ಟ್ರೇಡ್‌ಮಾರ್ಕ್

ಟ್ರೇಡ್‌ಮಾರ್ಕ್ ಎಂಬುದು ಉತ್ಪನ್ನದ ಮೂಲವನ್ನು ಗುರುತಿಸುವ ಮತ್ತು ಅದನ್ನು ಇತರ ಉತ್ಪನ್ನಗಳಿಂದ ವಿಭಿನ್ನಗೊಳಿಸುವ ಪದ, ಸಂಕೇತ ಅಥವಾ ಸಂಯೋಜನೆಯಾಗಿದೆ. ಕಂಪನಿ ಅಥವಾ ಇತರ ಘಟಕವು ಕಾನೂನು ಪ್ರಕ್ರಿಯೆಯ ಮೂಲಕ ಟ್ರೇಡ್‌ಮಾರ್ಕ್ ಅನ್ನು ಪಡೆದುಕೊಳ್ಳುತ್ತದೆ. ಅದನ್ನು ಪಡೆದುಕೊಂಡ ಬಳಿಕ, ಆ ಸರಕುಗಳಿಗೆ ಸಂಬಂಧಪಟ್ಟಂತೆ ಟ್ರೇಡ್‌ಮಾರ್ಕ್ ಅನ್ನು ಬಳಸಲು, ಅದು ಮಾಲೀಕರಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ.

ಟ್ರೇಡ್‌ಮಾರ್ಕ್ ಉಲ್ಲಂಘನೆ ಎಂದರೆ ಆ ಉತ್ಪನ್ನದ ಮೂಲದ ಕುರಿತು ಗೊಂದಲ ಉಂಟಾಗಬಹುದಾದಂತಹ ರೀತಿಯಲ್ಲಿ ಟ್ರೇಡ್‌ಮಾರ್ಕ್ ಅನ್ನು ತಪ್ಪಾಗಿ ಅಥವಾ ಅನಧಿಕೃತವಾಗಿ ಬಳಸುವುದು. ಟ್ರೇಡ್‌ಮಾರ್ಕ್‌ಗಳನ್ನು ಉಲ್ಲಂಘಿಸುವ ವೀಡಿಯೊಗಳು ಹಾಗೂ ಚಾನಲ್‌ಗಳನ್ನು YouTube ನೀತಿಗಳು ನಿಷೇಧಿಸುತ್ತವೆ. ನಿಮ್ಮ ಕಂಟೆಂಟ್, ಗೊಂದಲ ಉಂಟುಮಾಡಬಹುದಾದಂತಹ ರೀತಿಯಲ್ಲಿ ಬೇರೆ ಯಾರದಾದರೂ ಟ್ರೇಡ್‌ಮಾರ್ಕ್‌ಗಳನ್ನು ಬಳಸಿದರೆ, ನಿಮ್ಮ ವೀಡಿಯೊಗಳನ್ನು ನಿರ್ಬಂಧಿಸಬಹುದು. ನಿಮ್ಮ ಚಾನಲ್ ಅನ್ನು ಅಮಾನತು ಸಹ ಮಾಡಬಹುದು.

ನಿಮ್ಮ ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಲಾಗುತ್ತಿದೆ ಎಂದು ನೀವು ಭಾವಿಸಿದರೆ, ರಚನೆಕಾರರು ಮತ್ತು ಟ್ರೇಡ್‌ಮಾರ್ಕ್ ಮಾಲೀಕರ ನಡುವಿನ ಟ್ರೇಡ್‌ಮಾರ್ಕ್ ವಿವಾದಗಳ ಕುರಿತಾಗಿ YouTube ಮಧ್ಯಸ್ಥಿಕೆ ಮಾಡುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಹೀಗಾಗಿ, ಪ್ರಶ್ನೆಯಲ್ಲಿರುವ ಕಂಟೆಂಟ್ ಅನ್ನು ಪೋಸ್ಟ್ ಮಾಡಿದ ರಚನೆಕಾರರೊಂದಿಗೆ ಟ್ರೇಡ್‌ಮಾರ್ಕ್ ಮಾಲೀಕರು ನೇರವಾಗಿ ಮಾತನಾಡಬೇಕೆಂದು ನಾವು ಬಲವಾಗಿ ಪ್ರೋತ್ಸಾಹಿಸುತ್ತೇವೆ. ಅಪ್‌ಲೋಡ್ ಮಾಡಿದವರನ್ನು ಸಂಪರ್ಕಿಸುವ ಮೂಲಕ, ಎಲ್ಲರಿಗೂ ಪ್ರಯೋಜನವಾಗುವಂತಹ ರೀತಿಯಲ್ಲಿ, ಸಮಸ್ಯೆಯು ಕ್ಷಿಪ್ರವಾಗಿ ಬಗೆಹರಿಯಬಹುದು. ಕೆಲವು ರಚನೆಕಾರರು, ತಮ್ಮನ್ನು ಯಾವ ರೀತಿ ಸಂಪರ್ಕಿಸಬೇಕು ಎನ್ನುವುದರ ಮಾಹಿತಿಯನ್ನು ತಮ್ಮ ಚಾನಲ್‌ನಲ್ಲಿ ಪಟ್ಟಿ ಮಾಡುತ್ತಾರೆ.

ಪ್ರಶ್ನೆಯಲ್ಲಿರುವ ಖಾತೆದಾರರೊಂದಿಗೆ ನೀವು ಪರಿಹಾರ ಕಂಡುಕೊಳ್ಳಲಾಗದಿದ್ದರೆ, ನಮ್ಮ ಟ್ರೇಡ್‌ಮಾರ್ಕ್ ದೂರು ಫಾರ್ಮ್ ಅನ್ನು ಬಳಸಿಕೊಂಡು ಟ್ರೇಡ್‌ಮಾರ್ಕ್ ದೂರನ್ನು ಸಲ್ಲಿಸಿ. 

ಟ್ರೇಡ್‌ಮಾಅರ್ಕ್ ದೂರನ್ನು ಸಲ್ಲಿಸಿ

ಸಮಂಜಸವಾದ ದೂರುಗಳ ಕುರಿತು ಸೀಮಿತ ಪರಿಶೀಲನೆ ನಡೆಸಲು YouTube ಸಿದ್ಧವಾಗಿದೆ ಮತ್ತು ಉಲ್ಲಂಘನೆಯ ಸ್ಪಷ್ಟ ಪ್ರಕರಣಗಳಲ್ಲಿ ಕಂಟೆಂಟ್ ಅನ್ನು ತೆಗೆದುಹಾಕುತ್ತದೆ. ವಿವಾದಗಳನ್ನು ಬಗೆಹರಿಸಲು ಸಹಾಯ ಮಾಡುವುದಕ್ಕಾಗಿ, ಯಾವುದೇ ಕ್ರಮ ಕೈಗೊಳ್ಳುವ ಮೊದಲು YouTube ಪ್ರತಿಯೊಂದು ಟ್ರೇಡ್‌ಮಾರ್ಕ್ ದೂರನ್ನು, ಅಪ್‌ಲೋಡ್ ಮಾಡಿದವರಿಗೆ ಫಾರ್ವರ್ಡ್ ಮಾಡುತ್ತದೆ. ಯಾವುದೇ ಸಂಭಾವ್ಯ ಟ್ರೇಡ್‌ಮಾರ್ಕ್ ಸಮಸ್ಯೆಗಳನ್ನು ಬಗೆಹರಿಸಲು, ಅಪ್‌ಲೋಡ್ ಮಾಡಿದವರಿಗೆ ಇದು ಅವಕಾಶ ನೀಡುತ್ತದೆ. 

ಫ್ರೀ-ಫಾರ್ಮ್ ಟ್ರೇಡ್‌ಮಾರ್ಕ್ ದೂರುಗಳನ್ನು ಇಮೇಲ್, ಫ್ಯಾಕ್ಸ್ ಮತ್ತು ಅಂಚೆಯ ಮೂಲಕ ಸಲ್ಲಿಸಿದರೂ ಸಹ ನಾವು ಸ್ವೀಕರಿಸುತ್ತೇವೆ.

ನಿಮ್ಮ ದೂರು, ನಕಲಿ ಸರಕುಗಳ ಮಾರಾಟ ಅಥವಾ ಪ್ರಚಾರಕ್ಕೆ ಸಂಬಂಧಿಸಿದ್ದರೆ, ನಕಲಿ ವಸ್ತುಗಳ ಬಗ್ಗೆ ದೂರನ್ನು ಸಲ್ಲಿಸಿ.

ನಿಮ್ಮ ದೂರು, ಹಾಡು, ಚಲನಚಿತ್ರ ಅಥವಾ ಪುಸ್ತಕದಂತಹ ಸಂರಕ್ಷಿತ ಕೃತಿಗೆ ಸಂಬಂಧಿಸಿದ್ದರೆ, ಕೃತಿಸ್ವಾಮ್ಯ ದೂರನ್ನು ಸಲ್ಲಿಸಿ.

 

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6794645888380754770
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false