ಬಂದೂಕುಗಳ ಕುರಿತಾದ ನೀತಿ

18 ಜೂನ್, 2024 ರಿಂದ, ಸುರಕ್ಷತಾ ಸಾಧನಗಳನ್ನು ತೆಗೆದುಹಾಕುವುದು ಹೇಗೆ ಎಂದು ತೋರಿಸುವ ಕೆಲವು ಕಂಟೆಂಟ್ ಅನ್ನು ನಿಷೇಧಿಸಲಾಗುತ್ತದೆ. ಮನೆಯಲ್ಲೇ ತಯಾರಿಸಿದ ಬಂದೂಕುಗಳು, ಸ್ವಯಂಚಾಲಿತ ಬಂದೂಕುಗಳು ಮತ್ತು ಕೆಲವು ಬಂದೂಕಿನ ಆ್ಯಕ್ಸೆಸರಿಗಳ ಬಳಕೆಯನ್ನು ತೋರಿಸುವ ಕಂಟೆಂಟ್‌ನ ಮೇಲೆ ವಯಸ್ಸಿನ ನಿರ್ಬಂಧವನ್ನು ವಿಧಿಸಲಾಗುತ್ತದೆ.
ಬಂದೂಕುಗಳನ್ನು ಮಾರಾಟ ಮಾಡುವ ಉದ್ದೇಶವಿರುವ ಕಂಟೆಂಟ್, ಬಂದೂಕುಗಳು, ಮದ್ದುಗುಂಡು ಮತ್ತು ಕೆಲವು ಆ್ಯಕ್ಸೆಸರಿಗಳ ತಯಾರಿಕೆಯ ಕುರಿತು ವೀಕ್ಷಕರಿಗೆ ಸೂಚನೆಗಳನ್ನು ನೀಡುವ ಕಂಟೆಂಟ್, ಅಥವಾ ಆ ಆ್ಯಕ್ಸೆಸರಿಗಳನ್ನು ಹೇಗೆ ಇನ್‌ಸ್ಟಾಲ್ ಮಾಡಬೇಕು ಎಂಬುದರ ಕುರಿತು ವೀಕ್ಷಕರಿಗೆ ಸೂಚನೆ ನೀಡುವ ಕಂಟೆಂಟ್‌ಗೆ YouTube ನಲ್ಲಿ ಅನುಮತಿಯಿಲ್ಲ. ಈ ಕೆಳಗೆ ಸೂಚಿಸಲಾದ ಬಂದೂಕುಗಳು ಅಥವಾ ಆ್ಯಕ್ಸೆಸರಿಗಳನ್ನು ಮಾರಾಟ ಮಾಡುವ ಪ್ಲ್ಯಾಟ್‌ಫಾರ್ಮ್ ಆಗಿ YouTube ಅನ್ನು ಬಳಸುವಂತಿಲ್ಲ. ಯಾರಾದರೂ ಬಂದೂಕನ್ನು ಹಿಡಿದುಕೊಂಡಿರುವುದು, ನಿಭಾಯಿಸುತ್ತಿರುವುದು ಅಥವಾ ಸಾಗಿಸುತ್ತಿರುವುದನ್ನು ತೋರಿಸುವ ಲೈವ್ ಸ್ಟ್ರೀಮ್‌ಗಳನ್ನು ಸಹ YouTube ಅನುಮತಿಸುವುದಿಲ್ಲ.
 
ಕೆಲವೊಮ್ಮೆ, ಕಂಟೆಂಟ್ ನಮ್ಮ ನೀತಿಗಳನ್ನು ಉಲ್ಲಂಘಿಸುವುದಿಲ್ಲ, ಆದರೆ ಅದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವಾಗಿರದಿರಬಹುದು. YouTube, ಈ ಕೆಳಗೆ ಸೂಚಿಸಿರುವುದು ಸೇರಿದಂತೆ, ಕೆಲವು ಬಂದೂಕುಗಳು ಮತ್ತು ಆ್ಯಕ್ಸೆಸರಿಗಳ ಬಳಕೆಯನ್ನು ತೋರಿಸುವ ಕಂಟೆಂಟ್‌ಗೆ ವಯಸ್ಸಿನ ನಿರ್ಬಂಧವನ್ನು ವಿಧಿಸುತ್ತದೆ (ಗಮನಿಸಿ: ಈ ನಿರ್ಬಂಧವು ಬಂದೂಕುಗಳ ನೈಜ ಬಳಕೆಗೆ ಮಾತ್ರ ಅನ್ವಯಿಸುತ್ತದೆ; ವಿವರಗಳು ಕೆಳಗಿವೆ).

ಇದು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗೆ ಸೂಚಿಸಿದ ಯಾವುದಾದರೂ ಒಂದು ಅಥವಾ ಹೆಚ್ಚಿನದನ್ನು ಮಾಡುವ ಉದ್ದೇಶವನ್ನು ಹೊಂದಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ಬಂದೂಕುಗಳು ಅಥವಾ ಬಂದೂಕುಗಳ ಕೆಲವು ಆ್ಯಕ್ಸೆಸರಿಗಳನ್ನು ನೇರ ಮಾರಾಟದ (ಉದಾಹರಣೆಗೆ, ವ್ಯಕ್ತಿಗಳು ಖಾಸಗಿಯಾಗಿ ಮಾರಾಟ ಮಾಡುವುದು) ಮೂಲಕ ಮಾರಾಟ ಮಾಡುವುದು ಅಥವಾ ಈ ಐಟಂಗಳನ್ನು ಮಾರಾಟ ಮಾಡುವ ಸೈಟ್‌ಗಳಿಗೆ ಲಿಂಕ್ ಮಾಡುವುದು. ಈ ಆ್ಯಕ್ಸೆಸರಿಗಳಲ್ಲಿ ಇವು ಸೇರಿರಬಹುದು:
    • ಸ್ವಯಂಚಾಲಿತವಾಗಿ ಗುಂಡು ಹಾರಿಸುವುದನ್ನು ಸಿಮ್ಯುಲೇಟ್ ಮಾಡಲು ಬಂದೂಕಿಗೆ ಸಾಧ್ಯವಾಗಿಸುವ ಆ್ಯಕ್ಸೆಸರಿಗಳು,
    • ಬಂದೂಕನ್ನು ಸ್ವಯಂಚಾಲಿತವಾಗಿ ಗುಂಡು ಹಾರಿಸುವ ಬಂದೂಕಾಗಿ ಪರಿವರ್ತಿಸುವ ಆ್ಯಕ್ಸೆಸರಿಗಳು, ಉದಾಹರಣೆಗೆ: ಬಂಪ್ ಸ್ಟಾಕ್‌ಗಳು, ಗ್ಯಾಟ್ಲಿಂಗ್ ಟ್ರಿಗರ್‌ಗಳು, ಡ್ರಾಪ್-ಇನ್ ಆಟೋ ಸಿಯರ್‌ಗಳು ಅಥವಾ ಪರಿವರ್ತನೆ ಕಿಟ್‌ಗಳು,
    • 30 ಸುತ್ತುಗಳಿಗಿಂತ ಹೆಚ್ಚು ಗುಂಡುಗಳನ್ನು ಹೊರುವ ಅಧಿಕ ಸಾಮರ್ಥ್ಯದ ಮ್ಯಾಗಝಿನ್‌ಗಳು ಅಥವಾ ಬೆಲ್ಟ್‌ಗಳು.
  • ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ತಯಾರಿಸುವುದರ ಕುರಿತು ಸೂಚನೆ ನೀಡುವುದು:
    • ಬಂದೂಕುಗಳು,
    • ಮದ್ದುಗುಂಡು,
    • ಅಧಿಕ ಸಾಮರ್ಥ್ಯದ ಮ್ಯಾಗಝಿನ್‌ಗಳು,
    • ಮನೆಯಲ್ಲಿ ತಯಾರಿಸಿದ ಸೈಲೆನ್ಸರ್‌ಗಳು/ಸಪ್ರೆಸರ್‌ಗಳು,
    • ಸ್ವಯಂಚಾಲಿತವಾಗಿ ಗುಂಡು ಹಾರಿಸುವುದನ್ನು ಸಿಮ್ಯುಲೇಟ್ ಮಾಡಲು ಬಂದೂಕಿಗೆ ಸಾಧ್ಯವಾಗಿಸುವ ಆ್ಯಕ್ಸೆಸರಿಗಳು,
    • ಬಂದೂಕನ್ನು ಸ್ವಯಂಚಾಲಿತವಾಗಿ ಗುಂಡು ಹಾರಿಸುವ ಬಂದೂಕಾಗಿ ಪರಿವರ್ತಿಸುವ ಆ್ಯಕ್ಸೆಸರಿಗಳು, ಉದಾಹರಣೆಗೆ: ಬಂಪ್ ಸ್ಟಾಕ್‌ಗಳು, ಗ್ಯಾಟ್ಲಿಂಗ್ ಟ್ರಿಗರ್‌ಗಳು, ಡ್ರಾಪ್-ಇನ್ ಆಟೋ ಸಿಯರ್‌ಗಳು ಅಥವಾ ಪರಿವರ್ತನೆ ಕಿಟ್‌ಗಳು.
  • ಒಂದು ಬಂದೂಕನ್ನು ಸ್ವಯಂಚಾಲಿತವಾಗಿ ಅಥವಾ ಸಿಮ್ಯುಲೇಟ್ ಮಾಡುವ ಮೂಲಕ ಸ್ವಯಂಚಾಲಿತವಾಗಿ ಗುಂಡು ಹಾರಿಸುವ ಸಾಮರ್ಥ್ಯಗಳಿಗೆ ಪರಿವರ್ತಿಸುವುದು ಹೇಗೆ ಎಂಬುದರ ಕುರಿತಾದ ಸೂಚನೆಗಳನ್ನು ಒದಗಿಸುವುದು.
  • ಮೇಲೆ ಉಲ್ಲೇಖಿಸಿದ ಆ್ಯಕ್ಸೆಸರಿಗಳು ಅಥವಾ ಮಾರ್ಪಾಡುಗಳನ್ನು ಇನ್‌ಸ್ಟಾಲ್ ಮಾಡುವುದು ಹೇಗೆ ಎಂಬ ಸೂಚನೆಗಳನ್ನು ಒದಗಿಸುವುದು.
  • ಮ್ಯಾಗಝಿನ್‌ನ ರಿಲೀಸ್ ಅನ್ನು ಮಿತಿಗೊಳಿಸುವ ಸಾಧನದಂತಹ ಕೆಲವು ಬಂದೂಕು ಸುರಕ್ಷತಾ ಸಾಧನಗಳನ್ನು ಹೇಗೆ ತೆಗೆದುಹಾಕಬೇಕು ಎಂಬುದರ ಕುರಿತು ಸೂಚನೆಗಳನ್ನು ಒದಗಿಸುವುದು. ಗನ್ ಲಾಕ್‌ನಂತಹ ಆಯುಧವನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲು ಬಳಸುವ ಸಾಧನವನ್ನು ತೆಗೆದುಹಾಕುವುದನ್ನು ಇದು ಒಳಗೊಂಡಿಲ್ಲ.

ಗಮನಿಸಿ, ಇದು ಸಂಪೂರ್ಣ ಪಟ್ಟಿಯಲ್ಲ.

ವಯಸ್ಸಿನ ನಿರ್ಬಂಧವಿರುವ ಕಂಟೆಂಟ್

ಕೆಲವೊಮ್ಮೆ, ಕಂಟೆಂಟ್ ನಮ್ಮ ನೀತಿಗಳನ್ನು ಉಲ್ಲಂಘಿಸುವುದಿಲ್ಲ, ಆದರೆ ಅದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೀಕ್ಷಕರಿಗೆ ಸೂಕ್ತವಾಗಿರದಿರಬಹುದು.

  • ಮನೆಯಲ್ಲಿ ತಯಾರಿಸಿದ ಬಂದೂಕು (ಉದಾ. 3D ಪ್ರಿಂಟೆಡ್ ಗನ್), ಸ್ವಯಂಚಾಲಿತ ಬಂದೂಕು ಅಥವಾ ಕೆಳಗಿನ ಯಾವುದೇ ಆ್ಯಕ್ಸೆಸರಿಗಳ ಬಳಕೆಯನ್ನು ತೋರಿಸುವ ಕಂಟೆಂಟ್:
    • ಸ್ವಯಂಚಾಲಿತವಾಗಿ ಗುಂಡು ಹಾರಿಸುವುದನ್ನು ಸಿಮ್ಯುಲೇಟ್ ಮಾಡಲು ಬಂದೂಕಿಗೆ ಸಾಧ್ಯವಾಗಿಸುವ ಆ್ಯಕ್ಸೆಸರಿಗಳು
    • ಬಂದೂಕನ್ನು ಸ್ವಯಂಚಾಲಿತವಾಗಿ ಗುಂಡು ಹಾರಿಸುವ ಬಂದೂಕಾಗಿ ಪರಿವರ್ತಿಸುವ ಆ್ಯಕ್ಸೆಸರಿಗಳು, ಉದಾಹರಣೆಗೆ: ಬಂಪ್ ಸ್ಟಾಕ್‌ಗಳು, ಗ್ಯಾಟ್ಲಿಂಗ್ ಟ್ರಿಗರ್‌ಗಳು, ಡ್ರಾಪ್-ಇನ್ ಆಟೋ ಸಿಯರ್‌ಗಳು ಅಥವಾ ಪರಿವರ್ತನೆ ಕಿಟ್‌ಗಳು
    • ಅಧಿಕ ಸಾಮರ್ಥ್ಯದ ಮ್ಯಾಗಝಿನ್‌ಗಳು
    • ಮನೆಯಲ್ಲಿ ತಯಾರಿಸಿದ ಸೈಲೆನ್ಸರ್‌ಗಳು/ಸಪ್ರೆಸರ್‌ಗಳು
  • ಉದಾಹರಣೆಗಳು (ಸೀಮಿತವಾಗಿಲ್ಲದ):
    • 3D ಪ್ರಿಂಟೆಡ್ ಬಂದೂಕಿನಿಂದ ಗುಂಡು ಹಾರಿಸುವುದು
    • ಸಂಪೂರ್ಣ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸುವುದು
    • ಅಧಿಕ ಸಾಮರ್ಥ್ಯದ ಮ್ಯಾಗಝಿನ್ ಇರುವ ಬಂದೂಕಿನಿಂದ ಗುಂಡು ಹಾರಿಸುವುದು

ಈ ಮಾರ್ಗಸೂಚಿಗಳು ಬಂದೂಕುಗಳ ನೈಜ ಬಳಕೆಗೆ ಅನ್ವಯಿಸುತ್ತವೆ ಮತ್ತು ಅನ್ವಯಿಸದಿರಬಹುದು, ಉದಾಹರಣೆಗೆ, ಫಿಲ್ಮ್‌ನಂತಹ ಕಲಾತ್ಮಕ ಕಂಟೆಂಟ್‌ನಲ್ಲಿ ಬಂದೂಕುಗಳ ಬಳಕೆಗೆ. ಸಾರ್ವಜನಿಕ ಹಿತಾಸಕ್ತಿಯ ಕಂಟೆಂಟ್‌ಗಳಾದ ಮಿಲಿಟರಿ ಅಥವಾ ಪೊಲೀಸ್ ಫೂಟೇಜ್, ಸುದ್ದಿ ಫೂಟೇಜ್ ಅಥವಾ ಯುದ್ಧವಲಯಗಳ ಫೂಟೇಜ್‌ಗೆ ಸಹ ನಾವು ವಿನಾಯಿತಿ ನೀಡಬಹುದು.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ.

  • ಮೇಲೆ ಸೂಚಿಸಿದ ಬಂದೂಕುಗಳು ಅಥವಾ ಆ್ಯಕ್ಸೆಸರಿಗಳನ್ನು ಮಾರಾಟ ಮಾಡುವ ಸೈಟ್‌ಗಳಿಗೆ ನಿಮ್ಮ ವೀಡಿಯೊದ ಶೀರ್ಷಿಕೆ ಅಥವಾ ವಿವರಣೆಯಲ್ಲಿ ಲಿಂಕ್‌ಗಳನ್ನು ಒದಗಿಸುವುದು. ಸೈಟ್‌ಗಳು ಇಂತಹ ಐಟಂಗಳನ್ನು ನೇರವಾಗಿ ಮಾರಾಟ ಮಾಡುವುದಿಲ್ಲ ಅಥವಾ ಒದಗಿಸುವುದಿಲ್ಲ ಎಂದು ಖಚಿತವಾಗಿ ತಿಳಿದಿದ್ದರೆ, ಆ ಐಟಂಗಳ ಕುರಿತು ಚರ್ಚಿಸುವ ಅಥವಾ ಇವುಗಳನ್ನು ವಿಮರ್ಶಿಸುವಂತಹ ಸೈಟ್‌ಗಳಿಗೆ ನೀವು ಲಿಂಕ್ ಮಾಡಬಹುದು.
  • ಒಂದು ಬಂದೂಕನ್ನು ಖಾಸಗಿ ಮಾರಾಟದ ಮೂಲಕ ಮಾರುವ ಉದ್ದೇಶದಿಂದ ಆ ಬಂದೂಕನ್ನು ಪ್ರದರ್ಶಿಸುವುದು. ಮಾರಾಟಗಾರರ ಫೋನ್ ಸಂಖ್ಯೆ, ಇಮೇಲ್ ವಿಳಾಸ ಅಥವಾ ಇತರ ಸಂಪರ್ಕ ಮಾಹಿತಿಯನ್ನು ಒದಗಿಸುವುದು ಇದರಲ್ಲಿ ಸೇರಿದೆ.
  • ಒಂದು ಬಂದೂಕಿನ ತಯಾರಿಕೆಯನ್ನು ಪೂರ್ಣಗೊಳಿಸುವುದಕ್ಕಾಗಿ ಲೋವರ್ ರಿಸೀವರ್ ಅನ್ನು ಪೂರ್ಣಗೊಳಿಸುವುದು ಹೇಗೆ ಎಂಬ ಕುರಿತು ಸ್ಟೆಪ್-ಬೈ-ಸ್ಟೆಪ್ ಸೂಚನೆಗಳನ್ನು ಬಳಕೆದಾರರಿಗೆ ತೋರಿಸುವುದು.
  • ಫ್ಲಾಶ್‌ಲೈಟ್, ತೈಲ ಕ್ಯಾನ್, ಸಾಲ್ವೆಂಟ್ ಕ್ಯಾಚರ್ ಅಥವಾ ಇತರ ಭಾಗಗಳಿಂದ ಸೈಲೆನ್ಸರ್ ಅನ್ನು ತಯಾರಿಸುವುದು ಹೇಗೆ ಎಂದು ಬಳಕೆದಾರರಿಗೆ ತೋರಿಸುವುದು.
  • ಬಂಪ್ ಸ್ಟಾಕ್ ಅನ್ನು ಇನ್‌ಸ್ಟಾಲ್ ಮಾಡುವುದು ಹೇಗೆ, ಅಥವಾ ಸಿಮ್ಯುಲೇಟ್ ಮಾಡುವ ಮೂಲಕ ಸ್ವಯಂಚಾಲಿತವಾಗಿ ಗುಂಡು ಹಾರಿಸುವುದನ್ನು ಸಕ್ರಿಯಗೊಳಿಸುವುದಕ್ಕಾಗಿ ನಿರ್ಮಿಸಲಾದ ಅಂತಹುದೇ ಆ್ಯಕ್ಸೆಸರಿಯನ್ನು ಇನ್‌ಸ್ಟಾಲ್ ಮಾಡುವುದು ಹೇಗೆ ಎಂದು ಬಳಕೆದಾರರಿಗೆ ತೋರಿಸುವುದು.
  • ಯಾರಾದರೂ ಬಂದೂಕನ್ನು ಹಿಡಿದುಕೊಂಡಿರುವುದನ್ನು ಅಥವಾ ನಿಭಾಯಿಸುತ್ತಿರುವುದನ್ನು ತೋರಿಸುವ ಲೈವ್ ಸ್ಟ್ರೀಮ್‌ಗಳು, ಇಲ್ಲಿ ಅವರು ಅದರಿಂದ ಗುಂಡು ಹಾರಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗುವುದಿಲ್ಲ. ಸೂಚನೆ: ವೀಡಿಯೊ ಗೇಮ್‌ಗಳಲ್ಲಿನ ಬಂದೂಕುಗಳಿಗೆ ಇದು ಅನ್ವಯಿಸುವುದಿಲ್ಲ.
  • ಯಾರಾದರೂ ಬಂದೂಕುಗಳನ್ನು ಎತ್ತಿಕೊಂಡು ಹೋಗುವುದು ಅಥವಾ ಅವುಗಳನ್ನು ಹಿಡಿದುಕೊಂಡು ಕಾರು, ಟ್ರಕ್ ಅಥವಾ ಇತರ ವಾಹನದಲ್ಲಿ ಪ್ರಯಾಣಿಸುವುದನ್ನು ಒಳಗೊಂಡಂತೆ, ಅವುಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುವುದನ್ನು ತೋರಿಸುವ ಲೈವ್ ಸ್ಟ್ರೀಮ್‌ಗಳು. ಸೂಚನೆ: ವೀಡಿಯೊ ಗೇಮ್‌ಗಳಲ್ಲಿನ ಬಂದೂಕುಗಳಿಗೆ ಇದು ಅನ್ವಯಿಸುವುದಿಲ್ಲ.

ನೆನಪಿಡಿ, ಇವು ಕೇವಲ ಉದಾಹರಣೆಗಳು ಮಾತ್ರ. ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನಿಮಗೆ ಅನಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದರ ಕುರಿತು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳ ಕುರಿತು ವರದಿ ಮಾಡಲು ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವಂತಹ ಕೆಲವು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16001034179328219933
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false