YouTube ಕುಟುಂಬ ಪ್ಲಾನ್ ಅನ್ನು ಸೆಟಪ್ ಮಾಡಿ

ನಿಮ್ಮ ಮನೆಯಲ್ಲಿರುವ ಇತರ 5 ಸದಸ್ಯರ ಜೊತೆ YouTube ಪಾವತಿಸಿದ ಸದಸ್ಯತ್ವ ಅಥವಾ Primetime ಚಾನಲ್‌ಗಳನ್ನು (ಯುಎಸ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಯುಕೆ ಮಾತ್ರ) ಹಂಚಿಕೊಳ್ಳಲು YouTube ಕುಟುಂಬ ಪ್ಲಾನ್ ಅನ್ನು ಪಡೆಯಿರಿ.

YouTube ಮತ್ತು YouTube TV ಯಲ್ಲಿ ಕುಟುಂಬ ಗುಂಪುಗಳನ್ನು ಹೇಗೆ ರಚಿಸುವುದು

ಕುಟುಂಬ ಪ್ಲಾನ್ ಹೇಗೆ ಕೆಲಸ ಮಾಡುತ್ತದೆ

ಒಂದೇ ವಾಸದ ವಿಳಾಸದಲ್ಲಿ ವಾಸಿಸುವ 5 ಕುಟುಂಬದ ಸದಸ್ಯರ ಜೊತೆ ಸದಸ್ಯತ್ವದ ಪ್ರಯೋಜನಗಳನ್ನು ಹಂಚಿಕೊಳ್ಳಲು YouTube ಕುಟುಂಬ ಪ್ಲಾನ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ.

  • ಕುಟುಂಬ ನಿರ್ವಾಹಕರು:
    • ಪ್ರಾಥಮಿಕ ಖಾತೆಯ ಖಾತೆದಾರರಾಗಿರುತ್ತಾರೆ.
    • Google ಕುಟುಂಬ ಗುಂಪನ್ನು ರಚಿಸುತ್ತಾರೆ ಮತ್ತು ಕುಟುಂಬದ ಸದಸ್ಯರನ್ನು ಗುಂಪಿಗೆ ಆಹ್ವಾನಿಸಬಹುದು.
  • ಕುಟುಂಬದ ಸದಸ್ಯರು:
    • ಹಂಚಿಕೊಂಡ ಸದಸ್ಯತ್ವವನ್ನು ಆ್ಯಕ್ಸೆಸ್ ಮಾಡಲು ತಮ್ಮದೇ ಆದ Google ಖಾತೆಯನ್ನು ಬಳಸುತ್ತಾರೆ.
    • ಕುಟುಂಬ ನಿರ್ವಾಹಕರು ಖರೀದಿಸುವ Primetime ಚಾನಲ್‌ಗಳ ಕಂಟೆಂಟ್ ಅನ್ನು ವೀಕ್ಷಿಸಬಹುದು. ಸದಸ್ಯರು ತಮ್ಮದೇ ಆದ ವೈಯಕ್ತಿಕ Primetime ಚಾನಲ್ ಅನ್ನು ಸಹ ಖರೀದಿಸಬಹುದು, ಅದನ್ನು ಕುಟುಂಬ ನಿರ್ವಾಹಕರ ಜೊತೆಗೆ ಹಂಚಿಕೊಳ್ಳಲಾಗುವುದಿಲ್ಲ.
    • ತಮ್ಮದೇ ಆದ ವೈಯಕ್ತಿಕ ಲೈಬ್ರರಿ, ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಶಿಫಾರಸುಗಳನ್ನು ಹೊಂದಿರುತ್ತಾರೆ – ನಾವು ಕುಟುಂಬದ ಸದಸ್ಯರ ಖಾತೆಗಳಾದ್ಯಂತ ವೀಕ್ಷಣೆಯ ಆದ್ಯತೆಗಳನ್ನು ಅಥವಾ ವೀಕ್ಷಣೆಯ ಇತಿಹಾಸವನ್ನು ಹಂಚಿಕೊಳ್ಳುವುದಿಲ್ಲ.
    • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕುಟುಂಬದ ಸದಸ್ಯರಿಗೆ ವಯಸ್ಸಿನ ನಿರ್ಬಂಧಗಳು ಅನ್ವಯವಾಗುತ್ತವೆ.
  • ಕುಟುಂಬ ಗುಂಪುಗಳು ಇವುಗಳಿಗೆ ಆ್ಯಕ್ಸೆಸ್ ಅನ್ನು ಹಂಚಿಕೊಳ್ಳುತ್ತವೆ:
ಗಮನಿಸಿ: ಕುಟುಂಬ ಪ್ಲಾನ್‌ಗಳು ಪ್ರಸ್ತುತ ಬೆಲಾರೂಸ್, ಐಸ್‌ಲ್ಯಾಂಡ್, ಇಸ್ರೇಲ್, ಸ್ಲೋವೇನಿಯಾ, ದಕ್ಷಿಣ ಕೊರಿಯಾ ಅಥವಾ ವೆನಿಜುವೆಲಾದಲ್ಲಿ ಲಭ್ಯವಿಲ್ಲ.

YouTube Premium ನಲ್ಲಿ ಕುಟುಂಬ ಪ್ಲಾನ್‌ಗಳು

ಆ್ಯಡ್-ಫ್ರೀ ವೀಕ್ಷಣೆ, ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹಾಗೂ ಹಿನ್ನೆಲೆಯಲ್ಲಿ ಪ್ಲೇ ಸೇರಿದಂತೆ YouTube Premium ಕುಟುಂಬ ಪ್ಲಾನ್‌ನ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಲು, ಕುಟುಂಬ ಪ್ಲಾನ್ ಸದಸ್ಯತ್ವವನ್ನು ಆಯ್ಕೆಮಾಡಲು ಇಲ್ಲಿಗೆ ಹೋಗಿ.

YouTube Music Premium ನಲ್ಲಿ ಕುಟುಂಬ ಪ್ಲಾನ್‌ಗಳು

ಆ್ಯಡ್-ಫ್ರೀ ಆಲಿಸುವಿಕೆ, ಆಫ್‌ಲೈನ್‌ನಲ್ಲಿ ಪ್ಲೇ ಮಾಡುವುದು ಹಾಗೂ ಸ್ಕ್ರೀನ್ ಆಫ್ ಆಡಿಯೋ ಸೇರಿದಂತೆ YouTube Music Premium ಕುಟುಂಬ ಪ್ಲಾನ್‌ನ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಲು, ಕುಟುಂಬ ಪ್ಲಾನ್ ಸದಸ್ಯತ್ವವನ್ನು ಆಯ್ಕೆಮಾಡಲು ಇಲ್ಲಿಗೆ ಹೋಗಿ.

YouTube TV ಯಲ್ಲಿ ಕುಟುಂಬ ಪ್ಲಾನ್‌ಗಳು

ನೀವು YouTube TV ಸದಸ್ಯತ್ವವನ್ನು ಖರೀದಿಸಿದ್ದರೆ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನಿಮ್ಮ ಸದಸ್ಯತ್ವವನ್ನು 5 ಜನರ ಜೊತೆ ಹಂಚಿಕೊಳ್ಳಲು ನೀವು ಕುಟುಂಬ ಗುಂಪನ್ನು ರಚಿಸಬಹುದು. ನೀವು ಕುಟುಂಬ ಗುಂಪನ್ನು ರಚಿಸಿದಾಗ, ನೀವು ಕುಟುಂಬ ನಿರ್ವಾಹಕರಾಗುತ್ತೀರಿ.
ಕುಟುಂಬ ನಿರ್ವಾಹಕರಾಗಿ, ನೀವು ಮಾತ್ರ YouTube TV ಯಲ್ಲಿ ಸದಸ್ಯತ್ವವನ್ನು ಖರೀದಿಸಬಹುದು ಹಾಗೂ ಸದಸ್ಯತ್ವಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನೀವು ಹೆಚ್ಚುವರಿ ಸಬ್‌ಸ್ಕ್ರಿಪ್ಶನ್‌ಗಳು ಹಾಗೂ ಪ್ಯಾಕೇಜ್‌ಗಳನ್ನು ಖರೀದಿಸಿದರೆ, ಕುಟುಂಬದ ಸದಸ್ಯರು ತಮ್ಮ ಖಾತೆಗಳ ಮೂಲಕ ಈ ಆ್ಯಡ್-ಆನ್‌ಗಳನ್ನು ವೀಕ್ಷಿಸಬಹುದು.
ನೀವು ಮನೆಯ ಸ್ಥಳವನ್ನು ಸಹ ಸೆಟ್ ಮಾಡಬಹುದು ಹಾಗೂ ನಿಮ್ಮ ಕುಟುಂಬ ಗುಂಪಿಗೆ ಕುಟುಂಬದ ಸದಸ್ಯರನ್ನು ಆಹ್ವಾನಿಸಬಹುದು ಅಥವಾ ಗುಂಪಿನಿಂದ ತೆಗೆದುಹಾಕಬಹುದು. 
ಸೈನ್ ಅಪ್ ಮಾಡಲು ಮತ್ತು ಕುಟುಂಬ ಗುಂಪನ್ನು ರಚಿಸಲು:
  1. YouTube TV ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಫೋಟೋ ನಂತರ ಸೆಟ್ಟಿಂಗ್‌ಗಳು  ನಂತರ ಫ್ಯಾಮಿಲಿ ಶೇರಿಂಗ್ ಎಂಬುದನ್ನು ಆಯ್ಕೆಮಾಡಿ.
  3. ಸೆಟಪ್ ಮಾಡಿ ಎಂಬುದನ್ನು ಆಯ್ಕೆಮಾಡಿ.
  4. Google ಕುಟುಂಬ ಗುಂಪನ್ನು ರಚಿಸಿ.
  5. YouTube ಪಾವತಿ ಸೇವಾ ನಿಯಮಗಳು ಹಾಗೂ Google ಗೌಪ್ಯತಾ ನೀತಿಗೆ ಸಮ್ಮತಿಸಿ.
  6. ರದ್ದುಮಾಡಿ ಅಥವಾ ಮುಂದಿನದು ಎಂಬುದನ್ನು ಆಯ್ಕೆಮಾಡಿ.
  7. ಗುಂಪಿಗೆ ಸೇರಿಕೊಳ್ಳಲು ನಿಮ್ಮ ಕುಟುಂಬದ ಸದಸ್ಯರು ಇಮೇಲ್ ಆಹ್ವಾನವನ್ನು ಸ್ವೀಕರಿಸುತ್ತಾರೆ ಹಾಗೂ ಲಾಗ್ ಇನ್ ಮಾಡಲು ತಮ್ಮ Google ಖಾತೆಗಳನ್ನು ಬಳಸಬಹುದು.

YouTube Primetime ಚಾನಲ್‌ಗಳಲ್ಲಿ ಕುಟುಂಬ ಪ್ಲಾನ್‌ಗಳು

ನೀವು ಕುಟುಂಬ ಪ್ಲಾನ್ ಅನ್ನು ಸೆಟಪ್ ಮಾಡಿದ್ದರೆ, Primetime ಚಾನಲ್‌ಗಳ ಆ್ಯಕ್ಸೆಸ್ ಅನ್ನು ಆಹ್ವಾನಿಸಲಾದ ಎಲ್ಲಾ ಕುಟುಂಬದ ಸದಸ್ಯರ ಜೊತೆ ಸ್ವಯಂಚಾಲಿತವಾಗಿ ಹಂಚಿಕೊಳ್ಳಲಾಗುತ್ತದೆ.

ಕುಟುಂಬ ಗುಂಪಿನ ಅವಶ್ಯಕತೆಗಳು

ಪ್ರಮುಖ ಸೂಚನೆ: Google Workspace ಖಾತೆಯನ್ನು ಬಳಸಿಕೊಂಡು ಕುಟುಂಬ ಪ್ಲಾನ್ ಅನ್ನು ಪ್ರಾರಂಭಿಸಲು ಅಥವಾ ಸೇರಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ ಕುಟುಂಬ ಪ್ಲಾನ್‌ಗಾಗಿ ಸೈನ್ ಅಪ್ ಮಾಡಲು, ನಿಮ್ಮ ಸಾಮಾನ್ಯ Google ಖಾತೆ ರಚಿಸಿ ಅಥವಾ ಸೈನ್ ಇನ್ ಮಾಡಿ.

ಕುಟುಂಬ ನಿರ್ವಾಹಕರ ಅವಶ್ಯಕತೆಗಳು

ಕುಟುಂಬ ನಿರ್ವಾಹಕರಾಗಿ, ನೀವು YouTube ಕುಟುಂಬ ಪ್ಲಾನ್ ಅನ್ನು ಖರೀದಿಸುವ ಅಥವಾ ಕುಟುಂಬ ಗುಂಪಿಗೆ ಸಂಬಂಧಿಸಿದ ಸದಸ್ಯತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಏಕೈಕ ವ್ಯಕ್ತಿಯಾಗಿರುತ್ತೀರಿ. ನೀವು ಮನೆಯ ಸ್ಥಳವನ್ನು ಸೆಟ್ ಮಾಡಬಹುದು ಹಾಗೂ ಕುಟುಂಬದ ಸದಸ್ಯರನ್ನು ಆಹ್ವಾನಿಸಬಹುದು ಅಥವಾ ತೆಗೆದುಹಾಕಬಹುದು.

ನಿಮ್ಮ ಕುಟುಂಬ ಗುಂಪಿನ ಜೊತೆ ನಿಮ್ಮ YouTube ಕುಟುಂಬ ಪ್ಲಾನ್ ಅನ್ನು ಹಂಚಿಕೊಳ್ಳಲು, ನೀವು ಈ ಮಾನದಂಡಗಳನ್ನು ಪೂರೈಸಬೇಕು:

  • ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು (ಅಥವಾ ನಿಮ್ಮ ಭೌಗೋಳಿಕ ಪ್ರದೇಶದಲ್ಲಿ YouTube ಅನ್ನು ಬಳಸಲು ಅನುಮತಿಸಲಾದ ವಯಸ್ಸಿನವರಾಗಿರಬೇಕು).
  • Google ಖಾತೆಯನ್ನು ಹೊಂದಿರಬೇಕು. ನೀವು Google Workspace ಖಾತೆಯನ್ನು ಹೊಂದಿದ್ದರೆ, ನೀವು ಸಾಮಾನ್ಯ Google ಖಾತೆ ರಚಿಸಬೇಕು ಅಥವಾ ಸೈನ್ ಇನ್ ಮಾಡಬೇಕು.
  • YouTube Premium, YouTube Music Premium, ಅಥವಾ Primetime ಚಾನಲ್‌ಗಳು ಲಭ್ಯವಿರುವ ದೇಶದಲ್ಲಿ ವಾಸಿಸುತ್ತಿರಬೇಕು.
    • ಗಮನಿಸಿ:
      • ಕೊರಿಯಾದಲ್ಲಿ ಕುಟುಂಬ ಪ್ಲಾನ್‌ಗಳು ಲಭ್ಯವಿಲ್ಲ.
      • Primetime ಚಾನಲ್‌ಗಳು ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮಾತ್ರ ಲಭ್ಯವಿವೆ.
  • ಮತ್ತೊಂದು ಕುಟುಂಬ ಗುಂಪಿನ ಭಾಗವಾಗಿರಬಾರದು.
  • ಕಳೆದ 12 ತಿಂಗಳುಗಳಲ್ಲಿ ಕುಟುಂಬ ಗುಂಪುಗಳನ್ನು ಬದಲಿಸಿರಬಾರದು.

ಕುಟುಂಬದ ಸದಸ್ಯರ ಅವಶ್ಯಕತೆಗಳು

ಕುಟುಂಬ ನಿರ್ವಾಹಕರು ಕುಟುಂಬ ಗುಂಪಿನಲ್ಲಿ ಸೇರಿಕೊಳ್ಳಲು 5 ಕುಟುಂಬ ಸದಸ್ಯರವರೆಗೆ ಆಹ್ವಾನಿಸಬಹುದು. YouTube ಕುಟುಂಬ ಪ್ಲಾನ್ ಅನ್ನು ಹಂಚಿಕೊಳ್ಳುವ ಕುಟುಂಬ ಗುಂಪಿಗೆ ಸೇರಿಕೊಳ್ಳಲು, ನೀವು ಈ ಮಾನದಂಡಗಳನ್ನು ಪೂರೈಸಬೇಕು:

  • Google ಖಾತೆಯನ್ನು ಹೊಂದಿರಬೇಕು. ನೀವು Google Workspace ಖಾತೆಯನ್ನು ಹೊಂದಿದ್ದರೆ, ನೀವು ಸಾಮಾನ್ಯ Google ಖಾತೆ ರಚಿಸಬೇಕು ಅಥವಾ ಸೈನ್ ಇನ್ ಮಾಡಬೇಕು.
  • ಕುಟುಂಬ ನಿರ್ವಾಹಕರು ವಾಸಿಸುವ ಅದೇ ವಾಸದ ವಿಳಾಸದಲ್ಲಿ ವಾಸಿಸುತ್ತಿರಬೇಕು.
  • YouTube Premium, YouTube Music Premium, ಅಥವಾ Primetime ಚಾನಲ್‌ಗಳು ಲಭ್ಯವಿರುವ ದೇಶ ಅಥವಾ ಪ್ರದೇಶದಲ್ಲಿ ವಾಸಿಸುತ್ತಿರಬೇಕು.
  • ಮತ್ತೊಂದು ಕುಟುಂಬ ಗುಂಪಿನ ಭಾಗವಾಗಿರಬಾರದು.
  • ಕಳೆದ 12 ತಿಂಗಳುಗಳಲ್ಲಿ ಕುಟುಂಬ ಗುಂಪುಗಳನ್ನು ಬದಲಿಸಿರಬಾರದು.
ಸಲಹೆ: ನಿಮ್ಮ YouTube ಕುಟುಂಬ ಪ್ಲಾನ್ ಅನ್ನು ಸೆಟಪ್ ಮಾಡುವುದು ಮತ್ತು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯಿರಿ. ನಿಮ್ಮ ಕುಟುಂಬ ಪ್ಲಾನ್ ಕುರಿತು ನಿಮಗೆ ಸಹಾಯ ಬೇಕಾದರೆ, ನೀವು ಯಾವಾಗ ಬೇಕಾದರೂ ಬೆಂಬಲ ತಂಡವನ್ನು ಸಂಪರ್ಕಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10494383704125762688
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false