ಮಕ್ಕಳನ್ನು ಒಳಗೊಂಡಿರುವ ಕಂಟೆಂಟ್‌ಗೆ ಸಂಬಂಧಿಸಿದ ಅತ್ಯುತ್ತಮ ಅಭ್ಯಾಸಗಳು

ರಚನೆಕಾರರು ಖುಷಿಪಡಬೇಕು ಮತ್ತು ಸೃಜನಶೀಲರಾಗಿರಬೇಕು ಎಂದು ನಾವು ಬಯಸುತ್ತೇವೆ, ಆದರೆ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ವಿನಂತಿಸುತ್ತೇವೆ. ನೀವು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಕಂಟೆಂಟ್‌ನ ಕುರಿತು ನೀವು ಯಾವಾಗಲೂ ಜಾಗರೂಕರಾಗಿರಬೇಕು ಮತ್ತು ಯಾರನ್ನಾದರೂ ಪ್ರದರ್ಶಿಸುವ ವೀಡಿಯೊವನ್ನು YouTube ಗೆ ಅಪ್‌ಲೋಡ್ ಮಾಡುವ ಮೊದಲು ಅವರ ಅನುಮತಿ ಕೇಳಬೇಕು.

ಅಪ್ರಾಪ್ತರನ್ನು ಒಳಗೊಂಡ ಕಂಟೆಂಟ್ ಅನ್ನು ಪೋಸ್ಟ್ ಮಾಡುವವರು ಈ ಕೆಳಗಿನವುಗಳನ್ನು ಮಾಡಬೇಕು:

  • ಖಾಸಗಿತನವನ್ನು ಗೌರವಿಸಬೇಕು. ಅಪ್ರಾಪ್ತರನ್ನು ನಿಮ್ಮ ವೀಡಿಯೊದಲ್ಲಿ ತೋರಿಸುವ ಮೊದಲು ಅವರ ಹೆತ್ತವರು ಅಥವಾ ಕಾನೂನಾತ್ಮಕ ಪೋಷಕರಿಂದ ಸಮ್ಮತಿಯನ್ನು ಪಡೆಯಬೇಕು. ನಿಮ್ಮ ವೀಡಿಯೊದಲ್ಲಿ ಅವರ ಭಾಗವಹಿಸುವಿಕೆಯು ಸ್ವಯಂ-ಇಚ್ಛೆಯದ್ದಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  • ನಿಮ್ಮ ವೀಡಿಯೊಗಳಲ್ಲಿ ಬಳಕೆದಾರರ ಕಾಮೆಂಟ್‌ಗಳನ್ನು ಮಾಡರೇಟ್ ಮಾಡಿ. ಕಾಮೆಂಟ್‌ಗಳನ್ನು ಫಿಲ್ಟರ್ ಮಾಡಲು ಮತ್ತು ಪರಿಶೀಲಿಸಲು, ನಿಮಗಾಗಿ ಪರಿಕರಗಳಿವೆ ಮತ್ತು ನೀವು ಯಾವಾಗ ಬೇಕಾದರೂ ಸ್ಪ್ಯಾಮ್ ಅಥವಾ ದುರುಪಯೋಗಕ್ಕೆ ಸಂಬಂಧಿಸಿದ ಕಾಮೆಂಟ್‌ಗಳನ್ನು ನಮಗಾಗಿ ಫ್ಲ್ಯಾಗ್ ಮಾಡಬಹುದು.
  • ನಿಮ್ಮ ವೀಡಿಯೊದ ಗೌಪ್ಯತೆ ಮತ್ತು ಎಂಬೆಡ್ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ. ನಿಮ್ಮ ವೀಡಿಯೊವನ್ನು ಯಾರು ವೀಕ್ಷಿಸಬಹುದು ಮತ್ತು ಅದನ್ನು ಬಾಹ್ಯ ಸೈಟ್‌ಗಳಲ್ಲಿ ಹೇಗೆ ಹಂಚಿಕೊಳ್ಳಲಾಗುತ್ತದೆ ಎನ್ನುವುದನ್ನು ನಿಯಂತ್ರಿಸಲು ನಿಮ್ಮ ಬಳಿ ಅನೇಕ ಆಯ್ಕೆಗಳಿವೆ.

ನೀವು ಕಾನೂನನ್ನು ಅರ್ಥಮಾಡಿಕೊಂಡಿದ್ದೀರಿ ಮತ್ತು ಅನುಸರಿಸುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಪ್ರಾಪ್ತರಿಗೆ ಸಂಬಂಧಿಸಿದಂತೆ ನೀವು ಎಲ್ಲಾ ಕಾನೂನುಗಳು, ನಿಯಮಗಳು ಮತ್ತು ನಿಯಂತ್ರಣಗಳನ್ನು ಅನುಸರಿಸಬೇಕು. ನೀವು ಈ ವಿಷಯಗಳ ಕುರಿತು ತಿಳಿದಿರಬೇಕು:

  • ಪರ್ಮಿಟ್‌ಗಳು: ನಿಮ್ಮ ಪ್ರದೇಶದಲ್ಲಿ, ಅಪ್ರಾಪ್ತರು ಕೆಲಸ ಮಾಡುವುದಕ್ಕಾಗಿ ಪರ್ಮಿಟ್, ನೋಂದಣಿ ಅಥವಾ ಪರವಾನಗಿಯನ್ನು ಪಡೆದುಕೊಳ್ಳಬೇಕೇ ಎಂಬುದನ್ನು ಕಂಡುಕೊಳ್ಳಲು ಸ್ಥಳೀಯ ಕಾನೂನುಗಳು ಮತ್ತು ನಿಯಮಗಳನ್ನು ಪರಿಶೀಲಿಸಿ. ಅಪ್ರಾಪ್ತರನ್ನು ನೇಮಿಸಿಕೊಳ್ಳುವುದಕ್ಕಾಗಿ ನಿಮಗೆ ಪರ್ಮಿಟ್ ಅಥವಾ ದೃಢೀಕರಣದ ಅಗತ್ಯವಿದೆಯೇ ಎನ್ನುವುದನ್ನು ಸಹ ನೀವು ತಿಳಿದುಕೊಳ್ಳಬೇಕು.
  • ವೇತನ/ಆದಾಯ ಹಂಚಿಕೊಳ್ಳುವಿಕೆ: ಅಪ್ರಾಪ್ತರ ಕೆಲಸಕ್ಕಾಗಿ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ, ಅನ್ವಯಿಸುವ ಕಾನೂನುಗಳನ್ನು ನೀವು ಅನುಸರಿಸಬೇಕು. ಕೆಲವೊಂದು ಪ್ರಕರಣಗಳಲ್ಲಿ, ನೀವು ಅಪ್ರಾಪ್ತರಿಗೆ ವೇತನ ನೀಡುವ ಅಗತ್ಯವಿರಬಹುದು. ಇತರ ಪ್ರಕರಣಗಳಲ್ಲಿ, ನೀವು ವೀಡಿಯೊಗಳಿಂದ ಗಳಿಸುವ ಆದಾಯದ ಒಂದು ಪಾಲನ್ನು ನೀವು ಅಪ್ರಾಪ್ತರಿಗೆ ನೇರವಾಗಿ ಒದಗಿಸುವ, ಅಥವಾ ಅಪ್ರಾಪ್ತರಿಗಾಗಿ ಸಂರಕ್ಷಿತ ಪಾಲನ್ನು ತೆಗೆದಿಡುವ ಅಗತ್ಯವಿರಬಹುದು.
  • ಶಾಲೆ ಮತ್ತು ಶಿಕ್ಷಣ: ನಿಮ್ಮ ಕಂಟೆಂಟ್‌ನಲ್ಲಿ ಅಪ್ರಾಪ್ತರ ಭಾಗವಹಿಸುವಿಕೆಯು, ಸಾಕಷ್ಟು ಕಲಿಸಿಕೊಡುವಿಕೆ ಮತ್ತು ಶಿಕ್ಷಣದ ಮೂಲಕ, ಹಸ್ತಕ್ಷೇಪದಿಂದ ರಕ್ಷಿಸುವುದಕ್ಕಾಗಿ ಎಲ್ಲಾ ಅನ್ವಯಿಸುವ ಕಾನೂನುಗಳನ್ನು ಅನುಸರಿಸಬೇಕು.
  • ಕೆಲಸದ ಪರಿಸರ, ಗಂಟೆಗಳು ಮತ್ತು ವಿರಾಮಗಳು: ಕೆಲಸದ ಪರಿಸರವು ಅಪ್ರಾಪ್ತರಿಗೆ ಸುರಕ್ಷಿತವಾಗಿರಬೇಕು. ಪ್ರತಿ ದಿನ ಅವರಿಗೆ ವಿರಾಮ, ಶಿಕ್ಷಣ ಮತ್ತು ಮನರಂಜನೆಗಾಗಿ ಸಮಯವಿರಬೇಕು. ಅಪ್ರಾಪ್ತರು ರಾತ್ರಿಯಲ್ಲಿ ಕೆಲಸ ಮಾಡಬಾರದು. ನೀವು ಕೆಲಸದ ಅವಧಿಗಾಗಿ ಮತ್ತು ಪ್ರತಿ ದಿನ/ವಾರದಲ್ಲಿ ಕೆಲಸ ಮಾಡಿದ ಅವಧಿಯ ಮೇಲಿನ ಮಿತಿಗಳಿಗಾಗಿ ಸ್ಥಳೀಯ ಕಾನೂನುಗಳನ್ನು ಸಹ ಅನುಸರಿಸಬೇಕು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4872927780628695158
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false