ವೀಡಿಯೊಗಳನ್ನು ವೇಗವಾಗಿ ಹುಡುಕಿ

ನೀವು YouTube ನಲ್ಲಿ ಹುಡುಕಾಟವನ್ನು ಪ್ರಾರಂಭಿಸಿದಾಗ, ಸ್ವಯಂಚಾಲಿತ ಸಲಹೆಗಳ ಮೂಲಕ ನೀವು ಹುಡುಕುತ್ತಿರುವುದನ್ನು ಹೆಚ್ಚು ವೇಗವಾಗಿ ಕಂಡುಕೊಳ್ಳಬಹುದು. ಇವುಗಳನ್ನು ಹುಡುಕಾಟ ಮುನ್ನೋಟಗಳು ಎಂದು ಕರೆಯಲಾಗುತ್ತದೆ. ಈ ಮುನ್ನೋಟಗಳು ನೀವು ಏನನ್ನು ಹುಡುಕುತ್ತಿರುವಿರಿ ಮತ್ತು ಇತರ ಜನರು ಈಗಾಗಲೇ ಏನನ್ನು ಹುಡುಕಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಸಂಭವನೀಯ ಹುಡುಕಾಟ ಪದಗಳಿಂದ ಬಂದಿವೆ.

ಹುಡುಕಾಟ ಮುನ್ನೋಟಗಳು ಹೇಗೆ ಕಾರ್ಯನಿರ್ವಹಿಸುತ್ತವೆ

ಜನಪ್ರಿಯತೆ ಅಥವಾ ಸಾಮ್ಯತೆಯಂತಹ ಅಂಶಗಳ ಆಧಾರದ ಮೇಲೆ YouTube ಹುಡುಕಾಟ ಮುನ್ನೋಟಗಳನ್ನು ಮಾಡುತ್ತದೆ. ನೀವು ಮುನ್ನೋಟವನ್ನು ಆಯ್ಕೆಮಾಡಿದಾಗ, ನೀವು ಆಯ್ಕೆಮಾಡಿಕೊಂಡಿದ್ದಕ್ಕೆ ಸಂಬಂಧಿಸಿದ ಫಲಿತಾಂಶಗಳನ್ನು ನೀವು ಕಂಡುಕೊಳ್ಳುತ್ತೀರಿ.

ಹುಡುಕಾಟ ಮುನ್ನೋಟಗಳು ಎಲ್ಲಿಂದ ಬರುತ್ತವೆ

  • ನೀವು ನಮೂದಿಸುವ ಹುಡುಕಾಟ ಪದಗಳು.
  • ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿದ್ದರೆ ಮತ್ತು ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಆನ್ ಮಾಡಿದ್ದರೆ, ನೀವು ಮಾಡಿದ ಸಂಬಂಧಿತ ಹುಡುಕಾಟಗಳು ಅಥವಾ ನೀವು ಈ ಹಿಂದೆ ವೀಕ್ಷಿಸಿದ ವೀಡಿಯೊಗಳು.
  • ಇತರ ಜನರು ಏನನ್ನು ಹುಡುಕುತ್ತಿದ್ದಾರೆ, ಇದರಲ್ಲಿ ಟ್ರೆಂಡಿಂಗ್ ಹುಡುಕಾಟಗಳು ಸೇರಿವೆ. ಟ್ರೆಂಡಿಂಗ್ ಹುಡುಕಾಟಗಳು ನಿಮ್ಮ ಪ್ರದೇಶದಲ್ಲಿನ ಜನಪ್ರಿಯ ವಿಷಯಗಳಾಗಿವೆ, ಅವುಗಳು ದಿನದಲ್ಲಿ ಬದಲಾಗುತ್ತವೆ ಮತ್ತು ಅವುಗಳು ನಿಮ್ಮ ಹುಡುಕಾಟ ಇತಿಹಾಸಕ್ಕೆ ಸಂಬಂಧಿಸಿಲ್ಲ.
ಗಮನಿಸಿ, ಹುಡುಕಾಟ ಮುನ್ನೋಟಗಳು ನಿಮ್ಮ ಹುಡುಕಾಟಕ್ಕೆ ಉತ್ತರವಲ್ಲ. ಅವುಗಳು ನಿಮ್ಮ ಹುಡುಕಾಟ ಪದಗಳ ಕುರಿತಾದ ಇತರ ಜನರ ಅಥವಾ YouTube ನ ಸ್ಟೇಟ್‌ಮೆಂಟ್‌ಗಳಲ್ಲ.

ನಿಮಗೆ ಹುಡುಕಾಟ ಮುನ್ನೋಟಗಳು ಏಕೆ ಕಾಣಿಸುವುದಿಲ್ಲ

ಹುಡುಕಾಟ ಪದಕ್ಕೆ ಸಂಬಂಧಿಸಿದ ಯಾವುದೇ ಮುನ್ನೋಟಗಳು ನಿಮಗೆ ಕಾಣಿಸದಿದ್ದರೆ, ಅಲ್ಗಾರಿದಮ್ ಇವುಗಳನ್ನು ಕಂಡುಕೊಂಡಿರಬಹುದು:

  • ಹುಡುಕಾಟ ಪದವು ಜನಪ್ರಿಯವಾಗಿಲ್ಲದಿರಬಹುದು.
  • ಹುಡುಕಾಟ ಪದವು ತುಂಬಾ ಹೊಸತಾಗಿರಬಹುದು. ಮುನ್ನೋಟಗಳನ್ನು ನೋಡಲು ನೀವು ಕೆಲವು ದಿನಗಳು ಅಥವಾ ವಾರಗಳು ಕಾಯಬೇಕಾಗಬಹುದು.
  • ಅವಮಾನಕರ ಅಥವಾ ಸೂಕ್ಷ್ಮ ಪದವನ್ನು ಹೆಸರಿನ ಜೊತೆಗೆ ಸಂಯೋಜಿಸಲಾಗಿದೆ ಮತ್ತು ನಿಯಮವನ್ನು ಅನ್ವಯಿಸಲಾಗಿದೆ.
  • ಬಳಕೆದಾರರು ಸಲಹೆಯನ್ನು ಸೂಕ್ತವಲ್ಲ ಎಂದು ವರದಿ ಮಾಡಿದ್ದಾರೆ.
  • ಹುಡುಕಾಟ ಪದವು YouTube ನ ನೀತಿಗಳನ್ನು ಉಲ್ಲಂಘಿಸುತ್ತಿರಬಹುದು. ಆಟೋಕಂಪ್ಲೀಟ್ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ವೈಯಕ್ತಿಕಗೊಳಿಸಿದ ಮುನ್ನೋಟಗಳನ್ನು ಆಫ್ ಮಾಡಿ

ನೀವು ಸೈನ್ ಇನ್ ಮಾಡಿದ್ದರೂ ಅಥವಾ ಸೈನ್ ಔಟ್ ಮಾಡಿದ್ದರೂ ವೈಯಕ್ತಿಕಗೊಳಿಸಿದ ಮುನ್ನೋಟಗಳನ್ನು ನೀವು ನೋಡಬಹುದು. ವೈಯಕ್ತಿಕಗೊಳಿಸಿದ ಹುಡುಕಾಟ ಮುನ್ನೋಟಗಳನ್ನು ಆಫ್ ಮಾಡಲು, ನೀವು ನಿಮ್ಮ ಹುಡುಕಾಟ ಇತಿಹಾಸ ಮತ್ತು ವೀಕ್ಷಣೆ ಇತಿಹಾಸವನ್ನು ಅಳಿಸಬಹುದು ಅಥವಾ ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಆಫ್ ಮಾಡಬಹುದು. ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಆಫ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ. 

ಮುನ್ನೋಟವನ್ನು ವರದಿ ಮಾಡಿ

ಸೂಕ್ತವಲ್ಲದ ಮುನ್ನೋಟಗಳನ್ನು ತಡೆಯಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿರುವಾಗ, ನಾವು ಯಾವಾಗಲೂ ಅದನ್ನು ಸರಿಯಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ಮುನ್ನೋಟವು ಆಟೋಕಂಪ್ಲೀಟ್ ನೀತಿಗಳಲ್ಲಿ ಒಂದನ್ನು ಉಲ್ಲಂಘಿಸುತ್ತದೆ ಎಂದು ನಿಮಗೆ ಅನಿಸಿದರೆ, ಅದನ್ನು ವೆಬ್‌ನಲ್ಲಿ ಹೇಗೆ ವರದಿ ಮಾಡುವುದು ಎಂಬುದು ಇಲ್ಲಿದೆ:

  1. ಹುಡುಕಾಟ ಪಟ್ಟಿಯಲ್ಲಿ, ಮುನ್ನೋಟ ಬಾಕ್ಸ್‌ನ ಕೆಳಭಾಗದಲ್ಲಿ, ಸೂಕ್ತವಲ್ಲದ ಮುನ್ನೋಟಗಳನ್ನು ವರದಿ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  2. ನಿಮ್ಮ ಪ್ರತಿಕ್ರಿಯೆಯನ್ನು ನೀಡಿ.
  3. ಕಳುಹಿಸಿ ಎಂಬುದನ್ನು ಆಯ್ಕೆಮಾಡಿ.

ನಿಮ್ಮ ಪ್ರತಿಕ್ರಿಯೆಯನ್ನು ನಾವು ಪರಿಶೀಲಿಸುತ್ತೇವೆ, ಆದರೆ ವರದಿ ಮಾಡಲಾದ ಮುನ್ನೋಟಗಳನ್ನು ನಾವು ಸ್ವಯಂಚಾಲಿತವಾಗಿ ತೆಗೆದುಹಾಕುವುದಿಲ್ಲ.

ಮುನ್ನೋಟಕ್ಕೆ ಸಂಬಂಧಿಸಿದಂತೆ ನನಗೆ ಕಾನೂನು ಸಮಸ್ಯೆ ಇದೆ

ಕಾನೂನುಬಾಹಿರ ಎಂದು ನಿಮಗೆ ಅನಿಸುವ ಕಂಟೆಂಟ್ ಅನ್ನು ತೆಗೆದುಹಾಕುವುದಕ್ಕೆ ವಿನಂತಿಸಲು, ಈ ಫಾರ್ಮ್ ಅನ್ನು ಭರ್ತಿ ಮಾಡಿ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
982309825786548511
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false