ಲೈವ್ ಚಾಟ್‌ಗಾಗಿ YouTube ಸೂಪರ್ ಚಾಟ್ ಹಾಗೂ Super Stickers ಅನ್ನು ನಿರ್ವಹಿಸಿ

ಸೂಪರ್ ಚಾಟ್ ಮತ್ತು Super Stickers, YouTube ಪಾಲುದಾರ ಕಾರ್ಯಕ್ರಮದ ಮೂಲಕ ನಿಮ್ಮ ಚಾನಲ್ ಅನ್ನು ಬಳಸಿಕೊಂಡು ಹಣ ಗಳಿಸಲು ಲಭ್ಯವಿರುವ ಮಾರ್ಗಗಳಾಗಿವೆ. ಎದ್ದು ಕಾಣುವ ಲೈವ್ ಚಾಟ್ ಸಂದೇಶಗಳನ್ನು ಖರೀದಿಸಲು ಮತ್ತು ಕೆಲವೊಮ್ಮೆ ಲೈವ್ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಅವುಗಳನ್ನು ಪಿನ್ ಮಾಡಲು ಈ ಫೀಚರ್‌ಗಳು ಅವಕಾಶ ನೀಡುತ್ತವೆ. ಅರ್ಹತೆಯ ಕುರಿತು ಇನ್ನಷ್ಟು ತಿಳಿಯಿರಿ, ಹಾಗೂ ನೀವು ಹೇಗೆ ಈ ಫೀಚರ್ ಅನ್ನು ಆನ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಗಮನಿಸಿ: YouTube ನಲ್ಲಿ ಮೇಲ್ವಿಚಾರಣೆ ಮಾಡಿದ ಅನುಭವಗಳೊಂದಿಗೆ ಈ ಫೀಚರ್ ಲಭ್ಯವಿಲ್ಲದಿರಬಹುದು. ಇನ್ನಷ್ಟು ತಿಳಿಯಿರಿ.

ಖರೀದಿಸಲಾದ ಸೂಪರ್ ಚಾಟ್‌ಗಳು ಹಾಗೂ Super Stickers ಅನ್ನು ವೀಕ್ಷಿಸಿ

ಸೂಪರ್ ಚಾಟ್‌ಗಳು ಹಾಗೂ Super Stickers ನಿಮ್ಮ ಲೈವ್ ಚಾಟ್ ಫೀಡ್‌ನಲ್ಲಿ ಬಣ್ಣದ ಚಾಟ್ ಸಂದೇಶಗಳು ಮತ್ತು ಆ್ಯನಿಮೇಟ್ ಮಾಡಿದ ಚಿತ್ರಗಳಾಗಿ ಕಾಣಿಸಿಕೊಳ್ಳುತ್ತವೆ. ವೀಕ್ಷಕರು ಸೂಪರ್ ಚಾಟ್ ಅಥವಾ Super Sticker ಅನ್ನು ಖರೀದಿಸಿದಾಗ, ಅವರ ಪ್ರೊಫೈಲ್ ಚಿತ್ರವು ಲೈವ್ ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಉಳಿದುಕೊಳ್ಳಬಹುದು. ಸಮಯಾವಧಿಯು ಅವರ ಖರೀದಿ ಮೊತ್ತವನ್ನು ಅವಲಂಬಿಸಿರುತ್ತದೆ. ವೀಕ್ಷಕರು ಎಷ್ಟು ಹೆಚ್ಚು ಖರ್ಚು ಮಾಡುತ್ತಾರೋ, ಸೂಪರ್ ಚಾಟ್‌ಗಳು ಅಥವಾ Super Stickers ಚಾಟ್ ಫೀಡ್‌ನ ಮೇಲ್ಭಾಗದಲ್ಲಿ ಅಷ್ಟು ಸಮಯ ಉಳಿದುಕೊಳ್ಳುತ್ತವೆ. 

ಲೈವ್ ಸ್ಟ್ರೀಮ್ ಸಮಯದಲ್ಲಿ ಮಾಡಿದ ಖರೀದಿಗಳನ್ನು ವೀಕ್ಷಿಸುವುದು

ನಿಮ್ಮ ಲೈವ್ ಚಾಟ್ ಫೀಡ್‌ನಲ್ಲಿ ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ ಚಟುವಟಿಕೆಯನ್ನು ವೀಕ್ಷಿಸಲು ಲೈವ್ ನಿಯಂತ್ರಣ ಕೊಠಡಿ, YouTube ಮೊಬೈಲ್ ಆ್ಯಪ್ ಅಥವಾ YouTube ವೆಬ್‌ಸೈಟ್ ಅನ್ನು ಬಳಸಿ.

  1. ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ ಖರೀದಿಗಳನ್ನು ಮಾತ್ರ ವೀಕ್ಷಿಸುವುದಕ್ಕಾಗಿ ನಿಮ್ಮ ಲೈವ್ ಚಾಟ್ ಫೀಡ್ ಅನ್ನು ಫಿಲ್ಟರ್ ಮಾಡಲು:
    1. ಕಂಪ್ಯೂಟರ್‌ನಲ್ಲಿ, ಚಾಟ್ ಫಿಲ್ಟರ್ and then ಫ್ಯಾನ್ ಫಂಡಿಂಗ್ ಎಂಬುದನ್ನು ಕ್ಲಿಕ್ ಮಾಡಿ.
    2. YouTube ಮೊಬೈಲ್ ಆ್ಯಪ್‌ನಲ್ಲಿ, ಸೆಟ್ಟಿಂಗ್‌ಗಳು and thenಚಾಟ್ ಫಿಲ್ಟರ್ and then ಫ್ಯಾನ್ ಫಂಡಿಂಗ್ ಎಂಬುದನ್ನು ಟ್ಯಾಪ್ ಮಾಡಿ.

2. ನಿಮ್ಮ ಲೈವ್ ಚಾಟ್ ಫೀಡ್‌ನಲ್ಲಿರುವ ಎಲ್ಲಾ ಸಂದೇಶಗಳನ್ನು ಮತ್ತೊಮ್ಮೆ ವೀಕ್ಷಿಸಲು, ಚಾಟ್ ಫಿಲ್ಟರ್ and then ಎಲ್ಲಾ ಸಂದೇಶಗಳು ಎಂಬುದನ್ನು ಆಯ್ಕೆಮಾಡಿ.

ಗಮನಿಸಿ: ನಿಮ್ಮ ಲೈವ್ ಚಾಟ್ ಫೀಡ್ ಅನ್ನು ಫಿಲ್ಟರ್ ಮಾಡಿದರೆ, ರಚನೆಕಾರರ ವೀಕ್ಷಣೆಯ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ವೀಕ್ಷಕರಿಗೆ ಸಾಮಾನ್ಯ ಲೈವ್ ಚಾಟ್‌ಗಳಲ್ಲಿ ಭಾಗವಹಿಸಲು ಹಾಗೂ ಅವುಗಳನ್ನು ಅನುಸರಿಸಲು ಈಗಲೂ ಸಾಧ್ಯವಾಗುತ್ತದೆ.

ಎಲ್ಲಾ ಖರೀದಿಗಳನ್ನು ವೀಕ್ಷಿಸುವುದು

  1. YouTube Studio ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಆಯ್ಕೆ ಮಾಡಿ.
  3. Supers  ಟ್ಯಾಬ್ ಅನ್ನು ಆಯ್ಕೆ ಮಾಡಿ.
  4. “ನಿಮ್ಮ ಸೂಪರ್ ಚಾಟ್ ಹಾಗೂ Super Sticker ಚಟುವಟಿಕೆ” ಕಾರ್ಡ್‌ನಲ್ಲಿ ಹೊಚ್ಚಹೊಸ ಖರೀದಿಗಳನ್ನು ಪ್ರದರ್ಶಿಸಲಾಗುತ್ತದೆ. ಲಭ್ಯವಿರುವ ಎಲ್ಲಾ ವಹಿವಾಟುಗಳ ಕುರಿತಾದ ಮಾಹಿತಿಯನ್ನು ವೀಕ್ಷಿಸಲು ನೀವು ಬಯಸಿದರೆ, ಎಲ್ಲವನ್ನೂ ನೋಡಿ ಎಂಬುದನ್ನು ಕ್ಲಿಕ್ ಮಾಡಿ.

ಸೂಪರ್ ಚಾಟ್‌ಗಳು ಹಾಗೂ ಸೂಪರ್ ಸ್ಟಿಕ್ಕರ್ಸ್ ಮೂಲಕ ಸಂವಹನ ನಡೆಸುವುದು

ನಿಮ್ಮ ಲೈವ್ ಸ್ಟ್ರೀಮ್ ಸಮಯದಲ್ಲಿ ಸೂಪರ್ ಚಾಟ್‌ಗಳು ಹಾಗೂ ಸೂಪರ್ ಸ್ಟಿಕ್ಕರ್ಸ್ ಮೂಲಕ ಸಂವಹನ ನಡೆಸುವುದು ನಿಮ್ಮ ಅಭಿಮಾನಿಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಉತ್ತಮ ಮಾರ್ಗವಾಗಿದೆ. ನೀವು ಹೀಗೆ ಮಾಡಬಹುದು:

  • ಲೈವ್ ಸ್ಟ್ರೀಮ್ ಮಾಡುವಾಗ ಖರೀದಿದಾರರಿಗೆ ನಿಮ್ಮ ಕೃತಜ್ಞತೆಯನ್ನು ಮೌಖಿಕವಾಗಿ ವ್ಯಕ್ತಪಡಿಸಿ ಅಥವಾ ಶೌಟ್‌ಔಟ್ ಮೂಲಕ ಧನ್ಯವಾದ ತಿಳಿಸಿ.
  • ಮೆಚ್ಚುಗೆಯನ್ನು ವ್ಯಕ್ತಪಡಿಸಲು ಸೂಪರ್ ಚಾಟ್ ಅಥವಾ ಸೂಪರ್ ಸ್ಟಿಕ್ಕರ್‌ಗೆ ಹೃದಯದ ಎಮೋಜಿಯನ್ನು ನೀಡುವುದು: ನಿಮ್ಮ ಲೈವ್ ಚಾಟ್ ಫೀಡ್‌ನಲ್ಲಿ ಸೂಪರ್ ಚಾಟ್ ಅಥವಾ ಸ್ಟಿಕ್ಕರ್ ಅನ್ನು ಹುಡುಕಿ ಮತ್ತು ಅದರ ಪಕ್ಕದಲ್ಲಿರುವ ಹೃದಯದ ಎಮೋಜಿಯನ್ನು ಆಯ್ಕೆಮಾಡಿ. ನೀವು ಸೂಪರ್ ಚಾಟ್ ಅಥವಾ ಸ್ಟಿಕ್ಕರ್‌ಗೆ ಹೃದಯದ ಎಮೋಜಿಯನ್ನು ನೀಡಿದ್ದೀರಿ ಎಂಬುದನ್ನು ಎಲ್ಲಾ ವೀಕ್ಷಕರು ನೋಡಬಹುದು. ಖರೀದಿದಾರರ ಸೆಟ್ಟಿಂಗ್‌ಗಳನ್ನು ಆಧರಿಸಿ, ತಮ್ಮ ಕಾಮೆಂಟ್ ನಿಮಗೆ ಬಹಳ ಇಷ್ಟವಾಗಿದೆ ಎಂಬುದನ್ನು ತಿಳಿಸುವ ನೋಟಿಫಿಕೇಶನ್ ಅನ್ನು ಸಹ ಅವರು ಪಡೆಯಬಹುದು.

ವೀಕ್ಷಕರು YouTube ನಲ್ಲಿ ಖರೀದಿಯ ಮೈಲಿಗಲ್ಲನ್ನು ತಲುಪಿದಾಗ, ಆ ವೀಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ಇತರ ಸ್ವಯಂಚಾಲಿತ ಸಂದೇಶಗಳು ನಿಮ್ಮ ಲೈವ್ ಚಾಟ್ ಫೀಡ್‌ನಲ್ಲಿ ಗೋಚರಿಸಬಹುದು. ಉದಾಹರಣೆಗೆ, ಖರೀದಿದಾರರೊಬ್ಬರು ತಮ್ಮ ಮೊದಲ ಅಥವಾ ಹತ್ತನೇ ಖರೀದಿಯನ್ನು ಮಾಡಿದಾಗ ಸ್ವಯಂಚಾಲಿತ ಸಂದೇಶ ಗೋಚರಿಸಬಹುದು. 

ಖರೀದಿಗಳನ್ನು ಮಾಡಿದಾಗ ಹಾಗೂ ಮೈಲಿಗಲ್ಲುಗಳನ್ನು ತಲುಪಿದಾಗ ಮೆಚ್ಚುಗೆಯನ್ನು ವ್ಯಕ್ತಪಡಿಸುವುದು ಸಮುದಾಯವನ್ನು ನಿರ್ಮಿಸಲು ಮತ್ತು ನಿಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಳ್ಳಲು ನೆರವಾಗಬಲ್ಲದು.

ಸೂಪರ್ ಚಾಟ್‌ಗಳು ಮತ್ತು ಸೂಪರ್ ಸ್ಟಿಕ್ಕರ್ಸ್ ಅನ್ನು ಮಾಡರೇಟ್ ಮಾಡುವುದು

ಲೈವ್ ಚಾಟ್ ಅನ್ನು ಆನ್ ಮಾಡಿರುವಾಗ ಅರ್ಹ ಲೈವ್ ಸ್ಟ್ರೀಮ್‌ಗಳು ಹಾಗೂ ಪ್ರೀಮಿಯರ್‌ಗಳಲ್ಲಿ ಸೂಪರ್ ಚಾಟ್ ಹಾಗೂ Super Stickers ಸ್ವಯಂಚಾಲಿತವಾಗಿ ಲಭ್ಯವಿರುತ್ತವೆ. ಡೀಫಾಲ್ಟ್ ಆಗಿ, ಲೈವ್ ಚಾಟ್ ಆನ್ ಆಗಿರುತ್ತದೆ. ಲೈವ್ ಚಾಟ್ ಅನ್ನು ಬಳಸುವುದು ಹೇಗೆ ಎಂದು ತಿಳಿಯಿರಿ. 

ನೀವು ಲೈವ್ ಚಾಟ್ ಸಂದೇಶಗಳನ್ನು ಮಾಡರೇಟ್ ಮಾಡಿದ ಹಾಗೆಯೇ ಸೂಪರ್ ಚಾಟ್‌ಗಳು ಹಾಗೂ Super Stickers ಅನ್ನು ಮಾಡರೇಟ್ ಮಾಡಬಹುದು. YouTube ನಲ್ಲಿ ಉಳಿದೆಲ್ಲವುಗಳ ಹಾಗೆಯೇ, ಸೂಪರ್ ಚಾಟ್‌ಗಳು ಹಾಗೂ Super Stickers ಅನ್ನು ಕಳುಹಿಸುವಾಗ ವೀಕ್ಷಕರು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು. ನಮ್ಮ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೂಪರ್ ಚಾಟ್ ಅಥವಾ Super Sticker ಅನ್ನು ಮಾಡರೇಟ್ ಮಾಡಿದರೆ ಮತ್ತು ತೆಗೆದುಹಾಕಿದರೆ, ನಮ್ಮ ಪಾಲಿನ ಆದಾಯವನ್ನು YouTube ಧರ್ಮಾರ್ಥ ಕೊಡುಗೆಯಾಗಿ ನೀಡುತ್ತದೆ.

ಆದಾಯ ವರದಿ

YouTube Analytics ನಂತರ ಆದಾಯ ನಂತರ ನೀವು ಹೇಗೆ ಹಣ ಗಳಿಸುತ್ತೀರಿ ಎಂಬಲ್ಲಿ Supers ನ ಆದಾಯ ವರದಿಗಳನ್ನು ನೀವು ನೋಡಬಹುದು.

ಆದಾಯ ಹಂಚಿಕೊಳ್ಳುವಿಕೆ

Google ಖಚಿತಪಡಿಸಿದ Supers ಆದಾಯದಲ್ಲಿ ರಚನೆಕಾರರು 70% ಸ್ವೀಕರಿಸುತ್ತಾರೆ. ಸ್ಥಳೀಯ ಮಾರಾಟ ತೆರಿಗೆ ಮತ್ತು iOS ನಲ್ಲಿ ಆ್ಯಪ್ ಸ್ಟೋರ್ ಶುಲ್ಕವನ್ನು ಕಳೆದ ಬಳಿಕ 70% ಅನ್ನು ಲೆಕ್ಕ ಹಾಕಲಾಗುತ್ತದೆ. ಪ್ರಸ್ತುತ, ಕ್ರೆಡಿಟ್ ಕಾರ್ಡ್ ಶುಲ್ಕಗಳು ಸೇರಿದಂತೆ ವಹಿವಾಟು ಶುಲ್ಕಗಳನ್ನು YouTube ಪಾವತಿಸುತ್ತದೆ.

"ಧನ್ಯವಾದ" ತಿಳಿಸುವುದು, ಮತ್ತು ಇತರ ಸಣ್ಣ-ಪುಟ್ಟ ಸಂವಹನಗಳು, ಸೂಪರ್ ಚಾಟ್‌ನ ಮೂಲಕ ನಿಮ್ಮ ಪ್ರೇಕ್ಷಕರನ್ನು ತ್ವರಿತವಾಗಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13377986444598347001
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false