ಚಾನಲ್‌ನ ಪರ್ಫಾರ್ಮೆನ್ಸ್ ಕುರಿತ ಅವಲೋಕನವನ್ನು ಪಡೆಯಿರಿ

YouTube Analytics ನಲ್ಲಿನ ಅವಲೋಕನ ಟ್ಯಾಬ್ YouTube ನಲ್ಲಿ ನಿಮ್ಮ ಚಾನಲ್ ಮತ್ತು ವೀಡಿಯೊಗಳು ಹೇಗೆ ಪರ್ಫಾರ್ಮ್ ಮಾಡುತ್ತಿವೆ ಎಂಬುದರ ಕುರಿತಾಗಿ ಉನ್ನತ ಮಟ್ಟದ ಸಾರಾಂಶವನ್ನು ನೀಡುತ್ತದೆ. ಕೀ ಮೆಟ್ರಿಕ್ಸ್ ಕಾರ್ಡ್ ನಿಮ್ಮ ವೀಕ್ಷಣೆಗಳು, ವೀಕ್ಷಣೆ ಸಮಯ, ಸಬ್‌ಸ್ಕ್ರೈಬರ್‌ಗಳು ಮತ್ತು ಅಂದಾಜು ಆದಾಯವನ್ನು (ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ) ತೋರಿಸುತ್ತದೆ. 
 
ಗಮನಿಸಿ: ಕೆಲವು ವರದಿಗಳು ಮೊಬೈಲ್ ಸಾಧನಗಳಲ್ಲಿ ಲಭ್ಯವಿಲ್ಲದಿರಬಹುದು.

ನಿಮ್ಮ ಅವಲೋಕನ ವರದಿಗಳನ್ನು ವೀಕ್ಷಿಸಿ

YouTube Android ಆ್ಯಪ್

YouTube ಆ್ಯಪ್‌ನಲ್ಲಿ, ನಿಮ್ಮ ಚಾನಲ್‌ಗೆ ಸಂಬಂಧಿಸಿದ ಈ ಕೆಳಗಿನ ಎಲ್ಲಾ-ಸಮಯದ ಮೆಟ್ರಿಕ್‌ಗಳನ್ನು ನೀವು ವೀಕ್ಷಿಸಬಹುದು: ಸಬ್‌ಸ್ಕ್ರೈಬರ್‌ಗಳು, ವೀಕ್ಷಣೆಗಳು, ಲೈಕ್‌ಗಳು, ಕಾಮೆಂಟ್‌ಗಳು, ಹಂಚಿಕೆಗಳು ಮತ್ತು ಸಾರ್ವಜನಿಕ ವೀಡಿಯೊಗಳ ಸಂಖ್ಯೆ.

ನೀವು ಕಳೆದ 7 ದಿನಗಳಿಗೆ ಸಂಬಂಧಪಟ್ಟ ನಿಮ್ಮ ಇತ್ತೀಚಿನ ವೀಕ್ಷಣೆಗಳು ಮತ್ತು ನಿಮ್ಮ ಚಾನಲ್‌ನಲ್ಲಿನ ಹೊಚ್ಚಹೊಸ ಕಂಟೆಂಟ್‌ನ ಅಂಕಿಅಂಶಗಳನ್ನು ಸಹ ವೀಕ್ಷಿಸಬಹುದು. ಹೆಚ್ಚು ವಿವರವಾದ ವಿಶ್ಲೇಷಣೆಗಳಿಗಾಗಿ, ನೀವು YouTube Studio ಆ್ಯಪ್  ಅನ್ನು ಬಳಸಬಹುದು.

  1. YouTube ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಪ್ರೊಫೈಲ್ ಚಿತ್ರ ನಂತರ ನಿಮ್ಮ ಚಾನಲ್ ಅನ್ನು ಟ್ಯಾಪ್ ಮಾಡಿ.
  3. ನಿಮ್ಮ ಚಾನಲ್‌ನ ಪರ್ಫಾರ್ಮೆನ್ಸ್‌ನ ಸಂಕ್ಷಿಪ್ತ ಸಾರಾಂಶವನ್ನು ವೀಕ್ಷಿಸಲು, ಮಧ್ಯದ ಮೆನುವಿನಿಂದ Analytics  ಅನ್ನು ಟ್ಯಾಪ್ ಮಾಡಿ.

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ತೆರೆಯಿರಿ.
  2. ಕೆಳಗಿನ ಮೆನುವಿನಿಂದ, Analytics ಅನ್ನು ಟ್ಯಾಪ್ ಮಾಡಿ.
  3. ಅವಲೋಕನ ಟ್ಯಾಬ್ ಡೀಫಾಲ್ಟ್ ಆಗಿ ಕಾಣಿಸಿಕೊಳ್ಳುತ್ತದೆ. 

ಟಾಪ್ ಕಂಟೆಂಟ್

ಟಾಪ್ ವೀಡಿಯೊಗಳ ವರದಿಯು ನಿಮ್ಮ ಅತ್ಯಂತ ಜನಪ್ರಿಯ ವೀಡಿಯೊಗಳನ್ನು ಹೈಲೈಟ್ ಮಾಡುತ್ತದೆ. ಡೀಫಾಲ್ಟ್ ಆಗಿ, ವೀಕ್ಷಣೆಯ ಆಧಾರದ ಮೇಲೆ ವರದಿಯು ಟಾಪ್ ವೀಡಿಯೊಗಳನ್ನು ತೋರಿಸುತ್ತದೆ.

ನೈಜಸಮಯ

ನೈಜಸಮಯದ ವರದಿಯು ನಿಮ್ಮ ಇತ್ತೀಚೆಗೆ ಪ್ರಕಟವಾದ ವೀಡಿಯೊಗಳ ಪರ್ಫಾರ್ಮೆನ್ಸ್ ಕುರಿತು ಆರಂಭಿಕ ಒಳನೋಟಗಳನ್ನು ನೀಡುತ್ತದೆ. ವರದಿಯು ನಿಮ್ಮ ಟಾಪ್ ವೀಡಿಯೊಗಳು ಮತ್ತು ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯ ಕುರಿತು ಮಾಹಿತಿಯನ್ನು ನೀಡುತ್ತದೆ. 60 ನಿಮಿಷ ಹಾಗೂ 48 ಗಂಟೆಗಳ ಪರ್ಫಾರ್ಮೆನ್ಸ್ ಎರಡರ ನಡುವೆ ಹೋಲಿಸಲು ನೀವು ವಿಸ್ತೃತ ಅನಾಲಿಟಿಕ್ಸ್ ವರದಿಯನ್ನು ಸಹ ವೀಕ್ಷಿಸಬಹುದು.

ತಿಳಿಯಬೇಕಾದ ಮೆಟ್ರಿಕ್‌ಗಳು

ವೀಕ್ಷಣೆಗಳು

ನಿಮ್ಮ ಚಾನಲ್‌ಗಳು ಅಥವಾ ವೀಡಿಯೊಗಳಿಗೆ ಸಂಬಂಧಿಸಿದ ನ್ಯಾಯಸಮ್ಮತ ವೀಕ್ಷಣೆಗಳ ಸಂಖ್ಯೆ.

ವೀಕ್ಷಣೆ ಸಮಯ (ಗಂಟೆಗಳು)

ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸಿರುವ ಸಮಯದ ಪ್ರಮಾಣ.

ಸಬ್‌ಸ್ಕ್ರೈಬರ್‌ಗಳು

ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಆಗಿರುವ ವೀಕ್ಷಕರ ಸಂಖ್ಯೆ.

ಅಂದಾಜು ಮಾಡಲಾದ ಆದಾಯ

ಆಯ್ಕೆಮಾಡಿದ ದಿನಾಂಕ ವ್ಯಾಪ್ತಿ ಮತ್ತು ಪ್ರದೇಶಕ್ಕಾಗಿ ಎಲ್ಲಾ Google-ಮಾರಾಟ ಮಾಡಿದ ಆ್ಯಡ್‌ಗಳು ಮತ್ತು ವಹಿವಾಟುಗಳಿಂದ ಪಡೆದಿರುವ ಒಟ್ಟು ಅಂದಾಜಿಸಿದ ಆದಾಯ (ನಿವ್ವಳ ಆದಾಯ).

ಸರಾಸರಿ ವೀಕ್ಷಣೆಯ ಅವಧಿ

ಆಯ್ಕೆ ಮಾಡಿದ ವೀಡಿಯೊ ಮತ್ತು ದಿನಾಂಕದ ವ್ಯಾಪ್ತಿಯಲ್ಲಿ, ಪ್ರತಿ ವೀಕ್ಷಣೆಯ ಸಂದರ್ಭ ವೀಕ್ಷಿಸಲಾದ ಸರಾಸರಿ ಅಂದಾಜು ನಿಮಿಷಗಳನ್ನು ತೋರಿಸುತ್ತದೆ.

ಇಂಪ್ರೆಷನ್‌ಗಳು

ದಾಖಲಾದ ಇಂಪ್ರೆಷನ್‌ಗಳ ಮೂಲಕ, YouTube ನಲ್ಲಿ ನಿಮ್ಮ ಥಂಬ್‌ನೇಲ್‌ಗಳನ್ನು ಎಷ್ಟು ಬಾರಿ ವೀಕ್ಷಕರಿಗೆ ತೋರಿಸಲಾಗಿದೆ.

ಇಂಪ್ರೆಷನ್‌ಗಳ ಕ್ಲಿಕ್-ಥ್ರೂ-ರೇಟ್

ಒಂದು ಥಂಬ್‌ನೇಲ್ ಅನ್ನು ವೀಕ್ಷಿಸಿದ ಬಳಿಕ ವೀಕ್ಷಕರು ಎಷ್ಟು ಬಾರಿ ವೀಡಿಯೊವನ್ನು ವೀಕ್ಷಿಸಿದ್ದಾರೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14456456576825966898
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false