ನಿಮ್ಮ ಕಂಟೆಂಟ್ ಮೇಲಿನ ನಿರ್ಬಂಧಗಳನ್ನು ನಿರ್ವಹಿಸಿ

ನಿರ್ಬಂಧಗಳು ವೀಕ್ಷಕರು ನಿಮ್ಮ ವೀಡಿಯೊಗಳನ್ನು ವೀಕ್ಷಿಸುವುದನ್ನು ಅಥವಾ ನಿಮ್ಮ ಸಮುದಾಯದ ಪೋಸ್ಟ್‌ಗಳನ್ನು ನೋಡುವುದನ್ನು ತಡೆಯಬಹುದು. ನಿರ್ಬಂಧಗಳು ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದಾಗ ಮಾನಿಟೈಸೇಶನ್ ಮೇಲೆ ಪ್ರಭಾವ ಬೀರಬಹುದು. ಉದಾಹರಣೆಗೆ, ವೀಡಿಯೊ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವಲ್ಲದಿರಬಹುದು ಅಥವಾ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ಸಮಸ್ಯೆಯೊಂದು ಬಾಕಿಯಿರಬಹುದು.

ನಿಮ್ಮ ವೀಡಿಯೊದ ಮೇಲಿನ ನಿರ್ಬಂಧಗಳನ್ನು ಪರಿಶೀಲಿಸಿ

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ಅನ್ನು ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
  3. ವೀಡಿಯೊಗಳು ಟ್ಯಾಬ್‌ನಲ್ಲಿ, ನಿರ್ಬಂಧವನ್ನು ಹೊಂದಿರುವ ವೀಡಿಯೊವನ್ನು ಹುಡುಕಿ ಮತ್ತು ಆಯ್ಕೆಮಾಡಿ. ನಿಮ್ಮ ವೀಡಿಯೊಗಳನ್ನು ಫಿಲ್ಟರ್ ಮಾಡಲು, ಫಿಲ್ಟರ್ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ ಮತ್ತು ನಿರ್ಬಂಧಗಳ ಅಡಿಯಲ್ಲಿ ನಿಮ್ಮ ಫಿಲ್ಟರ್(ಗಳನ್ನು) ಆಯ್ಕೆಮಾಡಿ:
    1. ಮಕ್ಕಳಿಗಾಗಿ ರಚಿಸಲಾಗಿದೆ: ಮಕ್ಕಳಿಗಾಗಿ ರಚಿಸಲಾಗಿದೆ (ನೀವು ಸೆಟ್ ಮಾಡಿರುವುದು), ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾಗಿದೆ (YouTube ಮೂಲಕ), ಮಕ್ಕಳಿಗಾಗಿ ರಚಿಸಿಲ್ಲ ಅಥವಾ ಸೆಟ್ ಮಾಡಿಲ್ಲ.
  4. ವಿವರಗಳು ಪುಟದಲ್ಲಿ, ನಿಮ್ಮ ವೀಡಿಯೊ ನಿರ್ಬಂಧಗಳ ಸಾರಾಂಶವನ್ನು ಪಡೆಯಲು ನಿರ್ಬಂಧಗಳು ಎಂಬುದನ್ನು ಆಯ್ಕೆಮಾಡಿ ಮತ್ತು ಸ್ಥಿತಿಯನ್ನು ಪರಿಶೀಲಿಸಿ.
    1. ವಯಸ್ಸಿನ ನಿರ್ಬಂಧ ಮತ್ತು ಜಾಹೀರಾತು ಸೂಕ್ತತೆಗಾಗಿ, ನೀವು ಮೇಲ್ಮನವಿಯನ್ನು ಸಲ್ಲಿಸಬಹುದು. ಕೃತಿಸ್ವಾಮ್ಯ ಕ್ಲೇಮ್‌ಗಳಿಗಾಗಿ, ನೀವು ಕ್ಲೇಮ್‌ ಕುರಿತು ವಿವಾದವನ್ನು ಸಲ್ಲಿಸಬಹುದು.

ನಿರ್ಬಂಧಗಳ ಪ್ರಕಾರಗಳು

ಕೃತಿಸ್ವಾಮ್ಯ

ಕೃತಿಸ್ವಾಮ್ಯ ಸಂರಕ್ಷಿತ ಕಂಟೆಂಟ್ ಅನ್ನು ಹೊಂದಿರುವ ವೀಡಿಯೊವನ್ನು ನೀವು ಅಪ್‌ಲೋಡ್ ಮಾಡಿದರೆ, ನಿಮ್ಮ ವೀಡಿಯೊ Content ID ಕ್ಲೈಮ್ ಅಥವಾ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಪಡೆಯಬಹುದು.

ನಿಯಮಗಳು ಮತ್ತು ನೀತಿಗಳು

ನಿಮ್ಮ ವೀಡಿಯೊ ಅಥವಾ ಪೋಸ್ಟ್, ಬಳಕೆಯ ನಿಯಮಗಳ ಸಮಸ್ಯೆಯಿಂದಾಗಿ YouTube ತೆಗೆದುಹಾಕಿದರೆ, ಸೀಮಿತಗೊಳಿಸಿದರೆ, ಅಥವಾ ಖಾಸಗಿಯಾಗಿಸಿದರೆ “ನಿರ್ಬಂಧಗಳು” ಕಾಲಮ್‌ನಲ್ಲಿ “ಬಳಕೆಯ ನಿಯಮಗಳು” ಎಂಬುದನ್ನು ನೀವು ನೋಡುತ್ತೀರಿ. ಉದಾಹರಣೆಗೆ, ಈ ಕೆಳಗಿನ ಸಂದರ್ಭಗಳಲ್ಲಿ ನೀವು ಬಳಕೆಯ ನಿಯಮಗಳ ಸಮಸ್ಯೆಯನ್ನು ನೋಡಬಹುದು:

ವಯಸ್ಸಿನ ನಿರ್ಬಂಧಗಳು

ನಿಮ್ಮ ವೀಡಿಯೊ 18 ವರ್ಷದೊಳಗಿನ ವೀಕ್ಷಕರಿಗೆ ಸೂಕ್ತವಲ್ಲ ಎಂದಾದರೆ, ಅದನ್ನು ವಯೋಮಾನ ನಿರ್ಬಂಧಿತ ಕಂಟೆಂಟ್ ಎಂಬುದಾಗಿ ಪರಿಗಣಿಸಬಹುದು.

ಮಕ್ಕಳಿಗಾಗಿ ರಚಿಸಲಾಗಿದೆ

ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾಗಿದ್ದರೆ, ಅನ್ವಯಿಸುವ ಕಾನೂನುಗಳನ್ನು ಅನುಸರಿಸುವುದಕ್ಕಾಗಿ ನಾವು ಕೆಲವೊಂದು ಫೀಚರ್‌ಗಳನ್ನು ನಿರ್ಬಂಧಿಸುತ್ತೇವೆ.

ಜಾಹೀರಾತಿಗಾಗಿ ಸೂಕ್ತತೆ

ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ ಮತ್ತು ನಿಮ್ಮ ಕಂಟೆಂಟ್ ಹೆಚ್ಚಿನ ಜಾಹೀರಾತುದಾರರಿಗೆ ಅರ್ಹವಲ್ಲ ಎಂದು ಗುರುತಿಸಿದರೆ, ನಿಮ್ಮ ವೀಡಿಯೊದಲ್ಲಿ ಆ್ಯಡ್‌ಗಳನ್ನು ಸೀಮಿತಗೊಳಿಸಬಹುದು ಅಥವಾ ರನ್ ಮಾಡದಿರಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15028518124307234019
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false