ಕೆಲವು ಕಾಮೆಂಟ್ಗಳನ್ನು ನಿಮ್ಮ ವೀಡಿಯೊ ಅಥವಾ ಚಾನಲ್ನಲ್ಲಿ ತೋರಿಸುವ ಮೊದಲು, ನೀವು ಅವುಗಳನ್ನು ಪರಿಶೀಲನೆಗಾಗಿ ತಡೆಹಿಡಿಯಬಹುದು. ನಿಮ್ಮ ಕಾಮೆಂಟ್ ಸೆಟ್ಟಿಂಗ್ಗಳನ್ನು ಬದಲಾಯಿಸುವುದು ಹೇಗೆ ಎಂದು ತಿಳಿದುಕೊಳ್ಳಿ.
ವೀಡಿಯೊಗಳಿಗೆ ಸಂಬಂಧಿಸಿದ ಕಾಮೆಂಟ್ ಸೆಟ್ಟಿಂಗ್ಗಳು
ನಿರ್ದಿಷ್ಟ ವೀಡಿಯೊಗೆ ಸಂಬಂಧಿಸಿದ ಕಾಮೆಂಟ್ಗಳನ್ನು ಆನ್ ಮಾಡುವ, ವಿರಾಮಗೊಳಿಸುವ ಅಥವಾ ಅವುಗಳನ್ನು ಆಫ್ ಮಾಡುವ ಆಯ್ಕೆಯನ್ನು ನೀವು ಮಾಡಬಹುದು. ಕಾಮೆಂಟ್ಗಳನ್ನು ಆನ್ ಮಾಡಿದಾಗ, ಯಾವ ಕಾಮೆಂಟ್ಗಳನ್ನು ಪರಿಶೀಲನೆಗಾಗಿ ತಡೆಹಿಡಿಯಬೇಕು ಎಂಬುದನ್ನು ನೀವು ನಿರ್ಧರಿಸಬಹುದು.
ಆನ್ ಮಾಡಿದಾಗಕಾಮೆಂಟ್ಗಳನ್ನು ಆನ್ ಮಾಡುವ ಆಯ್ಕೆಯನ್ನು ನೀವು ಮಾಡಿದಾಗ, ಅವುಗಳನ್ನು ಪರಿಶೀಲನೆಗಾಗಿ ತಡೆಹಿಡಿಯಬೇಕೆ ಅಥವಾ ಬೇಡವೇ ಎಂಬುದನ್ನು ಆರಿಸುವ ಆಯ್ಕೆಯನ್ನು ಸಹ ನೀವು ಹೊಂದಿರುತ್ತೀರಿ. ನಿಮ್ಮ ಆಯ್ಕೆಗಳನ್ನು ವೀಕ್ಷಿಸಲು ನೀವು ಕಾಮೆಂಟ್ ಮಾಡರೇಶನ್ ಡ್ರಾಪ್ ಡೌನ್ ಅನ್ನು ಟ್ಯಾಪ್ ಮಾಡಬಹುದು:
- ಯಾವುದೂ ಬೇಡ: ಯಾವುದೇ ಕಾಮೆಂಟ್ಗಳನ್ನು ತಡೆಹಿಡಿಯುವುದು ಬೇಡ.
- ಬೇಸಿಕ್: ಸಂಭಾವ್ಯವಾಗಿ ಸೂಕ್ತವಲ್ಲದ ಕಾಮೆಂಟ್ಗಳನ್ನು ತಡೆಹಿಡಿಯಿರಿ.
- ಸ್ಟ್ರಿಕ್ಟ್: ಸಂಭಾವ್ಯವಾಗಿ ಸೂಕ್ತವಲ್ಲದ ಕಾಮೆಂಟ್ಗಳ ವ್ಯಾಪಕ ಶ್ರೇಣಿಯನ್ನು ತಡೆಹಿಡಿಯಿರಿ.
- ಎಲ್ಲವನ್ನೂ ತಡೆಹಿಡಿಯಿರಿ: ಎಲ್ಲಾ ಕಾಮೆಂಟ್ಗಳನ್ನು ತಡೆಹಿಡಿಯಿರಿ.
ಪರಿಶೀಲನೆಗಾಗಿ ತಡೆಹಿಡಿಯಲಾದ ಕಾಮೆಂಟ್ಗಳನ್ನು:
- YouTube Studio ದಲ್ಲಿ 60 ದಿನಗಳವರೆಗೆ ಇರಿಸಿಕೊಳ್ಳಲಾಗುತ್ತದೆ.
- ನೀವು ಅನುಮೋದಿಸದ ಹೊರತು ಸಾರ್ವಜನಿಕವಾಗಿ ಅವುಗಳನ್ನು ಪ್ರದರ್ಶಿಸಲಾಗುವುದಿಲ್ಲ.
- 100 ಕ್ಕೂ ಹೆಚ್ಚು ಭಾಷೆಗಳಲ್ಲಿ ಪರಿಶೀಲನೆಗಾಗಿ ಲಭ್ಯವಿರುತ್ತವೆ.
ವಿರಾಮಗೊಳಿಸಿ ಎಂಬ ಆಯ್ಕೆಯನ್ನು ನೀವು ಆರಿಸಿದಾಗ, ನಿಮ್ಮ ಅಸ್ತಿತ್ವದಲ್ಲಿರುವ ಕಾಮೆಂಟ್ಗಳನ್ನು ನೀವು ಇರಿಸಿಕೊಳ್ಳುತ್ತೀರಿ, ಆದರೆ ನೀವು ಕಾಮೆಂಟ್ಗಳನ್ನು ಪುನಃ ಆನ್ ಮಾಡುವವರೆಗೆ ಆ ವೀಡಿಯೊಗೆ ಸಂಬಂಧಿಸಿದ ಯಾವುದೇ ಕಾಮೆಂಟ್ಗಳನ್ನು ನೀವು ಸ್ವೀಕರಿಸುವುದಿಲ್ಲ.
ವಿವಿಧ ಕಾರಣಗಳಿಂದಾಗಿ ಕಾಮೆಂಟ್ಗಳನ್ನು ವಿರಾಮಗೊಳಿಸುವ ಆಯ್ಕೆಯನ್ನು ನೀವು ಮಾಡಬಹುದು. ಉದಾಹರಣೆಗೆ, ವೀಡಿಯೊದ ಕಾಮೆಂಟ್ಗಳ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ ಕಂಡುಬಂದಾಗ, ಪರಿಶೀಲಿಸಲು ನಿಮಗೆ ಹೆಚ್ಚಿನ ಸಮಯ ಬೇಕಾಗಬಹುದು, ಆಗ ನಿಮಗೆ ಯಾವುದೇ ಹೊಸ ಕಾಮೆಂಟ್ಗಳು ಬರದಂತೆ ವಿರಾಮಗೊಳಿಸುವ ಅಗತ್ಯವಿರಬಹುದು. ನೀವು ಪುನಃ ಹೊಸ ಕಾಮೆಂಟ್ಗಳನ್ನು ಪಡೆಯುವುದನ್ನು ಪ್ರಾರಂಭಿಸಲು ಬಯಸಿದರೆ, ನೀವು ಯಾವಾಗ ಬೇಕಾದರೂ ಕಾಮೆಂಟ್ಗಳನ್ನು ಆನ್ ಮಾಡಬಹುದು.ಆಫ್ ಮಾಡಿದಾಗ
ಚಾನಲ್ ಮಟ್ಟದ ಕಾಮೆಂಟ್ ಸೆಟ್ಟಿಂಗ್ಗಳು
ಮರೆಮಾಡಿದ ಬಳಕೆದಾರರು
ಅನುಮೋದಿತ ಬಳಕೆದಾರರು
- YouTube Studio ಅನ್ನು ತೆರೆಯಿರಿ.
- ಎಡಬದಿಯಿಂದ ಸೆಟ್ಟಿಂಗ್ಗಳು ಸಮುದಾಯ ಎಂಬುದನ್ನು ಕ್ಲಿಕ್ ಮಾಡಿ.
- "ಸ್ವಯಂಚಾಲಿತ ಫಿಲ್ಟರ್ಗಳು" ಟ್ಯಾಬ್ನ ಅಡಿಯಲ್ಲಿ "ನಿರ್ಬಂಧಿಸಿರುವ ಪದಗಳು" ಎಂಬಲ್ಲಿಗೆ ಸ್ಕ್ರಾಲ್ ಮಾಡಿ.
- ಪದಗಳು ಹಾಗೂ ಪದಗುಚ್ಛಗಳನ್ನು ಅಲ್ಪವಿರಾಮಗಳಿಂದ ಪ್ರತ್ಯೇಕಿಸಿ, ಸೇರಿಸಿ.
- ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
- YouTube Studio ಅನ್ನು ತೆರೆಯಿರಿ.
- ಎಡಬದಿಯಿಂದ ಸೆಟ್ಟಿಂಗ್ಗಳು ಸಮುದಾಯ ಎಂಬುದನ್ನು ಕ್ಲಿಕ್ ಮಾಡಿ.
- "ಸ್ವಯಂಚಾಲಿತ ಫಿಲ್ಟರ್ಗಳು" ಟ್ಯಾಬ್ನಲ್ಲಿ, ಲಿಂಕ್ಗಳನ್ನು ನಿರ್ಬಂಧಿಸಿ ಎಂಬುದನ್ನು ಆಯ್ಕೆ ಮಾಡಿ.
ಡೀಫಾಲ್ಟ್ ಕಾಮೆಂಟ್ ಸೆಟ್ಟಿಂಗ್ಗಳು
ಚಾನಲ್ ಹೋಮ್ ಪೇಜ್ ಕಾಮೆಂಟ್ ಸೆಟ್ಟಿಂಗ್ಗಳು
ಕಾಮೆಂಟ್ ಸೆಟ್ಟಿಂಗ್ಗಳ ಕುರಿತು FAQ
ನಾನು ಒಂದು ನಿರ್ದಿಷ್ಟ ವೀಡಿಯೊದಿಂದ ಕೆಲವೊಂದು ಪದಗಳು, ಲಿಂಕ್ಗಳು ಅಥವಾ ಬಳಕೆದಾರರನ್ನು ನಿರ್ಬಂಧಿಸಬಹುದೇ?
ಮರೆಮಾಡಿದ ಬಳಕೆದಾರರ ಕಾಮೆಂಟ್ಗಳನ್ನು ನಾನು ಪರಿಶೀಲಿಸಬಹುದೇ?
ನಿರ್ದಿಷ್ಟ ಪದಗಳು ಅಥವಾ ಲಿಂಕ್ಗಳಿಗಾಗಿ ನಿರ್ಬಂಧಿಸಲಾಗಿರುವ ಕಾಮೆಂಟ್ಗಳನ್ನು ನಾನು ಪರಿಶೀಲಿಸಬಹುದೇ?
ನಾನು ಕಾಮೆಂಟ್ಗಳನ್ನು ಆಫ್ ಮಾಡಿದರೆ ಮತ್ತು ಪುನಃ ಆನ್ ಮಾಡಿದರೆ, ನನ್ನ ಹಳೆಯ ಕಾಮೆಂಟ್ಗಳು ಮರಳಿ ಬರುತ್ತವೆಯೇ?
ನನ್ನ ಸೆಟ್ಟಿಂಗ್ಗಳನ್ನು ನಾನು ಬದಲಾಯಿಸಿದರೆ, ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಕಾಮೆಂಟ್ಗಳ ಮೇಲೆ ಪರಿಣಾಮ ಬೀರುತ್ತದೆಯೇ?
ಚಾನಲ್ ಮಟ್ಟದ ಸೆಟ್ಟಿಂಗ್ಗಳು, ವೀಡಿಯೊ ಮಟ್ಟದ ಸೆಟ್ಟಿಂಗ್ಗಳು ಮತ್ತು ನಿರ್ಬಂಧಿಸಿರುವ ಪದಗಳು, ಮರೆಮಾಡಿದ ಬಳಕೆದಾರರು ಹಾಗೂ ನಿರ್ಬಂಧಿಸಿರುವ ಲಿಂಕ್ಗಳಿಗೆ ಮಾಡಿದ ಬದಲಾವಣೆಗಳೆಲ್ಲವೂ ಭವಿಷ್ಯದ ಕಾಮೆಂಟ್ಗಳಿಗೆ ಅನ್ವಯವಾಗುತ್ತವೆ.
ಈ ಸಂದರ್ಭಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಕಾಮೆಂಟ್ಗಳ ಮೇಲೆ ಪರಿಣಾಮ ಬೀರುತ್ತವೆ:
- ವೀಡಿಯೊದ ಕಾಮೆಂಟ್ಗಳನ್ನು ನೀವು ಆಫ್ ಮಾಡಿದರೆ. ಆಫ್ ಮಾಡಿದಾಗ, ನೀವು ಕಾಮೆಂಟ್ಗಳನ್ನು ಪುನಃ ಆನ್ ಮಾಡುವವರೆಗೆ ಅಸ್ತಿತ್ವದಲ್ಲಿರುವ ಕಾಮೆಂಟ್ಗಳು ನಿಮಗೆ ಕಾಣಿಸುವುದಿಲ್ಲ.
- ನೀವು ಬಳಕೆದಾರರನ್ನು ಮರೆಮಾಡಿದರೆ. ಬಳಕೆದಾರರನ್ನು ಮರೆಮಾಡಿದರೆ, ಅವರು ಮಾಡಿದ ಕಾಮೆಂಟ್ಗಳು ನಿಮ್ಮ ಯಾವುದೇ ವೀಡಿಯೊಗಳಲ್ಲಿ ಕಾಣಿಸುವುದಿಲ್ಲ.
ಬೇಸಿಕ್ ಹಾಗೂ ಸ್ಟ್ರಿಕ್ಟ್ ಮೋಡ್ನಲ್ಲಿ ಯಾವ ರೀತಿಯ ಕಾಮೆಂಟ್ಗಳನ್ನು ಪರಿಶೀಲನೆಗಾಗಿ ತಡೆಹಿಡಿಯಲಾಗುತ್ತದೆ?
ಬೇಸಿಕ್ ಕಾಮೆಂಟ್ ಮಾಡರೇಶನ್ ಅನ್ನು ಆಯ್ಕೆಮಾಡಿದರೆ, ಸ್ಪ್ಯಾಮ್, ಸ್ವಯಂ-ಪ್ರಚಾರ, ಅರ್ಥಹೀನ ಅಥವಾ ಸಂಭಾವ್ಯವಾಗಿ ಸೂಕ್ತವಲ್ಲದಿರಬಹುದಾದ ಕಾಮೆಂಟ್ಗಳನ್ನು YouTube Studio ದಲ್ಲಿ ತಡೆಹಿಡಿಯಲಾಗುತ್ತದೆ. ನೀವು ಅನುಮೋದಿಸಿದರೆ ಮಾತ್ರ ಈ ಕಾಮೆಂಟ್ಗಳನ್ನು ಪ್ರಕಟಿಸಲಾಗುತ್ತದೆ.
ನಿಮ್ಮ ಚಾನಲ್ಗೆ ಉನ್ನತ ಮಟ್ಟದ ರಕ್ಷಣೆ ಬೇಕೆಂದು ನೀವು ಬಯಸಿದರೆ, ಸ್ಟ್ರಿಕ್ಟ್ ಕಾಮೆಂಟ್ ಮಾಡರೇಶನ್ ಅನ್ನು ಆಯ್ಕೆಮಾಡಿದಾಗ ಪರಿಶೀಲನೆಗಾಗಿ ತಡೆಹಿಡಿಯುವ ಕಾಮೆಂಟ್ಗಳ ಸಂಖ್ಯೆ ಹೆಚ್ಚಾಗುತ್ತದೆ.
ತಡೆಹಿಡಿಯಬೇಕಾದ ಕಾಮೆಂಟ್ಗಳನ್ನು ಪತ್ತೆಹಚ್ಚಲು ಈ ಸೆಟ್ಟಿಂಗ್ಗಳು AI ಅನ್ನು ಬಳಸುವುದರಿಂದ, ಅವುಗಳ ಫಲಿತಾಂಶಗಳು ಯಾವಾಗಲೂ ನಿಖರವಾಗಿಲ್ಲದಿರಬಹುದು. ಚಾನಲ್ ಮಾಲೀಕರು ತಮ್ಮ ವೀಡಿಯೊಗಳಲ್ಲಿ ಕಾಣಿಸುವ ಕಾಮೆಂಟ್ಗಳನ್ನು ನಿರ್ಲಕ್ಷಿಸುವ, ತೆಗೆದುಹಾಕುವ ಅಥವಾ ಅನುಮೋದಿಸುವ ಆಯ್ಕೆಯನ್ನು ಮಾಡಬಹುದು.
ಫೀಡ್ಬ್ಯಾಕ್ ಅನ್ನು ಕಳುಹಿಸಿ ಎಂಬುದನ್ನು ಆಯ್ಕೆಮಾಡುವ ಮೂಲಕ YouTube Studio ದಲ್ಲಿ ಕಾಮೆಂಟ್ಗಳನ್ನು ಪರಿಶೀಲಿಸುವಾಗ ನೀವು ಉತ್ಪನ್ನದಲ್ಲಿ ನೇರವಾಗಿ ಫೀಡ್ಬ್ಯಾಕ್ ಅನ್ನು ಹಂಚಿಕೊಳ್ಳಬಹುದು.
ಕಾಲಾನಂತರದಲ್ಲಿ ನಮ್ಮ ಸಿಸ್ಟಂಗಳನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುವಾಗ ಈ ಸೆಟ್ಟಿಂಗ್ಗಳ ಮೂಲಕ ದೊರೆಯುವ ಕಾಮೆಂಟ್ಗಳ ನಿಖರತೆ ಮತ್ತು ಸಂಖ್ಯೆ ಬದಲಾಗಬಹುದು.