ಲೈವ್ ಸ್ಟ್ರೀಮ್ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ

ಸರಿಯಾದ ಸ್ಟ್ರೀಮ್ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡುವುದರಿಂದ ಸರಿಯಾದ ಪ್ರೇಕ್ಷಕರನ್ನು ತಲುಪಲು ಮತ್ತು ಉತ್ತಮ ಗುಣಮಟ್ಟದ ಸ್ಟ್ರೀಮ್ ಪಡೆಯಲು ನಿಮಗೆ ಸಹಾಯ ಮಾಡಬಹುದು.

ಗಮನಿಸಿ: ಈ ಲೇಖನವು ಎನ್‌ಕೋಡರ್ ಅಥವಾ ಮೊಬೈಲ್ ಬಳಸುವ ಸ್ಟ್ರೀಮ್‌ಗಳಿಗೆ ಮಾತ್ರ ಆಗಿದೆ, ಆದರೆ ವೆಬ್‌ಕ್ಯಾಮ್ ಸ್ಟ್ರೀಮ್‌ಗಳಿಗಲ್ಲ.

ಸ್ಟ್ರೀಮ್ ಸೆಟ್ಟಿಂಗ್‌ಗಳನ್ನು ಮರುಬಳಕೆ ಮಾಡಿ

ನೀವು ಹಿಂದಿನ ಸ್ಟ್ರೀಮ್‌ನ ಅದೇ ಸೆಟ್ಟಿಂಗ್‌ಗಳನ್ನು ಬಳಸಿಕೊಂಡು ಸುಲಭವಾಗಿ ಹೊಸ ಸ್ಟ್ರೀಮ್ ಅನ್ನು ರಚಿಸಬಹುದು. ಹೊಸ ಸ್ಟ್ರೀಮ್, ಹಿಂದಿನ ಸ್ಟ್ರೀಮ್‌ನ ಮೆಟಾಡೇಟಾ, ಸೆಟ್ಟಿಂಗ್‌ಗಳು ಮತ್ತು ಸ್ಟ್ರೀಮ್ ಕೀಯನ್ನು ಕಾಪಿ ಮಾಡುತ್ತದೆ. ಸ್ಟ್ರೀಮ್ ಅನ್ನು ರಚಿಸಿದ ನಂತರ ಅದನ್ನು ಬದಲಾಯಿಸಲು ನಿಮಗೆ ಅವಕಾಶವಿರುತ್ತದೆ. ಪ್ರಾರಂಭಿಸಲು, ನಿಮ್ಮ ಸ್ಟ್ರೀಮ್ ಆಯ್ಕೆಮಾಡಿ ಮತ್ತು ಸೆಟ್ಟಿಂಗ್‌ಗಳನ್ನು ಮರುಬಳಕೆ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಮೆಟಾಡೇಟಾವನ್ನು ಎಡಿಟ್ ಮಾಡಿ

ನೀವು ಸ್ಟ್ರೀಮ್ ಅನ್ನು ರಚಿಸಿದಾಗ ಅಥವಾ ಸ್ಟ್ರೀಮ್ ಸೆಟ್ಟಿಂಗ್‌ಗಳ ಪುಟದಲ್ಲಿನ ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಅಥವಾ ನೀವು ಸ್ಟ್ರೀಮ್ ಅನ್ನು ನಿಗದಿಪಡಿಸಿದಾಗ ಈ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.

ವಿವರಗಳ ಪುಟ

ಗೌಪ್ಯತೆ

YouTube ನಲ್ಲಿ 13–17 ವರ್ಷದ ಬಳಕೆದಾರರಿಗಾಗಿ, ನಿಮ್ಮ ಡೀಫಾಲ್ಟ್ ಗೌಪ್ಯತೆ ಸೆಟ್ಟಿಂಗ್ ಅನ್ನು ಖಾಸಗಿ ಎಂಬುದಾಗಿ ಸೆಟ್ ಮಾಡಲಾಗುತ್ತದೆ. ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ನಿಮ್ಮ ಡೀಫಾಲ್ಟ್ ಗೌಪ್ಯತೆ ಸೆಟ್ಟಿಂಗ್ ಅನ್ನು ಸಾರ್ವಜನಿಕ ಎಂಬುದಕ್ಕೆ ಸೆಟ್ ಮಾಡಲಾಗುತ್ತದೆ. ಎಲ್ಲಾ ಸ್ಟ್ರೀಮರ್‌ಗಳು ತಮ್ಮ ಲೈವ್ ಸ್ಟ್ರೀಮ್ ಅನ್ನು ಸಾರ್ವಜನಿಕ, ಖಾಸಗಿ ಅಥವಾ ಪಟ್ಟಿ ಮಾಡದಿರುವುದು ಎಂಬುದಾಗಿ ಮಾಡಲು ಈ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.

ತಲ್ಲೀನಗೊಳಿಸುವ ಲೈವ್ ಸ್ಟ್ರೀಮ್‌ಗಾಗಿ ಟ್ರಾಫಿಕ್ ಮೂಲಗಳು

ಟ್ರಾಫಿಕ್ ಮೂಲಗಳ ಮೂಲಕ ವೀಕ್ಷಕರು ತಲ್ಲೀನಗೊಳಿಸುವ ಲೈವ್ ಅನ್ನು ಹೇಗೆ ಕಂಡುಕೊಳ್ಳುತ್ತಾರೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ. ವರ್ಟಿಕಲ್ ಲೈವ್ ಫೀಡ್‌ನ ಟ್ರಾಫಿಕ್ ಮೂಲ ವಿಭಾಗದಲ್ಲಿ ನಿಮ್ಮ ಪ್ರಕಟಿತ ತಲ್ಲೀನಗೊಳಿಸುವ ಲೈವ್‌ನ ಪ್ಲೇಬ್ಯಾಕ್ ಸ್ಥಳ ಮತ್ತು ನಿಮ್ಮ ವೀಕ್ಷಕರ ಮೂಲಗಳನ್ನು ನೀವು ಕಾಣಬಹುದು.

ಪ್ರಕಾರ

ಸರಿಯಾದ ಪ್ರೇಕ್ಷಕರನ್ನು ತಲುಪಲು, ಗೇಮಿಂಗ್ ಅಥವಾ ಜನರು ಮತ್ತು ಬ್ಲಾಗ್‌ಗಳಂತಹ ನಿಮ್ಮ ಸ್ಟ್ರೀಮ್ ಪ್ರಕಾರವನ್ನು ಆಯ್ಕೆಮಾಡಿ.

ಟ್ಯಾಗ್‌ಗಳು

ಟ್ಯಾಗ್‌ಗಳು ವಿವರಣಾತ್ಮಕ ಕೀವರ್ಡ್‌ಗಳಾಗಿವೆ, ವೀಕ್ಷಕರಿಗೆ ನಿಮ್ಮ ಕಂಟೆಂಟ್ ಅನ್ನು ಹುಡುಕುವುದಕ್ಕೆ ಸಹಾಯ ಮಾಡಲು ನಿಮ್ಮ ವೀಡಿಯೊದಲ್ಲಿ ನೀವು ಸೇರಿಸಬಹುದು. ನಿಮ್ಮ ವೀಡಿಯೊದ ಕಂಟೆಂಟ್ ಅನ್ನು ಸಾಮಾನ್ಯವಾಗಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ಟ್ಯಾಗ್‌ಗಳು ಉಪಯುಕ್ತವಾಗಿರಬಹುದು. ಇಲ್ಲದಿದ್ದರೆ, ನಿಮ್ಮ ವೀಡಿಯೊದ ಅನ್ವೇಷಣೆಯಲ್ಲಿ ಟ್ಯಾಗ್‌ಗಳು ಕನಿಷ್ಠ ಪಾತ್ರವನ್ನು ವಹಿಸುತ್ತವೆ.

ವೇಳಾಪಟ್ಟಿ

ನಿಮ್ಮ ಸ್ಟ್ರೀಮ್ ಅನ್ನು ನೀವು ನಂತರಕ್ಕೆ ನಿಗದಿಪಡಿಸಿದಾಗ, ಅದು ನಿಮ್ಮ ಸಬ್‌ಸ್ಕ್ರೈಬರ್‌ಗಳ ಫೀಡ್‌ನಲ್ಲಿ ಮುಂಬರಲಿರುವುದು ಎಂದು ತೋರಿಸಬಹುದು. ಸ್ಟ್ರೀಮ್ ಪ್ರಾರಂಭವಾಗುವ ಕುರಿತು ನೋಟಿಫಿಕೇಶನ್ ಅನ್ನು ಪಡೆಯಲು, ವೀಕ್ಷಕರು “ರಿಮೈಂಡರ್ ಅನ್ನು ಸೆಟ್ ಮಾಡಿ” ಎಂಬುದನ್ನು ಕ್ಲಿಕ್ ಮಾಡಬಹುದು.

ಮಾನಿಟೈಸೇಶನ್ ಪುಟ

ಆ್ಯಡ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ಮತ್ತು ಸೂಪರ್ ಚಾಟ್ ಬಳಸುವ ಮೂಲಕ ನೀವು ಲೈವ್ ಸ್ಟ್ರೀಮ್‌ಗಳಲ್ಲಿ ಆದಾಯವನ್ನು ಗಳಿಸಬಹುದು. ಕೆಲವು ಚಾನಲ್‌ಗಳು ಚಾನಲ್ ಸದಸ್ಯತ್ವಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿವೆ. ನಿಮ್ಮ ಲೈವ್ ಸ್ಟ್ರೀಮ್ ಅನ್ನು ಮಾನಿಟೈಸ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

ಹಕ್ಕುಗಳ ನಿರ್ವಹಣೆ ಪುಟ

ನಿಮ್ಮ ಲೈವ್ ಕಂಟೆಂಟ್‌ನಲ್ಲಿರುವ ಹಕ್ಕುಗಳನ್ನು ನಿರ್ವಹಿಸಿ, ಉದಾಹರಣೆಗೆ ಎಲ್ಲಿ ಮಾನಿಟೈಸ್ ಮಾಡುವುದು, ಎಲ್ಲಿ Content ID ಯನ್ನು ಆನ್/ಆಫ್ ಮಾಡುವುದು ಮತ್ತು ಎಲ್ಲಿ ಮಾಲೀಕತ್ವವನ್ನು ಸೆಟ್ ಮಾಡುವುದು. Content ID ಯನ್ನು ಆನ್/ಆಫ್ ಮಾಡಿ ಮತ್ತು ಹಕ್ಕುಗಳ ನೀತಿಯನ್ನು ಆಯ್ಕೆಮಾಡಿ. ಉದಾಹರಣೆಗೆ, ನೀವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೀಕ್ಷಕರಿಗೆ ಅಡ್ವರ್ಟೈಸ್‌ಮೆಂಟ್‌ಗಳನ್ನು ತೋರಿಸುವ ನೀತಿಯನ್ನು ಆಯ್ಕೆಮಾಡಬಹುದು, ಆದರೆ ಪ್ರಪಂಚದ ಉಳಿದ ವೀಕ್ಷಕರನ್ನು ಟ್ರ್ಯಾಕ್ ಮಾಡುತ್ತದೆ. ಹಕ್ಕುಗಳ ನಿರ್ವಹಣೆಯ ಕುರಿತು ಇನ್ನಷ್ಟು ತಿಳಿಯಿರಿ.

ಲೈವ್ ರೀಡೈರೆಕ್ಟ್ ಪುಟ

ನಿಮ್ಮ ಸ್ಟ್ರೀಮ್ ಮುಗಿದ ನಂತರ, ನಿಮ್ಮ ಪ್ರೇಕ್ಷಕರನ್ನು ಪ್ರೀಮಿಯರ್ ಅಥವಾ ಇನ್ನೊಂದು ಲೈವ್ ಸ್ಟ್ರೀಮ್‌ಗೆ ಕಳುಹಿಸಬಹುದು. ಇಲ್ಲಿವೆ ಕೆಲವು ಸಲಹೆಗಳು:

  • ನಿಮ್ಮ ಲೈವ್ ಸ್ಟ್ರೀಮ್ ಅನ್ನು ಸೆಟಪ್ ಮಾಡುವ ಮೊದಲು ನಿಮ್ಮ ಪ್ರೀಮಿಯರ್ ಅನ್ನು ಸೆಟಪ್ ಮಾಡಿ.
  • ಲೈವ್ ಸ್ಟ್ರೀಮ್ ಕೊನೆಗೊಂಡಾಗ, ಪ್ರೀಮಿಯರ್‌ಗೆ ಮರುಲೋಡ್ ಮಾಡಲು ಅವರ ಸ್ಕ್ರೀನ್‌ಗಳಿಗಾಗಿ ~2 ಸೆಕೆಂಡ್‌ಗಳ ಕಾಲ ಕಾಯಿರಿ ಎಂದು ನಿಮ್ಮ ಪ್ರೇಕ್ಷಕರಿಗೆ ಹೇಳಲು ಮರೆಯದಿರಿ.

ಕಾಮೆಂಟ್‌ಗಳು ಮತ್ತು ರೇಟಿಂಗ್‌ಗಳು

ನೀವು ಕಾಮೆಂಟ್‌ಗಳನ್ನು ಹೇಗೆ ತೋರಿಸಲು ಬಯಸುತ್ತೀರಿ ಎಂಬುದನ್ನು ಆರಿಸಿಕೊಳ್ಳಿ, ಉದಾಹರಣೆಗೆ ಪರಿಶೀಲನೆಗಾಗಿ ಕಾಮೆಂಟ್‌ಗಳನ್ನು ಹೋಲ್ಡ್ ಮಾಡುವುದು ಮತ್ತು ಅವುಗಳನ್ನು ಹೇಗೆ ವಿಂಗಡಿಸುವುದು.

ಸ್ಟ್ರೀಮ್ ಸೆಟ್ಟಿಂಗ್‌ಗಳು

ನಿಮ್ಮ ಲೈವ್ ಸ್ಟ್ರೀಮ್‌ಗೆ ಟ್ರೇಲರ್ ಸೇರಿಸಿ

ಟ್ರೇಲರ್ ಅನ್ನು ತೋರಿಸುವ ಮೂಲಕ, ನಿಮ್ಮ ನಿಗದಿಗೊಳಿಸಿದ ಲೈವ್ ಸ್ಟ್ರೀಮ್‌ನ ಕುರಿತು ನಿಮ್ಮ ಪ್ರೇಕ್ಷಕರಲ್ಲಿ ಆಸಕ್ತಿ ಮೂಡಿಸಿ. ಲೈವ್ ಸ್ಟ್ರೀಮ್ ಆರಂಭವಾಗುವ ಮೊದಲು, ನಿಮ್ಮ ಟ್ರೇಲರ್, ವೀಕ್ಷಕರಿಗಾಗಿ ವೀಕ್ಷಣಾ ಪುಟದಲ್ಲಿ ಪ್ಲೇ ಆಗುತ್ತದೆ.

ಲೈವ್ ನಿಯಂತ್ರಣ ಕೊಠಡಿಯಲ್ಲಿ “ನಿರ್ವಹಿಸಿ” ಟ್ಯಾಬ್‌ನಿಂದ ನಿಗದಿಪಡಿಸಲಾದ ಸ್ಟ್ರೀಮ್‌ಗಳಲ್ಲಿ ಟ್ರೇಲರ್‌ಗಳನ್ನು ಪ್ಲೇ ಮಾಡಬಹುದು.

  1. ಸಾಮಾನ್ಯ ಅಪ್‌ಲೋಡ್‌ನಲ್ಲಿ ನೀವು ಮಾಡುವ ಹಾಗೆ, ನಿಮ್ಮ ಟ್ರೇಲರ್ ಅನ್ನು ನಿಮ್ಮ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿ.
  2. YouTube Studio > ಲೈವ್‌ಗೆ ಹೋಗಿ ಎಂಬಲ್ಲಿಗೆ ಹೋಗಿ.
  3. ನಿಗದಿತ ಲೈವ್ ಸ್ಟ್ರೀಮ್ ಅನ್ನು ರಚಿಸಿ ಅಥವಾ “ನಿರ್ವಹಿಸಿ” ಟ್ಯಾಬ್‌ನಿಂದ ನಿಗದಿತ ಲೈವ್ ಸ್ಟ್ರೀಮ್ ಅನ್ನು ಆಯ್ಕೆಮಾಡಿ.
  4. ಮೇಲಿನ ಬಲಭಾಗದಲ್ಲಿ, ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ಕಸ್ಟಮೈಸ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  6. “ಟ್ರೇಲರ್” ಅಡಿಯಲ್ಲಿ ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
  7. ನಿಮ್ಮ ಟ್ರೇಲರ್ ವೀಡಿಯೊವನ್ನು ಆಯ್ಕೆ ಮಾಡಿ.
  8. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಅರ್ಹತೆ

ಈ ಫೀಚರ್, 1,000 ಕ್ಕಿಂತ ಹೆಚ್ಚಿನ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಮತ್ತು ಯಾವುದೇ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿಲ್ಲದಿರುವ ರಚನೆಕಾರರಿಗೆ ಲಭ್ಯವಿದೆ. 

ಅವಶ್ಯಕತೆಗಳು

  • ವೀಡಿಯೊದ ಪ್ರಕಾರ: ಯಾವುದೇ YouTube ಬೆಂಬಲಿತ ವೀಡಿಯೊ ಪ್ರಕಾರವನ್ನು ಬಳಸಿ.
  • ವೀಡಿಯೊದ ಅವಧಿ: 15 ಸೆಕೆಂಡ್‌ಗಳು – 3 ನಿಮಿಷಗಳು.
  • ದೃಶ್ಯಾನುಪಾತ ಮತ್ತು ರೆಸಲ್ಯೂಷನ್: ಪ್ರೀಮಿಯರ್ ಮಾಡುವ ವೀಡಿಯೊದಲ್ಲಿ ಬಳಸುವ ದೃಶ್ಯಾನುಪಾತ ಮತ್ತು ರೆಸಲ್ಯೂಷನ್ ಅನ್ನು ಇಲ್ಲೂ ಬಳಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.
  • ಆಡಿಯೋ ಮತ್ತು ವೀಡಿಯೊ ಹಕ್ಕುಗಳು: ಟ್ರೇಲರ್, ಬೇರೆ ಕಂಟೆಂಟ್ ಅನ್ನು ಉಲ್ಲಂಘಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಯಾವುದೇ ಕಂಟೆಂಟ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸ್ಟ್ರೀಮ್ ಕೀ

ಸ್ಟ್ರೀಮ್ ಕೀಗಳು ನಿಮ್ಮ YouTube ಸ್ಟ್ರೀಮ್‌ನ ಪಾಸ್‌ವರ್ಡ್ ಮತ್ತು ವಿಳಾಸದಂತಿವೆ. ನಿಮ್ಮ ಫೀಡ್ ಅನ್ನು ಎಲ್ಲಿಗೆ ಕಳುಹಿಸಬೇಕೆಂದು ಅವುಗಳು ನಿಮ್ಮ ಎನ್‌ಕೋಡರ್‌ಗೆ ತಿಳಿಸುತ್ತವೆ ಮತ್ತು YouTube ಅದನ್ನು ಸ್ವೀಕರಿಸಲು ಅವಕಾಶ ಮಾಡಿಕೊಡುತ್ತವೆ. ನೀವು YouTube ನಲ್ಲಿ ಸ್ಟ್ರೀಮ್ ಕೀಯನ್ನು ರಚಿಸುತ್ತೀರಿ, ತದನಂತರ ಅದನ್ನು ನಿಮ್ಮ ಎನ್‌ಕೋಡರ್‌ನಲ್ಲಿ ನಮೂದಿಸಿ.

ಅದೇ ಸ್ಟ್ರೀಮ್ ಕೀಯನ್ನು ಮರುಬಳಕೆ ಮಾಡಲು, ಕಸ್ಟಮ್ ಸ್ಟ್ರೀಮ್ ಕೀಯನ್ನು ರಚಿಸಿ.  “ಸ್ಟ್ರೀಮ್ ಕೀ ಆಯ್ಕೆಮಾಡಿ” ಅಡಿಯಲ್ಲಿ, ಹೊಸ ಸ್ಟ್ರೀಮ್ ಕೀಯನ್ನು ರಚಿಸಿ ಕ್ಲಿಕ್ ಮಾಡಿ. ನಿಮ್ಮ ಆದ್ಯತೆಯ ಸೆಟ್ಟಿಂಗ್‌ಗಳನ್ನು ನಮೂದಿಸಿ ಮತ್ತು ರಚಿಸಿ ಕ್ಲಿಕ್ ಮಾಡಿ. ನಿಮ್ಮ ಸ್ಟ್ರೀಮ್ ಕೀಯು ಸ್ಟ್ರೀಮ್ ಕೀಯ ಪಟ್ಟಿಯಲ್ಲಿ ಕಾಣಿಸುತ್ತದೆ.

ಸ್ಟ್ರೀಮ್ URL

ನಿಮ್ಮ ಸ್ಟ್ರೀಮ್ ಫೀಡ್ ಅನ್ನು ಎಲ್ಲಿಗೆ ಕಳುಹಿಸಬೇಕೆಂಬುದನ್ನು ಹೇಳಲು ಈ URL ಅನ್ನು ನಿಮ್ಮ ಎನ್‌ಕೋಡರ್‌ನಲ್ಲಿ ನಮೂದಿಸಿ.

ಸ್ಟ್ರೀಮ್ ವಿಳಂಬ

ಸ್ಟ್ರೀಮ್ ವಿಳಂಬ ಎಂದರೆ, ನಿಮ್ಮ ಎನ್‌ಕೋಡರ್ ಅಥವಾ ಕ್ಯಾಮರಾ ಈವೆಂಟ್ ಅನ್ನು ಕ್ಯಾಪ್ಚರ್ ಮಾಡುವುದು ಮತ್ತು ನಿಮ್ಮ ಸ್ಟ್ರೀಮ್‌ನಲ್ಲಿ ತೋರಿಸಲಾಗುವ ಈವೆಂಟ್ ನಡುವಿನ ವಿಳಂಬವಾಗಿದೆ. ಕಡಿಮೆ ವಿಳಂಬ ಎಂದರೆ ಹೆಚ್ಚು ಪ್ಲೇಬ್ಯಾಕ್ ಬಫರಿಂಗ್. ನಿಮ್ಮ ಪ್ರೇಕ್ಷಕರೊಂದಿಗೆ ನೀವು ಸಂವಹನ ನಡೆಸದಿದ್ದರೆ, ಕಡಿಮೆ ವಿಳಂಬವು ಅಷ್ಟೊಂದು ಮುಖ್ಯವಲ್ಲ. ಸ್ಟ್ರೀಮ್ ವಿಳಂಬದ ಬಗ್ಗೆ ಇನ್ನಷ್ಟು ತಿಳಿಯಿರಿ.

DVR ಸಕ್ರಿಯಗೊಳಿಸಿ

DVR ಅನ್ನು ಸಕ್ರಿಯಗೊಳಿಸುವುದರಿಂದ ನಿಮ್ಮ ಸ್ಟ್ರೀಮ್ ಸಮಯದಲ್ಲಿ ವೀಕ್ಷಕರಿಗೆ ವಿರಾಮಗೊಳಿಸಲು, ರಿವೈಂಡ್ ಮಾಡಲು ಮತ್ತು ಮುಂದುವರಿಸಲು ಅನುಮತಿಸುತ್ತದೆ. ಒಮ್ಮೆ ವೀಕ್ಷಕರು ಪ್ಲೇ ಮಾಡುವುದನ್ನು ಪುನರಾರಂಭಿಸಿದರೆ, ಅವರು ವಿರಾಮಗೊಳಿಸಿದ ಸ್ಥಳದಲ್ಲಿ ಈವೆಂಟ್ ಮುಂದುವರಿಯುತ್ತದೆ. ಲೈವ್ ಸ್ಟ್ರೀಮ್‌ಗಳಲ್ಲಿ DVR ಕುರಿತು ಇನ್ನಷ್ಟು ತಿಳಿಯಿರಿ.

360 ವೀಡಿಯೊ

ಲೈವ್ ಈವೆಂಟ್‌ಗಳನ್ನು ಬಳಸಿಕೊಂಡು ನೀವು 360 ಡಿಗ್ರಿಗಳಲ್ಲಿ ಸ್ಟ್ರೀಮ್ ಮಾಡಬಹುದು. ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ಒದಗಿಸಲು 360 ಡಿಗ್ರಿ ವೀಡಿಯೊಗಳು ನಿಮಗೆ ಸಹಾಯ ಮಾಡುತ್ತವೆ. YouTube, ಸದ್ಯಕ್ಕೆ 360 ವೀಡಿಯೊಗಳಿಗೆ ಸಮ ಆಯತಾಕಾರದ ಪ್ರೊಜೆಕ್ಷನ್ ಅನ್ನು ಮಾತ್ರ ಬೆಂಬಲಿಸುತ್ತದೆ. ಇಲ್ಲಿವೆ ಕೆಲವು ಸಲಹೆಗಳು:

ಕಂಪ್ಯೂಟರ್‌ಗಳಲ್ಲಿನ Chrome, Firefox, MS Edge ಮತ್ತು Opera ಬ್ರೌಸರ್‌ಗಳಲ್ಲಿ 360 ಡಿಗ್ರಿ ವೀಡಿಯೊಗಳ ಲೈವ್ ಸ್ಟ್ರೀಮಿಂಗ್ ಇಂಜೆಷನ್ ಮತ್ತು ಪ್ಲೇಬ್ಯಾಕ್ ಅನ್ನು YouTube ಬೆಂಬಲಿಸುತ್ತದೆ. YouTube ಮತ್ತು YouTube Gaming ಆ್ಯಪ್‌ಗಳಲ್ಲಿಯೂ 360 ಡಿಗ್ರಿ ಪ್ಲೇಬ್ಯಾಕ್ ಅನ್ನು ಬೆಂಬಲಿಸಲಾಗುತ್ತದೆ.

ಸ್ವಯಂ-ಪ್ರಾರಂಭ ಮತ್ತು ಸ್ವಯಂ-ನಿಲುಗಡೆ

ಈ ಸೆಟ್ಟಿಂಗ್‌ಗಳು ಆನ್ ಆಗಿರುವಾಗ, ನಿಮ್ಮ ಎನ್‌ಕೋಡರ್‌ನಿಂದ ನೀವು ಸ್ಟ್ರೀಮಿಂಗ್ ಅನ್ನು ಪ್ರಾರಂಭಿಸಬಹುದು ಅಥವಾ ನಿಲ್ಲಿಸಬಹುದು. “ಸೆಟ್ಟಿಂಗ್‌ಗಳನ್ನು ಮರುಬಳಕೆ ಮಾಡಿ” ಎಂಬುದನ್ನು ಆಯ್ಕೆಮಾಡುವ ಮೂಲಕ ಸ್ಟ್ರೀಮ್ ಅನ್ನು ನಕಲಿಸುವುದರಿಂದ ನಿಮ್ಮ ಸ್ವಯಂ-ಪ್ರಾರಂಭ ಮತ್ತು ಸ್ವಯಂ-ನಿಲುಗಡೆ ಆಯ್ಕೆಗಳನ್ನು ಸಹ ನಕಲಿಸಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
857687040017056956
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false