ನಿಮ್ಮ ಚಾನಲ್‍ನಿಂದ MCN ಆ್ಯಕ್ಸೆಸ್ ಅನ್ನು ತೆಗೆದುಹಾಕಿ

ನೀವು ಅಫಿಲಿಯೇಟ್ ಕ್ರಿಯೇಟರ್ ಆಗಿದ್ದು, MCN ಜೊತೆಗಿನ ನಿಮ್ಮ ಒಪ್ಪಂದವು ಹೀಗೆ ಮಾಡುವುದನ್ನು ಅನುಮತಿಸುತ್ತದೆ ಎಂದು ನೀವು ಭಾವಿಸುವುದಾದರೆ, ನೀವು ನಿಮ್ಮ ಚಾನಲ್‍ನಿಂದ MCN ಆ್ಯಕ್ಸೆಸ್ ಅನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಚಾನಲ್ ಡ್ಯಾಶ್‍ಬೋರ್ಡ್‌ನಲ್ಲಿ, ನೀವು ನೆಟ್‍ವರ್ಕ್ ರಿಲೇಶನ್‍ಶಿಪ್ ಕಾರ್ಡ್ ಅನ್ನು ಕಾಣುವಿರಿ.
  3. ನಿಮ್ಮ ಚಾನಲ್‍ನಿಂದ MCN ಆ್ಯಕ್ಸೆಸ್ ಅನ್ನು ತೆಗೆದುಹಾಕಲು ಆ ಕಾರ್ಡ್‌ನಲ್ಲಿ ಆ್ಯಕ್ಸೆಸ್ ತೆಗೆದುಹಾಕಿ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ವಿನಂತಿಗೆ ಪ್ರತಿಕ್ರಿಯಿಸಲು MCN ಬಳಿ 30 ದಿನಗಳ ಕಾಲಾವಕಾಶವಿದೆ, ಅಥವಾ 30 ದಿನಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯೊಳಗೆ ಆ್ಯಕ್ಸೆಸ್ ಅನ್ನು ಸ್ವಯಂಚಾಲಿತವಾಗಿ ತೆಗೆದುಹಾಕಲಾಗುವುದು ಎಂಬುದನ್ನು ಸೂಚಿಸುವ ಪಾಪ್-ಅಪ್ ಸ್ಕ್ರೀನ್ ಅನ್ನು ನೀವು ನೋಡುವಿರಿ.
  4. ದೃಢೀಕರಿಸಲು ನೆಟ್‍ವರ್ಕ್ ತೊರೆಯಿರಿ ಎಂಬುದನ್ನು ಕ್ಲಿಕ್ ಮಾಡಿ.
ಪ್ರಮುಖ ಸೂಚನೆ: ನೀವು MCN ಅನ್ನು ತೊರೆದರೆ, ಹಣ ಗಳಿಸುವುದು ಮತ್ತು ಪಾವತಿ ಸ್ವೀಕರಿಸುವುದನ್ನು ಮುಂದುವರೆಸಲು, ನೀವು ಮಾನಿಟೈಸೇಶನ್ ಸೆಟ್‌ಅಪ್ ಮಾಡಬೇಕು ಮತ್ತು ನಿಮ್ಮ ಖಾತೆಯನ್ನು YouTube ಗಾಗಿ AdSense ಗೆ ಲಿಂಕ್ ಮಾಡಬೇಕು.

ನನ್ನ MCN ನ ಆ್ಯಕ್ಸೆಸ್ ತೆಗೆದುಹಾಕಲು ನಾನು ಕ್ಲಿಕ್ ಮಾಡಿದಾಗ ನನ್ನ ಒಪ್ಪಂದದ ಅವಧಿ ಮುಗಿದಿಲ್ಲ ಎಂದಾದರೆ ಏನಾಗುತ್ತದೆ?

ಆ್ಯಕ್ಸೆಸ್ ತೆಗೆದುಹಾಕಲು ಕ್ಲಿಕ್ ಮಾಡುವುದಕ್ಕೂ ಮೊದಲಿಗೆ, ನಿಮ್ಮ MCN ಜೊತೆಗಿನ ನಿಮ್ಮ ಒಪ್ಪಂದ ನಿಯಮಗಳನ್ನು ನೀವು ಪರಿಶೀಲಿಸಬೇಕು. ನೀವು ಇನ್ನೂ MCN ನೊಂದಿಗೆ ಒಪ್ಪಂದದಲ್ಲಿದ್ದರೆ, ಆ್ಯಕ್ಸೆಸ್ ತೆಗದುಹಾಕುವಿಕೆಯು ಯಾವುದೇ ಕಾನೂನು ಬಾಧ್ಯತೆಗಳಿಂದ ನಿಮ್ಮನ್ನು ಮುಕ್ತಗೊಳಿಸಲಾಗುವುದಿಲ್ಲ ಮತ್ತು ಹೀಗೆ ಮಾಡುವುದರಿಂದ ನಿಮ್ಮ ಒಪ್ಪಂದದ ಉಲ್ಲಂಘನೆಯಾಗಬಹುದು. ಆ ಭಾಧ್ಯತೆಗಳ ಬಗ್ಗೆ ಖಚಿತವಾಗಿರದ ಅಫಿಲಿಯೇಟ್ ಚಾನಲ್‍ಗಳು ಇದರ ಬಗ್ಗೆ ತಮ್ಮ MCN ನೊಂದಿಗೆ ಅಥವಾ ತಮ್ಮದೆ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಲು ಬಯಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6845080135118213714
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false