ಕಾಮೆಂಟ್ ಸೆಟ್ಟಿಂಗ್‌ಗಳ ಕುರಿತು ತಿಳಿದುಕೊಳ್ಳಿ

ಕೆಲವು ಕಾಮೆಂಟ್‌ಗಳನ್ನು ನಿಮ್ಮ ವೀಡಿಯೊ ಅಥವಾ ಚಾನಲ್‌ನಲ್ಲಿ ತೋರಿಸುವ ಮೊದಲು, ನೀವು ಅವುಗಳನ್ನು ಪರಿಶೀಲನೆಗಾಗಿ ತಡೆಹಿಡಿಯಬಹುದು. ನಿಮ್ಮ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಹೇಗೆ ಎಂದು ತಿಳಿದುಕೊಳ್ಳಿ.

ವೀಡಿಯೊಗಳಿಗೆ ಸಂಬಂಧಿಸಿದ ಕಾಮೆಂಟ್ ಸೆಟ್ಟಿಂಗ್‌ಗಳು

ನಿರ್ದಿಷ್ಟ ವೀಡಿಯೊಗೆ ಸಂಬಂಧಿಸಿದ ಕಾಮೆಂಟ್‌ಗಳನ್ನು ಆನ್ ಮಾಡುವ, ವಿರಾಮಗೊಳಿಸುವ ಅಥವಾ ಅವುಗಳನ್ನು ಆಫ್ ಮಾಡುವ ಆಯ್ಕೆಯನ್ನು ನೀವು ಮಾಡಬಹುದು. ಕಾಮೆಂಟ್‌ಗಳನ್ನು ಆನ್ ಮಾಡಿದಾಗ, ಯಾವ ಕಾಮೆಂಟ್‌ಗಳನ್ನು ಪರಿಶೀಲನೆಗಾಗಿ ತಡೆಹಿಡಿಯಬೇಕು ಎಂಬುದನ್ನು ನೀವು ನಿರ್ಧರಿಸಬಹುದು.

ಆನ್ ಮಾಡಿದಾಗ

ಕಾಮೆಂಟ್‌ಗಳನ್ನು ಆನ್ ಮಾಡುವ ಆಯ್ಕೆಯನ್ನು ನೀವು ಮಾಡಿದಾಗ, ಅವುಗಳನ್ನು ಪರಿಶೀಲನೆಗಾಗಿ ತಡೆಹಿಡಿಯಬೇಕೆ ಅಥವಾ ಬೇಡವೇ ಎಂಬುದನ್ನು ಆರಿಸುವ ಆಯ್ಕೆಯನ್ನು ಸಹ ನೀವು ಹೊಂದಿರುತ್ತೀರಿ. ನಿಮ್ಮ ಆಯ್ಕೆಗಳನ್ನು ವೀಕ್ಷಿಸಲು ನೀವು ಕಾಮೆಂಟ್ ಮಾಡರೇಶನ್ ಡ್ರಾಪ್ ಡೌನ್ ಅನ್ನು ಟ್ಯಾಪ್ ಮಾಡಬಹುದು: 

  • ಯಾವುದೂ ಬೇಡ: ಯಾವುದೇ ಕಾಮೆಂಟ್‌ಗಳನ್ನು ತಡೆಹಿಡಿಯುವುದು ಬೇಡ. 
  • ಬೇಸಿಕ್: ಸಂಭಾವ್ಯವಾಗಿ ಸೂಕ್ತವಲ್ಲದ ಕಾಮೆಂಟ್‌ಗಳನ್ನು ತಡೆಹಿಡಿಯಿರಿ. 
  • ಸ್ಟ್ರಿಕ್ಟ್: ಸಂಭಾವ್ಯವಾಗಿ ಸೂಕ್ತವಲ್ಲದ ಕಾಮೆಂಟ್‌ಗಳ ವ್ಯಾಪಕ ಶ್ರೇಣಿಯನ್ನು ತಡೆಹಿಡಿಯಿರಿ. 
  • ಎಲ್ಲವನ್ನೂ ತಡೆಹಿಡಿಯಿರಿ: ಎಲ್ಲಾ ಕಾಮೆಂಟ್‌ಗಳನ್ನು ತಡೆಹಿಡಿಯಿರಿ.
ಸಲಹೆ: ಇನ್ನಷ್ಟು ಪದಗಳು ಅಥವಾ ಪದಗುಚ್ಛಗಳನ್ನು ಪರಿಶೀಲನೆಗಾಗಿ ತಡೆಹಿಡಿಯಲು ನೀವು ಬಯಸಿದರೆ, ಅವುಗಳನ್ನು ನಿಮ್ಮ ನಿರ್ಬಂಧಿಸಿರುವ ಪದಗಳ ಪಟ್ಟಿಗೆ ಸೇರಿಸಿ.

ಪರಿಶೀಲನೆಗಾಗಿ ತಡೆಹಿಡಿಯಲಾದ ಕಾಮೆಂಟ್‌ಗಳನ್ನು:

  • YouTube Studio ದಲ್ಲಿ 60 ದಿನಗಳವರೆಗೆ ಇರಿಸಿಕೊಳ್ಳಲಾಗುತ್ತದೆ.
  • ನೀವು ಅನುಮೋದಿಸದ ಹೊರತು ಸಾರ್ವಜನಿಕವಾಗಿ ಅವುಗಳನ್ನು ಪ್ರದರ್ಶಿಸಲಾಗುವುದಿಲ್ಲ.
  • 100 ಕ್ಕೂ ಹೆಚ್ಚು ಭಾಷೆಗಳಲ್ಲಿ ಪರಿಶೀಲನೆಗಾಗಿ ಲಭ್ಯವಿರುತ್ತವೆ.
ವಿರಾಮಗೊಳಿಸಿದಾಗ

ವಿರಾಮಗೊಳಿಸಿ ಎಂಬ ಆಯ್ಕೆಯನ್ನು ನೀವು ಆರಿಸಿದಾಗ, ನಿಮ್ಮ ಅಸ್ತಿತ್ವದಲ್ಲಿರುವ ಕಾಮೆಂಟ್‌ಗಳನ್ನು ನೀವು ಇರಿಸಿಕೊಳ್ಳುತ್ತೀರಿ, ಆದರೆ ನೀವು ಕಾಮೆಂಟ್‌ಗಳನ್ನು ಪುನಃ ಆನ್ ಮಾಡುವವರೆಗೆ ಆ ವೀಡಿಯೊಗೆ ಸಂಬಂಧಿಸಿದ ಯಾವುದೇ ಕಾಮೆಂಟ್‌ಗಳನ್ನು ನೀವು ಸ್ವೀಕರಿಸುವುದಿಲ್ಲ. 

ವಿವಿಧ ಕಾರಣಗಳಿಂದಾಗಿ ಕಾಮೆಂಟ್‌ಗಳನ್ನು ವಿರಾಮಗೊಳಿಸುವ ಆಯ್ಕೆಯನ್ನು ನೀವು ಮಾಡಬಹುದು. ಉದಾಹರಣೆಗೆ, ವೀಡಿಯೊದ ಕಾಮೆಂಟ್‌ಗಳ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ ಕಂಡುಬಂದಾಗ, ಪರಿಶೀಲಿಸಲು ನಿಮಗೆ ಹೆಚ್ಚಿನ ಸಮಯ ಬೇಕಾಗಬಹುದು, ಆಗ ನಿಮಗೆ ಯಾವುದೇ ಹೊಸ ಕಾಮೆಂಟ್‌ಗಳು ಬರದಂತೆ ವಿರಾಮಗೊಳಿಸುವ ಅಗತ್ಯವಿರಬಹುದು. ನೀವು ಪುನಃ ಹೊಸ ಕಾಮೆಂಟ್‌ಗಳನ್ನು ಪಡೆಯುವುದನ್ನು ಪ್ರಾರಂಭಿಸಲು ಬಯಸಿದರೆ, ನೀವು ಯಾವಾಗ ಬೇಕಾದರೂ ಕಾಮೆಂಟ್‌ಗಳನ್ನು ಆನ್ ಮಾಡಬಹುದು.

ಆಫ್ ಮಾಡಿದಾಗ 

ನೀವು ಕಾಮೆಂಟ್‌ಗಳನ್ನು ಆಫ್ ಮಾಡುವ ಆಯ್ಕೆಯನ್ನು ಮಾಡಿದಾಗ, ವೀಡಿಯೊ ಕುರಿತಂತೆ ಕಾಮೆಂಟ್ ಮಾಡಲು ವೀಕ್ಷಕರಿಗೆ ಸಾಧ್ಯವಾಗುವುದಿಲ್ಲ. ಕಾಮೆಂಟ್‌ಗಳನ್ನು ಆಫ್ ಮಾಡಲಾಗಿದೆ ಎಂಬ ಸಂದೇಶ ಅವರಿಗೆ ಕಾಣಿಸುತ್ತದೆ.

ಚಾನಲ್ ಮಟ್ಟದ ಕಾಮೆಂಟ್ ಸೆಟ್ಟಿಂಗ್‌ಗಳು

ಮರೆಮಾಡಿದ ಬಳಕೆದಾರರು

ನಿಮ್ಮ ಚಾನಲ್‌ನಲ್ಲಿ ಎಲ್ಲಾ ವೀಡಿಯೊಗಳಾದ್ಯಂತ ನಿರ್ದಿಷ್ಟ ಕಾಮೆಂಟರ್ ಅವರ ಕಾಮೆಂಟ್‌ಗಳನ್ನು ಮರೆಮಾಡಲು ನೀವು ಆಯ್ಕೆ ಮಾಡಬಹುದು.
ಗಮನಿಸಿ: ಮರೆಮಾಡಿದ ಬಳಕೆದಾರರು ನಿಮ್ಮ ವೀಡಿಯೊಗಳು ಹಾಗೂ ಲೈವ್ ಸ್ಟ್ರೀಮ್‌ಗಳ ಕ್ಲಿಪ್‌ಗಳನ್ನು ಸಹ ರಚಿಸಲು ಸಾಧ್ಯವಿಲ್ಲ. ಇನ್ನಷ್ಟು ತಿಳಿಯಿರಿ.

ಅನುಮೋದಿತ ಬಳಕೆದಾರರು

ಈ ಬಳಕೆದಾರರ ಕಾಮೆಂಟ್‌ಗಳನ್ನು ಸ್ವಯಂಚಾಲಿತವಾಗಿ ಪ್ರಕಟಿಸಲಾಗುತ್ತದೆ ಮತ್ತು ನಿರ್ಬಂಧಿಸಿರುವ ಲಿಂಕ್‌ಗಳು, ನಿರ್ಬಂಧಿಸಿರುವ ಪದಗಳು ಅಥವಾ ಸಂಭಾವ್ಯ ಅನುಚಿತವಾದ ಕಂಟೆಂಟ್‌ಗಾಗಿ ಫಿಲ್ಟರ್ ಮಾಡಲಾಗುವುದಿಲ್ಲ. ಲೈವ್ ಕಾಮೆಂಟರಿ ಪಾಲ್ಗೊಳ್ಳುವವರ ಮೋಡ್ ಆನ್ ಆಗಿರುವಾಗ, ಈ ಬಳಕೆದಾರರಿಗೆ ಲೈವ್ ಚಾಟ್‌ನಲ್ಲಿ ಸಂದೇಶಗಳನ್ನು ಕಳುಹಿಸಲು ಸಹ ಸಾಧ್ಯವಾಗುತ್ತದೆ.
ನಿರ್ಬಂಧಿಸಿರುವ ಪದಗಳು
ನಿಮ್ಮ ಕಾಮೆಂಟ್‌ಗಳಲ್ಲಿ ನೀವು ತೋರಿಸಲು ಬಯಸದ ಪದಗಳು ಹಾಗೂ ಪದಗುಚ್ಛಗಳ ಪಟ್ಟಿಯೊಂದನ್ನು ನಿಮ್ಮ ನಿರ್ಬಂಧಿಸಿರುವ ಪದಗಳ ಪಟ್ಟಿಗಳಿಗೆ ನೀವು ಸೇರಿಸಬಹುದು.
ಈ ಪದಗಳನ್ನು ಅಥವಾ ಅವುಗಳಿಗೆ ನಿಕಟವಾಗಿ ಹೊಂದಿಕೆಯಾಗುವ ಪದಗಳನ್ನು ಹೊಂದಿರುವ ಕಾಮೆಂಟ್‌ಗಳು, ನಿಮ್ಮ ಅನುಮೋದಿತ ಬಳಕೆದಾರರ ಪಟ್ಟಿಯಲ್ಲಿರುವವರಿಂದ ಬಂದಿರದಿದ್ದರೆ, ಅವುಗಳನ್ನು 60 ದಿನಗಳವರೆಗೆ ಪರಿಶೀಲನೆಗಾಗಿ ತಡೆಹಿಡಿಯಬಹುದಾಗಿದೆ. ಈ ಪದಗಳನ್ನು ಅಥವಾ ಇವುಗಳಿಗೆ ನಿಕಟವಾಗಿ ಹೊಂದಿಕೆಯಾಗುವ ಪದಗಳನ್ನು ಹೊಂದಿರುವ ಲೈವ್ ಚಾಟ್ ಸಂದೇಶಗಳನ್ನು ಸಹ ನಿರ್ಬಂಧಿಸಲಾಗುತ್ತದೆ.
ನಿರ್ಬಂಧಿಸಿರುವ ಪದಗಳನ್ನು ಹೊಂದಿರುವ ಕಾಮೆಂಟ್‍ಗಳನ್ನು ನಿಮ್ಮ ಕಾಮೆಂಟ್‌ಗಳ ಪುಟದಲ್ಲಿ, “ಪರಿಶೀಲನೆಗಾಗಿ ತಡೆಹಿಡಿದಿರುವುದು” ಟ್ಯಾಬ್‌ನಲ್ಲಿ ಪರಿಶೀಲಿಸಬಹುದು ಮತ್ತು ಅನುಮೋದಿಸಬಹುದು.
ನಿಮ್ಮ ನಿರ್ಬಂಧಿಸಿರುವ ಪದಗಳ ಪಟ್ಟಿಗಳಿಗೆ ಸೇರಿಸಲು:
  1. YouTube Studio ಅನ್ನು ತೆರೆಯಿರಿ.
  2. ಎಡಬದಿಯಿಂದ ಸೆಟ್ಟಿಂಗ್‌ಗಳು and then ಸಮುದಾಯ ಎಂಬುದನ್ನು ಕ್ಲಿಕ್ ಮಾಡಿ.
  3. "ಸ್ವಯಂಚಾಲಿತ ಫಿಲ್ಟರ್‌ಗಳು" ಟ್ಯಾಬ್‌ನ ಅಡಿಯಲ್ಲಿ "ನಿರ್ಬಂಧಿಸಿರುವ ಪದಗಳು" ಎಂಬಲ್ಲಿಗೆ ಸ್ಕ್ರಾಲ್ ಮಾಡಿ.
  4. ಪದಗಳು ಹಾಗೂ ಪದಗುಚ್ಛಗಳನ್ನು ಅಲ್ಪವಿರಾಮಗಳಿಂದ ಪ್ರತ್ಯೇಕಿಸಿ, ಸೇರಿಸಿ.
  5. ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
ಗಮನಿಸಿ: ನಿಮ್ಮ ವೀಡಿಯೊಗಳು ಹಾಗೂ ಲೈವ್ ಸ್ಟ್ರೀಮ್‌ಗಳ ಕ್ಲಿಪ್‌ಗಳನ್ನು ರಚಿಸುವಾಗಲೂ, ನಿರ್ಬಂಧಿಸಿರುವ ಪದಗಳನ್ನು ಬಳಸಲು ಸಾಧ್ಯವಿಲ್ಲ. ಇನ್ನಷ್ಟು ತಿಳಿಯಿರಿ.
ಲಿಂಕ್‌ಗಳಿರುವ ಕಾಮೆಂಟ್‌ಗಳನ್ನು ನಿರ್ಬಂಧಿಸಿ
URL ಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ನೀವು ಪರಿಶೀಲನೆಗಾಗಿ ತಡೆಹಿಡಿಯಬಹುದು. ಅದು ಹೇಗೆ ಎಂಬುದು ಇಲ್ಲಿದೆ:
  1. YouTube Studio ಅನ್ನು ತೆರೆಯಿರಿ.
  2. ಎಡಬದಿಯಿಂದ ಸೆಟ್ಟಿಂಗ್‌ಗಳು and then ಸಮುದಾಯ ಎಂಬುದನ್ನು ಕ್ಲಿಕ್ ಮಾಡಿ.
  3. "ಸ್ವಯಂಚಾಲಿತ ಫಿಲ್ಟರ್‌ಗಳು" ಟ್ಯಾಬ್‌ನಲ್ಲಿ, ಲಿಂಕ್‌ಗಳನ್ನು ನಿರ್ಬಂಧಿಸಿ ಎಂಬುದನ್ನು ಆಯ್ಕೆ ಮಾಡಿ.
ನೀವು, ಮಾಡರೇಟರ್‌ಗಳು ಅಥವಾ ಅನುಮೋದಿತ ಬಳಕೆದಾರರು, ಲಿಂಕ್‌ಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದರೆ, ಅವುಗಳನ್ನು ನಿರ್ಬಂಧಿಸಲಾಗುವುದಿಲ್ಲ.
URL ಗಳನ್ನು ಹೊಂದಿರುವ ಲೈವ್ ಚಾಟ್ ಸಂದೇಶಗಳನ್ನು ಸಹ ನಿರ್ಬಂಧಿಸಲಾಗುತ್ತದೆ.
ಹ್ಯಾಶ್‌ಟ್ಯಾಗ್‌ಗಳು ಹಾಗೂ ಲಿಂಕ್‌ಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ನಿಮ್ಮ ಕಾಮೆಂಟ್‌ಗಳ ಪುಟದಲ್ಲಿ, “ಪರಿಶೀಲನೆಗಾಗಿ ತಡೆಹಿಡಿದಿರುವುದು” ಟ್ಯಾಬ್‌ನ ಅಡಿಯಲ್ಲಿ 60 ದಿನಗಳವರೆಗೆ ಪರಿಶೀಲಿಸಬಹುದು ಮತ್ತು ಅನುಮೋದಿಸಬಹುದು.

ಡೀಫಾಲ್ಟ್ ಕಾಮೆಂಟ್ ಸೆಟ್ಟಿಂಗ್‌ಗಳು

ನೀವು ಎಲ್ಲಾ ಹೊಸ ವೀಡಿಯೊ ಅಪ್‌ಲೋಡ್‌ಗಳಿಗಾಗಿ ಒಂದೇ ಕಾಮೆಂಟ್ ಅನ್ನು ಅನ್ವಯಿಸಬಹುದು. ಹೊಸ ವೀಡಿಯೊಗಾಗಿ ನಿಮ್ಮ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಬದಲಿಸುವುದರಿಂದ, ಅಸ್ತಿತ್ವದಲ್ಲಿರುವ ವೀಡಿಯೊಗಳ ಮೇಲೆ ಯಾವ ಪ್ರಭಾವವೂ ಉಂಟಾಗುವುದಿಲ್ಲ.
ಅಪ್‌ಲೋಡ್ ಮಾಡಿದ ಬಳಿಕ, ನೀವು ಪ್ರತ್ಯೇಕ ವೀಡಿಯೊಗಳಿಗಾಗಿ ವಿಭಿನ್ನ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಆರಿಸಬಹುದು. ಹೊಸ ವೀಡಿಯೊಗಳಿಗಾಗಿ ನಿಮ್ಮ ಡೀಫಾಲ್ಟ್ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಹೇಗೆ ಎಂದು ತಿಳಿದುಕೊಳ್ಳಿ.

ಚಾನಲ್ ಹೋಮ್ ಪೇಜ್ ಕಾಮೆಂಟ್ ಸೆಟ್ಟಿಂಗ್‌ಗಳು

ಹೊಸ ಕಾಮೆಂಟ್‌ಗಳಿಗಾಗಿ ನಿಮ್ಮ ಸೆಟ್ಟಿಂಗ್ ಅನ್ನು, ನಿಮ್ಮ ಚಾನಲ್‌ನ ಸಮುದಾಯ ಟ್ಯಾಬ್‌ನಲ್ಲಿ ನೀವು ಬದಲಾಯಿಸಬಹುದು. ನಿಮ್ಮ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಹೇಗೆ ಎಂದು ತಿಳಿದುಕೊಳ್ಳಿ.

ಕಾಮೆಂಟ್ ಸೆಟ್ಟಿಂಗ್‌ಗಳ ಕುರಿತು FAQ

ನಾನು ಒಂದು ನಿರ್ದಿಷ್ಟ ವೀಡಿಯೊದಿಂದ ಕೆಲವೊಂದು ಪದಗಳು, ಲಿಂಕ್‌ಗಳು ಅಥವಾ ಬಳಕೆದಾರರನ್ನು ನಿರ್ಬಂಧಿಸಬಹುದೇ?

ಇಲ್ಲ. ಮರೆಮಾಡಿದ ಬಳಕೆದಾರರು, ನಿರ್ಬಂಧಿಸಿರುವ ಪದಗಳು ಮತ್ತು ಲಿಂಕ್ ನಿರ್ಬಂಧಿಸುವಿಕೆಯು ಎಲ್ಲಾ ವೀಡಿಯೊಗಳಿಗೆ ಮತ್ತು ನಿಮ್ಮ ಚಾನಲ್ ಹೋಮ್ ಪೇಜ್‌ಗೆ ಸ್ವಯಂಚಾಲಿತವಾಗಿ ಅನ್ವಯವಾಗುತ್ತವೆ. ನಿಮ್ಮ ಸೆಟ್ಟಿಂಗ್‌ಗಳಲ್ಲಿ ಮಾಡಲಾದ ಬದಲಾವಣೆಗಳು ಹೊಸದಾದ ಮತ್ತು ಅಸ್ತಿತ್ವದಲ್ಲಿರುವ ವೀಡಿಯೊಗಳಿಗೂ ಅನ್ವಯಿಸಬಹುದು.
ಗಮನಿಸಿ: ನಿಮ್ಮ ಕಾಮೆಂಟ್ ಸೆಟ್ಟಿಂಗ್‌ಗಳಲ್ಲಿ ಮಾಡಿದ ಬದಲಾವಣೆಗಳು ಹೊಸ ವೀಡಿಯೊಗಳಿಗೆ ಮಾತ್ರ ಅನ್ವಯಿಸುತ್ತವೆ.

ಮರೆಮಾಡಿದ ಬಳಕೆದಾರರ ಕಾಮೆಂಟ್‌ಗಳನ್ನು ನಾನು ಪರಿಶೀಲಿಸಬಹುದೇ?

ಇಲ್ಲ. ಮರೆಮಾಡಿದ ಬಳಕೆದಾರರ ಕಾಮೆಂಟ್‌ಗಳು YouTube Studio ದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ನಿರ್ದಿಷ್ಟ ಪದಗಳು ಅಥವಾ ಲಿಂಕ್‌ಗಳಿಗಾಗಿ ನಿರ್ಬಂಧಿಸಲಾಗಿರುವ ಕಾಮೆಂಟ್‌ಗಳನ್ನು ನಾನು ಪರಿಶೀಲಿಸಬಹುದೇ?

ಹೌದು. ನಿರ್ಬಂಧಿಸಿರುವ ಪದಗಳು ಅಥವಾ ಲಿಂಕ್‌ಗಳನ್ನು ಹೊಂದಿರುವ ಕಾಮೆಂಟ್‌ಗಳನ್ನು ನಿಮ್ಮ ಕಾಮೆಂಟ್‌ಗಳ ಪುಟದಲ್ಲಿ, “ಪರಿಶೀಲನೆಗಾಗಿ ತಡೆಹಿಡಿದಿರುವುದು” ಟ್ಯಾಬ್‌ನಲ್ಲಿ 60 ದಿನಗಳವರೆಗೆ ಪರಿಶೀಲಿಸಬಹುದು ಮತ್ತು ಅನುಮೋದಿಸಬಹುದು.

ನಾನು ಕಾಮೆಂಟ್‌ಗಳನ್ನು ಆಫ್ ಮಾಡಿದರೆ ಮತ್ತು ಪುನಃ ಆನ್ ಮಾಡಿದರೆ, ನನ್ನ ಹಳೆಯ ಕಾಮೆಂಟ್‌ಗಳು ಮರಳಿ ಬರುತ್ತವೆಯೇ?

ಹೌದು. ನೀವು ಕಾಮೆಂಟ್‌ಗಳನ್ನು ಆಫ್ ಮಾಡಿದರೆ ಮತ್ತು ಪುನಃ ಆನ್ ಮಾಡಿದರೆ, ಅಸ್ತಿತ್ವದಲ್ಲಿರುವ ಕಾಮೆಂಟ್‌ಗಳು ಮತ್ತೆ ಕಾಣಿಸಿಕೊಳ್ಳುತ್ತವೆ.
ನೀವು ಕಾಮೆಂಟ್‌ಗಳನ್ನು ಆಫ್ ಮಾಡಿದರೆ, ಅಸ್ತಿತ್ವದಲ್ಲಿರುವ ಕಾಮೆಂಟ್‌ಗಳನ್ನು ವೀಕ್ಷಣಾ ಪುಟದಲ್ಲಿ ಅಥವಾ YouTube Studio ದಲ್ಲಿ ನೋಡಲು ಸಾಧ್ಯವಾಗುವುದಿಲ್ಲ.

ನನ್ನ ಸೆಟ್ಟಿಂಗ್‌ಗಳನ್ನು ನಾನು ಬದಲಾಯಿಸಿದರೆ, ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಕಾಮೆಂಟ್‌ಗಳ ಮೇಲೆ ಪರಿಣಾಮ ಬೀರುತ್ತದೆಯೇ?

ಚಾನಲ್ ಮಟ್ಟದ ಸೆಟ್ಟಿಂಗ್‌ಗಳು, ವೀಡಿಯೊ ಮಟ್ಟದ ಸೆಟ್ಟಿಂಗ್‌ಗಳು ಮತ್ತು ನಿರ್ಬಂಧಿಸಿರುವ ಪದಗಳು, ಮರೆಮಾಡಿದ ಬಳಕೆದಾರರು ಹಾಗೂ ನಿರ್ಬಂಧಿಸಿರುವ ಲಿಂಕ್‌ಗಳಿಗೆ ಮಾಡಿದ ಬದಲಾವಣೆಗಳೆಲ್ಲವೂ ಭವಿಷ್ಯದ ಕಾಮೆಂಟ್‌ಗಳಿಗೆ ಅನ್ವಯವಾಗುತ್ತವೆ. 

ಈ ಸಂದರ್ಭಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಕಾಮೆಂಟ್‌ಗಳ ಮೇಲೆ ಪರಿಣಾಮ ಬೀರುತ್ತವೆ:

  • ವೀಡಿಯೊದ ಕಾಮೆಂಟ್‌ಗಳನ್ನು ನೀವು ಆಫ್ ಮಾಡಿದರೆ. ಆಫ್ ಮಾಡಿದಾಗ, ನೀವು ಕಾಮೆಂಟ್‌ಗಳನ್ನು ಪುನಃ ಆನ್ ಮಾಡುವವರೆಗೆ ಅಸ್ತಿತ್ವದಲ್ಲಿರುವ ಕಾಮೆಂಟ್‌ಗಳು ನಿಮಗೆ ಕಾಣಿಸುವುದಿಲ್ಲ. 
  • ನೀವು ಬಳಕೆದಾರರನ್ನು ಮರೆಮಾಡಿದರೆ. ಬಳಕೆದಾರರನ್ನು ಮರೆಮಾಡಿದರೆ, ಅವರು ಮಾಡಿದ ಕಾಮೆಂಟ್‌ಗಳು ನಿಮ್ಮ ಯಾವುದೇ ವೀಡಿಯೊಗಳಲ್ಲಿ ಕಾಣಿಸುವುದಿಲ್ಲ.

ಬೇಸಿಕ್ ಹಾಗೂ ಸ್ಟ್ರಿಕ್ಟ್ ಮೋಡ್‌ನಲ್ಲಿ ಯಾವ ರೀತಿಯ ಕಾಮೆಂಟ್‌ಗಳನ್ನು ಪರಿಶೀಲನೆಗಾಗಿ ತಡೆಹಿಡಿಯಲಾಗುತ್ತದೆ?

ಬೇಸಿಕ್ ಕಾಮೆಂಟ್ ಮಾಡರೇಶನ್ ಅನ್ನು ಆಯ್ಕೆಮಾಡಿದರೆ, ಸ್ಪ್ಯಾಮ್, ಸ್ವಯಂ-ಪ್ರಚಾರ, ಅರ್ಥಹೀನ ಅಥವಾ ಸಂಭಾವ್ಯವಾಗಿ ಸೂಕ್ತವಲ್ಲದಿರಬಹುದಾದ ಕಾಮೆಂಟ್‌ಗಳನ್ನು YouTube Studio ದಲ್ಲಿ ತಡೆಹಿಡಿಯಲಾಗುತ್ತದೆ. ನೀವು ಅನುಮೋದಿಸಿದರೆ ಮಾತ್ರ ಈ ಕಾಮೆಂಟ್‌ಗಳನ್ನು ಪ್ರಕಟಿಸಲಾಗುತ್ತದೆ. 

ನಿಮ್ಮ ಚಾನಲ್‌ಗೆ ಉನ್ನತ ಮಟ್ಟದ ರಕ್ಷಣೆ ಬೇಕೆಂದು ನೀವು ಬಯಸಿದರೆ, ಸ್ಟ್ರಿಕ್ಟ್ ಕಾಮೆಂಟ್ ಮಾಡರೇಶನ್ ಅನ್ನು ಆಯ್ಕೆಮಾಡಿದಾಗ ಪರಿಶೀಲನೆಗಾಗಿ ತಡೆಹಿಡಿಯುವ ಕಾಮೆಂಟ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. 

ತಡೆಹಿಡಿಯಬೇಕಾದ ಕಾಮೆಂಟ್‌ಗಳನ್ನು ಪತ್ತೆಹಚ್ಚಲು ಈ ಸೆಟ್ಟಿಂಗ್‌ಗಳು AI ಅನ್ನು ಬಳಸುವುದರಿಂದ, ಅವುಗಳ ಫಲಿತಾಂಶಗಳು ಯಾವಾಗಲೂ ನಿಖರವಾಗಿಲ್ಲದಿರಬಹುದು. ಚಾನಲ್ ಮಾಲೀಕರು ತಮ್ಮ ವೀಡಿಯೊಗಳಲ್ಲಿ ಕಾಣಿಸುವ ಕಾಮೆಂಟ್‌ಗಳನ್ನು ನಿರ್ಲಕ್ಷಿಸುವ, ತೆಗೆದುಹಾಕುವ ಅಥವಾ ಅನುಮೋದಿಸುವ ಆಯ್ಕೆಯನ್ನು ಮಾಡಬಹುದು.

ಫೀಡ್‌ಬ್ಯಾಕ್ ಅನ್ನು ಕಳುಹಿಸಿ ಎಂಬುದನ್ನು ಆಯ್ಕೆಮಾಡುವ ಮೂಲಕ YouTube Studio ದಲ್ಲಿ ಕಾಮೆಂಟ್‌ಗಳನ್ನು ಪರಿಶೀಲಿಸುವಾಗ ನೀವು ಉತ್ಪನ್ನದಲ್ಲಿ ನೇರವಾಗಿ ಫೀಡ್‌ಬ್ಯಾಕ್ ಅನ್ನು ಹಂಚಿಕೊಳ್ಳಬಹುದು.

ಕಾಲಾನಂತರದಲ್ಲಿ ನಮ್ಮ ಸಿಸ್ಟಂಗಳನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುವಾಗ ಈ ಸೆಟ್ಟಿಂಗ್‌ಗಳ ಮೂಲಕ ದೊರೆಯುವ ಕಾಮೆಂಟ್‌ಗಳ ನಿಖರತೆ ಮತ್ತು ಸಂಖ್ಯೆ ಬದಲಾಗಬಹುದು.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8702955400105837612
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false