ನೋಡುತ್ತಿದ್ದರೆ, ಕೆಳಗೆ ನೀಡಿರುವ ಕ್ರಮಗಳನ್ನು ಪ್ರಯತ್ನಿಸಿ:

ನಿಮ್ಮ ಕಾರ್ಡ್ ಮಾಹಿತಿಯು ಅಪ್‌ ಟು ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ

ಅವಧಿ ಮೀರಿದ ಕ್ರೆಡಿಟ್ ಕಾರ್ಡ್ ಅಥವಾ ತಪ್ಪಾದ ಬಿಲ್ಲಿಂಗ್ ವಿಳಾಸದಿಂದಾಗಿ ಪಾವತಿಗಳು ಸಾಮಾನ್ಯವಾಗಿ ವಿಫಲಗೊಳ್ಳುತ್ತವೆ. ನೀವು Google Pay ನಲ್ಲಿ ಯಾವ ಪಾವತಿ ವಿಧಾನಗಳನ್ನು ಸಂಗ್ರಹಿಸಿದ್ದೀರಿ ಮತ್ತು ಅವುಗಳು ಯಾವಾಗ ಅವಧಿ ಮೀರುತ್ತವೆ ಎಂಬುದನ್ನು ನೀವು ನೋಡಬಹುದು. ನಿಮ್ಮ ಪಿನ್ ಕೋಡ್ ನಿಮ್ಮ ಬಿಲ್ಲಿಂಗ್ ವಿಳಾಸಕ್ಕೆ ಹೊಂದಾಣಿಕೆಯಾಗುತ್ತದೆಯೇ ಎಂದು ನೋಡಲು ನೀವು ಯಾವುದೇ ಪಟ್ಟಿ ಮಾಡಲಾದ ಪಾವತಿ ವಿಧಾನದಲ್ಲಿ "ಎಡಿಟ್" ಅನ್ನು ಕ್ಲಿಕ್ ಮಾಡಬಹುದು.

ನೀವು ಅವಧಿ ಮೀರಿದ ಪಾವತಿ ವಿಧಾನವನ್ನು ಹೊಂದಿದ್ದರೆ, ಅದನ್ನು ತೆಗೆದುಹಾಕಲು ಈ ಹಂತಗಳನ್ನು ಅನುಸರಿಸಿ ಮತ್ತು ನಂತರ ಹೊಸ ಪಾವತಿ ವಿಧಾನವನ್ನು ಸೇರಿಸಿ. ನೀವು ಹೊಸ ಪಾವತಿ ವಿಧಾನವನ್ನು ಸೇರಿಸಿದ ನಂತರ ಅಥವಾ ನಿಮ್ಮ ಪಿನ್ ಕೋಡ್ ಅನ್ನು ಅಪ್‌ಡೇಟ್ ಮಾಡಿದ ನಂತರ, ನಿಮ್ಮ ಖರೀದಿಯನ್ನು ಪುನಃ ಪ್ರಯತ್ನಿಸಿ.

ಯಾವುದೇ ವಿನಂತಿಸಿದ ಮಾಹಿತಿಯನ್ನು ಸಲ್ಲಿಸಿ

ನೀವು Google ಗೆ ಹೆಚ್ಚುವರಿ ಮಾಹಿತಿಯನ್ನು ಸಲ್ಲಿಸಿ ಎಂದು ವಿನಂತಿಸುವ ದೋಷ ಸಂದೇಶವನ್ನು ನೀವು ನೋಡಿದರೆ, ಆ ವಿವರಗಳ ಮಾಹಿತಿಯನ್ನು ಸಲ್ಲಿಸಲು ದಯವಿಟ್ಟು ನೀಡಿರುವ ಸೂಚನೆಗಳನ್ನು ಅನುಸರಿಸಿ. ಉದಾಹರಣೆಗೆ, ನಿಮ್ಮ Google ಖಾತೆಯನ್ನು ಬಳಸಿಕೊಂಡು ಖರೀದಿಸುವ ಮೊದಲು Google Pay ನಲ್ಲಿ ನಿಮ್ಮ ಗುರುತನ್ನು ನೀವು ದೃಢೀಕರಿಸಬೇಕಾಗಬಹುದು.

ಖಾತೆ ಸಮಸ್ಯೆಗಳನ್ನು ಸರಿಪಡಿಸಲು ಅಲರ್ಟ್‌ಗಳು ಅಥವಾ ವಿನಂತಿಗಳಿಗಾಗಿ ನೀವು ಯಾವುದೇ ಸಮಯದಲ್ಲಿ Google Pay ಅನ್ನು ಸಹ ಪರಿಶೀಲಿಸಬಹುದು.

ಖರೀದಿಗೆ ಬೇಕಾದಷ್ಟು ಹಣವನ್ನು ನೀವು ಹೊಂದಿರುವಿರಾ ಎಂಬುದನ್ನು ಪರಿಶೀಲಿಸಿ

ಕೆಲವೊಮ್ಮೆ ಖರೀದಿಗೆ ಬೇಕಾದಷ್ಟು ಹಣವಿಲ್ಲದ ಕಾರಣ ವಹಿವಾಟು ನಿರಾಕರಿಸಲ್ಪಡುತ್ತದೆ. ಖರೀದಿಯನ್ನು ಪೂರ್ಣಗೊಳಿಸಲು ನೀವು ಬೇಕಾದಷ್ಟು ಹಣವನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಖಾತೆಯನ್ನು ಪರಿಶೀಲಿಸಿ.

ಗಮನಿಸಿ: ನೀವು ಟ್ರಯಲ್‌ಗಾಗಿ ಸೈನ್ ಅಪ್ ಮಾಡಿದಾಗ, ನಿಮ್ಮ ಖಾತೆಯಲ್ಲಿ ದೃಢೀಕರಣ ತಡೆಹಿಡಿಯುವಿಕೆಯನ್ನು ನೀವು ನೋಡಬಹುದು. ನಿಮ್ಮ ಪಾವತಿ ವಿಧಾನವು ಮಾನ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ತಡೆಹಿಡಿಯಲಾಗಿದೆ ಮತ್ತು ಇದನ್ನು ನಿಮ್ಮ ಬ್ಯಾಂಕ್ ಸ್ವಯಂಚಾಲಿತವಾಗಿ ತೆಗೆದುಹಾಕುತ್ತದೆ ಹಾಗೂ ಸ್ವಲ್ಪ ಸಮಯದ ನಂತರ ಮರುಪಾವತಿಸುತ್ತದೆ. ಆದರೂ, ನಿಮ್ಮ ಖಾತೆಯಲ್ಲಿ ನೀವು ತಡೆಹಿಡಿಯಲಾದ ಮೊತ್ತವನ್ನು ಹೊಂದಿಲ್ಲದಿದ್ದರೆ ನಿಮ್ಮ ಸೈನ್-ಅಪ್ ವಿಫಲವಾಗಬಹುದು. ದೃಢೀಕರಣದ ತಡೆಹಿಡಿಯುವಿಕೆಗಳ ಕುರಿತು ನೀವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ನಿಮ್ಮ ಬ್ಯಾಂಕ್ ಅಥವಾ ಕಾರ್ಡ್ ವಿತರಕರನ್ನು ಸಂಪರ್ಕಿಸಿ

ನಿಮ್ಮ ಕಾರ್ಡ್ ನಿರ್ದಿಷ್ಟ ನಿರ್ಬಂಧಗಳನ್ನು ಹೊಂದಿರಬಹುದು. ಅದರಿಂದಾಗಿ ನಿಮ್ಮ ಪಾವತಿಯು ವಿಫಲಗೊಳ್ಳುತ್ತದೆ. ವಹಿವಾಟಿನ ಬಗ್ಗೆ ಕೇಳಲು ನಿಮ್ಮ ಕಾರ್ಡ್ ನೀಡಿದ ಬ್ಯಾಂಕ್ ಅಥವಾ ಕಂಪನಿಯನ್ನು ಸಂಪರ್ಕಿಸಿ ಮತ್ತು ಅವರು ನಿರಾಕರಿಸಿದ್ದಕ್ಕೆ ಕಾರಣವನ್ನು ತಿಳಿದಿದ್ದಾರೆಯೇ ಎಂದು ವಿಚಾರಿಸಿ.

ನೀವು U.S.ನ ಹೊರಗಿನವರಾಗಿದ್ದರೆ, ನಿಮ್ಮ ಕಾರ್ಡ್ ಮತ್ತು ಬ್ಯಾಂಕ್ ಬೆಂಬಲ ಅಂತಾರಾಷ್ಟ್ರೀಯ ವಹಿವಾಟುಗಳನ್ನು ಸಹ ನೀವು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ನಿಮ್ಮ ದೇಶವನ್ನು ಅವಲಂಬಿಸಿ, ಆನ್‌ಲೈನ್ ವಹಿವಾಟುಗಳಿಗಾಗಿ ನಿಮ್ಮ ಕಾರ್ಡ್‌ನ ಬಳಕೆಯನ್ನು ಅಧಿಕೃತಗೊಳಿಸಲು ನಿಮ್ಮ ಬ್ಯಾಂಕ್ ಅನ್ನು ನೀವು ಸಂಪರ್ಕಿಸಬೇಕಾಗಬಹುದು.

ಬೇರೆ ಪಾವತಿ ವಿಧಾನದೊಂದಿಗೆ ಪಾವತಿಸಲು ಪ್ರಯತ್ನಿಸಿ 

  • ಒಂದು ವೇಳೆ ನೀವು ಬಳಸಲು ಪ್ರಯತ್ನಿಸಿದ ಮೊದಲ ಪಾವತಿ ವಿಧಾನವು ಕಾರ್ಯನಿರ್ವಹಿಸದಿದ್ದರೆ, ನೀವು ಇನ್ನೊಂದು ವಿಧಾನವನ್ನು ಪ್ರಯತ್ನಿಸಬಹುದು. ಖರೀದಿ ಪರದೆಗೆ ಹಿಂತಿರುಗಿ ಮತ್ತು ಇನ್ನೊಂದು ಪಾವತಿ ವಿಧಾನವನ್ನು ಆಯ್ಕೆಮಾಡಿ ಅಥವಾ ಸೇರಿಸಿ.

  • YouTube ನಲ್ಲಿ ಖರೀದಿ ಮಾಡುವಾಗ ಬೂದುಬಣ್ಣದಲ್ಲಿ ಗೋಚರಿಸುವ ಪಾವತಿ ವಿಧಾನವನ್ನು ನೀವು ನೋಡಿದರೆ, ಆ ಪಾವತಿ ವಿಧಾನವು ನಿರ್ದಿಷ್ಟ ಖರೀದಿಗೆ ಮಾನ್ಯವಾಗಿರುವುದಿಲ್ಲ ಎಂದರ್ಥ. ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು ಬೇರೆ ಪಾವತಿ ವಿಧಾನವನ್ನು ಬಳಸಿ.

ಸಲಹೆ: YouTube ನಲ್ಲಿ ಖರೀದಿಸಲು ನಿಮ್ಮ ಪಾವತಿ ವಿಧಾನವನ್ನು ಬಳಸುವಾಗ ನೀವು ಇನ್ನೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು Google Play ಬ್ಯಾಲೆನ್ಸ್‌ ಮೂಲಕ ಪಾವತಿಸುವುದನ್ನು ಪರಿಗಣಿಸಬಹುದು (ಇದು ನಿಮ್ಮ ದೇಶದಲ್ಲಿ ಲಭ್ಯವಿದ್ದರೆ ಮಾತ್ರ). ಯಾವ ದೇಶಗಳಲ್ಲಿ Google Play ಬ್ಯಾಲೆನ್ಸ್ ಲಭ್ಯವಿದೆ ಎಂಬುದನ್ನು ನೀವು ಇಲ್ಲಿ ನೋಡಬಹುದು.

ಮೊದಲು, ನಿಮ್ಮ Google Play ಬ್ಯಾಲೆನ್ಸ್‌ಗೆ ಸೇರಿಸಿ ನಂತರ ನಿಮ್ಮ ಪಾವತಿ ವಿಧಾನವಾಗಿ "Google Play ಬ್ಯಾಲೆನ್ಸ್" ಆಯ್ಕೆಯನ್ನು ಆಯ್ಕೆಮಾಡಿ. ನಿಮ್ಮ Google Play ಬ್ಯಾಲೆನ್ಸ್ ಅನ್ನು ರಿಡೀಮ್ ಮಾಡಿಕೊಳ್ಳುವುದರ ಕುರಿತು ನೀವು ಮತ್ತಷ್ಟು ಮಾಹಿತಿ ಓದಬಹುದು.

ಪಾವತಿಯ ಇತರ ರೂಪಗಳಿಗೆ ಸಂಬಂಧಿಸಿದ ಸಮಸ್ಯೆಗಳು (ಮೊಬೈಲ್ ಪೂರೈಕೆದಾರರ ಬಿಲ್ಲಿಂಗ್‌ನಂತಹವು)

ನೇರವಾಗಿ ವಾಹಕಕ್ಕೆ ಬಿಲ್ಲಿಂಗ್ ಅಥವಾ ಇನ್ನೊಂದು ಬೆಂಬಲಿತ ಪಾವತಿ ವಿಧಾನದ ಮೂಲಕ ಪಾವತಿಸುವ ಸಮಸ್ಯೆಗಳ ಟ್ರಬಲ್‌ಶೂಟಿಂಗ್‌ಗಾಗಿ ಕೆಳಗೆ ನೀಡಿರುವ ನಮ್ಮ ಸಲಹೆಗಳನ್ನು ನೋಡಿ.

ಮೊಬೈಲ್ ಪೂರೈಕೆದಾರರ ಬಿಲ್ಲಿಂಗ್ (ನೇರ ವಾಹಕ ಬಿಲ್ಲಿಂಗ್)

ನೇರವಾಗಿ ವಾಹಕಕ್ಕೆ ಬಿಲ್ಲಿಂಗ್ ಕುರಿತ ಬಿಲ್ಲಿಂಗ್ ಸಮಸ್ಯೆ ಟ್ರಬಲ್‌ಶೂಟಿಂಗ್‌ಗಾಗಿ ನಮ್ಮ ಲೇಖನವನ್ನು ಓದಿ.

ಇತರ ಪಾವತಿ ವಿಧಾನಗಳು

ಕೆಲವು ಪಾವತಿ ವಿಧಾನಗಳನ್ನು ಬಳಸುವಾಗ ನೀವು ಈ ಕೆಳಗಿನ ಸಂದೇಶವನ್ನು ಸ್ವೀಕರಿಸಿರಬಹುದು: "ನಿಮ್ಮ ಖಾತೆಯಲ್ಲಿನ ಸಮಸ್ಯೆಯಿಂದಾಗಿ ನಿಮ್ಮ ಪಾವತಿಯನ್ನು ನಿರಾಕರಿಸಲಾಗಿದೆ".
ನೀವು ಈ ಸಂದೇಶವನ್ನು ನೋಡುತ್ತಿರಬಹುದು, ಏಕೆಂದರೆ:
  • ನಿಮ್ಮ ಪಾವತಿಗಳ ಪ್ರೊಫೈಲ್‌ನಲ್ಲಿ ನಾವು ಅನುಮಾನಾಸ್ಪದ ವಹಿವಾಟನ್ನು ನೋಡಿದ್ದೇವೆ.
  • ನಿಮ್ಮ ಖಾತೆಯು ವಂಚನೆಗೊಳಗಾಗದಂತೆ ರಕ್ಷಿಸಲು ನಮಗೆ ಸ್ವಲ್ಪ ಹೆಚ್ಚಿನ ಮಾಹಿತಿಯ ಅಗತ್ಯವಿದೆ.
  • EU ಕಾನೂನನ್ನು ಅನುಸರಿಸಲು ನಮಗೆ ಸ್ವಲ್ಪ ಹೆಚ್ಚಿನ ಮಾಹಿತಿಯ ಅಗತ್ಯವಿದೆ (ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತೆ).

ಖಾತೆಯ ಸಮಸ್ಯೆಗಳನ್ನು ಸರಿಪಡಿಸಲು ಯಾವುದೇ ಅಲರ್ಟ್‌ಗಳು ಅಥವಾ ವಿನಂತಿಗಳಿಗಾಗಿ Google Pay ಅನ್ನು ಪರಿಶೀಲಿಸಿ. ಉದಾಹರಣೆಗೆ, ನಿಮ್ಮ Google ಖಾತೆಯನ್ನು ಬಳಸಿಕೊಂಡು ಖರೀದಿಸುವ ಮೊದಲು Google Pay ನಲ್ಲಿ ನಿಮ್ಮ ಗುರುತನ್ನು ನೀವು ದೃಢೀಕರಿಸಬೇಕಾಗಬಹುದು. ಯಾವುದೇ ಸಕ್ರಿಯ ಅಲರ್ಟ್‌ಗಳು ಅಥವಾ ವಿನಂತಿಗಳಿಲ್ಲದಿದ್ದರೆ, ನಿಮ್ಮ ಹೆಸರು, ವಿಳಾಸ ಮತ್ತು ಪಾವತಿ ಮಾಹಿತಿಯು ಅಪ್‌ ಟು ಡೇಟ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಂದಿನ ಹಂತಗಳು

ನಿಮ್ಮ ಪಾವತಿ ಮಾಹಿತಿಯನ್ನು ಅಪ್‍ಡೇಟ್ ಮಾಡಿದ ನಂತರ, ನಿಮ್ಮ ಖರೀದಿಯನ್ನು ಮತ್ತೊಮ್ಮೆ ಪ್ರಯತ್ನಿಸಿ. ನಿಮಗೆ ಸ್ವಯಂಚಾಲಿತವಾಗಿ ರೀಚಾರ್ಜ್ ಮಾಡಲು ನಾವು ಪ್ರಯತ್ನಿಸುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16327771611144074824
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false