ಪ್ಲೇಪಟ್ಟಿಗಳ ನೀತಿ

ನಿಮ್ಮ ಸಮುದಾಯವು ಒಂದು ಸರಣಿಯ ಹಾಗೆ ವೀಕ್ಷಿಸಲು ಬಯಸಬಹುದಾದಂತಹ ವೀಡಿಯೊಗಳನ್ನು ಸಂಯೋಜಿಸುವುದಕ್ಕಾಗಿ ಪ್ಲೇಪಟ್ಟಿಗಳು ಉತ್ತಮ ಮಾರ್ಗೋಪಾಯಗಳಾಗಿವೆ. ಕೆಲವೊಮ್ಮೆ ಉದ್ದೇಶಪೂರ್ವಕವಲ್ಲದೆಯೂ, ಪ್ಲ್ಯಾಟ್‌ಫಾರ್ಮ್‌ನಲ್ಲಿ ಅನುಮತಿಯಿಲ್ಲದ ಕಂಟೆಂಟ್ ಅನ್ನು ಪ್ಲೇಪಟ್ಟಿಗಳು ಹೊಂದಿರಬಹುದು ಮತ್ತು ನಮ್ಮ ಸಮುದಾಯಕ್ಕೆ ಹಾನಿ ಉಂಟುಮಾಡಬಹುದು. ಇದರ ಅರ್ಥ, ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪ್ಲೇಪಟ್ಟಿಗಳಿಗೆ YouTube ನಲ್ಲಿ ಅನುಮತಿಯಿಲ್ಲ.

ಅದರ ಕುರಿತು ವಿಚಾರ ಮಾಡಲು ಸರಳ ಮಾರ್ಗ ಇಲ್ಲಿದೆ: ನೀವು ಪ್ಲೇಪಟ್ಟಿಗಳ ಎಲ್ಲಾ ವೀಡಿಯೊಗಳನ್ನು ಏಕೈಕ ವೀಡಿಯೊವಾಗಿ ಸಂಯೋಜಿಸುವುದಿದ್ದರೆ, ಮತ್ತು ಆ ವೀಡಿಯೊ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಿದ್ದರೆ, ಆ ಪ್ಲೇಪಟ್ಟಿಯು ಸಹ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರಬಹುದು.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡುವುದಕ್ಕಾಗಿ ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಅನೇಕ ವೀಡಿಯೊಗಳು, ಕಾಮೆಂಟ್‌ಗಳು ಅಥವಾ ಒಬ್ಬ ರಚನೆಕಾರರ ಸಂಪೂರ್ಣ ಚಾನಲ್ ನಿಮಗೆ ಕಂಡುಬಂದರೆ, ನಮ್ಮ ರಿಪೋರ್ಟಿಂಗ್ ಟೂಲ್‌ಗೆ ಭೇಟಿ ನೀಡಿ.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಪ್ಲೇಪಟ್ಟಿಗಳನ್ನು ರಚಿಸುತ್ತಿದ್ದರೆ 

ಪ್ಲೇಪಟ್ಟಿಗಳು ಈ ಕೆಳಗಿನ ಯಾವುದೇ ವಿವರಣೆಗೆ ಹೊಂದಿಕೆಯಾಗುತ್ತಿದ್ದರೆ, ಅವುಗಳನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪ್ಲೇಪಟ್ಟಿಗಳು, ಉದಾಹರಣೆಗೆ ಅಶ್ಲೀಲವಾಗಿರುವವು, ಅಥವಾ ಆಘಾತಗೊಳಿಸುವವು ಅಥವಾ ಅಸಹ್ಯ ಬರಿಸುವ ಉದ್ದೇಶವಿರುವ ಚಿತ್ರಗಳನ್ನು ಹೊಂದಿರುವ ಥಂಬ್‌ನೇಲ್‌ಗಳು, ಶೀರ್ಷಿಕೆಗಳು ಅಥವಾ ವಿವರಣೆಗಳನ್ನು ಹೊಂದಿರುವ ಪ್ಲೇಪಟ್ಟಿಗಳು.
  • ಪ್ಲೇಪಟ್ಟಿಯಲ್ಲಿರುವುದನ್ನು ಬಿಟ್ಟು, ತಾವು ಬೇರೇನನ್ನೋ ವೀಕ್ಷಿಸಲಿದ್ದೇವೆ ಎಂದು ಪ್ರೇಕ್ಷಕರು ಭಾವಿಸುವಂತೆ ದಾರಿ ತಪ್ಪಿಸುವ ಶೀರ್ಷಿಕೆಗಳು ಅಥವಾ ವಿವರಣೆಗಳನ್ನು ಹೊಂದಿರುವ ಪ್ಲೇಪಟ್ಟಿಗಳು.
  • ನಮ್ಮ ನೀತಿಗಳನ್ನು ಪ್ರತ್ಯೇಕವಾಗಿ ಉಲ್ಲಂಘಿಸದಿದ್ದರೂ, ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಹ ರೀತಿಯಲ್ಲಿ ಸಂಗ್ರಹಣೆ ಮಾಡಲಾಗಿರುವ ವೀಡಿಯೊಗಳನ್ನು ಹೊಂದಿರುವ ಪ್ಲೇಪಟ್ಟಿಗಳು. ಇವುಗಳನ್ನು ಒಳಗೊಂಡಿರುತ್ತವೆ, ಆದರೆ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ: 
    • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶವಿರುವ ನಗ್ನತೆ ಅಥವಾ ಲೈಂಗಿಕ ಥೀಮ್‌ಗಳನ್ನು ಪ್ರದರ್ಶಿಸುವ ಶೈಕ್ಷಣಿಕ ಕಂಟೆಂಟ್ 
    • ಲೈಂಗಿಕವಲ್ಲದ ಕಂಟೆಂಟ್, ಆದರೆ ಲೈಂಗಿಕ ಸಂತೋಷ ಒದಗಿಸುವ ಉದ್ದೇಶದಿಂದ ದೇಹದ ನಿರ್ದಿಷ್ಟ ಅಂಗಗಳು ಅಥವಾ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ 
    • ವೈಭವೀಕರಿಸುವ ಅಥವಾ ಅಘಾತಗೊಳಿಸುವ ಉದ್ದೇಶವಿರುವ ಸ್ಪಷ್ಟ ಹಿಂಸೆಯ ಡಾಕ್ಯುಮೆಂಟರಿ ವೀಡಿಯೊಗಳು
  • ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲಾಗಿರುವ ಅನೇಕ ವೀಡಿಯೊಗಳನ್ನು ಒಳಗೊಂಡಿರುವ ಪ್ಲೇಪಟ್ಟಿಗಳು. ನಿಮ್ಮ ಸಾರ್ವಜನಿಕ ಪ್ಲೇಪಟ್ಟಿಗಳಲ್ಲಿ ಅನೇಕ ವೀಡಿಯೊಗಳನ್ನು ತೆಗೆದುಹಾಕಲಾಗಿದೆ ಎಂಬುದನ್ನು ನೀವು ಗಮನಿಸಿದರೆ, ಸ್ವಲ್ಪ ಬಿಡುವು ಮಾಡಿಕೊಂಡು, ಆ ವೀಡಿಯೊಗಳನ್ನು ನಿಮ್ಮ ಪ್ಲೇಪಟ್ಟಿಗಳಿಂದಲೂ ತೆಗೆದುಹಾಕಿ. ನಿಮ್ಮ ಸಾರ್ವಜನಿಕ ಪ್ಲೇಪಟ್ಟಿಗಳಲ್ಲಿರುವ ಕೆಲವೊಂದು ವೀಡಿಯೊಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆ ಎಂದು ನಿಮಗೆ ಕಂಡುಬಂದರೆ, ಅವುಗಳನ್ನು ಫ್ಲ್ಯಾಗ್ ಮಾಡಿ ಮತ್ತು ನಿಮ್ಮ ಪ್ಲೇಪಟ್ಟಿಯಿಂದ ತೆಗೆದುಹಾಕಿ.
  • ಅಪ್ರಾಪ್ತರೊಂದಿಗೆ ದೈಹಿಕ, ಲೈಂಗಿಕ ಅಥವಾ ಮಾನಸಿಕ ದುರ್ವರ್ತನೆಯನ್ನು ಪ್ರದರ್ಶಿಸುವ ಪ್ಲೇಪಟ್ಟಿಗಳು.

ಗಮನಿಸಿ, ಇದು ಸಂಪೂರ್ಣ ಪಟ್ಟಿಯಲ್ಲ.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • “ಅತ್ಯುತ್ತಮ ಬಾಂಬಿಂಗ್‌ಗಳು” ಎಂಬಂತಹ ಶೀರ್ಷಿಕೆಯನ್ನು ಹೊಂದಿರುವ, ವೈಮಾನಿಕ ಬಾಂಬಿಂಗ್‌ಗಳ ಸುದ್ದಿ ಫೂಟೇಜ್ ಪ್ಲೇಪಟ್ಟಿ. 
  • ಬೌದ್ಧಿಕ ವಿಕಲತೆಗಳನ್ನು ಹೊಂದಿರುವ ಜನರನ್ನು ಪ್ರತ್ಯೇಕಿಸಲು ಕರೆ ನೀಡುವಂತಹ ಶೀರ್ಷಿಕೆಯನ್ನು ಹೊಂದಿರುವ ಪ್ಲೇಪಟ್ಟಿ.
  • ಒಬ್ಬ ವ್ಯಕ್ತಿಗೆ ಶೋಷಿಸುವುದನ್ನು ಕೇಂದ್ರಬಿಂದುವಾಗಿ ಮಾಡುವ ಅಥವಾ ಅವರ ಕಡೆಗೆ ಟ್ರಾಫಿಕ್ ಅನ್ನು ನಿರ್ದೇಶಿಸುವ ಏಕೈಕ ಉದ್ದೇಶದೊಂದಿಗೆ ಅವರ ಫೋನ್ ಸಂಖ್ಯೆ, ಮನೆಯ ವಿಳಾಸ ಅಥವಾ ಇಮೇಲ್‌ನಂತಹ ಸಾರ್ವಜನಿಕವಲ್ಲದ, ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಪೋಸ್ಟ್ ಮಾಡುವ ಪ್ಲೇಪಟ್ಟಿ.
  • ಮನೆಯ ಮೇಲೆ ನಕಲಿ ಆಕ್ರಮಣಗಳು ಅಥವಾ ದರೋಡೆಗಳಂತಹ ಅಪಾಯಕಾರಿ ಅಥವಾ ಬೆದರಿಕೆಯ ಕೀಟಲೆಗಳ ವೀಡಿಯೊಗಳನ್ನು ಸಂಗ್ರಹಿಸುವ ಪ್ಲೇಪಟ್ಟಿ.
  • “ಸೆಕ್ಸಿ" ಎಂಬಂತಹ ಶೀರ್ಷಿಕೆಯೊಂದಿಗೆ ಅಪ್ರಾಪ್ತರನ್ನು ತೋರಿಸುವ ವೀಡಿಯೊಗಳ ಪ್ಲೇಪಟ್ಟಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17473587280495009294
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false