ನೀವು ಮಾನಿಟೈಸ್ ಮಾಡುವಾಗ IFTTT ಬಳಸಿ

ನೀವು YouTube ಪಾಲುದಾರ ಕಾರ್ಯಕ್ರಮದ ಭಾಗವಾಗಿದ್ದರೆ, IFTTT ಬಳಸಿಕೊಂಡು ನಿಮ್ಮ ವೀಕ್ಷಕರಿಗಾಗಿ ಮೋಜಿನ ಅನುಭವಗಳನ್ನು ನೀವು ರಚಿಸಬಹುದು. IFTTT ಎಂಬುದು ಥರ್ಡ್ ಪಾರ್ಟಿ, ವೆಬ್ ಆಧಾರಿತ ಸೇವೆಯಾಗಿದ್ದು, ವಿಭಿನ್ನ ಆ್ಯಪ್‍ಗಳು, ಸೇವೆಗಳು ಮತ್ತು ಸಾಧನಗಳನ್ನು ಒಟ್ಟಿಗೆ ಕನೆಕ್ಟ್ ಮಾಡುತ್ತದೆ.

ಲೈವ್ ಸ್ಟ್ರೀಮ್‌ನ ಸಂದರ್ಭದಲ್ಲಿ ನಿಜ ಜೀವನದ ಕ್ರಿಯೆಗಳನ್ನು ಸ್ವಯಂಚಾಲಿತವಾಗಿ ಟ್ರಿಗರ್ ಮಾಡಲು ನೀವು IFTTT ಎಪ್ಲೆಟ್‌ಗಳನ್ನು ಬಳಸಬಹುದು. IFTTT, ಪಾವತಿಸುವ ಅಭಿಮಾನಿಗಳನ್ನು ಗುರುತಿಸಬಲ್ಲದು ಮತ್ತು ನಿಮ್ಮ ಸಮುದಾಯವನ್ನು ನಿರ್ವಹಿಸಬಲ್ಲದು. IFTTT ಹಲವಾರು ಅನನ್ಯ ಮತ್ತು ಮೋಜಿನ ಸಂವಹನಗಳನ್ನು ಹೊಂದಿದೆ, ಮತ್ತು ಪ್ರಸ್ತುತ ಈ ಕೆಳಗಿನ YouTube ಮಾನಿಟೈಸೇಶನ್ ಫೀಚರ್‌ಗಳೊಂದಿಗೆ ಕೆಲಸ ಮಾಡುತ್ತದೆ:

  • ಸೂಪರ್ ಚಾಟ್ವೀಕ್ಷಕರು ಸೂಪರ್ ಚಾಟ್ ಸಂದೇಶಗಳನ್ನು ಖರೀದಿಸಿದಾಗ ಕ್ರಿಯೆಗಳು ಟ್ರಿಗರ್ ಆಗುತ್ತವೆ.
  • ಚಾನಲ್ ಸದಸ್ಯತ್ವಗಳುವೀಕ್ಷಕರು ಚಾನಲ್ ಸದಸ್ಯರಾಗಿ ಸೇರಿಕೊಂಡಾಗ ಕ್ರಿಯೆಗಳು ಟ್ರಿಗರ್ ಆಗುತ್ತವೆ.

IFTTT FAQ ಗಳು

ಈ ಏಕೀಕರಣವು ಏನು ಮಾಡುತ್ತದೆ?

ನಿಮ್ಮ YouTube ಚಾನಲ್ ಅನ್ನು ನೀವು IFTTT ಗೆ ಕನೆಕ್ಟ್ ಮಾಡಿದಾಗ, ಕನೆಕ್ಟ್ ಮಾಡಲಾದ ಆ್ಯಪ್‌ಗಳು, ಸೇವೆಗಳು, ಹಾಗೂ ಸಾಧನಗಳನ್ನು ಸೂಪರ್ ಚಾಟ್ ಹಾಗೂ ಚಾನಲ್ ಸದಸ್ಯತ್ವಗಳೊಂದಿಗೆ ನೀವು ಲಿಂಕ್ ಮಾಡಬಹುದು. ಲೈವ್ ಸ್ಟ್ರೀಮ್‌ನ ಸಂದರ್ಭದಲ್ಲಿ ಸೂಪರ್ ಚಾಟ್‌ಗಳನ್ನು ಖರೀದಿಸುವ ಅಥವಾ ಚಾನಲ್ ಸದಸ್ಯರಾಗಿ ಸೇರಿಕೊಳ್ಳುವ ವೀಕ್ಷಕರು ನಿಜ ಜೀವನದ ಕ್ರಿಯೆಗಳನ್ನು ಟ್ರಿಗರ್ ಮಾಡಬಲ್ಲರು.
ಎಪ್ಲೆಟ್‌ಗಳು, ಸೂಪರ್ ಚಾಟ್ ಹಾಗೂ ಚಾನಲ್ ಸದಸ್ಯತ್ವಗಳನ್ನು ಇವುಗಳೊಂದಿಗೆ ಲಿಂಕ್ ಮಾಡುತ್ತವೆ:
  • Google Drive ನಂತಹ ಆನ್‌ಲೈನ್ ಸೇವೆಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲ್ಯಾಟ್‌ಫಾರ್ಮ್‌ಗಳು.
  • ಇಂಟರ್ನೆಟ್‌ಗೆ ಕನೆಕ್ಟ್ ಮಾಡಿರುವ ಸಾಧನಗಳು, ಉದಾಹರಣೆಗೆ ಸ್ಮಾರ್ಟ್ ಲೈಟ್‌ಗಳು ಅಥವಾ ಸ್ಮಾರ್ಟ್ ಸ್ವಿಚ್‌ಗಳು.
ಯಾವ ಸೂಪರ್ ಚಾಟ್ ಎಪ್ಲೆಟ್‌ಗಳು ಹಾಗೂ ಚಾನಲ್ ಸದಸ್ಯತ್ವದ ಎಪ್ಲೆಟ್‌ಗಳು ಲಭ್ಯವಿವೆ ಎಂದು ನೋಡಿ, ಮತ್ತು IFTTT ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ನಾನು ಏನನ್ನಾದರೂ ಖರೀದಿಸಬೇಕಾಗುತ್ತದೆಯೇ?

ನಿಮ್ಮ ವೀಕ್ಷಕರಿಗಾಗಿ ನೀವು ಯಾವ ರೀತಿಯ ಸಂವಹನವನ್ನು ರಚಿಸಲು ಬಯಸುತ್ತೀರಿ ಎಂಬುದನ್ನು ಅದು ಅವಲಂಬಿಸುತ್ತದೆ. ಕೆಲವೊಂದಕ್ಕಾಗಿ, ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಿರುವ ಸಾಧನವನ್ನು ನೀವು ಖರೀದಿಸಬೇಕಾಗುತ್ತದೆ. ನೀವು ಈಗಾಗಲೇ ಹೊಂದಿರುವ, ಇಂಟರ್ನೆಟ್‌ಗೆ ಕನೆಕ್ಟ್ ಮಾಡಿರುವ ಅನೇಕ ಸಾಧನಗಳು ಸಹ ಕೆಲಸ ಮಾಡುತ್ತವೆ.
ಸೂಪರ್ ಚಾಟ್ ಅಥವಾ ಚಾನಲ್ ಸದಸ್ಯತ್ವಗಳಿಗೆ ಸೂಕ್ತವಾಗಿರುವ, ಶಾರ್ಟ್‌ಲಿಸ್ಟ್‌ ಮಾಡಲಾದ ಕೆಲವೊಂದು ಸಂವಹನಗಳನ್ನು ನೀವು ಬಳಸಬಹುದು. ನಿಮ್ಮದೇ ಸಂವಹನಗಳನ್ನು ಸಹ ನೀವು ರಚಿಸಬಹುದು. ಆ್ಯಪ್, ಸೇವೆ ಅಥವಾ ಸಾಧನವು IFTTT ಯೊಂದಿಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನಾನು ಅದನ್ನು ಹೇಗೆ ಸೆಟ್ ಅಪ್ ಮಾಡಬಹುದು?

ಮೊದಲಿಗೆ, ನಿಮ್ಮ YouTube ಚಾನಲ್ ಅನ್ನು IFTTT ಗೆ ಕನೆಕ್ಟ್ ಮಾಡಬೇಕು.
  1. ನಿಮ್ಮ ಬಳಿ ಈಗಾಗಲೇ ಇಲ್ಲದಿದ್ದರೆ, IFTTT ಖಾತೆಯನ್ನು ರಚಿಸಿ.
  2. ನೀವು ಮಾನಿಟೈಸೇಶನ್ ಫೀಚರ್‌ಗಳಿಗಾಗಿ ಬಳಸುವ ಅದೇ YouTube ಖಾತೆ ಮತ್ತು ಚಾನಲ್ ಅನ್ನು ಬಳಸಿಕೊಂಡು YouTube ಗೆ ಕನೆಕ್ಟ್ ಮಾಡಿ.
ನಿಮ್ಮ ಖಾತೆಗಳನ್ನು ಕನೆಕ್ಟ್ ಮಾಡಿದ ಬಳಿಕ, IFTTT ಯಲ್ಲಿ ಕ್ರಿಯೆಗಳನ್ನು ಟ್ರಿಗರ್ ಮಾಡುವ ಎಪ್ಲೆಟ್ ಅನ್ನು ನಿರ್ಮಿಸುವ ಮೂಲಕ ನೀವು ಸಂವಹನಗಳನ್ನು ರಚಿಸಬಹುದು ಅಥವಾ ಅಸ್ತಿತ್ವದಲ್ಲಿರುವ, ಪ್ರಕಟಿಸಲಾದ ಎಪ್ಲೆಟ್ ಅನ್ನು ಬಳಸಬಹುದು.

ಸೂಪರ್ ಚಾಟ್‌ಗಾಗಿ IFTTT ಎಪ್ಲೆಟ್‌ಗಳನ್ನು ಪಡೆಯಿರಿ ಅಥವಾ ರಚಿಸಿ

ಅರ್ಹತೆ

ಈ ಫೀಚರ್ ಅನ್ನು ಆನ್ ಮಾಡಲು, ನೀವು:

ಪೂರ್ವ-ನಿರ್ಮಿತ ಎಪ್ಲೆಟ್‌ಗಳನ್ನು ಬಳಸಿ

ನೀವು ವಿವಿಧ ಪೂರ್ವ-ನಿರ್ಮಿತ ಎಪ್ಲೆಟ್‌ಗಳಿಂದ ಆಯ್ಕೆ ಮಾಡಿಕೊಳ್ಳಬಹುದು. ಲೈವ್ ಸ್ಟ್ರೀಮ್‌ನ ಸಂದರ್ಭದಲ್ಲಿ ನಿಜ ಜೀವನದ ಕ್ರಿಯೆಗಳನ್ನು ಟ್ರಿಗರ್ ಮಾಡಲು ನಿಮ್ಮ ವೀಕ್ಷಕರಿಗೆ ಅವಕಾಶ ನೀಡುವ ಎಪ್ಲೆಟ್‌ಗಳು ನಿಮಗೆ ಕಾಣಿಸುತ್ತವೆ. ಪಾವತಿಸುವ ಅಭಿಮಾನಿಗಳನ್ನು ಗುರುತಿಸಲು, ನಿಮ್ಮ ಸಮುದಾಯವನ್ನು ನಿರ್ವಹಿಸಲು ಮತ್ತು ಇನ್ನಷ್ಟನ್ನು ಮಾಡಲು ಎಪ್ಲೆಟ್‌ಗಳು ನಿಮಗೆ ಸಹಾಯ ಮಾಡುತ್ತವೆ.

ನಿಮ್ಮದೇ ಎಪ್ಲೆಟ್ ಅನ್ನು ರಚಿಸಿ

ನಿಮ್ಮ ಬಳಕೆದಾರರಿಗಾಗಿ ನೀವು ಅನುಭವಗಳನ್ನು ಕಸ್ಟಮೈಸ್ ಮಾಡಬಹುದು ಮತ್ತು ನಿಮ್ಮದೇ ಎಪ್ಲೆಟ್‌ಗಳನ್ನು ರಚಿಸಬಹುದು. ನಿಮ್ಮದೇ ಎಪ್ಲೆಟ್ ಅನ್ನು ರಚಿಸಲು ಈ ಸೂಚನೆಗಳನ್ನು ಅನುಸರಿಸಿ:
  1. ifttt.com/create ಎಂಬಲ್ಲಿಗೆ ಹೋಗಿ.
  2. +ಇದು ಎಂಬುದನ್ನು ಕ್ಲಿಕ್ ಮಾಡಿ.
  3. YouTube ಲೋಗೋವನ್ನು ಆಯ್ಕೆ ಮಾಡಿ.
  4. ನಿಮ್ಮ YouTube ಚಾನಲ್ ಅನ್ನು ಕನೆಕ್ಟ್ ಮಾಡಲು ಸೂಚನೆಗಳನ್ನು ಅನುಸರಿಸಿ.
  5. "ಹೊಸ ಸೂಪರ್ ಚಾಟ್ ಸಂದೇಶವನ್ನು" ಟ್ರಿಗರ್ ಆಗಿ ಆಯ್ಕೆ ಮಾಡಿ ಮತ್ತು ನೀವು ಯಾವ ಬಣ್ಣದ ಶ್ರೇಣಿಯನ್ನು ಟ್ರಿಗರ್ ಆಗಿಸಲು ಬಯಸುವಿರಿ ಎಂಬುದನ್ನು ಆಯ್ಕೆ ಮಾಡಿ.
  6. +ಅದು ಎಂಬುದನ್ನು ಕ್ಲಿಕ್ ಮಾಡಿ ಮತ್ತು ಯಾವುದೇ ಕ್ರಿಯಾ ಸೇವೆಯನ್ನು ಆಯ್ಕೆ ಮಾಡಿ.
  7. ಆ ಸೇವೆಯನ್ನು ಕನೆಕ್ಟ್ ಮಾಡಲು ಸೂಚನೆಗಳನ್ನು ಅನುಸರಿಸಿ ಮತ್ತು ಕ್ರಿಯೆಯನ್ನು ಆಯ್ಕೆ ಮಾಡಿ.
  8. ನಿಮ್ಮ ಎಪ್ಲೆಟ್ ಅನ್ನು ಪರಿಶೀಲಿಸಿ ಮತ್ತು ಮುಗಿದಿದೆ ಎನ್ನುವುದನ್ನು ಕ್ಲಿಕ್ ಮಾಡಿ.

ನಿಮ್ಮ ಸೂಪರ್ ಚಾಟ್ ಎಪ್ಲೆಟ್‌ಗಳನ್ನು ಪರೀಕ್ಷಿಸುವುದು ಹೇಗೆ

ನೀವು ಎಪ್ಲೆಟ್‌ಗಳನ್ನು ರಚಿಸಿದ ಬಳಿಕ, ಅವುಗಳನ್ನು ಪರೀಕ್ಷಿಸಬೇಕಾಗುತ್ತದೆ. ನಿಮ್ಮ ಎಪ್ಲೆಟ್ ಅನ್ನು ಪರೀಕ್ಷಿಸಲು ಅತ್ಯಂತ ಸುಲಭ ವಿಧಾನವೆಂದರೆ ಇಮೇಲ್‍ನ ಮೂಲಕ ಪರೀಕ್ಷಿಸುವುದು. ಪರೀಕ್ಷಿಸಲು:
  1. ifttt.com/create ಎಂಬಲ್ಲಿಗೆ ಹೋಗಿ.
  2. +ಇದು ಎಂಬುದನ್ನು ಕ್ಲಿಕ್ ಮಾಡಿ.
  3. YouTube ಲೋಗೋವನ್ನು ಹುಡುಕಿ ಮತ್ತು ಅದನ್ನು ಕ್ಲಿಕ್ ಮಾಡಿ.
  4. ನಿಮ್ಮ YouTube ಚಾನಲ್ ಅನ್ನು ಕನೆಕ್ಟ್ ಮಾಡಲು ಸೂಚನೆಗಳನ್ನು ಅನುಸರಿಸಿ.
  5. "ಇಮೇಲ್" ಅನ್ನು ಟ್ರಿಗರ್ ಆಗಿ ಆಯ್ಕೆ ಮಾಡಿ ಮತ್ತು ಟ್ರಿಗರ್‌ನ ರೂಪದಲ್ಲಿ “IFTTT ಗೆ ಯಾವುದೇ ಇಮೇಲ್ ಅನ್ನು ಕಳುಹಿಸಿ”.
  6. +ಅದು ಎಂಬುದನ್ನು ಕ್ಲಿಕ್ ಮಾಡಿ ಮತ್ತು ಯಾವುದೇ ಕ್ರಿಯಾ ಸೇವೆಯನ್ನು ಆಯ್ಕೆ ಮಾಡಿ.
  7. ಆ ಸೇವೆಯನ್ನು ಕನೆಕ್ಟ್ ಮಾಡಲು ಸೂಚನೆಗಳನ್ನು ಅನುಸರಿಸಿ ಮತ್ತು ಕ್ರಿಯೆಯನ್ನು ಆಯ್ಕೆ ಮಾಡಿ.
  8. ನಿಮ್ಮ ಎಪ್ಲೆಟ್ ಅನ್ನು ಪರಿಶೀಲಿಸಿ ಮತ್ತು ಮುಗಿದಿದೆ ಎನ್ನುವುದನ್ನು ಕ್ಲಿಕ್ ಮಾಡಿ.
  9. ಪರೀಕ್ಷಿಸಲು, IFTTT ಯ ಇಮೇಲ್ ಖಾತೆಗೆ ಒಂದು ಇಮೇಲ್ ಕಳುಹಿಸಿ. ನಿಮ್ಮ ಎಪ್ಲೆಟ್ ಕೆಲವೇ ಸೆಕೆಂಡ್‍ಗಳಲ್ಲಿ ಟ್ರಿಗರ್ ಆಗಬೇಕು.

ರಚನೆಕಾರರು ಮತ್ತು ವೀಕ್ಷಕರು YouTube ನ ಸೇವಾ ನಿಯಮಗಳನ್ನು ಮತ್ತು ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಅವರು ಕೃತಿಸ್ವಾಮ್ಯ ನಿಯಮಗಳನ್ನು ಸಹ ಪಾಲಿಸಬೇಕು ಮತ್ತು ಇತರರ ಗೌಪ್ಯತೆಯ ಹಕ್ಕುಗಳನ್ನು ಕಾಪಾಡಬೇಕು.

ಸಮಸ್ಯೆಗಳನ್ನು ನಿವಾರಿಸುವುದು

ನಿಮ್ಮ ಎಪ್ಲೆಟ್ ಕೆಲಸ ಮಾಡುತ್ತಿಲ್ಲ ಎಂದಾದರೆ, ಟ್ರಿಗರ್ ಅಥವಾ ಕ್ರಿಯೆಯಲ್ಲಿ ಸಮಸ್ಯೆ ಇರಬಹುದು. IFTTT ಯಲ್ಲೇ ಸಮಸ್ಯೆ ಇರಬಹುದು. ನೀವು ಸಮಸ್ಯೆ ಎದುರಿಸುತ್ತಿದ್ದರೆ, ಈ ಕೆಳಗಿನವುಗಳನ್ನು ಪ್ರಯತ್ನಿಸಿ:
  • ನಿಮ್ಮ ಸಾಧನಗಳನ್ನು ಆನ್ ಮಾಡಲಾಗಿದೆ ಮತ್ತು ಅವು ಇಂಟರ್ನೆಟ್‌ಗೆ ಕನೆಕ್ಟ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • IFTTT ಯಲ್ಲಿ ನಿಮ್ಮ ಚಟುವಟಿಕೆ ಫೀಡ್ ಅನ್ನು ಪರಿಶೀಲಿಸಿ, ಇದು ನಿಮ್ಮ ಎಪ್ಲೆಟ್‌ಗಳಲ್ಲಿ ಟ್ರಿಗರ್‌ನ ಪ್ರತಿ ಕಾರ್ಯಗತಗೊಳಿಸುವಿಕೆಯ ಸ್ಥಿತಿಯನ್ನು ಒದಗಿಸುತ್ತದೆ. ಈ ಫೀಡ್, ಯಾವುದೇ ದೋಷಗಳನ್ನು ಸಹ ನಿರ್ದಿಷ್ಟಪಡಿಸುತ್ತದೆ.

IFTTT ವೆಬ್‌ಸೈಟ್‌ನಲ್ಲಿ ಇನ್ನಷ್ಟು ಸಮಸ್ಯೆ ನಿವಾರಣೆ ಸಲಹೆಗಳನ್ನು ಪಡೆಯಿರಿ.

ಸದಸ್ಯತ್ವಗಳಿಗಾಗಿ IFTTT ಎಪ್ಲೆಟ್‌ಗಳನ್ನು ಪಡೆಯಿರಿ ಅಥವಾ ರಚಿಸಿ

ಅರ್ಹತೆ

ಈ ಫೀಚರ್ ಅನ್ನು ಆನ್ ಮಾಡಲು, ನೀವು:

ಪೂರ್ವ-ನಿರ್ಮಿತ ಎಪ್ಲೆಟ್‌ಗಳನ್ನು ಬಳಸಿ

ನೀವು ವಿವಿಧ ಪೂರ್ವ-ನಿರ್ಮಿತ ಎಪ್ಲೆಟ್‌ಗಳಿಂದ ಆಯ್ಕೆ ಮಾಡಿಕೊಳ್ಳಬಹುದು. ಲೈವ್ ಸ್ಟ್ರೀಮ್‌ನ ಸಂದರ್ಭದಲ್ಲಿ ನಿಜ ಜೀವನದ ಕ್ರಿಯೆಗಳನ್ನು ಟ್ರಿಗರ್ ಮಾಡಲು ನಿಮ್ಮ ವೀಕ್ಷಕರಿಗೆ ಅವಕಾಶ ನೀಡುವ ಎಪ್ಲೆಟ್‌ಗಳು ನಿಮಗೆ ಕಾಣಿಸುತ್ತವೆ. ಪಾವತಿಸುವ ಅಭಿಮಾನಿಗಳನ್ನು ಗುರುತಿಸಲು, ನಿಮ್ಮ ಸಮುದಾಯವನ್ನು ನಿರ್ವಹಿಸಲು ಮತ್ತು ಇನ್ನಷ್ಟನ್ನು ಮಾಡಲು ಎಪ್ಲೆಟ್‌ಗಳು ನಿಮಗೆ ಸಹಾಯ ಮಾಡಬಲ್ಲವು.

ನಿಮ್ಮದೇ ಎಪ್ಲೆಟ್ ಅನ್ನು ರಚಿಸಿ

ನಿಮ್ಮ ಬಳಕೆದಾರರಿಗಾಗಿ ನೀವು ಅನುಭವಗಳನ್ನು ಕಸ್ಟಮೈಸ್ ಮಾಡಬಹುದು ಮತ್ತು ನಿಮ್ಮದೇ ಎಪ್ಲೆಟ್‌ಗಳನ್ನು ರಚಿಸಬಹುದು. ನಿಮ್ಮದೇ ಎಪ್ಲೆಟ್ ಅನ್ನು ರಚಿಸಲು ಈ ಸೂಚನೆಗಳನ್ನು ಅನುಸರಿಸಿ:
  1. ifttt.com/create ಎಂಬಲ್ಲಿಗೆ ಹೋಗಿ.
  2. +ಇದು ಎಂಬುದನ್ನು ಕ್ಲಿಕ್ ಮಾಡಿ.
  3. YouTube ಲೋಗೋವನ್ನು ಆಯ್ಕೆ ಮಾಡಿ.
  4. ನಿಮ್ಮ YouTube ಚಾನಲ್ ಅನ್ನು ಕನೆಕ್ಟ್ ಮಾಡಲು ಸೂಚನೆಗಳನ್ನು ಅನುಸರಿಸಿ.
  5. "ಹೊಸ ಚಾನಲ್ ಸದಸ್ಯತ್ವವನ್ನು" ಟ್ರಿಗರ್ ಆಗಿ ಆಯ್ಕೆ ಮಾಡಿ.
  6. +ಅದು ಎಂಬುದನ್ನು ಕ್ಲಿಕ್ ಮಾಡಿ ಮತ್ತು ಯಾವುದೇ ಕ್ರಿಯಾ ಸೇವೆಯನ್ನು ಆಯ್ಕೆ ಮಾಡಿ.
  7. ಆ ಸೇವೆಯನ್ನು ಕನೆಕ್ಟ್ ಮಾಡಲು ಸೂಚನೆಗಳನ್ನು ಅನುಸರಿಸಿ ಮತ್ತು ಕ್ರಿಯೆಯನ್ನು ಆಯ್ಕೆ ಮಾಡಿ.
  8. ನಿಮ್ಮ ಎಪ್ಲೆಟ್ ಅನ್ನು ಪರಿಶೀಲಿಸಿ ಮತ್ತು ಮುಗಿದಿದೆ ಎನ್ನುವುದನ್ನು ಕ್ಲಿಕ್ ಮಾಡಿ.

ಸದಸ್ಯತ್ವ ಎಪ್ಲೆಟ್‌ಗಳನ್ನು ಪರೀಕ್ಷಿಸುವುದು ಹೇಗೆ

ನಿಮ್ಮ ಎಪ್ಲೆಟ್‌ಗಳನ್ನು ರಚಿಸಿದ ಬಳಿಕ, ನೀವು ಅವುಗಳನ್ನು ಪರೀಕ್ಷಿಸಬೇಕಾಗುತ್ತದೆ. ನಿಮ್ಮ ಎಪ್ಲೆಟ್ ಅನ್ನು ಪರೀಕ್ಷಿಸಲು ಅತ್ಯಂತ ಸುಲಭ ವಿಧಾನವೆಂದರೆ ಇಮೇಲ್‍ನ ಮೂಲಕ ಪರೀಕ್ಷಿಸುವುದು. ಪರೀಕ್ಷಿಸಲು:
  1. ifttt.com/create ಎಂಬಲ್ಲಿಗೆ ಹೋಗಿ.
  2. +ಇದು ಎಂಬುದನ್ನು ಕ್ಲಿಕ್ ಮಾಡಿ.
  3. YouTube ಲೋಗೋವನ್ನು ಆಯ್ಕೆ ಮಾಡಿ.
  4. ನಿಮ್ಮ YouTube ಚಾನಲ್ ಅನ್ನು ಕನೆಕ್ಟ್ ಮಾಡಲು ಸೂಚನೆಗಳನ್ನು ಅನುಸರಿಸಿ.
  5. "ಇಮೇಲ್" ಅನ್ನು ಟ್ರಿಗರ್ ಆಗಿ ಆಯ್ಕೆ ಮಾಡಿ ಮತ್ತು ಟ್ರಿಗರ್‌ನ ರೂಪದಲ್ಲಿ “IFTTT ಗೆ ಯಾವುದೇ ಇಮೇಲ್ ಅನ್ನು ಕಳುಹಿಸಿ”.
  6. +ಅದು ಎಂಬುದನ್ನು ಕ್ಲಿಕ್ ಮಾಡಿ ಮತ್ತು ಯಾವುದೇ ಕ್ರಿಯಾ ಸೇವೆಯನ್ನು ಆಯ್ಕೆ ಮಾಡಿ.
  7. ಆ ಸೇವೆಯನ್ನು ಕನೆಕ್ಟ್ ಮಾಡಲು ಸೂಚನೆಗಳನ್ನು ಅನುಸರಿಸಿ ಮತ್ತು ಕ್ರಿಯೆಯನ್ನು ಆಯ್ಕೆ ಮಾಡಿ.
  8. ನಿಮ್ಮ ಎಪ್ಲೆಟ್ ಅನ್ನು ಪರಿಶೀಲಿಸಿ ಮತ್ತು ಮುಗಿದಿದೆ ಎನ್ನುವುದನ್ನು ಕ್ಲಿಕ್ ಮಾಡಿ.
  9. ಪರೀಕ್ಷಿಸಲು, IFTTT ಯ ಇಮೇಲ್ ಖಾತೆಗೆ ಒಂದು ಇಮೇಲ್ ಕಳುಹಿಸಿ. ನಿಮ್ಮ ಎಪ್ಲೆಟ್ ಕೆಲವೇ ಸೆಕೆಂಡ್‍ಗಳಲ್ಲಿ ಟ್ರಿಗರ್ ಆಗಬೇಕು.

ರಚನೆಕಾರರು ಮತ್ತು ವೀಕ್ಷಕರು YouTube ನ ಸೇವಾ ನಿಯಮಗಳನ್ನು ಮತ್ತು ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಅವರು ಕೃತಿಸ್ವಾಮ್ಯ ನಿಯಮಗಳನ್ನು ಸಹ ಪಾಲಿಸಬೇಕು ಮತ್ತು ಇತರರ ಗೌಪ್ಯತೆಯ ಹಕ್ಕುಗಳನ್ನು ಕಾಪಾಡಬೇಕು.

ಸಮಸ್ಯೆಗಳನ್ನು ನಿವಾರಿಸುವುದು

ನಿಮ್ಮ ಎಪ್ಲೆಟ್ ಕೆಲಸ ಮಾಡುತ್ತಿಲ್ಲ ಎಂದಾದರೆ, ಟ್ರಿಗರ್ ಅಥವಾ ಕ್ರಿಯೆಯಲ್ಲಿ ಸಮಸ್ಯೆ ಇರಬಹುದು. IFTTT ಯಲ್ಲೇ ಸಮಸ್ಯೆ ಇರಬಹುದು. ನೀವು ಸಮಸ್ಯೆ ಎದುರಿಸುತ್ತಿದ್ದರೆ, ಈ ಕೆಳಗಿನವುಗಳನ್ನು ಪ್ರಯತ್ನಿಸಿ:
  • ನಿಮ್ಮ ಸಾಧನಗಳನ್ನು ಆನ್ ಮಾಡಲಾಗಿದೆ ಮತ್ತು ಅವು ಇಂಟರ್ನೆಟ್‌ಗೆ ಕನೆಕ್ಟ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • IFTTT ಯಲ್ಲಿ ನಿಮ್ಮ ಚಟುವಟಿಕೆ ಫೀಡ್ ಅನ್ನು ಪರಿಶೀಲಿಸಿ, ಇದು ನಿಮ್ಮ ಎಪ್ಲೆಟ್‌ಗಳಲ್ಲಿ ಟ್ರಿಗರ್‌ನ ಪ್ರತಿ ಕಾರ್ಯಗತಗೊಳಿಸುವಿಕೆಯ ಸ್ಥಿತಿಯನ್ನು ಒದಗಿಸುತ್ತದೆ. ಈ ಫೀಡ್, ಯಾವುದೇ ದೋಷಗಳನ್ನು ಸಹ ನಿರ್ದಿಷ್ಟಪಡಿಸುತ್ತದೆ.

IFTTT ಯಿಂದ ಇನ್ನಷ್ಟು ಸಮಸ್ಯೆ ನಿವಾರಣೆ ಸಲಹೆಗಳನ್ನು ಪಡೆಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7993922100826680203
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false