ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ

ಲೈವ್ ಸ್ಟ್ರೀಮ್‌ಗಳು ಮತ್ತು ಪ್ರೀಮಿಯರ್‌ಗಳನ್ನು ಬಳಸಿಕೊಂಡು YouTube ನಲ್ಲಿ ಇತರರೊಂದಿಗೆ ವೀಕ್ಷಿಸಿ ಮತ್ತು ಚಾಟ್ ಮಾಡಿ. 

  • ಲೈವ್ ಸ್ಟ್ರೀಮ್‌ಗಳು, YouTube ನಿಂದ ನೈಜ ಸಮಯದಲ್ಲಿ ಪ್ರಸಾರವಾಗುವ ಮಾಧ್ಯಮವನ್ನು ಇತರರೊಂದಿಗೆ ವೀಕ್ಷಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ.
  • ಪ್ರೀಮಿಯರ್‌ಗಳು, ನೈಜ ಸಮಯದಲ್ಲಿ ಹೊಸ ವೀಡಿಯೊವನ್ನು ಕ್ರಿಯೇಟರ್‌ಗಳು ಮತ್ತು ಅವರ ಸಮುದಾಯದೊಂದಿಗೆ ವೀಕ್ಷಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ.

ಲೈವ್ ಸ್ಟ್ರೀಮ್‌ಗಳು ಮತ್ತು ಪ್ರೀಮಿಯರ್‌ಗಳನ್ನು ಹುಡುಕಿ ಮತ್ತು ವೀಕ್ಷಿಸಿ

ಮುಂಬರುವ ಮತ್ತು ಪ್ರಸ್ತುತ ಲೈವ್ ಸ್ಟ್ರೀಮ್‌ಗಳು ಮತ್ತು ಪ್ರೀಮಿಯರ್‌ಗಳನ್ನು ಬ್ರೌಸ್ ಮಾಡಲು:

  1. YouTube.com ಗೆ ಹೋಗಿ. 
  2. ಎಡಭಾಗದಲ್ಲಿ, ಟ್ರೆಂಡಿಂಗ್ ಕ್ಲಿಕ್ ಮಾಡಿ.
  3. ಮೇಲ್ಭಾಗದಲ್ಲಿ, ಲೈವ್ ಡೆಸ್ಟಿನೇಷನ್ ಕ್ಲಿಕ್ ಮಾಡಿ.

ಸಲಹೆ: ರಿಮೈಂಡರ್ ಅನ್ನು ಸೆಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್ ಲೈವ್ ಆಗುವಾಗ ನೋಟಿಫಿಕೇಶನ್ ಅನ್ನು ಪಡೆಯಿರಿ.

ಲೈವ್ ಸ್ಟ್ರೀಮ್ ಮರುಪ್ಲೇಗಳನ್ನು ಹುಡುಕಿ ಮತ್ತು ವೀಕ್ಷಿಸಿ

ಲೈವ್ ಸ್ಟ್ರೀಮ್ ಮುಗಿದ ನಂತರ, ಚಾನಲ್ ಹೈಲೈಟ್‌ಗಳನ್ನು ಅಥವಾ ಸ್ಟ್ರೀಮ್‌ನ ಮರುಪ್ಲೇಯನ್ನು ತಮ್ಮ ಚಾನಲ್‌ನಲ್ಲಿ ಪೋಸ್ಟ್ ಮಾಡಬಹುದು. ಹೈಲೈಟ್‌ಗಳು ಮತ್ತು ಮರುಪ್ಲೇಗಳು ವೀಡಿಯೊಗಳಾಗಿ ಕಾಣಿಸುತ್ತವೆ. ಲೈವ್ ಚಾಟ್‌ನ ಮರುಪ್ಲೇಯನ್ನು ಸಹ ತೋರಿಸಲು ಚಾನಲ್ ಆಯ್ಕೆಮಾಡಬಹುದು.

ಇತರರೊಂದಿಗೆ ಚಾಟ್ ಮಾಡಿ

ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್ ಅನ್ನು ವೀಕ್ಷಿಸುತ್ತಿರುವಾಗ, ಲೈವ್ ಚಾಟ್‌ನಲ್ಲಿ ಸಂದೇಶಗಳನ್ನು ಕಳುಹಿಸುವ ಮೂಲಕ ನೀವು ಇತರರೊಂದಿಗೆ ತೊಡಗಿಸಿಕೊಳ್ಳಬಹುದು. YouTube ನ ಸಮುದಾಯ ಮಾರ್ಗಸೂಚಿಗಳು ಮತ್ತು ಲೈವ್ ಸ್ಟ್ರೀಮ್‌ಗಳಲ್ಲಿ ಸುರಕ್ಷಿತವಾಗಿರಲು ಮಾರ್ಗಸೂಚಿಗಳನ್ನು ಅನುಸರಿಸಲು ಮರೆಯದಿರಿ.

ಕೆಲವು ಲೈವ್ ಚಾಟ್‌ಗಳು ಕ್ರಿಯೇಟರ್‌ಗಳಿಗೆ ಸೂಪರ್ ಚಾಟ್ ಅಥವಾ Super Stickers ಅನ್ನು ಕಳುಹಿಸುವ ಮೂಲಕ ಅವರನ್ನು ಬೆಂಬಲಿಸುವ ಆಯ್ಕೆಯನ್ನು ನೀಡುತ್ತವೆ.

ಸೂಪರ್ ಚಾಟ್ ಮತ್ತು Super Stickers, ಲೈವ್ ಸ್ಟ್ರೀಮ್‌ಗಳು ಮತ್ತು ಪ್ರೀಮಿಯರ್‌ಗಳ ಸಮಯದಲ್ಲಿ ಪ್ರಕಾಶಮಾನವಾದ ಬಣ್ಣದ, ಪಿನ್ ಮಾಡಿದ ಚಾಟ್ ಸಂದೇಶಗಳು ಮತ್ತು ಸ್ಟಿಕ್ಕರ್‌ಗಳನ್ನು ಖರೀದಿಸಲು ವೀಕ್ಷಕರಿಗೆ ಅವಕಾಶ ಮಾಡಿಕೊಡುತ್ತವೆ.

ಲೈವ್ ಚಾಟ್ ಬಳಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಪ್ರತಿಕ್ರಿಯೆಗಳನ್ನು ನೀಡಿ

ಚಾಟ್ ಆನ್ ಆಗಿರುವ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸುವಾಗ, ಏನಾಗುತ್ತಿದೆ ಎಂಬುದರ ಕುರಿತು ತಕ್ಷಣವೇ ಪ್ರತಿಕ್ರಿಯಿಸಲು ನೀವು ಪ್ರತಿಕ್ರಿಯೆಗಳನ್ನು ಬಳಸಬಹುದು.ನೀವು ಮತ್ತು ಇತರ ವೀಕ್ಷಕರು ಅನಾಮಧೇಯ ಪ್ರತಿಕ್ರಿಯೆಗಳನ್ನು ನೋಡಬಹುದು; ಯಾವ ಬಳಕೆದಾರರು ನಿರ್ದಿಷ್ಟ ಪ್ರತಿಕ್ರಿಯೆಯನ್ನು ಬಿಟ್ಟಿದ್ದಾರೆ ಎಂಬುದನ್ನು ನೋಡಲು ಸಾಧ್ಯವಾಗುವುದಿಲ್ಲ.

ನೀವು ಹಾರ್ಟ್, ಸ್ಮೈಲಿ ಫೇಸ್, ಪಾರ್ಟಿ ಪಾಪ್ಪರ್, ಫ್ಲಶ್ಡ್ ಫೇಸ್ ಮತ್ತು “100” ಪ್ರತಿಕ್ರಿಯೆಗಳಿಂದ ಆಯ್ಕೆಮಾಡಬಹುದು.

ನೀವು ಪ್ರತಿಕ್ರಿಯೆಗಳನ್ನು ನೋಡಲು ಬಯಸದಿದ್ದರೆ, ನಿಮ್ಮ ಮೊಬೈಲ್ ಸಾಧನವನ್ನು ಹಾರಿಜಾಂಟಲ್ ಫುಲ್ ಸ್ಕ್ರೀನ್ ಮೋಡ್‌ಗೆ ಬದಲಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3696548632203131534
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false