ಸಮುದಾಯದ ಪೋಸ್ಟ್ ಅನ್ನು ರಚಿಸಿ

YouTube Community Posts

ಸಮುದಾಯದ ಪೋಸ್ಟ್‌ಗಳು ನಿಮಗೆ YouTube ನಲ್ಲಿ ಹೆಚ್ಚಿನ ತಲುಪುವಿಕೆ ಮತ್ತು ನಿಮ್ಮ ಪ್ರೇಕ್ಷಕರ ಜೊತೆಗೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ನೀಡಬಹುದು. ಸಮುದಾಯ ಟ್ಯಾಬ್ ಪ್ರಯೋಜನಗಳು ಮತ್ತು ಅರ್ಹತೆಯ ಕುರಿತು ಇನ್ನಷ್ಟು ತಿಳಿಯಿರಿ. ನಿಮ್ಮ ಚಾನಲ್ ಜವಾಬ್ದಾರಿಯನ್ನು ಆಧರಿಸಿ ಸಮುದಾಯ ಪೋಸ್ಟ್ ಆ್ಯಕ್ಸೆಸ್ ಅನ್ನು ಬದಲಾಯಿಸಬಹುದು. ಚಾನಲ್ ಅನುಮತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ಗಮನಿಸಿ: ಹೀಗೆ ಮಾಡಿದರೆ, ಸಮುದಾಯ ಪೋಸ್ಟ್‌ಗಳನ್ನು ಆಫ್ ಮಾಡಲಾಗುತ್ತದೆ:

ಸಮುದಾಯ ಪೋಸ್ಟ್ ಅನ್ನು ರಚಿಸಿ

ಸಮುದಾಯ ಪೋಸ್ಟ್ ರಚಿಸಲು ಹೀಗೆ ಮಾಡಿ:

  1. YouTube ಗೆ ಸೈನ್ ಇನ್ ಮಾಡಿ.
  2. ಪುಟದ ಮೇಲ್ಭಾಗದಲ್ಲಿ, ರಚಿಸಿ ನಂತರ ಪೋಸ್ಟ್ ರಚಿಸಿ ಎಂಬುದನ್ನು ಆಯ್ಕೆ ಮಾಡಿ.
  3. ಮೇಲ್ಭಾಗದ ಬಾಕ್ಸ್‌ನಲ್ಲಿ:
    • ಪಠ್ಯದ ಪೋಸ್ಟ್ ಅನ್ನು ರಚಿಸಲು ಸಂದೇಶವನ್ನು ಟೈಪ್ ಮಾಡಿ ಅಥವಾ ಚಿತ್ರ, GIF ಅಥವಾ ವೀಡಿಯೊ ಪೋಸ್ಟ್‌ನಲ್ಲಿ ಪಠ್ಯವನ್ನು ಸೇರಿಸಿ.
    • ವೀಡಿಯೊ , ಸಮೀಕ್ಷೆ , ಅಥವಾ ಚಿತ್ರದ ಪೋಸ್ಟ್ ಅನ್ನು ರಚಿಸಲು ಆಯ್ಕೆ ಮಾಡಿ.
  4. ಪೋಸ್ಟ್ ಆಯ್ಕೆಮಾಡಿ.

YouTube ಸಮುದಾಯವನ್ನು ರಕ್ಷಿಸುವ ಸಲುವಾಗಿ, 24-ಗಂಟೆಗಳ ಅವಧಿಯಲ್ಲಿ ಒಂದು ಚಾನಲ್ ಎಷ್ಟು ಪೋಸ್ಟ್‌ಗಳನ್ನು ರಚಿಸಬಹುದು ಎಂಬುದರ ಮೇಲೆ ನಾವು ಮಿತಿಗಳನ್ನು ವಿಧಿಸುತ್ತೇವೆ. ನೀವು "ಮಿತಿ ತಲುಪಿದ್ದೀರಿ" ಎಂಬ ದೋಷ ಸಂದೇಶವನ್ನು ಸ್ವೀಕರಿಸಿದರೆ, 24 ಗಂಟೆಗಳ ನಂತರ ಮತ್ತೆ ಪ್ರಯತ್ನಿಸಿ.

ಪೋಸ್ಟ್ ಅನ್ನು ನಿಗದಿಪಡಿಸಿ

ಸಮುದಾಯ ಪೋಸ್ಟ್ ಅನ್ನು ನಿಗದಿಪಡಿಸಲು ಹೀಗೆ ಮಾಡಿ:

  1. YouTube ಗೆ ಸೈನ್ ಇನ್ ಮಾಡಿ.
  2. ಪುಟದ ಮೇಲ್ಭಾಗದಲ್ಲಿ, ರಚಿಸಿ ನಂತರ ಪೋಸ್ಟ್ ರಚಿಸಿ ಎಂಬುದನ್ನು ಆಯ್ಕೆ ಮಾಡಿ.
  3. ಮೇಲ್ಭಾಗದ ಬಾಕ್ಸ್‌ನಲ್ಲಿ:
    • ಪಠ್ಯದ ಪೋಸ್ಟ್ ಅನ್ನು ರಚಿಸಲು ಸಂದೇಶವನ್ನು ಟೈಪ್ ಮಾಡಿ ಅಥವಾ ಚಿತ್ರ, GIF ಅಥವಾ ವೀಡಿಯೊ ಪೋಸ್ಟ್‌ನಲ್ಲಿ ಪಠ್ಯವನ್ನು ಸೇರಿಸಿ.
    • ವೀಡಿಯೊ , ಸಮೀಕ್ಷೆ , ಅಥವಾ ಚಿತ್ರದ ಪೋಸ್ಟ್ ಅನ್ನು ರಚಿಸಲು ಆಯ್ಕೆ ಮಾಡಿ.
  4. ಪೋಸ್ಟ್ ಎಂಬುದರ ಪಕ್ಕದಲ್ಲಿರುವ ಡೌನ್ ಆ್ಯರೋವನ್ನು ಕ್ಲಿಕ್ ಮಾಡಿ ಮತ್ತು ಪೋಸ್ಟ್ ಅನ್ನು ನಿಗದಿಪಡಿಸಿ ಎಂಬುದನ್ನು ಆಯ್ಕೆ ಮಾಡಿ.
  5. ಪೋಸ್ಟ್ ಅನ್ನು ಪ್ರಕಟಿಸಲು ದಿನಾಂಕ, ಸಮಯ ಮತ್ತು ಸಮಯ ವಲಯವನ್ನು ಆಯ್ಕೆಮಾಡಿ.
  6. ನಿಗದಿಪಡಿಸಿ ಎಂಬುದನ್ನು ಆಯ್ಕೆ ಮಾಡಿ.

ಪೋಸ್ಟ್‌ನಲ್ಲಿ ಇತರ ಚಾನಲ್‌ಗಳನ್ನು ಉಲ್ಲೇಖಿಸಿ

ನೀವು @ ನಮೂದಿಸಿದ ನಂತರ ಸ್ಪೇಸ್ ಬಿಡದೆ ಇತರ YouTube ಚಾನಲ್‌ಗಳ ಹ್ಯಾಂಡಲ್ ಅಥವಾ ಚಾನಲ್‌ನ ಹೆಸರನ್ನು ನಮೂದಿಸುವ ಮೂಲಕ ನಿಮ್ಮ ಸಮುದಾಯ ಪೋಸ್ಟ್‌ಗಳಲ್ಲಿ ಆ ಚಾನಲ್‌ಗಳನ್ನು ಉಲ್ಲೇಖಿಸಬಹುದು. ನೀವು ಅವರನ್ನು ಉಲ್ಲೇಖಿಸಿದ್ದೀರಿ ಎಂದು ಆ ಚಾನಲ್ ನೋಟಿಫಿಕೇಶನ್ ಅನ್ನು ಪಡೆಯಬಹುದು. ವೀಕ್ಷಕರು ಯಾವುದೇ ಸಾಧನದಿಂದ ಉಲ್ಲೇಖವನ್ನು ಕ್ಲಿಕ್ ಮಾಡಬಹುದು ಮತ್ತು ನೇರವಾಗಿ ಆ ಚಾನಲ್ ಪುಟಕ್ಕೆ ಹೋಗಬಹುದು.

ಪೋಸ್ಟ್‌ಗಳ ಪ್ರಕಾರವನ್ನು ಅರ್ಥಮಾಡಿಕೊಳ್ಳಿ

ಪಠ್ಯ ಪೋಸ್ಟ್‌ಗಳು

ಪಠ್ಯ ಪೋಸ್ಟ್‌ಗಳನ್ನು ರಚಿಸಲು, ನಿಮ್ಮ ಚಾನಲ್‌ನ ಸಮುದಾಯ ಟ್ಯಾಬ್‌ನಲ್ಲಿರುವ ಟೆಕ್ಸ್ಟ್ ಬಾಕ್ಸ್‌ನಲ್ಲಿ ನಿಮ್ಮ ಸಂದೇಶವನ್ನು ನಮೂದಿಸಿ. ನಿಮ್ಮ ಪಠ್ಯವನ್ನು ನೀವು ಹಾಗೆಯೇ ಅಥವಾ ವೀಡಿಯೊ, ಚಿತ್ರ ಅಥವಾ GIF ಮೂಲಕ ಪೋಸ್ಟ್ ಮಾಡಬಹುದು. ಪಠ್ಯ ಪೋಸ್ಟ್‌ಗಳನ್ನು ಸಮೀಕ್ಷೆಗಳ ಜೊತೆಗೆ ಪೋಸ್ಟ್ ಮಾಡಲು ಆಗುವುದಿಲ್ಲ.

ಪ್ಲೇಪಟ್ಟಿ ಪೋಸ್ಟ್‌ಗಳು

ನೀವು ಸಮುದಾಯ ಪೋಸ್ಟ್‌ಗಳನ್ನು ಆನ್ ಮಾಡಿದ್ದರೆ, ನೀವು ಇಷ್ಟಪಡುವ ಕಲಾವಿದರ ಪ್ಲೇಪಟ್ಟಿಗಳನ್ನು ಪೋಸ್ಟ್ ಮಾಡಬಹುದು.

ನೀವು ಹಂಚಿಕೊಳ್ಳಲು ಬಯಸುವ ಪ್ಲೇಪಟ್ಟಿಯನ್ನು ತೆರೆಯಿರಿ ಮತ್ತು URL ಅನ್ನು ಕಾಪಿ ಮಾಡಿ. ನಿಮ್ಮ ಸಮುದಾಯ ಪೋಸ್ಟ್ ಅನ್ನು ರಚಿಸುವಾಗ ಪ್ಲೇಪಟ್ಟಿ URL ಅನ್ನು ಪಠ್ಯದ ಫೀಲ್ಡ್‌ನಲ್ಲಿ ಪೇಸ್ಟ್ ಮಾಡಿ.

ಚಿತ್ರ ಮತ್ತು GIF ಪೋಸ್ಟ್‌ಗಳು

ನಿಮ್ಮ ಪೋಸ್ಟ್‌ನಲ್ಲಿ 5 ಚಿತ್ರಗಳವರೆಗೆ ಅಪ್‌ಲೋಡ್ ಮಾಡಲು ನೀವು ಆಯ್ಕೆ ಮಾಡಬಹುದು. ನಿಮ್ಮ ಕಂಪ್ಯೂಟರ್‌ನಿಂದ ಚಿತ್ರಗಳು ಅಥವಾ ಆ್ಯನಿಮೇಟ್ ಮಾಡಿದ GIF ಗಳನ್ನು ಆಯ್ಕೆ ಮಾಡಲು ಚಿತ್ರವನ್ನು ಕ್ಲಿಕ್ ಮಾಡಿ.

ನೀವು ಸಮುದಾಯ ಟ್ಯಾಬ್‌ಗೆ ಆ್ಯಕ್ಸೆಸ್ ಅನ್ನು ಹೊಂದಿದ್ದರೆ, ನೀವು YouTube ಆ್ಯಪ್ ಮೂಲಕ ನಿಮ್ಮ ಚಿತ್ರದ ಪೋಸ್ಟ್‌ಗೆ ಪಠ್ಯ, ಸ್ಟಿಕ್ಕರ್‌ಗಳು ಮತ್ತು ಫಿಲ್ಟರ್‌ಗಳನ್ನು ಕೂಡ ಸೇರಿಸಬಹುದು.

ಮಾರ್ಗಸೂಚಿಗಳು

  • ಗಾತ್ರ: 16 MB ವರೆಗೆ
  • ಫೈಲ್ ಪ್ರಕಾರಗಳು: JPG, PNG, GIF ಅಥವಾ WEBP
  • ಸೂಚಿಸಲಾದ ದೃಶ್ಯಾನುಪಾತ: ನಾವು 1:1 ಅನುಪಾತವನ್ನು ಸೂಚಿಸುತ್ತೇವೆ ಏಕೆಂದರೆ ಫೀಡ್‌ನಲ್ಲಿ ಚಿತ್ರಗಳನ್ನು ಹೀಗೆಯೇ ತೋರಿಸಲಾಗುತ್ತದೆ. ವೀಕ್ಷಕರು ಇದನ್ನು ವಿಸ್ತೃತಗೊಳಿಸಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಪೂರ್ಣ ಚಿತ್ರವನ್ನು ನೋಡಬಹುದು.

ನೆನಪಿಡಿ, ಚಿತ್ರಗಳು YouTube ಸಮುದಾಯ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಚಿತ್ರಗಳು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಪೋಸ್ಟ್ ಅನ್ನು ತೆಗೆದುಹಾಕಬಹುದು ಮತ್ತು ಚಾನಲ್‌ಗೆ ಸ್ಟ್ರೈಕ್ ಅನ್ವಯವಾಗಬಹುದು.

ವೀಡಿಯೊ ಪೋಸ್ಟ್‌ಗಳು

ನಿಮ್ಮ ಪೋಸ್ಟ್‌ನಲ್ಲಿ ನೀವು ವೀಡಿಯೊವನ್ನು ಸೇರಿಸಲು ಆಯ್ಕೆ ಮಾಡಿದರೆ, ನೀವು ಹೀಗೆ ಮಾಡಬಹುದು:

  • YouTube ವೀಡಿಯೊವನ್ನು ಹುಡುಕಬಹುದು
  • YouTube ವೀಡಿಯೊ URL ಅನ್ನು ಪೇಸ್ಟ್ ಮಾಡಬಹುದು
  • ನಿಮ್ಮ YouTube ಚಾನಲ್‌ನಲ್ಲಿನ ವೀಡಿಯೊವನ್ನು ಆಯ್ಕೆ ಮಾಡಬಹುದು

ಇನ್ನೊಬ್ಬ ರಚನೆಕಾರರ ವೀಡಿಯೊವನ್ನು ಹಂಚಿಕೊಳ್ಳುವ ಪೋಸ್ಟ್ ಅನ್ನು ನೀವು ರಚಿಸಿದಾಗ, ವೀಡಿಯೊದ ಮೂಲ ಅಪ್‌ಲೋಡರ್‌ಗೆ ನೋಟಿಫಿಕೇಶನ್ ಅನ್ನು ಕಳುಹಿಸಬಹುದು. ಇತರ ರಚನೆಕಾರರು ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವಾಗ, ಮೂಲ ರಚನೆಕಾರರು ಅದನ್ನು ಅಕ್ನಾಲೆಡ್ಜ್ ಮಾಡಲು ಈ ನೋಟಿಫಿಕೇಶನ್ ಸಹಾಯ ಮಾಡುತ್ತದೆ.

ಗಮನಿಸಿ: ಈಗಾಗಲೇ ವೀಕ್ಷಕರ ಸಬ್‌ಸ್ಕ್ರಿಪ್ಶನ್ ಅಥವಾ ಹೋಮ್ ಫೀಡ್‌ನಲ್ಲಿರುವ ವೀಡಿಯೊ ಕುರಿತಾದ ಸಮುದಾಯ ಪೋಸ್ಟ್‌ಗಳು ಮತ್ತೆ ತೋರಿಸದಿರಬಹುದು. ಈ ಸೆಟ್ಟಿಂಗ್ ನಿಮ್ಮ ವೀಕ್ಷಕರು ಒಂದೇ ವೀಡಿಯೊವನ್ನು ಪದೇ ಪದೇ ನೋಡುವುದನ್ನು ತಡೆಯುತ್ತದೆ.

ಸಮೀಕ್ಷೆಗಳು

ನಿಮ್ಮ ಪೋಸ್ಟ್‌‌ಗೆ ಸಮೀಕ್ಷೆಯನ್ನು ಸೇರಿಸಲು ನೀವು ಆಯ್ಕೆ ಮಾಡಿದರೆ:

  1. ಪಠ್ಯ ಅಥವಾ ಚಿತ್ರ ಸಮೀಕ್ಷೆಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ.
  2. ಪಠ್ಯ ಸಮೀಕ್ಷೆಗಳಿಗಾಗಿ:
    1. ಪಠ್ಯ ಫೀಲ್ಡ್‌ನಲ್ಲಿ ಪ್ರಶ್ನೆಯನ್ನು ನಮೂದಿಸಿ.
    2. "ಆಯ್ಕೆ" ಫೀಲ್ಡ್‌ಗಳಲ್ಲಿ ಉತ್ತರಗಳನ್ನು ನಮೂದಿಸಿ.
    3. ನಿಮಗೆ ಇನ್ನೂ ಹೆಚ್ಚಿನ ಉತ್ತರ ಫೀಲ್ಡ್‌ಗಳ ಅಗತ್ಯವಿದ್ದರೆ, ಆಯ್ಕೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
  3. ಚಿತ್ರ ಸಮೀಕ್ಷೆಗಳಿಗಾಗಿ:
    1. ಪಠ್ಯ ಫೀಲ್ಡ್‌ನಲ್ಲಿ ಪ್ರಶ್ನೆಯನ್ನು ನಮೂದಿಸಿ.
    2. ಚಿತ್ರಗಳನ್ನು ಉತ್ತರಗಳಾಗಿ ಅಪ್‌ಲೋಡ್ ಮಾಡಿ
    3. ನಿಮಗೆ ಹೆಚ್ಚಿನ ಚಿತ್ರಗಳ ಅಗತ್ಯವಿದ್ದರೆ, 4 ಚಿತ್ರಗಳವರೆಗೆ ಸೇರಿಸಲು, ಆಯ್ಕೆಗಳನ್ನು ಸೇರಿಸಿ ಅನ್ನು ಟ್ಯಾಪ್ ಮಾಡಿ.

ಗಮನಿಸಿ: ಚಿತ್ರ ಸಮೀಕ್ಷೆ ಆಯ್ಕೆಗಳು ಈಗ ಗರಿಷ್ಠ 36 ಅಕ್ಷರಗಳವರೆಗೆ ಹೆಚ್ಚಾಗಿವೆ. ಪಠ್ಯ ಸಮೀಕ್ಷೆ ಆಯ್ಕೆಗಳು ಗರಿಷ್ಠ 65 ಅಕ್ಷರಗಳವರೆಗೆ ಇರಬಹುದು.

ಕ್ವಿಜ್‌ಗಳು

ಒಂದು ವೇಳೆ ನೀವು ನಿಮ್ಮ ಪೋಸ್ಟ್‌‌ನಲ್ಲಿ ನೀವು ಕ್ವಿಜ್ ಅನ್ನು ಸೇರಿಸಲು ಆಯ್ಕೆ ಮಾಡಿದರೆ:

  1. ಪಠ್ಯ ಫೀಲ್ಡ್‌ನಲ್ಲಿ ಪ್ರಶ್ನೆಯನ್ನು ನಮೂದಿಸಿ.
  2. "ಉತ್ತರ" ಫೀಲ್ಡ್‌‌ಗಳಲ್ಲಿ ಉತ್ತರಗಳನ್ನು ನಮೂದಿಸಿ. ಉತ್ತರಗಳು ಪ್ರತಿಯೊಂದೂ 80 ಅಕ್ಷರಗಳವರೆಗೆ ಇರಬಹುದು.
  3. ನಿಮಗೆ ಹೆಚ್ಚಿನ ಉತ್ತರ ಫೀಲ್ಡ್‌ಗಳ ಅಗತ್ಯವಿದ್ದರೆ, ಉತ್ತರ ಸೇರಿಸಿ ಅನ್ನು ಟ್ಯಾಪ್ ಮಾಡಿ. ನೀವು 4 ಉತ್ತರಗಳವರೆಗೆ ನೀಡಬಹುದು.
  4. ಸರಿಯಾದ ಉತ್ತರವನ್ನು ಆಯ್ಕೆಮಾಡಿ. ಪಠ್ಯ ಫೀಲ್ಡ್‌ನಲ್ಲಿ ಇದು ಸರಿಯಾದ ಉತ್ತರ ಏಕೆ ಎಂಬುದಕ್ಕೆ ನೀವು ಐಚ್ಛಿಕ ವಿವರಣೆಯನ್ನು ಸೇರಿಸಬಹುದು. ವಿವರಣೆಗಳು ಗರಿಷ್ಠ 350 ಅಕ್ಷರಗಳವರೆಗೆ ಇರಬಹುದು.
ಗಮನಿಸಿ: ನೀವು ಕ್ವಿಜ್‌ಗಳಲ್ಲಿ ಒಂದು ಸರಿಯಾದ ಉತ್ತರವನ್ನು ಮಾತ್ರ ಸೇರಿಸಬಹುದು.

ನಿಮ್ಮ ಚಟುವಟಿಕೆಯನ್ನು ನಿರ್ವಹಿಸಿ

ಸಮುದಾಯ ಪೋಸ್ಟ್‌ಗಳಲ್ಲಿ ನಿಮ್ಮ ಚಟುವಟಿಕೆಯ ಇತಿಹಾಸಕ್ಕೆ ನೀವು ಹೋಗಬಹುದು ಮತ್ತು ಅದನ್ನು ನಿರ್ವಹಿಸಬಹುದು. ಈ ಫೀಚರ್ ಕಂಪ್ಯೂಟರ್‌ನಲ್ಲಿ ಮಾತ್ರ ಲಭ್ಯವಿದೆ.

  1. YouTube.com ಗೆ ಹೋಗಿ.
  2. ಎಡದಿಂದ, ಇತಿಹಾಸ ಎಂಬುದನ್ನು ಕ್ಲಿಕ್ ಮಾಡಿ.
  3. ಬಲದಲ್ಲಿ "ಇತಿಹಾಸದ ಪ್ರಕಾರ" ಎಂಬುದರ ಅಡಿಯಲ್ಲಿ, ಸಮುದಾಯ ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ ಸಮುದಾಯ ಪೋಸ್ಟ್ ಇತಿಹಾಸ ನಿಮಗೆ ಕಾಣಿಸುತ್ತದೆ.
  4. ಒಂದು ಚಟುವಟಿಕೆಯನ್ನು ಎಡಿಟ್ ಮಾಡಲು ಅಥವಾ ಅಳಿಸಲು, ಅದರ ಮೇಲೆ ಹೋವರ್ ಮಾಡಿ, ಇನ್ನಷ್ಟು '' ನಂತರ ಎಡಿಟ್ ಮಾಡಿ ಅಥವಾ ಅಳಿಸಿ ಎಂಬುದನ್ನು ಕ್ಲಿಕ್ ಮಾಡಿ.

ಗಮನಿಸಿ: ನೀವು ತೆರೆದ ಪೋಸ್ಟ್‌ಗಳ ಇತಿಹಾಸವನ್ನು 30 ದಿನಗಳವರೆಗೆ ಮಾತ್ರ ಇರಿಸಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10653884707443843231
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false