YouTube ಫೀಚರ್ ಪ್ರಯೋಗಗಳು ಮತ್ತು ಬಿಡುಗಡೆಗಳು

YouTube ಫೀಚರ್‌ಗಳು ವಿಭಿನ್ನ ಖಾತೆಗಳಲ್ಲಿ ವಿಭಿನ್ನವಾಗಿ ಕಾಣಿಸಬಹುದು ಎಂಬುದನ್ನು ನೀವು ಕೆಲವೊಮ್ಮೆ ಗಮನಿಸಬಹುದು. ನೀವು ಆ್ಯಪ್‌ನ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡದಿರುವುದು ಇದಕ್ಕೆ ಕಾರಣವಾಗಿರಬಹುದು. ನೀವು ಪ್ರಾಯೋಗಿಕ ಫೀಚರ್ ಅನ್ನು ಅಥವಾ ಬಿಡಗಡೆಯಾಗಲಿರುವ ಫೀಚರ್ ಅನ್ನು ಸಹ ನೋಡುತ್ತಿರಬಹುದು.

ಏನಿದು ಪ್ರಯೋಗ?

ಪ್ರಯೋಗ ಎಂಬುದು ಹೊಸ ಮತ್ತು ಸುಧಾರಿತ ಉತ್ಪನ್ನ ಫೀಚರ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದನ್ನು ಮಾಪನ ಮಾಡಲು ನಾವು ಬಳಸುವ ಪರೀಕ್ಷೆಯಾಗಿದೆ. ಈ ಫೀಚರ್‌ಗಳು ಹುಡುಕಾಟ, ವೀಡಿಯೊಗಳನ್ನು ಹಂಚಿಕೊಳ್ಳುವುದು ಮತ್ತು ಆ್ಯಡ್‌ಗಳು, ಇತರೆ ಒಳಗೊಂಡಿವೆ.

ನಿಮಗೆ ಹೆಚ್ಚು ಮುಖ್ಯವಾದ ವೀಡಿಯೊಗಳನ್ನು ಸುಲಭವಾಗಿ ಹುಡುಕಲು, ವೀಕ್ಷಿಸಲು ಮತ್ತು ಹಂಚಿಕೊಳ್ಳಲು ನಿಮಗೆ ಸಹಾಯ ಮಾಡುವ ವಿಧಾನಗಳನ್ನು ನಾವು ಯಾವಾಗಲೂ ಪ್ರಯೋಗಿಸುತ್ತಿರುತ್ತೇವೆ. ಕಾಲಕಾಲಕ್ಕೆ, ಈ ಕೆಲವು ಬದಲಾವಣೆಗಳನ್ನು ನೀವು ಗಮನಿಸಬಹುದು.

ಈ ಪ್ರಯೋಗಗಳಿಗೆ ಸಂಬಂಧಿಸಿದ ನಿಮ್ಮ ಪ್ರತಿಕ್ರಿಯೆಯನ್ನು ಆಧರಿಸಿ ಫೀಚರ್‌ಗಳನ್ನು ಹೆಚ್ಚು ವಿಸ್ತಾರವಾಗಿ ಬಿಡುಗಡೆ ಮಾಡಲು ನಾವು ಪರಿಗಣಿಸುತ್ತೇವೆ. 

ಬಿಡುಗಡೆ ಎಂದರೇನು?

ಬಿಡುಗಡೆ ಎನ್ನುವುದು ಹೊಸ ಫೀಚರ್‌ನ ಕ್ರಮೇಣ ಪ್ರಾರಂಭವಾಗಿದೆ. ಕೆಲವೊಮ್ಮೆ, ಅದು ಸುಗಮವಾಗಿ ನಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳಲು, ನಾವು ಎಲ್ಲರಿಗೂ ಒಂದೇ ಬಾರಿಗೆ ಹೊಸ ಫೀಚರ್ ಅನ್ನು ತೋರಿಸುವುದಿಲ್ಲ. ಬದಲಾಗಿ, ನಾವು ಕಡಿಮೆ ಪ್ರಮಾಣದಲ್ಲಿ ವೀಕ್ಷಕರು ಮತ್ತು/ಅಥವಾ ಕ್ರಿಯೇಟರ್‌ಗಳೊಂದಿಗೆ ಪ್ರಾರಂಭಿಸುತ್ತೇವೆ ಮತ್ತು ಕಾಲಾನಂತರದಲ್ಲಿ ಆ ಪ್ರಮಾಣವನ್ನು ಪ್ರತಿಯೊಬ್ಬರೂ ಹೊಸ ಫೀಚರ್ ಅನ್ನು ಹೊಂದುವವರೆಗೆ ಹೆಚ್ಚಿಸುತ್ತೇವೆ.

ಯಾವುದೇ ಪ್ರಯೋಗದ ಕುರಿತು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ನೀವು ಬಯಸಿದರೆ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಲು ಪ್ರತಿಕ್ರಿಯೆಯನ್ನು ಕಳುಹಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10851797029742835813
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false