YouTube ಚಾನಲ್ ಸದಸ್ಯತ್ವ ಪರ್ಕ್‌ಗಳು

ಸದಸ್ಯತ್ವಗಳು ಆನ್ ಆಗಿರುವ ಚಾನಲ್‌ಗಳು ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಪರ್ಕ್‌ಗಳನ್ನು ರಚಿಸಬಹುದು. ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಪರ್ಕ್‌ಗಳು ನಿಮ್ಮ ಸಕ್ರಿಯ ಪಾವತಿಸಿದ ಸದಸ್ಯರಿಗೆ ಮಾತ್ರ ಲಭ್ಯವಿರುತ್ತವೆ. ಪರ್ಕ್‌ಗಳು ಕಸ್ಟಮ್ ಎಮೋಜಿಗಳು, ಬ್ಯಾಡ್ಜ್‌ಗಳು ಮತ್ತು ನೀವು ನೀಡುವ ಇತರ ಪರ್ಕ್‌ಗಳ ಆ್ಯಕ್ಸೆಸ್ ಅನ್ನು ಒಳಗೊಂಡಿರುತ್ತವೆ.

ಗಮನಿಸಿ: ನೀವು ನೀಡುವ ಎಲ್ಲಾ ಪರ್ಕ್‌ಗಳು ನಮ್ಮ ಚಾನಲ್ ಸದಸ್ಯತ್ವ ನೀತಿಗಳನ್ನು ಅನುಸರಿಸಬೇಕು.

ಚಾನಲ್ ಸದಸ್ಯತ್ವಗಳು

ಚಾನಲ್ ಸದಸ್ಯತ್ವದ ಹಂತಗಳು

ನೀವು ವಿಭಿನ್ನ ಬೆಲೆಗಳನ್ನು ಹೊಂದಿರುವ ಬಹು ಸದಸ್ಯತ್ವ ಹಂತಗಳನ್ನು ನೀಡಬಹುದು. ನೀವು ಬಹು ಹಂತಗಳನ್ನು ಹೊಂದಿದ್ದರೆ, ಅವುಗಳ ಪರ್ಕ್‌ಗಳು ಒಂದು ಹಂತದಿಂದ ಮುಂದಿನದಕ್ಕೆ ಸೇರಿಕೊಳ್ಳುತ್ತಾ ಹೋಗುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಇದರರ್ಥ ಅತಿ ಹೆಚ್ಚಿನ ಬೆಲೆಯ ಹಂತಗಳು ಕಡಿಮೆ ಬೆಲೆಯ ಹಂತಗಳಲ್ಲಿ ನೀಡಲಾಗುವ ಪರ್ಕ್‌ಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿರುತ್ತವೆ.

ಲಭ್ಯವಿರುವ ದೇಶಗಳಲ್ಲಿನ ಹಂತಗಳಿಗಾಗಿ ಸಂಪೂರ್ಣ ಬೆಲೆ ವಿವರಗಳನ್ನು ನೋಡಿ.

ಹಂತವನ್ನು ಸೇರಿಸಿ

ನೀವು ವಿವಿಧ ಬೆಲೆಗಳಲ್ಲಿ ಗರಿಷ್ಠ 6 ಹಂತಗಳವರೆಗೆ ಸೇರಿಸಬಹುದು. ಪ್ರತಿ ಹಂತದಲ್ಲಿ ಕನಿಷ್ಠ 1 ಮತ್ತು ಗರಿಷ್ಠ 5 ಪರ್ಕ್‌ಗಳಿರಬೇಕು.

ಸದಸ್ಯತ್ವದ ಹಂತಗಳನ್ನು ಸೇರಿಸಿ

  1. ಸದಸ್ಯತ್ವಗಳಿರುವ ನಿಮ್ಮ ಚಾನಲ್ ಅನ್ನು ಬಳಸಿಕೊಂಡು studio.youtube.com ಗೆ ಹೋಗಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಆಯ್ಕೆಮಾಡಿ.
  3. ಮುಖ್ಯ ಡ್ಯಾಶ್‌ಬೋರ್ಡ್‌ನಲ್ಲಿ, ಸದಸ್ಯತ್ವಗಳು ಎಂಬುದನ್ನು ಕ್ಲಿಕ್ ಮಾಡಿ.
  4. “ಹಂತ 1: ಹಂತಗಳು ಮತ್ತು ಪರ್ಕ್‌ಗಳನ್ನು ಸೇರಿಸಿ” ಎಂದು ಹೇಳುವ ಬಾಕ್ಸ್‌ನಲ್ಲಿನ ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ. ಪೂರ್ಣಗೊಂಡ ನಂತರ, ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ಲೈವ್ ಹೋಗುವ ಮೊದಲು ನಿಮ್ಮ ಹಂತಗಳು ಮತ್ತು ಪರ್ಕ್‌ಗಳನ್ನು ಪರಿಶೀಲಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ಸುಮಾರು ಒಂದು ದಿನ ತೆಗೆದುಕೊಳ್ಳುತ್ತದೆ.

ಬ್ಯಾಡ್ಜ್‌ಗಳು ಮತ್ತು ಎಮೋಜಿಗಳೊಂದಿಗೆ ಹಂತಗಳು ಹೇಗೆ ಕಾರ್ಯನಿರ್ವಹಿಸುತ್ತವೆ

ಲಾಯಲ್ಟಿ ಬ್ಯಾಡ್ಜ್‌ಗಳು ಮತ್ತು ಕಸ್ಟಮ್ ಎಮೋಜಿ ಹಂತಗಳಿಂದ ಪ್ರಭಾವಿತವಾಗಿರುವುದಿಲ್ಲ. ಎಲ್ಲಾ ಸದಸ್ಯರು ಲಾಯಲ್ಟಿ ಆಧಾರದ ಮೇಲೆ ಒಂದೇ ಬ್ಯಾಡ್ಜ್ ಅನ್ನು ಸ್ವೀಕರಿಸುತ್ತಾರೆ ಮತ್ತು ಎಲ್ಲಾ ಹಂತಗಳ ಸದಸ್ಯರು ಎಲ್ಲಾ ಎಮೋಜಿಗೆ ಒಂದೇ ಆ್ಯಕ್ಸೆಸ್ ಅನ್ನು ಹೊಂದಿರುತ್ತಾರೆ.

ಹಂತವೊಂದನ್ನು ತೆಗೆದುಹಾಕಿ

ನೀವು ಹಂತವೊಂದನ್ನು ತೆಗೆದುಹಾಕಿದರೆ, ನೀವು ಆ ಹಂತದಲ್ಲಿರುವ ಎಲ್ಲಾ ಸದಸ್ಯರನ್ನು ಅಳಿಸುತ್ತೀರಿ. ತೆಗೆದುಹಾಕಲಾದ ಹಂತದಲ್ಲಿರುವ ಎಲ್ಲಾ ಸದಸ್ಯರು ತಕ್ಷಣವೇ ಪರ್ಕ್‌ಗಳ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ಕಳೆದ ತಿಂಗಳ ಪಾವತಿಯನ್ನು ಮರುಪಾವತಿಸಲಾಗುತ್ತದೆ.

ಹಂತವೊಂದನ್ನು ತೆಗೆದುಹಾಕಿ

  1. ಸದಸ್ಯತ್ವಗಳಿರುವ ನಿಮ್ಮ ಚಾನಲ್ ಅನ್ನು ಬಳಸಿಕೊಂಡು studio.youtube.com ಗೆ ಹೋಗಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಆಯ್ಕೆಮಾಡಿ.
  3. ಮುಖ್ಯ ಡ್ಯಾಶ್‌ಬೋರ್ಡ್‌ನಲ್ಲಿ, ಸದಸ್ಯತ್ವಗಳು ಎಂಬುದನ್ನು ಕ್ಲಿಕ್ ಮಾಡಿ.
  4. “ಹಂತ 1: ಹಂತಗಳು ಮತ್ತು ಪರ್ಕ್‌ಗಳನ್ನು ಸೇರಿಸಿ” ಎಂದು ಹೇಳುವ ಬಾಕ್ಸ್‌ನಲ್ಲಿನ ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ನೀವು ತೆಗೆದುಹಾಕಲು ಬಯಸುವ ಹಂತದ ಮೇಲೆ ಕ್ಲಿಕ್ ಮಾಡಿ ನಂತರ ಅಳಿಸಿ ಐಕಾನ್  ಕ್ಲಿಕ್ ಮಾಡಿ.
  6. ಸ್ಕ್ರೀನ್ ಮೇಲಿನ ಉಳಿದ ಸೂಚನೆಗಳನ್ನು ಅನುಸರಿಸಿ. ಪೂರ್ಣಗೊಂಡ ನಂತರ, ಪ್ರಕಟಿಸಿ ಎಂಬುದನ್ನು ಕ್ಲಿಕ್ ಮಾಡಿ.

ಚಾನಲ್ ಸದಸ್ಯತ್ವದ ಪರ್ಕ್‌ಗಳು

ನಿಮ್ಮ ಸದಸ್ಯರಿಗೆ ನೀವು ನೀಡುವ ಕನಿಷ್ಠ ಒಂದು ಪರ್ಕ್ ಅನ್ನು (ಮತ್ತು ಗರಿಷ್ಠ ಐದು ಪರ್ಕ್‌ಗಳವರೆಗೆ) ನೀವು ರಚಿಸಬೇಕು ಮತ್ತು ಪ್ರಕಟಿಸಬೇಕು. ನಿಮ್ಮ ಪರ್ಕ್‌ಗಳು ನಮ್ಮ ನೀತಿಗಳು ಮತ್ತು ನಿಯಮಗಳನ್ನು ಅನುಸರಿಸಬೇಕು ಮತ್ತು ನೀವು ನೀಡುವ ಎಲ್ಲಾ ರಚನೆಕಾರರ ಪರ್ಕ್‌ಗಳನ್ನು ನೀವು ಡೆಲಿವರ್ ಮಾಡಬೇಕು. ನಿಮ್ಮ ರಚನೆಕಾರರ ಪರ್ಕ್‌ಗಳಿಗೆ YouTube ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ನಿಮ್ಮ ಸದಸ್ಯರ ತೃಪ್ತಿಗಾಗಿ ನೀವು ಆಫರ್ ಮಾಡುವುದನ್ನು ನೀವು ಡೆಲಿವರ್ ಮಾಡಬಹುದೇ ಎಂಬುದನ್ನು ನೀವು ಎಚ್ಚರಿಕೆಯಿಂದ ಪರಿಗಣಿಸಬೇಕು.

ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಸಮುದಾಯ ಪೋಸ್ಟ್‌ಗಳು
ನಿಮ್ಮ ಸದಸ್ಯರೊಂದಿಗೆ ಮಾತ್ರ ಕಂಟೆಂಟ್ ಅನ್ನು ಹಂಚಿಕೊಳ್ಳಲು ನೀವು ಸಮುದಾಯ ಟ್ಯಾಬ್ ಅನ್ನು ಬಳಸಬಹುದು. ನಿಮ್ಮ ಚಾನಲ್‌ನಲ್ಲಿ ನೀವು ಹಂತಗಳನ್ನು ಹೊಂದಿದ್ದರೆ, ನೀವು ನಿರ್ದಿಷ್ಟ ಹಂತಗಳಲ್ಲಿನ ಸದಸ್ಯರೊಂದಿಗೆ ಸಹ ಸಮುದಾಯ ಪೋಸ್ಟ್‌ಗಳನ್ನು ಹಂಚಿಕೊಳ್ಳಬಹುದು.
ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಸಮುದಾಯ ಪೋಸ್ಟ್‌ಗಳನ್ನು ಮಾಡಲು ಈ ಹಂತಗಳನ್ನು ಅನುಸರಿಸಿ:
  1. ನಿಮ್ಮ ಪ್ರೊಫೈಲ್ ಚಿತ್ರ  ಕ್ಲಿಕ್‌ ಮಾಡಿ ಹಾಗೂ ನಿಮ್ಮ ಚಾನಲ್ ಹೆಸರಿನ ಮೇಲೆ ಟ್ಯಾಪ್ ಮಾಡಿ.
  2. ಸಮುದಾಯ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  3. ಡ್ರಾಪ್‌ಡೌನ್ ಮೆನುವಿನಲ್ಲಿ, ಪೋಸ್ಟ್ ಅನ್ನು ಸಾರ್ವಜನಿಕಗೊಳಿಸಬೇಕೆ ಅಥವಾ ಸದಸ್ಯರಿಗೆ-ಮಾತ್ರ ಮೀಸಲಾಗಿಸಬೇಕೆ ಎಂಬುದನ್ನು ಆಯ್ಕೆಮಾಡಿ. ಸಾರ್ವಜನಿಕ ಎಂಬುದು ಡೀಫಾಲ್ಟ್ ಸೆಟ್ಟಿಂಗ್ ಆಗಿರುತ್ತದೆ.
  4. ಪಠ್ಯ ಫೀಲ್ಡ್‌ನಲ್ಲಿ ನಿಮ್ಮ ಪೋಸ್ಟ್ ಅನ್ನು ನಮೂದಿಸಿ.
  5. ಪೋಸ್ಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊ
ನಿಮ್ಮ ಸಕ್ರಿಯ ಸದಸ್ಯರು ಮಾತ್ರ ವೀಕ್ಷಿಸಬಹುದಾದ ವೀಡಿಯೊವನ್ನು ನೀವು ಸೆಟ್ ಮಾಡಬಹುದು. ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ಯಾರಾದರೂ ಕಂಡುಕೊಳ್ಳಬಹುದು, ಆದರೆ ಸರಿಯಾದ ಹಂತಗಳಲ್ಲಿರುವ ಸದಸ್ಯರು ಮಾತ್ರ ಅದನ್ನು ವೀಕ್ಷಿಸಬಹುದು. ನೀವು ಅಸ್ತಿತ್ವದಲ್ಲಿರುವ ವೀಡಿಯೊ ಅಥವಾ ಹೊಸ ಅಪ್‌ಲೋಡ್ ಅನ್ನು ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಬಹುದು.
ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊಗಳು ಸಂಪೂರ್ಣವಾಗಿ ಮೂಲ ಕಂಟೆಂಟ್ ಆಗಿರಬೇಕು. ಸಂಗೀತ ಪಾಲುದಾರರ ಕ್ಲೇಮ್‌ಗಳನ್ನು ಹೊಂದಿರುವ ವೀಡಿಯೊಗಳನ್ನು ಒಳಗೊಂಡಂತೆ, ಕೃತಿಸ್ವಾಮ್ಯ ಕ್ಲೇಮ್‌ಗಳನ್ನು ಹೊಂದಿರುವ ವೀಡಿಯೊಗಳನ್ನು ನೀಡಬೇಡಿ.

ಹೊಸ ಅಪ್‌ಲೋಡ್ ಅನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಿ

  1. ವೀಡಿಯೊ ಅಪ್‌ಲೋಡ್ ಮಾಡಿ.
  2. ಗೋಚರತೆಗಾಗಿ, ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದನ್ನು ಆಯ್ಕೆಮಾಡಿ.
    • ನೀವು ಒಂದಕ್ಕಿಂತ ಹೆಚ್ಚು ಹಂತಗಳನ್ನು ಹೊಂದಿದ್ದರೆ, ನಿಮ್ಮ ವೀಡಿಯೊವನ್ನು ವೀಕ್ಷಿಸಬಹುದಾದ ಹಂತಗಳನ್ನು ಆಯ್ಕೆಮಾಡಿ.
  3. ಅಪ್‌ಲೋಡ್ ಪ್ರಕ್ರಿಯೆಯ ಉಳಿದ ಹಂತಗಳನ್ನು ಪೂರ್ಣಗೊಳಿಸಿ.

ಅಸ್ತಿತ್ವದಲ್ಲಿರುವ ವೀಡಿಯೊವನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಿ

  1. YouTube Studio ಗೆ ಹೋಗಲು ಕಂಪ್ಯೂಟರ್ ಅನ್ನು ಬಳಸಿ ಅಥವಾ ನಿಮ್ಮ ಮೊಬೈಲ್ ಸಾಧನದಲ್ಲಿ YouTube Studio ಆ್ಯಪ್ ತೆರೆಯಿರಿ.
  2. ಕಂಟೆಂಟ್ ಆಯ್ಕೆಮಾಡಿ.
  3. ನಿಮ್ಮ ಸದಸ್ಯರೊಂದಿಗೆ ಮಾತ್ರ ನೀವು ಹಂಚಿಕೊಳ್ಳಲು ಬಯಸುವ ವೀಡಿಯೊವನ್ನು ಹುಡುಕಿ.
  4. ಎಡಿಟ್ ಮಾಡಿ ನಂತರ ಗೋಚರತೆ ಎಂಬುದನ್ನು ಆಯ್ಕೆಮಾಡಿ ನಂತರ ಸದಸ್ಯರಿಗೆ ಮಾತ್ರ ಮೀಸಲಾಗಿರುವುದು ಎಂಬುದನ್ನು ಆಯ್ಕೆಮಾಡಿನಂತರ ಸೇವ್ ಎಂಬುದನ್ನು ಆಯ್ಕೆಮಾಡಿ.
    • ನೀವು ಒಂದಕ್ಕಿಂತ ಹೆಚ್ಚು ಹಂತಗಳನ್ನು ಹೊಂದಿದ್ದರೆ, ನಿಮ್ಮ ವೀಡಿಯೊವನ್ನು ವೀಕ್ಷಿಸಬಹುದಾದ ಹಂತಗಳನ್ನು ಆಯ್ಕೆಮಾಡಿ.

ನಿಮ್ಮ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ಪ್ರಚಾರ ಮಾಡಿ

ನಿಮ್ಮ ಸದಸ್ಯರು ಸದಸ್ಯತ್ವಗಳು, ಕಂಟೆಂಟ್ ಮತ್ತು ಸಮುದಾಯ ಟ್ಯಾಬ್‌ಗಳಲ್ಲಿ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊಗಳನ್ನು ಕಂಡುಕೊಳ್ಳಬಹುದು. ಈ ವೀಡಿಯೊಗಳು ಸದಸ್ಯರ ಹೋಮ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ಗಳಲ್ಲಿಯೂ ಕಾಣಿಸಿಕೊಳ್ಳಬಹುದು.

ನಿಮ್ಮ ಕಂಟೆಂಟ್ ಅನ್ನು ಶಿಫಾರಸು ಮಾಡಲಾಗುವ, ಆದರೆ ಸದಸ್ಯರಲ್ಲದ ವೀಕ್ಷಕರಿಗೂ, ಅವರ ಹೋಮ್ ಫೀಡ್‌ನಲ್ಲಿ ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊಗಳು ಕಾಣಿಸಿಕೊಳ್ಳಬಹುದು. ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊಗಳನ್ನು ಸದಸ್ಯರಲ್ಲದವರಿಗೆ ತೋರಿಸುವುದರಿಂದ ಅವರು ಸೈನ್ ಅಪ್ ಮಾಡಲು ಆಸಕ್ತಿ ಹೊಂದಿರುವ ಚಾನಲ್ ಸದಸ್ಯತ್ವದ ಪ್ರೋಗ್ರಾಂಗಳನ್ನು ಅನ್ವೇಷಿಸಲು ಅವರಿಗೆ ಸಹಾಯವಾಗಬಹುದು. ಸದಸ್ಯರಲ್ಲದವರು ವೀಡಿಯೊದ ಥಂಬ್‌ನೇಲ್ ಮತ್ತು ಶೀರ್ಷಿಕೆಯನ್ನು ವೀಕ್ಷಿಸಬಹುದು, ಆದರೆ ಅವರು ಸೈನ್ ಅಪ್ ಮಾಡದ ಹೊರತು ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊವನ್ನು ವೀಕ್ಷಿಸಲು ಸಾಧ್ಯವಿಲ್ಲ.

ವೀಡಿಯೊ ಲಭ್ಯವಿದೆ ಎಂದು ನಿಮ್ಮ ಎಲ್ಲಾ ವೀಕ್ಷಕರಿಗೆ ತಿಳಿಸಲು, ನೀವು ಇವುಗಳಲ್ಲಿ URL ಅನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು:

  • ಕಾರ್ಡ್‌ಗಳು
  • ಸಾರ್ವಜನಿಕ ಸಮುದಾಯ
  • ಪ್ಲೇಪಟ್ಟಿಗಳು

ಸರಿಯಾದ ಹಂತಗಳಲ್ಲಿರುವ ಸದಸ್ಯರು ತಕ್ಷಣವೇ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ವೀಕ್ಷಿಸಬಹುದು. ಸದಸ್ಯರಲ್ಲದವರಿಗೆ ಸೂಚನೆ ಕಾಣಿಸಿಕೊಂಡು, ಆ ವೀಡಿಯೊ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಮತ್ತು ಅವರು ಸದಸ್ಯರಾಗಬಹುದಾದ ವಿಧಾನಗಳನ್ನು ಅವರಿಗೆ ತಿಳಿಸುತ್ತದೆ

ಸದಸ್ಯರಿಗೆ-ಮಾತ್ರ ಮುಂಚಿತ ಆ್ಯಕ್ಸೆಸ್

ನೀವು ಅಪ್‌ಲೋಡ್ ಮಾಡುವ ಕಂಟೆಂಟ್ ಅನ್ನು ಮೊದಲು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಬಹುದು, ಇದು ನಿಮ್ಮ ಕಂಟೆಂಟ್ ಸಾರ್ವಜನಿಕವಾಗುವ ಮೊದಲು ಅದನ್ನು ವೀಕ್ಷಿಸಲು ಮತ್ತು ಅದರೊಂದಿಗೆ ತೊಡಗಿಸಿಕೊಳ್ಳಲು ಸದಸ್ಯರಿಗೆ ಅವಕಾಶ ನೀಡುತ್ತದೆ. "ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದರಿಂದ ಸಾರ್ವಜನಿಕ" ಎಂಬುದಾಗಿ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿದಾಗ ನಿಮ್ಮ ಸದಸ್ಯರಿಗೆ ಸೂಚಿಸಲಾಗುತ್ತದೆ. ವೀಡಿಯೊ ಸಾರ್ವಜನಿಕವಾಗಿ ಬದಲಾದಾಗ, ನಿಮ್ಮ ಎಲ್ಲಾ ಸಬ್‌ಸ್ಕ್ರೈಬರ್‌ಗಳಿಗೆ ಸೂಚಿಸಲಾಗುತ್ತದೆ. ಸರಾಸರಿಯಾಗಿ, ರಚನೆಕಾರರು ಮೊದಲು ಸದಸ್ಯರಿಗೆ ವೀಡಿಯೊಗಳಿಗೆ ಆ್ಯಕ್ಸೆಸ್ ಅನ್ನು ನೀಡಿದಾಗ, ಆ ವೀಡಿಯೊಗಳು ಒಂದೇ ರೀತಿ ಕಾರ್ಯನಿರ್ವಹಿಸಿರುವುದನ್ನು ಮತ್ತು ಅವುಗಳು ಸಾರ್ವಜನಿಕವಾದಾಗ ಅವುಗಳ ಮೇಲೆ ಋಣಾತ್ಮಕ ಪರಿಣಾಮ ಆಗದಿರುವುದನ್ನು ನಾವು ಗಮನಿಸಿದ್ದೇವೆ. (ಜನವರಿ ಮತ್ತು ಫೆಬ್ರವರಿ 2023 ರ ನಡುವೆ ಕನಿಷ್ಠ ಒಂದು ಮುಂಚಿತ ಆ್ಯಕ್ಸೆಸ್ ವೀಡಿಯೊ ಮತ್ತು ಒಂದು ಸಾರ್ವಜನಿಕ-ಮಾತ್ರ ವೀಡಿಯೊವನ್ನು ಪ್ರಕಟಿಸಿದ ಚಾನಲ್‌ಗಳಲ್ಲಿ.)

ಹೊಸ ಅಪ್‌ಲೋಡ್ ಅನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂದು ಸೆಟ್ ಮಾಡಿ

  1. ವೀಡಿಯೊ ಅಪ್‌ಲೋಡ್ ಮಾಡಿ.
  2. ಗೋಚರತೆಗಾಗಿ, ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದರಿಂದ ಸಾರ್ವಜನಿಕ ಎಂಬುದನ್ನು ಆಯ್ಕೆಮಾಡಿ.
    • ನೀವು ಒಂದಕ್ಕಿಂತ ಹೆಚ್ಚು ಹಂತಗಳನ್ನು ಹೊಂದಿದ್ದರೆ, ನಿಮ್ಮ ವೀಡಿಯೊ ಗೋಚರಿಸಬೇಕೆಂದು ನೀವು ಬಯಸುವ ಹಂತಗಳನ್ನು ಆಯ್ಕೆಮಾಡಿ.

ವೀಡಿಯೊ ಸಾರ್ವಜನಿಕ ಎಂಬುದಕ್ಕೆ ಬದಲಾಗಬೇಕಾದ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.

ನಿಮ್ಮ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ಪ್ರಚಾರ ಮಾಡಿ

ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊಗಳು ಸದಸ್ಯರ ಹೋಮ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ಗಳಲ್ಲಿ ಕಾಣಿಸಿಕೊಳ್ಳಬಹುದು. ಸದಸ್ಯರು ನಿಮ್ಮ ಚಾನಲ್ ಪುಟದ ಕಂಟೆಂಟ್ ಮತ್ತು ಸಮುದಾಯ ಟ್ಯಾಬ್‌ಗಳಲ್ಲಿ ಸಹ ವೀಡಿಯೊಗಳನ್ನು ಕಂಡುಕೊಳ್ಳಬಹುದು. ವೀಡಿಯೊ ಲಭ್ಯವಿದೆ ಎಂದು ನಿಮ್ಮ ಎಲ್ಲಾ ವೀಕ್ಷಕರಿಗೆ ತಿಳಿಸಲು, ನೀವು ಇವುಗಳಲ್ಲಿ URL ಅನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು:

  • ಕಾರ್ಡ್‌ಗಳು
  • ಸಾರ್ವಜನಿಕ ಸಮುದಾಯ
  • ಪ್ಲೇಪಟ್ಟಿಗಳು

ನಿಮ್ಮ ಸದಸ್ಯರು ತಮ್ಮ ಸರಿಯಾದ ಹಂತದಲ್ಲಿ(ಗಳಲ್ಲಿ) ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ತಕ್ಷಣವೇ ವೀಕ್ಷಿಸಬಹುದು. ಸದಸ್ಯರಲ್ಲದವರು, ಇದು ಸದಸ್ಯರಿಗೆ-ಮಾತ್ರ ಲಭ್ಯವಿದೆ ಎಂದು ಹೇಳುವ ಸೂಚನೆಯನ್ನು ನೋಡುತ್ತಾರೆ ಮತ್ತು ಸದಸ್ಯರಾಗಲು ಮಾರ್ಗಗಳನ್ನು ಅದರಲ್ಲಿ ತೋರಿಸಲಾಗುತ್ತದೆ.

ಸದಸ್ಯರಿಗೆ ಮಾತ್ರ ಮೀಸಲಾದ Shorts

ತೆರೆಮರೆಯ ದೃಶ್ಯಗಳು, ಮುಂಬರುವ ವೀಡಿಯೊಗಳ ಕ್ಲಿಪ್‌ಗಳು, ಕಿರು ಪ್ರಶ್ನೋತ್ತರಗಳು ಇತ್ಯಾದಿಗಳಂತಹ ನಿಯಮಿತ, ಲೈಟ್‌ವೆಯ್ಟ್ ಕಂಟೆಂಟ್ ಅನ್ನು ನಿಮ್ಮ ಸದಸ್ಯರಿಗೆ ಒದಗಿಸಲು ಸದಸ್ಯರಿಗೆ-ಮಾತ್ರ ಮೀಸಲಾದ Shorts, ಉತ್ತಮ ಮಾರ್ಗೋಪಾಯವಾಗಿದೆ. ಸದಸ್ಯರಿಗೆ-ಮಾತ್ರ ಮೀಸಲಾದ Shorts ಅನ್ನು ಸದಸ್ಯರು ಮಾತ್ರ ಅನ್ವೇಷಿಸಬಹುದು, ಆದ್ದರಿಂದ ನಿಮ್ಮ ಸಾರ್ವಜನಿಕ ಕಂಟೆಂಟ್‌ಗೆ ಹೋಲಿಸಿದಾಗ ಹೆಚ್ಚು ಅನೌಪಚಾರಿಕ, ಅಥವಾ ಸಹಜ/ಆರ್ಗ್ಯಾನಿಕ್ ಆಗಿರುವ ಕಂಟೆಂಟ್ ಅನ್ನು ನೀವು ಪ್ರಯೋಗಿಸಿ ನೋಡಬಹುದು.

ಸದಸ್ಯರಿಗೆ-ಮಾತ್ರ ಮೀಸಲಾದ Short ಅನ್ನು ರಚಿಸಲು: 

  1. ಕಿರು ವೀಡಿಯೊ ಫೈಲ್ ಅನ್ನು ಆಯ್ಕೆ ಮಾಡಿ:
  2. ಗೋಚರತೆಯ ಸೆಟ್ಟಿಂಗ್‌ಗಳಲ್ಲಿ ಸದಸ್ಯರಿಗೆ-ಮಾತ್ರ ಎಂಬುದನ್ನು ಆಯ್ಕೆ ಮಾಡಿ. 

ಅಥವಾ: 

  1. ಪಟ್ಟಿ ಮಾಡದಿರುವುದು, ಖಾಸಗಿ ಅಥವಾ ಸಾರ್ವಜನಿಕ ಎಂಬುದಾಗಿ ಈಗಾಗಲೇ ಅಪ್‌ಲೋಡ್ ಮಾಡಿರುವ Short ನ ಗೋಚರತೆಯ ಸ್ಥಿತಿಯನ್ನು ಸದಸ್ಯರಿಗೆ-ಮಾತ್ರ ಎಂಬುದಾಗಿ ಎಡಿಟ್ ಮಾಡಿ

[ಗಮನಿಸಿ] ನೀವು ಒಂದೇ ಹರಿವಿನಲ್ಲಿ Short ಅನ್ನು ರೆಕಾರ್ಡ್ ಮಾಡಿದರೆ ಮತ್ತು ಅಪ್‌ಲೋಡ್ ಮಾಡಿದರೆ, ಅದನ್ನು ಸದಸ್ಯರಿಗೆ-ಮಾತ್ರ ಎಂದು ಸೆಟ್ ಮಾಡುವ ಆಯ್ಕೆಯು ನಿಮಗೆ ಕಾಣಿಸದಿರಬಹುದು. ನೀವು ಈಗಲೂ ಅದನ್ನು ಪಟ್ಟಿ ಮಾಡದಿರುವುದು ಎಂಬುದಾಗಿ ಅಪ್‌ಲೋಡ್ ಮಾಡಬಹುದು ಮತ್ತು ನಂತರ, ಗೋಚರತೆಯ ಸೆಟ್ಟಿಂಗ್ ಅನ್ನು ಸದಸ್ಯರಿಗೆ-ಮಾತ್ರ ಎಂಬುದಾಗಿ ಬದಲಾಯಿಸಬಹುದು.

ಎಲ್ಲಾ ಸದಸ್ಯರಿಗೆ-ಮಾತ್ರ ಮೀಸಲಾದ ವೀಡಿಯೊಗಳ ಹಾಗೆ, ಸದಸ್ಯರಿಗೆ-ಮಾತ್ರ ಮೀಸಲಾದ Shorts ಸಂಪೂರ್ಣ ಮೂಲ ಕಂಟೆಂಟ್ ಆಗಿರಬೇಕು ಮತ್ತು Shorts ಸಂಗೀತ ಲೈಬ್ರರಿಯಲ್ಲಿನ ಸಂಗೀತ ಸೇರಿದಂತೆ, ಥರ್ಡ್ ಪಾರ್ಟಿಗಳ ಮಾಲೀಕತ್ವದ ಸಂಗೀತವನ್ನು ಒಳಗೊಂಡಿರಬಾರದು.

ಸದಸ್ಯರಿಗೆ-ಮಾತ್ರ ಮೀಸಲಾದ Shorts, ಯಾವುದೇ ನೋಟಿಫಿಕೇಶನ್ ಅನ್ನು ಟ್ರಿಗರ್ ಮಾಡುವುದಿಲ್ಲ. ಸದಸ್ಯರ Shorts ಫೀಡ್, ಹೋಮ್ ಮತ್ತು ಮುಂದಿನದನ್ನು ನೋಡಿ ಎಂಬಲ್ಲಿ ಅವುಗಳನ್ನು ಅನ್ವೇಷಿಸಬಹುದು.

ಸದಸ್ಯರಿಗೆ-ಮಾತ್ರ ಮೀಸಲಾದ ಲೈವ್ ಸ್ಟ್ರೀಮ್‌ಗಳು

ನೀವು ಲೈವ್ ಸ್ಟ್ರೀಮ್‌ಗಳನ್ನು ನಿಮ್ಮ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಹಂಚಿಕೊಳ್ಳಬಹುದು.

ಕಂಪ್ಯೂಟರ್‌ನಿಂದ:

  1. ಕಂಪ್ಯೂಟರ್‌ನಲ್ಲಿ, YouTube Studio ಗೆ ಸೈನ್ ಇನ್ ಮಾಡಿ.
  2. ರಚಿಸಿ ಅನ್ನು ಕ್ಲಿಕ್‌ ಮಾಡಿ.
  3. ಲೈವ್‌ಗೆ ಹೋಗಿ  ಕ್ಲಿಕ್‌ ಮಾಡಿ.
  4. ಲೈವ್ ಸ್ಟ್ರೀಮ್ ಅನ್ನು ರಚಿಸುವುದಕ್ಕೆ ಸಂಬಂಧಿಸಿದ ಹಂತಗಳನ್ನು ಅನುಸರಿಸಿ.
  5. ಗೋಚರತೆಯ ಸೆಟ್ಟಿಂಗ್‌ಗಳಲ್ಲಿ, ಪಾವತಿಸಿದ ಯಾವ ಸದಸ್ಯರು ನಿಮ್ಮ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಿ:
    1. ಎಲ್ಲಾ ಪಾವತಿಸಿದ ಸದಸ್ಯರು ಎಂಬ ಸೆಟ್ಟಿಂಗ್, ಪಾವತಿಸಿದ ಯಾವುದೇ ಸದಸ್ಯರು ಲೈವ್ ಸ್ಟ್ರೀಮ್ ವೀಕ್ಷಿಸಲು ಅವಕಾಶ ನೀಡುತ್ತದೆ
    2. ನಿರ್ದಿಷ್ಟ ಸದಸ್ಯತ್ವದ ಹಂತವನ್ನು ಆಯ್ಕೆಮಾಡುವುದರಿಂದ, ಆಯ್ಕೆಮಾಡಿದ (ಮತ್ತು ಅದಕ್ಕಿಂತ ಹೆಚ್ಚಿನ) ಹಂತದಲ್ಲಿರುವ ಪಾವತಿಸಿದ ಸದಸ್ಯರಿಗೆ ಲೈವ್ ಸ್ಟ್ರೀಮ್ ವೀಕ್ಷಿಸಲು ಸಾಧ್ಯವಾಗುತ್ತದೆ.
  6. ಲೈವ್ ಸ್ಟ್ರೀಮ್‌ಗೆ ಲಿಂಕ್ ಮಾಡುವ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಸಮುದಾಯ ಪೋಸ್ಟ್ ಅನ್ನು ರಚಿಸಲು, ಪ್ರಾಂಪ್ಟ್‌ಗಳನ್ನು ಅನುಸರಿಸಿ. ನಿಮ್ಮ ಸದಸ್ಯರು ತಮ್ಮ ನೋಟಿಫಿಕೇಶನ್‌ಗಳನ್ನು ಆನ್ ಮಾಡಿದ್ದರೆ, ನೀವು ಹೊಸ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಲೈವ್ ಸ್ಟ್ರೀಮ್ ಅನ್ನು ರಚಿಸಿದಾಗ ಅವರಿಗೆ ತಿಳಿಸಲಾಗುತ್ತದೆ.

ಮೊಬೈಲ್ ಸಾಧನದಿಂದ:

  1. ನಿಮ್ಮ ಮೊಬೈಲ್ ಸಾಧನದಲ್ಲಿ, YouTube ಆ್ಯಪ್ ತೆರೆಯಿರಿ.
  2. ಕೆಳಭಾಗದಲ್ಲಿ, ರಚಿಸಿ ನಂತರ ಲೈವ್‌ಗೆ ಹೋಗಿ ಟ್ಯಾಪ್ ಮಾಡಿ.
  3. ಇನ್ನಷ್ಟು ಆಯ್ಕೆಗಳು ನಂತರ ಇನ್ನಷ್ಟು ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.
  4. ಗೋಚರತೆಯ ಸೆಟ್ಟಿಂಗ್‌ಗಳಲ್ಲಿ, ಸದಸ್ಯರಿಗೆ-ಮಾತ್ರ ಮೀಸಲಾಗಿರುವುದು ಎಂಬುದನ್ನು ಆಯ್ಕೆ ಮಾಡಿ ಹಾಗೂ ಪಾವತಿಸಿದ ಯಾವ ಸದಸ್ಯರು ನಿಮ್ಮ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಿ:
    • ಎಲ್ಲಾ ಪಾವತಿಸಿದ ಸದಸ್ಯರು ಎಂಬ ಸೆಟ್ಟಿಂಗ್, ಪಾವತಿಸಿದ ಯಾವುದೇ ಸದಸ್ಯರು ಲೈವ್ ಸ್ಟ್ರೀಮ್ ವೀಕ್ಷಿಸಲು ಅವಕಾಶ ನೀಡುತ್ತದೆ
    • ನಿರ್ದಿಷ್ಟ ಸದಸ್ಯತ್ವದ ಹಂತವನ್ನು ಆಯ್ಕೆಮಾಡುವುದರಿಂದ, ಆಯ್ಕೆಮಾಡಿದ (ಮತ್ತು ಅದಕ್ಕಿಂತ ಹೆಚ್ಚಿನ) ಹಂತದಲ್ಲಿರುವ ಪಾವತಿಸಿದ ಸದಸ್ಯರಿಗೆ ಲೈವ್ ಸ್ಟ್ರೀಮ್ ವೀಕ್ಷಿಸಲು ಸಾಧ್ಯವಾಗುತ್ತದೆ.
  5. ಮುಂದೆ ನಂತರ ಲೈವ್‌ಗೆ ಹೋಗಿ ಅನ್ನು ಟ್ಯಾಪ್ ಮಾಡಿ.
ಸದಸ್ಯರಿಗೆ ಮಾತ್ರ ಮೀಸಲಾದ ಲೈವ್ ಚಾಟ್
ಸಾರ್ವಜನಿಕ ಲೈವ್ ಸ್ಟ್ರೀಮ್‌ಗಳ ಸಮಯದಲ್ಲಿ ನೀವು ಚಾಟ್ ಅನ್ನು ಸದಸ್ಯರಿಗೆ-ಮಾತ್ರ ಮೀಸಲಾಗಿಸಬಹುದು. ಪ್ರತಿಯೊಬ್ಬರೂ ಈಗಲೂ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದು, ಆದರೆ ಸದಸ್ಯರಿಗೆ ಮಾತ್ರ ಚಾಟ್‌ಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ. ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಲೈವ್ ಚಾಟ್ ಅನ್ನು ಆನ್ ಮಾಡಲು ಡೆಸ್ಕ್‌ಟಾಪ್‌ನಲ್ಲಿ ಈ ಹಂತಗಳನ್ನು ಅನುಸರಿಸಿ:
  1. YouTube Studio ಗೆ ಸೈನ್ ಇನ್ ಮಾಡಿ.
  2. ಮೇಲಿನ ಬಲಭಾಗದಲ್ಲಿ, ರಚಿಸಿ ನಂತರ ಲೈವ್‌ಗೆ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.
  3. ಎಡಭಾಗದಲ್ಲಿ, ಸ್ಟ್ರೀಮ್ ಎಂಬುದನ್ನು ಕ್ಲಿಕ್ ಮಾಡಿ.
  4. ಸ್ಟ್ರೀಮ್ ಅನ್ನು ರಚಿಸಿ:
    1. ಹಿಂದಿನ ಒಂದು ಸ್ಟ್ರೀಮ್ ಅನ್ನು ಕಾಪಿ ಮಾಡಲು: ಹಿಂದಿನ ಒಂದು ಸ್ಟ್ರೀಮ್ ಅನ್ನು ಆಯ್ಕೆಮಾಡಿ ಮತ್ತು ಸೆಟ್ಟಿಂಗ್‌ಗಳನ್ನು ಮರುಬಳಕೆ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
    2. ಹೊಸ ಸ್ಟ್ರೀಮ್ ಅನ್ನು ರಚಿಸಲು: ನಿಮ್ಮ ಸ್ಟ್ರೀಮ್‌ನ ಮಾಹಿತಿಯನ್ನು ನಮೂದಿಸಿ ಮತ್ತು ಸ್ಟ್ರೀಮ್ ಅನ್ನು ರಚಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ಮೇಲಿನ ಬಲಭಾಗದಲ್ಲಿ, ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  6. "ಲೈವ್ ಚಾಟ್" ಅಡಿಯಲ್ಲಿ, ಸದಸ್ಯರಿಗೆ ಮಾತ್ರ ಮೀಸಲಾದ ಚಾಟ್ ಅನ್ನು ಸಕ್ರಿಯಗೊಳಿಸಿ ಎಂಬುದನ್ನು ಆಯ್ಕೆಮಾಡಿ.
  7. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಸದಸ್ಯರ ಮೈಲಿಗಲ್ಲು ಚಾಟ್‌ಗಳು

ಚಾನಲ್ ಸದಸ್ಯರು, ತಾವು ಎಷ್ಟು ಸಮಯದಿಂದ ಸದಸ್ಯರಾಗಿದ್ದೇವೆ ಎಂಬುದನ್ನು ಗುರುತಿಸಲು ಮತ್ತು ಸಂಭ್ರಮಿಸಲು ಲೈವ್ ಚಾಟ್‌ನಲ್ಲಿ ತಿಂಗಳಿಗೆ ಒಂದು ವಿಶೇಷ ಹೈಲೈಟ್ ಮಾಡಿದ ಸಂದೇಶವನ್ನು ಕಳುಹಿಸಬಹುದು. ಈ ಫೀಚರ್ ಕನಿಷ್ಠ 2ನೇ ಸತತ ತಿಂಗಳು ಸದಸ್ಯರಾಗಿರುವವರಿಗೆ ಲಭ್ಯವಿದೆ. ಲೈವ್ ಸ್ಟ್ರೀಮ್‌ಗಳು ಅಥವಾ ಪ್ರೀಮಿಯರ್‌ಗಳ ಸಮಯದಲ್ಲಿ ಮಾತ್ರ ಸಂದೇಶಗಳನ್ನು ಕಳುಹಿಸಬಹುದು ಮತ್ತು ಅವುಗಳು ಎಲ್ಲಾ ವೀಕ್ಷಕರಿಗೆ ಗೋಚರಿಸುತ್ತವೆ. 

(ಈ ಫೀಚರ್ ಆಫ್ ಮಾಡಲು, Studio ನಂತರ ಗಳಿಸಿ ನಂತರ ಸದಸ್ಯತ್ವಗಳು ಎಂಬಲ್ಲಿಗೆ ಹೋಗಿ ಮತ್ತು ‘ಸದಸ್ಯರ ಮೈಲಿಗಲ್ಲು ಚಾಟ್’ ಅನ್ನು ‘ಆಫ್’ ಎಂಬುದಕ್ಕೆ ಸೆಟ್ ಮಾಡಿ.)

ಗಮನಿಸಿ: ಎಲ್ಲಾ ಅರ್ಹ ಸದಸ್ಯರು ಸದಸ್ಯರ ಮೈಲಿಗಲ್ಲು ಚಾಟ್‌ಗಳನ್ನು ಬಳಸಬಹುದಾದ್ದರಿಂದ, ಈ ಫೀಚರ್ ಅನ್ನು ಸಕ್ರಿಯಗೊಳಿಸಿದ ನಂತರ ನೀವು ಲೈವ್ ಸ್ಟ್ರೀಮ್ ಮಾಡುವ ಮೊದಲ ಕೆಲವು ಬಾರಿ ಹೆಚ್ಚಿನ ಬಳಕೆಯನ್ನು ನೀವು ಗಮನಿಸಬಹುದು. ಪ್ರತಿ ಸದಸ್ಯರು ತಿಂಗಳಿಗೊಮ್ಮೆ ಸದಸ್ಯರ ಮೈಲಿಗಲ್ಲು ಚಾಟ್ ಅನ್ನು ರಿಡೀಮ್ ಮಾಡಿಕೊಳ್ಳಬಹುದಾದ್ದರಿಂದ ದರವು ಕಾಲಾನಂತರದಲ್ಲಿ ಸುಗಮವಾಗಬೇಕು.

ಸದಸ್ಯರ ಗುರುತಿಸುವಿಕೆ ಶೆಲ್ಫ್

ನಿಮ್ಮ ಚಾನಲ್ ಸದಸ್ಯರನ್ನು ಸಾರ್ವಜನಿಕವಾಗಿ ಗುರುತಿಸಲು, ನಿಮ್ಮ ಚಾನಲ್ ಪುಟದ ಮೇಲ್ಭಾಗದಲ್ಲಿರುವ ಶೆಲ್ಫ್‌ನಲ್ಲಿ ಅವರ ಅವತಾರ್‌ಗಳನ್ನು ನೀವು ಫೀಚರ್ ಮಾಡಬಹುದು. ಈ ಶೆಲ್ಫ್ ನಿಮ್ಮ ಚಾನಲ್ ಸದಸ್ಯರಿಗೆ ಧನ್ಯವಾದ ಸಲ್ಲಿಸಲು ಮತ್ತು ನಿಮ್ಮ ಸದಸ್ಯರನ್ನು ನೀವು ಎಷ್ಟು ಪ್ರಶಂಸಿಸುತ್ತೀರಿ ಎಂಬುದನ್ನು ಇತರರಿಗೆ ತೋರಿಸಲು ಒಂದು ಮಾರ್ಗವಾಗಿದೆ. ಫೀಚರ್ ಮಾಡಿದ ಸದಸ್ಯರನ್ನು ಯಾದೃಚ್ಛಿಕವಾಗಿ ಆಯ್ಕೆಮಾಡಲಾಗುತ್ತದೆ ಮತ್ತು ಹೆಚ್ಚಿನ ಸದಸ್ಯರಿಗೆ ಕಾಣಿಸಿಕೊಳ್ಳುವ ಅವಕಾಶವನ್ನು ನೀಡಲು ಆಯ್ಕೆಯನ್ನು ಆಗಾಗ್ಗೆ ಬದಲಾಯಿಸಲಾಗುತ್ತದೆ. ನಿಮ್ಮ ಚಾನಲ್ ಪುಟವನ್ನು ವೀಕ್ಷಿಸುವ ಸದಸ್ಯರು ಯಾವಾಗಲೂ ಶೆಲ್ಫ್‌ನಲ್ಲಿ ತಮ್ಮ ಅವತಾರ್ ಅನ್ನು ಕಂಡುಕೊಳ್ಳುತ್ತಾರೆ. ಸದಸ್ಯರು ತಮ್ಮ ಸದಸ್ಯತ್ವವನ್ನು ರದ್ದುಗೊಳಿಸಿದರೆ, ಅವರು ಇನ್ನು ಮುಂದೆ ಶೆಲ್ಫ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.  

ಗಮನಿಸಿ: ನಿಮ್ಮ ಚಾನಲ್ 8 ಅಥವಾ ಹೆಚ್ಚಿನ ಸದಸ್ಯರನ್ನು ಹೊಂದಿರುವಾಗ ಈ ಫೀಚರ್ ಸ್ವಯಂಚಾಲಿತವಾಗಿ ಆನ್ ಆಗುತ್ತದೆ. 
ಸದಸ್ಯರು ಶೆಲ್ಫ್‌ನಲ್ಲಿ ಕಾಣಿಸಿಕೊಳ್ಳಲು ಸಕ್ರಿಯರಾಗಿರಬೇಕು ಮತ್ತು ಪುನರಾವರ್ತಿತವಾಗಿರಬೇಕು.

ಸದಸ್ಯರ ಗುರುತಿಸುವಿಕೆ ಶೆಲ್ಫ್ ಅನ್ನು ಆಫ್ ಮಾಡಲು:

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಗಳಿಸಿ ನಂತರ ಸದಸ್ಯತ್ವಗಳು ಎಂಬಲ್ಲಿಗೆ ಹೋಗಿ.
  3. “ಸದಸ್ಯರ ಗುರುತಿಸುವಿಕೆ ಶೆಲ್ಫ್” ಅನ್ನು ಆಫ್‌ಗೆ ಬದಲಿಸಿ.

ಕಸ್ಟಮ್ ಚಾನಲ್ ಬ್ಯಾಡ್ಜ್‌ಗಳು

ಸದಸ್ಯರು ಲೈವ್ ಚಾಟ್, ಕಾಮೆಂಟ್‌ಗಳು ಮತ್ತು ಸಮುದಾಯ ಟ್ಯಾಬ್‌ನಲ್ಲಿ ವಿಶೇಷ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಬ್ಯಾಡ್ಜ್‌ಗಳ ಮೂಲಕ ಎದ್ದು ಕಾಣುತ್ತಾರೆ.

ಕಸ್ಟಮ್ ಚಾನಲ್ ಬ್ಯಾಡ್ಜ್‌ಗಳ ಅವಲೋಕನ
ಎಂಟು ವಿಭಿನ್ನ ಬ್ಯಾಡ್ಜ್‌ಗಳಿವೆ ಮತ್ತು ವೀಕ್ಷಕರೊಬ್ಬರು ಎಷ್ಟು ಸಮಯದಿಂದ ನಿಮ್ಮ ನಿರ್ದಿಷ್ಟ ಚಾನಲ್‌ನ ಸದಸ್ಯರಾಗಿದ್ದಾರೆ ಎಂಬುದನ್ನು ಪ್ರತಿಯೊಂದೂ ಹೈಲೈಟ್ ಮಾಡುತ್ತದೆ. ಬ್ಯಾಡ್ಜ್ ಸಮಯಗಳು ಪ್ರತಿ ಸದಸ್ಯರು ಸದಸ್ಯತ್ವಕ್ಕಾಗಿ ಸಂಚಿತವಾಗಿ ಎಷ್ಟು ಸಮಯದವರೆಗೆ ಪಾವತಿಸಿದ್ದಾರೆ ಎಂದು ಎಣಿಕೆ ಮಾಡುತ್ತವೆ. ಉದಾಹರಣೆಗೆ, ಸಕ್ರಿಯ ಸದಸ್ಯರು ಒಂದು ವರ್ಷದ ಹಿಂದೆ ನಿಮ್ಮ ಚಾನಲ್‌ಗೆ ಸೇರಿದ್ದರೆ, ಆದರೆ ಕಳೆದ 12 ತಿಂಗಳುಗಳಲ್ಲಿ ಒಟ್ಟು 9 ತಿಂಗಳಿಗೆ ಮಾತ್ರ ಪಾವತಿಸಿದ್ದರೆ, ಅವರ ಬ್ಯಾಡ್ಜ್ ಅವರು 9 ತಿಂಗಳುಗಳಿಂದ ಸದಸ್ಯರಾಗಿದ್ದಾರೆ ಎಂದು ತೋರಿಸುತ್ತದೆ.
8 ಬ್ಯಾಡ್ಜ್‌ಗಳಲ್ಲಿ ಪ್ರತಿಯೊಂದಕ್ಕೂ ಸಂಬಂಧಿಸಿದ ಅವಧಿಗಳು ಇಲ್ಲಿವೆ:
  • ಹೊಸತು
  • 1 ತಿಂಗಳು
  • 2 ತಿಂಗಳುಗಳು
  • 6 ತಿಂಗಳುಗಳು
  • 1 ವರ್ಷ
  • 2 ವರ್ಷಗಳು
  • 3 ವರ್ಷಗಳು
  • 4 ವರ್ಷಗಳು

ಕಸ್ಟಮ್ ಚಾನಲ್ ಬ್ಯಾಡ್ಜ್‌ಗಳನ್ನು ಅಪ್‌ಲೋಡ್ ಮಾಡಿ

ಡೀಫಾಲ್ಟ್ ಬ್ಯಾಡ್ಜ್‌ಗಳಿರುತ್ತವೆ, ಆದರೆ ನೀವು ಸದಸ್ಯತ್ವಗಳು ಪುಟದಲ್ಲಿ ನಂತರ ಲಾಯಲ್ಟಿ ಬ್ಯಾಡ್ಜ್‌ಗಳಲ್ಲಿ ನಿಮ್ಮ ಬ್ಯಾಡ್ಜ್‌ಗಳನ್ನು ಅಪ್‌ಲೋಡ್ ಮಾಡಬೇಕು ಮತ್ತು ಕಸ್ಟಮೈಸ್ ಮಾಡಬೇಕು.
ಲಭ್ಯವಿರುವ ಪ್ರತಿಯೊಂದು ಸ್ಲಾಟ್‌ಗೆ ನೀವು ವಿಭಿನ್ನ ಬ್ಯಾಡ್ಜ್ ಅನ್ನು ಅಪ್‌ಲೋಡ್ ಮಾಡದಿದ್ದರೆ, ಯಾವುದೇ ಖಾಲಿ ಸ್ಲಾಟ್‌ಗಳನ್ನು ನೀವು ಅಪ್‌ಲೋಡ್ ಮಾಡಿದ ಅತ್ಯುನ್ನತ ಕಸ್ಟಮ್ ಬ್ಯಾಡ್ಜ್‌ನಿಂದ ಅಥವಾ ಆ ಅವಧಿಯ ಡೀಫಾಲ್ಟ್ YouTube ಬ್ಯಾಡ್ಜ್‌ನಿಂದ (ನೀವು ಹೆಚ್ಚಿನ ಅವಧಿಗಳಲ್ಲಿ ಮಾತ್ರ ಕಸ್ಟಮ್ ಬ್ಯಾಡ್ಜ್‌ಗಳನ್ನು ಅಪ್‌ಲೋಡ್ ಮಾಡಿದ್ದರೆ) ತುಂಬಲಾಗುತ್ತದೆ.

ಕಸ್ಟಮ್ ಚಾನಲ್ ಬ್ಯಾಡ್ಜ್‌ಗಳ ಸ್ಪೆಸಿಫಿಕೇಶನ್‌ಗಳು

ಫೈಲ್ ಫಾರ್ಮ್ಯಾಟ್: JPEG, ಅಥವಾ PNG ಫೈಲ್‌ಗಳು.
ಫೈಲ್ ಗಾತ್ರ: 1MB ಗಿಂತ ಕಡಿಮೆ.
ಚಿತ್ರದ ಆಯಾಮಗಳು: ಕನಿಷ್ಠ 32px x 32px.
ಬ್ಯಾಡ್ಜ್‌ಗಳು ಕಾಮೆಂಟ್‌ಗಳಲ್ಲಿ ಮತ್ತು ಸಮುದಾಯ ಟ್ಯಾಬ್‌ನಲ್ಲಿ 14px x 14px ಮತ್ತು ಲೈವ್ ಚಾಟ್‌ನಲ್ಲಿ 16px x 16px ನಲ್ಲಿ ರೆಂಡರ್ ಆಗುತ್ತವೆ.

ಕಸ್ಟಮ್ ಎಮೋಜಿ

ಕಸ್ಟಮ್ ಎಮೋಜಿಯನ್ನು ಅಪ್‌ಲೋಡ್ ಮಾಡಿ
ವೀಡಿಯೊ ಕಾಮೆಂಟ್‌ಗಳಲ್ಲಿ YouTube ಮೂಲಕ ಕಳುಹಿಸಬಹುದಾದ ಒಂದು ಅಥವಾ ಹೆಚ್ಚಿನ ವಿಶೇಷ ಕಸ್ಟಮ್ ಎಮೋಜಿಗಳಿಗೆ ಸದಸ್ಯರು ಆ್ಯಕ್ಸೆಸ್ ಅನ್ನು ಪಡೆಯುತ್ತಾರೆ. ಇದನ್ನು ನಿಮ್ಮ ಯಾವುದೇ ಲೈವ್ ಚಾಟ್‌ನಲ್ಲಿಯೂ ಕಳುಹಿಸಬಹುದು. ಡೀಫಾಲ್ಟ್ ಆಗಿ, ಯಾವುದೇ ಕಸ್ಟಮ್ ಎಮೋಜಿಗಳಿರುವುದಿಲ್ಲ.
ಕಸ್ಟಮ್ ಎಮೋಜಿಯನ್ನು ಅಪ್‌ಲೋಡ್ ಮಾಡಲು, ಸದಸ್ಯತ್ವಗಳು ಪುಟಕ್ಕೆ ಹೋಗಿ ಮತ್ತು “ನಿಮ್ಮ ಬ್ಯಾಡ್ಜ್‌ಗಳು ಮತ್ತು ಎಮೋಜಿ” ಕಾರ್ಡ್‌ನಲ್ಲಿ ಎಡಿಟ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ಕುಟುಂಬದ ಹೆಸರು

Custom emoji can be sent in video comments or any live chats.

ನಿಮ್ಮ ಮೊದಲ ಎಮೋಜಿಯನ್ನು ನೀವು ಅಪ್‌ಲೋಡ್ ಮಾಡಿದಾಗ, ನಿಮ್ಮ ಎಲ್ಲಾ ಎಮೋಜಿಗಳಿಗೆ 'ಕುಟುಂಬದ ಹೆಸರು' ಎಂದು ಕರೆಯಲಾಗುವ ಪೂರ್ವಪ್ರತ್ಯಯ ಹೆಸರನ್ನು ನೀವು ರಚಿಸುತ್ತೀರಿ. ನಿಮ್ಮ ಎಮೋಜಿಯನ್ನು ಸ್ವಯಂ ಪೂರ್ಣಗೊಳಿಸಲು ಸದಸ್ಯರು ಈ ಹೆಸರನ್ನು ಬಳಸುತ್ತಾರೆ. ನೀವು :_ ಮೂಲಕ ಸಹ ನಿಮ್ಮ ಚಾನಲ್‌ನ ಎಮೋಜಿಗಳನ್ನು ಸ್ವಯಂ ಪೂರ್ಣಗೊಳಿಸಬಹುದು.

ಕುಟುಂಬದ ಹೆಸರುಗಳು YouTube ನಾದ್ಯಂತ ಅನನ್ಯವಾಗಿರುವುದಿಲ್ಲ ಮತ್ತು ಅವುಗಳು 3-10 ಅಕ್ಷರಗಳನ್ನು ಹೊಂದಿರಬೇಕು.

ಉತ್ತಮ ಅಭ್ಯಾಸವಾಗಿ, ನಿಮ್ಮ ಬ್ರ್ಯಾಂಡ್ ಎಂದು ಸುಲಭವಾಗಿ ಗುರುತಿಸಬಹುದಾದ ಕುಟುಂಬದ ಹೆಸರನ್ನು ಆಯ್ಕೆಮಾಡಲು ನಾವು ಶಿಫಾರಸು ಮಾಡುತ್ತೇವೆ.

ಎಮೋಜಿಯ ಹೆಸರು

ಪ್ರತಿ ಎಮೋಜಿಯು ಲೈವ್ ಚಾಟ್‌ನಲ್ಲಿ ಸ್ವಯಂ ಪೂರ್ಣಗೊಳಿಸಲು ಸದಸ್ಯರು ಬಳಸಬಹುದಾದ ಹೆಸರನ್ನು ಹೊಂದಿರುತ್ತದೆ. ಎಮೋಜಿ ಹೆಸರನ್ನು ಬದಲಾಯಿಸಲು, ನೀವು ಎಮೋಜಿಯನ್ನು ಅಳಿಸಬೇಕು ಮತ್ತು ಮರು-ಅಪ್‌ಲೋಡ್ ಮಾಡಬೇಕು. ಎಮೋಜಿ ಹೆಸರುಗಳು 3-10 ಆಲ್ಫಾ ನ್ಯೂಮೆರಿಕಲ್ ಕ್ಯಾರಕ್ಟರ್‌ಗಳಾಗಿರಬೇಕು ಮತ್ತು ಅವುಗಳ ಎಮೋಜಿ ಕುಟುಂಬದಲ್ಲಿ ಅನನ್ಯವಾಗಿರಬೇಕು (ಆದರೆ YouTube ನಾದ್ಯಂತ ಅಲ್ಲ).

ನೀವು ಅಪ್‌ಲೋಡ್ ಮಾಡಬಹುದಾದ ಕಸ್ಟಮ್ ಎಮೋಜಿಗಳ ಸಂಖ್ಯೆ

ನೀವು ಹೆಚ್ಚಿನ ಸದಸ್ಯರನ್ನು ಪಡೆದಂತೆಲ್ಲಾ, ಹೆಚ್ಚಿನ ಕಸ್ಟಮ್ ಎಮೋಜಿಗಾಗಿ ನೀವು ಹೆಚ್ಚುವರಿ ಸ್ಲಾಟ್‌ಗಳನ್ನು ಅನ್‌ಲಾಕ್ ಮಾಡುತ್ತೀರಿ. ಹೊಸ ಸ್ಲಾಟ್‌ಗಳನ್ನು ಅನ್‌ಲಾಕ್ ಮಾಡಿದಾಗ ನಿಮಗೆ ಸೂಚಿಸಲಾಗುವುದಿಲ್ಲ.

# ಸದಸ್ಯರು # ಎಮೋಜಿಗಳು
0 4
2 5
5 6
10 7
15 8
20 9
30 10
40 11
50 12
75 13
100 14
125 15
150 16
175 17
200 18
225 19
250 20
300 21
350 22
400 23
450 24
500 25
600 26
700 27
800 28
900 29
1000 30
1200 31
1400 32
1600 33
1800 34
2000 35
2200 36
2400 37
2600 38
2800 39
3000 40
3200 41
3400 42
3600 43
3800 44
4000 45
4200 46
4400 47
4600 48
4800 49
5000 54
ಕಸ್ಟಮ್ ಎಮೋಜಿ ಸ್ಪೆಸಿಫಿಕೇಶನ್‌ಗಳು
ಫೈಲ್ ಫಾರ್ಮ್ಯಾಟ್: GIF, JPEG, ಮತ್ತು PNG ಫೈಲ್‌ಗಳಿಗೆ ಆದ್ಯತೆ ನೀಡಲಾಗುತ್ತದೆ. ಗಮನಿಸಿ: GIF ಗಳನ್ನು ಸ್ಥಿರ ಚಿತ್ರವಾಗಿ ಪ್ರದರ್ಶಿಸಲಾಗುತ್ತದೆ, ಆ್ಯನಿಮೇಶನ್ ಆಗಿ ಅಲ್ಲ.
ಫೈಲ್ ಗಾತ್ರ: 1MB ಗಿಂತ ಕಡಿಮೆ.
ಚಿತ್ರದ ಆಯಾಮಗಳು: 48px x 48px (ಆದ್ಯತೆ ನೀಡಲಾಗಿದೆ) ರಿಂದ 480px x 480px.

ಸಾಧನ ವ್ಯತ್ಯಾಸಗಳು

ಮೊಬೈಲ್ ಸಾಧನಗಳಲ್ಲಿ ಮತ್ತು ಕಂಪ್ಯೂಟರ್ ಮಾನಿಟರ್‌ಗಳಲ್ಲಿ ಎಮೋಜಿ ವಿಭಿನ್ನ ಗಾತ್ರಗಳಲ್ಲಿ ಕಾಣಿಸುತ್ತದೆ. ಎರಡೂ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಎಮೋಜಿ ಉತ್ತಮವಾಗಿ ಕಾಣುವಂತೆ ಮಾಡುವುದು ಹೇಗೆ ಎಂಬುದು ಇಲ್ಲಿದೆ:
ಮೊಬೈಲ್ ಸಾಧನಗಳಲ್ಲಿ: ಎಮೋಜಿ 24x24 ಪಾಯಿಂಟ್‌ಗಳಲ್ಲಿ ಕಾಣಿಸುತ್ತದೆ. ಸಾಧನದ ಪಿಕ್ಸೆಲ್ ಸಾಂದ್ರತೆಗೆ ಹೊಂದಿಸಲು ಚಿತ್ರವನ್ನು ಸ್ಕೇಲ್ ಮಾಡಲಾಗುತ್ತದೆ.
ಬಹುತೇಕ ಮಾನಿಟರ್‌ಗಳಲ್ಲಿ: ಎಮೋಜಿ 24x24 ಪಾಯಿಂಟ್‌ಗಳಲ್ಲಿ ಕಾಣಿಸುತ್ತದೆ. Retina ಮತ್ತು HiDPI ಸಾಧನಗಳಲ್ಲಿ, ಚಿತ್ರಗಳು 48x48 ಪಾಯಿಂಟ್‌ಗಳು ಅಥವಾ ಹೆಚ್ಚಿನದರಲ್ಲಿ ಕಾಣಿಸುತ್ತವೆ.

ನಾನು ಏನನ್ನು ವಿನ್ಯಾಸಗೊಳಿಸಬಹುದು?

ಎಮೋಜಿಯು ನಿಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಲು ನಿಮಗೆ ಒಂದು ಮಾರ್ಗವಾಗಿದೆ. ಎಮೋಜಿಯನ್ನು ವಿನ್ಯಾಸಗೊಳಿಸುವ ಕುರಿತು ಇನ್ನಷ್ಟು ತಿಳಿಯಿರಿ.
YouTube ಸದಸ್ಯತ್ವಗಳ ಮೂಲಕ ನೀಡಲಾಗುವ ಬ್ಯಾಡ್ಜ್‌ಗಳು, ಎಮೋಜಿ, ನೀವು ನೀಡುವ ಪರ್ಕ್‌ಗಳು, ವೀಡಿಯೊಗಳು, ಲೈವ್ ಚಾಟ್‌ಗಳು ಮತ್ತು ಇತರ ಕಂಟೆಂಟ್ ಸೇರಿದಂತೆ ಎಲ್ಲಾ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ಪರ್ಕ್‌ಗಳು ಸದಸ್ಯತ್ವ ನೀತಿಗಳಿಗೆ ಸಹ ಒಳಪಟ್ಟಿರುತ್ತವೆ ಎಂಬುದನ್ನು ನೆನಪಿನಲ್ಲಿಡಿ.
ನೀವು ಹೆಚ್ಚುವರಿ ಫೂಟೇಜ್ ಅನ್ನು ಹೊಂದಿದ್ದರೆ, ನೀವು ಅದನ್ನು ಸದಸ್ಯತ್ವಗಳ ಪರ್ಕ್ ಆಗಿ ನೀಡಬಹುದು. ನಿಮ್ಮ ಸದಸ್ಯರಿಗೆ ರಿವಾರ್ಡ್ ನೀಡಲು ಇದು ತ್ವರಿತ ಮಾರ್ಗವಾಗಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7531558878266358012
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false