ನಿಮ್ಮ ಇತ್ತೀಚಿನ ಸಬ್‌ಸ್ಕ್ರೈಬರ್‌ಗಳನ್ನು ನೋಡಿ

ನಿಮ್ಮ ಇತ್ತೀಚಿನ ಸಬ್‌ಸ್ಕ್ರೈಬರ್‌ಗಳ ಪಟ್ಟಿಯನ್ನು ಚಾನಲ್ ಡ್ಯಾಶ್‌ಬೋರ್ಡ್‌ನಲ್ಲಿ ವೀಕ್ಷಿಸಬಹುದು. YouTube Studio ದಲ್ಲಿ ಸಮಯದ ಪ್ರಕಾರ ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ಸಹ ನೀವು ನೋಡಬಹುದು.

ನಿಮ್ಮ ಇತ್ತೀಚಿನ ಸಬ್‌ಸ್ಕ್ರೈಬರ್‌ಗಳನ್ನು ವೀಕ್ಷಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಡ್ಯಾಶ್‌ಬೋರ್ಡ್‌ನಲ್ಲಿ “ಇತ್ತೀಚಿನ ಸಬ್‌ಸ್ಕ್ರೈಬರ್‌ಗಳು” ಕಾರ್ಡ್ ಅನ್ನು ಹುಡುಕಿ.
  3. ಕಾರ್ಡ್ ಅನ್ನು ವಿಸ್ತೃತಗೊಳಿಸಲು ಎಲ್ಲವನ್ನೂ ನೋಡಿ ಎಂಬುದನ್ನು ಕ್ಲಿಕ್ ಮಾಡಿ.

ಸಲಹೆ: ಮೇಲಿನಿಂದ, ನೀವು ಸಮಯಾವಧಿಯನ್ನು ಆಯ್ಕೆ ಮಾಡಬಹುದು ಮತ್ತು ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯ ಪ್ರಕಾರ ಪಟ್ಟಿಯನ್ನು ವಿಂಗಡಿಸಬಹುದು.

ಯಾವ ಸಬ್‌ಸ್ಕ್ರೈಬರ್‌ಗಳನ್ನು ತೋರಿಸಲಾಗುತ್ತದೆ

ಈ ಕೆಳಗಿನ ಸಂದರ್ಭಗಳಲ್ಲಿ ಸಬ್‌ಸ್ಕ್ರೈಬರ್‌ಗಳನ್ನು ನಿಮ್ಮ ಇತ್ತೀಚಿನ ಸಬ್‌ಸ್ಕ್ರೈಬರ್‌ಗಳ ಪಟ್ಟಿಯಲ್ಲಿ ತೋರಿಸಲಾಗುತ್ತದೆ:

  • ಅವರು ತಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ಸಾರ್ವಜನಿಕಗೊಳಿಸಲು ಬಯಸಿದರೆ
  • ಅವರು ಕಳೆದ 28 ದಿನಗಳಲ್ಲಿ ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿದ್ದರೆ

ಯಾವ ಸಬ್‌ಸ್ಕ್ರೈಬರ್‌ಗಳನ್ನು ತೋರಿಸಲಾಗುವುದಿಲ್ಲ

ಈ ಕೆಳಗಿನ ಸಂದರ್ಭಗಳಲ್ಲಿ ಸಬ್‌ಸ್ಕ್ರೈಬರ್‌ಗಳನ್ನು ನಿಮ್ಮ ಇತ್ತೀಚಿನ ಸಬ್‌ಸ್ಕ್ರೈಬರ್‌ಗಳ ಪಟ್ಟಿಯಲ್ಲಿ ತೋರಿಸದಿರಬಹುದು:

ಸಬ್‌ಸ್ಕ್ರೈಬರ್ ಕುರಿತು FAQ ಗಳು

ಸಬ್‌ಸ್ಕ್ರೈಬರ್‌ಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬ ಕುರಿತಾಗಿ ನಾವು YouTube ಸಮುದಾಯದಿಂದ ಕೆಲವೊಮ್ಮೆ ಪ್ರಶ್ನೆಗಳನ್ನು ಸ್ವೀಕರಿಸುತ್ತೇವೆ. 

YouTube ಸ್ವಯಂಚಾಲಿತವಾಗಿ ಚಾನಲ್‌ಗಳಿಂದ ವೀಕ್ಷಕರನ್ನು ಅನ್‌ಸಬ್‌ಸ್ಕ್ರೈಬ್ ಮಾಡುತ್ತದೆಯೇ?
ಇಲ್ಲ, ಆದರೆ ಚಾನಲ್‌ಗಳಿಂದ ವೀಕ್ಷಕರನ್ನು “ಸ್ವಯಂಚಾಲಿತವಾಗಿ ಅನ್‌ಸಬ್‌ಸ್ಕ್ರೈಬ್” ಮಾಡಿರುವ ಕುರಿತಾದ ಕೆಲವು ಸಂಭಾಷಣೆಗಳನ್ನು ನಾವು ನೋಡಿದ್ದೇವೆ. ನಮಗೆ ಈ ರೀತಿಯ ಪ್ರತಿಕ್ರಿಯೆ ದೊರೆತಾಗ ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಏನು ನಡೆಯುತ್ತಿದೆ ಎನ್ನುವುದನ್ನು ನೋಡಲು, ಸಬ್‌ಸ್ಕ್ರಿಪ್ಶನ್‌ಗಳ ತಂಡವು, ಸಲ್ಲಿಸಲಾದ ಡೇಟಾವನ್ನು ಬಳಸಿಕೊಂಡು ಸಂಪೂರ್ಣ ತನಿಖೆಗಳನ್ನು ನಡೆಸುತ್ತದೆ.
ನಾವು ನೋಡಿದ ಪ್ರತಿ ಪ್ರಕರಣದಲ್ಲಿ, ವೀಕ್ಷಕರನ್ನು YouTube ನಿಂದ ಅನ್‌ಸಬ್‌ಸ್ಕ್ರೈಬ್ ಮಾಡಲು ಕಾರಣವಾಗುವ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ದೃಢೀಕರಿಸಿಕೊಂಡಿದ್ದೇವೆ. ನಾವು ನೋಡಿದ ಸಂಗತಿಗಳು ಹೀಗಿವೆ:
  • ಹೆಚ್ಚಿನ ಸಮಯದಲ್ಲಿ, ವೀಕ್ಷಕರು ಚಾನಲ್‌ಗೆ ಇನ್ನೂ ಸಬ್‌ಸ್ಕ್ರೈಬ್ ಆಗಿರುವುದನ್ನು ನಾವು ಕಂಡಿದ್ದೇವೆ.
  • ಕೆಲವು ವೀಕ್ಷಕರು, ಚಾನಲ್‌ನಿಂದ ಆಕಸ್ಮಿಕವಾಗಿ ಅನ್‌ಸಬ್‌ಸ್ಕ್ರೈಬ್ ಮಾಡಿದ್ದರು. ಆನಂತರದಿಂದ, ಅನ್‌ಸಬ್‌ಸ್ಕ್ರೈಬ್ ಮಾಡುವಾಗ ನಾವು ಒಂದು ಖಚಿತಪಡಿಸುವಿಕೆ ಪಾಪ್-ಅಪ್ ಅನ್ನು ಸೇರಿಸಿದ್ದೇವೆ (ಈ ಫೀಚರ್, ಸದ್ಯಕ್ಕೆ iPhone ಹಾಗೂ iPad ಸಾಧನಗಳಲ್ಲಿ ಲಭ್ಯವಿಲ್ಲ).
  • ತಮ್ಮ ಹೋಮ್ ಟ್ಯಾಬ್‌ನಲ್ಲಿ ವೀಡಿಯೊಗಳು ಕಾಣಿಸಿಕೊಳ್ಳದೇ ಇದ್ದುದರಿಂದ, ತಾವು ಚಾನಲ್‌ನಿಂದ ಅನ್‌ಸಬ್‌ಸ್ಕ್ರೈಬ್ ಆಗಿದ್ದೇವೆ ಎಂದು ಅನೇಕ ಜನರು ಭಾವಿಸಿದ್ದರು. ನಾವು ಈ ಪ್ರಕರಣಗಳನ್ನು ಪರಿಶೀಲಿಸಿದಾಗ, ಅವರು ಚಾನಲ್‌ಗೆ ಈಗಲೂ ಸಬ್‌ಸ್ಕ್ರೈಬ್ ಆಗಿದ್ದಾರೆಯೇ ಹೊರತು ಅನ್‌ಸಬ್‌ಸ್ಕ್ರೈಬ್ ಆಗಿಲ್ಲ ಎಂಬುದನ್ನು ಕಂಡುಕೊಂಡೆವು. ವೀಕ್ಷಿಸಲು ನೀವು ಅತಿ ಹೆಚ್ಚು ಆಸಕ್ತಿ ಹೊಂದಿರಬಹುದೆಂದು ನಾವು ಭಾವಿಸುವ ವೀಡಿಯೊಗಳನ್ನು ನಿಮಗೆ ತೋರಿಸುವ ಹಾಗೆ ಹೋಮ್ ಟ್ಯಾಬ್ ಅನ್ನು ವಿನ್ಯಾಸಗೊಳಿಸಲಾಗಿದೆ. ಹೋಮ್ ಟ್ಯಾಬ್‌ನಲ್ಲಿ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಂದ ಎಲ್ಲಾ ವೀಡಿಯೊಗಳನ್ನು ನೋಡುತ್ತೀರಿ ಎಂಬ ಭರವಸೆಯನ್ನು ನಾವು ನೀಡುವುದಿಲ್ಲ, ಆದರೆ ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ನೀವು ಸಂಪೂರ್ಣ ಪಟ್ಟಿಯನ್ನು ನೋಡಬಹುದು.
  • ತಮ್ಮ ಚಾನಲ್‌ನ ಸಬ್‌ಸ್ಕ್ರೈಬರ್‌ಗಳ ಪಟ್ಟಿಯಲ್ಲಿ ಸಬ್‌ಸ್ಕ್ರೈಬರ್ ಕಾಣಿಸದೇ ಇದ್ದುದರಿಂದ ನಿರ್ದಿಷ್ಟ ವೀಕ್ಷಕರನ್ನು ಅನ್‌ಸಬ್‌ಸ್ಕ್ರೈಬ್ ಮಾಡಲಾಗಿದೆ ಎಂಬುದಾಗಿ ಕೆಲವು ರಚನೆಕಾರರು ಭಾವಿಸಿದ್ದರು. ತಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ಸಾರ್ವಜನಿಕಗೊಳಿಸಲು ಆಯ್ಕೆ ಮಾಡಿರುವ ಸಬ್‌ಸ್ಕ್ರೈಬರ್‌ಗಳನ್ನು ಮಾತ್ರ ಈ ಪಟ್ಟಿ ತೋರಿಸುತ್ತದೆ. ಸಬ್‌ಸ್ಕ್ರಿಪ್ಶನ್‌ಗಳು ಡೀಫಾಲ್ಟ್ ಆಗಿ ಖಾಸಗಿಯಾಗಿರುತ್ತವೆ.
ನನ್ನ ಎಲ್ಲಾ ವೀಡಿಯೊಗಳು, ನನ್ನ ಸಬ್‌ಸ್ಕ್ರೈಬರ್‌ಗಳ ಸಬ್‌ಸ್ಕ್ರಿಪ್ಶನ್ ಫೀಡ್‌ಗಳಲ್ಲಿ ಕಾಣಿಸಿಕೊಳ್ಳುತ್ತವೆಯೇ?
  • ನೀವು ರಚನೆಕಾರರಾಗಿ ಪ್ರಕಟಿಸುವ ಪ್ರತಿಯೊಂದು ವೀಡಿಯೊವನ್ನು ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಡೀಫಾಲ್ಟ್ ಆಗಿ ತೋರಿಸಲಾಗುತ್ತದೆ. ಆದರೆ, ಒಂದು ವೀಡಿಯೊವನ್ನು ಪ್ರಕಟಿಸುವಾಗ ಅದು ಯಾವುದೇ ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಕಾಣಿಸಿಕೊಳ್ಳದಂತೆ ತಡೆಯಲು ನೀವು ಬಳಸಬಹುದಾದ ಸುಧಾರಿತ ಸೆಟ್ಟಿಂಗ್ ಇದೆ. ಪ್ರತಿದಿನ ವೀಡಿಯೊಗಳನ್ನು ಪ್ರಕಟಿಸುವ ಕೆಲವು ರಚನೆಕಾರರು, ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ನಿರ್ದಿಷ್ಟ ವೀಡಿಯೊಗಳನ್ನು ಮಾತ್ರ ತೋರಿಸಲು ವ್ಯೂಹಾತ್ಮಕವಾಗಿ ಈ ಸೆಟ್ಟಿಂಗ್ ಅನ್ನು ಬಳಸುತ್ತಾರೆ.
  • ನೀವು ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ, ನಾವು ಸಾಧ್ಯವಾದಷ್ಟು ಬೇಗನೆ ಅದನ್ನು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಪ್ರಕಟಿಸುತ್ತೇವೆ. ಸಾಮಾನ್ಯವಾಗಿ, ಅದಕ್ಕೆ ಕೆಲವೇ ನಿಮಿಷಗಳು ಅಥವಾ ಇನ್ನೂ ಕಡಿಮೆ ಸಮಯ ಸಾಕಾಗುತ್ತದೆ. ಈ ಕೆಲಸವನ್ನು ಸಾಧ್ಯವಾದಷ್ಟು ಬೇಗನೆ ಮಾಡುವುದು ಸಬ್‌ಸ್ಕ್ರಿಪ್ಶನ್‌ಗಳ ತಂಡಕ್ಕೆ ಒಂದು ದೊಡ್ಡ ಆದ್ಯತೆಯಾಗಿದೆ. ಕಳೆದ 6 ತಿಂಗಳಲ್ಲಿ, ನಾವು ಪ್ರಕಟಣೆಯ ಸಮಯವನ್ನು ಮೂರನೇ ಎರಡರಷ್ಟು ಕಡಿಮೆ ಮಾಡಿದ್ದೇವೆ.

ನನ್ನ ವೀಡಿಯೊಗಳು ತಮ್ಮ ಸಬ್ಸ್ ಫೀಡ್‌ನಲ್ಲಿ ಕಾಣಿಸುತ್ತಿಲ್ಲ ಎಂದು ನನ್ನ ಸಬ್‌ಸ್ಕ್ರೈಬರ್‌ಗಳು ಏಕೆ ಹೇಳುತ್ತಿದ್ದಾರೆ?

ನಿಮ್ಮ ವಿತರಿಸುವಿಕೆ ಆಯ್ಕೆಗಳನ್ನು ನೀವು ಬದಲಾಯಿಸದ ಹೊರತು, ನಾವು ಪ್ರತಿ ವೀಡಿಯೊವನ್ನು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಪ್ರಕಟಿಸುತ್ತೇವೆ. ಅಲ್ಲಿ ವೀಡಿಯೊಗಳು ಕಾಣಿಸುತ್ತಿಲ್ಲ ಎಂದು ವೀಕ್ಷಕರಿಂದ ನಾವು ದೂರುಗಳನ್ನು ಸ್ವೀಕರಿಸಿದಾಗ, ಅದು ಸಾಮಾನ್ಯವಾಗಿ ಈ ಎರಡರಲ್ಲಿ ಒಂದು ಕಾರಣದಿಂದ ಆಗಿರುತ್ತದೆ:

  • ನೀವು ಅನೇಕ ಚಾನಲ್‌ಗಳಿಗೆ ಸಬ್‌ಸ್ಕ್ರೈಬ್ ಮಾಡಿದ್ದರೆ, ಯಾವುದೋ ಒಂದು ವೀಡಿಯೊ ತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವು ವೀಕ್ಷಕರು ಡಜನ್‌ಗಟ್ಟಲೆ — ಕೆಲವರು ನೂರಾರು! — ಸಬ್‌ಸ್ಕ್ರಿಪ್ಶನ್‌ಗಳನ್ನು ಹೊಂದಿರುತ್ತಾರೆ. ಕೆಲವೊಮ್ಮೆ, ಇತರ ಅನೇಕ ಸಬ್‌ಸ್ಕ್ರಿಪ್ಶನ್ ವೀಡಿಯೊಗಳಿಂದ ನೀವು ಹುಡುಕುತ್ತಿರುವ ವೀಡಿಯೊವನ್ನು ಕಂಡುಕೊಳ್ಳಲು ಕಷ್ಟವಾಗಬಹುದು. ನೀವು ಸಬ್‌ಸ್ಕ್ರೈಬ್ ಮಾಡುವ ಚಾನಲ್‌ಗಳು ಆಗಾಗ ಪೋಸ್ಟ್ ಮಾಡಿದರೆ, ಹಳೆಯ ವೀಡಿಯೊಗಳು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಕಾಣಿಸಿಕೊಳ್ಳದಿರುವ ಸಾಧ್ಯತೆಯಿದೆ.
  • ಎಲ್ಲಾ ವೀಡಿಯೊಗಳು ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಕಾಣಿಸಿಕೊಂಡರೂ ಸಹ, ಅವೆಲ್ಲವೂ ಹೋಮ್ ಟ್ಯಾಬ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಒಬ್ಬ ವೀಕ್ಷಕರಾಗಿ, ಇದೀಗ ನಿಮಗೆ ವೀಕ್ಷಿಸಲು ಅತಿ ಹೆಚ್ಚು ಆಸಕ್ತಿ ಇರಬಹುದೆಂದು ನಾವು ಭಾವಿಸುವ ವೀಡಿಯೊಗಳನ್ನು ಹೋಮ್ ಟ್ಯಾಬ್‌ನಲ್ಲಿ ತೋರಿಸಲಾಗುತ್ತದೆ. ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಂದ ವೀಡಿಯೊಗಳು ಅಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಖಾತರಿ ಕೊಡಲಾಗುವುದಿಲ್ಲ.

ಬೇರೇನೋ ನಡೆಯುತ್ತಿದೆ ಎಂಬ ಹಾಗೆ ತೋರಿದರೆ, ನೀವು ನಮಗೆ ಪ್ರತಿಕ್ರಿಯೆ ಕಳುಹಿಸಬಹುದು ಮತ್ತು ನಾವು ಅದನ್ನು ಪರಿಶೀಲಿಸುತ್ತೇವೆ.

YouTube ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ಹೇಗೆ ಲೆಕ್ಕ ಹಾಕುತ್ತದೆ?
ನಿಮ್ಮ YouTube ಚಾನಲ್‌ನಲ್ಲಿ ಖಾತೆಗಳು ಮತ್ತು ಕ್ರಿಯೆಗಳ ನ್ಯಾಯಸಮ್ಮತತೆಯನ್ನು ನಾವು ನಿಯಮಿತವಾಗಿ ದೃಢೀಕರಿಸಿಕೊಳ್ಳುತ್ತೇವೆ. YouTube ಅನ್ನು ಎಲ್ಲರಿಗೂ ನ್ಯಾಯಯುತವಾದ ಸ್ಥಳವನ್ನಾಗಿರಿಸುವ ನಿಟ್ಟಿನಲ್ಲಿ ನಮ್ಮ ಸೈಟ್‌ನ ಮೆಟ್ರಿಕ್‌ಗಳು ಸ್ಪ್ಯಾಮ್, ದುರುಪಯೋಗ ಹಾಗೂ ಮುಚ್ಚಿದ ಖಾತೆಗಳಿಂದ ಮುಕ್ತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಹೀಗೆ ಮಾಡುತ್ತೇವೆ. ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯ ಕುರಿತು ತಿಳಿಯಿರಿ.
ನನ್ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯಲ್ಲಿ ಮುಚ್ಚಿದ ಖಾತೆಗಳು ಸೇರಿರುತ್ತವೆಯೇ?
ಯಾರಾದರೂ ತಮ್ಮ Google ಖಾತೆಯನ್ನು ಸಂಪೂರ್ಣವಾಗಿ ಮುಚ್ಚಿದಾಗ, ಅವರು ಇನ್ನು ಮುಂದೆ YouTube ನಲ್ಲಿ ಇರುವುದಿಲ್ಲ, ಹಾಗಾಗಿ ಅವರು ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯಲ್ಲಿ ಒಳಗೊಂಡಿರುವುದಿಲ್ಲ.
ನಿಮ್ಮ ಸಬ್‌ಸ್ಕ್ರೈಬರ್‌ಗಳಲ್ಲಿ ಎಷ್ಟು ಜನರು ತಮ್ಮ ಖಾತೆಗಳನ್ನು ಅಳಿಸಿದ್ದಾರೆ ಎಂಬುದನ್ನು ನಿಮ್ಮ ಚಾನಲ್‌ನ YouTube Analytics ನಲ್ಲಿ ನೋಡಬಹುದು, ಇಲ್ಲಿ ಅವರನ್ನು “ಮುಚ್ಚಿದ ಖಾತೆಗಳು” ಎಂಬುದಾಗಿ ಲೆಕ್ಕಹಾಕಲಾಗುತ್ತದೆ.
ಮುಚ್ಚಿದ ಖಾತೆಗಳು ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯಲ್ಲಿ ಸೇರಿರುವುದಿಲ್ಲ. ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯ ಕುರಿತು ಇನ್ನಷ್ಟು ತಿಳಿಯಿರಿ.
ಸ್ಪ್ಯಾಮ್ ಖಾತೆಗಳು ನನ್ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯಲ್ಲಿ ಸೇರಿರುತ್ತವೆಯೇ?
ಒಂದು ಖಾತೆಯು ಸ್ಪ್ಯಾಮ್ ಆಗಿದೆ ಎಂದು ನಮಗೆ ಕಂಡುಬಂದಾಗ, ಅದು ನಿಮ್ಮ ಒಟ್ಟು ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯಲ್ಲಿ ಒಳಗೊಂಡಿರುವುದಿಲ್ಲ. ಈ ಖಾತೆಗಳನ್ನು ನಿಮ್ಮ ಚಾನಲ್‌ನಿಂದ ಅನ್‌ಸಬ್‌ಸ್ಕ್ರೈಬ್ ಮಾಡಲಾಗುವುದಿಲ್ಲ. ಆ ಖಾತೆಗೆ, ತಾವು ಇನ್ನೂ ಸಬ್‌ಸ್ಕ್ರೈಬ್ ಆಗಿರುವ ಹಾಗೆ ಕಾಣಿಸುತ್ತದೆ ಮತ್ತು ಅವರು ಈಗಲೂ ತಮ್ಮ ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ನಿಮ್ಮ ವೀಡಿಯೊಗಳನ್ನು ಪಡೆಯುತ್ತಿರುತ್ತಾರೆ.
ನಾವು ಸ್ಪ್ಯಾಮ್ ವ್ಯೂವರ್‌ಗಳನ್ನು ಚಾನಲ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಮಾಡುವುದಿಲ್ಲ. ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯ ಕುರಿತು ಇನ್ನಷ್ಟು ತಿಳಿಯಿರಿ.
ನನ್ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಏಕೆ ಬದಲಾಗುತ್ತಿದೆ ಅಥವಾ ಇಳಿಕೆಯಾಗುತ್ತಿದೆ?

ಸಾಮಾನ್ಯವಾಗಿ, ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯಲ್ಲಿ ಏರಿಳಿತ ಕಂಡುಬರುವುದು ಸಾಮಾನ್ಯವಾಗಿದೆ. ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯು ಬದಲಾಗಿದೆ ಅಥವಾ ಇಳಿಕೆಯಾಗಿದೆ ಎಂದು ಕಂಡುಬಂದರೆ, ಅದು ಈ ಕೆಳಗಿನವುಗಳಲ್ಲಿ ಒಂದು ಕಾರಣದಿಂದ ಆಗಿರಬಹುದು:

ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯ ಬದಲಾವಣೆಯು, ಸರಾಸರಿ ವ್ಯತ್ಯಾಸದ ದರದ ಮಿತಿಗಳಿಗಿಂತ ಹೊರಗಿದ್ದರೆ, ಅದು ತಿಳಿದಿರುವ ಸಮಸ್ಯೆಯಿಂದ ಉಂಟಾಗಿರಬಹುದು. ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯಲ್ಲಿನ ವ್ಯತ್ಯಾಸದ ಸರಾಸರಿ ದರವನ್ನು ಮೀರಿ ನೀವು ಸಮಸ್ಯೆಯನ್ನು ಎದುರಿಸುತ್ತಿರುವಿರಿ ಎಂದಾದರೆ, ನೀವು ಸಮಸ್ಯೆಯನ್ನು ವರದಿ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14134560023268139512
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false