YouTube ಕಾರ್ಯಾಚರಣೆಗಳ ಮಾರ್ಗದರ್ಶಿ

ನೀವು ಡೌನ್‌ಲೋಡ್ ಮಾಡಬಹುದಾದ ವರದಿಗಳನ್ನು ವೀಕ್ಷಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ಕಾರ್ಯಕ್ಷಮತೆಯ ವರದಿಗಳು

ವೀಡಿಯೊಗಳ ವರದಿ

ವೀಡಿಯೊಗಳ ವರದಿಯು ಪಾಲುದಾರರ ಕಂಟೆಂಟ್ ಮ್ಯಾನೇಜರ್‌ನಲ್ಲಿ ವೀಡಿಯೊಗಳ ಕುರಿತಾದ ಡೇಟಾವನ್ನು ತೋರಿಸುತ್ತದೆ.

  • ಪ್ರತಿ ವಾರದಲ್ಲಿ 3 ಬಾರಿ ಲಭ್ಯವಿದೆ
  • ಡೇಟಾದಲ್ಲಿ ಇವು ಒಳಗೊಂಡಿವೆ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ: ವೀಡಿಯೊದ ಸ್ಥಿತಿ, ಆ್ಯಡ್ ಸಕ್ರಿಯಗೊಳಿಸುವಿಕೆ, ವೀಕ್ಷಣೆಗಳ ಸಂಖ್ಯೆ, ಅಸೆಟ್ ಐಡಿ, ನೀತಿಗಳು ಇತ್ಯಾದಿ.
  • ಆದಾಯ-ಸಂಬಂಧಿತ ಕಾರ್ಯಕ್ಷಮತೆಯ ಡೇಟಾವನ್ನು ತೋರಿಸುವುದಿಲ್ಲ
  • ಒಂದು ವೀಡಿಯೊದ ಮೇಲೆ ಅನೇಕ ಅಸೆಟ್‌ಗಳು ಹಕ್ಕು ಸ್ಥಾಪನೆ ಮಾಡಿದ್ದರೆ, ಅಸೆಟ್ ಐಡಿ ಕಾಲಮ್‌ನಲ್ಲಿ ಅನೇಕ ಅಸೆಟ್ ಐಡಿಗಳಿರುತ್ತವೆ, ಆದರೆ ಅಸೆಟ್ ಮೆಟಾಡೇಟಾದ ಕೇವಲ ಒಂದು ಸೆಟ್ ಇರುತ್ತದೆ.
ಅಸೆಟ್‍ಗಳ ಸಂಪೂರ್ಣ ವರದಿ

ಅಸೆಟ್‌ಗಳ ಸಂಪೂರ್ಣ ವರದಿಯು ಪಾಲುದಾರರ ಕಂಟೆಂಟ್ ಮ್ಯಾನೇಜರ್‌ನಲ್ಲಿರುವ ಅಸೆಟ್‌ಗಳ ಕುರಿತಾದ ಡೇಟಾವನ್ನು ತೋರಿಸುತ್ತದೆ.

  • ಪ್ರತಿ ದಿನ ಲಭ್ಯವಿದೆ
  • ಡೇಟಾದಲ್ಲಿ ಇವು ಒಳಗೊಂಡಿವೆ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ: ಮಾಲೀಕತ್ವದ ಪ್ರಾಂತ್ಯಗಳು, ಅಸೆಟ್ ಪ್ರಕಾರ, ಒಳಗೊಂಡಿರುವ ಅಸೆಟ್ ಐಡಿ, ಸಕ್ರಿಯ/ನಿಷ್ಕ್ರಿಯ ಉಲ್ಲೇಖಗಳು, ಹೊಂದಿಕೆ ನೀತಿ ಇತ್ಯಾದಿ.
  • ಈ ಕಾರ್ಯಗಳನ್ನು ಮಾಡಲು ಬಯಸುವ ಪಾಲುದಾರರಿಗೆ ಈ ಡಾಕ್ಯುಮೆಂಟ್ ಉಪಯುಕ್ತವಾಗಿದೆ:
    • ಮಾಲೀಕತ್ವದ ಮಾಹಿತಿ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಒಂದಿಷ್ಟು ಅಸೆಟ್‌ಗಳನ್ನು ಪರಿಶೀಲಿಸುವುದು
    • ಒಳಗೊಂಡಿರುವ ಅಸೆಟ್ ಐಡಿಗಳನ್ನು, ಸಿಂಥೆಸೈಸ್ ಮಾಡಲಾದ ಅಸೆಟ್ ಐಡಿಗಳಿಗೆ ಮ್ಯಾಪ್ ಮಾಡುವುದು
    • ನಿರ್ದಿಷ್ಟ ಹೊಂದಿಕೆ ನೀತಿಯನ್ನು ಹೊಂದಿರುವ ಎಲ್ಲಾ ಅಸೆಟ್‌ಗಳನ್ನು ವೀಕ್ಷಿಸುವುದು
ಅಸೆಟ್ ಸಂಘರ್ಷಗಳ ವರದಿ

ಸಂಘರ್ಷದಲ್ಲಿರುವ ಅಸೆಟ್‌ಗಳನ್ನು ಹೊಂದಿರುವ ಪಾಲುದಾರರಿಗೆ, ಅಸೆಟ್ ಸಂಘರ್ಷಗಳ ವರದಿಯು ಲಭ್ಯವಿದೆ.

  • ಪ್ರತಿದಿನ ಲಭ್ಯವಿದೆ
  • ಇತರ ಅಸೆಟ್ ವರದಿಗಳಿಗೆ ಹೋಲಿಸಿದಾಗ, ಅಸೆಟ್ ಸಂಘರ್ಷಗಳ ವರದಿಯು, ಸಂಘರ್ಷದಲ್ಲಿರುವ ಯಾವುದೇ ಮಾಲೀಕತ್ವ ಪ್ರಾಂತ್ಯಗಳನ್ನು ಮತ್ತು ಮಾಲೀಕತ್ವದ ಕೊನೆಯ ಬದಲಾವಣೆಯ ಮಾಹಿತಿಯನ್ನು ತೋರಿಸುತ್ತದೆ.
ಅಸೆಟ್‌ಗಳ (ಹಂಚಿಕೆಗಳ) ವರದಿ

ಅಸೆಟ್‌ಗಳ (ಹಂಚಿಕೆಗಳ) ವರದಿಯು ಪಾಲುದಾರರ ಸೌಂಡ್ ರೆಕಾರ್ಡಿಂಗ್ ಹಂಚಿಕೊಳ್ಳುವಿಕೆಗಳು ಅಥವಾ ಸಂಯೋಜನೆ ಹಂಚಿಕೆಗಳು ಮತ್ತು ಸಂಬಂಧಿತ ಮೆಟಾಡೇಟಾದ ಡೇಟಾವನ್ನು ತೋರಿಸುತ್ತದೆ.

  • ಸಂಗೀತ ಲೇಬಲ್ ಮತ್ತು ಪ್ರಕಟಿಸುವ ಪಾಲುದಾರರಂತಹ ಹಂಚಿಕೆಗಳನ್ನು ಹೊಂದಿರುವ ಪಾಲುದಾರರಿಗಾಗಿ ಪ್ರತಿದಿನ ಲಭ್ಯವಿದೆ
  • ಹಂಚಿಕೆಯ ಮೆಟಾಡೇಟಾ ಮತ್ತು ಹಂಚಿಕೆಯ ಪೇರೆಂಟ್ ಅಸೆಟ್ ಅನ್ನು ಒಳಗೊಂಡಂತೆ ಪ್ರತ್ಯೇಕ ಹಂಚಿಕೆಗಳ ಕುರಿತಾದ ಡೇಟಾವನ್ನು ತೋರಿಸುತ್ತದೆ
ಹಕ್ಕು ಸ್ಥಾಪನೆಗಳ ಕುರಿತಾದ ವರದಿ

ಹಕ್ಕು ಸ್ಥಾಪನೆಗಳ ವರದಿಯು ಪಾಲುದಾರರ ಕಂಟೆಂಟ್ ಮ್ಯಾನೇಜರ್‌ನಲ್ಲಿ ಅಸೆಟ್‌ಗಳ ಮೇಲೆ ಸಕ್ರಿಯ, ನಿಷ್ಕ್ರಿಯ ಮತ್ತು ಬಾಕಿಯಿರುವ ಹಕ್ಕು ಸ್ಥಾಪನೆಗಳ ಕುರಿತಾದ ಡೇಟಾವನ್ನು ತೋರಿಸುತ್ತದೆ. ಇದು ಖಾಸಗಿ, ಪಟ್ಟಿ ಮಾಡದಿರುವುದು ಮತ್ತು ನಿರ್ಬಂಧಿಸಿರುವ ವೀಡಿಯೊಗಳ ಮೇಲಿನ ಹಕ್ಕು ಸ್ಥಾಪನೆಗಳನ್ನು ಒಳಗೊಂಡಿದೆ.

  • ಪ್ರತಿದಿನ ಲಭ್ಯವಿದೆ
  • ಒಂದು ಅಸೆಟ್‌ಗೆ ಸಂಬಂಧಿಸಿದ ಎಲ್ಲಾ ಹಕ್ಕು ಸ್ಥಾಪನೆಗಳು ಮತ್ತು ಸಂಬಂಧಿತ ನೀತಿಯ ಮಾಹಿತಿಯ ಡೇಟಾವನ್ನು ತೋರಿಸುತ್ತದೆ
  • ಡೇಟಾದಲ್ಲಿ ಇವು ಒಳಗೊಂಡಿವೆ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ: ಅನ್ವಯಿಕ ನೀತಿ, ಕ್ಲೇಮ್ ಪ್ರಕಾರ, ಮೂಲ ಇತ್ಯಾದಿ.
Shorts ವರದಿ

Shorts ವರದಿಯು 2 ವರದಿಗಳನ್ನು ಒಳಗೊಂಡಿದೆ: Shorts ಅಸೆಟ್ ರಚನೆಗಳ ವರದಿ ಮತ್ತು Shorts ಅಸೆಟ್ ವೀಕ್ಷಣೆಗಳ ವರದಿ.

  • Shorts ಅಸೆಟ್ ರಚನೆಗಳ ವರದಿಯು ಒಂದು ಅಸೆಟ್‌ಗೆ ಸಂಬಂಧಿಸಿದಂತೆ ಪರವಾನಗಿ ಪಡೆಯಲಾಗಿರುವ Shorts ಆಡಿಯೋ ಲೈಬ್ರರಿ ಕಂಟೆಂಟ್ ಅನ್ನು ಬಳಸಿಕೊಂಡು ರಚಿಸಲಾದ ವಿಶಿಷ್ಟ Shorts ನ ಸಂಖ್ಯೆಯನ್ನು, ನಿರ್ದಿಷ್ಟ ಮಾಲೀಕರಿಗಾಗಿ ದೇಶ/ಪ್ರದೇಶ ಮತ್ತು ತಿಂಗಳ ಪ್ರಕಾರ ಗುಂಪುಗೂಡಿಸಿ ತೋರಿಸುತ್ತದೆ. ಈ ವರದಿಯು ಸಂಬಂಧಿತ ಅಸೆಟ್ ಮೆಟಾಡೇಟಾ ಫೀಲ್ಡ್‌ಗಳನ್ನು ಸಹ ಒಳಗೊಂಡಿದೆ: ISRC, ಅಸೆಟ್ ಐಡಿ, ಅಸೆಟ್ ಶೀರ್ಷಿಕೆ, ಅಸೆಟ್ ಲೇಬಲ್, ಕಸ್ಟಮ್ ID, UPIC, ಗ್ರಿಡ್, ಕಲಾವಿದರು ಮತ್ತು ಆಲ್ಬಮ್.

  • Shorts ಅಸೆಟ್ ವೀಕ್ಷಣೆಗಳ ವರದಿಯು ಒಂದು ಅಸೆಟ್‌ಗೆ ಸಂಬಂಧಿಸಿದಂತೆ, ಪರವಾನಗಿ ಪಡೆದ Shorts ಆಡಿಯೋ ಲೈಬ್ರರಿ ಕಂಟೆಂಟ್ ಅನ್ನು ಬಳಸಿಕೊಂಡು ರಚಿಸಲಾದ Shorts ನ ವೀಕ್ಷಣೆಗಳ ಸಂಖ್ಯೆಯನ್ನು, ನಿರ್ದಿಷ್ಟ ಮಾಲೀಕರಿಗಾಗಿ ದೇಶ/ಪ್ರದೇಶ ಮತ್ತು ತಿಂಗಳ ಪ್ರಕಾರ ಗುಂಪುಗೂಡಿಸಿ ತೋರಿಸುತ್ತದೆ. ಈ ವರದಿಯು ಸಂಬಂಧಿತ ಅಸೆಟ್ ಮೆಟಾಡೇಟಾ ಫೀಲ್ಡ್‌ಗಳನ್ನು ಸಹ ಒಳಗೊಂಡಿದೆ: ISRC, ಅಸೆಟ್ ಐಡಿ, ಅಸೆಟ್ ಶೀರ್ಷಿಕೆ, ಅಸೆಟ್ ಲೇಬಲ್, ಕಸ್ಟಮ್ ID, UPIC, ಗ್ರಿಡ್, ಕಲಾವಿದರು ಮತ್ತು ಆಲ್ಬಮ್.

  • ಪ್ರತಿ ಕ್ಯಾಲೆಂಡರ್ ತಿಂಗಳು ಕೊನೆಗೊಂಡ ನಂತರ 25 ದಿನಗಳ ಒಳಗೆ, ಪ್ರತಿ ತಿಂಗಳು ಲಭ್ಯವಿರುತ್ತದೆ.

ಉಲ್ಲೇಖಗಳ ವರದಿ

ಉಲ್ಲೇಖಗಳ ವರದಿಯು, ಪಾಲುದಾರರು ರಚಿಸಿದ ಎಲ್ಲಾ ಉಲ್ಲೇಖಗಳ ಕುರಿತಾದ ಡೇಟಾವನ್ನು ತೋರಿಸುತ್ತದೆ.

  • ಪ್ರತಿ ವಾರ ಲಭ್ಯವಿದೆ
  • ಉಲ್ಲೇಖಿತ ವೀಡಿಯೊ ID ಗಳನ್ನು ಅಸೆಟ್ ಮತ್ತು ಉಲ್ಲೇಖ ID ಗಳಿಗೆ ಮ್ಯಾಪ್ ಮಾಡಿರುವುದನ್ನು ತೋರಿಸುತ್ತದೆ.
  • ಮಾತ್ರವಲ್ಲದೆ, ಉಲ್ಲೇಖ ಒದಗಿಸಿದವರು, ವಿನಾಯಿತಿಗಳು, ಪ್ರಕಾರ, ರಚನೆಯ ದಿನಾಂಕ, ಸಕ್ರಿಯ ಕ್ಲೇಮ್‌ಗಳ ಸಂಖ್ಯೆ ಮತ್ತು ಸಂಬಂಧಿತ ಅಸೆಟ್‌ನ ಕುರಿತಾದ ಮಾಹಿತಿಯನ್ನು ತೋರಿಸುತ್ತದೆ.
  • ಗಮನಿಸಿ: ಪ್ರತಿಯೊಂದು ಉಲ್ಲೇಖವು ಉಲ್ಲೇಖಿತ ವೀಡಿಯೊ ID ಯನ್ನು ಹೊಂದಿಲ್ಲದಿರಬಹುದು. ಉಲ್ಲೇಖವು, ಚಾನಲ್‌ಗೆ ಅಪ್‌ಲೋಡ್ ಮಾಡಲಾದ ವೀಡಿಯೊಗೆ ಸಂಬಂಧಿಸಿದ್ದರೆ ಮಾತ್ರ ಉಲ್ಲೇಖಿತ ವೀಡಿಯೊ ID ಲಭ್ಯವಿರುತ್ತದೆ.
ಅಭಿಯಾನಗಳ ವರದಿ
ಅಭಿಯಾನಗಳ ವರದಿಯು, ಪ್ರತಿಯೊಂದು ಅಭಿಯಾನಕ್ಕೆ ಯಾವ ಅಸೆಟ್‌ಗಳು ಅಥವಾ ಅಸೆಟ್ ಲೇಬಲ್‌ಗಳನ್ನು ಅನ್ವಯಿಸಲಾಗಿದೆ ಎಂಬುದನ್ನು ಒಳಗೊಂಡಂತೆ, ಪಾಲುದಾರರು ರಚಿಸಿದ ಕಸ್ಟಮ್ ಹಸ್ತಚಾಲಿತ ಅಭಿಯಾನಗಳ ಕುರಿತಾದ ಡೇಟಾವನ್ನು ತೋರಿಸುತ್ತದೆ.
  • ಪ್ರತಿ ವಾರ ಲಭ್ಯವಿದೆ
  • ಬಳಕೆದಾರರು-ರಚಿಸಿದ ಕಂಟೆಂಟ್‌ನಲ್ಲಿ (UGC) ಎಷ್ಟು ಕಂಟೆಂಟ್‌ನ ಮೇಲೆ ಹಕ್ಕು ಸ್ಥಾಪನೆ ಮಾಡಲಾಗಿದೆ ಮತ್ತು ಅಭಿಯಾನದ ಕಾರ್ಡ್‌ಗಳ ಮೇಲೆ ಎಷ್ಟು ಕ್ಲಿಕ್‌ಗಳನ್ನು ಮಾಡಲಾಗಿದೆ ಎಂಬ ಹಾಗೆ, ಸಂಬಂಧಿತ ಅಭಿಯಾನದ ಕಾರ್ಯಕ್ಷಮತೆಯ ಡೇಟಾವನ್ನು ತೋರಿಸುತ್ತದೆ.
  • ಕಸ್ಟಮ್ ಹಸ್ತಚಾಲಿತ ಅಭಿಯಾನಗಳ ಕುರಿತಾದ ಡೇಟಾವನ್ನು ಮಾತ್ರ ಒಳಗೊಂಡಿದೆ. ಇದು ಡೀಫಾಲ್ಟ್ ಅಭಿಯಾನಗಳು ಅಥವಾ ವಹಿವಾಟಿನ ಅಭಿಯಾನಗಳ ಕುರಿತಾದ ಡೇಟಾವನ್ನು ತೋರಿಸುವುದಿಲ್ಲ.

ಹಣಕಾಸು ವರದಿಗಳು

ಪಾವತಿ ಸಾರಾಂಶ ವರದಿ
ಪಾವತಿ ಸಾರಾಂಶ ವರದಿಯು ಆದಾಯದ ಪ್ರಕಾರವನ್ನು (ಉದಾಹರಣೆಗೆ ಆ್ಯಡ್‌ಗಳು, ಸಬ್‌ಸ್ಕ್ರಿಪ್ಶನ್‌ಗಳು, ವಹಿವಾಟು) ಆಧರಿಸಿ ವಿಭಜಿಸಲಾಗಿರುವ ನಿಮ್ಮ ಒಟ್ಟು ಆದಾಯವನ್ನು ತೋರಿಸುತ್ತದೆ. ಇದು ಅಡ್ಜಸ್ಟ್‌ಮೆಂಟ್‌ಗಳನ್ನು ಸಹ ಒಳಗೊಂಡಿದೆ. ಒಟ್ಟು ಆದಾಯವನ್ನು USD ಮತ್ತು ನಿಮ್ಮ ಪಾವತಿಯ ಕರೆನ್ಸಿಯಲ್ಲಿ ವರದಿ ಮಾಡಲಾಗುತ್ತದೆ.
ಆ್ಯಡ್‌ಗಳ ಆದಾಯ ವರದಿ

ಆ್ಯಡ್‌ಗಳ ಆದಾಯ ವರದಿಯು ಆ್ಯಡ್ ನೀಡುವಿಕೆ -ಬೆಂಬಲಿತ ವೀಡಿಯೊಗಳಿಗೆ ಸಂಬಂಧಿಸಿದ ಆದಾಯ ಮತ್ತು ವೀಕ್ಷಣೆಗಳನ್ನು ಒಳಗೊಂಡಿದೆ.

ಟಿವಿ ಮತ್ತು ಚಲನಚಿತ್ರ ಪಾಲುದಾರರಿಗಾಗಿ, ಆ್ಯಡ್ ಆದಾಯದ ವರದಿಯ ಸಂಪೂರ್ಣ ವಿವರಣೆಯನ್ನು ಇಲ್ಲಿ ನೋಡಬಹುದು.

ಸಬ್‌ಸ್ಕ್ರಿಪ್ಶನ್ ಆದಾಯ ವರದಿ
ಸಬ್‌ಸ್ಕ್ರಿಪ್ಶನ್ ಆದಾಯ ವರದಿಯು YouTube Music, Google Play ಸಂಗೀತ, ಹಾಗೂ YouTube Premium ನಿಂದ ಪಡೆದ ಆದಾಯವನ್ನು ಒಳಗೊಂಡಿದೆ.
ವಹಿವಾಟುಗಳ ಆದಾಯ ವರದಿ

ವಹಿವಾಟುಗಳ ಆದಾಯ ವರದಿಯು ಬಾಡಿಗೆ ಚಲನಚಿತ್ರಗಳು (EST) ಹಾಗೂ ಬಾಡಿಗೆ ವೀಡಿಯೊಗಳಿಂದ (VOD) ಪಡೆದ ಆದಾಯವನ್ನು ಒಳಗೊಂಡಿದೆ.

ವಹಿವಾಟುಗಳ ಆದಾಯ ವರದಿಯು ಚಲನಚಿತ್ರ ಮತ್ತು ಟಿವಿ ಪಾಲುದಾರರಿಗೆ ಮಾತ್ರ ಲಭ್ಯವಿದೆ.

ಆಡಿಯೋ ಶ್ರೇಣಿ ಆದಾಯ ವರದಿ
ಆಡಿಯೋ ಶ್ರೇಣಿ ಆದಾಯ ವರದಿಯು ಈ ಬಳಕೆದಾರರಿಂದ YouTube Music ಆದಾಯವನ್ನು ಒಳಗೊಂಡಿದೆ:
  • ಬೇಡಿಕೆಯ-ಮೇರೆಗೆ ಅಲ್ಲದ, ರೇಡಿಯೋದಂತಹ ಅನುಭವವನ್ನು ಬಳಸುತ್ತಿರುವವರು
  • Google Assistant ಅನ್ನು ಸ್ಕ್ರೀನ್-ರಹಿತ ಸಾಧನಗಳಲ್ಲಿ ಬಳಸುತ್ತಿರುವವರು (ಉದಾಹರಣೆಗೆ, Google Home)
ಪಾವತಿಸಿದ ಫೀಚರ್‌ಗಳ ವರದಿ
ಪಾವತಿಸಿದ ಫೀಚರ್‌ಗಳ ವರದಿಯು ಈ ಕೆಳಗಿನವುಗಳಿಂದ ಆದಾಯವನ್ನು ಒಳಗೊಂಡಿದೆ:
  • ಸೂಪರ್ ಚಾಟ್ ಖರೀದಿಗಳು (SCT)
  • ಸದಸ್ಯತ್ವಗಳು (SPT)
  • ಸೂಪರ್ ಸ್ಟಿಕ್ಕರ್ಸ್ (SST)
  • FameBit (FMT)
Shorts ಆದಾಯ ವರದಿ
Shorts ಆದಾಯ ವರದಿಯು YouTube Shorts ನಿಂದ ಆದಾಯದ ಸಾರಂಶವನ್ನು ಒದಗಿಸುತ್ತದೆ.
Shorts ಆ್ಯಡ್‌ಗಳ ವರದಿ
Shorts ಆ್ಯಡ್‌ಗಳ ವರದಿಯು ಸಂಗೀತವಲ್ಲದ ಪಾಲುದಾರರಿಗಾಗಿ Shorts ಆ್ಯಡ್‌ಗಳ ಆದಾಯದ ಡೇಟಾವನ್ನು ತೋರಿಸುತ್ತದೆ.
Shorts ಸಬ್‌ಸ್ಕ್ರಿಪ್ಶನ್ ವರದಿ
Shorts ಸಬ್‌ಸ್ಕ್ರಿಪ್ಶನ್ ವರದಿಯು ಸಂಗೀತವಲ್ಲದ ಪಾಲುದಾರರಿಗಾಗಿ ಪಾವತಿಸಿದ ಸಬ್‌ಸ್ಕ್ರಿಪ್ಶನ್ ಆದಾಯ ಹಂಚಿಕೆಯ ಮೂಲಕ ಗಳಿಸಿದ ಆದಾಯದ ಡೇಟಾವನ್ನು ಒಳಗೊಂಡಿದೆ.
ಆ್ಯಡ್‌ಗಳ ಅಡ್ಜಸ್ಟ್‌ಮೆಂಟ್‌ಗಳಿಂದ ಬರುವ ಆದಾಯದ ವರದಿ

ಆ್ಯಡ್‌ಗಳ ಅಡ್ಜಸ್ಟ್‌ಮೆಂಟ್‌ಗಳಿಂದ ಬರುವ ಆದಾಯದ ವರದಿಯು ಆ್ಯಡ್‌ಗಳ ಆದಾಯದ ಅಡ್ಜಸ್ಟ್‌ಮೆಂಟ್‌ಗಳ ಸಾರಾಂಶವನ್ನು ಒದಗಿಸುತ್ತದೆ. ಇದು ವಿವಾದದಲ್ಲಿರುವ ಮಾನಿಟೈಸೇಶನ್‌ನಿಂದ ಬರುವ ಆದಾಯ ಮತ್ತು ಅಸೆಟ್ ಸಂಘರ್ಷ ಪರಿಹಾರದಿಂದ ಬರುವ ಆದಾಯವನ್ನು ಒಳಗೊಂಡಿರಬಹುದು.

ನಿರ್ದಿಷ್ಟ ತಿಂಗಳಿಗೆ ಸಂಬಂಧಿಸಿದಂತೆ ಅಡ್ಜಸ್ಟ್‌ಮೆಂಟ್‌ಗಳನ್ನು ಮಾಡಿದಾಗ ಮಾತ್ರ ಈ ವರದಿಯನ್ನು ಪ್ರಕಟಿಸಲಾಗುತ್ತದೆ.

ಸಬ್‌ಸ್ಕ್ರಿಪ್ಶನ್ ಅಡ್ಜಸ್ಟ್‌ಮೆಂಟ್‌ಗಳಿಂದ ಬರುವ ಆದಾಯದ ವರದಿ

ಸಬ್‌ಸ್ಕ್ರಿಪ್ಶನ್‌ಗಳ ಅಡ್ಜಸ್ಟ್‌ಮೆಂಟ್‌ಗಳಿಂದ ಬರುವ ಆದಾಯದ ವರದಿಯು ಸಬ್‌ಸ್ಕ್ರಿಪ್ಶನ್‌ಗಳ ಆದಾಯದ ಅಡ್ಜಸ್ಟ್‌ಮೆಂಟ್‍ಗಳ ಸಾರಾಂಶವನ್ನು ಒದಗಿಸುತ್ತದೆ.

ನಿರ್ದಿಷ್ಟ ತಿಂಗಳಿಗೆ ಸಂಬಂಧಿಸಿದಂತೆ ಅಡ್ಜಸ್ಟ್‌ಮೆಂಟ್‌ಗಳನ್ನು ಮಾಡಿದಾಗ ಮಾತ್ರ ಈ ವರದಿಯನ್ನು ಪ್ರಕಟಿಸಲಾಗುತ್ತದೆ.

Macintosh ಗಾಗಿ Microsoft Excel, UTF-8 ಎನ್‌ಕೋಡಿಂಗ್ ಅನ್ನು ಬೆಂಬಲಿಸುವುದಿಲ್ಲ. ನಿಮ್ಮ ಮೆಟಾಡೇಟಾವು ಯಾವುದೇ ಲ್ಯಾಟಿನ್-ಅಲ್ಲದ ಅಕ್ಷರಗಳನ್ನು ಒಳಗೊಂಡಿದ್ದರೆ, Google Sheets ನಂತಹ ವಿಭಿನ್ನ ಸ್ಪ್ರೆಡ್‌ಶೀಟ್ ಅಪ್ಲಿಕೇಶನ್ ಅನ್ನು ಬಳಸಿ.

ಇತರ ವರದಿಗಳು

ಉಲ್ಲಂಘಿಸುವ ಆರ್ಟ್ ಟ್ರ್ಯಾಕ್‍ಗಳ ವರದಿ
ಗಮನಿಸಿ ಆರ್ಟ್ ಟ್ರ್ಯಾಕ್‌ಗಳನ್ನು ಡೆಲಿವರ್ ಮಾಡುವ ಸಂಗೀತ ಪಾಲುದಾರರಿಗೆ ಮಾತ್ರ ಈ ವರದಿ ಕಾಣಿಸುತ್ತದೆ.

ಉಲ್ಲಂಘಿಸುವ ಆರ್ಟ್ ಟ್ರ್ಯಾಕ್‌ಗಳ ವರದಿಯು ಒಂದು ಮಾಸಿಕ ವರದಿಯಾಗಿದೆ, ಮತ್ತು ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯಿಂದಾಗಿ ತೆಗೆದುಹಾಕಲಾದ ಆರ್ಟ್ ಟ್ರ್ಯಾಕ್‍ಗಳ ಕುರಿತಾದ ವಿವರಗಳನ್ನು ಒಳಗೊಂಡಿದೆ.

ಈ ವರದಿಯು ಹಿಂದಿನ ತಿಂಗಳಲ್ಲಿ ಪ್ರಭಾವಿತವಾದ ಆರ್ಟ್ ಟ್ರ್ಯಾಕ್‌ಗಳನ್ನು ತೋರಿಸುತ್ತದೆ. ಪ್ರತಿ ತಿಂಗಳ ಮೊದಲ ವಾರದಲ್ಲಿ, Studio ಕಂಟೆಂಟ್ ನಿರ್ವಾಹಕದಲ್ಲಿ ವರದಿಗಳ ಪುಟದಲ್ಲಿ ಇತರ ಟ್ಯಾಬ್‍ನಲ್ಲಿ ಹೊಸ ವರದಿಗಳನ್ನು ಸೇರಿಸಲಾಗುತ್ತದೆ. ಹಿಂದಿನ ತಿಂಗಳಿನಲ್ಲಿ ಆರ್ಟ್ ಟ್ರ್ಯಾಕ್‌ಗಳನ್ನು ತೆಗೆದುಹಾಕಿಲ್ಲ ಎಂದಾದರೆ, ವರದಿಯು ಖಾಲಿ ಇರುತ್ತದೆ. ವರದಿಗಳು 2 ತಿಂಗಳವರೆಗೆ ಗೋಚರಿಸುತ್ತವೆ, ಬಳಿಕ ಡೇಟಾವನ್ನು ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವ ನೀತಿಗಳನ್ನು ಅನುಸರಿಸುವುದಕ್ಕಾಗಿ ಅವುಗಳನ್ನು ಅಳಿಸಲಾಗುತ್ತದೆ.

ಸಲಹೆ: ಭವಿಷ್ಯದಲ್ಲಿ ರೆಫರ್ ಮಾಡಲು, ಪ್ರತಿ ತಿಂಗಳು ನಿಮ್ಮ ವರದಿಯ ಪ್ರತಿಯೊಂದನ್ನು ಡೌನ್‌ಲೋಡ್ ಮಾಡಿ.

ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಯಾವುದೇ ಆರ್ಟ್ ಟ್ರ್ಯಾಕ್‌ಗಳನ್ನು ತೆಗೆದುಹಾಕಿದರೆ, YouTube ರಚನೆಕಾರರ ಬೆಂಬಲವನ್ನು ಸಂಪರ್ಕಿಸಿ ಮತ್ತು/ಅಥವಾ ಸಹಾಯ ಕೇಂದ್ರದಲ್ಲಿ ನಮ್ಮನ್ನು ಸಂಪರ್ಕಿಸಿ ಫಾರ್ಮ್ ಅನ್ನು ಭರ್ತಿ ಮಾಡಿ. ನಮ್ಮನ್ನು ಸಂಪರ್ಕಿಸಿ ಫಾರ್ಮ್‌ನ ಮೂಲಕ ನೀವು ಸಂಪರ್ಕಿಸುವುದಾದರೆ, ಫಾರ್ಮ್ ಅನ್ನು ಸಲ್ಲಿಸುವ ಮೊದಲು ನಿಮ್ಮ ಕಂಟೆಂಟ್ ಮ್ಯಾನೇಜರ್ ಖಾತೆಗೆ ಸಂಬಂಧಿಸಿರುವ ಖಾತೆಗೆ ನೀವು ಸೈನ್ ಇನ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.

ಕೃತಿಸ್ವಾಮ್ಯ ಆರ್ಟ್ ಟ್ರ್ಯಾಕ್‌ಗಳ ವರದಿ
ಗಮನಿಸಿ: ಆರ್ಟ್ ಟ್ರ್ಯಾಕ್‌ಗಳನ್ನು ಡೆಲಿವರ್ ಮಾಡುವ ಸಂಗೀತ ಪಾಲುದಾರರಿಗೆ ಮಾತ್ರ ಈ ವರದಿ ಕಾಣಿಸುತ್ತದೆ.

ಕೃತಿಸ್ವಾಮ್ಯ ಆರ್ಟ್ ಟ್ರ್ಯಾಕ್‌ಗಳ ವರದಿಯು ಒಂದು ಮಾಸಿಕ ವರದಿಯಾಗಿದೆ, ಮತ್ತು ತೆಗೆದುಹಾಕುವಿಕೆ ವಿನಂತಿಯ ಕಾರಣ ತೆಗೆದುಹಾಕಲಾದ ಆರ್ಟ್ ಟ್ರ್ಯಾಕ್‌ಗಳ ಕುರಿತು ವಿವರಗಳನ್ನು ಹೊಂದಿದೆ.

ಈ ವರದಿಯು ಹಿಂದಿನ ತಿಂಗಳಲ್ಲಿ ಪ್ರಭಾವಿತವಾದ ಆರ್ಟ್ ಟ್ರ್ಯಾಕ್‌ಗಳನ್ನು ತೋರಿಸುತ್ತದೆ. ಪ್ರತಿ ತಿಂಗಳ ಮೊದಲ ವಾರದಲ್ಲಿ, Studio ಕಂಟೆಂಟ್ ನಿರ್ವಾಹಕದಲ್ಲಿ ವರದಿಗಳ ಪುಟದಲ್ಲಿ ಇತರ ಟ್ಯಾಬ್‍ನಲ್ಲಿ ಹೊಸ ವರದಿಗಳನ್ನು ಸೇರಿಸಲಾಗುತ್ತದೆ. ಹಿಂದಿನ ತಿಂಗಳಿನಲ್ಲಿ ಆರ್ಟ್ ಟ್ರ್ಯಾಕ್‌ಗಳನ್ನು ತೆಗೆದುಹಾಕಿಲ್ಲ ಎಂದಾದರೆ, ವರದಿಯು ಖಾಲಿ ಇರುತ್ತದೆ. ವರದಿಗಳು 2 ತಿಂಗಳವರೆಗೆ ಗೋಚರಿಸುತ್ತವೆ, ಬಳಿಕ ಡೇಟಾವನ್ನು ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವ ನೀತಿಗಳನ್ನು ಅನುಸರಿಸುವುದಕ್ಕಾಗಿ ಅವುಗಳನ್ನು ಅಳಿಸಲಾಗುತ್ತದೆ.

ಸಲಹೆ: ಭವಿಷ್ಯದಲ್ಲಿ ರೆಫರ್ ಮಾಡಲು, ಪ್ರತಿ ತಿಂಗಳು ನಿಮ್ಮ ವರದಿಯ ಪ್ರತಿಯೊಂದನ್ನು ಡೌನ್‌ಲೋಡ್ ಮಾಡಿ.

ನಿಮ್ಮ ಆರ್ಟ್ ಟ್ರ್ಯಾಕ್ ಅನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ನೀವು ಭಾವಿಸಿದರೆ, ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು.

ವಯಸ್ಸಿನ ಸ್ಕ್ರೀನಿಂಗ್ ಇರುವ ಆರ್ಟ್ ಟ್ರ್ಯಾಕ್‌ಗಳ ವರದಿ
ಗಮನಿಸಿ: ಆರ್ಟ್ ಟ್ರ್ಯಾಕ್‌ಗಳನ್ನು ಡೆಲಿವರ್ ಮಾಡುವ ಸಂಗೀತ ಪಾಲುದಾರರಿಗೆ ಮಾತ್ರ ಈ ವರದಿ ಕಾಣಿಸುತ್ತದೆ.

ವಯಸ್ಸಿನ ಸ್ಕ್ರೀನಿಂಗ್ ಇರುವ ಆರ್ಟ್ ಟ್ರ್ಯಾಕ್‌ಗಳ ವರದಿಯು ಒಂದು ಮಾಸಿಕ ವರದಿಯಾಗಿದೆ, ಮತ್ತು ವಯಸ್ಸಿನ ಸ್ಕ್ರೀನಿಂಗ್ ಇರುವ, ಅಂದರೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ, ಸೈನ್-ಇನ್ ಮಾಡಿರುವ ಬಳಕೆದಾರರಿಗೆ ಮಾತ್ರ ಪ್ಲೇ ಮಾಡಬಹುದಾದ ಆರ್ಟ್ ಟ್ರ್ಯಾಕ್‌ಗಳ ಕುರಿತು ವಿವರಗಳನ್ನು ಹೊಂದಿದೆ.

ಈ ವರದಿಯು ಹಿಂದಿನ ತಿಂಗಳಲ್ಲಿ ಪ್ರಭಾವಿತವಾದ ಆರ್ಟ್ ಟ್ರ್ಯಾಕ್‌ಗಳನ್ನು ತೋರಿಸುತ್ತದೆ. ಪ್ರತಿ ತಿಂಗಳ ಮೊದಲ ವಾರದಲ್ಲಿ, Studio ಕಂಟೆಂಟ್ ನಿರ್ವಾಹಕದಲ್ಲಿ ವರದಿಗಳ ಪುಟದಲ್ಲಿ ಇತರ ಟ್ಯಾಬ್‍ನಲ್ಲಿ ಹೊಸ ವರದಿಗಳನ್ನು ಸೇರಿಸಲಾಗುತ್ತದೆ. ಹಿಂದಿನ ತಿಂಗಳಿನಲ್ಲಿ ಯಾವುದೇ ಆರ್ಟ್ ಟ್ರ್ಯಾಕ್‌ಗಳಿಗಾಗಿ ವಯಸ್ಸಿನ ಸ್ಕ್ರೀನಿಂಗ್ ಮಾಡದಿದ್ದರೆ, ವರದಿಯು ಖಾಲಿ ಇರುತ್ತದೆ. ವರದಿಗಳು 2 ತಿಂಗಳವರೆಗೆ ಗೋಚರಿಸುತ್ತವೆ, ಬಳಿಕ ಡೇಟಾವನ್ನು ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವ ನೀತಿಗಳನ್ನು ಅನುಸರಿಸುವುದಕ್ಕಾಗಿ ಅವುಗಳನ್ನು ಅಳಿಸಲಾಗುತ್ತದೆ.

ಸಲಹೆ: ಭವಿಷ್ಯದಲ್ಲಿ ರೆಫರ್ ಮಾಡಲು, ಪ್ರತಿ ತಿಂಗಳು ನಿಮ್ಮ ವರದಿಯ ಪ್ರತಿಯೊಂದನ್ನು ಡೌನ್‌ಲೋಡ್ ಮಾಡಿ.

ನಿಮ್ಮ ಆರ್ಟ್ ಟ್ರ್ಯಾಕ್ ಅನ್ನು ತಪ್ಪಾಗಿ ವಯಸ್ಸಿನ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ನೀವು ಭಾವಿಸಿದರೆ, ಆ ನಿರ್ಧಾರದ ಕುರಿತು ನೀವು ಮೇಲ್ಮನವಿ ಸಲ್ಲಿಸಬಹುದು. ಮೇಲ್ಮನವಿ ಸಲ್ಲಿಸುವುದಕ್ಕಾಗಿ, ನಿಮ್ಮ ವೀಡಿಯೊ ID ಗಳು ಹಾಗೂ ನಿಮ್ಮ ಮೇಲ್ಮನವಿಯನ್ನು ಬೆಂಬಲಿಸುವುದಕ್ಕಾಗಿ ತಾರ್ಕಿಕ ವಿವರಣೆಯೊಂದಿಗೆ YouTube ಬೆಂಬಲ ತಂಡವನ್ನು ಸಂಪರ್ಕಿಸಿ.

ಚಾನಲ್ ಮಟ್ಟದ ಅಡ್ಜಸ್ಟ್‌ಮೆಂಟ್ ವರದಿ

ಚಾನಲ್ ಮಟ್ಟದ ಅಡ್ಜಸ್ಟ್‌ಮೆಂಟ್ ವರದಿಯು ನಮ್ಮ YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಡೆಹಿಡಿಯಲಾದ ಅಥವಾ ಅಡ್ಜಸ್ಟ್ ಮಾಡಲಾದ ಎಲ್ಲಾ ಚಾನಲ್‌ಗಳು ಮತ್ತು ಆದಾಯದ ಸಾರಾಂಶವನ್ನು ಒದಗಿಸುತ್ತದೆ.

ಈ ವರದಿಯು ಸಂಗೀತೇತರ CMS ಪಾಲುದಾರರು ಮತ್ತು MCN-A ಪಾಲುದಾರರಿಗೆ ಮಾತ್ರ ಲಭ್ಯವಿರುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
286787139199999195
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false