ಇತರೆ ಪ್ಲ್ಯಾಟ್‌ಫಾರ್ಮ್‌ನ ರಿವಾರ್ಡ್‌ಗಳನ್ನು ಗಳಿಸಲು ನಿಮ್ಮ ಖಾತೆಯನ್ನು ಕನೆಕ್ಟ್ ಮಾಡಿ

ನಿಮ್ಮ Google ಖಾತೆಯನ್ನು ಪಾರ್ಟ್‌ನರ್ ಖಾತೆಗೆ ಕನೆಕ್ಟ್ ಮಾಡುವ ಮೂಲಕ YouTube ನಲ್ಲಿ ಅರ್ಹ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿದಾಗ ನೀವು ಇತರೆ ಪ್ಲ್ಯಾಟ್‌ಫಾರ್ಮ್‌ನ ರಿವಾರ್ಡ್‌ಗಳನ್ನು ಗಳಿಸಬಹುದು.

ಗಮನಿಸಿ: YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳೊಂದಿಗೆ ಈ ಫೀಚರ್ ಲಭ್ಯವಿಲ್ಲದಿರಬಹುದು. ಇನ್ನಷ್ಟು ತಿಳಿಯಿರಿ.

ನಿಮ್ಮ ಖಾತೆಗಳನ್ನು ಕನೆಕ್ಟ್ ಮಾಡಿ ಅಥವಾ ಡಿಸ್‌ಕನೆಕ್ಟ್ ಮಾಡಿ

YouTube ಸೆಟ್ಟಿಂಗ್‌ಗಳಿಂದ

ಖಾತೆಯನ್ನು ಕನೆಕ್ಟ್ ಮಾಡಿ

  1. YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರ  ಕ್ಕೆ ಹೋಗಿ ಮತ್ತು ಸೆಟ್ಟಿಂಗ್‌ಗಳು  ಎಂಬುದನ್ನು ಆಯ್ಕೆಮಾಡಿ.
  3. ಕನೆಕ್ಟ್ ಮಾಡಲಾದ ಆ್ಯಪ್‌ಗಳ ವಿಭಾಗಕ್ಕೆ ಹೋಗಿ.
  4. ನೀವು ಕನೆಕ್ಟ್ ಮಾಡಲು ಬಯಸುವ ಪಾಲುದಾರರ ಪಕ್ಕದಲ್ಲಿರುವ ಕನೆಕ್ಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
    1. ನೀವು ಈಗಾಗಲೇ ಖಾತೆಯನ್ನು ಹೊಂದಿಲ್ಲದಿದ್ದರೆ, ಒಂದನ್ನು ರಚಿಸಲು ಪಾಲುದಾರ ವೆಬ್‌ಸೈಟ್‌ನಿಂದ ಸೂಚನೆಗಳನ್ನು ಫಾಲೋ ಮಾಡಿ. ನಂತರ ಹಂತ 2 ರಲ್ಲಿ ಪ್ರಾರಂಭಿಸಿ.
  5. ನಿಮ್ಮ ಪಾಲುದಾರರ ಖಾತೆಗೆ ಸೈನ್ ಇನ್ ಮಾಡಲು ಹಂತಗಳನ್ನು ಅನುಸರಿಸಿ.

ಖಾತೆಯನ್ನು ಡಿಸ್‌ಕನೆಕ್ಟ್ ಮಾಡಿ

  1. YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು  ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್‌ಗಳು  ಎಂಬುದನ್ನು ಆಯ್ಕೆಮಾಡಿ.
  3. ಕನೆಕ್ಟ್ ಮಾಡಲಾದ ಆ್ಯಪ್‌ಗಳ ವಿಭಾಗಕ್ಕೆ ಹೋಗಿ.
  4. ನೀವು ಡಿಸ್‌ಕನೆಕ್ಟ್ ಮಾಡಲು ಬಯಸುವ ಪಾಲುದಾರರ ಪಕ್ಕದಲ್ಲಿರುವ ಡಿಸ್‌ಕನೆಕ್ಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

YouTube ವೀಕ್ಷಣಾ ಪುಟದಿಂದ

ಖಾತೆಯನ್ನು ಕನೆಕ್ಟ್ ಮಾಡಿ

  1.  YouTube ಗೆ ಸೈನ್ ಇನ್ ಮಾಡಿ.
  2. ರಿವಾರ್ಡ್‌ಗಳಿಗೆ ಅರ್ಹವಾಗಿರುವ ಯಾವುದೇ ವೀಡಿಯೊ ಅಥವಾ ಲೈವ್ ಸ್ಟ್ರೀಮ್‌ಗೆ ಹೋಗಿ.
  3. ವೀಕ್ಷಣಾ ಪುಟದಲ್ಲಿ, ಪ್ಲೇಯರ್‌ನ ಕೆಳಗೆ ಕನೆಕ್ಟ್ ಮಾಡಿ  ಎಂಬುದನ್ನು ಕ್ಲಿಕ್ ಮಾಡಿ.
  4. ನಿಮ್ಮ ಪಾಲುದಾರರ ಖಾತೆಗೆ ಸೈನ್ ಇನ್ ಮಾಡಲು ಹಂತಗಳನ್ನು ಅನುಸರಿಸಿ.

the sign-in will appear as a pop-up in the center of the page.

ಖಾತೆಯನ್ನು ಡಿಸ್‌ಕನೆಕ್ಟ್ ಮಾಡಿ

  1.  YouTube ಗೆ ಸೈನ್ ಇನ್ ಮಾಡಿ.
  2. ಯಾವುದೇ ಅರ್ಹ ವೀಡಿಯೊ ಅಥವಾ ಲೈವ್ ಸ್ಟ್ರೀಮ್‌ಗೆ ಹೋಗಿ.
  3. ವೀಕ್ಷಣಾ ಪುಟದಲ್ಲಿ, ಪ್ಲೇಯರ್‌ನ ಕೆಳಗೆ ಕನೆಕ್ಟ್ ಆಗಿದೆ  ಎಂಬುದನ್ನು ಕ್ಲಿಕ್ ಮಾಡಿ.
  4. ಡಿಸ್‌ಕನೆಕ್ಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ Google ಖಾತೆ

ನೀವು ನಿಮ್ಮ Google ಖಾತೆ ಪಾಲುದಾರರ ಖಾತೆಯನ್ನು ಡಿಸ್‌ಕನೆಕ್ಟ್ ಮಾಡಬಹುದು.

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. myaccount.google.com/accountlinking ಗೆ ಹೋಗಿ.
  3. ನೀವು ಡಿಸ್‌ಕನೆಕ್ಟ್ ಮಾಡಲು ಬಯಸುವ ಖಾತೆಯ ಮುಂದೆ, ಅನ್‌ಲಿಂಕ್ ಎಂಬುದನ್ನು ಕ್ಲಿಕ್ ಮಾಡಿ.
ಗಮನಿಸಿ: ​ನಿಮ್ಮ ಖಾತೆಗಳನ್ನು ಡಿಸ್‌ಕನೆಕ್ಟ್ ಮಾಡಿದರೆ, ನೀವು ಅರ್ಹ ವೀಡಿಯೊಗಳು ಅಥವಾ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸುವ ಮೂಲಕ ಆ ಆ್ಯಪ್‌ನಲ್ಲಿ ನೀವು ರಿವಾರ್ಡ್‌ಗಳಿಗೆ ಅರ್ಹರಾಗಿರುವುದಿಲ್ಲ. ನೀವು ಡಿಸ್‌ಕನೆಕ್ಟ್ ಮಾಡಿದ್ದರೂ ಸಹ ನಮ್ಮ ಪಾಲುದಾರರು ಆ ವೀಕ್ಷಣೆಗಳ ರೆಕಾರ್ಡ್ ಅನ್ನು ಇರಿಸಿಕೊಳ್ಳಬಹುದು. ನಿಮ್ಮ ಡೇಟಾವನ್ನು ನಿರ್ವಹಿಸಲು ನಿಮ್ಮ ಪಾಲುದಾರರ ಖಾತೆಯನ್ನು ರೆಫರ್ ಮಾಡಿ.

ಪಾರ್ಟ್‌ನರ್ ಖಾತೆಗಳು

Activision
Activision Call of Dutyಯ ನಿರ್ಮಾಪಕರು. ನಿಮ್ಮ Activision ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು ಆಯ್ದ Call of Duty ಲೈವ್‌ಸ್ಟ್ರೀಮ್‌ಗಳನ್ನು ವೀಕ್ಷಿಸಿ.
Battle.net (Blizzard)
Blizzard, Battle.net, Overwatch ಮತ್ತು Hearthstoneನ ತಯಾರಕರಾಗಿದ್ದಾರೆ. ನಿಮ್ಮ Battle.net ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು Blizzard ಗೇಮ್‌ಗಳ ಆಯ್ದ ಲೈವ್‌ಸ್ಟ್ರೀಮ್‌ಗಳನ್ನು ವೀಕ್ಷಿಸಿ.
ಎಲೆಕ್ಟ್ರಾನಿಕ್ ಆರ್ಟ್ಸ್
Electronic Arts (EA), FIFA ಮತ್ತು Madden ನ ತಯಾರಕರಾಗಿದ್ದಾರೆ. ನಿಮ್ಮ EA ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು EA ಗೇಮ್‌ಗಳ ಆಯ್ದ ಲೈವ್‌ಸ್ಟ್ರೀಮ್‌ಗಳನ್ನು ವೀಕ್ಷಿಸಿ.
Epic Games
Epic Games, Fortniteನ ತಯಾರಕರಾಗಿದ್ದಾರೆ. ನಿಮ್ಮ Fortnite ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು ಆಯ್ದ Fortnite ವಿಶ್ವಕಪ್ ಕಂಟೆಂಟ್ ಅನ್ನು ವೀಕ್ಷಿಸಿ.
Garena
Garena ಅವರು Free Fireನ ತಯಾರಕರಾಗಿದ್ದಾರೆ.  ನಿಮ್ಮ Garena Free Fire ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು ಆಯ್ದ Garena Free Fire ಕಂಟೆಂಟ್ ಅನ್ನು ವೀಕ್ಷಿಸಿ.
MLBB
Moonton Mobile Legends: Bang Bang (MLBB)ನ ತಯಾರಕರಾಗಿದ್ದಾರೆ. ನಿಮ್ಮ MLBB ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು ಆಯ್ದ MLBB ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ.
NFL
NFL ನಿಂದ ಇತರೆ ಪ್ಲ್ಯಾಟ್‌ಫಾರ್ಮ್‌ನ ರಿವಾರ್ಡ್‌ಗಳನ್ನು ಗಳಿಸಲು, ನಿಮ್ಮ NFL ID ಖಾತೆಯನ್ನು ಕನೆಕ್ಟ್ ಮಾಡಿ.
Krafton (PUBG)
Krafton, PLAYERUNKNOWN’S BATTLEGROUNDS ನ ತಯಾರಕರಾಗಿದ್ದಾರೆ. ನಿಮ್ಮ ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳನ್ನು ಪಡೆಯಲು ಅರ್ಹ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ.
PlayerUnknown ಅವರ Battlegrounds ಮೊಬೈಲ್ (PUBG ಮೊಬೈಲ್)
Tencent Games, PlayerUnknown ಅವರ Battlegrounds (PUBG) ಮೊಬೈಲ್‌ನ ತಯಾರಕರಾಗಿದ್ದಾರೆ. ನಿಮ್ಮ ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು ಆಯ್ದ PUBG ಮೊಬೈಲ್ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ.
Riot Games
Riot Games ಅವರು League of Legends, Legends of Runeterra, ಮತ್ತು Teamfight Tacticsನ ತಯಾರಕರಾಗಿದ್ದಾರೆ. ನಿಮ್ಮ ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳನ್ನು ಪಡೆಯಲು ಅರ್ಹ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ.
Supercell

Supercell ಅವರು Clash Royaleನ ತಯಾರಕರಾಗಿದ್ದಾರೆ. ನಿಮ್ಮ Supercell ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು ಆಯ್ದ Clash Royale/Clash Royale League ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ.

Ubisoft
Ubisoft, Assassin's Creed ಮತ್ತು Tom Clancy's Rainbow Six ನ ತಯಾರಕರಾಗಿದ್ದಾರೆ. ನಿಮ್ಮ ಖಾತೆಯನ್ನು ಲಿಂಕ್ ಮಾಡಿದ ನಂತರ, ರಿವಾರ್ಡ್‌ಗಳಿಗೆ ಅರ್ಹರಾಗಲು Ubisoft ಗೇಮ್‌ಗಳ ಆಯ್ದ ಲೈವ್ ಸ್ಟ್ರೀಮ್‌ಗಳನ್ನು ವೀಕ್ಷಿಸಿ.

FAQ ಗಳು

ನಾನು ನನ್ನ ಖಾತೆಗಳನ್ನು ಕನೆಕ್ಟ್ ಮಾಡಿದ್ದೇನೆ ಮತ್ತು ನಾನು ಅರ್ಹವಾದ ಲೈವ್-ಸ್ಟ್ರೀಮ್ ಅನ್ನು ವೀಕ್ಷಿಸುತ್ತಿದ್ದೇನೆ. ನಾನೇಕೆ ಏನನ್ನೂ ಗೆಲ್ಲುತ್ತಿಲ್ಲ?

ಪ್ರತಿ ಸ್ಟ್ರೀಮ್‌ನ ನಿಯಮಗಳ ಆಧಾರದ ಮೇಲೆ ಯಾವ ಅರ್ಹ ವೀಕ್ಷಕರು ಗೆಲ್ಲುತ್ತಾರೆ ಎಂಬುದನ್ನು ನಮ್ಮ ಪಾಲುದಾರರು ಅಂತಿಮವಾಗಿ ಲೆಕ್ಕಾಚಾರ ಮಾಡುತ್ತಾರೆ. ಪಾಲುದಾರರನ್ನು ಅವಲಂಬಿಸಿ ನಿಯಮಗಳು ಬದಲಾಗಬಹುದು.  
ನೀವು ಅರ್ಹರಾಗಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಲು, ನೀವು ಖಾತೆಗಳನ್ನು ಲಿಂಕ್ ಮಾಡಿದ್ದೀರಿ ಮತ್ತು ನಿಮ್ಮ ಕಂಪ್ಯೂಟರ್, YouTube ಮೊಬೈಲ್ ಆ್ಯಪ್, ಅಥವಾ ನಮ್ಮ ಮೊಬೈಲ್ ವೆಬ್‌ಸೈಟ್‌ನಲ್ಲಿ ವೀಕ್ಷಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಎಂಬೆಡ್ ಮಾಡಿರುವ ಪ್ಲೇಯರ್‌ಗಳು, YouTube ಸ್ಮಾರ್ಟ್ ಟಿವಿ ಆ್ಯಪ್, ಅಥವಾ ಕ್ಯಾಸ್ಟಿಂಗ್ ಮೂಲಕ ವೀಕ್ಷಿಸಿದರೆ, ನೀವು ರಿವಾರ್ಡ್‌ಗಳಿಗೆ ಅರ್ಹರಾಗಿರುವುದಿಲ್ಲ.
To check if the video is eligible, you can look at the videos’ Player Settings, where eligible videos will include an option for you to review your linked account state.
ನೀವು Android ಅಥವಾ iOS ನಲ್ಲಿದ್ದರೆ, ನೀವು YouTube ನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ನಾನು ಏನನ್ನಾದರೂ ಗೆದ್ದಿದ್ದೇನೆ ಎಂದು ನನಗೆ ತಿಳಿಯುವುದು ಹೇಗೆ?

ನೀವು ಗೆದ್ದ ನಂತರ ನಿಮ್ಮ ಪಾರ್ಟ್‌ನರ್ ಖಾತೆಗೆ ರಿವಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಈ ರಿವಾರ್ಡ್‌ಗಳು ಕಾಣಿಸಿಕೊಳ್ಳಲು ಒಂದು ದಿನದ ಸಮಯವನ್ನು ತೆಗೆದುಕೊಳ್ಳಬಹುದು. ಪಾಲುದಾರ ವೆಬ್‌ಸೈಟ್‌ನಿಂದ ನೇರವಾಗಿ ಇನ್ನಷ್ಟು ತಿಳಿಯಿರಿ.

ಈ ಫೀಚರ್ ಮೊಬೈಲ್‌ನಲ್ಲಿ ಲಭ್ಯವಿದೆಯೇ?

ರಿವಾರ್ಡ್‌ಗಳು ಕಂಪ್ಯೂಟರ್, ಮೊಬೈಲ್ ಆ್ಯಪ್, ನಮ್ಮ ಮೊಬೈಲ್ ವೆಬ್‌ಸೈಟ್ m.youtube.com ನಲ್ಲಿ ಮತ್ತು ಚಿತ್ರದಲ್ಲಿ ಚಿತ್ರ ವೀಕ್ಷಣೆಯ ಮೂಲಕ ಲಭ್ಯವಿದೆ. ನೀವು ಎಂಬೆಡ್ ಮಾಡಿರುವ ಪ್ಲೇಯರ್‌ಗಳಲ್ಲಿ ವೀಕ್ಷಿಸಿದರೆ, ನೀವು ರಿವಾರ್ಡ್‌ಗಳಿಗೆ ಅರ್ಹರಾಗಿರುವುದಿಲ್ಲ.
ನನ್ನ ಖಾತೆಯನ್ನು ಕನೆಕ್ಟ್ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?
ಮೊದಲು, ನೀವು ಸೈನ್ ಇನ್ ಆಗಿರುವಿರಾ ಎಂಬುದನ್ನು ಪರಿಶೀಲಿಸಿ. ನಿಮ್ಮ ಖಾತೆಗಳನ್ನು ಕನೆಕ್ಟ್ ಮಾಡಲು ನಿಮ್ಮ ಬ್ರೌಸರ್‌ನಲ್ಲಿ ಪಾಪ್-ಅಪ್‌ಗಳನ್ನು ನೀವು ಆನ್ ಮಾಡಬೇಕಾಗಬಹುದು. ನೀವು Safari ನಲ್ಲಿ ಕನೆಕ್ಟ್ ಮಾಡಲು ಸಾಧ್ಯವಾಗದಿದ್ದರೆ, ಇನ್ನೊಂದು ಬ್ರೌಸರ್ ಅನ್ನು ಪ್ರಯತ್ನಿಸಿ. 
ಟಿಪ್ಪಣಿ: ನೀವು ವೈಯಕ್ತಿಕ ಖಾತೆಗಳನ್ನು ಮಾತ್ರ ಕನೆಕ್ಟ್ ಮಾಡಬಹುದು, ಬ್ರ್ಯಾಂಡ್ ಖಾತೆಗಳನ್ನು ಅಲ್ಲ. ಕನೆಕ್ಟ್ ಮಾಡಲು ಪ್ರಯತ್ನಿಸುವಾಗ ನೀವು ವೈಯಕ್ತಿಕ ಖಾತೆಗೆ ಲಾಗ್ ಇನ್ ಆಗಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದ್ದರೆ, ಖಾತೆ ಲಿಂಕ್ ಮಾಡುವಿಕೆ ಲಭ್ಯವಿರುವುದಿಲ್ಲ.

ನನ್ನ ಖಾತೆಗಳು ಕನೆಕ್ಟ್ ಆಗಿರುವ ಸಂದೇಶವನ್ನು ನಾನು ಪಡೆದುಕೊಂಡಿದ್ದೇನೆ, ಆದರೆ ಅವುಗಳು ಕನೆಕ್ಟ್ ಆಗಿದೆ ಎಂದು ತೋರಿಸುತ್ತಿಲ್ಲ. ನಾನು ಇನ್ನೂ ರಿವಾರ್ಡ್‌ಗಳಿಗೆ ಅರ್ಹನಾಗಿದ್ದೇನೆಯೇ?

ಕೆಲವೊಮ್ಮೆ ನಿಮ್ಮ ಖಾತೆಗಳು ಕನೆಕ್ಟ್ ಆಗುವುದು ಮತ್ತು ಅವು ಈಗ ಕನೆಕ್ಟ್ ಆಗಿವೆ ಎಂಬ ಸಂದೇಶ ತೋರಿಸಲು ತಡ ಆಗಬಹುದು.
ನಿಮ್ಮ ಖಾತೆಗಳನ್ನು ಕನೆಕ್ಟ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಲು ಈ ಪುಟಕ್ಕೆ ಭೇಟಿ ನೀಡಿ. ಈ ಪುಟದಲ್ಲಿ, ನಿಮ್ಮ ಖಾತೆಗೆ ಕನೆಕ್ಟ್ ಆಗಿರುವ ಎಲ್ಲಾ ಸೇವೆಗಳನ್ನು ನೀವು ವೀಕ್ಷಿಸಬಹುದು. ನೀವು ಯಾವುದೇ ಸೇವೆಯಿಂದ ಸಹ ಲಿಂಕ್ ರದ್ದುಮಾಡಬಹುದು.
ಈ ಪುಟವು ನಿಮ್ಮ ಖಾತೆಗಳನ್ನು ಕನೆಕ್ಟ್ ಆಗಿವೆ ಎಂದು ತೋರಿಸುವವರೆಗೆ, ನೀವು ರಿವಾರ್ಡ್‌ಗಳಿಗೆ ಅರ್ಹರಾಗಿರುತ್ತೀರಿ.
ನಿಮ್ಮ ಖಾತೆಗಳು ಕನೆಕ್ಟ್ ಆಗಿವೆ ಎಂದು ತೋರಿಸದಿದ್ದರೆ, ನೀವು ಲಿಂಕ್ ರದ್ದುಮಾಡಲು ಪ್ರಯತ್ನಿಸಬಹುದು, ನಂತರ ನಿಮ್ಮ ಖಾತೆಗಳನ್ನು ರೀಕನೆಕ್ಟ್ ಮಾಡಬಹುದು.

ನನ್ನ ಖಾತೆಗಳ ಕನೆಕ್ಷನ್ ಅನ್ನು ಡಿಸ್‌ಕನೆಕ್ಟ್ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ, ಆದರೆ ಅವುಗಳು ಇನ್ನೂ ಕನೆಕ್ಟ್ ಆಗಿರುವ ಹಾಗೆ ತೋರಿಸುತ್ತಿವೆ. ಏಕೆ?

ಕೆಲವೊಮ್ಮೆ ನಿಮ್ಮ ಖಾತೆಗಳ ಕನೆಕ್ಷನ್ ಅನ್ನು ಡಿಸ್‌ಕನೆಕ್ಟ್ ಆದಾಗ ಮತ್ತು ಅವುಗಳ ಡಿಸ್‌ಕನೆಕ್ಟ್ ಆದ ಹಾಗೆ ತೋರಿಸಿದಾಗ ಡಿಸ್‌ಪ್ಲೇ ಆಗಲು ತಡವಾಗುತ್ತದೆ.
ನಿಮ್ಮ ಖಾತೆಗಳ ಡಿಸ್‌ಕನೆಕ್ಟ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಲು ಈ ಪುಟಕ್ಕೆ ಭೇಟಿ ನೀಡಿ. ಈ ಪುಟದಲ್ಲಿ ಸೇವೆಯನ್ನು ಪಟ್ಟಿ ಮಾಡಿರದಿದ್ದರೆ, ನಿಮ್ಮ ಖಾತೆಗಳು ಇನ್ನು ಮುಂದೆ ಕನೆಕ್ಟ್ ಆಗಿರುವುದಿಲ್ಲ ಎಂದರ್ಥ.

ನನ್ನ ಖಾತೆಯನ್ನು ನಾನು ಕನೆಕ್ಟ್ ಮಾಡಿದಾಗ Google ಮತ್ತು ನನ್ನ ಪಾರ್ಟ್‌ನರ್ ಖಾತೆಯ ನಡುವೆ ಯಾವ ರೀತಿಯ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ?

ನಿಮ್ಮ ಖಾತೆಯನ್ನು ನೀವು YouTube ಗೆ ಕನೆಕ್ಟ್ ಮಾಡಿದ ನಂತರ, YouTube ನಿಮ್ಮ ವೀಕ್ಷಣೆಯ ಮಾಹಿತಿಯನ್ನು ಹಂಚಿಕೊಳ್ಳಬಹುದು ಮತ್ತು ಪಾಲುದಾರರು Google ಅಥವಾ YouTube ಜೊತೆಗೆ ಮೂಲ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳಬಹುದು. ಯಾವ ಖಾತೆಗಳು ರಿವಾರ್ಡ್‌ಗಳಿಗೆ ಅರ್ಹವಾಗಿವೆ ಎಂಬುದನ್ನು ಈ ಮಾಹಿತಿಯು ನಮಗೆ ತಿಳಿಸುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5026958999448733460
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false