ನಿಮ್ಮ YouTube ಚಾನಲ್‌ನ ಸದಸ್ಯತ್ವದ ಹಂತಗಳು ಹಾಗೂ ಪರ್ಕ್‌ಗಳನ್ನು ರಚಿಸಿ ಅಥವಾ ನಿರ್ವಹಿಸಿ

ನಿಮ್ಮ ಚಾನಲ್‌ಗಾಗಿ ನೀವು ಸದಸ್ಯತ್ವಗಳನ್ನು ಆನ್ ಮಾಡಿದ್ದರೆ, ನಿಮ್ಮ ಚಾನಲ್‌ನ ಸದಸ್ಯರಿಗಾಗಿ, ಸದಸ್ಯರಿಗೆ-ಮಾತ್ರ ಮೀಸಲಾದ ವಿಭಿನ್ನ ಪರ್ಕ್‌ಗಳನ್ನು ನೀವು ಹೊಂದಿರಬಹುದು. ಈ ಪರ್ಕ್‌ಗಳಲ್ಲಿ ಕಸ್ಟಮ್ ಎಮೋಜಿ, ಬ್ಯಾಡ್ಜ್‌ಗಳು ಮತ್ತು ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊಗಳು ಒಳಗೊಂಡಿರಬಹುದು.

ನಿಮ್ಮ ಚಾನಲ್ ಸದಸ್ಯತ್ವಗಳ ಪ್ರೋಗ್ರಾಂ ವಿಭಿನ್ನ ದರಗಳ ಹಂತಗಳನ್ನು ಹೊಂದಿರಬಹುದು ಮತ್ತು ಪ್ರತಿ ಹಂತಕ್ಕಾಗಿ ಸದಸ್ಯರಿಗೆ ಪರ್ಕ್‌ಗಳನ್ನು ನೀಡಬಹುದು. ಆದರೆ, ನೀವು ಒಂದಕ್ಕಿಂತ ಹೆಚ್ಚು ಹಂತಗಳನ್ನು ಹೊಂದಿದ್ದರೆ, ಪ್ರತಿ ಹಂತದ ಪರ್ಕ್‌ಗಳು ಮುಂದಿನದಕ್ಕೆ ಸೇರಿಕೊಳ್ಳುತ್ತಾ ಹೋಗುತ್ತದೆ. ಇದರರ್ಥ, ಅಧಿಕ ದರದ ಹಂತಗಳು, ಕಡಿಮೆ ದರದ ಹಂತಗಳಲ್ಲಿ ಒದಗಿಸಲಾಗುವ ಪರ್ಕ್‌ಗಳನ್ನು ಸ್ವಯಂಚಾಲಿತವಾಗಿ ಒಳಗೊಂಡಿರುತ್ತವೆ. ನೀವು 6 ರವರೆಗೆ ವಿಭಿನ್ನ ಸದಸ್ಯತ್ವದ ಹಂತಗಳನ್ನು ರಚಿಸಬಹುದು ಮತ್ತು ಪ್ರತಿ ಹಂತವೂ ಸಹ 1 ರಿಂದ 5 ಪರ್ಕ್‌ಗಳನ್ನು ಹೊಂದಿರಬೇಕು. ನೆನಪಿರಲಿ, ನಿಮ್ಮ ಸದಸ್ಯರಿಗೆ ನೀವು ಲಭ್ಯಗೊಳಿಸುವ ಎಲ್ಲಾ ಪರ್ಕ್‌ಗಳು ನಮ್ಮ ಚಾನಲ್ ಸದಸ್ಯತ್ವದ ನೀತಿಗಳನ್ನು ಅನುಸರಿಸಬೇಕು.

ನಿಮ್ಮ ಸದಸ್ಯತ್ವದ ಹಂತಗಳು ಹಾಗೂ ಪರ್ಕ್‌ಗಳನ್ನು ರಚಿಸಿದ ನಂತರ ನೀವು:

ಚಾನಲ್ ಸದಸ್ಯತ್ವಗಳು

ಚಾನಲ್ ಸದಸ್ಯತ್ವದ ಹಂತಗಳು

ವಿವಿಧ ದರಗಳನ್ನು ಹೊಂದಿರುವ ಗರಿಷ್ಠ 6 ಸದಸ್ಯತ್ವದ ಹಂತಗಳನ್ನು ನೀವು ರಚಿಸಬಹುದು. ನೀವು ಒಂದಕ್ಕಿಂತ ಹೆಚ್ಚು ಹಂತವನ್ನು ಹೊಂದಿದ್ದರೆ, ಅಧಿಕ ದರದ ಹಂತಗಳು, ಕಡಿಮೆ ದರದ ಹಂತಗಳಲ್ಲಿ ಒದಗಿಸುವ ಎಲ್ಲಾ ಪರ್ಕ್‌ಗಳನ್ನು ಒಳಗೊಂಡಿರುತ್ತವೆ ಎಂಬುದನ್ನು ನೆನಪಿಡಿ. ಸದಸ್ಯತ್ವದ ಹಂತಗಳಿಗಾಗಿ ನೀವು ವಿಧಿಸುವ ದರವನ್ನು ಆಧರಿಸಿ, ಇತರ ದೇಶಗಳು/ಪ್ರದೇಶಗಳಲ್ಲಿರುವ ಸದಸ್ಯರು ಎಷ್ಟು ಹಣ ಪಾವತಿಸುತ್ತಾರೆ ಎಂಬುದನ್ನು ವೀಕ್ಷಿಸಿ.

ಸದಸ್ಯತ್ವದ ಹಂತವನ್ನು ಸೇರಿಸಿ

ವಿವಿಧ ದರಗಳನ್ನು ಹೊಂದಿರುವ ಗರಿಷ್ಠ 6 ಹಂತಗಳನ್ನು ನೀವು ಸೇರಿಸಬಹುದು. ಪ್ರತಿ ಹಂತದಲ್ಲಿ ಕನಿಷ್ಠ 1 ಮತ್ತು ಗರಿಷ್ಠ 5 ಪರ್ಕ್‌ಗಳಿರಬೇಕು.

ಸದಸ್ಯತ್ವದ ಹಂತಗಳನ್ನು ಸೇರಿಸಿ

  1. ಕಂಪ್ಯೂಟರ್‌ನಲ್ಲಿ, YouTube Studio ಗೆ ಹೋಗಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಆಯ್ಕೆ ಮಾಡಿ.
  3. ಸದಸ್ಯತ್ವಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. “ಕ್ರಮ 1: ಹಂತಗಳು ಹಾಗೂ ಪರ್ಕ್‌ಗಳನ್ನು ಸೇರಿಸಿ” ಎಂದು ಹೇಳುವ ಬಾಕ್ಸ್‌ನಲ್ಲಿ, ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ಪೂರ್ಣಗೊಂಡ ನಂತರ, ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ಹಂತಗಳು ಹಾಗೂ ಪರ್ಕ್‌ಗಳು ಲೈವ್ ಆಗುವುದಕ್ಕೆ ಮೊದಲು, ಅವು ನಮ್ಮ ಚಾನಲ್ ಸದಸ್ಯತ್ವದ ನೀತಿಗಳನ್ನು ಅನುಸರಿಸುತ್ತವೆಯೇ ಎಂಬುದನ್ನು ನಾವು ಪರಿಶೀಲಿಸುತ್ತೇವೆ. ಈ ಪ್ರಕ್ರಿಯೆಗೆ ಸುಮಾರು ಒಂದು ದಿನದಷ್ಟು ಕಾಲಾವಕಾಶ ಬೇಕಾಗುತ್ತದೆ.

ಸದಸ್ಯತ್ವದ ಹಂತವೊಂದನ್ನು ತೆಗೆದುಹಾಕಿ

ನೀವು ಹಂತವೊಂದನ್ನು ತೆಗೆದುಹಾಕಿದರೆ, ನೀವು ಆ ಹಂತದಲ್ಲಿರುವ ಎಲ್ಲಾ ಸದಸ್ಯರನ್ನು ಅಳಿಸುತ್ತೀರಿ. ತೆಗೆದುಹಾಕಲಾದ ಹಂತದಲ್ಲಿರುವ ಎಲ್ಲಾ ಸದಸ್ಯರು ತಕ್ಷಣವೇ ಪರ್ಕ್‌ಗಳ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ಕಳೆದ ತಿಂಗಳ ಪಾವತಿಯನ್ನು ಮರುಪಾವತಿಸಲಾಗುತ್ತದೆ.

ಹಂತವೊಂದನ್ನು ತೆಗೆದುಹಾಕಿ

  1. ಕಂಪ್ಯೂಟರ್‌ನಲ್ಲಿ, YouTube Studio ಗೆ ಹೋಗಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಆಯ್ಕೆ ಮಾಡಿ.
  3. ಸದಸ್ಯತ್ವಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. “ಕ್ರಮ 1: ಹಂತಗಳು ಹಾಗೂ ಪರ್ಕ್‌ಗಳನ್ನು ಸೇರಿಸಿ” ಎಂದು ಹೇಳುವ ಬಾಕ್ಸ್‌ನಲ್ಲಿ, ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ನೀವು ತೆಗೆದುಹಾಕಲು ಬಯಸುವ ಹಂತವನ್ನು ಕ್ಲಿಕ್ ಮಾಡಿ ನಂತರ ಅಳಿಸಿ  ಎಂಬುದನ್ನು ಕ್ಲಿಕ್ ಮಾಡಿ.
  6. ಉಳಿದ ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ಪೂರ್ಣಗೊಂಡ ನಂತರ, ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ಚಾನಲ್ ಸದಸ್ಯತ್ವದ ಪರ್ಕ್‌ಗಳು

ನಿಮ್ಮ ಸದಸ್ಯರಿಗೆ ನೀವು ನೀಡುವಂತಹ ಕನಿಷ್ಠ ಒಂದು ಪರ್ಕ್ (ಮತ್ತು ಐದು ಪರ್ಕ್‌ಗಳವರೆಗೆ) ಅನ್ನು ರಚಿಸಿ ಮತ್ತು ಪ್ರಕಟಿಸಿ. ಈ ಪರ್ಕ್‌ಗಳನ್ನು ನೀವು ನಿಮ್ಮ ಸದಸ್ಯರಿಗೆ ಒದಗಿಸಬೇಕು, ಹಾಗಾಗಿ ನಿಮ್ಮ ಸದಸ್ಯರಿಗೆ ತೃಪ್ತಿಯಾಗುವ ಹಾಗೆ ಈ ಪರ್ಕ್‌ಗಳನ್ನು ಒದಗಿಸಬಲ್ಲಿರಾ ಎಂಬುದನ್ನು ಪರಿಗಣಿಸಿ.

ನಿಮ್ಮ ಪರ್ಕ್‌ಗಳು ನಮ್ಮ ನೀತಿಗಳು ಹಾಗೂ ನಿಯಮಗಳನ್ನು ಅನುಸರಿಸಬೇಕು. ನಿಮ್ಮ ರಚನೆಕಾರರ ಪರ್ಕ್‌ಗಳಿಗೆ YouTube ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ.

ಸದಸ್ಯರಿಗೆ-ಮಾತ್ರ ಮೀಸಲಾದ ಈ ರೀತಿಯ ಪರ್ಕ್‌ಗಳನ್ನು ನಿಮ್ಮ ಚಾನಲ್‌ನ ಸದಸ್ಯರಿಗೆ ನೀವು ಒದಗಿಸಬಹುದು:

ಕಸ್ಟಮ್ ಅಥವಾ ಡೀಫಾಲ್ಟ್ ಚಾನಲ್ ಬ್ಯಾಡ್ಜ್‌ಗಳು
ಲೈವ್ ಚಾಟ್, ಕಾಮೆಂಟ್‌ಗಳು ಮತ್ತು ಸಮುದಾಯದ ಟ್ಯಾಬ್‌ನಲ್ಲಿ ಸದಸ್ಯರಿಗೆ-ಮಾತ್ರ ಮೀಸಲಾದ ವಿಶೇಷ ಬ್ಯಾಡ್ಜ್‌ಗಳೊಂದಿಗೆ ಸದಸ್ಯರು ಎದ್ದು ಕಾಣಿಸಬಹುದು. 8 ವಿಭಿನ್ನ ಬ್ಯಾಡ್ಜ್‌ಗಳಿವೆ ಮತ್ತು ಒಬ್ಬ ವ್ಯಕ್ತಿಯು ಎಷ್ಟು ಸಮಯದಿಂದ ನಿಮ್ಮ ಚಾನಲ್‌ನ ಸಕ್ರಿಯ ಪಾವತಿಸಿದ ಸದಸ್ಯರಾಗಿದ್ದಾರೆ ಎಂಬುದನ್ನು ಪ್ರತಿ ಬ್ಯಾಡ್ಜ್ ಹೈಲೈಟ್ ಮಾಡುತ್ತದೆ. ಆದ್ದರಿಂದ, ಒಬ್ಬ ಸಕ್ರಿಯ ಸದಸ್ಯರು ಒಂದು ವರ್ಷದ ಹಿಂದೆ ನಿಮ್ಮ ಚಾನಲ್ ಅನ್ನು ಸೇರಿದ್ದರೆ, ಆದರೆ ಕಳೆದ 12 ತಿಂಗಳಲ್ಲಿ 9 ತಿಂಗಳಿಗೆ ಮಾತ್ರ ಪಾವತಿಸಿದ್ದರೆ, ಅವರು 9 ತಿಂಗಳಿನಿಂದ ಸದಸ್ಯರಾಗಿದ್ದಾರೆ ಎಂದು ಅವರ ಬ್ಯಾಡ್ಜ್ ತೋರಿಸುತ್ತದೆ.
ಪ್ರತಿ ಬ್ಯಾಡ್ಜ್ ಸಹ ವಿಭಿನ್ನ ಸಮಯಾವಧಿಗೆ ಸಂಬಂಧಿಸಿದೆ:
  • ಹೊಸಬರು
  • 1 ತಿಂಗಳು
  • 2 ತಿಂಗಳುಗಳು
  • 6 ತಿಂಗಳುಗಳು
  • 1 ವರ್ಷ
  • 2 ವರ್ಷಗಳು
  • 3 ವರ್ಷಗಳು
  • 4 ವರ್ಷಗಳು
  • 5 ವರ್ಷಗಳು

ನೀವು ಡೀಫಾಲ್ಟ್ YouTube ಬ್ಯಾಡ್ಜ್‌ಗಳನ್ನು ಬಳಸಬಹುದು ಅಥವಾ ನಿಮ್ಮ ಚಾನಲ್‌ಗಾಗಿ ಕಸ್ಟಮ್ ಬ್ಯಾಡ್ಜ್‌ಗಳನ್ನು ಅಪ್‌ಲೋಡ್ ಮಾಡಬಹುದು. ಕೆಲವು ಅವಧಿಗಳಿಗಾಗಿ ಕಸ್ಟಮ್ ಬ್ಯಾಡ್ಜ್‌ಗಳನ್ನು ಬಳಸುವುದು ಮತ್ತು ಉಳಿದವುಗಳಿಗಾಗಿ ಡೀಫಾಲ್ಟ್ ಬ್ಯಾಡ್ಜ್‌ಗಳನ್ನು ಬಳಸುವ ಹಾಗೆ ನೀವು ಎರಡನ್ನು ಮಿಶ್ರ ಮಾಡಬಹುದು.

ಸೂಚನೆ: ಎಲ್ಲಾ ಸದಸ್ಯರು ಲಾಯಲ್ಟಿ ಆಧಾರದ ಮೇಲೆ ಒಂದೇ ಬ್ಯಾಡ್ಜ್ ಅನ್ನು ಪಡೆಯುತ್ತಾರೆ.

ಕಸ್ಟಮ್ ಚಾನಲ್ ಬ್ಯಾಡ್ಜ್‌ಗಳನ್ನು ಅಪ್‌ಲೋಡ್ ಮಾಡಿ

ನೀವು ಡೀಫಾಲ್ಟ್ YouTube ಬ್ಯಾಡ್ಜ್‌ಗಳನ್ನು ಬಳಸಬಹುದು ಅಥವಾ ನಿಮ್ಮ ಚಾನಲ್‌ಗಾಗಿ ಕಸ್ಟಮ್ ಬ್ಯಾಡ್ಜ್‌ಗಳನ್ನು ಅಪ್‌ಲೋಡ್ ಮಾಡಬಹುದು. ಕೆಲವು ಅವಧಿಗಳಿಗಾಗಿ ಕಸ್ಟಮ್ ಬ್ಯಾಡ್ಜ್‌ಗಳನ್ನು ಬಳಸುವುದು ಮತ್ತು ಉಳಿದವುಗಳಿಗಾಗಿ ಡೀಫಾಲ್ಟ್ ಬ್ಯಾಡ್ಜ್‌ಗಳನ್ನು ಬಳಸುವ ಹಾಗೆ ನೀವು ಎರಡನ್ನು ಮಿಶ್ರ ಮಾಡಬಹುದು.

ನೀವು ಕಸ್ಟಮ್ ಬ್ಯಾಡ್ಜ್‌ಗಳನ್ನು ಅಪ್‌ಲೋಡ್ ಮಾಡಿದಾಗ, ನೀವು ಪ್ರತಿಯೊಂದು ಸ್ಲಾಟ್ ಅನ್ನು ವಿಭಿನ್ನ ಬ್ಯಾಡ್ಜ್‌ನೊಂದಿಗೆ ಭರ್ತಿ ಮಾಡಬೇಕಾಗುತ್ತದೆ, ಆದರೆ ನೀವು ಹಾಗೆ ಮಾಡದಿದ್ದರೆ, ಖಾಲಿ ಸ್ಲಾಟ್‌ಗಳನ್ನು ಇವುಗಳೊಂದಿಗೆ ಭರ್ತಿ ಮಾಡಲಾಗುತ್ತದೆ:

  • ನೀವು ಅಪ್‌ಲೋಡ್ ಮಾಡುವ ಅತ್ಯುನ್ನತ ಕಸ್ಟಮ್ ಬ್ಯಾಡ್ಜ್, ಅಥವಾ
  • ಆ ಅವಧಿಗಾಗಿ ಡೀಫಾಲ್ಟ್ YouTube ಬ್ಯಾಡ್ಜ್

ನಿಮ್ಮ ಚಾನಲ್ ಬ್ಯಾಡ್ಜ್‌ಗಳನ್ನು ಅಪ್‌ಲೋಡ್ ಮಾಡಲು ಮತ್ತು ಕಸ್ಟಮೈಸ್ ಮಾಡಲು:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಗಳಿಸಿ ನಂತರ ಸದಸ್ಯತ್ವಗಳು ನಂತರ ಲಾಯಲ್ಟಿ ಬ್ಯಾಡ್ಜ್‌ಗಳು ಎಂಬಲ್ಲಿಗೆ ಹೋಗಿ.

ಚಾನಲ್ ಬ್ಯಾಡ್ಜ್‌ಗಳಿಗಾಗಿ ಸ್ಪೆಸಿಫಿಕೇಶನ್‌ಗಳು

ಫೈಲ್ ಫಾರ್ಮ್ಯಾಟ್: JPEG, ಅಥವಾ PNG ಫೈಲ್‌ಗಳು.

ಫೈಲ್ ಗಾತ್ರ: 1 MB ಗಿಂತ ಕಡಿಮೆ.

ಚಿತ್ರದ ಅಳತೆಗಳು: ಕನಿಷ್ಠ 32px x 32px.

ಬ್ಯಾಡ್ಜ್‌ಗಳು ಕಾಮೆಂಟ್‌ಗಳಲ್ಲಿ ಹಾಗೂ ಸಮುದಾಯ ಟ್ಯಾಬ್‌ನಲ್ಲಿ 14px x 14px ನಲ್ಲಿ ರೆಂಡರ್ ಆಗುತ್ತವೆ. ಲೈವ್ ಚಾಟ್‌ನಲ್ಲಿ ಬ್ಯಾಡ್ಜ್‌ಗಳು 16px x 16px ನಲ್ಲಿ ರೆಂಡರ್ ಆಗುತ್ತವೆ.

ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಸಮುದಾಯ ಪೋಸ್ಟ್‌ಗಳು
ನಿಮ್ಮ ಚಾನಲ್‌ನ ಸದಸ್ಯರೊಂದಿಗೆ ಮಾತ್ರ ಕಂಟೆಂಟ್ ಅನ್ನು ಹಂಚಿಕೊಳ್ಳಲು ನೀವು ಸಮುದಾಯ ಟ್ಯಾಬ್ ಅನ್ನು ಬಳಸಬಹುದು. ನಿಮ್ಮ ಚಾನಲ್‌ನಲ್ಲಿ ನೀವು ಹಂತಗಳನ್ನು ಹೊಂದಿದ್ದರೆ, ನಿರ್ದಿಷ್ಟ ಹಂತಗಳಲ್ಲಿನ ಸದಸ್ಯರೊಂದಿಗೆ ನೀವು ಸಮುದಾಯ ಪೋಸ್ಟ್‌ಗಳನ್ನು ಸಹ ಹಂಚಿಕೊಳ್ಳಬಹುದು.
ಸದಸ್ಯರಿಗೆ-ಮಾತ್ರ ಮೀಸಲಾದ ಸಮುದಾಯ ಪೋಸ್ಟ್‌ಗಳನ್ನು ಮಾಡಲು:
  1. ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ ಚಾನಲ್ ಅನ್ನು ವೀಕ್ಷಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ಸಮುದಾಯ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. “ಗೋಚರತೆ” ಮೆನುವಿನಲ್ಲಿ, ಪೋಸ್ಟ್ ಅನ್ನು ಸಾರ್ವಜನಿಕಗೊಳಿಸಬೇಕೇ ಅಥವಾ ಸದಸ್ಯರಿಗೆ-ಮಾತ್ರ ಮೀಸಲಾಗಿಸಬೇಕೇ ಅಥವಾ ನಿರ್ದಿಷ್ಟ ಹಂತಗಳಲ್ಲಿನ ಸದಸ್ಯರಿಗೆ ಮೀಸಲಾಗಿಸಬೇಕೇ ಎಂಬುದನ್ನು ಆಯ್ಕೆ ಮಾಡಿ. ಸಾರ್ವಜನಿಕ ಎಂಬುದು ಡೀಫಾಲ್ಟ್ ಸೆಟ್ಟಿಂಗ್ ಆಗಿರುತ್ತದೆ.
  5. ನಿಮ್ಮ ಪೋಸ್ಟ್‌ನ ವಿವರಗಳನ್ನು ನಮೂದಿಸಿ.
  6. ಪೋಸ್ಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
ಸದಸ್ಯರಿಗೆ-ಮಾತ್ರ ಮೀಸಲಾದ ಕಸ್ಟಮ್ ಎಮೋಜಿ
ಕಸ್ಟಮ್ ಎಮೋಜಿಯು ನಿಮ್ಮ ವೀಡಿಯೊಗಳ ಮೇಲಿನ ಕಾಮೆಂಟ್‌ಗಳಲ್ಲಿ ಮತ್ತು ನಿಮ್ಮ ಲೈವ್ ಚಾಟ್‌ಗಳಲ್ಲಿ ವಿಶೇಷ ಎಮೋಜಿಯನ್ನು ಬಳಸಲು ನಿಮ್ಮ ಚಾನಲ್‌ನ ಸದಸ್ಯರಿಗೆ ಅವಕಾಶ ನೀಡುತ್ತದೆ.
ಡೀಫಾಲ್ಟ್ ಆಗಿ, ಕಸ್ಟಮ್ ಎಮೋಜಿಗಳಿರುವುದಿಲ್ಲ, ಆದ್ದರಿಂದ ನಿಮ್ಮದೇ ಎಮೋಜಿಯನ್ನು ನೀವು ಅಪ್‌ಲೋಡ್ ಮಾಡಬೇಕು. ಕಸ್ಟಮ್ ಎಮೋಜಿಯನ್ನು ಅಪ್‌ಲೋಡ್ ಮಾಡಲು, ಸದಸ್ಯತ್ವಗಳು ಪುಟಕ್ಕೆ ಹೋಗಿ ಮತ್ತು “ನಿಮ್ಮ ಬ್ಯಾಡ್ಜ್‌ಗಳು ಮತ್ತು ಎಮೋಜಿ” ಕಾರ್ಡ್‌ನಲ್ಲಿ ಎಡಿಟ್ ಮಾಡಿ ಎಂಬುದನ್ನು ಆಯ್ಕೆ ಮಾಡಿ. ಎಮೋಜಿಯನ್ನು ವಿನ್ಯಾಸಗೊಳಿಸುವ ಕುರಿತು ಇನ್ನಷ್ಟು ತಿಳಿಯಿರಿ.
ಸೂಚನೆ: ನೀವು ಅಪ್‌ಲೋಡ್ ಮಾಡುವ ಎಮೋಜಿಗೆ, ಹಂತವನ್ನು ಪರಿಗಣಿಸದೆ, ಎಲ್ಲಾ ಸದಸ್ಯರು ಆ್ಯಕ್ಸೆಸ್ ಪಡೆಯುತ್ತಾರೆ.

ಫ್ಯಾಮಿಲಿ ಹೆಸರು

ನಿಮ್ಮ ಮೊದಲ ಎಮೋಜಿಯನ್ನು ನೀವು ಅಪ್‌ಲೋಡ್ ಮಾಡಿದಾಗ, ನಿಮ್ಮ ಎಲ್ಲಾ ಎಮೋಜಿಗಳಿಗೆ 'ಫ್ಯಾಮಿಲಿ ಹೆಸರು' ಎಂದು ಕರೆಯಲಾಗುವ ಪೂರ್ವಪ್ರತ್ಯಯ ಹೆಸರನ್ನು ನೀವು ರಚಿಸುತ್ತೀರಿ. ನಿಮ್ಮ ಚಾನಲ್‌ನ ಸದಸ್ಯರು ನಿಮ್ಮ ಎಮೋಜಿಯನ್ನು ಆಟೋಕಂಪ್ಲೀಟ್ ಮಾಡಲು ಈ ಹೆಸರನ್ನು ಬಳಸುತ್ತಾರೆ. ನೀವು :_ ಮೂಲಕ ಸಹ ನಿಮ್ಮ ಚಾನಲ್‌ನ ಎಮೋಜಿಗಳನ್ನು ಆಟೋಕಂಪ್ಲೀಟ್ ಮಾಡಬಹುದು.

ಫ್ಯಾಮಿಲಿ ಹೆಸರುಗಳು YouTube ನಾದ್ಯಂತ ಅನನ್ಯವಾಗಿರುವುದಿಲ್ಲ ಮತ್ತು ಅವುಗಳು 3-10 ಅಕ್ಷರಗಳನ್ನು ಹೊಂದಿರಬೇಕು. ಉತ್ತಮ ಅಭ್ಯಾಸವಾಗಿ, ನಿಮ್ಮ ಬ್ರ್ಯಾಂಡ್ ಎಂದು ಸುಲಭವಾಗಿ ಗುರುತಿಸಬಹುದಾದ ಫ್ಯಾಮಿಲಿ ಹೆಸರನ್ನು ಆಯ್ಕೆಮಾಡಲು ನಾವು ಶಿಫಾರಸು ಮಾಡುತ್ತೇವೆ.

ಕಸ್ಟಮ್ ಎಮೋಜಿಯನ್ನು ವೀಡಿಯೊ ಕಾಮೆಂಟ್‌ಗಳಲ್ಲಿ ಅಥವಾ ಯಾವುದೇ ಲೈವ್ ಚಾಟ್‌ಗಳಲ್ಲಿ ಕಳುಹಿಸಬಹುದು.

ಎಮೋಜಿಯ ಹೆಸರು

ಪ್ರತಿ ಎಮೋಜಿಯು ಲೈವ್ ಚಾಟ್‌ನಲ್ಲಿ ಸ್ವಯಂ ಪೂರ್ಣಗೊಳಿಸಲು ಸದಸ್ಯರು ಬಳಸಬಹುದಾದ ಹೆಸರನ್ನು ಹೊಂದಿರುತ್ತದೆ. ಎಮೋಜಿಯ ಹೆಸರನ್ನು ಬದಲಾಯಿಸಲು, ನೀವು ಎಮೋಜಿಯನ್ನು ಅಳಿಸಬೇಕು ಮತ್ತು ಮರು-ಅಪ್‌ಲೋಡ್ ಮಾಡಬೇಕು. ಎಮೋಜಿಯ ಹೆಸರುಗಳು be 3–10 ಸಂಕೇತಾಕ್ಷರಗಳಷ್ಟು ಉದ್ದವಿರಬೇಕು ಮತ್ತು ತಮ್ಮ ಎಮೋಜಿ ಫ್ಯಾಮಿಲಿಯೊಳಗೆ (ಆದರೆ YouTube ನಾದ್ಯಂತ ಅಲ್ಲ) ಅನನ್ಯವಾಗಿರಬೇಕು.

ನೀವು ಅಪ್‌ಲೋಡ್ ಮಾಡಬಹುದಾದ ಕಸ್ಟಮ್ ಎಮೋಜಿಗಳ ಪ್ರಮಾಣ

ನೀವು ಸದಸ್ಯರನ್ನು ಪಡೆದ ಹಾಗೆ, ಹೊಸ ಕಸ್ಟಮ್ ಎಮೋಜಿಗಾಗಿ ನೀವು ಇನ್ನಷ್ಟು ಸ್ಲಾಟ್‌ಗಳನ್ನು ಅನ್‌ಲಾಕ್ ಮಾಡಬಹುದು. ಹೊಸ ಸ್ಲಾಟ್‌ಗಳನ್ನು ಅನ್‌ಲಾಕ್ ಮಾಡಿದಾಗ ನಿಮಗೆ ತಿಳಿಸಲಾಗುವುದಿಲ್ಲ.
# ಸದಸ್ಯರು # ಎಮೋಜಿ
0 4
2 5
5 6
10 7
15 8
20 9
30 10
40 11
50 12
75 13
100 14
125 15
150 16
175 17
200 18
225 19
250 20
300 21
350 22
400 23
450 24
500 25
600 26
700 27
800 28
900 29
1000 30
1200 31
1400 32
1600 33
1800 34
2000 35
2200 36
2400 37
2600 38
2800 39
3000 40
3200 41
3400 42
3600 43
3800 44
4000 45
4200 46
4400 47
4600 48
4800 49
5000+ 54

ಕಸ್ಟಮ್ ಎಮೋಜಿ ಸ್ಪೆಸಿಫಿಕೇಶನ್‌ಗಳು

ಫೈಲ್ ಫಾರ್ಮ್ಯಾಟ್: JPEG, PNG, ಮತ್ತು GIF ಫೈಲ್‌ಗಳಿಗೆ ಆದ್ಯತೆ ನೀಡಲಾಗುತ್ತದೆ.
  • ಗಮನಿಸಿ: GIF ಗಳನ್ನು ಸ್ಥಿರ ಚಿತ್ರವಾಗಿ ಪ್ರದರ್ಶಿಸಲಾಗುತ್ತದೆ, ಆ್ಯನಿಮೇಶನ್ ಆಗಿ ಅಲ್ಲ.
ಫೈಲ್ ಗಾತ್ರ: 1 MB ಗಿಂತ ಕಡಿಮೆ.
ಚಿತ್ರದ ಅಳತೆಗಳು: 48px x 48px (ಆದ್ಯತೆ ನೀಡಲಾಗುತ್ತದೆ) ರಿಂದ 480px x 480px.

ಸಾಧನ ವ್ಯತ್ಯಾಸಗಳು

ಮೊಬೈಲ್ ಸಾಧನಗಳಲ್ಲಿ ಮತ್ತು ಕಂಪ್ಯೂಟರ್ ಮಾನಿಟರ್‌ಗಳಲ್ಲಿ ಎಮೋಜಿ ವಿಭಿನ್ನ ಗಾತ್ರಗಳಲ್ಲಿ ಕಾಣಿಸುತ್ತದೆ. ಎರಡೂ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಎಮೋಜಿ ಉತ್ತಮವಾಗಿ ಕಾಣುವಂತೆ ಮಾಡುವುದು ಹೇಗೆ ಎಂಬುದು ಇಲ್ಲಿದೆ:
ಮೊಬೈಲ್ ಸಾಧನಗಳಲ್ಲಿ: ಎಮೋಜಿ 24x24 ಪಾಯಿಂಟ್‌ಗಳಲ್ಲಿ ಕಾಣಿಸುತ್ತದೆ. ಸಾಧನದ ಪಿಕ್ಸೆಲ್ ಸಾಂದ್ರತೆಗೆ ಹೊಂದಿಸಲು ಚಿತ್ರವನ್ನು ಸ್ಕೇಲ್ ಮಾಡಲಾಗುತ್ತದೆ.
ಬಹುತೇಕ ಮಾನಿಟರ್‌ಗಳಲ್ಲಿ: ಎಮೋಜಿ 24x24 ಪಾಯಿಂಟ್‌ಗಳಲ್ಲಿ ಕಾಣಿಸುತ್ತದೆ. Retina ಮತ್ತು HiDPI ಸಾಧನಗಳಲ್ಲಿ, ಚಿತ್ರಗಳು 48x48 ಪಾಯಿಂಟ್‌ಗಳು ಅಥವಾ ಹೆಚ್ಚಿನದರಲ್ಲಿ ಕಾಣಿಸುತ್ತವೆ.
ಸದಸ್ಯರಿಗೆ-ಮೊದಲು ವೀಡಿಯೊಗಳು
ಸದಸ್ಯರಿಗೆ-ಮಾತ್ರ ಮೀಸಲಾಗಿರುವುದರಿಂದ ಸಾರ್ವಜನಿಕಕ್ಕೆ ಎಂಬ ಫೀಚರ್‌ನೊಂದಿಗೆ, ನಿರ್ದಿಷ್ಟ ಅವಧಿಯವರೆಗೆ ನಿಮ್ಮ ಚಾನಲ್‌ನ ಸದಸ್ಯರು ಮಾತ್ರ ವೀಕ್ಷಿಸುವ ಹಾಗೆ ಮತ್ತು ನಂತರ ಇತರರಿಗೆ ಆ್ಯಕ್ಸೆಸ್ ದೊರೆಯುವ ಹಾಗೆ ನೀವು ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಬಹುದು. ನಿಮ್ಮ ಚಾನಲ್‌ನ ಸದಸ್ಯರಿಗೆ ನಿಮ್ಮ ಕಂಟೆಂಟ್‌ಗೆ ಪ್ರಾಯೋಗಿಕ ಆವೃತ್ತಿಗೆ ಆ್ಯಕ್ಸೆಸ್ ಅನ್ನು ಒದಗಿಸುವುದರಿಂದ, ನಿಮ್ಮ ಕಂಟೆಂಟ್ ಸಾರ್ವಜನಿಕವಾಗುವುದಕ್ಕೆ ಮೊದಲು ಅವರು ಅದನ್ನು ವೀಕ್ಷಿಸಲು ಮತ್ತು ಅದರೊಂದಿಗೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.
ನೀವು ಕಂಟೆಂಟ್ ಅನ್ನು “ಸದಸ್ಯರಿಗೆ ಮಾತ್ರ ಮೀಸಲಾಗಿರುವುದರಿಂದ ಸಾರ್ವಜನಿಕಕ್ಕೆ” ಎಂಬುದಾಗಿ ಅಪ್‌ಲೋಡ್ ಮಾಡಿದಾಗ, ನಿಮ್ಮ ಕಂಟೆಂಟ್ ಮೊದಲಿಗೆ ಚಾನಲ್‌ನ ಸದಸ್ಯರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ನಿಮ್ಮ ಸದಸ್ಯರಿಗೆ ನಾವು ತಿಳಿಸುತ್ತೇವೆ. ವೀಡಿಯೊ ಸಾರ್ವಜನಿಕ ಎಂಬುದಕ್ಕೆ ಬದಲಾದಾಗ, ನಿಮ್ಮ ಎಲ್ಲಾ ಸಬ್‌ಸ್ಕ್ರೈಬರ್‌ಗಳಿಗೆ ಸೂಚನೆ ನೀಡಲಾಗುತ್ತದೆ.
ಸರಾಸರಿಯಾಗಿ, ರಚನೆಕಾರರು ಮೊದಲು ಸದಸ್ಯರಿಗೆ ವೀಡಿಯೊಗಳ ಆ್ಯಕ್ಸೆಸ್ ಅನ್ನು ನೀಡಿದಾಗ, ಆ ವೀಡಿಯೊಗಳ ಪರ್ಫಾರ್ಮೆನ್ಸ್ ಒಂದೇ ರೀತಿ ಇರುವುದನ್ನು ಮತ್ತು ಅವುಗಳು ಸಾರ್ವಜನಿಕವಾದಾಗ ಅವುಗಳ ಮೇಲೆ ಋಣಾತ್ಮಕ ಪರಿಣಾಮ ಆಗದಿರುವುದನ್ನು ನಾವು ಗಮನಿಸಿದ್ದೇವೆ.
  • ಜನವರಿ ಮತ್ತು ಫೆಬ್ರವರಿ 2023 ರ ನಡುವೆ ಕನಿಷ್ಠ ಒಂದು ಮುಂಚಿತ ಆ್ಯಕ್ಸೆಸ್ ವೀಡಿಯೊ ಮತ್ತು ಒಂದು ಸಾರ್ವಜನಿಕ-ಮಾತ್ರ ವೀಡಿಯೊವನ್ನು ಪ್ರಕಟಿಸಿದ ಚಾನಲ್‌ಗಳಲ್ಲಿ.

ಹೊಸ ಅಪ್‌ಲೋಡ್ ಒಂದನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದರಿಂದ ಸಾರ್ವಜನಿಕಕ್ಕೆ ಎಂಬುದಾಗಿ ಸೆಟ್ ಮಾಡಿ

  1. ವೀಡಿಯೊ ಅಪ್‌ಲೋಡ್ ಮಾಡಿ.
  2. ಗೋಚರತೆಗಾಗಿ, ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದರಿಂದ ಸಾರ್ವಜನಿಕ ಎಂಬುದನ್ನು ಆಯ್ಕೆಮಾಡಿ.
  • ನೀವು ಒಂದಕ್ಕಿಂತ ಹೆಚ್ಚು ಹಂತಗಳನ್ನು ಹೊಂದಿದ್ದರೆ, ನಿಮ್ಮ ವೀಡಿಯೊ ಗೋಚರಿಸಬೇಕೆಂದು ನೀವು ಬಯಸುವ ಹಂತಗಳನ್ನು ಆಯ್ಕೆಮಾಡಿ.
  1. ವೀಡಿಯೊ ಸಾರ್ವಜನಿಕ ಎಂಬುದಕ್ಕೆ ಬದಲಾಗಬೇಕಾದ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.

ನಿಮ್ಮ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ಪ್ರಚಾರ ಮಾಡಿ

ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊಗಳು ಸದಸ್ಯರ ಹೋಮ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ಗಳಲ್ಲಿ ಕಾಣಿಸಿಕೊಳ್ಳಬಹುದು. ಸದಸ್ಯರು ನಿಮ್ಮ ಚಾನಲ್ ಪುಟದ ಕಂಟೆಂಟ್ ಮತ್ತು ಸಮುದಾಯ ಟ್ಯಾಬ್‌ಗಳಲ್ಲಿ ಸಹ ವೀಡಿಯೊಗಳನ್ನು ಕಂಡುಕೊಳ್ಳಬಹುದು. ವೀಡಿಯೊ ಲಭ್ಯವಿದೆ ಎಂದು ನಿಮ್ಮ ಎಲ್ಲಾ ವೀಕ್ಷಕರಿಗೆ ತಿಳಿಸಲು, ನೀವು ಇವುಗಳಲ್ಲಿ URL ಅನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು:

  • ಕಾರ್ಡ್‌ಗಳು
  • ಸಾರ್ವಜನಿಕ ಸಮುದಾಯ
  • ಪ್ಲೇಪಟ್ಟಿ‌ಗಳು

ನಿಮ್ಮ ಸದಸ್ಯರು ಸರಿಯಾದ ಹಂತದಲ್ಲಿ(ಗಳಲ್ಲಿ) ಇದ್ದರೆ, ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ಅವರು ತಕ್ಷಣವೇ ವೀಕ್ಷಿಸಬಹುದು. ಸದಸ್ಯರಲ್ಲದವರು, ಇದು ಸದಸ್ಯರಿಗೆ-ಮಾತ್ರ ಲಭ್ಯವಿದೆ ಎಂದು ಹೇಳುವ ಸೂಚನೆಯನ್ನು ನೋಡುತ್ತಾರೆ ಮತ್ತು ಸದಸ್ಯರಾಗಲು ಮಾರ್ಗಗಳನ್ನು ಅದರಲ್ಲಿ ತೋರಿಸಲಾಗುತ್ತದೆ.

ಸದಸ್ಯರಿಗೆ ಮಾತ್ರ ಮೀಸಲಾದ ಲೈವ್ ಚಾಟ್
ಸಾರ್ವಜನಿಕ ಲೈವ್ ಸ್ಟ್ರೀಮ್‌ಗಳ ಸಮಯದಲ್ಲಿ ನೀವು ಚಾಟ್ ಅನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿಸಬಹುದು. ಈಗಲೂ, ಎಲ್ಲರೂ ಸಹ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದು, ಆದರೆ ಸದಸ್ಯರು ಮಾತ್ರ ಚಾಟ್‍ಗಳನ್ನು ಪೋಸ್ಟ್ ಮಾಡಬಹುದು. ಸದಸ್ಯರಿಗೆ-ಮಾತ್ರ ಮೀಸಲಾದ ಲೈವ್ ಚಾಟ್ ಅನ್ನು ಆನ್ ಮಾಡಲು:
  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ರಚಿಸಿ  ಎಂಬುದನ್ನು ಕ್ಲಿಕ್ ಮಾಡಿ.
  3. ಲೈವ್ ಮಾಡಿ  ಎಂಬುದನ್ನು ಆಯ್ಕೆ ಮಾಡಿ.
  4. ಎಡಭಾಗದಲ್ಲಿ, ಸ್ಟ್ರೀಮ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ಸ್ಟ್ರೀಮ್ ಅನ್ನು ರಚಿಸಿ:
    1. ಹಿಂದಿನ ಒಂದು ಸ್ಟ್ರೀಮ್ ಅನ್ನು ಕಾಪಿ ಮಾಡಲು: ಹಿಂದಿನ ಒಂದು ಸ್ಟ್ರೀಮ್ ಅನ್ನು ಆಯ್ಕೆ ಮಾಡಿ ಮತ್ತು ಸೆಟ್ಟಿಂಗ್‌ಗಳನ್ನು ಮರುಬಳಕೆ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
    2. ಹೊಸ ಸ್ಟ್ರೀಮ್ ಅನ್ನು ರಚಿಸಲು: ನಿಮ್ಮ ಹೊಸ ಸ್ಟ್ರೀಮ್‌ನ ಮಾಹಿತಿಯನ್ನು ನಮೂದಿಸಿ ಮತ್ತು ಸ್ಟ್ರೀಮ್ ಅನ್ನು ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
  6. ಮೇಲೆ ಬಲಬದಿಯಲ್ಲಿ, ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  7. "ಲೈವ್ ಚಾಟ್" ಎಂಬುದರ ಅಡಿಯಲ್ಲಿ, ಸದಸ್ಯರಿಗೆ ಮಾತ್ರ ಮೀಸಲಾದ ಚಾಟ್ ಅನ್ನು ಸಕ್ರಿಯಗೊಳಿಸಿ ಎಂಬುದನ್ನು ಆಯ್ಕೆ ಮಾಡಿ.
  8. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
ಸದಸ್ಯರಿಗೆ-ಮಾತ್ರ ಮೀಸಲಾದ ಲೈವ್ ಸ್ಟ್ರೀಮ್‌ಗಳು

ನೀವು ಲೈವ್ ಸ್ಟ್ರೀಮ್‌ಗಳನ್ನು ನಿಮ್ಮ ಚಾನಲ್‌ನ ಸದಸ್ಯರೊಂದಿಗೆ ನೀವು ಪ್ರತ್ಯೇಕವಾಗಿ ಹಂಚಿಕೊಳ್ಳಬಹುದು.

ಕಂಪ್ಯೂಟರ್‌ನಿಂದ:

  1. ಕಂಪ್ಯೂಟರ್‌ನಲ್ಲಿ, YouTube Studio ಗೆ ಸೈನ್ ಇನ್ ಮಾಡಿ.
  2. ರಚಿಸಿ ಅನ್ನು ಕ್ಲಿಕ್‌ ಮಾಡಿ.
  3. ಲೈವ್‌ಗೆ ಹೋಗಿ  ಕ್ಲಿಕ್‌ ಮಾಡಿ.
  4. ಲೈವ್ ಸ್ಟ್ರೀಮ್ ಅನ್ನು ರಚಿಸುವುದಕ್ಕೆ ಸಂಬಂಧಿಸಿದ ಕ್ರಮಗಳನ್ನು ಅನುಸರಿಸಿ.
  5. ಗೋಚರತೆ ಸೆಟ್ಟಿಂಗ್‌ಗಳಲ್ಲಿ, ಯಾವ ಚಾನಲ್ ಸದಸ್ಯರು ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದು ಎಂಬುದನ್ನು ನೀವು ಆಯ್ಕೆ ಮಾಡಬಹುದು:
    • ಲೈವ್ ಸ್ಟ್ರೀಮ್ ವೀಕ್ಷಿಸಲು ಎಲ್ಲಾ ಸದಸ್ಯರಿಗೆ ಅನುಮತಿಸಲು, “ಎಲ್ಲಾ ಪಾವತಿಸಿದ ಸದಸ್ಯರು” ಎಂಬುದನ್ನು ಆಯ್ಕೆ ಮಾಡಿ.
    • ನಿರ್ದಿಷ್ಟ ಹಂತಗಳಲ್ಲಿರುವವರಿಗೆ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಲು ಅನುಮತಿಸುವುದಕ್ಕಾಗಿ, ವೀಕ್ಷಿಸಲು ಅನುಮತಿಸಬೇಕಾದ ಹಂತ (ಮತ್ತು ಮೇಲಿನ ಹಂತಗಳನ್ನು) ಆಯ್ಕೆ ಮಾಡಿ.
  6. ಲೈವ್ ಸ್ಟ್ರೀಮ್‌ಗೆ ಲಿಂಕ್ ಮಾಡುವ, ಸದಸ್ಯರಿಗೆ-ಮಾತ್ರ ಮೀಸಲಾದ ಸಮುದಾಯ ಪೋಸ್ಟ್ ಅನ್ನು ರಚಿಸಲು, ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ನಿಮ್ಮ ಸದಸ್ಯರು ತಮ್ಮ ನೋಟಿಫಿಕೇಶನ್‌ಗಳನ್ನು ಆನ್ ಮಾಡಿದ್ದರೆ, ಹೊಸ, ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಲೈವ್ ಸ್ಟ್ರೀಮ್ ಅನ್ನು ನೀವು ರಚಿಸಿದಾಗ ಅವರಿಗೆ ತಿಳಿಸಲಾಗುತ್ತದೆ.

ಮೊಬೈಲ್ ಸಾಧನದಿಂದ:

  1. ನಿಮ್ಮ ಮೊಬೈಲ್ ಸಾಧನದಲ್ಲಿ, YouTube ಆ್ಯಪ್ ತೆರೆಯಿರಿ.
  2. ಕೆಳಭಾಗದಲ್ಲಿ, ರಚಿಸಿ  ಎಂಬುದನ್ನು ಟ್ಯಾಪ್ ಮಾಡಿ.
  3. ಲೈವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ಇನ್ನಷ್ಟು ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ.
  5. ಇನ್ನಷ್ಟು ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.
  6. ಗೋಚರತೆಯ ಸೆಟ್ಟಿಂಗ್‌ಗಳಲ್ಲಿ, ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದನ್ನು ಆಯ್ಕೆ ಮಾಡಿ ಹಾಗೂ ಯಾವ ಚಾನಲ್ ಸದಸ್ಯರು ನಿಮ್ಮ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಿ:
    • ಲೈವ್ ಸ್ಟ್ರೀಮ್ ವೀಕ್ಷಿಸಲು ಎಲ್ಲಾ ಸದಸ್ಯರಿಗೆ ಅನುಮತಿಸಲು, “ಎಲ್ಲಾ ಪಾವತಿಸಿದ ಸದಸ್ಯರು” ಎಂಬುದನ್ನು ಆಯ್ಕೆ ಮಾಡಿ.
    • ನಿರ್ದಿಷ್ಟ ಹಂತಗಳಲ್ಲಿರುವವರಿಗೆ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಲು ಅನುಮತಿಸುವುದಕ್ಕಾಗಿ, ವೀಕ್ಷಿಸಲು ಅನುಮತಿಸಬೇಕಾದ ಹಂತ (ಮತ್ತು ಮೇಲಿನ ಹಂತಗಳನ್ನು) ಆಯ್ಕೆ ಮಾಡಿ.
  7.   ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ.
  8. ಲೈವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಸದಸ್ಯರ ಮೈಲಿಗಲ್ಲು ಚಾಟ್‌ಗಳು
ಒಬ್ಬ ಸದಸ್ಯರ ನಿಷ್ಠೆಯನ್ನು ಗುರುತಿಸಲು ಮತ್ತು ಸಂಭ್ರಮಿಸಲು, ಚಾನಲ್‌ನ ಸದಸ್ಯರು ಲೈವ್ ಚಾಟ್‌ನಲ್ಲಿ ಪ್ರತಿ ತಿಂಗಳು, ಹೈಲೈಟ್ ಮಾಡಿದ ಒಂದು ವಿಶೇಷ ಸಂದೇಶವನ್ನು ಕಳುಹಿಸಬಹುದು. ಕನಿಷ್ಠ ಪಕ್ಷ, ನಿರಂತರ ಎರಡನೇ ತಿಂಗಳಿಗೆ ಸದಸ್ಯರಾಗಿರುವ ಸದಸ್ಯರು ಮಾತ್ರ ಮೈಲಿಗಲ್ಲು ಚಾಟ್‌ಗಳನ್ನು ಪಡೆಯುತ್ತಾರೆ. ಲೈವ್ ಸ್ಟ್ರೀಮ್‌ಗಳು ಅಥವಾ ಪ್ರೀಮಿಯರ್‌ಗಳ ಸಂದರ್ಭದಲ್ಲಿ ಮಾತ್ರ ಸದಸ್ಯರು ಮೈಲಿಗಲ್ಲು ಚಾಟ್‌ಗಳನ್ನು ಕಳುಹಿಸಬಹುದು. ಚಾನಲ್‌ನ ಸದಸ್ಯರು ಮಾತ್ರ ಮೈಲಿಗಲ್ಲು ಚಾಟ್‌ಗಳನ್ನು ಕಳುಹಿಸಬಹುದಾದರೂ, ಚಾಟ್‌ಗಳು ಎಲ್ಲಾ ವೀಕ್ಷಕರಿಗೆ ಚಾಟ್‌ಗಳು ಗೋಚರಿಸುತ್ತವೆ.
ನಿಮ್ಮ ಚಾನಲ್‌ಗಾಗಿ ಈ ಫೀಚರ್ ಅನ್ನು ಸ್ವಯಂಚಾಲಿತವಾಗಿ ಆನ್ ಮಾಡಲಾಗಿದೆ. ನಿಮ್ಮ ಸದಸ್ಯರು ಮೈಲಿಗಲ್ಲು ಚಾಟ್‌ಗಳನ್ನು ಪಡೆಯುವುದು ನಿಮಗೆ ಇಷ್ಟವಿಲ್ಲ ಎಂದಾದರೆ, ನೀವು ಈ ಫೀಚರ್ ಅನ್ನು ಆನ್ ಮಾಡಬಹುದು. ಸದಸ್ಯರ ಮೈಲಿಗಲ್ಲು ಚಾಟ್‌ಗಳನ್ನು ಆಫ್ ಮಾಡಲು:
  1. YouTube Studio ಗೆ ಸೈನ್ ಇನ್ ಮಾಡಿನಂತರ ಗಳಿಸಿ.
  2. ಸದಸ್ಯತ್ವಗಳು ಎಂಬುದನ್ನು ಆಯ್ಕೆ ಮಾಡಿ ನಂತರಸದಸ್ಯರ ಮೈಲಿಗಲ್ಲು ಚಾಟ್’ ಅನ್ನು ‘ಆಫ್’ ಎಂದು ಸೆಟ್ ಮಾಡಿ.
ಸೂಚನೆ: ಎಲ್ಲಾ ಅರ್ಹ ಸದಸ್ಯರು ಮೈಲಿಗಲ್ಲು ಚಾಟ್‌ಗಳನ್ನು ಬಳಸಬಹುದಾದ್ದರಿಂದ, ಈ ಫೀಚರ್ ಅನ್ನು ಆನ್ ಮಾಡಿದ ಬಳಿಕ ನೀವು ಮೊದಲ ಕೆಲವು ಬಾರಿ ಲೈವ್ ಸ್ಟ್ರೀಮ್ ಮಾಡಿದಾಗ, ಅಧಿಕ ಬಳಕೆ ಕಂಡುಬರಬಹುದು. ಕಾಲಕ್ರಮೇಣ ಈ ದರವು ಒಂದು ಮಟ್ಟಕ್ಕೆ ಬರುತ್ತದೆ ಏಕೆಂದರೆ ಪ್ರತಿ ಸದಸ್ಯರು ತಿಂಗಳಿಗೊಮ್ಮೆ ಸದಸ್ಯರ ಮೈಲಿಗಲ್ಲು ಚಾಟ್ ಅನ್ನು ರಿಡೀಮ್ ಮಾಡಿಕೊಳ್ಳಬಹುದು.
ಸದಸ್ಯರ ಗುರುತಿಸುವಿಕೆ ಶೆಲ್ಫ್

ನಿಮ್ಮ ಚಾನಲ್ ಸದಸ್ಯರನ್ನು ಸಾರ್ವಜನಿಕವಾಗಿ ಗುರುತಿಸಲು, ನಿಮ್ಮ ಚಾನಲ್ ಪುಟದ ಮೇಲ್ಭಾಗದಲ್ಲಿರುವ ಶೆಲ್ಫ್‌ನಲ್ಲಿ ಅವರ ಅವತಾರ್‌ಗಳನ್ನು ನೀವು ಪ್ರಸ್ತುತಪಡಿಸಬಹುದು. ಈ ಶೆಲ್ಫ್ ನಿಮ್ಮ ಚಾನಲ್ ಸದಸ್ಯರಿಗೆ ಸಾರ್ವಜನಿಕವಾಗಿ ಧನ್ಯವಾದ ಸಲ್ಲಿಸಲು ಮತ್ತು ನಿಮ್ಮ ಸದಸ್ಯರನ್ನು ನೀವು ಎಷ್ಟು ಪ್ರಶಂಸಿಸುತ್ತೀರಿ ಎಂಬುದನ್ನು ಇತರರಿಗೆ ತೋರಿಸಲು ಒಂದು ಮಾರ್ಗವಾಗಿದೆ. ಪ್ರಸ್ತುತಪಡಿಸಲಾದ ಸದಸ್ಯರನ್ನು ಯಾದೃಚ್ಛಿಕವಾಗಿ ಆಯ್ಕೆಮಾಡಲಾಗುತ್ತದೆ ಮತ್ತು ಹೆಚ್ಚಿನ ಸದಸ್ಯರು ಕಾಣಿಸಿಕೊಳ್ಳುವ ಅವಕಾಶವನ್ನು ನೀಡಲು ಆಯ್ಕೆಯನ್ನು ಆಗಾಗ್ಗೆ ಬದಲಾಯಿಸಲಾಗುತ್ತದೆ. ನಿಮ್ಮ ಚಾನಲ್ ಪುಟವನ್ನು ವೀಕ್ಷಿಸುವ ಸದಸ್ಯರು ಯಾವಾಗಲೂ ಶೆಲ್ಫ್‌ನಲ್ಲಿ ತಮ್ಮ ಅವತಾರ್ ಅನ್ನು ನೋಡುತ್ತಾರೆ. ಸದಸ್ಯರೊಬ್ಬರು ತಮ್ಮ ಸದಸ್ಯತ್ವವನ್ನು ರದ್ದುಗೊಳಿಸಿದರೆ, ಆನಂತರ ಅವರನ್ನು ಶೆಲ್ಫ್‌ನಲ್ಲಿ ಪ್ರಸ್ತುತಪಡಿಸಲಾಗುವುದಿಲ್ಲ.

ನಿಮ್ಮ ಚಾನಲ್ 8 ಅಥವಾ ಹೆಚ್ಚು ಸದಸ್ಯರನ್ನು ಹೊಂದಿದಾಗ, ಈ ಫೀಚರ್ ಸ್ವಯಂಚಾಲಿತವಾಗಿ ಆನ್ ಆಗುತ್ತದೆ. ಸದಸ್ಯರ ಗುರುತಿಸುವಿಕೆ ಶೆಲ್ಫ್ ಕಾಣಿಸಿಕೊಳ್ಳಬಾರದೆಂದು ನೀವು ಬಯಸಿದರೆ, ನೀವು ಈ ಫೀಚರ್ ಅನ್ನು ಆಫ್ ಮಾಡಬಹುದು. ಸದಸ್ಯರ ಗುರುತಿಸುವಿಕೆ ಶೆಲ್ಫ್ ಅನ್ನು ಆಫ್ ಮಾಡಲು:

ಸದಸ್ಯರ ಗುರುತಿಸುವಿಕೆ ಶೆಲ್ಫ್ ಅನ್ನು ಆಫ್ ಮಾಡಲು:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಗಳಿಸಿ ನಂತರ ಸದಸ್ಯತ್ವಗಳು ಎಂಬಲ್ಲಿಗೆ ಹೋಗಿ.
  3. “ಸದಸ್ಯರ ಗುರುತಿಸುವಿಕೆ ಶೆಲ್ಫ್” ಅನ್ನು ಆಫ್‌ಗೆ ಬದಲಿಸಿ.
ಸದಸ್ಯರಿಗೆ-ಮಾತ್ರ ಮೀಸಲಾದ Shorts
ನಿಮ್ಮ ಚಾನಲ್‌ನ ಸದಸ್ಯರಿಗಾಗಿ ನಿಯಮಿತ, ಲೈಟ್‌ವೆಯ್ಟ್ ಕಂಟೆಂಟ್ ಅನ್ನು ಒದಗಿಸಲು ಸದಸ್ಯರಿಗೆ-ಮಾತ್ರ ಮೀಸಲಾದ Shorts ಉತ್ತಮ ಮಾರ್ಗವಾಗಬಲ್ಲದು. ನೀವು ಚಿಕ್ಕ-ಪುಟ್ಟ ತೆರೆಮರೆಯ ದೃಶ್ಯಗಳ ಕಂಟೆಂಟ್, ಮುಂಬರುವ ವೀಡಿಯೊಗಳ ಕ್ಲಿಪ್‌ಗಳು, ಕಿರು ಪ್ರಶ್ನೋತ್ತರಗಳು ಹಾಗೂ ಇತ್ಯಾದಿಗಳನ್ನು ಹಂಚಿಕೊಳ್ಳಬಹುದು. ಈ Shorts ಅನ್ನು ಸದಸ್ಯರು ಮಾತ್ರ ವೀಕ್ಷಿಸಬಹುದಾದ್ದರಿಂದ, ನಿಮ್ಮ ಸಾರ್ವಜನಿಕ ಕಂಟೆಂಟ್‌ಗೆ ಹೋಲಿಸಿದಾಗ ಹೆಚ್ಚು ಅನೌಪಚಾರಿಕ, ಅಥವಾ ಸಹಜ/ಆರ್ಗ್ಯಾನಿಕ್ ಆಗಿರುವ ಕಂಟೆಂಟ್‌ನೊಂದಿಗೆ ನೀವು ಪ್ರಯೋಗ ಮಾಡಿ ನೋಡಬಹುದು.

ಹೊಸ ಅಪ್‌ಲೋಡ್ ಅನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಿ

  1. ಕಿರು ವೀಡಿಯೊ ಫೈಲ್ ಅನ್ನು ಆಯ್ಕೆ ಮಾಡಿ:
  • 60 ಸೆಕೆಂಡ್‌ಗಳವರೆಗಿನದು.
  • ಚೌಕ ಅಥವಾ ವರ್ಟಿಕಲ್ ದೃಶ್ಯಾನುಪಾತವನ್ನು ಹೊಂದಿರುವುದು.
  1. ಗೋಚರತೆಗಾಗಿ, ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದನ್ನು ಆಯ್ಕೆ ಮಾಡಿ.
  2. ಅಪ್‌ಲೋಡ್ ಪ್ರಕ್ರಿಯೆಯ ಉಳಿದ ಹಂತಗಳನ್ನು ಪೂರ್ಣಗೊಳಿಸಿ.

ಅಸ್ತಿತ್ವದಲ್ಲಿರುವ Short ಅನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಿ

  1. YouTube Studio ಗೆ ಹೋಗಲು ಕಂಪ್ಯೂಟರ್ ಅನ್ನು ಬಳಸಿ ಅಥವಾ YouTube Studio ಮೊಬೈಲ್ ಆ್ಯಪ್  ಅನ್ನು ತೆರೆಯಿರಿ.
  2. ಕಂಟೆಂಟ್ ಆಯ್ಕೆ ಮಾಡಿ.
  3. ಸದಸ್ಯರಿಗೆ-ಮಾತ್ರ ಮೀಸಲಾಗಿದೆ ಎಂದು ನೀವು ಸೆಟ್ ಮಾಡಲು ಬಯಸುವ Short ಅನ್ನು ಹುಡುಕಿ.
  4. ಎಡಿಟ್ ಮಾಡಿ ನಂತರ ಗೋಚರತೆ ಎಂಬುದನ್ನು ಆಯ್ಕೆ ಮಾಡಿ ನಂತರಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ನಂತರ ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
ಸೂಚನೆ: ನೀವು ಒಂದೇ ಫ್ಲೋನಲ್ಲಿ Short ಅನ್ನು ರೆಕಾರ್ಡ್ ಮಾಡಿದರೆ ಮತ್ತು ಅಪ್‌ಲೋಡ್ ಮಾಡಿದರೆ, ಅದನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿದೆ ಎಂದು ಸೆಟ್ ಮಾಡುವ ಆಯ್ಕೆ ಕಾಣಿಸಿಕೊಳ್ಳದಿರಬಹುದು. ನೀವು ಈಗಲೂ ನಿಮ್ಮ Short ಅನ್ನು ಅನ್‌ಲಿಸ್ಟೆಡ್ ಎಂಬುದಾಗಿ ಅಪ್‌ಲೋಡ್ ಮಾಡಬಹುದು ಮತ್ತು ಗೋಚರತೆಯ ಸೆಟ್ಟಿಂಗ್ ಅನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದಾಗಿ ಬದಲಾಯಿಸಬಹುದು.

ಸದಸ್ಯರಿಗೆ-ಮಾತ್ರ ಮೀಸಲಾದ ಎಲ್ಲಾ ವೀಡಿಯೊಗಳ ಹಾಗೆ, ಸದಸ್ಯರಿಗೆ-ಮಾತ್ರ ಮೀಸಲಾದ Shorts ಸಂಪೂರ್ಣ ಮೂಲ ಕಂಟೆಂಟ್ ಆಗಿರಬೇಕು ಮತ್ತು Shorts ಸಂಗೀತ ಲೈಬ್ರರಿಯಲ್ಲಿನ ಸಂಗೀತ ಸೇರಿದಂತೆ, ಥರ್ಡ್ ಪಾರ್ಟಿಗಳ ಮಾಲೀಕತ್ವದ ಸಂಗೀತವನ್ನು ಒಳಗೊಂಡಿರಬಾರದು.

ನಿಮ್ಮ ಸದಸ್ಯರು, ಸದಸ್ಯರಿಗೆ-ಮಾತ್ರ ಮೀಸಲಾದ Shorts ಅನ್ನು ತಮ್ಮ Shorts ಹಾಗೂ ಹೋಮ್ ಫೀಡ್‌ಗಳಲ್ಲಿ ಮಾತ್ರವಲ್ಲದೆ ಮುಂದಿನದನ್ನು ನೋಡಿ ಎಂಬಲ್ಲಿ ನೋಡಬಹುದು. ಸದಸ್ಯರಿಗೆ-ಮಾತ್ರ ಮೀಸಲಾದ Shorts, ನಿಮ್ಮ ಚಾನಲ್‌ನ ಸದಸ್ಯರಿಗಾಗಿ ಒಂದು ನೋಟಿಫಿಕೇಶನ್ ಅನ್ನು ಟ್ರಿಗರ್ ಮಾಡುವುದಿಲ್ಲ.

ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊಗಳು
ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊಗಳ ಫೀಚರ್, ನಿಮ್ಮ ಚಾನಲ್ ಸದಸ್ಯರು ಮಾತ್ರ ವೀಕ್ಷಿಸಬಹುದಾದ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ನಿಮಗೆ ಅವಕಾಶ ನೀಡುತ್ತದೆ. ಅಸ್ತಿತ್ವದಲ್ಲಿರುವ ವೀಡಿಯೊಗಳು ನಿಮ್ಮ ಸದಸ್ಯರಿಗೆ ಮಾತ್ರ ಮೀಸಲಾಗಿರುವ ಹಾಗೆ ಸಹ ಆ ವೀಡಿಯೊಗಳ ಗೋಚರತೆ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಬಹುದು. ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ಯಾರಾದರೂ ಕಂಡುಕೊಳ್ಳಬಹುದು, ಆದರೆ ಸೂಕ್ತ ಹಂತಗಳಲ್ಲಿರುವ ಸದಸ್ಯರು ಮಾತ್ರ ಅದನ್ನು ವೀಕ್ಷಿಸಬಹುದು.
ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊಗಳು ಸಂಪೂರ್ಣವಾಗಿ ಮೂಲ ಕಂಟೆಂಟ್ ಆಗಿರಬೇಕು. ಸಂಗೀತ ಪಾಲುದಾರರ ಕ್ಲೇಮ್‌ಗಳನ್ನು ಹೊಂದಿರುವ ವೀಡಿಯೊಗಳನ್ನು ಒಳಗೊಂಡಂತೆ, ಕೃತಿಸ್ವಾಮ್ಯ ಕ್ಲೇಮ್‌ಗಳನ್ನು ಹೊಂದಿರುವ ವೀಡಿಯೊಗಳನ್ನು ನೀಡಬೇಡಿ.

ಹೊಸ ಅಪ್‌ಲೋಡ್ ಅನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಿ

  1. ವೀಡಿಯೊ ಅಪ್‌ಲೋಡ್ ಮಾಡಿ.
  2. ಗೋಚರತೆಗಾಗಿ, ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದನ್ನು ಆಯ್ಕೆ ಮಾಡಿ.
  • ನೀವು ಒಂದಕ್ಕಿಂತ ಹೆಚ್ಚು ಹಂತಗಳನ್ನು ಹೊಂದಿದ್ದರೆ, ನಿಮ್ಮ ವೀಡಿಯೊವನ್ನು ಯಾವ ಹಂತಗಳು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಿ.
  1. ಅಪ್‌ಲೋಡ್ ಪ್ರಕ್ರಿಯೆಯ ಉಳಿದ ಹಂತಗಳನ್ನು ಪೂರ್ಣಗೊಳಿಸಿ.

ಅಸ್ತಿತ್ವದಲ್ಲಿರುವ ವೀಡಿಯೊವನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಿ

  1. YouTube Studio ಗೆ ಹೋಗಲು ಕಂಪ್ಯೂಟರ್ ಅನ್ನು ಬಳಸಿ ಅಥವಾ YouTube Studio ಮೊಬೈಲ್ ಆ್ಯಪ್  ಅನ್ನು ತೆರೆಯಿರಿ.
  2. ಕಂಟೆಂಟ್ ಆಯ್ಕೆ ಮಾಡಿ.
  3. ಸದಸ್ಯರಿಗೆ-ಮಾತ್ರ ಮೀಸಲಾಗಿದೆ ಎಂದು ನೀವು ಸೆಟ್ ಮಾಡಲು ಬಯಸುವ ವೀಡಿಯೊವನ್ನು ಹುಡುಕಿ.
  4. ಎಡಿಟ್ ಮಾಡಿ ನಂತರ ಗೋಚರತೆ ಎಂಬುದನ್ನು ಆಯ್ಕೆ ಮಾಡಿ ನಂತರಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ನಂತರ ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
  • ನೀವು ಒಂದಕ್ಕಿಂತ ಹೆಚ್ಚು ಹಂತಗಳನ್ನು ಹೊಂದಿದ್ದರೆ, ನಿಮ್ಮ ವೀಡಿಯೊವನ್ನು ಯಾವ ಹಂತಗಳು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಿ.

ಸದಸ್ಯರಿಗೆ-ಮಾತ್ರ ಮೀಸಲಾದ ನಿಮ್ಮ ವೀಡಿಯೊಗಳನ್ನು ಪ್ರೊಮೋಟ್ ಮಾಡಿ

ಸದಸ್ಯತ್ವಗಳು, ಕಂಟೆಂಟ್ ಮತ್ತು ಸಮುದಾಯ ಟ್ಯಾಬ್‌ಗಳಲ್ಲಿ ನಿಮ್ಮ ಸದಸ್ಯರು, ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊಗಳನ್ನು ಕಂಡುಕೊಳ್ಳಬಹುದು. ಈ ವೀಡಿಯೊಗಳು ಸದಸ್ಯರ ಹೋಮ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ಗಳಲ್ಲಿಯೂ ಕಾಣಿಸಿಕೊಳ್ಳಬಹುದು.

ನಿಮ್ಮ ಕಂಟೆಂಟ್ ಅನ್ನು ಶಿಫಾರಸು ಮಾಡಲಾಗುವ, ಆದರೆ ಸದಸ್ಯರಲ್ಲದ ವೀಕ್ಷಕರಿಗೂ, ಅವರ ಹೋಮ್ ಫೀಡ್‌ನಲ್ಲಿ ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊಗಳು ಕಾಣಿಸಿಕೊಳ್ಳಬಹುದು. ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊಗಳನ್ನು ಸದಸ್ಯರಲ್ಲದವರಿಗೆ ತೋರಿಸುವುದರಿಂದ ಅವರು ಸೈನ್ ಅಪ್ ಮಾಡಲು ಆಸಕ್ತಿ ಹೊಂದಿರುವ ಚಾನಲ್ ಸದಸ್ಯತ್ವದ ಪ್ರೋಗ್ರಾಂಗಳನ್ನು ಅನ್ವೇಷಿಸಲು ಅವರಿಗೆ ಸಹಾಯವಾಗಬಹುದು. ಸದಸ್ಯರಲ್ಲದವರು ವೀಡಿಯೊದ ಥಂಬ್‌ನೇಲ್ ಮತ್ತು ಶೀರ್ಷಿಕೆಯನ್ನು ವೀಕ್ಷಿಸಬಹುದು, ಆದರೆ ಅವರು ಸೈನ್ ಅಪ್ ಮಾಡದ ಹೊರತು ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊವನ್ನು ವೀಕ್ಷಿಸಲು ಸಾಧ್ಯವಿಲ್ಲ.

ಒಂದು ವೀಡಿಯೊ ಲಭ್ಯವಿದೆ ಎಂಬುದನ್ನು ನಿಮ್ಮ ವೀಕ್ಷಕರಿಗೆ ತಿಳಿಸಲು, ನೀವು URL ಅನ್ನು ಇಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು:

  • ಕಾರ್ಡ್‌ಗಳು
  • ಸಾರ್ವಜನಿಕ ಸಮುದಾಯ
  • ಪ್ಲೇಪಟ್ಟಿ‌ಗಳು

ಸರಿಯಾದ ಹಂತಗಳಲ್ಲಿರುವ ಚಾನಲ್ ಸದಸ್ಯರು ತಕ್ಷಣವೇ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ವೀಕ್ಷಿಸಬಹುದು. ವೀಡಿಯೊ, ಸದಸ್ಯರಿಗೆ-ಮಾತ್ರ ಲಭ್ಯವಿದೆ ಎಂದು ಹೇಳುವ ಟಿಪ್ಪಣಿಯನ್ನು ಸದಸ್ಯರಲ್ಲದವರು ಪಡೆಯುತ್ತಾರೆ ಮತ್ತು ಸದಸ್ಯರಾಗುವ ವಿಧಾನಗಳನ್ನು ಅವರಿಗೆ ತೋರಿಸಲಾಗುತ್ತದೆ.

ಸದಸ್ಯರಿಗೆ ಮಾತ್ರವಿರುವ ಕಂಟೆಂಟ್: ವೀಡಿಯೊಗಳು, Shorts, ಲೈವ್ ಸ್ಟ್ರೀಮ್‌ಗಳು ಮತ್ತು ಚಾನಲ್ ಸದಸ್ಯತ್ವಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1316612640137151448
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false