ನ್ಯಾಯಯುತ ಬಳಕೆಯ ಕುರಿತು ಪದೇಪದೇ ಕೇಳಲಾಗುವ ಪ್ರಶ್ನೆಗಳು

ನ್ಯಾಯಯುತ ಬಳಕೆ ಎಂದರೆ, ಕೃತಿಸ್ವಾಮ್ಯ-ಸಂರಕ್ಷಿತ ವಿಷಯವನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ, ಕೃತಿಸ್ವಾಮ್ಯ ಮಾಲೀಕರ ಅನುಮತಿ ಇಲ್ಲದೆಯೇ ನೀವು ಮರುಬಳಕೆ ಮಾಡಬಹುದೆಂದು ಹೇಳುವ ಕಾನೂನು ಸಿದ್ಧಾಂತವಾಗಿದೆ.

ನ್ಯಾಯಯುತ ಬಳಕೆಯನ್ನು ಸ್ವಯಂಚಾಲಿತವಾಗಿ ಅನ್ವಯಿಸಲು ಯಾವುದೇ ಮ್ಯಾಜಿಕ್ ಪದಗಳಿಲ್ಲ. ಬೇರೆ ಯಾರದೋ ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೃತಿಯನ್ನು ನೀವು ಬಳಸುವಾಗ, ನೀವು ನ್ಯಾಯಯುತ ಬಳಕೆಯ ರಕ್ಷಣೆ ಹೊಂದಿರುತ್ತೀರಿ ಎಂಬ ಯಾವ ಭರವಸೆಯೂ ಇರುವುದಿಲ್ಲ.

ನ್ಯಾಯಯುತ ಬಳಕೆ - YouTube ನಲ್ಲಿ ಕೃತಿಸ್ವಾಮ್ಯ

 

 

ನ್ಯಾಯುಯುತ ಬಳಕೆಯ ಕುರಿತು ಸಾಮಾನ್ಯ ಪ್ರಶ್ನೆಗಳು

ನ್ಯಾಯಯುತ ಬಳಕೆಯು ಹೇಗೆ ಕೆಲಸ ಮಾಡುತ್ತದೆ?
ಯುನೈಟೆಡ್ ಸ್ಟೇಟ್ಸ್‌ನಲ್ಲಿ, ನ್ಯಾಯಯುತ ಬಳಕೆಯ ಸಿದ್ಧಾಂತವು ಅನ್ವಯಿಸುತ್ತದೆಯೇ ಎಂದು ನೋಡಲು ನ್ಯಾಯಾಧೀಶರು ನಿರ್ದಿಷ್ಟ ಪ್ರಕರಣವನ್ನು ಕೆಲವೊಂದು ತತ್ವಗಳ ನೆಲೆಯಲ್ಲಿ ಪರಿಶೀಲಿಸುತ್ತಾರೆ. ಕೃತಿಸ್ವಾಮ್ಯ ಮಾಲೀಕರ ಅನುಮತಿಯಿಲ್ಲದೆ ವಿಷಯವನ್ನು ಯಾವಾಗ ಬಳಸಬಹುದು ಎಂಬ ಕುರಿತು ವಿವಿಧ ದೇಶಗಳು/ಪ್ರದೇಶಗಳು ವಿಭಿನ್ನ ನಿಯಮಗಳನ್ನು ಹೊಂದಿವೆ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ವ್ಯಾಖ್ಯಾನ, ಟೀಕೆ ಮಾಡುವಿಕೆ, ಸಂಶೋಧನೆ, ಬೋಧನೆ ಅಥವಾ ಸುದ್ದಿ ವರದಿ ಮಾಡುವಿಕೆಯ ವಿಷಯಗಳನ್ನು ನ್ಯಾಯಯುತ ಬಳಕೆಯೆಂದು ಪರಿಗಣಿಸಬಹುದು. ಇತರ ದೇಶಗಳು ಇದೇ ರೀತಿಯಲ್ಲಿ ನ್ಯಾಯೋಚಿತ ವ್ಯವಹಾರ ಎಂಬ ಪರಿಕಲ್ಪನೆಯನ್ನು ಹೊಂದಿವೆ, ಆದರೆ ಇದು ವಿಭಿನ್ನವಾಗಿ ಕೆಲಸ ಮಾಡಬಹುದು.
ನ್ಯಾಯಯುತ ಬಳಕೆ ಎಂದರೆ ಏನು?

1. ಅಂತಹ ಬಳಕೆಯು ವಾಣಿಜ್ಯಾತ್ಮಕ ಸ್ವರೂಪವನ್ನು ಹೊಂದಿದೆಯೇ ಅಥವಾ ಅದು ಲಾಭರಹಿತ ಶೈಕ್ಷಣಿಕ ಉದ್ದೇಶಗಳನ್ನು ಹೊಂದಿದೆಯೇ ಎಂಬುದನ್ನು ಒಳಗೊಂಡಂತೆ ಬಳಕೆಯ ಉದ್ದೇಶ ಮತ್ತು ಸ್ವರೂಪವಿರುತ್ತದೆ

ಬಳಕೆಯು “ಪರಿವರ್ತನೀಯವಾಗಿದೆಯೇ” ಎಂಬುದರ ಮೇಲೆ ನ್ಯಾಯಾಲಯಗಳು ಸಾಮಾನ್ಯವಾಗಿ ಗಮನ ಕೇಂದ್ರೀಕರಿಸುತ್ತವೆ. ಅಂದರೆ, ಅದು ಮೂಲಕ್ಕೆ ಹೊಸ ಅಭಿವ್ಯಕ್ತಿ ಅಥವಾ ಅರ್ಥವನ್ನು ಸೇರಿಸುತ್ತದೆಯೇ ಅಥವಾ ಅದು ಕೇವಲ ಮೂಲವನ್ನು ನಕಲು ಮಾಡುತ್ತದೆಯೇ. ವಾಣಿಜ್ಯಾತ್ಮಕ ಬಳಕೆಗಳನ್ನು ನ್ಯಾಯಯುತ ಎಂದು ಪರಿಗಣಿಸುವ ಸಾಧ್ಯತೆ ಕಡಿಮೆಯಾಗಿರುತ್ತದೆ, ಆದರೆ ವೀಡಿಯೊವನ್ನು ಮಾನಿಟೈಸ್ ಮಾಡಿದರೂ ಅದು ನ್ಯಾಯಯುತ ಬಳಕೆ ಎಂದೆನಿಸಿಕೊಳ್ಳುವ ಸಾಧ್ಯತೆಯೂ ಇದೆ.

2. ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೃತಿಯ ಸ್ವರೂಪ

ಸಂಪೂರ್ಣವಾಗಿ ಕಾಲ್ಪನಿಕ ಕೃತಿಗಳನ್ನು ಬಳಸುವುದಕ್ಕಿಂತ ಪ್ರಾಥಮಿಕವಾಗಿ ವಾಸ್ತವಿಕ ಕೃತಿಗಳಿಂದ ವಿಷಯವನ್ನು ಬಳಸುವುದು ನ್ಯಾಯಯುತವೆನಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

3. ಒಟ್ಟಾರೆಯಾಗಿ ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೃತಿಗೆ ಸಂಬಂಧಪಟ್ಟಂತೆ, ಬಳಸಲಾದ ಭಾಗದ ಪ್ರಮಾಣ ಮತ್ತು ಗಣನೀಯತೆ

ಮೂಲ ಕೃತಿಯಿಂದ ಹೆಚ್ಚಿನ ಅಂಶಗಳನ್ನು ತೆಗೆದುಕೊಳ್ಳುವುದಕ್ಕಿಂತ ಅದರ ಚಿಕ್ಕ-ಪುಟ್ಟ ಅಂಶಗಳನ್ನು ಪಡೆದುಕೊಳ್ಳುವುದು ನ್ಯಾಯಯುತ ಎಂದು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೂ, ಅದು ಕೃತಿಯ “ಕೇಂದ್ರಬಿಂದು” ಆಗಿದ್ದರೆ, ಕೆಲವು ಸನ್ನಿವೇಶಗಳಲ್ಲಿ ಸಣ್ಣ ಪ್ರಮಾಣವೂ ಸಹ ನ್ಯಾಯಯುತ ಬಳಕೆಗೆ ವಿರುದ್ಧವೆಂದು ಪರಿಗಣಿಸುವ ಸಾಧ್ಯತೆಯಿದೆ.

4. ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೃತಿಗಾಗಿ ಸಂಭಾವ್ಯ ಮಾರ್ಕೆಟ್ ಅಥವಾ ಅದರ ಮೌಲ್ಯದ ಮೇಲೆ, ಬಳಕೆಯ ಪರಿಣಾಮ

ಕೃತಿಸ್ವಾಮ್ಯ ಮಾಲೀಕರು ತಮ್ಮ ಮೂಲ ಕೃತಿಯಿಂದ ಲಾಭ ಗಳಿಸುವ ಸಾಮರ್ಥ್ಯಕ್ಕೆ ಹಾನಿ ಉಂಟುಮಾಡುವ ಬಳಕೆಗಳನ್ನು ನ್ಯಾಯಯುತ ಬಳಕೆ ಎಂದು ಪರಿಗಣಿಸುವ ಸಾಧ್ಯತೆ ಕಡಿಮೆಯಾಗಿರುತ್ತದೆ. ವಿಡಂಬನೆಗಳನ್ನು ಒಳಗೊಂಡ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕೆಲವೊಮ್ಮೆ ಈ ಅಂಶದ ಅಡಿಯಲ್ಲಿ ವಿನಾಯಿತಿ ನೀಡಿದ ಉದಾಹರಣೆಗಳಿವೆ.

ನ್ಯಾಯಯುತ ಬಳಕೆ ಯಾವಾಗ ಅನ್ವಯಿಸುತ್ತದೆ?
ಕೃತಿಸ್ವಾಮ್ಯ ಮಾಲೀಕರಿಗೆ ಕ್ರೆಡಿಟ್ ನೀಡುವುದು, "ಉಲ್ಲಂಘನೆಯ ಉದ್ದೇಶವಿಲ್ಲ" ಎಂಬಂತಹ ಡಿಸ್‌ಕ್ಲೇಮರ್‌ಗಳನ್ನು ಪೋಸ್ಟ್ ಮಾಡುವುದು ಅಥವಾ ಬೇರೊಬ್ಬರ ಕಂಟೆಂಟ್‌ನಲ್ಲಿ ಮೂಲ ಕಂಟೆಂಟ್ ಅನ್ನು ಸೇರಿಸುವುದು, ಯಾವುದನ್ನೂ ಸಹ ಸ್ವಯಂಚಾಲಿತವಾಗಿ ನ್ಯಾಯಯುತ ಬಳಕೆಯನ್ನಾಗಿಸುವುದಿಲ್ಲ. ಮೂಲ ಕೃತಿಯ ಮೇಲೆ ಕಾಮೆಂಟ್ ಮಾಡುವುದು ಅಥವಾ ಟೀಕೆ ಮಾಡುವ ಬದಲಿಗೆ ಅದಕ್ಕೆ ಪರ್ಯಾಯವಾಗಲು ಪ್ರಯತ್ನಿಸುವ ಬಳಕೆಗಳನ್ನು ನ್ಯಾಯಯುತ ಬಳಕೆಗಳೆಂದು ಪರಿಗಣಿಸುವ ಸಾಧ್ಯತೆಯಿಲ್ಲ.
ನ್ಯಾಯಯುತ ಬಳಕೆಯೊಂದಿಗೆ Content ID ಹೇಗೆ ಕೆಲಸ ಮಾಡುತ್ತದೆ?

ಕೃತಿಸ್ವಾಮ್ಯ ಮಾಲೀಕರ ಅನುಮತಿಯಿಲ್ಲದೆ ನೀವು ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ಒಳಗೊಂಡಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದರೆ, ನೀವು Content ID ಕ್ಲೈಮ್ ಅನ್ನು ಎದುರಿಸಬೇಕಾಗಬಹುದು. ಜನಪ್ರಿಯ ಹಾಡುಗಳ ಕಿರು ಬಳಕೆಗಳ ಹಾಗೆ ನೀವು ಕೆಲವೇ ಸೆಕೆಂಡ್‌ಗಳ ಕಾಲ ಬಳಸಿದರೂ ಸಹ, ಈ ಕ್ಲೈಮ್ ನಿಮಗೆ ವೀಡಿಯೊವನ್ನು ಮಾನಿಟೈಸ್ ಮಾಡಲು ಅವಕಾಶ ನೀಡುವುದಿಲ್ಲ.

Content ID ಯಂತಹ ಸ್ವಯಂಚಾಲಿತ ಸಿಸ್ಟಂಗಳಿಗೆ ನ್ಯಾಯಯುತ ಬಳಕೆಯ ಕುರಿತು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅದು, ಪ್ರತ್ಯೇಕ ಪ್ರಕರಣದ ಆಧಾರದಲ್ಲಿ ನ್ಯಾಯಾಲಯಗಳು ಮಾತ್ರ ಕೈಗೊಳ್ಳಬಹುದಾದ ವಸ್ತುನಿಷ್ಠ ನಿರ್ಧಾರವಾಗಿದೆ. ನ್ಯಾಯಯುತ ಬಳಕೆಯ ಕುರಿತು ತೀರ್ಮಾನ ಕೈಗೊಳ್ಳಲು ಅಥವಾ ಕೃತಿಸ್ವಾಮ್ಯದ ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸಲು ನಮಗೆ ಸಾಧ್ಯವಿಲ್ಲದಿದ್ದರೂ, YouTube ನಲ್ಲಿ ನ್ಯಾಯಯುತ ಬಳಕೆಯು ಅಸ್ತಿತ್ವದಲ್ಲಿರಬಹುದು. ನಿಮ್ಮ ವೀಡಿಯೊ ನ್ಯಾಯಯುತ ಬಳಕೆಯ ಸಿದ್ಧಾಂತದ ಅಡಿಯಲ್ಲಿ ಬರುತ್ತದೆ ಎಂದು ನೀವು ಭಾವಿಸಿದರೆ, Content ID ವಿವಾದ ಪ್ರಕ್ರಿಯೆಯ ಮೂಲಕ ನಿಮ್ಮ ನಿಲುವನ್ನು ನೀವು ಸಮರ್ಥಿಸಿಕೊಳ್ಳಬಹುದು. ಈ ತೀರ್ಮಾನವನ್ನು ಲಘುವಾಗಿ ಪರಿಗಣಿಸಬಾರದು. ಕೆಲವೊಮ್ಮೆ, ಆ ವಿವಾದವನ್ನು ನೀವು ಮೇಲ್ಮನವಿ ಹಾಗೂ DMCA ಪ್ರತಿವಾದಿ ನೋಟಿಫಿಕೇಶನ್ ಪ್ರಕ್ರಿಯೆಗೂ ಒಳಪಡಿಸಬೇಕಾಗಬಹುದು.

ವಿವಾದಕ್ಕೆ ಒಳಪಟ್ಟ ವೀಡಿಯೊವನ್ನು ನೀವು ಹಾಗೂ ಕ್ಲೇಮುದಾರರು - ಇಬ್ಬರೂ ಕೂಡಾ ಮಾನಿಟೈಸ್ ಮಾಡಲು ಪ್ರಯತ್ನಿಸುತ್ತಿದ್ದರೆ, ವಿವಾದವನ್ನು ಬಗೆಹರಿಸುವವರೆಗೆ ಈ ವೀಡಿಯೊವನ್ನು ಮಾನಿಟೈಸ್ ಮಾಡುವುದನ್ನು ಮುಂದುವರಿಸಲಾಗುತ್ತದೆ. ಆನಂತರ, ಸಂಗ್ರಹಿಸಲಾದ ಗಳಿಕೆಗಳನ್ನು ನಾವು ಸೂಕ್ತ ಪಕ್ಷಕ್ಕೆ ಪಾವತಿಸುತ್ತೇವೆ.  

ವಿವಾದ ಸಲ್ಲಿಕೆ ಪ್ರಕ್ರಿಯೆಯ ಹೊರಗೆ ಕ್ಲೇಮ್‌ಗಳನ್ನು ಬಗೆಹರಿಸಲು ನಿಮಗಿರುವ ಆಯ್ಕೆಗಳು

Content ID ಕ್ಲೈಮ್‌ಗಳನ್ನು ನಿಭಾಯಿಸಲು ಅತ್ಯಂತ ಸುಲಭವಾದ ವಿಧಾನವೆಂದರೆ, ಮೊತ್ತಮೊದಲು ಅವುಗಳನ್ನು ದೂರವಿಡುವುದು. ನಿಮ್ಮ ವೀಡಿಯೊಗೆ ತೀರಾ ಅವಶ್ಯಕವಲ್ಲದಿದ್ದರೆ, ಕೃತಿಸ್ವಾಮ್ಯಕ್ಕೊಳಪಟ್ಟ ವಿಷಯವನ್ನು ಬಳಸಬೇಡಿ. ನಿಮ್ಮ ವೀಡಿಯೊಗಳಲ್ಲಿ ಬಳಸುವುದಕ್ಕಾಗಿ ಶುಲ್ಕವಿಲ್ಲದಿರುವ ಸಂಗೀತಕ್ಕಾಗಿ YouTube ಆಡಿಯೋ ಲೈಬ್ರರಿಯನ್ನು ನೋಡಿ. ಇತರ ರಾಯಲ್ಟಿ-ಫ್ರೀ ಅಥವಾ ಪರವಾನಗಿ ಸೈಟ್‌ಗಳಿಂದ ನೀವು ಸಂಗೀತವನ್ನು ಪಡೆಯಲು ಆಯ್ಕೆ ಮಾಡಿದರೆ, ನಿಯಮಗಳು ಮತ್ತು ನಿಬಂಧನೆಗಳನ್ನು ಎಚ್ಚರಿಕೆಯಿಂದ ಓದಲು ಮರೆಯಬೇಡಿ. ಇವುಗಳಲ್ಲಿ ಕೆಲವೊಂದು ಸೇವೆಗಳು YouTube ನಲ್ಲಿನ ಸಂಗೀತವನ್ನು ಬಳಸಲು ಅಥವಾ ಮಾನಿಟೈಸ್ ಮಾಡಲು ಹಕ್ಕುಗಳನ್ನು ನೀಡದಿರಬಹುದು, ಆದ್ದರಿಂದ ನೀವು Content ID ಕ್ಲೈಮ್‌ಗೆ ಒಳಪಡುವ ಸಾಧ್ಯತೆಯಿದೆ.

ನಿಮ್ಮ ವೀಡಿಯೊಗೆ ಅಗತ್ಯವಿಲ್ಲದ ಸಂಗೀತಕ್ಕಾಗಿ ನೀವು Content ID ಕ್ಲೈಮ್ ಅನ್ನು ಸ್ವೀಕರಿಸಿದರೆ, ಅದನ್ನು ತೆಗೆದುಹಾಕಲು ಪ್ರಯತ್ನಿಸಿ ಅಥವಾ ಆಡಿಯೋ ಲೈಬ್ರರಿಯಿಂದ ಕೃತಿಸ್ವಾಮ್ಯ-ಸುರಕ್ಷಿತ ಟ್ರ್ಯಾಕ್‌ಗಳೊಂದಿಗೆ ಅದನ್ನು ಬದಲಿಸಿ ನೋಡಿ. ಕ್ಲೈಮ್ ಮಾಡಿದ ಕಂಟೆಂಟ್ ಅನ್ನು ಒಳಗೊಂಡಿರದ ವೀಡಿಯೊದ ಸಂಪೂರ್ಣ ಹೊಸ ಎಡಿಟ್ ಅನ್ನು ನೀವು ಹೊಸ URL ನಲ್ಲಿ ಅಪ್‌ಲೋಡ್ ಮಾಡಬಹುದು.

ಈ ಸಂದರ್ಭಗಳಲ್ಲಿ ನನಗೆ ನ್ಯಾಯಯುತ ಬಳಕೆಯ ರಕ್ಷಣೆ ದೊರೆಯುತ್ತದೆಯೇ...

ನಾನು ಕೃತಿಸ್ವಾಮ್ಯ ಮಾಲೀಕರಿಗೆ ಕ್ರೆಡಿಟ್ ನೀಡಿದ್ದರೆ?

ನ್ಯಾಯಯುತ ಬಳಕೆಯ ವಿಶ್ಲೇಷಣೆಯಲ್ಲಿ ಪರಿವರ್ತನೀಯತೆಯು ಸಾಮಾನ್ಯವಾಗಿ ಪ್ರಮುಖ ವಿಚಾರವಾಗಿರುತ್ತದೆ. ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೃತಿಯ ಮಾಲೀಕರಿಗೆ ಕ್ರೆಡಿಟ್ ನೀಡಿದ ಮಾತ್ರಕ್ಕೆ, ಅದು ಅವರ ವಿಷಯದ ಪರಿವರ್ತನೀಯವಲ್ಲದ ಪ್ರತಿಯನ್ನು ನ್ಯಾಯಯುತ ಬಳಕೆಗೆ ಬದಲಾಯಿಸುವುದಿಲ್ಲ. “ಎಲ್ಲಾ ಹಕ್ಕುಗಳು ಲೇಖಕರಿಗೆ ಸೇರಿವೆ” ಮತ್ತು “ನಾನು ಮಾಲೀಕತ್ವ ಹೊಂದಿಲ್ಲ” ಎಂಬಂತಹ ನುಡಿಗಟ್ಟುಗಳನ್ನು ಸೇರಿಸಿದರೆ, ಅದು ಸ್ವಯಂಚಾಲಿತವಾಗಿ ವಿಷಯದ ನ್ಯಾಯಯುತ ಬಳಕೆ ಅನಿಸಿಕೊಳ್ಳುವುದಿಲ್ಲ. ನೀವು ಕೃತಿಸ್ವಾಮ್ಯ ಮಾಲೀಕರ ಅನುಮತಿಯನ್ನು ಹೊಂದಿದ್ದೀರಿ ಎಂದೂ ಸಹ ಅರ್ಥವಲ್ಲ.

ನನ್ನ ವೀಡಿಯೊದಲ್ಲಿ ನಾನು ಹಕ್ಕು ನಿರಾಕರಣೆಯನ್ನು ಪೋಸ್ಟ್ ಮಾಡಿದ್ದರೆ?
ನೀವು ಬೇರೆ ಯಾರದೋ ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೃತಿಯನ್ನು ಬಳಸಿದಾಗ, ನ್ಯಾಯಯುತ ಬಳಕೆಯನ್ನು ಸ್ವಯಂಚಾಲಿತವಾಗಿ ಅನ್ವಯಿಸಲು ಯಾವುದೇ ಮ್ಯಾಜಿಕ್ ಪದಗಳಿಲ್ಲ. “ಉಲ್ಲಂಘನೆಯ ಉದ್ದೇಶವಿಲ್ಲ” ಎಂಬ ನುಡಿಗಟ್ಟನ್ನು ಸೇರಿಸುವುದು, ಕೃತಿಸ್ವಾಮ್ಯ ಉಲ್ಲಂಘನೆಯ ಕ್ಲೈಮ್‌ನಿಂದ ನಿಮ್ಮನ್ನು ಸ್ವಯಂಚಾಲಿತವಾಗಿ ರಕ್ಷಿಸುವುದಿಲ್ಲ.
ನಾನು ಕಂಟೆಂಟ್ ಅನ್ನು "ಮನರಂಜನೆ" ಅಥವಾ "ಲಾಭರಹಿತ" ಉದ್ದೇಶಗಳಿಗಾಗಿ ಬಳಸುತ್ತಿದ್ದರೆ?

ನಿಮ್ಮ ಬಳಕೆಯು ನ್ಯಾಯಯುತವೇ ಎಂದು ಪರಿಶೀಲನೆ ನಡೆಸುವಾಗ ನ್ಯಾಯಾಲಯಗಳು ಆ ಬಳಕೆಯ ಉದ್ದೇಶವನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತವೆ. ನಿಮ್ಮ ಅಪ್‌ಲೋಡ್, ಉದಾಹರಣೆಗೆ, “ಮನರಂಜನೆಯ ಉದ್ದೇಶಗಳಿಗೆ ಮಾತ್ರ” ಎಂದು ಪ್ರಕಟಿಸುವುದು, ನ್ಯಾಯಯುತ ಬಳಕೆಯ ತಕ್ಕಡಿಯು ನಿಮ್ಮ ಕಡೆಗೆ ತೂಗುವಂತೆ ಮಾಡುವ ಸಾಧ್ಯತೆಯಿಲ್ಲ. ಇದೇ ರೀತಿ, ನ್ಯಾಯಯುತ ಬಳಕೆಯ ವಿಶ್ಲೇಷಣೆಯಲ್ಲಿ “ಲಾಭರಹಿತ” ಬಳಕೆಗಳ ಕುರಿತು ಒಲವು ತೋರಲಾಗುತ್ತದೆ, ಆದರೆ ಅದು ತಾನಾಗಿ ಒಂದು ರಕ್ಷಣಾ ಕ್ರಮವಾಗಿರುವುದಿಲ್ಲ.

ನಾನು ಬೇರೆ ಯಾರದೋ ಕೃತಿಸ್ವಾಮ್ಯಕ್ಕೆ ಒಳಪಟ್ಟ ಕೃತಿಗೆ ನಾನೇ ರಚಿಸಿದ ಮೂಲ ವಿಷಯವನ್ನು ಸೇರಿಸಿದ್ದರೆ?
ನೀವು ಬೇರೆ ಯಾರದೋ ಕಂಟೆಂಟ್‌ಗೆ ಏನನ್ನೋ ಸೇರಿಸಿದ್ದರೂ ಸಹ, ನಿಮ್ಮ ಬಳಕೆಯನ್ನು ಈಗಲೂ ನ್ಯಾಯಯುತ ಬಳಕೆ ಎಂದು ಪರಿಗಣಿಸದಿರಬಹುದು. ನಿಮ್ಮ ರಚನೆಯು ಮೂಲ ಕೃತಿಗೆ ಹೊಸ ಅಭಿವ್ಯಕ್ತಿ, ಅರ್ಥ ಅಥವಾ ಸಂದೇಶವನ್ನು ಸೇರಿಸದಿದ್ದರೆ, ಅದು ಬಹುಶಃ ನ್ಯಾಯಯುತ ಬಳಕೆಯಾಗಿರುವುದಿಲ್ಲ. ಇಲ್ಲಿ ಚರ್ಚಿಸಿದ ಇತರ ಸಂಗತಿಗಳಂತೆಯೇ, ಮೂಲ ಕೃತಿಯ ಎಷ್ಟು ಪ್ರಮಾಣವನ್ನು ಬಳಸಲಾಗಿದೆ ಎಂಬುದೂ ಸೇರಿದಂತೆ ನ್ಯಾಯಯುತ ಬಳಕೆ ಪರೀಕ್ಷೆಯ ಎಲ್ಲಾ ನಾಲ್ಕು ಆಯಾಮಗಳನ್ನು ನ್ಯಾಯಾಲಯಗಳು ಪರಿಗಣಿಸುತ್ತವೆ.
ನಾನು ಯು.ಎಸ್‌ನ ಹೊರಗೆ ವಾಸಿಸುತ್ತಿದ್ದರೆ?
ಕೃತಿಸ್ವಾಮ್ಯ ವಿನಾಯಿತಿಗಳಿಗೆ ಸಂಬಂಧಿಸಿದ ನಿಯಮಗಳು ಪ್ರಪಂಚದಾದ್ಯಂತ ಹೆಚ್ಚಾಗಿ ಸಮಾನವಾಗಿದ್ದರೂ, ಅವುಗಳಲ್ಲಿ ವ್ಯತ್ಯಾಸವೂ ಇರಬಹುದು. ಕೃತಿಸ್ವಾಮ್ಯ-ಸಂರಕ್ಷಿತ ವಿಷಯವನ್ನು, ಕೃತಿಸ್ವಾಮ್ಯ ಮಾಲೀಕರ ಅನುಮತಿಯಿಲ್ಲದೆ ಯಾವಾಗ ಬಳಸಬಹುದು ಎಂಬ ಕುರಿತು ವಿವಿಧ ದೇಶಗಳು ಹಾಗೂ ಪ್ರದೇಶಗಳು ವಿವಿಧ ನಿಯಮಗಳನ್ನು ಹೊಂದಿರಬಹುದು.
ನ್ಯಾಯಾಲಯಗಳು, ಪ್ರತಿ ಪ್ರಕರಣದ ವಾಸ್ತವಾಂಶಗಳನ್ನು ಆಧರಿಸಿ, ನ್ಯಾಯಯುತ ಬಳಕೆಯ ಪ್ರಕರಣಗಳ ಕುರಿತು ತೀರ್ಮಾನ ಕೈಗೊಳ್ಳುತ್ತವೆ. ಕೃತಿಸ್ವಾಮ್ಯ-ಸಂರಕ್ಷಿತ ವಿಷಯವಸ್ತುವನ್ನು ಒಳಗೊಂಡಿರುವ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಮೊದಲು ತಜ್ಞರಿಂದ ಕಾನೂನು ಸಲಹೆಯನ್ನು ಪಡೆದುಕೊಳ್ಳಲು ನೀವು ಬಹುಶಃ ಬಯಸಬಹುದು.

ಹೆಚ್ಚಿನ ಮಾಹಿತಿ

ನ್ಯಾಯಯುತ ಬಳಕೆಯ ಕುರಿತು ನೀವು ಇನ್ನಷ್ಟು ತಿಳಿಯಲು ಬಯಸುತ್ತೀರಿ ಎಂದಾದರೆ, ಆನ್‌ಲೈನ್‌ನಲ್ಲಿ ಅನೇಕ ಸಂಪನ್ಮೂಲಗಳು ಲಭ್ಯವಿವೆ. ಈ ಕೆಳಗಿನ ಸೈಟ್‌ಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಇವೆ ಮತ್ತು YouTube ನಿಂದ ಅನುಮೋದಿತವಾಗಿಲ್ಲ:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5069618824524912256
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false