ಲಾಭರಹಿತ ಸಂಸ್ಥೆಗಳು YouTube ನಲ್ಲಿ ಕೆಲವು ವಿಭಿನ್ನ ವಿಧಾನಗಳಲ್ಲಿ ನಿಧಿಸಂಗ್ರಹ ಮಾಡಬಹುದು. YouTube Giving ಗೆ ಆ್ಯಕ್ಸೆಸ್ ಹೊಂದಿರುವ ಚಾನಲ್‌ಗಳು ದೇಣಿಗೆ ಬಟನ್‌ನ ಮೂಲಕ ಯು.ಎಸ್‍ನಲ್ಲಿ ಅರ್ಹ ಲಾಭರಹಿತ ಸಂಸ್ಥೆಗಳಿಗಾಗಿ ನಿಧಿಸಂಗ್ರಹ ಮಾಡಬಹುದು.
ಲಾಭರಹಿತ ಸಂಸ್ಥೆಯ ಅರ್ಹತೆ FAQ ಗಳು
ನಾನೊಂದು ಲಾಭರಹಿತ ಸಂಸ್ಥೆ. ನನ್ನದೇ YouTube ಚಾನಲ್‌ನಲ್ಲಿ ನಾನು ನಿಧಿಸಂಗ್ರಹ ಮಾಡಬಹುದೇ?
YouTube Giving ಮೂಲಕ YouTube ರಚನೆಕಾರರು ನಿಧಿಸಂಗ್ರಹ ಮಾಡುವುದಕ್ಕಾಗಿ ನನ್ನ ಲಾಭರಹಿತ ಸಂಸ್ಥೆಯು ಅರ್ಹವಾಗಿದೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ನಾನು ಅದನ್ನು ಹೇಗೆ ಮಾಡಬಹುದು?
- ರಚನೆಕಾರರು ಅದನ್ನು ವಿನಂತಿಸಿರಬೇಕು.
- ಅದು ಯು.ಎಸ್-ನೋಂದಾಯಿತ 501(c)(3) ಸಾರ್ವಜನಿಕ ದತ್ತಿ ಸಂಸ್ಥೆಯಾಗಿರಬೇಕು.
- Google for Nonprofits ನ ಸದಸ್ಯನಾಗಿರಬೇಕು.
- GuideStar ಮೂಲಕ ಆನ್‌ಲೈನ್ ನಿಧಿಸಂಗ್ರಹವನ್ನು ಆಯ್ಕೆ ಮಾಡಿಕೊಂಡಿರಬೇಕು.
- YouTube ನಲ್ಲಿ ಮತ್ತು ಅದರ ಹೊರಗೆ YouTube ನ ಮಾನಿಟೈಸೇಶನ್ ನೀತಿಗಳನ್ನು ಅನುಸರಿಸಬೇಕು. YouTube ನ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಸಹ ಇದು ಒಳಗೊಂಡಿದೆ.
ನನ್ನ ಲಾಭರಹಿತ ಸಂಸ್ಥೆಯು YouTube Giving ಗೆ ಅರ್ಹವಾಗಿದೆ ಆದರೆ ಅದನ್ನು ಹುಡುಕಲು ಅಥವಾ ವಿನಂತಿಸಲು ಸಾಧ್ಯವಾಗುತ್ತಿಲ್ಲ. ಅದೇಕೆ?
ನೀವು ಹುಡುಕುತ್ತಿರುವ ಲಾಭರಹಿತ ಸಂಸ್ಥೆಯು ವಿನಂತಿ ಪರಿಕರದಲ್ಲಿ ಕಾಣಿಸದಿರಲು ಕಾರಣವಾಗಿರಬಹುದಾದ ಕೆಲವು ಸಂಗತಿಗಳನ್ನು ಕೆಳಗೆ ಕೊಡಲಾಗಿದೆ:
- ನಿಮ್ಮ ಲಾಭರಹಿತ ಸಂಸ್ಥೆಯು ಆನ್‌ಲೈನ್ ನಿಧಿಸಂಗ್ರಹ ಆಯ್ಕೆಯಿಂದ ಹೊರಗುಳಿದಿದೆ. ಜನರು ತಮಗಾಗಿ ಆನ್‌ಲೈನ್‌ನಲ್ಲಿ ನಿಧಿಸಂಗ್ರಹ ಮಾಡಲು ಲಾಭರಹಿತ ಸಂಸ್ಥೆಗಳು ಸಮ್ಮತಿಸಬೇಕು. ಥರ್ಡ್ ಪಾರ್ಟಿ ದೇಣಿಗೆಗಳನ್ನು ಸ್ವೀಕರಿಸಲು ಸಕ್ರಿಯಗೊಳಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
- ನಿಮ್ಮ ಲಾಭರಹಿತ ಸಂಸ್ಥೆಯು ಬೇರೆ ಯಾವುದೋ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದೆ. YouTube Giving, GuideStar ನಿಂದ ಲಾಭರಹಿತ ಸಂಸ್ಥೆಯ ಹೆಸರಿನ ಡೇಟಾವನ್ನು ಬಳಸುತ್ತದೆ. ವಿನಂತಿ ಪರಿಕರದಲ್ಲಿ EIN ಬಳಸಿಕೊಂಡು ಹುಡುಕಲು ಪ್ರಯತ್ನಿಸಿ.
- ನಿಮ್ಮ ಲಾಭರಹಿತ ಸಂಸ್ಥೆಯು Google for Nonprofits ನ ಭಾಗವಾಗಿಲ್ಲ. ಲಾಭರಹಿತ ಸಂಸ್ಥೆಯು Google for Nonprofits ಖಾತೆಯನ್ನು ವಿನಂತಿಸಿಕೊಳ್ಳಬಹುದು.
- ನಿಮ್ಮ ಲಾಭರಹಿತ ಸಂಸ್ಥೆಯು Guidestar ನೋಂದಾಯಿತ ಯು.ಎಸ್-ಮೂಲಕ 501(c)(3) ಲಾಭರಹಿತ ಸಂಸ್ಥೆಯಾಗಿಲ್ಲ. guidestar.org ನಲ್ಲಿ ಲಾಭರಹಿತ ಸಂಸ್ಥೆಯನ್ನು ಹುಡುಕಿ, ಅವರು ಅಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನನ್ನ ಲಾಭರಹಿತ ಸಂಸ್ಥೆಯು ಯುನೈಟೆಡ್ ಸ್ಟೇಟ್ಸ್‌ನ ಹೊರಗಿದೆ. ರಚನೆಕಾರರು ನನ್ನ ಲಾಭರಹಿತ ಸಂಸ್ಥೆಗಾಗಿ ನಿಧಿಸಂಗ್ರಹ ಮಾಡಬಹುದೇ?
Google for Nonprofits ಎಂದರೇನು ಮತ್ತು ಒಂದು ಖಾತೆಗಾಗಿ ನಾನು ಹೇಗೆ ವಿನಂತಿಸಿಕೊಳ್ಳಬಹುದು?
YouTube Giving ನಿಧಿಸಂಗ್ರಹವನ್ನು ಸೆಟ್ ಅಪ್ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ದೇಣಿಗೆ ವಿತರಿಸುವಿಕೆಯ ಕುರಿತು FAQ ಗಳು
YouTube Giving ಮೂಲಕ ಸಂಗ್ರಹಿಸಲಾದ ದೇಣಿಗೆಗಳನ್ನು ನನ್ನ ಲಾಭರಹಿತ ಸಂಸ್ಥೆಯು ಹೇಗೆ ಪಡೆಯುತ್ತದೆ?
Google ನ ವಿನಂತಿಯ ಮೇರೆಗೆ ದೇಣಿಗೆಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು Network for Good ನೊಂದಿಗೆ Google ಪಾಲುದಾರಿಕೆ ಹೊಂದಿದೆ. ದೇಣಿಗೆಗಳನ್ನು ಪಡೆಯುವುದಕ್ಕಾಗಿ, Network for Good ನಿಂದ ಹಣ ಸ್ವೀಕರಿಸಲು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ದೇಣಿಗೆಯ 100% ಲಾಭರಹಿತ ಸಂಸ್ಥೆಯನ್ನು ತಲುಪುತ್ತದೆ ಮತ್ತು ವಹಿವಾಟು ಶುಲ್ಕವನ್ನು YouTube ಪಾವತಿಸುತ್ತದೆ. ಯು.ಎಸ್ IRS ನ ಅವಶ್ಯಕತೆಯ ಪ್ರಕಾರ, ದೇಣಿಗೆಗಳನ್ನು ಸ್ವೀಕರಿಸಿದ ನಂತರ Network for Good, ದೇಣಿಗೆಗಳ ಮೇಲೆ ವಿಶೇಷ ಕಾನೂನು ನಿಯಂತ್ರಣವನ್ನು ಹೊಂದಿರುತ್ತದೆ. YouTube ರಚನೆಕಾರರು ಆಯ್ಕೆ ಮಾಡಿದ ಲಾಭರಹಿತ ಸಂಸ್ಥೆಗೆ ನಿಧಿಗಳನ್ನು ವಿತರಿಸಲು Network for Good ಗೆ ಸಾಧ್ಯವಾಗದಿದ್ದರೆ, Network for Good ಆ ನಿಧಿಗಳನ್ನು ಒಂದು ಪರ್ಯಾಯ, ಅರ್ಹ ಯು.ಎಸ್ ಲಾಭರಹಿತ ಸಂಸ್ಥೆಗೆ ವಿತರಿಸುತ್ತದೆ. Network for Good ವಿತರಿಸುವಿಕೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.