ಸಬ್‌ಸ್ಕ್ರೈಬರ್ ನೋಟಿಫಿಕೇಶನ್‌ಗಳನ್ನು ಪರಿಶೀಲಿಸಿ

ನೋಟಿಫಿಕೇಶನ್‌ಗಳು ತಮ್ಮ ವೀಡಿಯೊ ವೀಕ್ಷಣೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ರಚನೆಕಾರರು ಯಾವಾಗಲೂ ಆಶ್ಚರ್ಯ ಪಡುತ್ತಾರೆ. ನೋಟಿಫಿಕೇಶನ್‌ಗಳ ಪರಿಣಾಮದ ಕುರಿತು ತಿಳಿಯಲು ನೀವು YouTube Studio ದಲ್ಲಿ "ಸಬ್‌ಸ್ಕ್ರೈಬರ್ ಬೆಲ್ ನೋಟಿಫಿಕೇಶನ್‌" ಮತ್ತು "ಬೆಲ್ ನೋಟಿಫಿಕೇಶನ್‌ ಅನ್ನು ಕಳುಹಿಸಲಾಗಿದೆ" ಕಾರ್ಡ್ ಅನ್ನು ಬಳಸಬಹುದು. ನೀವು ಅವಶ್ಯಕವಾದಷ್ಟು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದಾಗ ಈ ಕಾರ್ಡ್‌ಗಳು ಸ್ವಯಂಚಾಲಿತವಾಗಿ ಗೋಚರಿಸುತ್ತವೆ. YouTube ನಲ್ಲಿ ನೋಟಿಫಿಕೇಶನ್‌ಗಳ ಆಯ್ಕೆಗಳು ಕುರಿತು ಹೆಚ್ಚಿನ ಮಾಹಿತಿ ತಿಳಿಯಿರಿ.

Were Notifications Sent to My Subscribers?

ಸಬ್‌ಸ್ಕ್ರೈಬರ್ ಬೆಲ್ ನೋಟಿಫಿಕೇಶನ್ ಮೆಟ್ರಿಕ್‌ಗಳನ್ನು ನೋಡಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಗಡೆ ಮೆನುವಿನಲ್ಲಿ, Analytics ಅನ್ನು ಆಯ್ಕೆ ಮಾಡಿ.
  3. ಪ್ರೇಕ್ಷಕರು ಅನ್ನು ಆಯ್ಕೆ ಮಾಡಿ.
  4. "ಸಬ್‌‌ಸ್ಕ್ರೈಬರ್ ಬೆಲ್ ನೋಟಿಫಿಕೇಶನ್‌ಗಳು" ಕಾರ್ಡ್ ಅನ್ನು ನೋಡಿ.

ಸಬ್‌‌ಸ್ಕ್ರೈಬರ್ ಬೆಲ್ ನೋಟಿಫಿಕೇಶನ್‌ ಮೆಟ್ರಿಕ್‌ಗಳ ಕುರಿತಾಗಿ ಕಲಿಯಿರಿ

ಹೊಸ ವೀಡಿಯೊ ಅಪ್‌ಲೋಡ್‌ಗಳು, ಪ್ರೀಮಿಯರ್‌ಗಳು ಮತ್ತು ಲೈವ್ ಸ್ಟ್ರೀಮ್‌ಗಳು ಸೇರಿದಂತೆ ನಿಮ್ಮ ಚಾನಲ್‌ನಿಂದ ನಿಮ್ಮ ಸಬ್‌‌ಸ್ಕ್ರೈಬರ್‌ಗಳು ಎಷ್ಟು ಶೇಕಡಾ ಪ್ರಮಾಣದ ನೋಟಿಫಿಕೇಶನ್‌ಗಳನ್ನು ಪಡೆಯುತ್ತಾರೆ ಎಂಬ ಕಲ್ಪನೆಯನ್ನು "ಸಬ್‌ಸ್ಕ್ರೈಬರ್ ಬೆಲ್ ನೋಟಿಫಿಕೇಶನ್‌‌ಗಳು" ಕಾರ್ಡ್ ನಿಮಗೆ ನೀಡುತ್ತದೆ.

ನಿಮ್ಮ ಚಾನಲ್‌ಗಾಗಿ “ಎಲ್ಲಾ ನೋಟಿಫಿಕೇಶನ್‌‌ಗಳು” ಅನ್ನು ಆನ್ ಮಾಡಿದ ಸಬ್‌ಸ್ಕ್ರೈಬರ್‌ಗಳು: ನಿಮ್ಮ ಚಾನಲ್‌ಗಾಗಿ “ಎಲ್ಲಾ ನೋಟಿಫಿಕೇಶನ್‌‌ಗಳು” ಅನ್ನು ಆನ್ ಮಾಡಿದ ಸಬ್‌ಸ್ಕ್ರೈಬರ್‌ಗಳು ” ಎಂಬ ಮೆಟ್ರಿಕ್ ಎಲ್ಲಾ ನೋಟಿಫಿಕೇಶನ್‌‌ಗಳನ್ನು ಪಡೆಯಲು ಆಯ್ಕೆ ಮಾಡಿದ ನಿಮ್ಮ ಸಬ್‌ಸ್ಕ್ರೈಬರ್‌ಗಳ ಶೇಕಡಾವಾರುವನ್ನು ಪ್ರತಿನಿಧಿಸುತ್ತದೆ.

ನಿಮ್ಮ ಚಾನಲ್‌ಗಾಗಿ “ಎಲ್ಲಾ ನೋಟಿಫಿಕೇಶನ್‌‌ಗಳು” ಅನ್ನು ಆನ್ ಮಾಡಿದ ಮತ್ತು YouTube ನೋಟಿಫಿಕೇಶನ್‌‌ಗಳನ್ನು ಸಕ್ರಿಯಗೊಳಿಸಿದ ಸಬ್‌ಸ್ಕ್ರೈಬರ್‌ಗಳು: ನಿಮ್ಮ ಚಾನಲ್‌ಗಾಗಿ “ಎಲ್ಲಾ ನೋಟಿಫಿಕೇಶನ್‌ಗಳು” ಅನ್ನು ಆನ್ ಮಾಡಿದ ಮತ್ತು YouTube ನೋಟಿಫಿಕೇಶನ್‌‌ಗಳ ಮೆಟ್ರಿಕ್ ಅನ್ನು ಸಕ್ರಿಯಗೊಳಿಸಿದ ಸಬ್‌ಸ್ಕ್ರೈಬರ್‌ಗಳು ನಿಮ್ಮ ಚಾನಲ್‌ಗಾಗಿ ಎಷ್ಟು ಶೇಕಡಾವಾರು ಸಬ್‌ಸ್ಕ್ರೈಬರ್‌ಗಳು ಎಲ್ಲಾ ನೋಟಿಫಿಕೇಶನ್‌ಗಳನ್ನು ಆನ್ ಮಾಡಿದ್ದಾರೆ ಎಂಬುದನ್ನು ನಿಮಗೆ ತಿಳಿಸುತ್ತದೆ. ಈ ಸಬ್‌ಸ್ಕ್ರೈಬರ್‌ಗಳು ತಮ್ಮ Google ಖಾತೆ ಮತ್ತು ಸಾಧನಕ್ಕಾಗಿ ನೋಟಿಫಿಕೇಶನ್‌‌ಗಳನ್ನು ಸಕ್ರಿಯಗೊಳಿಸಿದ್ದಾರೆ.

ಒಂದು ವೇಳೆ ಸಬ್‌ಸ್ಕ್ರೈಬರ್‌ಗಳು ಬೆಲ್ ಅನ್ನು ಒತ್ತಿದ್ದಾರೆ, ಆದರೆ ಅವರ ಖಾತೆ ಅಥವಾ ಮೊಬೈಲ್ ಆ್ಯಪ್‌ಗಾಗಿ YouTube ನೋಟಿಫಿಕೇಶನ್‌‌ಗಳನ್ನು ಆಫ್ ಮಾಡಿದ್ದರೆ, ಅವರನ್ನು ಈ ಮೆಟ್ರಿಕ್‌ಗೆ ಪರಿಗಣಿಸಲಾಗುವುದಿಲ್ಲ. “YouTube ನೋಟಿಫಿಕೇಶನ್‌‌ಗಳನ್ನು ಸಕ್ರಿಯಗೊಳಿಸಿದ” ಸಬ್‌ಸ್ಕ್ರೈಬರ್‌ಗಳು ಸೈನ್ ಇನ್ ಆಗಿರುವವರು. ಕನಿಷ್ಠ ಒಂದು ಸಾಧನದಲ್ಲಿ ನೋಟಿಫಿಕೇಶನ್‌‌ಗಳನ್ನು ಸ್ವೀಕರಿಸಬಹುದು. ಈ ಸಬ್‌ಸ್ಕ್ರೈಬರ್‌ಗಳು ಖಾತೆ ನೋಟಿಫಿಕೇಶನ್‌‌ಗಳನ್ನು ಇವುಗಳಲ್ಲಿ ಆನ್ ಮಾಡಿದ್ದಾರೆ:

  • ಕಂಪ್ಯೂಟರಿನಲ್ಲಿ, ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳು ನಂತರ ಚಾನಲ್ ಸಬ್‌ಸ್ಕ್ರಿಪ್ಶನ್‌ಗಳು ಅಥವಾ
  • ಮೊಬೈಲ್‌ನಲ್ಲಿ, ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳು ನಂತರ ಸಬ್‌ಸ್ಕ್ರಿಪ್ಶನ್‌ಗಳು

ಮತ್ತು ಕನಿಷ್ಠ ಒಂದು ಸಾಧನದಲ್ಲಿ YouTube ನೋಟಿಫಿಕೇಶನ್‌‌ಗಳನ್ನು ಸಹ ಸಕ್ರಿಯಗೊಳಿಸಲಾಗಿದೆ:

  • ಕಂಪ್ಯೂಟರಿನಲ್ಲಿ, ಇವನ್ನು ಆನ್ ಮಾಡಿ ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳು ನಂತರ ಕಂಪ್ಯೂಟರ್ ನೋಟಿಫಿಕೇಶನ್‌ಗಳು
  • ಮೊಬೈಲ್ ಸಾಧನಗಳಿಗಾಗಿ, ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ YouTube ಆ್ಯಪ್ ನೋಟಿಫಿಕೇಶನ್‌‌ಗಳನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ

ಬೆಲ್ ನೋಟಿಫಿಕೇಶನ್‌ಗಳು ಮೆಟ್ರಿಕ್‌ಗಳನ್ನು ಕಳುಹಿಸಲಾದವು ಎಂದು ನೋಡಿ

ನೀವು ಅರ್ಹ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವಾಗ "ಬೆಲ್ ನೋಟಿಫಿಕೇಶನ್‌‌ಗಳನ್ನು ಕಳುಹಿಸಲಾದವು" ಕಾರ್ಡ್ ಸ್ವಯಂಚಾಲಿತವಾಗಿ YouTube Analytics ನ ರೀಚ್ ಟ್ಯಾಬ್‌ನಲ್ಲಿ ತೋರಿಸುತ್ತದೆ. ವೈಯಕ್ತಿಕ ವೀಡಿಯೊಗಳಿಗಾಗಿ ಈ ಕಾರ್ಡ್ ಲಭ್ಯವಿದೆ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ವೀಡಿಯೊ ಅಥವಾ ಥಂಬ್‌ನೇಲ್‍ ಅನ್ನು ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಲ್ಲಿ, Analytics ನಂತರ ರೀಚ್ ಎಂಬುದನ್ನು ಆಯ್ಕೆ ಮಾಡಿ.
  5. “ಬೆಲ್ ನೋಟಿಫಿಕೇಶನ್ ಕಳುಹಿಸಲಾದವು” ಕಾರ್ಡ್ ಅನ್ನು ಹುಡುಕಿ.

ಬೆಲ್ ನೋಟಿಫಿಕೇಶನ್‌ಗಳನ್ನು ಕಳುಹಿಸಲಾದವು ಮೆಟ್ರಿಕ್‌ಗಳ ಕುರಿತು ತಿಳಿಯಿರಿ

  • ಬೆಲ್ ನೋಟಿಫಿಕೇಶನ್‌ಗಳನ್ನು ಕಳುಹಿಸಲಾದವು: ನಿಮ್ಮ ಚಾನಲ್‌ನಿಂದ ಎಲ್ಲಾ ನೋಟಿಫಿಕೇಶನ್‌ಗಳನ್ನು ಪಡೆಯುವ ಸಬ್‌ಸ್ಕ್ರೈಬರ್‌ಗಳಿಗೆ ಕಳುಹಿಸಲಾದ ಬೆಲ್ ನೋಟಿಫಿಕೇಶನ್‌ಗಳ ಸಂಖ್ಯೆ ಮತ್ತು ಅವರ ಖಾತೆ ಮತ್ತು ಸಾಧನಕ್ಕಾಗಿ YouTube ನೋಟಿಫಿಕೇಶನ್‌ಗಳನ್ನು ಆನ್ ಮಾಡಲಾಗಿದೆ.
  • ನೋಟಿಫಿಕೇಶನ್‌ಗಳು CTR (ಕ್ಲಿಕ್-ಥ್ರೂ ರೇಟ್): ನಿಮ್ಮ ವೀಡಿಯೊಗೆ ಸಂಬಂಧಿಸಿದ ಬೆಲ್ ನೋಟಿಫಿಕೇಶನ್ ಅನ್ನು ಪಡೆದು, ಅದನ್ನು ಕ್ಲಿಕ್ ಮಾಡಿದ ವೀಕ್ಷಕರ ಶೇಕಡಾವಾರು.
  • ಬೆಲ್ ನೋಟಿಫಿಕೇಶನ್‌ಗಳಿಂದ ಬಂದ ವೀಕ್ಷಣೆಗಳು: ಬೆಲ್ ನೋಟಿಫಿಕೇಶನ್‌ ಅನ್ನು ಕ್ಲಿಕ್ ಮಾಡಿದ ಮತ್ತು ತಕ್ಷಣವೇ ನಿಮ್ಮ ವೀಡಿಯೊವನ್ನು ವೀಕ್ಷಿಸಿದ ವೀಕ್ಷಕರಿಂದ ನೀವು ಪಡೆದ ವೀಕ್ಷಣೆಗಳು. ಈ ಸಂಖ್ಯೆಯು ನಿಮ್ಮ ಬೆಲ್ ನೋಟಿಫಿಕೇಶನ್‌ ಅನ್ನು ನೋಡಿದ ಮತ್ತು ನಂತರ ನಿಮ್ಮ ವೀಡಿಯೊವನ್ನು ವೀಕ್ಷಿಸಿದ ವೀಕ್ಷಕರನ್ನು ಒಳಗೊಂಡಿಲ್ಲ. ನಿಮ್ಮ ರೀಚ್ ವರದಿ ಯಲ್ಲಿ ನೀವು ಆ್ಯಪ್ ನೋಟಿಫಿಕೇಶನ್‌‌ಗಳು ಮತ್ತು ಇಮೇಲ್ ಅಪ್‌ಡೇಟ್‌ಗಳಿಂದ ಬಂದಂತಹ ವೀಕ್ಷಣೆಗಳ ಅಂಕಿ-ಅಂಶವನ್ನು ಪಡೆಯಬಹುದು.

ಸಬ್‌ಸ್ಕ್ರೈಬರ್ ಬೆಲ್ ನೋಟಿಫಿಕೇಶನ್ FAQ ಗಳು

"ನಿಮ್ಮ ಚಾನಲ್‌ಗಾಗಿ" ಎಲ್ಲಾ ನೋಟಿಫಿಕೇಶನ್‌ಗಳನ್ನು" ಆನ್ ಮಾಡಲಾಗಿದೆ" ಎಂದರೆ ಅರ್ಥ ಏನು?

ವೀಕ್ಷಕರಿಗೆ ವಿವಿಧ ರೀತಿಯ YouTube ನೋಟಿಫಿಕೇಶನ್‌ಗಳನ್ನುಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಬೆಲ್‌ನ ಕೆಲವು ವಿಭಿನ್ನ ಆವೃತ್ತಿಗಳಿವೆ. ಅವುಗಳು ಯಾವುವೆಂದರೆ:

  •  ಎಲ್ಲಾ: ದೈನಂದಿನ ಮಿತಿಗಳನ್ನು ಮೀರಿದ ನೋಟಿಫಿಕೇಶನ್‌ಗಳನ್ನು ಹೊರತುಪಡಿಸಿ, ಸಬ್‌ಸ್ಕ್ರೈಬರ್‌ಗಳು ನಿಮ್ಮ ಚಾನಲ್‌ನಿಂದ ಎಲ್ಲಾ ಬಗೆಯ ನೋಟಿಫಿಕೇಶನ್‌ಗಳನ್ನು ಪಡೆಯುತ್ತಾರೆ.
  • ವೈಯಕ್ತೀಕರಣಗೊಳಿಸಲಾದವು: ಸಬ್‌ಸ್ಕ್ರೈಬರ್‌ಗಳು ನಿಮ್ಮ ಚಾನಲ್‌ನಿಂದ ಕಸ್ಟಮೈಸ್ ಮಾಡಿದ ಉಪವಿಭಾಗದ ನೋಟಿಫಿಕೇಶನ್‌ಗಳನ್ನು ಪಡೆಯುತ್ತಾರೆ.
  • ಯಾವುದೂ ಇಲ್ಲ: ಸಬ್‌ಸ್ಕ್ರೈಬರ್‌ಗಳು ತಮ್ಮ ಸಾಧನದ ಸೆಟ್ಟಿಂಗ್‌ಗಳಿಂದಾಗಿ ನಿಮ್ಮ ಚಾನಲ್‌ನಿಂದ ನೋಟಿಫಿಕೇಶನ್‌ಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಬೆಲ್‌ನ ಈ ಆವೃತ್ತಿಯನ್ನು ನೋಡುತ್ತಾರೆ.

"ನಿಮ್ಮ ಚಾನಲ್‌ಗಾಗಿ ಎಲ್ಲಾ ನೋಟಿಫಿಕೇಶನ್‌ಗಳು" ಮೆಟ್ರಿಕ್ ಅನ್ನು ಆನ್ ಮಾಡಿದ ಸಬ್‌ಸ್ಕ್ರೈಬರ್‌ಗಳು ವೈಯಕ್ತೀಕರಿಸಿದ ನೋಟಿಫಿಕೇಶನ್‌ ಅನ್ನು ಪಡೆಯಲು ಆಯ್ಕೆ ಮಾಡುವ ಸಬ್‌ಸ್ಕ್ರೈಬರ್‌ಗಳನ್ನು ಅಥವಾ ಅವರ ಸಬ್‌ಸ್ಕ್ರಿಪ್ಶನ್ ನಿರ್ವಾಹಕರು ಅಥವಾ ಚಾನಲ್ ಸೆಟ್ಟಿಂಗ್‌ಗಳಲ್ಲಿ ನಿಮ್ಮ ಚಾನಲ್‌ನಿಂದ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿದವರನ್ನು ಒಳಗೊಂಡಿರುವುದಿಲ್ಲ. ನೋಟಿಫಿಕೇಶನ್‌ಗಳ ಮೇಲೆ ಪರಿಣಾಮ ಬೀರುವ ಸೆಟ್ಟಿಂಗ್‌ಗಳು ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ವೀಕ್ಷಕರನ್ನು, ನನ್ನ ಚಾನಲ್‌ನಿಂದ ಬರುವ ಎಲ್ಲಾ ನೋಟಿಫಿಕೇಶನ್‌ಗಳಿಗೆ ಸಬ್‌ಸ್ಕ್ರೈಬ್ ಆಗುವಂತೆ ಮಾಡುವುದು ಹೇಗೆ?

ಕೆಲವು ವೀಕ್ಷಕರು ತಾವು ಸಬ್‌ಸ್ಕ್ರೈಬ್ ಆಗಿರುವ ಪ್ರತಿಯೊಂದು ಚಾನಲ್‌ನಿಂದ ಎಲ್ಲಾ ನೋಟಿಫಿಕೇಶನ್‌ಗಳನ್ನು ಪಡೆಯಲು ಬಯಸುವುದಿಲ್ಲ. ಕೆಲವರಿಗೆ, ಎಲ್ಲಾ ನೋಟಿಫಿಕೇಶನ್‌ಗಳು ಕಿರಿಕಿರಿಯನ್ನು ಉಂಟು ಮಾಡಬಹುದು ಮತ್ತು ವೀಕ್ಷಕರು ನೋಟಿಫಿಕೇಶನ್‌ಗಳನ್ನು ಸಂಪೂರ್ಣವಾಗಿ ಆಫ್ ಮಾಡಲು ಇದು ಕಾರಣವಾಗಬಹುದು.

ನಿಮ್ಮ ಸಬ್‌ಸ್ಕ್ರೈಬರ್‌ಗಳಿಗೆ ಸೂಕ್ತವಾದ ನೋಟಿಫಿಕೇಶನ್‌ ಮಟ್ಟವನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸಿ. ನೀವು ಎಲ್ಲಾ ನೋಟಿಫಿಕೇಶನ್‌ಗಳನ್ನು ಪಡೆಯಲು ಬಯಸುವ ವೀಕ್ಷಕರನ್ನು ಹೊಂದಿದ್ದರೆ, ಆದರೆ ಅವರು ಅವುಗಳನ್ನು ಪಡೆಯುವ ನಿಟ್ಟಿನಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ, ಅವರಿಗೆ ನೋಟಿಫಿಕೇಶನ್‌ಗಳ ಟ್ರಬಲ್‌ಶೂಟರ್ ಅನ್ನು ಕಳುಹಿಸಿ.

“YouTube ನಲ್ಲಿ ಸಾಮಾನ್ಯ” ಎಂಬ ಶ್ರೇಣಿಗಿಂತ ನಾನು ಕಡಿಮೆ ಇದ್ದೇನೆ. ಅದು ಸರಿ ಇಲ್ಲವೇ?

ನಿಮ್ಮ ಚಾನಲ್‌ಗಾಗಿ "ಎಲ್ಲಾ ನೋಟಿಫಿಕೇಶನ್‌ಗಳು" ಅನ್ನು ಆನ್ ಮಾಡಿದ ಸಬ್‌ಸ್ಕ್ರೈಬರ್‌ಗಳು

ಅನೇಕ ಚಾನಲ್‌ಗಳು ಈ ಶ್ರೇಣಿಯಲ್ಲಿ ಬರುವುದಿಲ್ಲ ಮತ್ತು ಅವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ನೋಟಿಫಿಕೇಶನ್‌ಗಳು ಎಂಬುದು ಹಲವು ಟ್ರಾಫಿಕ್ ಮೂಲಗಳಲ್ಲಿ ಒಂದಾಗಿದೆ (ಉದಾಹರಣೆಗೆ: ಮುಂದಿನದು, ಹೋಮ್ ಅಥವಾ ಹುಡುಕಾಟ). ಬೇರೆ ಬೇರೆ ಚಾನಲ್‌ಗಳು ವಿಭಿನ್ನ ಟ್ರಾಫಿಕ್ ಮೂಲಗಳಿಂದ ವಿಭಿನ್ನ ಶೇಕಡಾವಾರು ಪ್ರಮಾಣದಲ್ಲಿ ಟ್ರಾಫಿಕ್ ಅನ್ನು ಪಡೆಯುತ್ತವೆ.

ಸಬ್‌ಸ್ಕ್ರೈಬರ್‌ಗಳು ಎಲ್ಲಾ ಚಾನಲ್ ನೋಟಿಫಿಕೇಶನ್‌ಗಳನ್ನು ಎಲ್ಲಾ ಸಮಯದಲ್ಲಿ ಬಯಸುತ್ತಾರೆಯೇ ಎಂಬುದರ ಮೇಲೆ ಪ್ರಭಾವ ಬೀರುವ ಹಲವು ಅಂಶಗಳಿವೆ. ಸಬ್‌ಸ್ಕ್ರೈಬರ್‌ ನೋಟಿಫಿಕೇಶನ್ ಆಯ್ಕೆಯು ಅಪ್‌ಲೋಡ್ ಆವರ್ತನೆ, ವೀಡಿಯೊದ ವಿಷಯಗಳು ಅಥವಾ ಇತರ ಚಾನಲ್ ಸಬ್‌ಸ್ಕ್ರಿಪ್ಶನ್‌ಗಳಂತಹ ಅಂಶಗಳಿಂದ ಪ್ರಭಾವಿತವಾಗಿರುತ್ತದೆ.

ನಿಮ್ಮ ಚಾನಲ್‌ಗಾಗಿ "ಎಲ್ಲಾ ನೋಟಿಫಿಕೇಶನ್‌ಗಳು" ಅನ್ನು ಆನ್ ಮಾಡಿದ ಮತ್ತು YouTube ನೋಟಿಫಿಕೇಶನ್‌ಗಳನ್ನು ಸಕ್ರಿಯಗೊಳಿಸಿದ ಸಬ್‌ಸ್ಕ್ರೈಬರ್‌‌ಗಳು

ನಿಮ್ಮ ಚಾನಲ್‌ಗಾಗಿ ಎಲ್ಲಾ ನೋಟಿಫಿಕೇಶನ್‌ಗಳನ್ನು ಆನ್ ಮಾಡಿದ ಸಬ್‌ಸ್ಕ್ರೈಬರ್‌ಗಳಿಗಾಗಿ ನೀವು ಸಾಮಾನ್ಯ ಶ್ರೇಣಿಯಲ್ಲಿದ್ದರೆ, ಆದರೆ ನೋಟಿಫಿಕೇಶನ್‌ಗಳ ಶ್ರೇಣಿಯ ಕೆಳಗೆ ಸಕ್ರಿಯಗೊಳಿಸಿದ್ದರೆ, ನೋಟಿಫಿಕೇಶನ್‌ಗಳ ಟ್ರಬಲ್‌ಶೂಟರ್ ಅನ್ನು ಬಳಸಿ ಎಂದು ವೀಕ್ಷಕರಿಗೆ ತಿಳಿಸಿ. ಈ ವೀಕ್ಷಕರು ಬೆಲ್ ಅನ್ನು ಒತ್ತುವ ಮೂಲಕ ಎಲ್ಲಾ ನೋಟಿಫಿಕೇಶನ್‌ಗಳನ್ನು ಪಡೆಯಲು ಆಸಕ್ತಿ ತೋರಿಸಿದರು. ಅವರಿಗೆ ನೋಟಿಫಿಕೇಶನ್‌ಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರಿಗೆ ತಿಳಿದಿಲ್ಲದಿರಬಹುದು.

ಹಿಂದಿನ ಅವಧಿಗಳ ನನ್ನ ಸಬ್‌ಸ್ಕ್ರೈಬರ್‌ಗಳ ನೋಟಿಫಿಕೇಶನ್‌ ಮೆಟ್ರಿಕ್‌ಗಳನ್ನು ನಾನು ನೋಡಬಹುದೇ?

ಸಬ್‌ಸ್ಕ್ರೈಬರ್‌ಗಳ ಬೆಲ್ ನೋಟಿಫಿಕೇಶನ್‌‌ಗಳು ಕಾರ್ಡ್ ಪ್ರಸ್ತುತ ಮೆಟ್ರಿಕ್‌ಗಳನ್ನು ಮಾತ್ರ ತೋರಿಸುತ್ತದೆ. ಇತಿಹಾಸದ ಮೌಲ್ಯಗಳು ಲಭ್ಯವಿರುವುದಿಲ್ಲ.

ನಾನು ಹೊಸ ಸಬ್‌ಸ್ಕ್ರೈಬರ್‌ಗಳನ್ನು ಪಡೆದರೆ, ನನ್ನ ಸಬ್‌ಸ್ಕ್ರೈಬರ್‌ಗಳ ಮೆಟ್ರಿಕ್‌ಗಳು ತಕ್ಷಣವೇ ಹೆಚ್ಚಾಗುತ್ತವೆಯೇ?

ಸಬ್‌ಸ್ಕ್ರೈಬರ್‌ಗಳ ಮೆಟ್ರಿಕ್‌ಗಳನ್ನು ಪ್ರತಿದಿನ ಅಪ್‌ಡೇಟ್ ಮಾಡಲಾಗುತ್ತದೆ, ಆದರೆ ಇವು 2-ದಿನದ ವಿಳಂಬವನ್ನು ಹೊಂದಿರುತ್ತವೆ. ನೀವು ಸೋಮವಾರ ವೀಡಿಯೊವನ್ನು ಪೋಸ್ಟ್ ಮಾಡಿದರೆ ಮತ್ತು ಹೊಸ ಸಬ್‌ಸ್ಕ್ರೈಬರ್‌ಗಳನ್ನು ಪಡೆದರೆ, ಅವರು ಬುಧವಾರ ನಿಮ್ಮ ಮೆಟ್ರಿಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಬೆಲ್ ನೋಟಿಫಿಕೇಶನ್ ಕಳುಹಿಸಲಾದವು FAQ

“ಬೆಲ್ ನೋಟಿಫಿಕೇಶನ್ ಕಳುಹಿಸಲಾದವು” ಕಾರ್ಡ್ ಅನ್ನು ನಾನು ಹೇಗೆ ಬಳಸಬಹುದು?

“ಬೆಲ್ ನೋಟಿಫಿಕೇಶನ್ ಕಳುಹಿಸಲಾದವು”, "ಸಬ್‌ಸ್ಕ್ರೈಬರ್‌ ಬೆಲ್ ನೋಟಿಫಿಕೇಶನ್‌‌ಗಳು" ಕಾರ್ಡ್‌ನ ಜೊತೆಗೆ ಕಾರ್ಯನಿರ್ವಹಿಸುತ್ತದೆ:
  • "ಸಬ್‌ಸ್ಕ್ರೈಬರ್‌ ಬೆಲ್ ನೋಟಿಫಿಕೇಶನ್‌‌ಗಳು" ಕಾರ್ಡ್‌ ಎಂಬುದು ನಿಮ್ಮ ಸಂಪೂರ್ಣ ಚಾನಲ್‌ನಿಂದ ಎಲ್ಲಾ ನೋಟಿಫಿಕೇಶನ್‌ಗಳನ್ನು ಪಡೆಯಲು ನಿಮ್ಮ ಸಬ್‌ಸ್ಕ್ರೈಬರ್‌ಗಳಲ್ಲಿ ಯಾವ ಪ್ರಮಾಣವು ಬೆಲ್  ಅನ್ನು ಕ್ಲಿಕ್ ಮಾಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರ ಸಾಧನ ಮತ್ತು ಖಾತೆ ಸೆಟ್ಟಿಂಗ್‌ಗಳ ಆಧಾರದ ಮೇಲೆ ನೋಟಿಫಿಕೇಶನ್‌ಗಳನ್ನು ಪಡೆಯಲು ಎಷ್ಟು ಸಬ್‌ಸ್ಕ್ರೈಬರ್‌ಗಳು ಅರ್ಹರಾಗಿದ್ದಾರೆ ಎಂಬುದನ್ನು ಸಹ ಇದು ತೋರಿಸುತ್ತದೆ.
  • “ಬೆಲ್ ನೋಟಿಫಿಕೇಶನ್ ಕಳುಹಿಸಲಾದವು” ಕಾರ್ಡ್ ಎಷ್ಟು ವೀಕ್ಷಕರು ನಿಮ್ಮ ಬೆಲ್ ನೋಟಿಫಿಕೇಶನ್‌ ಅನ್ನು ಪಡೆದರು, ಅದನ್ನು ಕ್ಲಿಕ್ ಮಾಡಿದವರು ಎಷ್ಟು ಮತ್ತು ನಿಮ್ಮ ವೀಡಿಯೊವನ್ನು ವೀಕ್ಷಿಸಿದವರೆಷ್ಟು ಎಂಬ ಮಾಹಿತಿಯನ್ನು ತೋರಿಸುತ್ತದೆ. ಬೆಲ್ ನೋಟಿಫಿಕೇಶನ್‌ ಅನ್ನು ಪಡೆಯಲು ಅರ್ಹರಾಗಿರುವ ನಿಮ್ಮ ವೀಡಿಯೊವನ್ನು ಪ್ರಕಟಿಸುವಾಗ ನೀವು ಹೊಂದಿರುವ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ಸಹ ಈ ಕಾರ್ಡ್ ತೋರಿಸುತ್ತದೆ.

ನನ್ನ ನೋಟಿಫಿಕೇಶನ್‌‌ಗಳ CTR ನನ್ನ ಥಂಬ್‌ನೇಲ್ CTR ಗಿಂತ ಹೇಗೆ ಭಿನ್ನವಾಗಿದೆ?

ನಿಮ್ಮ ವೀಡಿಯೊದ ಬೆಲ್ ನೋಟಿಫಿಕೇಶನ್ ಅನ್ನು ಎಷ್ಟು ವೀಕ್ಷಕರು ನೋಡಿದ್ದಾರೆ ಮತ್ತು ಅದನ್ನು ಕ್ಲಿಕ್ ಮಾಡಿದ್ದಾರೆ ಎಂಬುದನ್ನು ನಿಮ್ಮ ನೋಟಿಫಿಕೇಶನ್‌‌ಗಳ CTR ತೋರಿಸುತ್ತದೆ. YouTube ನಲ್ಲಿ ನಿಮ್ಮ ವೀಡಿಯೊ ಥಂಬ್‌ನೇಲ್ ಅನ್ನು ಎಷ್ಟು ವೀಕ್ಷಕರು ನೋಡಿದ್ದಾರೆ ಮತ್ತು ಅದನ್ನು ಕ್ಲಿಕ್ ಮಾಡಿದ್ದಾರೆ ಎಂಬುದನ್ನು ನಿಮ್ಮ ಥಂಬ್‌ನೇಲ್ CTR ತೋರಿಸುತ್ತದೆ. ನಿಮ್ಮ ಇಂಪ್ರೆಷನ್‍ಗಳು ಮತ್ತು CTR ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಇಂಪ್ರೆಷನ್‌ಗಳ CTR ಗಿಂತ ನನ್ನ ನೋಟಿಫಿಕೇಶನ್‌ಗಳ CTR ಏಕೆ ಕಡಿಮೆಯಾಗಿದೆ?

ನಿಮ್ಮ ನೋಟಿಫಿಕೇಶನ್‌ಗಳ CTR ನಿಮ್ಮ ಇಂಪ್ರೆಷನ್‌ಗಳ CTR ಗಿಂತ ಕಡಿಮೆ ಇರುವುದು ಸಹಜ.
ಜನರು ದಿನವಿಡೀ ನೋಟಿಫಿಕೇಶನ್‌ಗಳನ್ನು ಪಡೆಯುತ್ತಾರೆ, ಆದರೆ ವೀಡಿಯೊಗಳನ್ನು ವೀಕ್ಷಿಸಲು ಸಾಧ್ಯವಿಲ್ಲ. ಅವರು ಕೆಲಸ ಮಾಡುತ್ತಿರಬಹುದು ಅಥವಾ ಅಡುಗೆ ತಯಾರಿಸುತ್ತಾ ಇರಬಹುದು. YouTube ನಲ್ಲಿನ ಚಟುವಟಿಕೆಯ ಆಧಾರದ ಮೇಲೆ ನಿಮ್ಮ ಇಂಪ್ರೆಷನ್‌ಗಳ CTR ಅನ್ನು ಮಾಪನ ಮಾಡಲಾಗುತ್ತದೆ. ಇದು ತಮ್ಮ ದೈನಂದಿನ ಜೀವನದಲ್ಲಿ ತೊಡಗಿಕೊಂಡಿರುವ ವೀಕ್ಷಕರಿಗಿಂತ ಹೆಚ್ಚಾಗಿ YouTube ನಲ್ಲಿ ಏನನ್ನಾದರೂ ವೀಕ್ಷಿಸಲು ಸಕ್ರಿಯವಾಗಿ ಹುಡುಕುತ್ತಿರುವ ವೀಕ್ಷಕರ ನಡವಳಿಕೆಯನ್ನು ಪ್ರತಿನಿಧಿಸುತ್ತದೆ.
ನನ್ನ ಎಲ್ಲಾ ನೋಟಿಫಿಕೇಶನ್‌ಗಳನ್ನು ಏಕೆ ಕಳುಹಿಸಲಾಗಲಿಲ್ಲ?
ನಿಮ್ಮ "ಬೆಲ್ ನೋಟಿಫಿಕೇಶನ್‌ ಕಳುಹಿಸಲಾದುದು" 100% ಕ್ಕಿಂತ ಕಡಿಮೆ ಆಗಿರಲು, ಇರಬಹುದಾದ ಸಾಮಾನ್ಯ ಕಾರಣಗಳು ಇಲ್ಲಿವೆ:
  • ನಿಮ್ಮ ಚಾನಲ್ ಈಗಾಗಲೇ 24-ಗಂಟೆಗಳ ಅವಧಿಯಲ್ಲಿ ಗರಿಷ್ಠ 3 ವೀಡಿಯೊ ನೋಟಿಫಿಕೇಶನ್‌ಗಳನ್ನು ಕಳುಹಿಸಿದೆ.
  • ನೀವು ಕಡಿಮೆ ಸಮಯದಲ್ಲಿ 3 ಕ್ಕಿಂತ ಹೆಚ್ಚು ವೀಡಿಯೊಗಳನ್ನು ಪ್ರಕಟಿಸಿದ್ದೀರಿ.
  • ಕಳೆದ 24 ಗಂಟೆಗಳಲ್ಲಿ ನಿಮ್ಮ ಸಬ್‌ಸ್ಕ್ರೈಬರ್‌ ಸಂಖ್ಯೆ ಗಣನೀಯವಾಗಿ ಬದಲಾಗಿದೆ. ಇನ್ನಷ್ಟು ತಿಳಿಯಿರಿ.
  • ಎಲ್ಲಾ ನೋಟಿಫಿಕೇಶನ್‌‌ಗಳನ್ನು ಕಳುಹಿಸುವ ಮೊದಲು ನಿಮ್ಮ ವೀಡಿಯೊದ ಗೌಪ್ಯತಾ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಿದ್ದೀರಿ.
  • ನೀವು ಈ ವೀಡಿಯೊಗಾಗಿ ನೋಟಿಫಿಕೇಶನ್‌ಗಳನ್ನು ಸ್ಕಿಪ್ ಮಾಡಿದ್ದೀರಿ.
ನನ್ನ ಸಬ್‌ಸ್ಕ್ರೈಬರ್‌ ಸಂಖ್ಯೆಯಲ್ಲಿನ ಬದಲಾವಣೆಗಳು ನಾನು ಕಳುಹಿಸಿದ ಬೆಲ್ ನೋಟಿಫಿಕೇಶನ್‌ಗಳ ಶೇಕಡಾವಾರು ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ನಿಮ್ಮ ಸಬ್‌ಸ್ಕ್ರೈಬರ್‌ ಸಂಖ್ಯೆಯು ಆಗಾಗ್ಗೆ ಬದಲಾಗುವುದು ಸಹಜ. ಕೆಲವು ಕಾರಣಗಳಿಂದಾಗಿ ನೀವು ವೀಡಿಯೊವನ್ನು ಪ್ರಕಟಿಸುವ ಮೊದಲು ನಿಮ್ಮ ಸಬ್‌ಸ್ಕ್ರೈಬರ್‌ ಸಂಖ್ಯೆಯು ಗಣನೀಯವಾಗಿ ಬದಲಾದರೆ, 100% ಕ್ಕಿಂತ ಕಡಿಮೆ ಬೆಲ್ ನೋಟಿಫಿಕೇಶನ್‌ಗಳನ್ನು ಕಳುಹಿಸುವುದನ್ನು ನೀವು ಗಮನಿಸಬಹುದು.
ಈ ಸಂದರ್ಭಗಳಲ್ಲಿ, ನಾವು ಇನ್ನೂ ಎಲ್ಲಾ ಅರ್ಹ ಸಬ್‌ಸ್ಕ್ರೈಬರ್‌ಗಳಿಗೆ ನೋಟಿಫೈ ಮಾಡುತ್ತೇವೆ, ಆದರೆ ವರದಿ ಮಾಡುವ ವಿಳಂಬದಿಂದಾಗಿ ಕಾರ್ಡ್ 100% ಕ್ಕಿಂತ ಕಡಿಮೆ ತೋರಿಸಬಹುದು.

ನೋಟಿಫಿಕೇಶನ್‌ಗಳು CTR ಗಾಗಿ “YouTube ನಲ್ಲಿ ಸಾಮಾನ್ಯ” ಎಂಬ ಶ್ರೇಣಿಗಿಂತ ನಾನು ಕಡಿಮೆ ಇದ್ದೇನೆ. ಅದು ಸರಿ ಇಲ್ಲವೇ?

ನೋಟಿಫಿಕೇಶನ್‌ ಅನ್ನು ತೆರೆಯಲು ಸಬ್‌ಸ್ಕ್ರೈಬರ್‌‌ಗಳು ಕ್ಲಿಕ್ ಮಾಡುತ್ತಾರೆಯೇ ಎಂಬುದರ ಮೇಲೆ ಪ್ರಭಾವ ಬೀರುವ ಹಲವು ಅಂಶಗಳಿವೆ. ವೀಕ್ಷಕರು ದಿನದ ಸಮಯ, ಅವರು ಏನು ಮಾಡುತ್ತಿದ್ದಾರೆ ಮತ್ತು ಮುಂತಾದ ಕಾರಣಗಳಿಂದಾಗಿ ನೋಟಿಫಿಕೇಶನ್‌ ಅನ್ನು ಕ್ಲಿಕ್ ಮಾಡದಿರಬಹುದು.
ಅನೇಕ ಚಾನಲ್‌ಗಳು ಈ ಶ್ರೇಣಿಯಲ್ಲಿ ಬರುವುದಿಲ್ಲ ಮತ್ತು ಅವು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ನೋಟಿಫಿಕೇಶನ್‌ಗಳು ವೀಕ್ಷಣೆಯನ್ನು ಹೆಚ್ಚಿಸುವ ಹಲವು ಟ್ರಾಫಿಕ್ ಮೂಲಗಳಲ್ಲಿ ಒಂದಾಗಿದೆ. ಇತರ ಮೂಲಗಳಲ್ಲಿ ಮುಂದಿನದು, ಹೋಮ್, ಹುಡುಕಾಟ, ಬಾಹ್ಯ ಮೂಲಗಳು ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್ ಸೇರಿವೆ. ವಿಭಿನ್ನ ಟ್ರಾಫಿಕ್ ಮೂಲಗಳಿಂದ ಬೇರೆ ಬೇರೆ ಚಾನಲ್‌ಗಳು ವಿಭಿನ್ನ ಮಟ್ಟದ ಶೇಕಡಾವಾರು ಟ್ರಾಫಿಕ್ ಅನ್ನು ಪಡೆಯುತ್ತವೆ.

ಹಿಂದಿನ ಸೆಶನ್‌ಗಳಿಗಾಗಿ "ಬೆಲ್ ನೋಟಿಫಿಕೇಶನ್‌ಗಳನ್ನು ಕಳುಹಿಸಲಾದವು" ಕಾರ್ಡ್ ಅನ್ನು ನಾನು ಪರಿಶೀಲಿಸಬಹುದೇ?

"ಬೆಲ್ ನೋಟಿಫಿಕೇಶನ್‌ಗಳನ್ನು ಕಳುಹಿಸಲಾದವು" ಕಾರ್ಡ್‌ಗೆ ಇತಿಹಾಸದಲ್ಲಿ ಇರುವ ಮೌಲ್ಯಗಳು ಲಭ್ಯವಿಲ್ಲ. ನೀವು YouTube Analytics ನಲ್ಲಿ ದಿನಾಂಕ ವ್ಯಾಪ್ತಿಯನ್ನು ಬದಲಾಯಿಸಿದರೆ, ಕಾರ್ಡ್‌ನಲ್ಲಿರುವ ಡೇಟಾ ಹಾಗೆಯೇ ಉಳಿಯುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17734955736807210510
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false