ಬಾಹ್ಯ ಲಿಂಕ್‌ಗಳ ಕುರಿತಾದ ನೀತಿ

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್‌ಗೆ ಬಳಕೆದಾರರನ್ನು ಕಳುಹಿಸುವ ಲಿಂಕ್‌ಗಳನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ಗಮನಿಸಿ: ಕೆಲವು ಲಿಂಕ್‌ಗಳನ್ನು ಕ್ಲಿಕ್ ಮಾಡಲಾಗುವುದಿಲ್ಲ. ಇಲ್ಲಿ ಇನ್ನಷ್ಟು ತಿಳಿಯಿರಿ.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್‌ಗೆ ಬಳಕೆದಾರರನ್ನು ನಿರ್ದೇಶಿಸುತ್ತಿದ್ದರೆ, ಅಂತಹ ಲಿಂಕ್‌ಗಳನ್ನು YouTube ನಲ್ಲಿರುವ ನಿಮ್ಮ ಕಂಟೆಂಟ್‌ನಲ್ಲಿ ಪೋಸ್ಟ್ ಮಾಡಬೇಡಿ. ಈ ನೀತಿಯು ಕೆಳಗೆ ನೀಡಿರುವ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುವ ಲಿಂಕ್‌ಗಳನ್ನು ಒಳಗೊಂಡಿದೆ. ಗಮನಿಸಿ: ಇದು ಸಂಪೂರ್ಣ ಪಟ್ಟಿಯಲ್ಲ.

  • ಪೋರ್ನೋಗ್ರಫಿಗೆ ಇರುವ ಲಿಂಕ್‌ಗಳು
  • ಮಾಲ್‌ವೇರ್‌ ಅನ್ನು ಇನ್‌ಸ್ಟಾಲ್ ಮಾಡುವ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಿಗೆ ಇರುವ ಲಿಂಕ್‌ಗಳು
  • ಬಳಕೆದಾರರ ಸೈನ್ ಇನ್ ಮಾಹಿತಿ, ಹಣಕಾಸು ಮಾಹಿತಿ, ಇತ್ಯಾದಿಗೆ ಫಿಶಿಂಗ್ ಮಾಡುವ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಿಗೆ ಇರುವ ಲಿಂಕ್‌ಗಳು.
  • ಆಡಿಯೊ ಕಂಟೆಂಟ್, ಆಡಿಯೊವಿಶುಯಲ್ ಕಂಟೆಂಟ್, ವೀಡಿಯೊ ಗೇಮ್‌ಗಳು, ಸಾಫ್ಟ್‌ವೇರ್ ಅಥವಾ ಸಾಮಾನ್ಯವಾಗಿ ಪಾವತಿಯ ಅಗತ್ಯವಿರುವ ಸ್ಟ್ರೀಮಿಂಗ್ ಸೇವೆಗಳಿಗೆ ಅನಧಿಕೃತ ಆ್ಯಕ್ಸೆಸ್ ನೀಡುವ ವೆಬ್‌ಸೈಟ್‌ಗಳು, ಆ್ಯಪ್‌ಗಳು ಅಥವಾ ಇತರ ಮೂಲಗಳಿಗೆ ಇರುವ ಲಿಂಕ್‌ಗಳು
  • ನಿಧಿ ಸಂಗ್ರಹಿಸಲು ಬಯಸುವ ಅಥವಾ ಉಗ್ರ ಸಂಘಟನೆಗಳಿಗೆ ನೇಮಕಾತಿ ನಡೆಸುವ ವೆಬ್‌ಸೈಟ್‌ಗಳಿಗೆ ಇರುವ ಲಿಂಕ್‌ಗಳು
  • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಣವನ್ನು (CSAI) ಒಳಗೊಂಡಿರುವ ಸೈಟ್‌ಗಳಿಗೆ ಇರುವ ಲಿಂಕ್‌ಗಳು
  • ನಮ್ಮ ನಿಯಂತ್ರಿತ ವಸ್ತುಗಳ ಮಾರ್ಗಸೂಚಿಗಳಲ್ಲಿ ನಮೂದಿಸಲಾದ ಐಟಂಗಳನ್ನು ಮಾರಾಟ ಮಾಡುವ ಸೈಟ್‌ಗಳಿಗೆ ಇರುವ ಲಿಂಕ್‌ಗಳು
  • ನಮ್ಮ ದ್ವೇಷ ಅಥವಾ ಕಿರುಕುಳ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್‌ಗೆ ಇರುವ ಲಿಂಕ್‌ಗಳು
  • ಹಿಂಸಾತ್ಮಕ ಕೃತ್ಯಗಳನ್ನು ಮಾಡಲು ಇತರರನ್ನು ಉತ್ತೇಜಿಸುವ ಕಂಟೆಂಟ್‌ಗೆ ಇರುವ ಲಿಂಕ್‌ಗಳು
  • COVID-19 ಕುರಿತು ಸ್ಥಳೀಯ ಆರೋಗ್ಯ ಪ್ರಾಧಿಕಾರಗಳು (LHA) ಅಥವಾ ವಿಶ್ವ ಆರೋಗ್ಯ ಸಂಸ್ಥೆಯ (WHO) ವೈದ್ಯಕೀಯ ಮಾಹಿತಿಗೆ ವ್ಯತಿರಿಕ್ತವಾದ ವೈದ್ಯಕೀಯ ತಪ್ಪು ಮಾಹಿತಿಯನ್ನು ಹರಡುವ ಕಂಟೆಂಟ್‌ಗೆ ಇರುವ ಲಿಂಕ್‌ಗಳು
  • ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಮಧ್ಯಪ್ರವೇಶಿಸುವಂತಹ ಘೋರ ಹಾನಿಯ ಗಂಭೀರ ಅಪಾಯವನ್ನು ಉಂಟು ಮಾಡಬಹುದಾದ ದಾರಿತಪ್ಪಿಸುವ ಅಥವಾ ಮೋಸಗೊಳಿಸುವ ಕಂಟೆಂಟ್ ಅನ್ನು ಹರಡುವ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಿಗೆ ಇರುವ ಲಿಂಕ್‌ಗಳು
  • ಹಿಂಸಾತ್ಮಕ ದಾಳಿಕೋರರ ಪ್ರಣಾಳಿಕೆಗಳನ್ನು ಒಳಗೊಂಡಿರುವ ಬಾಹ್ಯ ಸೈಟ್‌ಗಳಿಗೆ ನಿರ್ದೇಶಿಸುವ ಲಿಂಕ್‌ಗಳು

ಈ ಕಾರ್ಯನೀತಿಯು ವೀಡಿಯೊ, ಆಡಿಯೊ, ಚಾನಲ್, ಕಾಮೆಂಟ್‌ಗಳು, ಪಿನ್ ಮಾಡಿದ ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗೆ ಅನ್ವಯಿಸುತ್ತದೆ. ಲಿಂಕ್‌ಗಳು ಬಳಕೆದಾರರನ್ನು YouTube ನಿಂದ ಹೊರಗಿನ ಸೈಟ್‌ಗೆ ನಿರ್ದೇಶಿಸುವ ಯಾವುದೇ ಸ್ವರೂಪವನ್ನು ತೆಗೆದುಕೊಳ್ಳಬಹುದು. ಈ ಲಿಂಕ್‌ಗಳು: ಕ್ಲಿಕ್ ಮಾಡಬಹುದಾದ url ಗಳು, ವೀಡಿಯೊಗಳು ಅಥವಾ ಚಿತ್ರಗಳಲ್ಲಿ url ಗಳ ಪಠ್ಯವನ್ನು ತೋರಿಸುವುದು ಮತ್ತು ಮಬ್ಬುಗೊಳಿಸಿದ url ಗಳನ್ನು (ಉದಾಹರಣೆಗೆ, “.com” ಬದಲಿಗೆ “ಡಾಟ್ ಕಾಮ್” ಎಂದು ಬರೆಯುವುದು) ಒಳಗೊಂಡಿರುತ್ತವೆ. ಈ ಲಿಂಕ್‌ಗಳು ಬಳಕೆದಾರರನ್ನು ಇತರ ಸೈಟ್‌ಗಳಿಗೆ ಮೌಖಿಕವಾಗಿ ನಿರ್ದೇಶಿಸುವುದು, ಇತರ ಸೈಟ್‌ಗಳಲ್ಲಿರುವ ರಚನೆಕಾರರ ಪ್ರೊಫೈಲ್‌ಗಳಿಗೆ ಅಥವಾ ಪುಟಗಳಿಗೆ ಭೇಟಿ ನೀಡುವಂತೆ ವೀಕ್ಷಕರನ್ನು ಉತ್ತೇಜಿಸುವುದು ಅಥವಾ ಇತರ ಸೈಟ್‌ಗಳಲ್ಲಿ ಉಲ್ಲಂಘನೆಯ ಕಂಟೆಂಟ್ ಕುರಿತು ಭರವಸೆ ನೀಡುವುದನ್ನು ಸಹ ಒಳಗೊಂಡಿರಬಹುದು. ಇದು ಪೂರ್ಣವಾದ ಪಟ್ಟಿಯಲ್ಲ.

ಗಮನಿಸಿ: ಅಫಿಲಿಯೇಟ್ ಕಂಟೆಂಟ್ YouTube ನ ಬಳಕೆಯ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಸಮರ್ಪಿತ ಖಾತೆಗಳಲ್ಲಿ ಅಫಿಲಿಯೇಟ್ ಕಂಟೆಂಟ್ ಅನ್ನು ವಿಪರೀತ ಪ್ರಮಾಣದಲ್ಲಿ ಪೋಸ್ಟ್ ಮಾಡುವುದು ಸ್ಪ್ಯಾಮ್ ಬಗೆಗಿನ ನಮ್ಮ ನೀತಿಗಳನ್ನು ಉಲ್ಲಂಘಿಸಬಹುದು. ನಮ್ಮ ಸ್ಪ್ಯಾಮ್, ಮೋಸಗೊಳಿಸುವ ಅಭ್ಯಾಸಗಳು ಮತ್ತು ಸ್ಕ್ಯಾಮ್‌ಗಳ ನೀತಿಗಳಲ್ಲಿ ಏನನ್ನು ಅನುಮತಿಸಲಾಗಿದೆ ಎಂಬುದರ ಕುರಿತು ನೀವು ಇನ್ನಷ್ಟು ತಿಳಿಯಬಹುದು.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ಲೈಂಗಿಕವಾಗಿ ಥೀಮ್ ಮಾಡಿದ ಕಂಟೆಂಟ್ ಅನ್ನು ಫೀಚರ್ ಮಾಡುವ ವೀಡಿಯೊದ ವಿವರಣೆಯು “YouTube ಏನನ್ನು ಅನುಮತಿಸುವುದಿಲ್ಲ ಎಂಬುದನ್ನು ನೋಡಲು ಕ್ಲಿಕ್ ಮಾಡಿ!” ಎಂದು ಹೇಳುವ ಮತ್ತು ಪೋರ್ನೋಗ್ರಫಿಕ್ ಸೈಟ್‌ಗೆ ಲಿಂಕ್ ಒಳಗೊಂಡಿರುವ ವೀಡಿಯೊ.
  • ಗೇಮ್‌ಪ್ಲೇ ವೀಡಿಯೊ ವಿವರಣೆಯು ಇನ್-ಗೇಮ್ ಕರೆನ್ಸಿ ಅಥವಾ ಆನ್‌ಲೈನ್ ಸ್ಟೋರ್ ಕ್ರೆಡಿಟ್‌ಗೆ ಭರವಸೆ ನೀಡುವ ಲಿಂಕ್ ಅನ್ನು ಒಳಗೊಂಡಿದೆ, ಆದರೆ ಬಳಕೆದಾರರ ಕಂಪ್ಯೂಟರ್‌ಗೆ ಮಾಲ್‌ವೇರ್ ಮೂಲಕ ಸೋಂಕು ಉಂಟುಮಾಡುವ ಸೈಟ್‌ಗೆ ಲಿಂಕ್ ಮಾಡುತ್ತದೆ.
  • ಬಳಕೆದಾರರ ಬ್ಯಾಂಕಿಂಗ್ ಮಾಹಿತಿ ಮತ್ತು ಪಾಸ್‌ವರ್ಡ್‌ಗಳನ್ನು ಕದಿಯುವ ಫಿಶಿಂಗ್ ಸೈಟ್‌ಗೆ ಇರುವ ಲಿಂಕ್ ಅನ್ನು ಪೋಸ್ಟ್ ಮಾಡುವುದು.
  • ವೀಕ್ಷಕರನ್ನು ಪೋರ್ನೋಗ್ರಫಿಕ್ ಅಥವಾ ಸ್ಪ್ಯಾಮ್ ಆಗಿರುವ ಸೈಟ್‌ಗೆ ಕೊಂಡೊಯ್ಯುವ, ವೀಡಿಯೊದಲ್ಲಿರುವ ಕ್ಲಿಕ್ ಮಾಡಲು ಆಗದ ಲಿಂಕ್ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಲು ವೀಕ್ಷಕರಿಗೆ ಸೂಚಿಸುವುದು.
  • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಣವನ್ನು ಆ್ಯಕ್ಸೆಸ್ ಮಾಡಲು ಅಥವಾ ಡೌನ್‌ಲೋಡ್ ಮಾಡಲು ಬಳಕೆದಾರರನ್ನು ಅನುಮತಿಸುವ ವೆಬ್‌ಸೈಟ್, ಫೈಲ್ ಹೋಸ್ಟಿಂಗ್ ಸೇವೆ ಅಥವಾ ಇತರೆ ಮೂಲಗಳಿಗೆ ಅವರನ್ನು ಕರೆದೊಯ್ಯುವ ಯಾವುದೇ ಲಿಂಕ್.
  • ಬೇರೊಂದು ಪ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರೊಫೈಲ್ ಅಥವಾ ಪುಟವನ್ನು ಹುಡುಕಲು ವೀಕ್ಷಕರನ್ನು ವೆಬ್‌ಸೈಟ್‌ವೊಂದಕ್ಕೆ ಮೌಖಿಕವಾಗಿ ನಿರ್ದೇಶಿಸುವುದು, ಇದರಿಂದಾಗಿ YouTube ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಅನ್ನು ಅವರು ವೀಕ್ಷಿಸಬಹುದು.
  • ಸಮಯ, ಸ್ಥಳ, ಮಾದರಿ ಅಥವಾ ಮತದಾನಕ್ಕಾಗಿ ಇರಬೇಕಾದ ಅರ್ಹತೆಗಳನ್ನು ಕುರಿತು ಮತದಾರರನ್ನು ಹಾದಿತಪ್ಪಿಸುವ ಸೈಟ್‌ನ ವೀಡಿಯೊದಲ್ಲಿ url ಅನ್ನು ಎಂಬೆಡ್ ಮಾಡುವುದು.
  • COVID-19 ಲಸಿಕೆಗಳು ಜನಸಂಖ್ಯೆಯನ್ನು ಕಡಿಮೆ ಮಾಡುವ ಕಾರ್ಯಸೂಚಿಯ ಭಾಗಗಳು ಎಂದು ಕ್ಲೇಮ್ ಮಾಡುವ ಲೇಖನಕ್ಕೆ ಇರುವ ಲಿಂಕ್.

ಇದು ಪೂರ್ಣವಾದ ಪಟ್ಟಿಯಲ್ಲ ಎಂಬುದು ಗಮನದಲ್ಲಿರಲಿ. ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನೀವು ಭಾವಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4806360330364083684
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false