YouTube Giving ಬಳಸಿಕೊಂಡು ಲಾಭರಹಿತ ಸಂಸ್ಥೆಗಳಿಗಾಗಿ ನಿಧಿಸಂಗ್ರಹ ಮಾಡಿ

ಲಾಭರಹಿತ ಸಂಸ್ಥೆಗಳು YouTube ನಲ್ಲಿ ಕೆಲವು ವಿಭಿನ್ನ ವಿಧಾನಗಳಲ್ಲಿ ನಿಧಿಸಂಗ್ರಹ ಮಾಡಬಹುದು. YouTube Giving ಗೆ ಆ್ಯಕ್ಸೆಸ್ ಹೊಂದಿರುವ ಚಾನಲ್‌ಗಳು ದೇಣಿಗೆ ಬಟನ್‌ನ ಮೂಲಕ ಯು.ಎಸ್‍ನಲ್ಲಿ ಅರ್ಹ ಲಾಭರಹಿತ ಸಂಸ್ಥೆಗಳಿಗಾಗಿ ನಿಧಿಸಂಗ್ರಹ ಮಾಡಬಹುದು. 

ಲಾಭರಹಿತ ಸಂಸ್ಥೆಯ ಅರ್ಹತೆ FAQ ಗಳು

ನಾನೊಂದು ಲಾಭರಹಿತ ಸಂಸ್ಥೆ. ನನ್ನದೇ YouTube ಚಾನಲ್‌ನಲ್ಲಿ ನಾನು ನಿಧಿಸಂಗ್ರಹ ಮಾಡಬಹುದೇ?

YouTube Giving ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡಲು, ನಿಮ್ಮ ಚಾನಲ್ ನಿರ್ದಿಷ್ಟ ಇರಬೇಕಾದ ಅರ್ಹತೆಗಳನ್ನು ಪೂರೈಸಬೇಕು.

YouTube Giving ಮೂಲಕ YouTube ರಚನೆಕಾರರು ನಿಧಿಸಂಗ್ರಹ ಮಾಡುವುದಕ್ಕಾಗಿ ನನ್ನ ಲಾಭರಹಿತ ಸಂಸ್ಥೆಯು ಅರ್ಹವಾಗಿದೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ನಾನು ಅದನ್ನು ಹೇಗೆ ಮಾಡಬಹುದು?

YouTube Giving ಮೂಲಕ ಅರ್ಹ ರಚನೆಕಾರರು ನಿಮ್ಮ ಲಾಭರಹಿತ ಸಂಸ್ಥೆಗಾಗಿ ಹಣ ಸಂಗ್ರಹಿಸಬಹುದು. ಲಾಭರಹಿತ ಸಂಸ್ಥೆಯು YouTube Giving ನಿಧಿಸಂಗ್ರಹದಿಂದ ಹಣ ಪಡೆಯಲು ಅರ್ಹವಾಗಬೇಕಾದರೆ:
  • ರಚನೆಕಾರರು ಅದನ್ನು ವಿನಂತಿಸಿರಬೇಕು.
  • ಅದು ಯು.ಎಸ್-ನೋಂದಾಯಿತ 501(c)(3) ಸಾರ್ವಜನಿಕ ದತ್ತಿ ಸಂಸ್ಥೆಯಾಗಿರಬೇಕು.
  • Google for Nonprofits ನ ಸದಸ್ಯನಾಗಿರಬೇಕು.
  • GuideStar ಮೂಲಕ ಆನ್‌ಲೈನ್ ನಿಧಿಸಂಗ್ರಹವನ್ನು ಆಯ್ಕೆ ಮಾಡಿಕೊಂಡಿರಬೇಕು.
  • YouTube ನಲ್ಲಿ ಮತ್ತು ಅದರ ಹೊರಗೆ YouTube ನ ಮಾನಿಟೈಸೇಶನ್ ನೀತಿಗಳನ್ನು ಅನುಸರಿಸಬೇಕು. YouTube ನ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಸಹ ಇದು ಒಳಗೊಂಡಿದೆ.
YouTube Giving ಕುರಿತು ಇನ್ನಷ್ಟು ತಿಳಿಯಿರಿ. 

ನನ್ನ ಲಾಭರಹಿತ ಸಂಸ್ಥೆಯು YouTube Giving ಗೆ ಅರ್ಹವಾಗಿದೆ ಆದರೆ ಅದನ್ನು ಹುಡುಕಲು ಅಥವಾ ವಿನಂತಿಸಲು ಸಾಧ್ಯವಾಗುತ್ತಿಲ್ಲ. ಅದೇಕೆ?

YouTube Giving ನಿಧಿಸಂಗ್ರಹದಿಂದ ಹಣ ಸ್ವೀಕರಿಸಲು ಅರ್ಹವಾಗಬೇಕಾದರೆ, ಲಾಭರಹಿತ ಸಂಸ್ಥೆಯು ಲಾಭರಹಿತ ಸಂಸ್ಥೆಯ ಅರ್ಹತೆಯ ಮಾನದಂಡವನ್ನು ಪೂರೈಸಬೇಕು. 
 
ನೀವು ಹುಡುಕುತ್ತಿರುವ ಲಾಭರಹಿತ ಸಂಸ್ಥೆಯು ವಿನಂತಿ ಪರಿಕರದಲ್ಲಿ ಕಾಣಿಸದಿರಲು ಕಾರಣವಾಗಿರಬಹುದಾದ ಕೆಲವು ಸಂಗತಿಗಳನ್ನು ಕೆಳಗೆ ಕೊಡಲಾಗಿದೆ:
  • ನಿಮ್ಮ ಲಾಭರಹಿತ ಸಂಸ್ಥೆಯು ಆನ್‌ಲೈನ್ ನಿಧಿಸಂಗ್ರಹ ಆಯ್ಕೆಯಿಂದ ಹೊರಗುಳಿದಿದೆ. ಜನರು ತಮಗಾಗಿ ಆನ್‌ಲೈನ್‌ನಲ್ಲಿ ನಿಧಿಸಂಗ್ರಹ ಮಾಡಲು ಲಾಭರಹಿತ ಸಂಸ್ಥೆಗಳು ಸಮ್ಮತಿಸಬೇಕು. ಥರ್ಡ್ ಪಾರ್ಟಿ ದೇಣಿಗೆಗಳನ್ನು ಸ್ವೀಕರಿಸಲು ಸಕ್ರಿಯಗೊಳಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
  • ನಿಮ್ಮ ಲಾಭರಹಿತ ಸಂಸ್ಥೆಯು ಬೇರೆ ಯಾವುದೋ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದೆ. YouTube Giving, GuideStar ನಿಂದ ಲಾಭರಹಿತ ಸಂಸ್ಥೆಯ ಹೆಸರಿನ ಡೇಟಾವನ್ನು ಬಳಸುತ್ತದೆ. ವಿನಂತಿ ಪರಿಕರದಲ್ಲಿ EIN ಬಳಸಿಕೊಂಡು ಹುಡುಕಲು ಪ್ರಯತ್ನಿಸಿ. 
  • ನಿಮ್ಮ ಲಾಭರಹಿತ ಸಂಸ್ಥೆಯು Google for Nonprofits ನ ಭಾಗವಾಗಿಲ್ಲ. ಲಾಭರಹಿತ ಸಂಸ್ಥೆಯು Google for Nonprofits ಖಾತೆಯನ್ನು ವಿನಂತಿಸಿಕೊಳ್ಳಬಹುದು.
  • ನಿಮ್ಮ ಲಾಭರಹಿತ ಸಂಸ್ಥೆಯು Guidestar ನೋಂದಾಯಿತ ಯು.ಎಸ್-ಮೂಲಕ 501(c)(3) ಲಾಭರಹಿತ ಸಂಸ್ಥೆಯಾಗಿಲ್ಲ. guidestar.org ನಲ್ಲಿ ಲಾಭರಹಿತ ಸಂಸ್ಥೆಯನ್ನು ಹುಡುಕಿ, ಅವರು ಅಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ನನ್ನ ಲಾಭರಹಿತ ಸಂಸ್ಥೆಯು ಯುನೈಟೆಡ್ ಸ್ಟೇಟ್ಸ್‌ನ ಹೊರಗಿದೆ. ರಚನೆಕಾರರು ನನ್ನ ಲಾಭರಹಿತ ಸಂಸ್ಥೆಗಾಗಿ ನಿಧಿಸಂಗ್ರಹ ಮಾಡಬಹುದೇ?

YouTube Giving ನಿಧಿಸಂಗ್ರಹವು ಅರ್ಹತೆಯ ಮಾನದಂಡವನ್ನು ಪೂರೈಸುವ ಯು.ಎಸ್ ಲಾಭರಹಿತ ಸಂಸ್ಥೆಗಳಿಗೆ ಮಾತ್ರ ಲಭ್ಯವಿದೆ. ನಿಮ್ಮ ಲಾಭರಹಿತ ಸಂಸ್ಥೆಯು ಅರ್ಹವಾಗಿರದಿದ್ದರೆ, YouTube ನಲ್ಲಿ ನಿಧಿಸಂಗ್ರಹ ಮಾಡಲು ಇತರ ಕೆಲವು ವಿಧಾನಗಳು ಇಲ್ಲಿವೆ.

Google for Nonprofits ಎಂದರೇನು ಮತ್ತು ಒಂದು ಖಾತೆಗಾಗಿ ನಾನು ಹೇಗೆ ವಿನಂತಿಸಿಕೊಳ್ಳಬಹುದು?

YouTube Giving ನಿಧಿಸಂಗ್ರಹದಿಂದ ಹಣ ಸ್ವೀಕರಿಸಲು ಅರ್ಹವಾಗಬೇಕಾದರೆ, ಲಾಭರಹಿತ ಸಂಸ್ಥೆಯು Google for Nonprofits ನಲ್ಲಿ ಖಾತೆಯನ್ನು ಹೊಂದಿರಬೇಕು. Google for Nonprofits ಕುರಿತು ಮತ್ತು ಖಾತೆಗಾಗಿ ವಿನಂತಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ. 

YouTube Giving ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ದೇಣಿಗೆ ವಿತರಿಸುವಿಕೆಯ ಕುರಿತು FAQ ಗಳು

YouTube Giving ಮೂಲಕ ಸಂಗ್ರಹಿಸಲಾದ ದೇಣಿಗೆಗಳನ್ನು ನನ್ನ ಲಾಭರಹಿತ ಸಂಸ್ಥೆಯು ಹೇಗೆ ಪಡೆಯುತ್ತದೆ?

Google ನ ವಿನಂತಿಯ ಮೇರೆಗೆ ದೇಣಿಗೆಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು Network for Good ನೊಂದಿಗೆ Google ಪಾಲುದಾರಿಕೆ ಹೊಂದಿದೆ. ದೇಣಿಗೆಗಳನ್ನು ಪಡೆಯುವುದಕ್ಕಾಗಿ, Network for Good ನಿಂದ ಹಣ ಸ್ವೀಕರಿಸಲು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.  

ದೇಣಿಗೆಯ 100% ಲಾಭರಹಿತ ಸಂಸ್ಥೆಯನ್ನು ತಲುಪುತ್ತದೆ ಮತ್ತು ವಹಿವಾಟು ಶುಲ್ಕವನ್ನು YouTube ಪಾವತಿಸುತ್ತದೆ. ಯು.ಎಸ್ IRS ನ ಅವಶ್ಯಕತೆಯ ಪ್ರಕಾರ, ದೇಣಿಗೆಗಳನ್ನು ಸ್ವೀಕರಿಸಿದ ನಂತರ Network for Good, ದೇಣಿಗೆಗಳ ಮೇಲೆ ವಿಶೇಷ ಕಾನೂನು ನಿಯಂತ್ರಣವನ್ನು ಹೊಂದಿರುತ್ತದೆ. YouTube ರಚನೆಕಾರರು ಆಯ್ಕೆ ಮಾಡಿದ ಲಾಭರಹಿತ ಸಂಸ್ಥೆಗೆ ನಿಧಿಗಳನ್ನು ವಿತರಿಸಲು Network for Good ಗೆ ಸಾಧ್ಯವಾಗದಿದ್ದರೆ, Network for Good ಆ ನಿಧಿಗಳನ್ನು ಒಂದು ಪರ್ಯಾಯ, ಅರ್ಹ ಯು.ಎಸ್ ಲಾಭರಹಿತ ಸಂಸ್ಥೆಗೆ ವಿತರಿಸುತ್ತದೆ. Network for Good ವಿತರಿಸುವಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ದೇಣಿಗೆಯ ಪಾವತಿಗಳನ್ನು ಸ್ವೀಕರಿಸುವುದನ್ನು ನನ್ನ ಲಾಭರಹಿತ ಸಂಸ್ಥೆಯು ಹೇಗೆ ಸಕ್ರಿಯಗೊಳಿಸಬೇಕು?

ನೀವು ಪ್ರಾರಂಭಿಸುವ ಮೊದಲು: Network for Good ನಿಂದ ನಿಧಿಗಳನ್ನು ಪಡೆಯಲು ನಿಮ್ಮ ಸಂಸ್ಥೆಯು ಅರ್ಹವಾಗಿದೆಯೇ ಎಂದು ನೋಡಲು ಅವರ ಡೇಟಾಬೇಸ್‌ನಲ್ಲಿ ಹುಡುಕಿ.
GuideStar ನ ಮೂಲಕ ಥರ್ಡ್ ಪಾರ್ಟಿ ದೇಣಿಗೆಗಳನ್ನು ಸ್ವೀಕರಿಸುವುದನ್ನು ಸಕ್ರಿಯಗೊಳಿಸಲು ಈ ಸೂಚನೆಗಳನ್ನು ಅನುಸರಿಸಿ.

ಪಾವತಿಯ ಟೈಮಿಂಗ್

ಲಾಭರಹಿತ ಸಂಸ್ಥೆಗಳಿಗೆ ನಿಧಿಗಳನ್ನು ಸಂಗ್ರಹಿಸುವ ಮತ್ತು ವಿತರಿಸುವ, ಯು.ಎಸ್ 501(c)(3) ಹಾಗೂ ದಾನಿಗಳ ಮೂಲಕ ಪಡೆದ ನಿಧಿಯಾಗಿರುವ Network for Good ನ ಮೂಲಕ ದೇಣಿಗೆಗಳನ್ನು ವಿತರಿಸಲಾಗುತ್ತದೆ. ದೇಣಿಗೆಯು ನಿಮ್ಮ ಲಾಭರಹಿತ ಸಂಸ್ಥೆಯನ್ನು ತಲುಪಲು 2 ತಿಂಗಳುಗಳಷ್ಟು ಕಾಲಾವಕಾಶ ಬೇಕಾಗಬಹುದು. $10 ಗಿಂತ ಕಡಿಮೆ ಮೊತ್ತವನ್ನು ಸಂಗ್ರಹಿಸಿದ್ದರೆ, ನಿಧಿಗಳನ್ನು ವಾರ್ಷಿಕವಾಗಿ ವಿತರಿಸಲಾಗುವುದು. ದೇಣಿಗೆ ವಿತರಿಸುವಿಕೆ ಕುರಿತು ಇನ್ನಷ್ಟು ತಿಳಿಯಿರಿ. 

ನಿಮ್ಮ ವಿತರಣೆಗಳನ್ನು ಅಪ್‌ಡೇಟ್ ಮಾಡಿ

YouTube Giving ನಿಧಿಸಂಗ್ರಹದ ಒಂದು ಅವಶ್ಯಕತೆಯೆಂದರೆ Network for Good ನಲ್ಲಿ ಡೈರೆಕ್ಟ್ ಡೆಪಾಸಿಟ್ ಅನ್ನು ಸೆಟ್ ಅಪ್ ಮಾಡಿರುವುದು. ಡೈರೆಕ್ಟ್ ಡೆಪಾಸಿಟ್‌ಗಾಗಿ ನೋಂದಾಯಿಸುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.
IRS ಗೆ ಅಗತ್ಯವಿರುವ ಹಾಗೆ, ದೇಣಿಗೆಯ ಮೊತ್ತವನ್ನು ಸ್ವೀಕರಿಸಿದ ನಂತರ, ಅದರ ಮೇಲೆ Network for Good ಪ್ರತ್ಯೇಕ ಕಾನೂನಾತ್ಮಕ ನಿಯಂತ್ರಣವನ್ನು ಹೊಂದಿರುತ್ತದೆ. YouTube ರಚನೆಕಾರರು ಆಯ್ಕೆ ಮಾಡಿದ ಲಾಭರಹಿತ ಸಂಸ್ಥೆಗೆ ನಿಧಿಗಳನ್ನು ವಿತರಿಸಲು Network for Good ಗೆ ಸಾಧ್ಯವಾಗದಿದ್ದರೆ, Network for Good ಆ ನಿಧಿಗಳನ್ನು ತನ್ನ ವಿವೇಚನೆಯ ಮೇರೆಗೆ ಒಂದು ಪರ್ಯಾಯ, ಅರ್ಹ ಯು.ಎಸ್ ಲಾಭರಹಿತ ಸಂಸ್ಥೆಗೆ ವಿತರಿಸುತ್ತದೆ.

YouTube Giving ನಲ್ಲಿ ಲಾಭರಹಿತ ಸಂಸ್ಥೆಗಳ ಮಾಹಿತಿ FAQ ಗಳು

GuideStar ಪ್ರೊಫೈಲ್ ಎಂದರೇನು?

YouTube Giving ನಿಧಿಸಂಗ್ರಹದಲ್ಲಿ ಲಾಭರಹಿತ ಸಂಸ್ಥೆಯ ಕುರಿತು ಪ್ರದರ್ಶಿಸಲಾಗುವ ಕೆಲವೊಂದು ಮಾಹಿತಿಯನ್ನು (ಹೆಸರು, ಲೋಗೋ, ಇತ್ಯಾದಿ) ನಿಮ್ಮ ಲಾಭರಹಿತ ಸಂಸ್ಥೆಯ GuideStar ಪ್ರೊಫೈಲ್‌ನಿಂದ ತೆಗೆದುಕೊಳ್ಳಲಾಗಿರುತ್ತದೆ. ನಿಮ್ಮ ಸಂಸ್ಥೆಗಾಗಿ ಹೊಸ GuideStar ಪ್ರೊಫೈಲ್ ಅನ್ನು ರಚಿಸುವುದು ಅಥವಾ ಅಸ್ತಿತ್ವದಲ್ಲಿರುವ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಲಾಭರಹಿತ ಸಂಸ್ಥೆಯ ಲೋಗೋವನ್ನು ನಾನು ಹೇಗೆ ಅಪ್‌ಡೇಟ್ ಮಾಡಬಹುದು?

ಚಾನಲ್, ದೇಣಿಗೆ ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡಿದಾಗ, ಅವರು GuideStar ನಲ್ಲಿ ಸ್ಟ್ಯಾಂಡರ್ಡ್ ಲೋಗೋಗಳು ಮತ್ತು ಲಾಭರಹಿತ ಸಂಸ್ಥೆಯ ಲೋಗೋದ ನಡುವೆ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಲಾಭರಹಿತ ಸಂಸ್ಥೆಯ GuideStar ಪ್ರೊಫೈಲ್‌ಗೆ ಸಂಬಂಧಿಸಿದ ಲೋಗೋವನ್ನು ಸೇರಿಸುವುದು, ತೆಗೆದುಹಾಕುವುದು ಅಥವಾ ಎಡಿಟ್ ಮಾಡುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಲಾಭರಹಿತ ಸಂಸ್ಥೆಯ ಹೆಸರನ್ನು ನಾನು ಹೇಗೆ ಅಪ್‌ಡೇಟ್ ಮಾಡಬಹುದು?

ನಿಮ್ಮ GuideStar ಪ್ರೊಫೈಲ್‌ನಲ್ಲಿ ಪ್ರದರ್ಶಿಸಲಾಗುವ ನಿಮ್ಮ ಸಂಸ್ಥೆಯ ಹೆಸರನ್ನು ಬದಲಾಯಿಸುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16605720528594291336
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false