ನಿಮ್ಮ YouTube ಚಾನಲ್‌ಗೆ ಲಿಂಕ್ ಮಾಡಲಾದ Google ಖಾತೆಯನ್ನು ಸುರಕ್ಷಿತಗೊಳಿಸಿ

ಪಾಸ್‌ಕೀಗಳು ಫಿಶಿಂಗ್‌ನಂತಹ ಬೆದರಿಕೆಗಳ ವಿರುದ್ಧ ಪ್ರಬಲವಾದ ರಕ್ಷಣೆಯನ್ನು ಒದಗಿಸುತ್ತವೆ. ಪಾಸ್‌ಕೀಗಳ ಕುರಿತು ಇನ್ನಷ್ಟು ತಿಳಿಯಿರಿ.

ಗುಣಮಟ್ಟದ ವೀಡಿಯೊಗಳನ್ನು ಮಾಡಲು ಮತ್ತು ನಿಮ್ಮ ಪ್ರೇಕ್ಷಕರಿಗೆ ಉತ್ತಮ ಅನುಭವವನ್ನು ಒದಗಿಸಲು ನೀವು ಶ್ರಮಿಸುತ್ತೀರಿ ಎಂದು ನಮಗೆ ತಿಳಿದಿದೆ. ನಿಮ್ಮ ಖಾತೆ ಅಥವಾ ಚಾನಲ್ ಅನ್ನು ಹ್ಯಾಕ್ ಮಾಡುವುದರಿಂದ, ಹೈಜಾಕ್ ಮಾಡುವುದರಿಂದ ಅಥವಾ ರಾಜಿ ಮಾಡಿಕೊಳ್ಳುವಿಕೆಯಿಂದ ತಡೆಯಲು ನಿಮ್ಮ YouTube ಚಾನಲ್‌ಗೆ ಕನೆಕ್ಟ್ ಆಗಿರುವ Google ಖಾತೆಯನ್ನು ರಕ್ಷಿಸುವುದು ಮುಖ್ಯವಾಗಿರುತ್ತದೆ.

ನೀವು ಚಾನಲ್‌ನ ಮಾಲೀಕರಾಗಿದ್ದರೆ, ನಿಮ್ಮ ಚಾನಲ್‌ಗೆ ಆ್ಯಕ್ಸೆಸ್ ಹೊಂದಿರುವ ಯಾರೊಂದಿಗಾದರೂ ನೀವು ಖಾತೆಯ ಸುರಕ್ಷತೆಯ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು ಮುಖ್ಯವಾದ ಸಂಗತಿಯಾಗಿದೆ. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಇತರ ಸಲಹೆಗಳನ್ನು ತಿಳಿದುಕೊಳ್ಳಿ.

ನಿಮ್ಮ YouTube ಚಾನಲ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ನೀವು ಭಾವಿಸುತ್ತೀರಾ? ಅದನ್ನು ರಿಕವರ್ ಮಾಡುವುದು ಮತ್ತು ಸುರಕ್ಷಿತಗೊಳಿಸುವುದು ಹೇಗೆ ಎಂದು ತಿಳಿಯಿರಿ.
ಇತರ ಕಾರಣಗಳಿಗಾಗಿ (ಚಾನೆಲ್ ಹ್ಯಾಕ್ ಅಲ್ಲ) ನಿಮ್ಮ Google ಖಾತೆಗೆ ನೀವು ಆ್ಯಕ್ಸೆಸ್ ಅನ್ನು ಕಳೆದುಕೊಂಡಿದ್ದೀರಾ? ಆ್ಯಕ್ಸೆಸ್ ಅನ್ನು ಮರಳಿ ಪಡೆಯುವುದು ಹೇಗೆ ಎಂದು ತಿಳಿಯಿರಿ.

Secure Your YouTube Account

ನಿಮ್ಮ Google ಖಾತೆಯನ್ನು ಸುರಕ್ಷಿತಗೊಳಿಸಿ

ವೈಯಕ್ತೀಕರಿಸಿದ ಭದ್ರತಾ ಶಿಫಾರಸುಗಳಿಗಾಗಿ ಭದ್ರತಾ ಪರಿಶೀಲನೆ ಪುಟಕ್ಕೆ ಭೇಟಿ ನೀಡಿ ಮತ್ತು ಇನ್ನು ಮುಂದೆ ನಿಮ್ಮ ಖಾತೆಯನ್ನು ಉತ್ತಮವಾಗಿ ರಕ್ಷಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

ಮಾಲ್‌ವೇರ್ ಅನ್ನು ತಡೆಗಟ್ಟಿ

ಮಾಲ್‌ವೇರ್ ಒಂದು ರೀತಿಯ ಸಾಫ್ಟ್‌ವೇರ್ ಆಗಿದ್ದು, ಅದು ನಿಮ್ಮ ಖಾತೆಗೆ ಆ್ಯಕ್ಸೆಸ್ ಅನ್ನು ಪಡೆಯಬಹುದು, ನಿಮ್ಮ ಚಟುವಟಿಕೆಯ ಮೇಲೆ ಕಣ್ಣಿಡಬಹುದು ಮತ್ತು ಕುಕೀಗಳು ಅಥವಾ ಪಾಸ್‌ವರ್ಡ್‌ಗಳಂತಹ ವೈಯಕ್ತಿಕ ಡೇಟಾವನ್ನು ಕದಿಯಬಹುದು. ಮಾಲ್‌ವೇರ್‌ ಅನ್ನು ತಡೆಗಟ್ಟಲು, ನಾವು ನಿಮಗೆ ಇವುಗಳನ್ನು ಶಿಫಾರಸು ಮಾಡುತ್ತೇವೆ:

  • ಆ್ಯಂಟಿವೈರಸ್ ಸಾಫ್ಟ್‌ವೇರ್ ಬಳಸಿ 
  • Chrome ನಲ್ಲಿ ಪ್ರಾಯೋಜಕರು ಅಥವಾ ಇತರ ಬಳಕೆದಾರರಿಂದ ಫೈಲ್‌ಗಳನ್ನು ಕ್ಲಿಕ್ ಅಥವಾ ಡೌನ್‌ಲೋಡ್ ಮಾಡುವ ಮೊದಲು ವರ್ಧಿತ ಸುರಕ್ಷಿತ ಬ್ರೌಸಿಂಗ್ ಅನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ

ವರ್ಧಿತ ಸುರಕ್ಷಿತ ಬ್ರೌಸಿಂಗ್‌ ಆನ್ ಮಾಡಿ

ನಿಮ್ಮ ಖಾತೆಗಾಗಿ ವರ್ಧಿತ ಸುರಕ್ಷಿತ ಬ್ರೌಸಿಂಗ್‌ ಅನ್ನು ಸಕ್ರಿಯಗೊಳಿಸುವುದು ಅನುಮಾನಾಸ್ಪದ ಲಿಂಕ್‌ಗಳನ್ನು ಪತ್ತೆಹಚ್ಚುವ ವಿಧಾನಗಳಲ್ಲಿ ಒಂದಾಗಿದೆ. ಅಪಾಯಕಾರಿ ವೆಬ್‌ಸೈಟ್‌ಗಳು, ಡೌನ್‌ಲೋಡ್‌ಗಳು ಮತ್ತು ಎಕ್ಸ್‌ಟೆನ್ಶನ್‌ಗಳ ವಿರುದ್ಧ ವೇಗವಾದ, ಪೂರ್ವಭಾವಿ ರಕ್ಷಣೆಯನ್ನು ಒದಗಿಸಲು ವರ್ಧಿತ ಸುರಕ್ಷಿತ ಬ್ರೌಸಿಂಗ್ ಹಿನ್ನೆಲೆಯಲ್ಲಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.

Google Chrome ಅನ್ನು ಬಳಸುವಾಗ ಎಲ್ಲಾ Google ಉತ್ಪನ್ನಗಳಾದ್ಯಂತ ನಿಮ್ಮನ್ನು ಸುರಕ್ಷಿತವಾಗಿರಿಸಲು ವರ್ಧಿತ ಸುರಕ್ಷಿತ ಬ್ರೌಸಿಂಗ್ ನೈಜ-ಸಮಯದ ಭದ್ರತಾ ಸ್ಕ್ಯಾನಿಂಗ್ ಅನ್ನು ಒದಗಿಸುತ್ತದೆ.

  1. ನಿಮ್ಮ Google ಖಾತೆಗೆ ಹೋಗಿ.
  2. ಎಡಭಾಗದಲ್ಲಿರುವ, ಭದ್ರತೆ ಅನ್ನು ಆಯ್ಕೆ ಮಾಡಿ.
  3. "ನಿಮ್ಮ ಖಾತೆಗಾಗಿ ವರ್ಧಿತ ಸುರಕ್ಷಿತ ಬ್ರೌಸಿಂಗ್" ಇರುವ ಜಾಗಕ್ಕೆ ಸ್ಕ್ರಾಲ್ ಮಾಡಿ.
  4. ವರ್ಧಿತ ಸುರಕ್ಷಿತ ಬ್ರೌಸಿಂಗ್‌ ಆಯ್ಕೆ ಮಾಡಿ.
  5. ವರ್ಧಿತ ಸುರಕ್ಷಿತ ಬ್ರೌಸಿಂಗ್ ಅನ್ನು ಆನ್ ಅಥವಾ ಆಫ್ ಮಾಡಿ.

ವರ್ಧಿತ ಸುರಕ್ಷಿತ ಬ್ರೌಸಿಂಗ್ ಕುರಿತು ಇನ್ನಷ್ಟು ತಿಳಿಯಿರಿ.

2-ಹಂತದ ದೃಢೀಕರಣವನ್ನು ಆನ್ ಮಾಡಿ ಮತ್ತು ಬ್ಯಾಕಪ್ ಕೋಡ್‌ಗಳನ್ನು ಪಡೆಯಿರಿ

2-ಹಂತದ ಪರಿಶೀಲನೆಯು ಹ್ಯಾಕರ್ ನಿಮ್ಮ ಪಾಸ್‌ವರ್ಡ್ ಅನ್ನು ಕದ್ದರೂ ಸಹ, ನಿಮ್ಮ ಖಾತೆಗೆ ಆ್ಯಕ್ಸೆಸ್ ಮಾಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಈ ಆಯ್ಕೆಗಳಿಂದ ಆರಿಸಿ:
ಭದ್ರತಾ ಕೀಗಳು ಮತ್ತು ಪಾಸ್‌ಕೀಗಳು ಸದೃಢವಾದ ದೃಢೀಕರಣ ಆಯ್ಕೆಗಳಾಗಿವೆ, ಏಕೆಂದರೆ ಅವು ಪಠ್ಯ ಸಂದೇಶ ಕೋಡ್‌ಗಳನ್ನು ಬಳಸುವ ಫಿಶಿಂಗ್ ತಂತ್ರಗಳನ್ನು ತಡೆಯಲು ಸಹಾಯ ಮಾಡುತ್ತವೆ.

ಬ್ಯಾಕಪ್ ಕೋಡ್‌ಗಳ ಗುಂಪನ್ನು ರಚಿಸಿ

ನಿಮ್ಮ ಖಾತೆಯ ಮಾಲೀಕತ್ವವನ್ನು ನೀವು ಹೊಂದಿದ್ದೀರಿ ಎಂಬುದನ್ನು ಸಾಬೀತುಪಡಿಸಲು ಬ್ಯಾಕಪ್ ಕೋಡ್‌ಗಳು ಸಹಾಯ ಮಾಡುತ್ತವೆ. ನಿಮ್ಮ ಫೋನ್, ಕಂಪ್ಯೂಟರ್ ಅನ್ನು ನೀವು ಕಳೆದುಕೊಂಡರೆ ಅಥವಾ ನಿಮ್ಮ ಸಾಮಾನ್ಯ 2-ಹಂತದ ದೃಢೀಕರಣ ವಿಧಾನವನ್ನು ಬಳಸಲು ಸಾಧ್ಯವಾಗದಿದ್ದರೆ ನಿಮ್ಮ ಖಾತೆಗೆ ಹಿಂತಿರುಗಲು ಅವು ಒಂದು ಮಾರ್ಗವಾಗಿರುತ್ತದೆ. ನಿಮ್ಮ ಬ್ಯಾಕಪ್ ಕೋಡ್‌ಗಳನ್ನು ಎಲ್ಲೋ ಸುರಕ್ಷಿತವಾಗಿ ಸಂಗ್ರಹಿಸಲು, ನೀವು ಅವುಗಳ ಕಾಪಿಯನ್ನು ಮುದ್ರಿಸಬಹುದು.

  1. ನಿಮ್ಮ Google ಖಾತೆಗೆ ಹೋಗಿ.
  2. ಎಡಭಾಗದಲ್ಲಿರುವ, ಭದ್ರತೆ  ಅನ್ನು ಕ್ಲಿಕ್ ಮಾಡಿ.
  3. "ನೀವು Google ಗೆ ಹೇಗೆ ಸೈನ್ ಇನ್ ಮಾಡುತ್ತೀರಿ" ಅಡಿಯಲ್ಲಿರುವ, "2-ಹಂತದ ದೃಢೀಕರಣವನ್ನು ಕ್ಲಿಕ್ ಮಾಡಿ" ನಂತರ. ನೀವು ಸೈನ್ ಇನ್ ಮಾಡಬೇಕಾಗಬಹುದು.
  4. "ಬ್ಯಾಕಪ್ ಕೋಡ್‌ಗಳು" ಅಡಿಯಲ್ಲಿರುವ, ಮುಂದುವರಿಸಿ ಅನ್ನು ಕ್ಲಿಕ್ ಮಾಡಿ ನಂತರ.
  5. ಇಲ್ಲಿ ನೀವು ಹೀಗೆ ಮಾಡಬಹುದು:
    • ಬ್ಯಾಕಪ್ ಕೋಡ್‌ಗಳನ್ನು ಪಡೆಯಿರಿ: ಬ್ಯಾಕಪ್ ಕೋಡ್‌ಗಳನ್ನು ಸೇರಿಸಲು, ಬ್ಯಾಕಪ್ ಕೋಡ್‌ಗಳನ್ನು ಪಡೆಯಿರಿ ಅನ್ನು ಕ್ಲಿಕ್ ಮಾಡಿ .
    • ನಿಮ್ಮ ಬ್ಯಾಕಪ್ ಕೋಡ್‌ಗಳನ್ನು ಮುದ್ರಿಸಿ: ಕೋಡ್‌ಗಳನ್ನು ಮುದ್ರಿಸಿ ಅನ್ನು ಕ್ಲಿಕ್ ಮಾಡಿ Print Icon.
      ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳಿ.

ಬ್ಯಾಕಪ್ ಕೋಡ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಬಲವಾದ ಪಾಸ್‌ವರ್ಡ್ ಅನ್ನು ಸೆಟ್ ಅಪ್ ಮಾಡಿ ಮತ್ತು ಪಾಸ್‌ಕೀಗಳನ್ನು ರಚಿಸಿ

ಸದೃಢವಾದ ಪಾಸ್‌ವರ್ಡ್ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಖಾತೆಗೆ ಬೇರೊಬ್ಬರು ಆ್ಯಕ್ಸೆಸ್ ಮಾಡುವುದನ್ನು ತಡೆಯುತ್ತದೆ. ನಿಮ್ಮ Google ಖಾತೆಗೆ ಬಲವಾದ, ಅನನ್ಯವಾದ ಪಾಸ್‌ವರ್ಡ್‌ಗಳನ್ನು ರಚಿಸಲು ಮತ್ತು ಸೇವ್ ಮಾಡಲು Google Password Manager ಅನ್ನು ಬಳಸಿ. ಆದ್ದರಿಂದ ನೀವು ಅವುಗಳನ್ನು ನೆನಪಿಟ್ಟುಕೊಳ್ಳಬೇಕಾಗಿಲ್ಲ.

ಸದೃಢವಾದ ಮತ್ತು ಸಂಕೀರ್ಣವಾದ ಪಾಸ್‌ವರ್ಡ್ ಅನ್ನು ರಚಿಸಿ: 8 ಅಥವಾ ಹೆಚ್ಚಿನ ಅಕ್ಷರಗಳನ್ನು ಬಳಸಿ. ಇದು ಯಾವುದೇ ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳ ಸಂಯೋಜನೆಯಾಗಿರಬಹುದು.

ನಿಮ್ಮ ಪಾಸ್‌ವರ್ಡ್ ಅನ್ನು ವಿಶಿಷ್ಟವಾಗಿಸಿ: ಇತರ ಸೈಟ್‌ಗಳಲ್ಲಿ ನಿಮ್ಮ YouTube ಖಾತೆಯ ಪಾಸ್‌ವರ್ಡ್ ಅನ್ನು ಬಳಸಬೇಡಿ. ಮತ್ತೊಂದು ಸೈಟ್ ಹ್ಯಾಕ್ ಆದರೆ, ನಿಮ್ಮ YouTube ಖಾತೆಯನ್ನು ಪ್ರವೇಶಿಸಲು ಪಾಸ್‌ವರ್ಡ್ ಅನ್ನು ಬಳಸಬಹುದು.

ವೈಯಕ್ತಿಕ ಮಾಹಿತಿ ಮತ್ತು ಸಾಮಾನ್ಯ ಪದಗಳನ್ನು ತಪ್ಪಿಸಿ: ನಿಮ್ಮ ಜನ್ಮದಿನಗಳು, "ಪಾಸ್‌ವರ್ಡ್" ನಂತಹ ಸಾಮಾನ್ಯ ಪದಗಳು ಅಥವಾ "1234" ನಂತಹ ಸಾಮಾನ್ಯ ಪ್ಯಾಟರ್ನ್‌ಗಳಂತಹ ವೈಯಕ್ತಿಕ ಮಾಹಿತಿಯನ್ನು ಬಳಸಬೇಡಿ.

ಪಾಸ್‌ಕೀಗಳನ್ನು ರಚಿಸಿ

ಪಾಸ್‌ಕೀಗಳು ಎಂಬುದು ಪಾಸ್‌ವರ್ಡ್‌ಗಳಿಗೆ ಬದಲಿಯಾಗಿರುವ ಸರಳ ಮತ್ತು ಸುರಕ್ಷಿತ ವಿಧಾನವಾಗಿದೆ. ಪಾಸ್‌ಕೀ ಮೂಲಕ, ಪಿನ್‌ನ ರೀತಿಯಲ್ಲಿಯೇ ನಿಮ್ಮ ಫಿಂಗರ್‌ಪ್ರಿಂಟ್, ಫೇಸ್ ಸ್ಕ್ಯಾನ್ ಅಥವಾ ಡಿವೈಸ್ ಸ್ಕ್ರೀನ್ ಲಾಕ್ ಮೂಲಕ ನಿಮ್ಮ Google ಖಾತೆಗೆ ಸೈನ್ ಇನ್ ಮಾಡಬಹುದು.

ಪಾಸ್‌ಕೀಗಳು ಫಿಶಿಂಗ್‌ನಂತಹ ಬೆದರಿಕೆಗಳ ವಿರುದ್ಧ ಪ್ರಬಲವಾದ ರಕ್ಷಣೆಯನ್ನು ಒದಗಿಸುತ್ತವೆ. ಒಮ್ಮೆ ನೀವು ಪಾಸ್‌ಕೀಯನ್ನು ರಚಿಸಿದ ನಂತರ, ನಿಮ್ಮ Google ಖಾತೆಗೆ, ಹಾಗೆಯೇ ಕೆಲವು ಥರ್ಡ್ ಪಾರ್ಟಿ ಆ್ಯಪ್‌‌ಗಳಿಗೆ ಅಥವಾ ಸೇವೆಗಳಿಗೆ ಸುಲಭವಾಗಿ ಸೈನ್ ಇನ್ ಮಾಡಲು ಮತ್ತು ನೀವು ಸೂಕ್ಷ್ಮ ಬದಲಾವಣೆಗಳನ್ನು ಮಾಡಿದಾಗ ಅದು ನೀವೇ ಎಂದು ದೃಢೀಕರಿಸಲು, ನೀವು ಅದನ್ನು ಬಳಸಬಹುದು.

ಪಾಸ್‌ಕೀಯನ್ನು ಸೆಟ್ ಮಾಡಲು, ನೀವು ನಿಮ್ಮ Google ಖಾತೆಗೆ ಸೈನ್ ಇನ್ ಮಾಡಬೇಕಾಗಬಹುದು ಅಥವಾ ಇದು ನಿಜವಾಗಿಯೂ ನೀವೇ ಎಂದು ದೃಢೀಕರಿಸಬೇಕಾಗಬಹುದು.

ನೀವು ಬಳಸುತ್ತಿರುವ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಪಾಸ್‌ಕೀಯನ್ನು ರಚಿಸಿ

  1. https://myaccount.google.com/signinoptions/passkeys ಗೆ ಹೋಗಿ.

  2. ಪಾಸ್‌ಕೀಗಳನ್ನು ರಚಿಸಿ ನಂತರ ಮುಂದುವರಿಸಿ ಅನ್ನು ಟ್ಯಾಪ್ ಮಾಡಿ.
    • ನಿಮ್ಮ ಸಾಧನವನ್ನು ಅನ್‌ಲಾಕ್ ಮಾಡುವ ಅಗತ್ಯವಿದೆ.

ಬಹು ಸಾಧನಗಳಲ್ಲಿ ಪಾಸ್‌ಕೀಗಳನ್ನು ರಚಿಸಲು, ಆ ಸಾಧನಗಳಲ್ಲಿ ಈ ಹಂತಗಳನ್ನು ಪುನರಾವರ್ತಿಸಿ.

ಪಾಸ್‌ಕೀಗಳ ಕುರಿತು ಇನ್ನಷ್ಟು ತಿಳಿಯಿರಿ.

ಖಾತೆ ಮರುಪ್ರಾಪ್ತಿ ತುರ್ತು ಪ್ಲಾನ್ ಅನ್ನು ರಚಿಸಿ

ನಿಮ್ಮ ಮರುಪ್ರಾಪ್ತಿ ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಇದಕ್ಕಾಗಿ ಬಳಸಬಹುದು:
  • ನಿಮ್ಮ ಅನುಮತಿಯಿಲ್ಲದೆ ನಿಮ್ಮ ಖಾತೆಯನ್ನು ಬಳಸದಂತೆ ಯಾರನ್ನಾದರೂ ನಿರ್ಬಂಧಿಸಬಹುದು
  • ನಿಮ್ಮ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ, ನಿಮಗೆ ಎಚ್ಚರಿಕೆ ನೀಡಬಹುದು
  • ನೀವು ಎಂದಾದರೂ ಲಾಕ್ ಔಟ್ ಆಗಿದ್ದರೆ, ನಿಮ್ಮ ಖಾತೆಯನ್ನು ಮರುಪಡೆಯಬಹುದು
ನಿಮ್ಮ ಮರುಪ್ರಾಪ್ತಿ ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಅಪ್‌ಡೇಟ್‌ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14807575494836107603
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false